Recent Movies

ಸಿನೆಮಾ

Share This Article To your Friends

Showing posts with label ಹಾಡು-ಕವನಗಳು. Show all posts
Showing posts with label ಹಾಡು-ಕವನಗಳು. Show all posts

ಹೇ ಹೆಣ್ಣೆ ಹೇಳು ನೀ...

ನಾನೊಂದು ಕಗ್ಗಲ್ಲೆಂದು ದೂರಾಗದಿರು ಗೆಳತಿ


ಸುಮ್ ಸುಮ್ಮನೆ ನೋವು
ವಿಧಿ-ಬರಹ 
ದೇವರ ಆಟದಲಿ ನನಗೆ ಜನ್ಮವ ಕೊಟ್ಟೆ,
ಕೆಟ್ಟ ಗಳಿಗೆಯಲಿ ನನ್ನ ಭೂಮಿಗೆ ಬಿಟ್ಟೆ..

ಭೂದೇವಿಯ ಮಡಿಲಲಿ, ಕಣ್ಣ ಬಿಟ್ಟ ಕ್ಷಣದಲಿ.
ನನ್ನ ನೋಡಿ ನಗುತಲಿತ್ತು, ವಿಧಿಯು ನಿಂತು ಮರೆಯಲಿ

ವಿಧಿ ಬರಹ ಬರೆಯಲು ನನ್ನತ್ತ ಬರುತ್ತಿತ್ತು.. ವಿಧಿಯ ಕೈಯಲ್ಲಿ ಲೇಖನಿ ಇತ್ತು..
ಬರೆಯಲೆತ್ನಿಸುತಿತ್ತು.. ಶಾಯಿ ಮುಗಿದಿತ್ತು..
ಅತ್ತಿತ್ತ ನೋಡಿತ್ತು.. ನನ್ನ ಕಣ್ಣಲ್ಲಿ ನೀರಿತ್ತು..


ಕಣ್ಣೀರಿನಲಿ ಲೇಖನಿಯ ಅದ್ದಿ ವಿಧಿಯು ಬರೆಯುತಲಿತ್ತು
ದುಃಖವೇ ನಿನ್ನ ಸುತ್ತ-ಮುತ್ತ. ಕಣ್ಣೀರೇ ನಿನ್ನ ಸ್ವತ್ತು.
ಎಂದು ಬರೆಯಿತು ಬರಹ.. ಅದೇ ನನ್ನ ಹಣೆ ಬರಹ..
ಜೀವನವು ಅಯಿತು ಕತ್ತಲೆಯ ತರಹ..

ಬಾಳಿನಲಿ ಎಂದೆಂದು ಸುಖವ ಪಡೆಯಲಿಲ್ಲ.. ನನ್ನ ಕಣ್ಣಲ್ಲಿ ನೀರು ಇಂದಿಗೂ ಬತ್ತಲಿಲ್ಲ..ಅಯ್ಯೋ ಶಿವನೇ ಎಡವಟ್ಟು...!!


ಎಡವಟ್ ಎಡವಟ್ ಎಡವಟ್ಟು ಅಯ್ಯೋ ಶಿವನೇ ಎಡವಟ್ಟು...
ಯಾರಿಗ್ ಹೇಳ್ಲಿ ನನ್ನ Story daily updatu  
ಕೇಳೋ ತಾಳ್ಮೆ ನಿಮಗೆ ಇದ್ರೆ ಕೇಳ್ರಿ Completu
ಎಡವಟ್ ಆಯಿತು, ಹಾಳ್ ಮಾಡ್ಬಿಟ್ತು corner ಚಾಟ್ಸು

!!ಎಡವಟ್ ಎಡವಟ್ ಎಡವಟ್ಟು ಅಯ್ಯೋ ಶಿವನೇ ಎಡವಟ್ಟು...!!

ಎಲ್ಲರಂತೆ ನಾನು ಅಲ್ಲ, ನಾನೆ differentu
ಯಾರ್ ಜೊತೆನೂ ನಾನು ಇಲ್ಲ, Life e sapparetu
ತುಂಬಾ ಒಳ್ಳೆವ್ನ್ ನಾನು ಆದ್ರೆ ಅಲ್ಲ silentuu
ಅಂಟಿಕೊಂಡ್ರೆ ಬಿಡದಂಥವನು ಸ್ವಲ್ಪ ಸೆಂಟಿಮೆಂಟು

!!ಎಡವಟ್ ಎಡವಟ್ ಎಡವಟ್ಟು ಅಯ್ಯೋ ಶಿವನೇ ಎಡವಟ್ಟು...!!

ಅವತ ರಾತ್ರಿ ಮಲಗಿದ್ದೆ ನಾನ್, ಹೋಯ್ತು ಕರೆಂಟು
ಭಯ ಪಟ್ಕೊಂಡ್, ಕಂಬ್ಳಿ ಹೊದ್ಕೊಂಡ್, ನೋಡ್ತಿದ್ದೆ ನೈಟು
ನಾಗವಲ್ಲಿ, ಸ್ಟೈಲಿನಲ್ಲಿ, music Effectu 
ಬೆವರಿನಲ್ಲಿ ತೊಯ್ದ್ ಹೋಗಿತ್ತು ನನ್ನ T-Shirtu

!!ಎಡವಟ್ ಎಡವಟ್ ಎಡವಟ್ಟು ಅಯ್ಯೋ ಶಿವನೇ ಎಡವಟ್ಟು...!!

ನನ್ನ ಧೈರ್ಯದ ಬಗ್ಗೆ ಬೇಡ ನಿಮಗೆಲ್ಲ doubtu
ನಮ್ ಹಿರಿಕರು ಅಡ್ತಿದ್ರಯ್ಯ ಹುಲಿ ಜೊತೆಗೆ fightu
ಧೈರ್ಯ ಮಾಡಿ ಎದ್ದು ನಿಂತೆ, ಬಿಚ್ಚೋಯ್ತು beltu
ನಾಗವಲ್ಲಿನ್ ಕಂಡ ಕ್ಷಣವೇ ಹರಿದಿತ್ತು pantu

ಮಿಸ್ ಆದ್ರೆ ಹೊಗೆ..!!


ಹೊಗೆ ಹೊಗೆ- ಹೊಗೆ ಹೊಗೆ
ಹುಡುಗೀರ್ ನ  ನಂಬಿದ್ರೆ ಹೊಗೆ ಹೊಗೆ
ಹೊಗೆ ಹೊಗೆ- ಹೊಗೆ ಹೊಗೆ
ಕಣ್ಣೀರ್ ಗೆ ಕರಗಿದರೆ ಹೊಗೆ ಹೊಗೆ

 
!!ಹೊಗೆ ಹೊಗೆ- ಹೊಗೆ ಹೊಗೆ!!
ಇಂದ್ರ-ಚಂದ್ರ ಅಂತಾರೆ
ಮರವ ಹತ್ತಿಸ್ತಿರ್ತಾರೆ
ಪಾರ್ಟಿ-ಸಿನೆಮ ಅಂತಾರೆ
ಪರ್ಸು ಖಾಲಿ ಮಾಡ್ತಾರೆ

ಹುಡುಗೀರ್ ಅಂದ್ರೆ ಭಯಾನಕ ಬಾಂಬ್
ಹತ್ರ ಹೋದ್ರೆ ಬ್ಲಾಸ್ಟೋ  ಮಾಮ್
!!ಹೊಗೆ ಹೊಗೆ- ಹೊಗೆ ಹೊಗೆ!!
ಮೊದ್ಲು ಕಣ್ಣೀರ್ ಹಾಕ್ತಾರೆ
ಅಮೇಲ್ ಕಯ್ಯಾ ಕೊಡ್ತಾರೆ
ಸಾಯ್ತೀನಿ ಅಂತಾರೆ
ಅಮೇಲ್ ನಮ್ಮನ್ ಕೋಲ್ತಾರೆ

ಅಪ್ಪ-ಅಣ್ಣನ ಒಪ್ಸು ಅಂದ್ಲು ಗವರ್ಮೆಂಟ್ ಕೆಲಸ ತಗೋ ಅಂದ್ಲು
ನಮ್ಮನ್ ಬಿಟ್ಟು, ಕಯ್ಯಾ ಕೊಟ್ಟು, ಬೇರೆ ಹುಡುಗನ ನೋಡ್ಕೊಂಡ್ ಬಿಟ್ಲು
!!ಹೊಗೆ ಹೊಗೆ- ಹೊಗೆ ಹೊಗೆ!!
ಪ್ರೀತಿಸ್ತೀನಿ ಅಂತಾರೆ
ಕಿವಿಗೆ ಹೂವಾ ಇಡ್ತಾರೆ
ಕೈ ಗೆ ಚಂಬು ಕೊಡ್ತಾರೆ
ಕಣ್ಣೀರ್ ತುಂಬ್ಸು ಅಂತಾರೆ

ನಮ್ ಲೈಫಿನಲ್  ನಾವ್ ನೆಟ್ಟೆಗೆ ಇದ್ವಿ
ಇವರಿಂದ ನಾವ್ ಯಾಕ ಹಿಂಗ್ ಆದ್ವಿ...???
!!ಹೊಗೆ ಹೊಗೆ- ಹೊಗೆ ಹೊಗೆ!!
ತಲೆ ಮೇಲ್ ಕಯ್ಯಾ ಇಡ್ತಾರೆ
ಕೋಟಿ ಆಣೆ ಮಾಡ್ತಾರೆ
ಕುಡಿಬೇಡ ಅಂತಾರೆ
ಕೊನೆಗೆ ದೇವದಾಸ್ ಮಾಡ್ತಾರೆ

ನಿಮ್ಮನ್ ಬಿಟ್ಟು ಬದುಕೊದಿಲ್ಲ, ಅಂತ ಎಲ್ಲ ಹೇಳ್ತಾರಲ್ಲ
ಅದ್ರು ಬೇರೆ ಮಾಡುವೆ ಆಗಿ, ಮಕ್ಕಳು ಮಾಡ್ತಾ ಇರ್ತಾರಲ್ಲ...??

!!ಹೊಗೆ ಹೊಗೆ- ಹೊಗೆ ಹೊಗೆ!!ನಿಮ್ಮ
ಸವಿ ನೆನಪಿನ
ಶೇಖ್(ಸ್ಪಿಯ)ರ್

ನನ್ನ ಹೃದಯವು ಕದಡಿದೆ..!!


ಕದಡಿದೆ..!! ನನ ಹೃದಯವು ಕದಡಿದೆ..!! ನಿನಗೆ ಏನನೂ ಹೇಳದೆ..!! ನಿನ ಸನಿಹವ ಬೇಡಿದೆ..!!
ಮಾಡಿದೆ..!! ಏನೋ ಮೋಡಿ ಮಾಡಿದೆ..!! ಮಾತೆ ನಿಂತು ಹೋಗಿದೆ..!! ಯಾಕೋ ನಿನ್ನನು ನೋಡದೆ..!!

ನನ್ನಯ ತಳಮಳ ಯಾರಿಗೆ ಹೇಳಲಿ..!! ನಿನ್ನಯ ನೆನಪಿದೆ ನನ್ನಯ ಮನದಲಿ..!! ನಿನ್ನದೆ ಬಿಂಬವು ಕಂಡಿದೆ ಎದುರಲಿ..!! ಹೇಳು.!!
ಹೇಳಲು ಮಾತುಗಳೆಲ್ಲವು ತೊದಲಿದೆ..!! ಕಣ್ಣುಗಳಲ್ಲಿ ನಾಚಿಕೆ ತುಂಬಿದೆ..!! ಯಾಕೆ ಹೀಗೆ ನನ್ನನು ಕಾಡಿದೆ..!! ಹೇಳು!!
(ಸ್ವರಗಳೆ ತಪ್ಪಿದೆ ನನ್ನೀ ಹಾಡಲಿ..!! ನಾಚಿಕೆ ಮೂಡಿದೆ ನನ್ನೀ ನಡುವಲಿ..!! ಪ್ರೀತಿಯ ಬೀಜವ ಬಿತ್ತಿದೆ ನನ್ನಲಿ..!! ಕೇಳು..!!)

Music flowಕದಡಿದೆ..!! ನನ ಹೃದಯವು ಕದಡಿದೆ..!! ನಿನಗೆ ಏನನೂ ಹೇಳದೆ..!! ನಿನ ಸನಿಹವ ಬೇಡಿದೆ..!!
ಮಾಡಿದೆ..!! ಏನೋ ಮೋಡಿ ಮಾಡಿದೆ..!! ಮಾತೆ ನಿಂತು ಹೋಗಿದೆ..!! ಯಾಕೋ ನಿನ್ನನು ನೋಡದೆ..!!

ಆಸೆಯು ತೀರದ ಬಯಕೆಯು ಮೂಡಿದೆ..!! ನನ್ನವನೆಂದು ಈ ಮನ ಕೂಗಿದೆ..!! ನಿನ್ನಯ ಬರುವಿಕೆಗಾಗಿ ಕಾದಿದೆ..!! ಬಾ..
ಹೊಟ್ಟೆಯು ಹಸಿದಿದೆ ಊಟವು ಎದುರಿದೆ..! ತಿನ್ನಲು ಹೋದರೆ ಬೇಸರವಾಗಿದೆ..!! ನಿದ್ದೆಯು ಇಲ್ಲದೆ ನಾ ಒದ್ದಾಡಿದೆ..!! ಕೇಳು..!!

ನೀನ್ ಎಂದೆಂದಿಗೂ ನನ್ನವ.. ನನ್ ಹಾರ್ಟನ್ನು ನೀನ್ ಕದ್ದವ.. ನನ್ ಮನದೊಳಗಡೆ ಕೂತವ..ನು..!!
ಬೇಡ್ ಎಂದರೂ ಬಂದವ.. ಹೋಗ್ ಎಂದರೂ ಬಿಡದವ.. ಈ ಜೀವದಲ್ ಬೆರೆತವ..ನು..!!
ಹೇಳಲು ಆಗದು ಏನೂ..!! ಬಂದರೆ ಎದುರಿಗೆ ನೀನು.. ಕಾದು ಕುಳಿತಿಹೆ ನಾನು..!! ಅರಿವಿಲ್ಲವೇ..!!!

ಕಳೆದ ಜನುಮದಲಿ ಹಕ್ಕಿಯಾಗಿದ್ದು, ಪ್ರೇಮದಿಂದಲೇ ಜೊತೆಗೆ ಬಾಳಿದ್ದು, ಕೆಂಪು ಹೂವೊಂದು ನನ್ನ ಸೆಳೆದಿದ್ದು, ಅದನು ತರಲು ನೀನ್ ಹಾರಿ ಹೋಗಿದ್ದೆ.. ಕೇಳು..!!
ಅಷ್ಟರಲ್ಲಿಯೇ ಹದ್ದು ಬಂದಿತ್ತು..ಆ ಹೂವನು ಕದ್ದು ಹೋಯ್ದಿತ್ತು,.. ನಿನ್ನ ಎದುರಲ್ಲಿ ಬಿಳಿ ಹೂವಿತ್ತು.. ಕೇಳು..!!
ಎದೆಯ ರಕ್ತದಿ ಕೆಂಪು ಮಾಡಿದ್ದೆ, ತಂದು ಪ್ರೇಮದಿ ನಂಗೆ ನೀಡಿದ್ದೆ. ಯಾಕೆ ಎಲ್ಲವೂ ನೀನು ಮರೆತೋದೆ.. ಹೇಳು..!!

ನೀನಿಲ್ಲದೇ ಬೇಸರ..!! ಮಂಕಾಗಿದೆ ನೇಸರ..!! ಬಯಸು ತಿದೆ.. ಆಸರೆಯು..!!
ಈ ಪ್ರೀತಿಯ ಆಗರ..!! ನೋವು ತುಂಬಿದೆ ಭೀಕರ.! ಬಿಡಿಸು ಬಾರೆಯಾ.. ಚಂದಿರ..ನೆ..!!
ಹೇಳಲು ಆಗದು ಏನೂ..!! ಬಂದರೆ ಎದುರಿಗೆ ನೀನು.. ಕಾದು ಕುಳಿತಿಹೆ ನಾನು..!! ಅರಿವಿಲ್ಲವೇ..!!!

ಕದಡಿದೆ..!! ನನ ಹೃದಯವು ಕದಡಿದೆ..!! ನಿನಗೆ ಏನನೂ ಹೇಳದೆ..!! ನಿನ ಸನಿಹವ ಬೇಡಿದೆ..!!
ಮಾಡಿದೆ..!! ಏನೋ ಮೋಡಿ ಮಾಡಿದೆ..!! ಮಾತೆ ನಿಂತು ಹೋಗಿದೆ..!! ಯಾಕೋ ನಿನ್ನನು ನೋಡದೆ..!!

ನನ್ನಯ ತಳಮಳ ಯಾರಿಗೆ ಹೇಳಲಿ..!! ನಿನ್ನಯ ನೆನಪಿದೆ ನನ್ನಯ ಮನದಲಿ..!! ನಿನ್ನದೆ ಬಿಂಬವು ಕಂಡಿದೆ ಎದುರಲಿ..!! ಹೇಳು.!!
ಹೇಳಲು ಮಾತುಗಳೆಲ್ಲವು ತೊದಲಿದೆ..!! ಕಣ್ಣುಗಳಲ್ಲಿ ನಾಚಿಕೆ ತುಂಬಿದೆ..!! ಯಾಕೆ ಹೀಗೆ ನನ್ನನು ಕಾಡಿದೆ..!! ಹೇಳು!!
(ಸ್ವರಗಳೆ ತಪ್ಪಿದೆ ನನ್ನೀ ಹಾಡಲಿ..!! ನಾಚಿಕೆ ಮೂಡಿದೆ ನನ್ನೀ ನಡುವಲಿ..!! ಪ್ರೀತಿಯ ಬೀಜವ ಬಿತ್ತಿದೆ ನನ್ನಲಿ..!! ಕೇಳು..!!)


Music Flow..!!

ಕದಡಿದೆ..!! ನನ ಹೃದಯವು ಕದಡಿದೆ..!! ನಿನಗೆ ಏನನೂ ಹೇಳದೆ..!! ನಿನ ಸನಿಹವ ಬೇಡಿದೆ..!!
ಮಾಡಿದೆ..!! ಏನೋ ಮೋಡಿ ಮಾಡಿದೆ..!! ಮಾತೆ ನಿಂತು ಹೋಗಿದೆ..!! ಯಾಕೋ ನಿನ್ನನು ನೋಡದೆ..!!

ಇಂದಿರ ಚಂದಿರ ಬೇಡವೊ ನನಗೆ..!! ಪ್ರೀತಿಯ ನೀಡುತ ಬಾರೋ ಎನಗೆ..!!  ಕರೆದು ಹೋಗು ನಿನ್ ಅರಮನೆಗೆ..!! ಬೇಗ..!! ಬೆಳದಿಂಗಳು ಇದ್ದರು ಕತ್ತಲೆ ಹೊರಗೆ..!! ಹುಣ್ಣಿಮೆ ಚಂದಿರ ಈ ಎದೆಯೊಳಗೆ..!! ಮನಸೋತಿರುವೆನು ನಿನ್ನಯ ನಗುವಿಗೆ..!! ಈಗ..!!

ನೀನ್ ಎಂದೆಂದಿಗೂ ನನ್ನವ.. ನನ್ ಹಾರ್ಟನ್ನು ನೀನ್ ಕದ್ದವ.. ನನ್ ಮನದೊಳಗಡೆ ಕೂತವ..ನು..!!
ಬೇಡ್ ಎಂದರೂ ಬಂದವ.. ಹೋಗ್ ಎಂದರೂ ಬಿಡದವ.. ಈ ಜೀವದಲ್ ಬೆರೆತವ..ನು..!!
ಹೇಳಲು ಆಗದು ಏನೂ..!! ಬಂದರೆ ಎದುರಿಗೆ ನೀನು.. ಕಾದು ಕುಳಿತಿಹೆ ನಾನು..!! ಅರಿವಿಲ್ಲವೇ..!!!

ಸವಿ ನೆನಪಿನ
ಶೇಖ್(ಸ್ಪಿಯ)ರ‍್

ಹುಚ್ಚು ಕುದುರೆ ಓಡುತಿದೆ.. ಹುಚ್ಚೆದ್ದು ಕುಣಿಯುತಿದೆ..


ಹುಚ್ಚು ಕುದುರೆ ಓಡುತಿದೆ.. ಹುಚ್ಚೆದ್ದು ಕುಣಿಯುತಿದೆ..
ಭವ ಬಂಧನಕೆ ಸಿಲುಕಿದೆ.. ನನ್ನದೆಂದು ಕುಣಿಯುತಿದೆ
ನಾನೆ ಆದಿ ಎನ್ನುತಿದೆ.. ಅಂತ್ಯವಿಲ್ಲ ಎನ್ನುತಿದೆ..
ಅಹಂಕಾರ ತಲೆಯಲಿದೆ.. ಜ್ಞಾನವನ್ನೇ ತುಳಿಯುತಿದೆ
---------------ಹುಚ್ಚು ಕುದುರೆ ಓಡುತಿದೆ.., ಹುಚ್ಚೆದ್ದು ಕುಣಿಯುತಿದೆ..


ದವು ಮೆದುಳಿಗೇರುತಿದೆ.. ಮನುಷ್ಯತ್ವವ ಮರೆಯುತಿದೆ.
ಧನವು ಕೈಲಿ ಕುಣಿಯುತಿದೆ.. ಘನತೆಯನ್ನು ಮೆಕ್ಕುತಿದೆ.
ಜ್ಞಾನವಂತರಲ್ಲೇ ಇದು ಪ್ರತಿ ನಿತ್ಯ ಹೆಚ್ಚುತಿದೆ... ಪ್ರತಿನಿತ್ಯ ಹೆಚ್ಚುತಿದೆ..
------------ಹುಚ್ಚು ಕುದುರೆ ಓಡುತಿದೆ.. ಹುಚ್ಚೆದ್ದು ಕುಣಿಯುತಿದೆ..


ನನದು ಎಂಬ ದಾಹವಿದೆ.. ಬೇಕು ಎಂಬ ಮೋಹವಿದೆ.
ಬಾಯಲೆಲ್ಲ ಶ್ಲೋಕವಿದೆ.. ಪಾಪ ತುಂಬಿ ತುಳುಕುತಿದೆ..
ಕರುಣೆ ಹೃದಯದಲ್ಲಿ ಇದೆ..  ಹೊರಗೆ ಬರದೆ ನರಳುತಿದೆ..
-------- ಹುಚ್ಚು ಕುದುರೆ ಓಡುತಿದೆ... ಹೆಚ್ಚೆದ್ದು ಕುಣಿಯುತಿದೆ...

ಸವಿ ನೆನಪಿನ
ಶೇಖ್(ಸ್ಪಿಯ)ರ್

ನಾ ಮಾಡಿದ ತಪ್ಪು


ತುಂಬಾ ಬೇಜಾರಾಗೈತೆ ನಂಗ್ ಯಾಕೋ ಗೊತ್ತಿಲ್ಲ..!!
ಉಪ್ಪು ತಿಂದ ಮನೆಗೆ ದ್ರೋಹ ಬಗೆದು ಬಿಟ್ನಲ್ಲ..!!
ಇಲ್ಲೀತಂಕ ಅವರು ನಂಗೆ ಏನೂ ಮಾಡಿಲ್ಲ..
ಆದ್ರೂ ಅಂಥವ್ರ್ ಮೇಲೆ ತಪ್ಪು ಹೊರೆಸಿಬಿಟ್ನಲ್ಲ..!!

ನೋಯಿಸುತಿದೆಯೋ... ನಾ ಮಾಡಿದ ತಪ್ಪು..!!
ನನ್ನನು ಕ್ಷಮಿಸಿ.. ಬಾ ಒಮ್ಮೆಲೆ ಅಪ್ಪು..!!

ಯಾರ್ನೋ ಮೆಚ್ಚಿಸ್ ಬೇಕು ಅಂತ ನಿನನ್ ತುಳುದ್ನಲ್ಲ
ಅವ್ರೇ ಈಗ ನನ್ನ ಬಿಟ್ಟು ದೂರ ಹೋದ್ರಲ್ಲ.,.
ನಿನ್ನ ಕಣ್ಣಲ್ ಬಂದ ನೀರಿಗ್ ಬೆಲೆ ಗೊತ್ತಾಗ್ಲಿಲ್ಲ!!
ನನ್ನ ಕಣ್ಣಲ್ ಬಂದಾಗ್ ಸತ್ಯ ನಂಗ್ ಗೊತ್ತಾಯ್ತಲ್ಲ..!!


ಇಲ್ ಯಾರ್ ಇಲ್ಲ.. ಸತ್ತಾಗ್ ಹಿಂದ್ ಬರೋಲ್ಲ..!!
ಹಿಂಗಿರುವಾಗ.. ತುಳಿಯೋದ್  ಮಿಸ್ ಆಗಿಲ್ಲ..!!

ಕ್ಷಮಿಸು ಅಂತ ಕೇಳ್ಬೇಕಂದ್ರೆ ನೀನು ಜೊತೆಗಿಲ್ಲ..!!
ಕ್ಷಮಿಸೋ ಮನಸು ನಿನಗಿದ್ರೂನೂ ಜನರು ಬಿಡ್ತಿಲ್ಲ..!!
ನಂಗೇ ನೋವಾಯ್ತಂತ ಎಂದೂ ಬೇಜಾರಾಗ್ಲಿಲ್ಲ..!!
ನೀನು ದೂರ ಆಗಿದ್ಕೆ ಅಳು ತಡಿಯೋಕ್ ಆಗ್ತಿಲ್ಲ..!!


ನಂಗ್ ಯಾರೂ ಇಲ್ಲ.. ನೀ ಸಿಗಲೇ ಇಲ್ಲ..!!
ನಿನ್ ನೆನಪು ಮಾತ್ರ.. ನನ್ ಕಾಡ್ತೈತಲ್ಲ..!!

ಹೆಂಡತಿ...... ನೀ ಯಾಕಿಂಗೆ ಕಾಡುತಿ..????

ಹೆಂಡತಿ ಹೆಂಡತಿ ಹೆಂಡತಿ.. ನೀ ಯಾಕಿಂಗೆ ಪ್ರಾಣವ ಹಿಂಡುತಿ..??
ನನ್ನನ್ನೇ ಯಾಕಿಂಗೆ ಕಾಡುತ್ತಿ.. ನಾನ್ ಇಲ್ದಿದ್ರೆ ನೀನೇನು ಮಾಡುತಿ..??

ಬಟ್ಟೆ ಒಗಿಲಿಲ್ಲ ಅಂತಾನೂ ಹೊಡೆಯುತ್ತಿಪಾತ್ರೆ ತೊಳಿಲಿಲ್ಲ ಅಂತಾನೂ ಒದೆಯುತ್ತಿ..
ಹಾಲಿಲ್ಲ... ನೀರಿಲ್ಲ.. ಟೀ ಮಾಡು ಅಂತಿ
ಸ್ವಲ್ಪ ಲೇಟಾದ್ರೂನೂ ಒನಕೆ ಹಿಡುಕೊಂತಿ..

ನಾಕ್ ಗಂಟೆಗೆ ಏಳ್ತೀನಿ ದಿನವೂ ನಡುಗುತ್ತ..
ಅಡುಗೆಯ ಮಾಡ್ತೀನೀ ಸ್ವಲ್ಪ ಸೊರಗುತ್ತ
ಹತ್ ಗಂಟೇಗ್ ಹೋಗ್ತೀನಿ ಆಫೀಸಿಗೆ ನಗುತ..
ಐದ್ ಗಂಟೆಗೆ ಬರ‍್ತೀನಿ ಮನಸಲ್ಲಿ ಅಳುತ..!!

ನೋಡೋಕೆ ಬಂದಿದ್ದೆ ನಾ ನಿನ್ನ ಅಂದು.. 
ಮರುಳಾದೆ ನಾ ನಿನ್ನ ಅಂದಾನ ಕಂಡು
ಒಪ್ಪಿದೆನು ನಾ ನಿನ್ನ ಕೈ ರುಚಿಯ ಉಂಡು
ಬಡಿಸಿದ್ದೆ ನೀ ಜಾಸ್ತಿ ಒಬ್ಬಟ್ಟಿನ ಹಿಂಡು
ಜನರಂದ್ರು ನಾನಿನ್ನು ಮದುವೆಯ ಗಂಡು
ಅನ್ಕೊಂಡೆ ನಾ ನಿನಗೆ ಮುತ್ತೀನ ಚೆಂಡು
ಆದ್ರೆ,
ಆಮೇಲೆ ನೀ ಮಾಡಿದೆ ಆಮೇಲೆ ನನ್ನ ಬೆಂಡು
ಆಗ್ಹೋದೆ ನಾ ನಿನಗೆ ಫುಟ್ಬಾಲು ಚೆಂಡು

ಹತ್ತು ವರ್ಷ ಆಯ್ತು ನೀ ಮಾಡ್ಲಿಲ್ಲ ವಾಂತಿ.
ಅದಕ್ಯಾಕೆ ನೀನೀಗ ನಂದೇ ತಪ್ಪಂತಿ..??
ಒಂದಿನವೂ ಇರಲಿಲ್ಲ ನನ್ ಜೊತೆಗೆ ಗೆಳತಿ
ಅಂದ ಮೇಲೆ ನೀ ತಾಯಿ ಹೆಂಗಾಗ್ತಿ..??


ನೀನ್ಯಾಕೆ ನನ್ನನ್ನು ಹಾಗೆ ನೋಡುತ್ತಿ..??
ಗೊಟ್ಟೊಂದ ಹೇಳ್ತೀನಿ ಕೇಳೇ ಹೆಂಡತಿ..
ನೀನೇನೇ ನನ್ನಯ ಜೀವಾದ ಗೆಳತಿ..
ಈ ನನ್ನ ಅರಮನೆಗೆ ಕಾಂತೀಯ ಒಡತಿಆದರೂ..... ಹೆಂಡತಿ...... ನೀ ಯಾಕಿಂಗೆ ಕಾಡುತಿ..????

ನಿಮ್ಮ ಸವಿ ನೆನಪಿನ
ಶೇಖ್(ಸ್ಪಿಯ)ರ‍್

ಒಲಂಪಿಕ್ಸ್ ಕ್ರೀಡೆಯ ಕಿಚ್ಚಿನ ಹಾಡು.!!


 ಲಂಡನ್ ಗೇಮ್ಸ್ ಇದು.. ಲಂಡನ್ ಗೇಮ್ಸ್..!!
ಕಿಚ್ಚು ಕಾತರದ ಲಂಡನ್ ಗೇಮ್ಸ್..!!

 ಸ್ವಾಭಿಮಾನದ ಕಹಳೆಯ ಸದ್ದಿಗೆ ದೇಶ ವಿದೇಶವು ತತ್ತರ..!!
ದೇಶದ ಗೆಲುವಿಗೆ ಪಣ ತೊಟ್ಟಿರುವೆವು ಇಲ್ಲ ಜಾತಿಯ ಅಂತರ..
ಬೆವರು ಸುರಿಯುತಿದೆ, ಛಲವು ಮನದಲಿದೆ ನೀಡುವೆವು ಪ್ರತ್ಯುತ್ತರ..!!
ದೇಶ ಭಾಷೆಯ ಕಿಚ್ಚಿನ ಆಟದ ಹೋರಾಟ ಬಲು ನಿರಂತರ..!!Fe male (slow)-
 ಹಿಂದು ಕ್ರೈಸ್ತರು ಮುಸಲ್ಮಾನರು ಪ್ರಾರ್ಥಿಸುತಿರುವರು.. ಗೆದ್ದು ಬಾ..!! ಸಿಡಿದೆದ್ದು ಬಾ..!!
ನಿನ್ನ ಗೆಲುವಿನ ಕನಸು ಕಾಣುತ ಕಾದಿರುವೆವು..!! ಗೆದ್ದು ಬಾ..!! ಸಿಡಿದೆದ್ದು ಬಾ..!!

ಕೋರಸ್
ಲಂಡನ್ ಗೇಮ್ಸ್ ಇದು.. ಲಂಡನ್ ಗೇಮ್ಸ್..!!
ಕಿಚ್ಚು ಕಾತರದ ಲಂಡನ್ ಗೇಮ್ಸ್..!!


ಅಭಿನವ ಬಿಂದ್ರನು ರೈಫಲ್ ಹಿಡಿದರೆ ಗುರಿಯು ಎಂದೂ ತಪ್ಪೋಲ್ಲ..
ವಿಜಯೇಂದ್ರನ ಆ ದಿಟ್ಟ ಧಾಳಿಯು ಯಾರಿಂದಾನೂ ನಿಲ್ಲೋಲ್ಲ..!!
ಸುಶೀಲ್ ಕುಮಾರನ ಕುಸ್ತಿಯ ಏಟನು ತಡೆಯೋರಂತೂ ಯಾರಿಲ್ಲ....!!
ಗಗನ್ ನಾರಂಗ್, ವಿಶ್ವ ನಾಥಂಗೂ ಎದುರು ನಿಂತೋರು ಉಳಿದಿಲ್ಲ..!!

Fe male- (slow)- ಇಡೀ ದೇಶವೇ ನಿಮ್ಮ ಹಿಂದಿದೆ.. ಕೋಟಿ ಜನಗಳ ಕೂಗು ಹೇಳಿದೆ.. ಗೆದ್ದು ಬಾ.... ಸಿಡಿದೆದ್ದು ಬಾ..!!
ಎಲ್ಲ ತಾಯಿಯ ಹೃದಯ ಹರಸಿದೆ.. ಕೋಟಿ ಕನಸುಗಳು ನಿನ್ನ ಮೇಲಿದೆ.. ಗೆದ್ದು ಬಾ..!! ಸಿಡಿದೆದ್ದು ಬಾ..!!ಕೋರಸ್ಲಂಡನ್ ಗೇಮ್ಸ್ ಇದು.. ಲಂಡನ್ ಗೇಮ್ಸ್..!!
ಕಿಚ್ಚು ಕಾತರದ ಲಂಡನ್ ಗೇಮ್ಸ್..!!


ಬ್ಯಾಡ್ಮಿಟನ್ ನ ಸಮರ್ಥ ನಾಯಕಿ ಸೈನಾ ನೆಹ್ವಾಲ್ ಸಿಡಿದೆದ್ದಿಹಳು
ರಾತ್ರಿ ನಿದ್ರೆಯಲು, ಹಗಲು ಮಾತಿನಲು ಕಣ್ಣೆದುರಲ್ಲೇ ಕಾಡಿಹಳು..!!
ಎದುರಾಳಿಯನು ಧರೆಗುರುಳಿಸಲು  ಕರ್ಣಂ ಮಲ್ಲೇಶ್ವರಿ ಕಾದಿಹಳು.
ದಣಿವನು ಮರೆತು ದೇಶದ ಗೆಲುವಿಗೆ ಅಕ್ಕುಂಜೆ, ಪೊನ್ನಪ್ಪ ಓಡಿಹಳು..!!

ಕೋರಸ್ಲಂಡನ್ ಗೇಮ್ಸ್ ಇದು.. ಲಂಡನ್ ಗೇಮ್ಸ್..!!
ಕಿಚ್ಚು ಕಾತರದ ಲಂಡನ್ ಗೇಮ್ಸ್..!!


Memorable Master
Shek(spe)arಕಾಯ್ತಿರ‍್ತೀನಿ ನಿಂಗೆ... ಹೋಗೋವರ‍್ಗೂ ಮಣ್ಣಿಗೆ..!!

ಹೆಂಗೆ ಹೇಳ್ಲಿ ನನ್ನ ಹುಡ್ಗಿ ನಿದ್ದೆ ಇಲ್ಲ ನಂಗೆ... 
ನಿನ್ನ ನೆನಪಲ್ ಕೊರಗಿ ಕೊರಗಿ ಆಗ್ತಿದ್ದೀನಿ ಸಣ್ಗೆ..!!
ನಿದ್ದೆ ಮಾಡಿ ಎಷ್ಟೋ ದಿನ ಅಗ್‌ಬುಟ್ತಮ್ಮ ಕಣ್ಗೆ..!!
ನಿದ್ದೆ ಮಾಡೋಕ್ ಹೋದ್ರೆ ಸಾಕು ಮನಸಲ್ ನಿಂದೆ ಗುಂಗೆ..!!


ಫಳ್ ಫಳಾಂತ ನಿನ್ನ ಮುಖ ನಂಗೆ ಬೆಳಕಿದ್ದಂಗೆ..
ಸೂರ್ಯನ್ ಬಿಸ್ಲು ಜಾಸ್ತಿ ಆಗಿ ಸುಟ್ಟೋಯ್ತಪ್ಪ ಕರ‍್ಗೆ.!! 
ಎದ್ಯಾ ಒಳ್ಗೆ ನೋವು ಐತೆ ಯಾರ‍್ಗೂ ಕಾಣದಂಗೆ..
ನಗ್ತಾ ದೂರ ಹೋದೇ ನೀನು ಏನೂ ಹೇಳದಂಗೆ.. ಒಸಿ.. ಮಾತಾನಾಡದಂಗೆ..!!


ಮೂಲೇ ಮನೆ ಮಾದೇವೀನೂ ಲವ್ ಯೂ ಅಂದ್ಳು ನಂಗೆ..!!
ಕಮಲ ಯಾಕೋ ಕಣ್ ಹೊಡದಿದ್ಳು ನಂಗೇ ತಿಳಿಯದಂಗೆ..
ರಮ್ಯಾ, ಭವ್ಯಾ, ಕಾವ್ಯ ನವ್ಯ, ಕೊಟ್ರು ಲೆಟ್ರು ನಂಗೆ..!!
ಬರಿಯೋಕ್ ಬರ‍್ದೇ ಇದ್ರೂ, ಬರ‍್ದೆ ಲವ್ವು ಲೆಟ್ರು ನಿಂಗೆ..


ಪ್ರೀತಿ ಅಂದ್ರೆ ಅಂದ್ಕೊಂಡಿದ್ದೆ ಪಾಪ ತೊಳಿಯೋ ಗಂಗೆ..
ಪ್ರೀತಿ ಮಾಡಿ ಕೈಯ್ಯಿ ಕೊಟ್ಬು, ಮಾಡ್ಬುಟ್ ಹೋದೆ ದಂಗೆ..!!
ಮನಸು ಯಾಕೋ ಕುಣೀತೈತೆ ಹುಚ್ಚು ಕೋತಿಯಂಗೆ.. 
ನಿನ್ನನ್ ಬಿಟ್ಟು ಬದುಕೋದ್ ಮಾತ್ರ ಗೊತ್ತಿಲ್ಲಮ್ಮ ನಂಗೆ..ಎಷ್ಟೇ ವರ್ಷ ಕಳೀತೀರ‍್ಲಿ ಕಾಯ್ತಿರ‍್ತೀನಿ ನಿಂಗೆ..
ಕೊರಗಿದ್ರೂನೂ, ಸೊರಗಿದ್ರೂನೂ ಬದುಕಿರ‍್ತೀನಿ ಹಿಂಗೆ..!!
ಗಂಡನ್ ಮನೆ ದ್ವಾವ್ರು ಮನೆ ಇದ್ದಂಗಮ್ಮ ಹೆಣ್ಗೆ.. 
ಆ ಮನೇಲ್ ನಾನು ಕಾಯ್ತಿರ‍್ತೀನಿ ಹೋಗೋವರ‍್ಗೂ ಮಣ್ಗೆ..!!.. ದೇಹ ಸೇರೋವರ‍್ಗೂ ಮಣ್ಗೆ..

Shek(spe)ar

ಕಹಿ ಸತ್ಯ.!!

ಕೋರಸ್!! ಹಾಳಾಗ್ ಹೋದೇ..!! ಹಾಳಾಗ್ ಹೋದೇ..!! ಹಾಳಾಗ್ ಹೋದೇ..!! ಹಾಳಾಗ್ ಹೋದೇ..!!


ರಾಜ ವಿಸ್ಕಿ ಓಲ್ಡು ಮಂಕು ದೋಸ್ತಯಾಯ್ತು ನಂಗೆ..!!
ಪಾಪಿ ದುನಿಯಾ ಬ್ಯಾಡ ಅಂತ ದೂರ ಇಟ್ತು ಹಿಂಗೆ..!!
ಸತ್ಯ ಶಾಂತಿ ಅಂತ ಇದ್ರೆ ಮುಕ್ತಿ ಇಲ್ವೋ ಮಂಗೆ..!!
ಬಾರಿನೊಳಗೆ ಇಹಳು ಸತ್ಯ ದಾರಿ ತೋರೊ ಗಂಗೆ..!!


ಸಿಹಿಯ ಸುಳ್ಳು ಸಾಹುಕಾರನ ನಾಲಿಗೆ..!!
ಕಹಿಯ ಸತ್ಯ ಕುಡುಕ ಬಡವನ ಪಾಲಿಗೆ..!!


ಸತ್ಯ ಮಾರ್ಗದಲ್ಲಿ ನನ್ನ ನಡಿ ಅಂತ ಅಂದ್ರು..
ಸುಳ್ಳಿನರಮನೇಲ್ ಗುರು ಸುಖವ ಕಂಡು ಕೊಂಡ್ರು.!
ಸತ್ಯ ಹೇಳಿದ್ದಕ್ಕೆ ನನ್ನ ಕುಡುಕ ಅಂತ ಅಂದ್ರು..!
ಕುಡಿದ ಸತ್ಯವನ್ನು ಮಹಾ ಜ್ಞಾನಿ ತಿಳೊದುಕೊಂಡ್ರು..!!


ಗುರುವು ಹೇಳಿಕೊಟ್ಟ ಸತ್ಯ..!!
ಪಾಲನೆಗೆ ಮಾತ್ರ ಮಿಥ್ಯ..!!

ಸತ್ಯಕ್ಕಾಗಿ ಹರಿಶ್ಚಂದ್ರ  ಮನೆ ಮಠ ಬಿಟ್ಟ..!!
ಶಾಕುಂತಲೆ ಸುಳ್ಳಿನಿಂದ ವಿಶ್ವಾಮಿತ್ರ ಕೆಟ್ಟ..
ಗೆಲ್ಲೋತನಕ ಪಾಂಡವ್ರಿಗೆ ಕೃಷ್ಣ ಕೈ ಕೊಟ್ಟ..
ಗೆದ್ದ ಮೇಲೆ ಮಾತು ತಪ್ಪಿ ಅವರ ಕೈ ಬಿಟ್ಟ..!!


ತಿಳಿದು ತಿಳಿದು ಸತ್ಯ ಸತ್ಯ ಅಂದೆ.
ಹುಚ್ಚನಾಗಿ ಬೆಂಕಿಯಲ್ಲಿ ಬೆಂದೆ..!!


ಸ್ವತಂತ್ರ ತಂದು ಕೊಟ್ಟ ಗಾಂಧಿಯನ್ನೇ ಕೊಂದರಿಲ್ಲಿ
ಪೂಜೆ ಮಾಡುವಂಥ ದೇವರಾದ ಗೋಡ್ಸೆ ಇಲ್ಲಿ..
ಕೋಟಿ ಕೋಟಿ ಕೊಳ್ಳೆ ಹೊಡೆಯೋ ರಾಜಕೀಯದಲ್ಲಿ..!!
ಆತ್ಮ ಹತ್ಯೆ ಮಾಡಿಕೊಂಡ ರೈತನು ಹೊಲದಲ್ಲಿ..!!

ಪಾಪ ಪುಣ್ಯಕ್ಕಿಲ್ಲಿ ಬೆಲೆಯೆ ಇಲ್ಲ..
ದೇವರಿಗೂ ದಿಕ್ಕು ತಪ್ಪಿತಲ್ಲಾ..!!

ಹಾಳಾಗ್ ಹೋದೇ..!!!

ಶೇಖ್(ಸ್ಪಿಯ)ರ‍್

ಸಿಹಿ ನೋವು..!! ಪ್ರೀತಿಯ ಫಲ


                                                                              ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??
ನಿನ್ನನೆ ಮೆಚ್ಚಿದ ನನ್ನ.. ಮನಸಲ್ಲೇ ಕೊಂದಿಹೆಯಾ..??
ನನ್ನಲಿ ಪ್ರೀತಿಯ ಬೆಳೆಸಿ... ನೀ ಕಣ್ಮರೆಯಾಗಿಹೆಯಾ.?
ನಿನನ್ಲಿ ಇರುವ ನನ್ನ ನೆನಪನ್ನು ಅಳಿಸಿದೆಯಾ..??

!!ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??

ಹೇಳದೇ ನೀ ಕೇಳದೇ ಈ ಹೃದಯವ ನೀ ದೋಚಿದೆ..
ಆಸರೆ ನೀನಾಗುವೆ ಅಂದುಕೊಂಡೆ ನಾ ಬದುಕಿದೆ..

ಕಾರಣವ ಹೇಳಿ ಹೋಗು.. ಯಾಕೆ ಹಿಂಗೆ ನೀ ಕಾಡಿದೆ..
ಪ್ರೀತೀನ ಮಾಡಿ ಈಗ  ದೂರ ಯಾಕೆ ತಳ್ಳಿದೆ..??

!!ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??ನೀನಿಲ್ಲದೇ ಬದುಕಲಾರೆನು.. ಅಂತ ಆಗ ನೀ ಕೊರಗಿದೆ..
ನಿನ್ನ ನೋಡದೆ ಮಾತಾಡದೇ ಇರಲಾಗದು ಅಂತ ಅತ್ತಿದ್ದೆ.

ಏನೆಂದು ಹೇಳಲಿ  ಗೆಳತಿ... ನಿನ್ನ ನೆನಪು  ಕಾಡುತಿದೆ
ಯಾಕ್ ಹಿಂಗೆ ಸಾಯಿಸುತಿರುವೆ ..?? ನನ್ನ ನೋವು ಕಾಣದೆ..??

!!ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??

ನನ್ನ ನಗುವನು ಮರಳಿ  ಕೊಡುವೆಯಾ..?? ನನ್ನ ಕೊನೆಯ ಪ್ರೆಶ್ನೆ ಇದು ಉತ್ತರಿಸು..
ನಾನ್ ನೀಡಿದ ಆ ಪ್ರೀತಿಗೆ ನೀನ್ ಕೊಟ್ಟ ಬೆಲೆ ಏನು ಯೋಚಿಸು..!!

ನಿನ್ನನ್ನು ನಾನ್  ದೂರೋ ದಿಲ್ಲ.. ತಪ್ಪು ಮಾಡಿದ್ರೆ ನನ್ ಕ್ಷಮಿಸು..
ಅವಳಿಲ್ಲದೇ ಬದುಕಲಾರೆನು.. ಓ ದೇವ್ರೆ ಈ ಪ್ರಾಣ ನೀ ಸ್ವೀಕರಿಸು..!!

!!ಆಡುವ ಮನಸಿನ ಹುಡುಗಿ.. ನೀ ತಪ್ಪು ಮಾಡಿದೆಯಾ..??ನಿಮ್ಮ
ಸವಿ ನೆನಪಿನ
ಶೇಖ್(ಸ್ಪಿಯ)ರ‍್

ನಾನು ಮತ್ತು ನನ್ನ ಕವನ


1. ಹರೆಯ ಉಕ್ಕಿ ಹರಿಯುವಾಗ ಎದುರು ಬಂದೆ ನೀನು
ಸ್ನೇಹ ಮಾಡಿ ಪ್ರೀತಿ ನೀಡಿ ತಿನಿಸಿ ಹೋದೆ ಜೇನು..
ನನ್ನ ನಿನ್ನ ಪ್ರೀತಿ ನೋಡಿ ನಾಚಿತಮ್ಮ ಬಾನು..
ತಿಳಿಯದಂತೆ ಸೇರಿ ಬಿಟ್ಟೆ ಹೃದಯದೊಳಗೆ ನೀನು..
ಹೃದಯ ಒಡೆದ ನೋವಿನಲ್ಲಿ ನರಳುತಿರುವೆ ನಾನು.
ಅದೇನು ತಪ್ಪು ಆಯಿತೆಂದು ಬಿಟ್ಟು ಹೋದೆ ನೀನು...
ತಿಳಿಯದಂಧ ಕಾರಣವನು ಹುಡುಕುತಿರುವೆ ನಾನು...
ನಿನ್ನ ನೆನಪಿನಲ್ಲೆ ಸತ್ತು ಬದುಕುತಿರುವೆ ನಾನುಇಂತಿ ನಿಮ್ಮವ
ಸವಿ ನೆನಪಿನ
ಶೇಖ್(ಸ್ಪಿಯ)ರ್
9980868898


2. ಮನದೊಳಗಿನ ಮಾತೊಂದು ಹೊರ ಬರುವುದರಲಿತ್ತು,

ನಿನ್ನ ಬಿಸಿಯುಸಿರ ಅಧರವು ನನ್ನ ತುಟಿಯನ್ನು ಮುಚ್ಚಿತ್ತು,

ಭಾವನೆಗಳಿಗೆ ಬಾಗಿಲು ಹಾಕಿ, ಬಯಕೆಯ ಬೇಲಿಯೊಳಗೆ ಬಂಧಿಯಾಗಿದ್ದೆ..

ಬೇಲಿ ದಾಟಿ, ಪ್ರೇಮದ ಕಾಣಿಕೆಯನ್ನು ತಂದು  ನನ್ನ ಬಾಳಿಗೆ ನೀ ಜೊತೆಯಾದೆ.

--------ಗೆಳೆಯ ನೀನೆಂದಿಗೂ ನನ್ನವನೆ..3.           ಬದುಕಿನ ಅರಮನೆಯಲ್ಲಿ, ನನ್ನ ಹೃದಯದೊಳಗೆ ನೀ ಬಿಡಿಸಿದ ಭಾವನೆಗಳ ಚಿತ್ರ,

ನಿನ್ನ ಮರೆಯಲಾಗದಂತೆ ಕಟ್ಟಿಹಾಕಿದೆ ನೀನೆ ಬರೆದ ಪ್ರಾಸಗಳ ಪತ್ರ,

ಮಾತುಗಳ ಜೊತೆಗೆ ನೋಟ ಬೆರೆಸಿ,  ಸೆಳೆದುಕೊಂಡೆ ನನ್ನನ್ನು ನಿನ್ನ ಹತ್ರ,

ಆದರೆ ಗೆಳೆಯ ಹುಚ್ಚು ಮನಸಿನ ಸಾಗರದಲ್ಲಿ ಈಗ ಉಳಿದದ್ದು ಕೇವಲ ನೆನಪುಗಳು ಮಾತ್ರ,

ಮನದೊಳಗಿನ ನೆನಪುಗಳು ಬೆಂಬಿಡದೆ ಕಾಡಿದಾಗ ಮತ್ತೆ ಮತ್ತೆ ಕಂಡದ್ದು ನಿನ್ನ ಹೆಜ್ಜೆ ಗುರುತುಗಳು ಮಾತ್ರ!4.            ನನ್ನ ಹೃದಯದ ಮೇಲೆ ನೀಮಾಡಿದ ಪ್ರೀತಿಯ ಹಸ್ತಾಕ್ಷರ,

ನಾ ಅಳಿಯದಂತೆ ಉಳಿಸಿದೆ ನನ್ನ ಉಸಿರ,

ನನ್ನ ಪ್ರತಿ ಮಿಡಿತವು ಪ್ರತಿಧ್ವನಿಸಿದೆ ನಿನ್ನ ಹೆಸರ,

ದೂರಾಗದಿರು ಗೆಳೆಯ ಸೇರು ನನ್ನ ಹತ್ತಿರ.5..            ನಿನ್ನ ಕಣ್ಣಿನ ಸುರುಳಿಯಲ್ಲಿ ನನ್ನೇಕೆಸೆರೆ ಹಿಡಿದೆ?

ನಾನೇಕೆ ನಿನ್ನ ತೋಳ್ತೆಕ್ಕೆಯಲ್ಲಿ ಬಂಧಿಯಾದೆ?

ಬೆಳದಿಂಗಳ ಪ್ರೀತಿಯಲ್ಲಿ ನಾನೇಕೆ ಕರಗಿ ಹೋದೆ?

ನಮ್ಮಿಬ್ಬರ ನೆನಪುಗಳು ಈಗ ಹಾಡಾಗಿ ಮೂಡುತಿದೆ..!!.            ಮನಸಿನ ಸಾಗರದಲ್ಲಿಒಲವಿನ ಅಲೆ ಎಬ್ಬಿಸಿದೆ,

ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ,

ಮರೆಯಲಾಗದ ಮಾತುಗಳು ಪದೇ ಪದೇಪಿಸುಗುಟ್ಟಿದೆ,

ಪ್ರೇಮದಿಂದ ಕೈ ಹಿಡಿದು, ಜೀವನದ  ಹಾದಿ ತುಳಿಸಿದೆ,

ನನ್ನಲಿ ನೀನಾದೆ, ನಿನ್ನಲಿ ನಾ ಬೆರೆತು ಹೋದೆ.            ಮುಂಜಾನೆಯ ಚುಮು ಚುಮುಚಳಿಯಲ್ಲಿ ನಿನ್ನ ಬೆಚ್ಚನೆ ಸ್ಪರ್ಶ ಕಂಡೆ,

ಮುಂಗುರುಳಿಗೆ ಮುತ್ತಿಡುವ ತಂಗಾಳಿಯಲ್ಲಿ ನಿನ್ನ ಮೊಗವ ಕಂಡೆ,

ತೇಲಿ ಬಂದ ಸಂಗೀತದ ಅಲೆಗಳಲ್ಲಿ ನಿನ್ನ ಮೌನವ ಕಂಡೆ,

ಹೊಂಗಿರಣಗಳ ಬೆಳಕಿನಲ್ಲಿ ಲೋಕವನ್ನೇ ಮರೆಸುವ ನಿನ್ನ ನಗುವ ಕಂಡೆ,.            ಎಳೆ ಬಳ್ಳಿಯ ಹೂದೋಟದಲ್ಲಿ ನಿನ್ನ ನಡಿಗೆಯ ಕಂಡೆ,

ಸೋನೆ ಮಳೆಯ ಹನಿಗಳಲ್ಲಿ ನನ್ನ ಹೃದಯವ ನೆನೆಸಿಕೊಂಡೆ,

ಜೀವನವೆಂಬ ಸಾಗರದಲ್ಲಿ  ಮನಸಿನ ಭಾವನೆಗಳನ್ನು ನೀ ಹಂಚಿಕೊಂಡೆ..........

ಕಾಯಿಸದೇ ಬಂದು ಸೇರು ಗೆಳೆಯೆ.. ನಾ ನಿನ್ನನ್ನೇ ನಂಬಿಕೊಂಡೆ..

.            ಮುಗ್ದ ಮನಸಿನ ಮುದ್ದಾದಚೆಲುವೆ ಅವಳು,

ಅಂಬರ ತುಂಬಿದ ಮಿಂಚಿನ ತಾರೆ ಅವಳು,

ಹುಣ್ಣಿಮೆಯಲ್ಲಿ ಚೆಲ್ಲಿದ ಬೆಳದಿಂಗಳು ಅವಳು,

ನನ್ನ ಜೀವನಕ್ಕೆ ಹೊಸ ಬಾಂಧವ್ಯ ಬೆಸೆದವಳು ಅವಳು..

ಅವಳು ನನ್ನವಳು...            ನನ್ನವನನಗು ಮಲ್ಲಿಗೆಯ ಹೂವಂತೆ, ಅವನ ನಡಿಗೆ ಹರಿಯುವ ನದಿಯಂತೆ,

ಅವನು ನನ್ನ ಬದುಕಿಗೆ ರೆಪ್ಪೆಯಂತೆ,

ಕಣ್ಣೀರ ಬಿಂದುವನ್ನು ಮನಸಾರೆ ಒರೆಸುವ ತ್ಯಾಗಮಯಿಯಂತೆ.

ಬೇರೇನು ಬೇಡೆನು ನಾನು... ಕೊಡು ದೇವ ನನಗೆ ಇವನನ್ನು..೧೦. ಒಲಿದಾಗ ಪದಗಳುನಾಚಿದ್ದು ನಿನ್ನಿಂದಲೇ,

ನಡೆವಾಗ ತಂಗಾಳಿ ನಿಂತಿದ್ದು ನಿನ್ನಿಂದಲೇ,

ನಕ್ಕಾಗ ಬೆಳದಿಂಗಳು ನಾಚಿತು ನಿನ್ನಿಂದಲೇ,

ಬಿಸಿ ಸ್ಪರ್ಶಕ್ಕೆ ಇಬ್ಬನಿ ಕರಗಿತು ನಿನ್ನಿಂದಲೇ,

ಅವಳಿಗೆ ಸ್ವಪ್ನಗಳನ್ನು ನೋಡುವುದು ತುಂಬಾ ಇಷ್ಟ
ಆದರೆ ನನಗೆ ಸ್ವಪ್ನದಲ್ಲಿ ಅವಳನ್ನು ನೋಡುವುದು ತುಂಬಾ ಇಷ್ಟ...
ಅವಳಿಗೆ ಮಳೆಯಂದರೆ ತುಂಬಾ ಇಷ್ಟ
ಆದರೆ ನನಗೆ ಮಳೆಗಾಳದಲ್ಲಿ ನೆನೆದಿರುವ ಅವಳೆಂದರೆ ತುಂಬಾ ಇಷ್ಟ...
ಅವಳಿಗೆ ನಗುವುದು ತುಂಬಾ ಇಷ್ಟ
ಆದರೆ ನನಗೆ ನಗುತಿರುವ ಅವಳೆಂದರೆ ತುಂಬಾ ಇಷ್ಟ...
ಅವಳಿಗೆ ನಾನು ಯಾವತ್ತು ಇಷ್ಟವಾಗಲಿಲ್ಲ
ಆದರೆ ನನಗೆ ಅವಳನ್ನು ಬಿಟ್ಟು ಬೇರೆ ಯಾರು ಇಷ್ಟವಾಗಲಿಲ್ಲ...ನಿನ್ನ ಬಳೆಯ ನಾದಕೆ  ಮನಸು ತಾಳ ಹಾಕಿದೆ
ನಿನ್ನ ಕಾಲ್ಗೆಜ್ಜೆಯ ಸದ್ದಿಗೆ ಹೃದಯ ಹೆಜ್ಜೆ ಹಾಕಿದೆ

ತುಟಿ ಅಂಚಿನ ಮುಗುಳ್ನಗೆ ಕ
tÄÚ ತುಂಬಾ ತುಂಬಿದೆ
ನಿನ್ನ ಮಧುರ ದ್ವನಿ ಅದು ಕಿವಿಯ ಒಳಗೆ ಗುನುಗಿದೆ

ಊಟ ನನ್ನ ಮೇಲೆ ಮುನಿದು ನಿ
ದಿರೆ ದೂರ ತಳ್ಳಿದೆ
ಹಗಲು ಇರುಳು ನಿನ್ನ ನೆನಪು ಬಿಡುವು ಕೊಡದೆ ಕಾಡಿದೆ.ಕಣ್ಣಿರ ಬಿಂದು ಜಾರುತಿರಲು ಅಂದು ತಡೆದು ನಿಲ್ಲಿಸಿದೆ ನಾನಿರುವೆ ಎಂದು

ಆ ಕಣ್ಣಿರಿಗೆ ಕಾರಣನಾದೆ ನೀ ಇಂದು ಮರೆಯಲಾರೆನು ನಾ ನಿನ್ನನ್ನು ಎಂದು

ಜಾರುತಿರುವುದು ಕಣ್ಣಿರಿನ ಕೊನೆಯ ಬಿಂದು ತಡೆಯಲಾರೆಯ ಓ ನನ್ನ ಬಂಧು

ನೋಡಿ ನಗುವೆಯಾ ನೀ ನನ್ನ ಕೊಂದು ಜಾರದಿರಲಿ ನಿನ್ನ ಕಣ್ಣ ಬಿಂದು EAzÀÄ-ಎಂದೆಂದು

ಹಾರುವ ಹಕ್ಕಿಗೆ ರೆಕ್ಕೆಯು ಸೋಲದು

ಮಿನುಗುವ ಚುಕ್ಕಿಗೆ ಕಿರುನಗೆ ¸Á®zÀÄ

ಹಕ್ಕಿಯಂತೆ ಹಾರುವೆ ನೀ ಚುಕ್ಕಿಯಂತೆ ಮಿನುಗುವೆ

ಏರು ‍‍‍‍ಪೇರು ಏನೇ ಬರಲಿ £Á£ÀÄ eÉÆvÉUÉ ¤®ÄèªÉ.

ಅವಳ ಉಗುರಿಗೆ ಬಣ್ಣ ಹಚ್ಚುವ ಘಳಿಗೆ

ಗಡಿಯಾರ ಚಲಿಸು ¤Ã ¸Àé®à ಮೆಲ್ಲಗೆ!

ಒದ್ದೆ ಕೂದಲನೊರೆಸಿ ಹುಬ್ಬು ತೀಡುವ ಸಮಯ

ಮುತ್ತೊಂದ ಕೊಡು ನೀ J£Àß PÉ£ÉßUÉ!ತೆರೆದ ರೆಪ್ಪೆಯ ನಡುವೆ, ನಾ ಹಚ್ಚುವಾಗ ಕಾಡಿಗೆ

ತೆರೆದುಕೊಳ್ಳಲಿ ಹೃದಯ, CzÀÄ ತನ್ನ ಪಾಡಿಗೆ!

ನಿನ್ನ ಬಿಟ್ಟು ನಾನಿರಲಾರೆ ಅರೆ ಘಳಿಗೆ

ಬಾ ಬೇಗ ನೀ ನನ್ನ ಬಳಿಗೆ

ಎನುತ ಮೀಟಿದನವ ನನ್ನ ಹೃದಯ ವೀಣೆ

ಅಂದಿನಿಂದ ನನಗೇನಾಗಿದೆಯೋ ನಾ ಕಾಣೆಮನಸಿನ ಪುಟಗಳ ಮೇಲೆ ಅವ ಬರೆದ ಹಾಡಿದೆ

ಹೃದಯ ತನನಂ ಎಂದಿದೆ

ಕಣಕಣವು  CzÉÃ  ಪ್ರತಿಧ್ವನಿಸಿದೆ

ಕಂಡ ಕನಸೆಲ್ಲ ನನಸಾಗಲೆಂಬ ಬಯಕೆ

ಸದಾ ನಿನ್ನ ನೆನಪುಗಳದೆ ಕನವರಿಕೆ

ಇದ್ದ ಕೋಟೆಗಳನೆಲ್ಲ ದಾಟಿ ಒಳಬಂದಿಹೆ ನೀ ಗೆಳೆಯ

ಬಿಡಬೇಡ ಎಂದೆಂದಿಗೂ ನೀ ಹಿಡಿದ ಈ ಕೈಯ

Bottom of Form

ಕವಿಯಾಗಿದ್ದರೆ ನಾ ಬರೆಯುತ್ತಿದ್ದೆ

ನನ್ನ ಕವನದಲ್ಲಿ ನಿನ್ನ ರೂಪವ ಬಣ್ಣಿಸುತ್ತಿದ್ದೆ.

ಕಲೆಗಾರನಾಗಿದ್ದರೆ ನಾ ಚಿತ್ರಿಸುತ್ತಿದ್ದೆ

ಅದರಲ್ಲಿ ನಿನ್ನ ಸೌಂದರ್ಯವ ಬಿಂಬಿಸುತ್ತಿದ್ದೆ.

ಹಾಡುಗಾರನಾಗಿದ್ದರೆ ಹಾಡುತ್ತಿದ್ದೆ

ಅದರಲ್ಲಿ ನಿನ್ನ ಗಾನ ಮಾಧುರ್ಯವ ತುಂಬಿಕೊಳ್ಳುತ್ತಿದ್ದೆ.

ಆದರೇನೊಂದು ಆಗದೆ ವಿರಾಗಿಯಾದೆ

ಎಂದೆಂದೂ ನಿನ್ನ ಮರೆಯದಾದೆ.

ಹಣತೆ ನೀನಾಗಿರಲು ಅರಳೆ ನಾನಾಗುವೆ

ನದಿ ನೀನಾಗಿರಲು ಪ್ರವಾಹ ನಾನಾಗುವೆ

ಮೋಡ ನೀನಾಗಲು ಮಳೆ ನಾನಾಗುವೆ

ಸಮಯ ನೀನಾಗಿರಲು ಕ್ಷಣ ನಾನಾಗುವೆ

ದೇಹ ನೀನಾಗಿರಲು ಆತ್ಮ ನಾನಾಗುವೆ

¦æÃw ¤Ã£ÁzÀgÉ ¤£Àß zÁ¸À £Á£ÁUÀĪÉಪ್ರಣತಿಗಳ ಬೆಳಕಲಿ ಮೊಗವ ಕಂಡಿರುವೆ

ಪ್ರಣಯವಂಕುರಿಸಿ ಪರಿತಪಿಸುತಿರುವೆ

ಪರಿಪರಿಯ ಕನಸುಗಳ ನೀ ©vÀÄÛwgÀĪÉ

¥ÉæêÀÄ fêÀ£ÀªÀ ¤Ã ನೆನಗೆ ನೀಡಿರುವೆ

ಇರುಳ ಕತ್ತಲ ಸೀಳಿ ಇಣುಕಿಣುಕಿ ನೀ ನನ್ನ ಕಾಡುತಿಹೆ

ಇಕ್ಷುಧರನ ಸುಮ ಬಾಣದಿಂದೆನ್ನಇರಿಯುತಿರುವೆ

ಇಹದೊಳಗೆ ಕಾಣದಾ ಲೋಕಗಳ ತೋರುತಿರುವೆ

ಇಂದಲ್ಲ ಎಂದಿಗೂ ನೀ ನನ್ನವಳೆ ಎನಿಸುತಿರುವೆಎಲ್ಲೆಲ್ಲೂ ದರ್ಶನವ  Jನಗೆ ನೀಡು ಬಾ

ಎತ್ತೆತ್ತ ನೋಡಲತ್ತತ್ತ ನೀ ತೋರು ಬಾ

ಎಂದೆಂದೂ ಮನೆ ಮನವ ತುಂಬು ಬಾ

ಎಂದೋ ಎನದೆ ಇಂದೇ ಓಡೋಡು ಬಾಮದುವೆಯಾಗಿ ತಿಂಗಳಿಲ್ಲ
ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ
ಬರುವಳೆನ್ನ ಶಾರದೆ
ಹಿಂದೆ ಮುಂದೆ ನೋಡದೆ
ಎದುರು ಮಾತನಾಡದೆ.”


ಇಂತಿ ನಿನ್ನವ

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು