Recent Movies

ಸಿನೆಮಾ

Share This Article To your Friends

Showing posts with label ಸಿನೆಮಾ. Show all posts
Showing posts with label ಸಿನೆಮಾ. Show all posts

ಕಿಚ್ಚನಿಗೆ ಬಾದಾಮಿಯಲ್ಲಿ ಶಾಕ್ ಕೊಟ್ಟ ಜನ! ಬೆಚ್ಚಿ ಬಿದ್ದ ಸಿಎಂ ಸಿದ್ದರಾಮಯ್ಯ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾದಾಮಿಗೆ ಪ್ರಚಾರಕ್ಕೆ ಬರುವ ಮೊದಲೇ ಅಲ್ಲಿನ ಜನ ಶಾಕ್ ಕೊಟ್ಟಿದ್ದಾರೆ. ಇದೇ ಮೇ 9ನೇ ತಾರೀಕು ಕಿಚ್ಚ ಸುದೀಪ್ ಬಾದಾಮಿಗೆ ತೆರಳಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಬೇಕಿತ್ತು. ಆದರೆ ಬಾದಾಮಿಗೆ ತೆರಳುವ ಮೊದಲೇ ಕಿಚ್ಚನಿಗೆ ಶಾಕ್ ಕೊಟ್ಟಿದ್ದಾರೆ ಸ್ಥಳೀಯರು.

ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಬಾದಾಮಿಗೆ ಬಂದರೆ, ನಾವು ಸುಮ್ಮನಿರುವುದಿಲ್ಲ ಎಂದು ವಾಲ್ಮೀಕಿ ಸಮುದಾದ ಮುಖಂಡರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಸುದೀಪ್ ಪ್ರಚಾರದಿಂದ ವಾಲ್ಮೀಕಿ ಮತಗಳನ್ನು ಸೆಳೆಯಬಹುದು ಎಂದು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದರು. ಆದರೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಲ್ಲಿ ಸಿದ್ದರಾಮಯ್ಯ ವಿಫಲವಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಕಿಚ್ಚ ಸುದೀಪ್ ಸಿದ್ದರಾಮಯ್ಯ ಪರ ಪ್ರಚಾರ ಮಾಡಬಾರದು ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.

ಬಾದಾಮಿಯಲ್ಲಿ ಕುರುಬರು ಮತ್ತು ವಾಲ್ಮೀಕಿ ಸಮುದಾಯ ಹೆಚ್ಚಾಗಿ ಇರೋದ್ರಿಂದ ಕುರುಬರ ಮತಗಳು ಸಿದ್ದರಾಮಯ್ಯಗೆ ಹೋಗೋ ಸಾಧ್ಯತೆ ಇದೆ. ವಾಲ್ಮೀಕಿ ಮತಗಳನ್ನು ಸೆಳೆಯಲು ವಾಲ್ಮೀಕಿ ಸಮುದಾಯದ ಶ್ರೀರಾಮುಲುರನ್ನೇ ಅಖಾಡಕ್ಕೆ ಇಳಿಸಿದೆ ಬಿಜೆಪಿ. ಇಂಥಾ ಟೈಮಲ್ಲೇ ನೋಡಿ, ಶ್ರೀರಾಮುಲು ಮತ್ತು ಬಿಜೆಪಿಗೆ ಶಾಕ್ ಕೊಡುವ ನಿಟ್ಟಿನಲ್ಲಿ ಮತ್ತು ವಾಲ್ಮೀಕಿ ಸಮುದಾಯದ ಮತ ಸೆಳೆಯಲು ಸಿದ್ದರಾಮಯ್ಯ ಕಿಚ್ಚ ಸುದೀಪ್ ಅವರನ್ನು ಕರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಿಚ್ಚನ ಬರುವಿಕೆಯನ್ನು ಅರಿತ ವಾಲ್ಮೀಕಿ ಸಮುದಾಯದ ಜನ, ಸುದೀಪ್ ವಿರುದ್ಧ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಈ ನೆಲಕ್ಕೆ ಸುದೀಪ್ ಕಾಲಿಡುವಂತಿಲ್ಲ. ಕಾಲಿಟ್ಟರೆ, ಅದು ವಾಲ್ಮೀಕಿ ಸಮುದಾಯಕ್ಕೆ ಮಾಡುವ ದ್ರೋಹ ಅಂತಿದ್ದಾರೆ.


ಓಟ್ ಕೇಳೋಕ್ ಹೋದ ಹುಚ್ಚ ವೆಂಕಟ್ ಹಿಂಗಾ ಅನ್ನೋದು?ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಹಲವು ಪಕ್ಷೇತರರು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಹಾಗೆ ಕಾಂಗ್ರೆಸ್ ಶಾಸಕ ಮುನಿರತ್ನ  ವಿರುದ್ಧ ಕಿಡಿಕಾರಿರುವ ಹುಚ್ಚ ವೆಂಕಟ್  ರಾಜರಾಜೇಶ್ವರಿ ನಗರ ಚುನಾವಣ ಕಣಕ್ಕೆ ಧುಮುಕಿದ್ದಾರೆ.
 
ಬೀದಿ ಬೀದಿ ಸುತ್ತಿ ಮತಯಾಚನೆ ಮಾಡ್ತಿದ್ದಾರೆ. ಆದ್ರೆ ರಾಜರಾಜೇಶ್ವರಿ ನಗರದ ಬೀದಿಯೊಂದರಲ್ಲಿ ಮತಯಾಚನೆ ಮಾಡುವಾಗ ಹುಚ್ಚ ವೆಂಕಟ್ ಏನಂದ್ರು ಗೊತ್ತಾ? ಅದನ್ನು ಕೇಳಿ ಇಡೀ ಕ್ಷೇತ್ರದ ಜನರೇ ಶಾಕ್ ಆಗಿದ್ದಾರೆ

ಚುನಾವಣ ಕಣಕ್ಕೆ ಧುಮುಕಿರುವ ವೆಂಕಟ್ ನೀವೆಲ್ಲಾ ನನ್ ಯಕ್ಕಡಕ್ಕೆ ಓಟ್ ಹಾಕಿ ಅಂತಿದ್ದಾರೆ. ಇದನ್ನು ಕೇಳಿದ ಜನ ದಂಗಾಗಿ ಹೋಗಿದ್ದಾರೆ.
 
 
ಚುನಾವಣಾ ಆಯೋಗ ವೆಂಕಟ್ ಅವರಿಗೆ ಚಪ್ಪಲಿಯನ್ನು ಚಿಹ್ನೆಯಾಗಿ ನೀಡಿದೆ. ಹಾಗಾಗಿ ಹುಚ್ಚ ವೆಂಕಟ್ ನನ್ ಯಕ್ಕಡಕ್ ಓಟ್ ಹಾಕಿ ಅಂತ ಪ್ರಚಾರ ಮಾಡ್ತಿದಾರೆ.

ಈಗಲೂ ಲವ್ ಮಾಡ್ತಿದ್ದಾರೆ ರೇಖಾ-ಅಮಿತಾಬ್​?

ಆತ ಬಾಲಿವುಡ್​ನ ಌಂಗ್ರಿ ಮ್ಯಾನ್.. ಆಕೆ ಹಿಂದಿ ಚಿತ್ರರಂಗದ ಚಿರಯೌವನೆ.. ಅಮಿತಾಭ್​ ಹಾಗೂ ರೇಖಾ ಲವ್​ಸ್ಟೋರಿ ಬಾಲಿವುಡ್​ನ ಮೋಸ್ಟ್ ರೊಮ್ಯಾಂಟಿಕ್​ ಜೋಡಿ.. ಇವತ್ತಿಗೂ ಅಮಿತಾಬ್ ಸಿಕ್ಕೇ ಸಿಗ್ತಾರೆ ಅನ್ನೋ ಆಶಾವಅದದಲ್ಲಿ ಬದುಕು ದೂಡ್ತಿದ್ದಾರೆ. ರೇಖಾ ತನ್ನ ಹಣೆಗೆ ಈಗ್ಲೂ ಕುಂಕುಮ ಇಡೋದು, ಅಮಿತಾಬ್​ಗಾಗಿನೇ ಅಂತೆ..!

ಅಮಿತಾಭ್​-ರೇಖಾ.. ಒಂದು ಕಾಲಕ್ಕೆ ಹಿಂದಿ ಬೆಳ್ಳಿತೆರೆಯನ್ನಾಳಿದ, ಮೋಸ್ಟ್​ ರೊಮ್ಯಾಂಟಿಕ್​ ಜೋಡಿ ಕಣ್ರಿ.. ಅದಕ್ಕಿಂತ ಹೆಚ್ಚಾಗಿ ಈ ಜೋಡಿ ಸುದ್ದಿ ಮಾಡಿದ್ದು, ರಿಯಲ್​ ಲೈಫ್​ ಅಫೇರ್​ನಿಂದ.. ಮೂರು ದಶಕಗಳ ನಂತರವೂ, ಈ ಕುರಿತ ಚರ್ಚೆಗಳು ನಡೀತಾನೆ ಇವೆ.. ಬಾಲಿವುಡ್​ನ ಮೋಸ್ಟ್​ ಸೆನ್ಸೇಷನಲ್​ ಲವ್​ಸ್ಟೋರಿ ಅಂತಲೇ ಕರೆಸಿಕೊಳ್ಳೋ, ಅಮಿತಾಭ್​ ರೇಖಾ ಪ್ರೇಮ್​ಕಹಾನಿ, ಬಾಲಿವುಡ್​ನಲ್ಲಿ ಮತ್ತೆ ಮತ್ತೆ ಸದ್ದು ಮಾಡ್ತಾನೇ ಇರುತ್ತೆ.. ಅಮಿತಾಬ್​ರನ್ನು ಈಗ್ಲೂ ಕೂಡ ಹುಚ್ಚಿಯಂತೆ ಪ್ರೀತಿಸ್ತಿದ್ದಾರಂತೆ ಕಣ್ರಿ ಈ ರೇಖಾ.. ತನ್ನ ಬದುಕಿನ ಕೊನೆ ಕ್ಷಣದಲ್ಲಾದ್ರೂ, ಅಮಿತಾಬ್ ಸಿಗ್ತಾರೆ ಅನ್ನೋ ಆಶಾವಾದದಲ್ಲೇ ನಟಿ ರೇಖಾ ಬದುಕ್ತಾ ಇದ್ದಾರಂತೆ..

ನಟಿ ರೇಖಾ ಈಗ್ಲೂ ತನ್ನ ಹಣೆಗೆ ಕುಂಕುಮ ಇಡೋದು ತನ್ನ ಮನದರಸ ಅಮಿತಾಬ್​​ ಬಚ್ಚನ್​ಗಾಗಿಯಂತೆ..! ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ, ನಟಿ ರೇಖಾರ ಗೆಳತಿ ದೀಪಾಲಿ ಇಸ್ಸಾರ್​..

ಹೌದು.. ರೇಖಾ ಈಗಲೂ ಅಮಿತಾಬ್​ಗಾಗಿ ಶಬರಿಯಂತೆ ಕಾಯ್ತಾ ಇದ್ದಾರೆ. ಅವ್ರು ಈಗ್ಲೂ ಹಣೆಗೆ ಕುಂಕುಮ ಇಡೋದು ಅಮಿತಾಬ್​ಗಾಗಿನೇ ಅಂತ, ಖಾಸಗೀ ಮ್ಯಾಗಜಿನ್​ಗೆ ನೀಡಿದ ಸಂದರ್ಶನದಲ್ಲಿ, ಹೇಳಿದ್ದಾರೆ ದೀಪಾಲಿ ಇಸ್ಸಾರ್​..

ರೇಖಾ ಬದುಕಿನಲ್ಲಿ ಹಲವಾರು ಗಂಡಸರು ಬಂದು ಹೋದ್ರು.. ಸಪ್ತಪದಿ ತುಳಿದು ಆಕೆಯ ಹಣೆಗೆ ಕುಂಕುಮವಿಟ್ಟ ಮುಖೇಶ್​ ಅಗರ್​ವಾಲ್​ ಕೂಡ, ರೇಖಾ ಜೊತೆ ತುಂಬಾದಿನ ಉಳೀಲಿಲ್ಲ.. ಆದ್ರೆ ಅಮಿತಾಭ್​ ಮಾತ್ರ, ಅದ್ಯಾಕೆ ಆ ಪರಿ ಆಕೆಯನ್ನ ಕಾಡಿದ್ನೋ ಗೊತ್ತಿಲ್ಲ.. ರೇಖಾ ಆತನನ್ನ ಹುಚ್ಚನಂತೆ ಪ್ರೀತಿಸಿದ್ಲು.. ಆತನಿಗಾಗಿ ಹಂಬಲಿಸಿದ್ಲು.. ಅಷ್ಟೇ ಅಲ್ಲ ಇವತ್ತಿಗೂ ಅಮಿತಾಭ್​, ಆಕೆಯ ಹೃದಯ ಸಿಂಹಾಸನದ ರಾಜ.. ಆತನ ಪ್ರೀತಿಗಾಗಿ ಈಗ್ಲೂ ಕಾಯ್ತಾ ಇರೋ ಶಬರಿ ಈಕೆ..

ರೇಖಾ ಮತ್ತು ಬಿಗ್​ಬಿ ನಡುವಿನ ಪ್ರೇಮ್ ಕಹಾನಿಗೆ ಬರೋಬ್ಬರಿ 35 ವರ್ಷಗಳ ದೊಡ್ಡ ಇತಿಹಾಸವೇ ಇದೆ. ಅಮಿತಾಭ್​ ಹಾಗೂ ರೇಖಾ ಒಟ್ಟಿಗೆ ಕಾಣಿಸಿಕೊಂಡಿದ್ದು 1976ರಲ್ಲಿ ತೆರೆಕಂಡ ‘ದೋ ಅಂಜಾನ್​’ ಸಿನಿಮಾದಲ್ಲಿ.. ಈ ಮೊದಲು ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ರೂ, ರೇಖಾಗೆ ಯಶಸ್ಸು ಅನ್ನೋದು ಮರೀಚಿಕೆಯಾಗಿ ಉಳಿದಿತ್ತು. ಆದ್ರೆ ದೋ ಅಂಜಾನೆ ಅಮಿತಾಬ್​ ಮತ್ತು ರೇಖಾಗೆ ದೊಡ್ಡ ಬ್ರೇಕ್ ನೀಡಿತ್ತು. ಇದಾದ ನಂತರ ಜಂಜೀರ್​ ಹಾಗೂ ದೀವಾರ್​ ಸಿನಿಮಾಗಳ ಯಶಸ್ಸು, ಅಮಿತಾಭ್​ರನ್ನ ಌಂಗ್ರಿ ಯಂಗ್​ ಮ್ಯಾನ್​ ಪಟ್ಟಕ್ಕೇರಿಸಿತ್ತು..

ಇದೇ ಟೈಮಲ್ಲೇ ನೋಡಿ, ರೇಖಾಗೆ ಅಮಿತಾಬ್​ ಮೇಲೆ ಮೊಹಬ್ಬತ್ ಶುರುವಾಗಿದ್ದು.. ಆದ್ರೆ ರೇಖಾಗೆ ಅಮಿತಾಬ್​ ಮೇಲೆ ಇಶ್ಕ್​​ ಶುರುವಾದಾಗ, ಅಮಿತಾಭ್​ ಮತ್ತು ಜಯ ಬಾಧುರಿಯ ಮದುವೆಯಾಗಿ ಮೂರು ವರ್ಷವಾಗಿತ್ತು..

ಅಮಿತಾಬ್ ಬಚ್ಚನ್ನೇ ನನ್ನ ಸಿಂಧೂರ ಅಂತ ಅನ್ಕೊಂಡಿದ್ದ ನಟಿ ರೇಖಾ ಹಣೆಗೆ, ಸಿಂಧೂರ ಇಟ್ಟದ್ದು ಮತ್ತೊಬ್ಬ ವ್ಯಕ್ತಿ.. ಆದ್ರೆ, ಆ ಸಿಂಧೂರ ಒಂದು ವರ್ಷ ಕೂಡ ಉಳೀಲಿಲ್ಲ.. ಯಾಕಂದ್ರೆ, ನಟಿ ರೇಖಾ ಬದುಕಲ್ಲಿ ದೊಡ್ಡ ಸುನಾಮಿನೇ ಎದ್ದು ಬಿಟ್ಟಿತ್ತು.. ಆ ರೋಚಕ ಕಥೆ ಮುಂದಿದೆ ಓದಿ
----------------------------------------------------------
ರೇಖಾ ಹುಚ್ಚಿಯಂತೆ ಪ್ರೀತಿಸ್ತಿದ್ಳು ನಿಜ.. ಆದ್ರೆ ಅಮಿತಾಭ್​ ಆಕೆಯ ಪ್ರೀತಿಯನ್ನ ಇವತ್ತಿಗೂ ಬಹಿರಂಗವಾಗಿ ಒಪ್ಪಿಕೊಳ್ಳೋ ಪ್ರಯತ್ನಾನೇ ಮಾಡ್ಲಿಲ್ಲ.. ಆದ್ರೆ ರೇಖಾ ಮಾತ್ರ, ಅಮಿತಾಭ್​ ಮೇಲಿದ್ದ ತನ್ನ ಪ್ರೀತಿಯನ್ನ ಆಗಾಗ ಬಹಿರಂಗಪಡಿಸಿದ್ಧಾರೆ. ಇವತ್ತಿಗೂ ಆತನಿಗಾಗಿನೇ ಕಾಯ್ತಿದ್ದಾಳೆ..

ರೇಖಾ ಮತ್ತು ಅಮಿತಾಭ್​​​ ಲವ್ ಸ್ಟೋರಿಗೆ ಮುನ್ನುಡಿಯಾಗಿದ್ದು 1976ರಲ್ಲಿ ತೆರೆಗೆ ಬಂದ ದೋ ಅಂಜಾನೆ ಸಿನಿಮಾ ಕಣ್ರಿ.. ಇದಾದ ನಂತರ ಗಂಗಾ ಕಿ ಸೌಗಂದ್​, ಮುಕದ್ಧರ್​ ಕಾ ಸಿಖಂದರ್, ಮಿಸ್ಟರ್​ ನಟ್ವರ್​ಲಾಲ್​, ಹೀಗೆ ಸಾಲು ಸಾಲು ಸಿನಿಮಾಗಳು ಬಂದ್ವು.. ಐದು ವರ್ಷಗಳಲ್ಲಿ ಅಮಿತಾಭ್​ ಹಾಗೂ ರೇಖಾ ಜೋಡಿ, ಬರೋಬ್ಬರಿ ಹತ್ತು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ್ರು.. ಒಂದ್ ಲೆಕ್ಕದಲ್ಲಿ ಬಾಲಿವುಡ್​ ಮೋಸ್ಟ್​ ರೊಮ್ಯಾಂಟಿಕ್​ ಜೋಡಿ ಅನ್ನಿಸಿಕೊಂಡಿತ್ತು ಈ ಜೋಡಿ..

ಇವರಿಬ್ಬರ ನಡುವಿನ ರೀಲ್ ಲೈಫ್​ ಕೆಮಿಸ್ಟ್ರಿ, ರಿಯಲ್​ ಲೈಫ್​ನಲ್ಲೂ ಮುಂದುವರಿದಿತ್ತು. ಇದು ಜಯಾ ಬಚ್ಚನ್​ರ ಕಣ್ಣನ್ನು ಕೆಂಪಗಾಗಿಸಿತ್ತು. ಈ ಗಾಸಿಪ್​ಗಳಿಂದ ಅಮಿತಾಭ್​ ಮನೆಯಲ್ಲಿ ದೊಡ್ಡ ರಾದ್ದಾಂತವೇ ನಡೆದುಹೋಯ್ತು ಅನ್ನೋದು, ಒಂದು ಮೂಲದ ಮಾಹಿತಿ.. ಈ ಸುದ್ದಿಗೆ ಪುಷ್ಟಿ ನೀಡಿದ್ದು, ರಿಷಿಕಪೂರ್​ ಹಾಗೂ ನೀತು ಸಿಂಗ್​ ಮದುವೆ..

ಹೌದು.. 1979ರಲ್ಲಿ ನಡೆದ ರಿಷಿಕಪೂರ್​ ಹಾಗೂ ನೀತು ಸಿಂಗ್​ ಮದುವೆಯಲ್ಲಿ, ಇಡೀ ಹಿಂದಿ ಚಿತ್ರೋದ್ಯಮವೇ ನೆರೆದಿತ್ತು. ಆದ್ರೆ ಅಲ್ಲಿ ಎಲ್ಲರ ಕಣ್ಣು ಬಿದ್ದದ್ದು ನಟಿ ರೇಖಾ ಹಣೆ ಮೇಲೆ.. ಆವತ್ತು ರೇಖಾ ತನ್ನ ಹಣೆಯ ಮೇಲೆ ಇಟ್ಟಿದ್ದ ಸಿಂಧೂರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು..

ಮದುವೆಯಾಗಿರೋ ಹೆಣ್ಣಿನಂತೆ ಸಿಂಧೂರ ಇಟ್ಕೊಂಡು, ಮದುವೆಗೆ ಹೋಗಿದ್ಲು ರೇಖಾ.. ಇದರಿಂದ ರೇಖಾ ಹಾಗೂ ಅಮಿತಾಭ್​ ಮದುವೆಯಾಗಿದ್ದಾರೆ ಅಂತ ಪತ್ರಿಕೆಗಳಲ್ಲಿ ಸುದ್ದಿಯಾಯ್ತು.. ಈ ಬಗ್ಗೆ ಅಮಿತಾಭ್​ ಮಾತ್ರ ಎಲ್ಲಿಯೂ ಬಾಯಿ ಬಿಡ್ಲಿಲ್ಲ.. ಆದ್ರೆ ರೇಖಾ ಅಮಿತಾಭ್​ರನ್ನ ಹುಚ್ಚಿಯಂತೆ ಪ್ರೀತಿಸಿದ್ಲು ಅನ್ನೋದಕ್ಕೆ, ಆಕೆಯ ನಡವಳಿಕೆಯೇ ಸಾಕ್ಷಿ.. ನಾನು ಅಮಿತಾಭ್​ನನ್ನ ಪ್ರೀತಿಸ್ತಿದ್ದೀನಿ ಅನ್ನೋದು ಜಗತ್ತಿಗೆ ಗೊತ್ತಾಗ್ಲಿ ಅಂತಲೇ, ಮ್ಯಾಗಜೀನ್​ಗಳಲ್ಲಿ ಹುಚ್ಚುಚ್ಚಾಗಿ ಸಂದರ್ಶನಗಳನ್ನ ನೀಡ್ತಿದ್ಲು..

1984ರಲ್ಲಿ ರೇಖಾ ಸಂದರ್ಶನ ಪ್ರಕಟಿಸಿದ್ದ ಸ್ಟಾರ್ಡಸ್ಟ್ ಮ್ಯಾಗಜಿನ್​, ರೇಖಾ ತಾಯಿಯಾಗ್ತಿದ್ದಾಳೆ ಎಂಬ ಹೆಡ್​ಲೈನ್​ ಒಂದನ್ನ ಹಾಕಿತ್ತು.. ಇದು ರೇಖಾ ಮತ್ತು ಅಮಿತಾಭ್​ ಗುಟ್ಟಾಗಿ ಮದುವೆಯಾಗಿರಬಹುದಾ ಅನ್ನೋ ಅನುಮಾನಗಳನ್ನು ಹುಟ್ಟು ಹಾಕಿತ್ತು. ಇನ್ನು ಅದೇ ವರ್ಷ ಫಿಲ್ಮ್​ಫೇರ್​ ಮ್ಯಾಗಜೀನ್​ಗೆ ನೀಡಿದ್ದ ಇಂಟರ್​ವ್ಯೂನಲ್ಲಿ, ರೇಖಾ ತನ್ನ ಪ್ರೇಮ ನಿವೇದನೆಯನ್ನು ಹೇಳಿಕೊಂಡಿದ್ಳು.. ‘ನಾನು ಎಷ್ಟೇ ಆದ್ರೂ ಪತ್ನಿಯಲ್ಲ, ಮತ್ತೊಬ್ಬ ಮಹಿಳೆ ತಾನೆ.. ಇಂಥಾ ಮಾತಿನಿಂದ ತಂದೆ ತಾಯಿಗೆ ನಿಜಕ್ಕೂ ನಾಚಿಕೆಯಾಗುತ್ತೆ.. ಯಾವ ತಂದೆ ತಾಯಿಗೆ ತಾನೆ, ಇದರಿಂದ ಬೇಜಾರಾಗಲ್ಲ ಹೇಳಿ.. ಒಟ್ನಲ್ಲಿ ನನ್ನ ಜೀವನದಲ್ಲಿ ಏನ್​ ಆಗುತ್ತೋ, ಅದು ಆತನ ಕಾರಣದಿಂದಾಗಿ ಅನ್ನೋ ಮೂಲಕ, ತನ್ನ ಅಂತರಾಳದ ಭಗ್ನ ಪ್ರೇಮವನ್ನು ಹೊರ ಹಾಕಿದ್ಳು..

ರೇಖಾ ತನ್ನ ಸಿನಿಮಾಗಳಿಂದ ಸುದ್ದಿಮಾಡಿದ್ದಕ್ಕಿಂತ, ಸಿಲ್ಲಿಸಿಲ್ಲಿ ಗಾಸಿಪ್​ಗಳಿಂದ ಸುದ್ದಿಯಾಗಿದ್ದೇ ಹೆಚ್ಚು.. ಒಮ್ಮೆ ನಟ ಕಿರಣ್​ಕುಮಾರ್​ ಜೊತೆಗಿನ ಅಫೇರ್​ನಿಂದಾಗಿ ಸುದ್ದಿಯಾಗ್ತಿದ್ದ ರೇಖಾ, ಮತ್ತೊಮ್ಮೆ ವಿಶ್ವಜೀತ್​ ಜೊತೆಗಿನ ಕಿಸ್ಸಿಂಗ್​ನಿಂದಾಗಿ ಸುದ್ದಿಯಾಗಿದ್ಲು.. ಇದಾಗಿ ಕೆಲ ಸಮಯದ ನಂತರ, ನಟ ವಿನೋದ್​ ಮೆಹ್ರಾರನ್ನ ಮದುವೆಯಾದ್ರು ಎಂಬ ಸುದ್ದಿ ಕೂಡ, ಕಾಡ್ಗಿಚ್ಚಿನಂತೆ ಹರಡಿತ್ತು.. ನಂತರ ವಿನೋದ್​ ಮೆಹ್ರಾ ಜೊತೆ ವಿಚ್ಚೇಧನ ಪಡೆದ ಬಗ್ಗೆಯೂ ಗಾಸಿಪ್​ಗಳಿದ್ವು.. ಆದ್ರೆ ರೇಖಾ ಬದುಕಲ್ಲಿ, ಇಂದಿಗೂ ಭದ್ರವಾಗಿ ಉಳಿದ ಏಕೈಕ ವ್ಯಕ್ತಿ ಅಂದ್ರೆ, ಅದು ಅಮಿತಾಬ್​ ಬಚ್ಚನ್​ ಮಾತ್ರ..!

ಆದ್ರೆ ರೇಖಾ ಏನೇ ಮಾಡಿದ್ರೂ, ಅಮಿತಾಭ್​ ಮಾತ್ರ ಆಕೆಯ ಪಾಲಿಗೆ ದಕ್ಕಲಿಲ್ಲ... ಹೀಗಿದ್ರೂ, ಆಕೆ ಮನಸ್ಸಿನಲ್ಲಿ ಅಮಿತಾಬ್​ ಬಗೆಗಿನ ಪ್ರೀತಿ ಮಾತಯ್ರ ಕಡಿಮೆಯಾಗಲಿಲ್ಲ.. ಪ್ರೀತಿಗಾಗಿ ಪರಿತಪಿಸ್ತಿದ್ದ ಮನಸ್ಸಿಗೆ, ಆಸರೆಯಾದವನೇ, ಮುಖೇಶ್​​ ಅಗರ್​ವಾಲ್​..!

ತನ್ನ ಹಣೆಯ ಸಿಂಧೂರಕ್ಕೆ ಅಮಿತಾಬ್​ ವಾರಸುದಾರನಾಗ್ತಾನೆ ಅಂತ ರೇಖಾ ಕನಸು ಕಟ್ಟಿಕೊಂಡಿದ್ಳು.. ಆದ್ರೆ ಅಂತಿಮವಾಗಿ ರೇಖಾ ಹಣೆಗೆ ಅಧಿಕೃತವಾಗಿ ಸಿಂಧೂರ ಇಟ್ಟಿದ್ದು, ಉದ್ಯಮಿ ಮುಖೇಶ್​ ಅಗರ್ವಾಲ್..

ಮುಖೇಶ್​ ಅಗರ್​ವಾಲ್​​ ಜೊತೆ ರೇಖಾಗೆ ಮದುವೆಯೇನೋ ಆಯ್ತು..? ಆದ್ರೆ, ಒಂದೇ ವರ್ಷದಲ್ಲಿ ಮುಖೇಶ್​ ಅಗರ್​ವಾಲ್​​ ಆತ್ಮಹತ್ಯೆಗೆ ಶರಣಾಗಿದ್ದ. ಯಾಕೆ ಗೊತ್ತಾ..? ಮುಂದೆ ಓದಿ
---------------------------------------------
ಮ್ಯಾನ್ ಪ್ರಪೋಸಸ್.. ಗಾಡಿ ಡಿಸ್ಪೋಸಸ್​ ಅನ್ನೋ ಹಾಗೆ ಆಗಿತ್ತು ರೇಖಾ ಬದುಕು.. ಮುಖೇಶ್​ ಅಗರ್​ವಾಲ್​ ಜೊತೆ ರೇಖಾ ಮದುವೆಯಾಯ್ತು.. ಎಲ್ಲಾನೂ ಸುಖಾಂತ್ಯವಾಯ್ತು ಅನ್ನೋಷ್ಟ್ರಲ್ಲಿ, ದೊಡ್ಡ ಬಿರುಗಾಳಿನೇ ಎದ್ದುಬಿಟ್ಟಿತ್ತು. ಹಣೆಯ ಮೇಲಿನ ಸಿಂಧೂರದ ಅಧಿಪತಿಯೇ ರೇಖಾಗೆ ಇಲ್ಲವಾಗಿಬಿಟ್ಟ..!

ಯಾವ ಹೂವು ಯಾರ ಮುಡಿಗೋ.. ಯಾರ ಒಲವು ಯಾರ ಕಡೆಗೋ ಅನ್ನೋ ಹಾಗೆ, ರೇಖಾ ಬದುಕು ಬರ್ಬರವಾಗಿಬಿಡ್ತು ಕಣ್ರಿ.. ಹುಚ್ಚಿಯಂತೆ ಪ್ರೀತಿಸಿದ ಅಮಿತಾಬ್ ಬಚ್ಚನ್ ಕೂಡ ಈಕೆಗೆ ಒಲೀಲಿಲ್ಲ.. ಇದನ್ನೆಲ್ಲಾ ಮರೀಬೇಕು. ಹೊಸ ಬದುಕು ಕಟ್ಟಿಕೋಬೇಕು ಅಂತ 1990 ರಲ್ಲಿ ಮುಖೇಶ್​ ಅಗರ್​ವಾಲ್​ ಜೊತೆ ರೇಖಾ ವಿವಾಹವಾದ್ರು.. ಅಮಿತಾಭ್​ರ ಪ್ರೀತಿಯ ಹುಡುಕಾಟದಲ್ಲಿದ್ದ ರೇಖಾಗೆ, ಮುಖೇಶ್​ ಮೂಲಕ ಆ ಪ್ರೀತಿ ಸಿಕ್ತು ಅನ್ನುವಷ್ಟರಲ್ಲಿ, ರೇಖಾ ಬದುಕಿನಲ್ಲಿ ಮತ್ತೊಂದು ದುರಂತ ನಡೆದುಹೋಯ್ತು.. ವಿವಾಹವಾದ ಒಂದೇ ವರ್ಷದಲ್ಲಿ, ಮುಖೇಶ್​ ಆತ್ಮಹತ್ಯೆಗೆ ಶರಣಾಗಿದ್ರು..

ರೇಖಾಳ ದುಪಟ್ಟಾದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಮುಖೇಶ್ ಅಗರ್​ವಾಲ್​.. ನನ್ನ ಸಾವಿಗೆ ಯಾರೂ ಕಾರಣರಲ್ಲ ಅಂತ ಪತ್ರ ಕೂಡ ಬರೆದಿಟ್ಟಿದ್ರು ಕಣ್ರಿ.. ಇದು ರೇಖಾ ಬದುಕಿಗೆ ದೊಡ್ಡ ಹೊಡೆತವನ್ನೇ ನೀಡಿತ್ತು. ಪತಿಯ ಸಾವಿಗೆ ರೇಖಾ ಮೇಲೆನೇ ಗೂಬೆ ಕೂರಿಸಿದ್ರು ಎಲ್ಲರು.. ಯಾಕಂದ್ರೆ ಪತಿ ಆತ್ಮಹತ್ಯೆಗೆ ಶರಣಾಗಿದ್ದ ವೇಳೆ ರೇಖಾ ನ್ಯೂಯಾರ್ಕ್​ನಲ್ಲಿದ್ರು.ಆಕೆ ಅಲ್ಲಿ ಯಾರನ್ನ ಭೇಟಿ ಮಾಡೋಕೆ ಹೋಗಿದ್ರು ಅನ್ನೋದೇ ಇಂದಿಗೂ ಯಕ್ಷ ಪ್ರಶ್ನೆ..!

ಪತಿಯ ಸಾವಿನಿಂದಾಗಿ ಹಣೆಯ ಮೇಲಿದ್ದ ಸಿಂಧೂರವನ್ನೇ ಕಳೆದುಕೊಂಡಳು ರೇಖಾ.. ಇನ್ನೇನು ಆಕೆಯ ಬಾಳಲ್ಲಿ ಸಿಂಧೂರ ಇಡೋದಕ್ಕೆ ಆಗೋದೇ ಅಂತಿದ್ದ ಜನರಿಗೆ ಮತ್ತೆ ಶಾಕ್ ಕೊಟ್ಟಿದ್ದು ಇದೇ ಬೆಡಗಿ..

ಯಸ್.. 2008ರಲ್ಲಿ ಫಿಲ್ಮ್​ಫೇರ್​ ಸಮಾರಂಭಕ್ಕೆ ಬಂದಿದ್ದ ರೇಖಾ, ಆವತ್ತು ಹಣೆ ಮೇಲೆ ಸಿಂಧೂರ ಇಟ್ಕೊಂಡಿದ್ರು.. ರೇಖಾರ ಈ ನಡವಳಿಕೆ ಅಲ್ಲಿ ನೆರೆದಿದ್ದವರಿಗೆ ಶಾಕ್ ನೀಡಿತ್ತು..

ಇನ್ನು ಆ ಸಮಾರಂಭಕ್ಕೆ ನಟ ಅಮಿತಾಭ್​ ಕೂಡ ಬಂದಿದ್ರು.. ಅಮಿತಾಬ್ ಅಲ್ಲಿಗೆ ಬರ್ತಾರೆ ಅಂತ ರೇಖಾಗೆ ಮೊದ್ಲೇ ಗೊತ್ತಿತ್ತು.. ಹೀಗಾಗಿನೇ ತಮ್ಮ ಹಳೆಯ ಪ್ರೇಮದ ನೆನಪಿನ ಕುರುಹಾಗಿ ರೇಖಾ ಸಿಂಧೂರವಿಟ್ಕೊಂಡು ಸಮಾರಂಭಕ್ಕೆ ಬಂದಿದ್ರು..ಇದು ರೇಖಾ ಮತ್ತು ಅಮಿತಾಭ್​​ ನಡುವಿನ ಪ್ರೇಮ್​ಕಹಾನಿ ಇನ್ನೂ ಮುಂದುವರಿದಿದೆ ಅನ್ನೋದಕ್ಕೆ ಪುಷ್ಟಿ ನೀಡಿತ್ತು..

ಅಂದು ರೇಖಾ ಹಣೆಯ ಮೇಲೆ ಪ್ರೇಮದ ಕುರುಹಾಗಿ ಸಿಂಧೂರವಿಟ್ಟದ್ದು ಇದೇ ಅಮಿತಾಬ್​​ ಬಚ್ಚನ್.. ಆವತ್ತಿಂದ ಇವತ್ತಿನ ವರೆಗೂ ತಮ್ಮ ಪ್ರೇಮವನ್ನು ಸಿಂಧೂರದೊಂದಿಗೆ ಕಾಯ್ದುಕೊಂಡು ಬರ್ತಿದ್ದಾರೆ ರೇಖಾ.. ಪತಿ ಮುಖೇಶ್​ ಅಗರ್​ವಾಲ್​ ಸಾವಿನ ನಂತರವೂ ರೇಖಾ ಸಿಂಧೂರ ಇಡೋದನ್ನ ಬಿಟ್ಟಿಲ್ಲ.. ಯಾಕಂದ್ರೆ, ಈಗ ರೇಖಾ ಬದುಕ್ತಾ ಇರೋದು ಅಮಿತಾಬಚ್ಚನ್​​ರ ನೆನಪಿನಲ್ಲಿ.. ಹಣೆ ಮೇಲೆ ಸಿಂಧೂರ ಇಟ್ಕೊಳ್ತಾ ಇರೋದು ಕೂಡ ಅವರ ನೆನಪಿನಲ್ಲೇ..!

ಪ್ರತಿದಿನದ ಕೆಲಸಗಳಲ್ಲಿ ಏನನ್ನೂ ಬೇಕಾದ್ರೂ ಮರೀಬಹುದು ಕಣ್ರೀ ರೇಖಾ.. ಆದ್ರೆ ಅಮಿತಾಭ್​ರನ್ನು ನೆನೆದು ತಮ್ಮ ಹಣೆಯ ಮೇಲೆ ಸಿಂಧೂರವಿಟ್ಟುಕೊಳ್ಳೋದು ಮಾತ್ರ ಮರೆಯೋದಿಲ್ಲ.. ಈಗಲೂ ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ ನಿಂತಿರೋದು ರೇಖಾ ಹಣೇಯ ಮೇಲಿರೋ ಈ ಸಿಂಧೂರ.. ತನ್ನ ಸೌಭಾಗ್ಯವಾಗಿ ಸಿಂಗಾರಗೊಂಡಿರೋದು ಕೂಡ ಇದೇ ಸಿಂಧೂರ..

ಬಿಗ್​​ಬಿ ತನ್ನ ಸಂಸಾರದೊಂದಿಗೆ ಆರಾಮಾಗಿದ್ದಾರೆ. ಆದ್ರೆ ರೇಖಾ ಮಾತ್ರ, ಇವತ್ತಲ್ಲಾ ನಾಳೆ ಆ ಪ್ರೀತಿ ಸಿಗಬಹುದು ಅಂತ 60 ವರ್ಷಗಳಿಂದ ಕಾಯ್ತಾ ಇದ್ದಾರೆ. ಬಿಗ್​ಬಿ ಹೆಸರಿನಲ್ಲೇ ಪ್ರತಿ ದಿನ ಸಿಂಧೂರವಿಟ್ಟುಕೊಳ್ತಿದ್ದಾರೆ. ಆ ಮೂಲಕ, ತನ್ನ ಪ್ರೇಮಿಯ ನೆನಪಿನೊಂದಿಗೆ ಕಲ್ಪನೆಗಳಲ್ಲೇ ಸಂಸಾರ ಮಾಡ್ತಿದ್ದಾರೆ.

ಸನ್ಯಾಸಿನಿಯಾದಳಾ ಕೃಷ್ಣಸುಂದರಿ?

ಬಿಪಾಶ ಬಸು.. ಬಾಲೀವುಡ್​ನ ಸೆನ್ಷೇಷನಲ್​ ನಟಿ.. ತನ್ನ ಮಾದಕ ನಟನೆಯಿಂದ, ಅಭಿಮಾನಿಗಳ ಮತ್ತೇರಿಸಿದ ಮೋಹಕ ಬೆಡಗಿ.. ರಸಿಕತೆಗೆ ಮತ್ತಷ್ಟು ಮೆರುಗು ನೀಡೋ ಸೌಂದರ್ಯರಾಶಿ ಆಕೆಯದ್ದು.. ಆದ್ರೆ ಆ ನಟಿಗೆ ಈಗ ಜೀವನವೇ ಬೇಡ ಅನ್ನಿಸಿದೆ. ನಟನೆಯಿಂದಲೇ ಮಾದಕತೆ ಸೃಷ್ಟಿಸಿದ ಬಿಪಾಶ ಬಸು, ಈಗ ಸನ್ಯಾಸತ್ವದತ್ತ ಮುಖ ಮಾಡಿದ್ದಾರೆ. ಅಷ್ಟಕ್ಕೂ ಬಿಪಾಶ ಯಾಕ್ ಹಿಂಗ್ ಮಾಡಿದ್ರು? ನೀವೇ ನೋಡಿ..

ಬಿಪಾಶ ಬಸು.. ಕಣ್ಣೋಟದಲ್ಲೇ ಅಭಿಮಾನಿಗಳನ್ನು ಕುಣಿಸೋ ಮಾದಕ ನಟಿ.. ಹುಬ್ಬೇರಿಸಿ ನೋಡಿದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಸೆಳೆತ ಬಿಪಾಶಳಲ್ಲಿದೆ.. ಅದಕ್ಕೆ ನೋಡಿ.. ಸಿನಿಮಾದಲ್ಲಿ ಬಿಪಾಶ ಸ್ಟೆಪ್ ಹಾಕಿದ್ಳು ಅಂದ್ರೆ, ಇತ್ತ ಥಿಯೇಟರ್​ನಲ್ಲಿ ಆಕೆ ಅಭಿಮಾನಿಗಳು ಕುಣಿಯೋದು ಗ್ಯಾರಂಟಿ.. ಹೀಗಾಗಿನೇ ಬಾಲಿವುಡ್​ನಲ್ಲಿ ಆಕೆಗೆ ಸಖತ್​ ಡಿಮ್ಯಾಂಡ್​..
ನೋಡೋಕೆ ಒಂಚೂರು ಕೃಷ್ಣನ ವರ್ಣ ಈಕೆಯದ್ದು.. ಅದಿಕ್ಕೇ ಈಕೆಯನ್ನು ಕೃಷ್ಣಸುಂದರಿ ಅಂತ ಕರೀತಾರೆ.. ಬಿಪ್ಸ್ ಅನ್ನೋದು ಅಭಿಮಾನಿಗಳು ಈಕೆಗೆ ಪ್ರೀತಿಯಿಂದ ಇಟ್ಟಿರೋ ಹೆಸರು..

ತನ್ನ ಕಣ್ಣೋಟ.. ಮೈಮಾಟ.. ಗಾಸಿಪ್​ಗಳ ಚೆಲ್ಲಾಟದಿಂದ ಬಾಲಿವುಡ್​ನಲ್ಲಿ ಸದಾ ಸುದ್ದಿಯಲ್ಲಿರ್ತಾ ಇದ್ದ ನಟಿ.. ಬಾಲಿವುಡ್​ನಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿರೋ ಈ ಬಿಪ್ಸ್​ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ರಸಿಕರ ನಿದ್ದೆಗೆಡಿಸಿದ ನಟಿಗೆ, ಈಗ ಜೀವನವೇ ಸಾಕಾಗಿ ಹೋಗಿದ್ಯಂತೆ..!

ಯಸ್​.. ನಟಿ ಬಿಪಾಶ ಬಸು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಬದುಕಿನ ಜಂಜಾಟಕ್ಕೆ ಬೇಸತ್ತು ಹಿಮಾಲಕ್ಕೆ ಹೋಗಿ ಧ್ಯಾನಮಗ್ನರಾಗಿದ್ದಾರೆ. ಆ ಮೂಲಕ, ರಸಿಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಬಿಪಾಶ ಅಂದ್ರೆ ಸಾಕು, ನಮ್ಮ ಕಣ್ಮುಂದೆ ಬರೋದು ಆಕೆಯ ಹಾಟ್ ಹಾಟ್​ ಸಿನಿಮಾಗಳು.. ಲಿಪ್​ ಲಾಕ್​ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಸದ್ದು ಮಾಡಿದ್ದ ಈಕೆ, ಇದೀಗ ಸನ್ಯಾಸತ್ವ ಸ್ವೀಕರಿಸಿದ್ದಾದ್ರೂ ಯಾಕೆ..? ಅನ್ನೋದು ಅವ್ರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ನಟನೆಯಲ್ಲೂ ಸೈ, ಕುಣಿತದಲ್ಲೂ ಸೈ ಅನಿಸಿಕೊಂಡಿರೋ ಬಿಪಾಶ ಬಸು ಹುಟ್ಟಿದ್ದು, ಜನವರಿ 7, 1979ರಲ್ಲಿ.. ಅಂದ್ರೆ ಬಿಪಾಶಾಗೆ ಈಗ ಬರೀ 36 ವರ್ಷ ಅಷ್ಟೇ.. ಚಿಕ್ಕವಳಿದ್ದಾಗಿಂದಲೂ, ಬಿಪಾಶ ಸಖತ್​ ಬೋಲ್ಡ್​​.. ಶಾಲೆಯಲ್ಲಿ ಈಕೆಯನ್ನು ಲೇಡಿ ಗೂಂಡಾ ಅಂತಲೇ ಕರೀತಿದ್ರು.. ಮೊದಲು ಮಾಡೇಲ್ ಆಗಿ, ತನ್ನ ಛಾಪು ಮೂಡಿಸಿದ್ದ ಬಿಪಾಶ, 2001 ರಲ್ಲಿ ಅಜ್ನಭಿ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಲು..

ಬಿಪಾಶಾಳ ನಟನೆ ಹೇಗಿತ್ತು ಅಂದ್ರೆ, ಮೊದಲ ಸಿನಿಮಾದಲ್ಲೇ ಫಿಲಂ ಫೇರ್​ ಅವಾರ್ಡ್ ಆಕೆಗೆ ಒಲಿದಿತ್ತು.. ಇದಾದ ನಂತರ ಮತ್ತೆ ಆಕೆ ಸದ್ದು ಮಾಡಿದ್ದು, 2002ರಲ್ಲಿ ಬಂದ ರಾಜ್​ ಸಿನಿಮಾ ಮೂಲಕ..

ಹಾರರ್​ ತ್ರಿಲ್ಲರ್​ ಸಿನಿಮಾದ ಅಭಿನಯ ಕೂಡ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ತಂದುಕೊಟ್ಟಿತ್ತು ಬಿಪಾಶಾಗೆ..  ಇದೇ ಕಾರಣಕ್ಕೆ, 2012 ರಲ್ಲಿ ರಾಜ್​ ತ್ರಿ ಸಿನಿಮಾ ಮಾಡಿತ್ತು ಚಿತ್ರತಂಡ.. ಆ ಸಿನಿಮಾದಲ್ಲೂ ತೆರೆ ಮೇಲೆ ಅಪ್ಪಳಿಸಿದ್ದು, ಇದೇ ಹಾಟ್ ನಟಿ ಬಿಪಾಶ ಬಸು..
ಬರೀ ಒಂದೆರಡು ಸಿನಿಮಾಗಳಲ್ಲ.. ಜಿಸ್ಮ್​​​, ನೋ ಎಂಟ್ರಿ ಸೇರಿದಂತೆ, ಹಲವು ಸಿನಿಮಾಗಳು ಬಿಪಾಶಾಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿವೆ. ತನ್ನ ಎದುರಾಳಿಯನ್ನು ತುಟಿಯಲ್ಲೇ ಕಟ್ಟಿಹಾಕಬಲ್ಲ ಸೌಂದರ್ಯ ಈಕೆಗೆ ವರವಾಗಿ ಸಿಕ್ಕಿತ್ತು. ಹೀಗಾಗಿನೇ ಬಾಲಿವುಡ್​ನಲ್ಲಿ ಸೆನ್ಷೇಷನ್​ ಕ್ರಿಯೇಟ್ ಮಾಡಿ, ಲಿಪ್​ ಲಾಕ್ ಸುಂದರಿಯಾಗಿ ಸದ್ದು ಮಾಡಿದ್ಖಳು. ಬಾಲಿವುಡ್​ನ ಸೆಕ್ಸ್​​ಬಾಂಬ್​ ಅಂತಲೇ ಜನಪ್ರಿಯತೆ ಗಳಿಸಿದ್ಳು..

ಬಿಪಾಶಾಳ ಸಿನಿಮಾ ನೋಡಿದ್ರೆ, ಸನ್ಯಾಸಿಯಾಗಬೇಕು ಅಂತ ಅಂದುಕೊಂಡವನಿಗೂ, ಸಂಸಾರಿಯಾಗೋ ಆಸೆ ಹುಟ್ಟುತ್ತೆ.. ಅಧುನಿಕ ವಿಶ್ವಾಮಿತ್ರನ ತಪೋಭಂಗ ಮಾಡಬಲ್ಲ ಶಾಕುಂತಲೆಯ ಸೌಂದರ್ಯರಾಶಿ ಈಕೆಯದ್ದು.. ಅಂಥದ್ರಲ್ಲಿ, ಈಕೆನೇ ಈಗ ಸನ್ಯಾಸತ್ವ ಸ್ವೀಕರಿಸಿದ್ದಾಳೆ ಅಂದ್ರೆ, ಇದಕ್ಕೆ ಏನನ್ಬೇಕೋ ಗೊತ್ತಾಗ್ತಿಲ್ಲ..

ಹೀಗೆ ಪಡ್ಡೆಗಳ ನಿದ್ದೆಗೆಡಿಸಿದ್ದ ನಟಿಯೊಬ್ಬಳಿಗೆ, ಬದುಕೆ ಬೇಡ ಅನ್ನಿಸಿದ್ದು ಯಾಕೆ..? ಅಷ್ಟಕ್ಕೂ ಬಿಪಾಶ ಬದುಕಲ್ಲಿ ಎದ್ದ ಬಿರುಗಾಳಿಯಾದ್ರೂ ಏನು..? ಆಕೆ ಸನ್ಯಾಸತ್ವ ಸ್ವೀಕರಿಸಿದ್ದರ ಹಿಂದಿರೋ ರಹಸ್ಯವೇನು..? ಅದ್ರ ಹಿಂದೆ ಒಂದು ದೊಡ್ಡ ರೋಚಕ ಕಥೆನೇ ಇದೆ..
--------------------------------------------------
ಬಿಪಾಶ ಸದ್ಯಕ್ಕೀಗ ಹಿಮಾಲಯದ ಆಶ್ರಮದಲ್ಲಿದ್ದಾರೆ. ಹಾಡು ಕುಣಿತ ಅಂತಿದ್ದ ನಟಿ ಈಗ ಜಪ ತಪಗಳಲ್ಲಿ ಮಗ್ನರಾಗಿದ್ದಾರೆ. ಅಷ್ಟಕ್ಕೂ ಬಿಪಾಶಳ ಮನಸ್ಸು ವೈರಾಗ್ಯದ ಕಡೆ ಹೋಗಿದ್ಯಾಕೆ ಗೊತ್ತಾ..? ಆಕೆಯ ಬದುಕಲ್ಲಿ ಎದ್ದು ಭಯಾನಕ ಬಿರುಗಾಳಿ.. ಆ ಬಿರುಗಾಳಿನೇ ಈಗ ಬಿಪಾಶಳನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಯಸ್​​.. ಬದುಕಲ್ಲಿ ಬಿರುಗಾಳಿ ಎದ್ರೇನೇ ಮನಸ್ಸು ವೈರಾಗ್ಯದ ಕಡೆ ಎಳೆಯುತ್ತೆ.. ಅದೂ ಒಂದಲ್ಲ ಎರಡಲ್ಲ.. ಬಿಪಾಶ ಬದುಕಲ್ಲಿ ಬಂದ ಸಾಲು ಸಾಲು ಸಂಕಷ್ಟಗಳ ಹೊಡೆತ, ಆಕೆಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಸಂಸಾರಿಯಾಗಿ ಬದುಕು ನಡೆಸಬೇಕು ಅಂತ ಆಸೆ ಇಟ್ಟುಕೊಂಡಿದ್ದಾಕೆಯನ್ನು ಸನ್ಯಾಸತ್ವದ ಕಡೆ ಸೆಳೆದಿದೆ.


ಡಿನೋ ಮೊರೆಯಾ ಜೊತೆ ಬಿಪ್ಸ್​ ಬ್ರೇಕಪ್​
ಕಡಿದು ಬಿದ್ದಿತ್ತು 6 ವರ್ಷಗಳ ‘ಬಾಹು’ಬಂಧನಯಸ್​.. ಕಣ್ಣೋಟದಲ್ಲೇ ಅಭಿಮಾನಿಗಳನ್ನು ಕುಣಿಸಿದ ಮಾದಕ ನಟಿಗೆ, ಎಲ್ಲರಂತೆ ಸಂಸಾರಿಯಾಗೋ ಆಸೆ ಇದ್ದದ್ದು ಸತ್ಯ.. ಅದಕ್ಕಾಗಿಯೇ ದಿನೋ ಮೊರೆಯಾ ಜೊತೆ ಸುತ್ತಾಟದಲ್ಲಿ ಮಗ್ನಳಾಗಿದ್ಳು.. ಒಂದಲ್ಲ ಎರಡಲ್ಲ.. 1996 ರಿಂದ 2002 ರವರೆಗೆ.. ಬರೋಬ್ಬರಿ 6 ವರ್ಷಗಳವರೆಗೆ, ಇಬ್ಬರೂ ಲವ್ವು ಡವ್ವು ಅಂತ ಸುತ್ತಾಟ ನಡೆಸಿದ್ರು.. ಆದ್ರೆ ಅದೇನಾಯ್ತೋ ಏನೋ.. ಬಿಪ್ಸ್​ ಜೊತೆಗಿನ 6 ವರ್ಷಗಳ ಸಂಬಂಧವನ್ನು ಡಿನೋ ಮೊರೆಯ ಕಡಿದುಕೊಂಡು ಬಿಟ್ರು.. ಇದು ಬಾಲಿವುಡ್​ನ ಕೃಷ್ಣ ಸುಂದರಿಯ ಮನಸ್ಸನ್ನು ಆಘಾತಗಳಿಸಿತ್ತು.


ಬಿಪಾಶಾಗೆ ಕೈ ಕೊಟ್ಟ ಮತ್ತೊಬ್ಬ ನಟ ಜಾನ್​ ಅಬ್ರಹಾಂ
ಕೆಲವೇ ದಿನಗಳಲ್ಲಿ ಎರಡನೆಯ ಪ್ರೇಮವೂ ಆಯ್ತು ಭಗ್ನ..!

2003 ರಲ್ಲಿ ಜಿಸ್ಮ್​​ ಸಿನಿಮಾದ ಶೂಟಿಂಗ್​ ವೇಳೆ, ನಟ ಜಾನ್ ಅಬ್ರಹಾಂ ಬಿಪಾಶಾಗೆ ಜೊತೆಯಾಗ್ತಾನೆ.. ಮೊದಲೇ ಭಗ್ನಪ್ರೇಮಿಯಾಗಿದ್ದ ಬಿಪಾಶಾಳ ಹೃದಯಕ್ಕೆ, ಮುಲಾಮು ಹಚ್ಚೋ ಕೆಲಸ ಮಾಡ್ತಾನೆ. ಆದ್ರೆ ಬಿಪಾಶಾಳ ಜಾನ್​ ಆಗಿದ್ದ ಜಾನ್ ಅಬ್ರಹಾಂ ಕೂಡ, ಆಕೆಗೆ ಕೈ ಕೊಡ್ತಾನೆ.. 9 ವರ್ಷಗಳ ಸುತ್ತಾಟದ ನಂತರ, 2011 ರಲ್ಲಿ ಜಾನ್ ಅಬ್ರಹಾಂ ಮತ್ತು ಬಿಪಾಶಾಳ ನಡುವಿನ ಸಂಬಂಧಕ್ಕೆ, ಅಧಿಕೃತವಾಗಿ ಎಳ್ಳು ನೀರು ಬಿಡಲಾಗುತ್ತೆ. ಆ ಮೂಲಕ, ಎರಡನೇ ಬಾರಿ ಭಗ್ನಪ್ರೇಮಿಯಾಗ್ತಾಳೆ ಬಾಲಿವುಡ್​ನ ಸೆಕ್ಸ್​​ ಬಾಂಬ್​ ಬಿಪಾಶಾ..!


ಬಿಪಾಳ ಬಾಳಿಗೆ ಮೂರನೇ ಪ್ರೇಮಿಯ ಎಂಟ್ರಿ..!
9 ತಿಂಗಳಲ್ಲೇ ಮುರಿದು ಬಿತ್ತು ಬಣ್ಣದ ಪ್ರೇಮ..!
 
ಜಾನ್ ಅಬ್ರಹಾಂ ಜೊತೆಗೆ ಬ್ರೇಕಪ್ ಆದ ನಂತರ, 2014 ರ ಫೆಬ್ರವರಿ 19 ರಂದು ನಟ ಹರ್ಮನ್​ ಬವೇಜಾ ಜೊತೆ ರಿಲೇಶನ್​ಷಿಪ್​ ಶುರು ಮಾಡಿಕೊಳ್ತಾಳೆ.. ಆ ಮೂಲಕ ಮೂರನೇ ಪ್ರೇಮಕ್ಕೆ ಮುನ್ನುಡಿ ಹಾಕ್ತಾಳೆ ಬಿಪಾಶ.. ಆದ್ರೆ ಮ್ಯಾನ್ ಪ್ರಪೋಸಸ್ ಬಟ್ ಗಾಡ್ ಡಿಸ್ಪೋಸಸ್ ಅನವ್ನೋ ಹಾಗೆ, ಹರ್ಮನ್ ಬವೇಜಾ ಮತ್ತು ಬಿಪಾಶಳ ಸಂಬಂಧ ಮುರಿದು ಬಿದ್ದಿತ್ತು.. ಅದೂ ಕೇವಲ ಒಂಭತ್ತು ತಿಂಗಳಲ್ಲೇ..


ರಾಜಕಾರಣಿಯ ಜೊತೆಗೆ ಬಿಪ್ಸ್​​ ಕಾಂಟ್ರವರ್ಸಿ
ಬಿಪಾಶ ನಿದ್ದೆಗೆಡಿಸಿದ್ದ ‘ಸೆಕ್ಸ್​​’ ಟೇಪ್​​ ಪುರಾಣ

 ಈ ಪ್ರೇಮ ಪುರಾಣಗಳಿಂದ ಬಾಲಿವುಡ್​ನ ಕೃಷ್ಣ ಸುಂದರಿ ಮಾನಸಿಕವಾಗಿ ಕುಗ್ಗಿ ಹೋಗಿದ್ಳು.. ಬಂದವರೆಲ್ಲಾ ಬಾಳಿಗೆ ಬೆಳಕಾಗುತ್ತೆ ಅಂತ ಅಂದುಕೊಂಡಿದ್ದಾಗಲೇ, ಅವರೆಲ್ಲಾ​​ ಬಿರುಗಾಳಿ ಎಬ್ಬಿಸಿ ಹೊರಟು ಬಿಟ್ಟಿದ್ರು.. ಇದು ಸಹಜವಾಗಿಯೇ ಬಿಪಾಶಾಳ ಬದುಕಲ್ಲಿ ಭಾರಿ ದೊಡ್ಡ ಹೊಡೆತಗಳನ್ನು ನೀಡಿದ್ದು ಮಾತ್ರ ಸುಳ್ಳಲ್ಲ.. ಇದ್ರ ಮಧ್ಯೆ ರಾಜಕಾರಣಿಯೊಂದಿಗಿನ ಸೆಕ್ಸ್​​ ಟೇಪ್​ ಕೂಡ ಬಿಪಾಶಾಗೆ ಭಾರೀ ಹೊಡೆತ ನೀಡಿತ್ತು..

2006 ರಲ್ಲಿ ರಾಜಕಾರಣಿ ಅಮರ್​ ಸಿಂಗ್​​ ಜೊತೆಗೆ  ಬಿಪಾಶಳ ಒಡನಾಟ ಶುರುವಾಗುತ್ತೆ. ಆ ವೇಳೆ ಇಬ್ಬರ ನಡುವೆ ಡರ್ಟಿ ಟಾಕ್​ಗಳೂ ಕೂಡ ನಡೆದಿರುತ್ತೆ. ಆದ್ರೆ ಇಬ್ಬರ ನಡುವಿನ ವಯಕ್ತಿಕ ಮಾತುಗಳು ಅದ್ಹೇಗೋ ರೆಕಾರ್ಡ್​ ಆಗಿ ಬಿಟ್ಟಿದೆ. ಇಬ್ಬರ ನಡುವಿನ ಆ ಡರ್ಟಿ ಮಾತುಗಳು ಲೀಕ್​ ಆಗಿ ತೀವ್ರ ಸಂಚಲನ ಮೂಡಿಸಿತ್ತು.. ಇದನ್ನು ಕೇಳಿಸಿಕೊಂಡ ಜನಗಳು, ಅಮರ್​ ಸಿಂಗ್ ಮತ್ತು ಬಿಪಾಶ ಇಬ್ಬರ ನಡುವೆ ಏನೇನೋ ಇದೆ ಅಂತ ಮಾತಾಡಿಕೊಳ್ಳೋಕೆ ಶುರು ಮಾಡಿದ್ರು.. ಆದ್ರೆ ಆ ಡರ್ಟಿ ಮಾತುಗಳು ಲೀಕ್ ಆಗಿದ್ದು, ಬಿಪಾಶಾಳ ಇಮೇಜ್​​ ಅನ್ನ ಡ್ಯಾಮೇಜ್ ಮಾಡಿತ್ತು.. ಬಾಲಿವುಡ್​ನಲ್ಲಿ ಬಿಪಾಶಾ ಬಗ್ಗೆ ಏನೇನೋ ಮಾತುಗಳು ಹರಿದಾಡೋಕೆ ಶುರುವಾದ್ವು.. ಈ ಹಿಂದಿನ ಪ್ರೇಮ ವೈಫಲ್ಯಗಳು ಮತ್ತು ಅಮರ್​ಸಿಂಗ್​ ಜೊತೆಗಿನ ಡರ್ಟಿ ಮಾತುಗಳ ಟೇಪ್​ ಲೀಕ್ ಪ್ರಕರಣ,  ಈ ಬಿಪಾಶಾಳನ್ನು ಬದುಕೇ ಬೇಡ ಅನ್ನೋ ಮಟ್ಟಕ್ಕೆ ತಂದು ನಿಲ್ಲಿಸಿತ್ತು..

ಒಂದಲ್ಲ ಎರಡಲ್ಲ.. ಸಾಲು ಸಾಲು ಪ್ರೇಮ ಪ್ರಕರಣಗಳ ವೈಫಲ್ಯ ಬಿಪಾಶಾಳ ಬದುಕಲ್ಲಿ ಬಿರುಗಾಳಿ ಎಬ್ಬಿಸಿತ್ತು.. ಜೊತೆಗೆ ಅಮರ್​ಸಿಂಗ್​ ಜೊತೆಗಿನ ಮಾತುಕತೆಗಳ ಡರ್ಟಿ ಟೇಪ್​ ಬಿಪಾಶಾಳನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಆದ್ರೆ ಇಷ್ಟಕ್ಕೆ ವೈರಾಗ್ಯದತ್ತ ಮರಳಿದ್ಳಾ ಬಿಪಾಶಾ..? ಛಾನ್ಸೇ ಇಲ್ಲ.. ಬಿಪಾಶಾ ಹಿಮಾಲಯದ ಆಶ್ರಮ ಸೇರೋದಕ್ಕೆ ಮತ್ತೊಂದು ಕಾರಣ ಇದೆ..
--------------------------------------
ಬಿಪಾಶಾಗೆ ಜಾನ್ ಆಗ್ತಾನೆ ಅನ್ಕೊಂಡಿದ್ದ ಜಾನ್ ಅಬ್ರಹಾಂ ಕೈ ಕೊಟ್ಟಿದ್ದ.. ಹರ್ಮನ್ ಬವೇಜಾ ಕೂಡ ಆಕೆ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದ. ಸಾಲು ಸಾಲು ಪ್ರೇಮ ವೈಫಲ್ಯ ಕಂಡ್ರೂ ಬಿಪಾಶ ಅಷ್ಟೋಂದು ತಲೆ ಕೆಡಿಸಿಕೊಂಡಿರಲಿಲ್ಲ.. ಯಾಕಂದ್ರೆ ಅಲೋನ್ ಆಗಿದ್ದ ಆಕೆ ಬದುಕಿಗೆ ಮತ್ತೊಬ್ಬ ಚೆಲುವ ಎಂಟ್ರಿ ಕೊಟ್ಟಿದ್ದ. ಅವರಿಬ್ಬರ ಸಂಬಂಧ ಚೆನ್ನಾಗೇ ಇತ್ತು.. ಆದ್ರೆ ಪ್ರೇಮಿಗಳ ದಿನ ಪ್ರಿಯತಮನ ಜೊತೆ ಇರಬೇಕಿದ್ದ ಬಿಪಾಶ, ಹಿಮಾಲಯದತ್ತ ಪ್ರಯಾಣ ಬೆಳೆಸಿದ್ಳು..

ಬಿಪಾಶ ಅಂದ್ರೆ, ಆಕೆ ಅಭಿಮಾನಿಗಳ ಹೃದಯ ಈಗ್ಲೂ ಬಿಸಿಯಾಗುತ್ತೆ.. ಯಾಕಂದ್ರೆ ಅಷ್ಟೋಂದು ಹಾಟ್​ ನಟಿ ಈಕೆ. ತನ್ನ ಸಾಂಸಾರಿಕ ಬದುಕು ಹಾಗಿರಬೇಕು, ಹೀಗಿರಬೇಕು ಅಂತ ಬಿಪಾಶ ಅಂದುಕೊಂಡಿದ್ಳು.. ಸಿನಿ ದುನಿಯಾದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ಳು.. ಹೆಸರು ಜನಪ್ರಿಯತೆ ಈಕೆಯನ್ನು ಹುಡುಕಿಕೊಂಡು ಬಂದಿತ್ತು. ಇಂಥಾ ಬೆಡಗಿಗೆ ಮದುವೆಯಾಗೋ ಆಸೆ ಹೆಚ್ಚಾಗೇ ಇತ್ತು. ಈ ಬಗ್ಗೆ ಸ್ವತಃ ಬಿಪಾಶಾನೇ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಳು..

ಯಸ್.. ಸಾಲು ಸಾಲು ಪ್ರೇಮ ಪ್ರಕರಣಗಳು ಫ್ಲಾಪ್ ಆದಾಗ್ಲೂ, ಬಿಪಾಶ ಮದುವೆ ಆಲೋಚನೆಯನ್ನು ಬಿಟ್ಟಿರಲಿಲ್ಲ.. ನಾನು ಮದುವೆ ಆಗೇ ಆಗ್ತೀನಿ.. ಅದಕ್ಕೆ ಎಲ್ಲಾ ತಯಾರಿನೂ ಮಾಡ್ಕೊಂಡಿದ್ದೀನಿ ಅಂತ ಬಿಪಾಶ ಹೇಳಿದ್ಳು.. ಬಿಪಾಶ ಯಅರನ್ನ ಮದುವೆಯಾಗಬಹುದು ಅನ್ನೋದಕ್ಕೆ ಉತ್ತರ ಕೂಡ ಸಿಕ್ಕಿತ್ತು. ಯಾಕಂದ್ರೆ ಅಲೋನ್​ ಆಗಿದ್ದ ಬಿಪಾಶಾಗೆ, ಅಲೋನ್ ಸಿನಿಮಾದ ನಟ ಕರಣ್​ ಸಿಂಗ್​ ಜೋಡಿಗಾಗಿದ್ದ.ಯಸ್​.. ಅಲೋನ್​ ಸಿನಿಮಾದ ಶೂಟಿಂಗ್​ನಲ್ಲಿ ಇವರಿಬ್ಬರ ನಡುವಿನ ಪಿಸುಮಾತುಗಳು, ಇವರಿಬ್ಬರ ನಡುವೆ ಏನೇನೋ ನಡೀತಿದೆ ಅನ್ನೋದನ್ನು ಸಾರಿ ಹೇಳ್ತಿದ್ವು.. ಮೋಸ್ಟ್​​​ಲೀ ಮದುವೆ ಕನಸುಗಳನ್ನು ಕಣ್ಣಲ್ಲಿ ಕಟ್ಟಿಕೊಂಡಿದ್ದ ಬಿಪಾಶಾ, ಈ ಕರಣ್​​ ಸಿಂಗ್​ ಜೊತೆ ಮದುವೆ ಆಗಬಹುದು ಅಂತ ಅಂದುಕೊಂಡಿದ್ರು. ಇವರಿಬ್ಬರ ಓಡಾಟ, ಸುತ್ತಾಟ, ಎಲ್ಲವೂ ಇವರಿಬ್ಬರ ನಡುವಿನ ಪ್ರೇಮ ಪುರಾಣಕ್ಕೆ ಸಾಕ್ಷಿಯಾಗಿದ್ದವು. ಇದೇ ಫೆಬ್ರವರಿ 14ರ ಪ್ರೇಮಿಗಳ ದಿನದವರೆಗೂ ಎಲ್ಲವೂ ಚೆನ್ನಾಗೇ ಇತ್ತು.. ಆದ್ರೆ ಪ್ರೇಮಿಗಳ ದಿನ ಅದೇನಾಯ್ತೋ ಏನೋ..? ಮರುದಿನವೇ ಹಿಮಾಲಯ ಹತ್ತಿ ಬಿಟ್ಟಳು ಈ ಬಿಪಾಶಾ..!

ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಎಲ್ಲಾ ಪ್ರೇಮಿಗಳು ಫುಲ್ ಬ್ಯುಸಿಯಾಗಿರ್ತಾರೆ. ತನ್ನ ಪ್ರೇಮಿಯ ಜೊತೆ ಕಾಲ ಕಳೀಬೇಕು ಅಂತ ಕಾತರದಿಂದ ಕಾಯ್ತಾ ಇರ್ತಾರೆ.. ಇಂಥದ್ರಲ್ಲಿ, ಅದೇ ಪ್ರೇಮಿಗಳ ದಿನದಂದೇ ಈ ಬಿಪಾಶ ಹಿಮಾಲಯ ಏರುವ ನಿರ್ಧಾರ ತೆಗೆದುಕೊಂಡಿದ್ಳು..


ಬಿಪಾಶಾಳಿಂದ ದೂರಾದ್ನಾ ಕರಣ್​ಸಿಂಗ್​..?
ವಿರಹ ತಾಳದೇ ಬಿಪ್ಸ್​ಗೆ ವೈರಾಗ್ಯ ಹುಟ್ಟಿತೇ..?


ಯಸ್.. ಇಂಥದ್ದೊಂದು ಅನುಮಾನ ಈಗ ಹುಟ್ಟಿಕೊಂಡಿದೆ. ಸಾಲು ಸಾಲು ಫ್ಲಾಪ್​ ಲವ್​ ಸ್ಟೋರಿಗಳಿಂದ ಕಂಗೆಟ್ಟಿದ್ದ ಬಿಪಾಶಾಗೆ, ಕರಣ್​ ಸಿಂಗ್​ ಆದ್ರೂ ಆಸರೆಯಾಗ್ತಾನೆ ಅಂತ ಅಂನ್ಕೊಂಡಿದ್ರು.. ಆದ್ರೆ ಕರಣ್​ ಕೂಡ ಕರುಣೆ ಇಲ್ಲದೇ ಬಿಪ್ಸ್​ ಜೊತೆ ಬ್ರೇಕಪ್​ ಮಾಡ್ಕೊಂಡಿದ್ದಾನಂತೆ. ಇದು ಬಿಪಾಶಾಗೆ ಬದುಕಿನ ಬಗ್ಗೆ ವೈರಾಗ್ಯ ಹುಟ್ಟುವಂತೆ ಮಾಡಿದೆ. ಅದ್ರಲ್ಲೂ ಪ್ರೇಮಿಗಳ ದಿನದಂದು ಪ್ರೇಮಿ ಜೊತೆ ಇರಬೇಕಿದ್ದ ಬಿಪಾಶ ಹಿಮಾಲವೇರಿ, ಆಶ್ರಮ ಸೇರುವ ನಿರ್ಧಾರ ಮಾಡಿದ್ಳು..

ಇಷ್ಟುದಿನಗಳ ನೋವನ್ನು ಯೋಗದ ಮೂಲಕ ಮರೀತಾ ಇದ್ಳು ಬಿಪಾಶ.. ಆದ್ರೆ ಸಾಲು ಸಾಲು ನೋವುಗಳನ್ನು ಈ ಬೆಡಗಿಗೆ ಅರಗಿಸಿಕೊಳ್ಳೋಕೆ ಆಗಲೇ ಇಲ್ಲ.. ಹೀಗಾಗಿ ಹಿಮಾಲಯದ ಆನಂದಾಶ್ರಮಕ್ಕೆ ಬಂದಿದ್ದಾಳೆ..

ಶಾಂತಿ, ನೆಮ್ಮದಿಗಾಗಿ ಹಾತೊರೆಯುತ್ತಿದ್ದ ಬಿಪಾಶ, ಆಶ್ರಮದಲ್ಲಿ ಯೋಗದ ಮೊರೆ ಹೋಗಿದ್ದಾಳೆ.. ಹಾಡು ಕುಣಿತದ ಬದಲಿಗೆ, ಜಪತಪಗಳನ್ನು ಮಾಡ್ತಿದ್ದಾರೆ.. ಟೂ ಪೀಸ್​ ಬದಲಿಗೆ, ಬಿಳಿಯ ಬಟ್ಟೆಯನ್ನು ತೊಟ್ಕೊಂಡು, ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕೊಂಡು ಓಂ ಶಾಂತಿ ಅಂತ ಜಪ ಮಾಡ್ತಿದ್ದಾರೆ.

ಅಂದ್ಹಾಗೆ ಹಿಮಾಲಯದಲ್ಲಿರೋ ಈ ಆನಂದಾಶ್ರಮದಲ್ಲಿ 11 ದಿನಗಳ ವಿಶೇಷ ಕಾರ್ಯಕ್ರಮ ಇದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಅಂತ ಬಿಪಾಶ ಇಲ್ಲಿಗೆ ಬಂದಿದ್ದಾಳೆ. 11 ದಿನಗಳ ಕಾರ್ಯಕ್ರಮದ ನಂತರ ಈಕೆ ಇಲ್ಲೇ ಇರ್ತಾಳಾ,..? ಅಥವ ಮತ್ತೆ ಬಾಲಿವುಡ್​ಗೆ ಎಂಟ್ರಿ ಕೊಡ್ತಾಳಾ ಅನ್ನೋದು ನಿಗೂಢವಾಗಿ ಉಳಿದಿದೆ. ಯಾಕಂದ್ರೆ, ಪ್ರಕೃತಿಯ ಮಡಿಲಲ್ಲಿ ನನಗೆ ಶಾಂತಿ ನೆಮ್ಮದಿ ಎಲ್ಲಾ ಸಿಗ್ತಾ ಇದೆ ಅಂತ ಬಿಪಾಶ ಟ್ವೀಟ್ ಮಾಡಿದ್ದಾಳೆ. ಈ ಟ್ವೀಟ್ ನೋಡಿದ್ರೆ, ಬಿಪಾಶ ಹಿಮಾಲಯದಲ್ಲೇ ಇದ್ದು ಬಿಡ್ತಾಳೇನೋ ಅನ್ನೋ ಆತಂಕ, ಆಕೆ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಸದ್ಯಕ್ಕೆ 11 ದಿನಗಳ ಕಾರ್ಯಕ್ರಮಕ್ಕೆ ಅಂತ ಬಿಪಾಶ ಹಿಮಾಲಯದ ಆಶ್ರಮಕ್ಕೆ ಹೋಗಿದ್ದಾಳೆ. ಆದ್ರೆ ಕಾರ್ಯಕ್ರಮಕ್ಕೆ ಹೋದವಳು ಸನ್ಯಾಸತ್ವದ ಬಟ್ಟೆ ತೊಟ್ಕೊಂಡಿರೋದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ರುದ್ರಾಕ್ಷಿ ಮಾಲೆ ಹಾಕೊಂಡು, ಜಪ ಮಾಡ್ತಿರೋ ಬಿಪಾಶಾ, 11 ದಿನಗಳ ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಬಿಟೌನ್​ಗೆ ವಾಪಸ್ ಬರಲಿ ಅನ್ನೋದು, ಅವ್ರ ಅಭಿಮಾನಿಗಳ ಆಶಯ..

ರಾಜ್ ಕುಮಾರ‍್ ಮತ್ತು ವಿಷ್ಣುವರ್ಧನ್ ಹಾವು ಮುಂಗುಸಿಗಳಂತೆ ಆಗಿದ್ದು ಹೇಗೆ..?

ಮೈಸೂರಿನಿಂದ ‘ನಾಗರಹಾವು’ ಚಿತ್ರೀಕರಣ ಚಿತ್ರದುರ್ಗಕ್ಕೆ ಶಿಫ್ಟ್ ಆಯಿತು. ನಾನು, ವಿಷ್ಣು, ಅಂಬರೀಷ್‌ ಅಲ್ಲಿ ಬಹಳ ಹತ್ತಿರವಾದೆವು. ವಿಷ್ಣು ಹಾಗೂ ಪುಟ್ಟಣ್ಣನವರ ನಡುವೆಯೂ ಸೌಹಾರ್ದಯುತ ಸಂಬಂಧ ಏರ್ಪಟ್ಟಿತು. ಇಬ್ಬರೂ ಒಂದೇ ರೂಮ್‌ನಲ್ಲಿ ಮಲಗುವ ಸಂದರ್ಭ ಹಲವು ಬಾರಿ ಒದಗಿಬಂದಿತ್ತು. ಬಹುಶಃ ಅದರಿಂದಲೇ ಆ ನಿರ್ದೇಶಕ, ನಟರ ನಡುವೆ ಸಿನಿಮಾಗೆ ಸಂಬಂಧಿಸಿದಂತೆ ಆರೋಗ್ಯಕರ ಸಂವಾದ ಸಾಧ್ಯವಾದದ್ದು.

ಚಿತ್ರದುರ್ಗದಲ್ಲಿ ಸುಡುಬಿಸಿಲು. ಹಾಗಾಗಿ ಬೆಳಿಗ್ಗೆ 5.30ಕ್ಕೆ ಎದ್ದು ಚಿತ್ರೀಕರಣಕ್ಕೆ ಹೋಗಬೇಕಿತ್ತು. ನಾವೆಲ್ಲರೂ ಪುಟ್ಟಣ್ಣ ಹಾಗೂ ವೀರಾಸ್ವಾಮಿಯವರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದೆವು. ಚಾಚೂತಪ್ಪದೆ ಹೊತ್ತಿಗೆ ಸರಿಯಾಗಿ ಶೂಟಿಂಗ್‌ ಲೊಕೇಷನ್‌ ತಲುಪುತ್ತಿದ್ದೆವು.
 

ಚಿತ್ರದುರ್ಗದಲ್ಲಿ ಚಿತ್ರೀಕರಣ ಮುಗಿದ ನಂತರ ಬೆಂಗಳೂರಿನಲ್ಲಿ ಒಂದಿಷ್ಟು ಭಾಗದ ಶೂಟಿಂಗ್‌ ನಡೆಯಿತು. ಆಮೇಲೆ ಆ ಚಿತ್ರದ ಕೆಲಸ ಮುಗಿಯುತ್ತಿದ್ದಂತೆ ನಾನು ನನ್ನ ತಂದೆಯವರ ಚಿತ್ರದ ಕೆಲಸದಲ್ಲಿ ತೊಡಗಿಕೊಂಡೆ.ಈ ನಡುವೆ ಬೆಂಗಳೂರಿಗೆ ಹೋದಾಗಲೆಲ್ಲಾ ವಿಷ್ಣು ಮನೆಗೆ ಭೇಟಿ ನೀಡುತ್ತಿದ್ದೆ. ಅಲ್ಲಿ ಅವರ ತಾಯಿ, ಅಣ್ಣ ಅಕ್ಕ, ತಂಗಿ ಎಲ್ಲರನ್ನೂ ಮಾತನಾಡಿಸುತ್ತಿದ್ದೆ. ‘ನಾಗರಹಾವು’ ಚಿತ್ರದ ರಶ್‌ ಪ್ರಿಂಟ್‌ ಸಿದ್ಧವಾಯಿತು.
 

ಮದ್ರಾಸಿನ ಖಾಸಗಿ ಚಿತ್ರಮಂದಿರದಲ್ಲಿ ವಿಷ್ಣು ನಾಯಕನಾಗಿದ್ದ ಆ ಚಿತ್ರದ ಮೊದಲ ಪ್ರದರ್ಶನ ಏರ್ಪಾಟಾಯಿತು. ಆವತ್ತು ವೀರಾಸ್ವಾಮಿಯವರು ನನ್ನ ತಂದೆ ಹಾಗೂ ನನ್ನನ್ನು ಕೂಡ ಆಮಂತ್ರಿಸಿದ್ದರು. ಚಿತ್ರದ ರೀರೆಕಾರ್ಡಿಂಗ್‌ ಇನ್ನೂ ಆಗಿರಲಿಲ್ಲ. ಆದರೂ ಮದ್ರಾಸಿನ ನಿರ್ಮಾಪಕರು, ನಿರ್ದೇಶಕರು ಅದಾಗಲೇ ಆ ಚಿತ್ರವನ್ನು ನೋಡಲು ಕುತೂಹಲದಿಂದ ಬಂದಿದ್ದರು. ಎಲ್ಲರೂ ಸಿನಿಮಾ ನೋಡಿ ‘ಅದ್ಭುತ’ ಎಂದವರೇ. ನನ್ನ ತಂದೆಗೆ ಪುಟ್ಟಣ್ಣನವರ ನಿರ್ದೇಶನ, ಕುಮಾರ್‌ ಅಭಿನಯ ಎರಡೂ ಹಿಡಿಸಿತ್ತು.
 

ಅಲ್ಲಿ ಎಲ್ಲರ ಪ್ರತಿಕ್ರಿಯೆಗಳನ್ನು ಗಮನಿಸಿದ್ದ ನಾನು ಆಮೇಲೆ ಬೆಂಗಳೂರಿಗೆ ಹೋದಾಗ, ವಿಷ್ಣುಗೆ ಎಲ್ಲವನ್ನೂ ಬಣ್ಣಿಸಿದೆ. ಅವನಿಗೆ ತುಂಬಾ ಭಯವಿತ್ತು. ಚಿತ್ರ ಬಿಡುಗಡೆಯಾದಾಗಲಂತೂ ಮುಂದೆ ಏನಾಗುವುದೋ ಎಂಬ ಆತಂಕ ಅವನನ್ನು ಕಾಡುತ್ತಿತ್ತು. ರೀರೆಕಾರ್ಡಿಂಗ್‌ ಮುಗಿದು, ಸಿನಿಮಾ ಬಿಡುಗಡೆಯಾಯಿತು.
 

ನಾನು, ಗಂಗಪ್ಪ, ವಿಷ್ಣು ಎಲ್ಲರೂ ರಾಜ್ಯದ ವಿವಿಧ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟೆವು. ವೀರಾಸ್ವಾಮಿಯವರು ನಮಗೆ ಆ ಕೆಲಸವನ್ನು ವಹಿಸಿದ್ದರು. ಎಲ್ಲಿ ಹೋದರೂ ಜನರಿಂದ ಅದ್ಭುತವಾದ ಪ್ರತಿಕ್ರಿಯೆ. ‘ಹಾವಿನ ದ್ವೇಷ’ ಹಾಡಿನ ಸಾಲಿನಲ್ಲಿ ‘ಈ ರಾಮಾಚಾರೀನ್ ಕೆಣಕೋ ಗಂಡು ಇನ್ನೂ ಹುಟ್ಟಿಲ್ಲ’ ಎನ್ನುವ ಸಾಲು ಬಂದಾಕ್ಷಣ ಕೆಲವು ಚಿತ್ರಮಂದಿರಗಳಲ್ಲಿ ಗಲಾಟೆ ಆಗುತ್ತಿತ್ತು. ಆ ಸಾಲನ್ನು ಕೆಲವು ಪ್ರೇಕ್ಷಕರು ತಪ್ಪಾಗಿ ಅರ್ಥೈಸಿಕೊಂಡು, ಗಲಾಟೆ ಮಾಡಿದ್ದುಂಟು. ಆದರೆ ಒಟ್ಟಾರೆ ಸಿನಿಮಾ ನೋಡಿದ ಮೇಲೆ ಅವರೆಲ್ಲಾ ಖುಷಿಯಿಂದ ಮನೆಗೆ ಹೋಗುತ್ತಿದ್ದರು. ಕನ್ನಡ ಜನತೆಗೆ ಸಿನಿಮಾ ಹಿಡಿಸಿತು. ಚಿತ್ರರಂಗದಲ್ಲಿ ‘ವಿಷ್ಣುವರ್ಧನ್‌ ಯುಗ’ ಶುರುವಾದದ್ದು ಹಾಗೆ. 

ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಅಂಬರೀಷ್‌ ಕೂಡ ಜನಮಾನಸದಲ್ಲಿ ಉಳಿದ. ‘ನಾಗರಹಾವು’ ಚಿತ್ರದ ಅವನ ಜಲೀಲ್‌ ಪಾತ್ರ ಹಾಗೂ ‘ಬುಲ್‌ಬುಲ್‌’ ಸಂಭಾಷಣೆಯನ್ನು ಜನ ಈಗಲೂ ಮರೆತಿಲ್ಲ. 
ಕನ್ನಡ ಚಿತ್ರರಂಗದ ಅಭಿನಯ ಕ್ಷೇತ್ರಕ್ಕೆ ರಾಜ್‌ಕುಮಾರ್‌, ಕಲ್ಯಾಣ್‌ಕುಮಾರ್‌, ಉದಯ್‌ಕುಮಾರ್‌ ಭದ್ರವಾದ ಅಡಿಪಾಯ ಹಾಕಿದವರು. ಇವರ ಮಧ್ಯೆ ಅನೇಕ ನಟರು ಬಂದರು. ಶ್ರೀನಾಥ್‌ ಕೂಡ ಒಳ್ಳೆಯ ಸಾಧನೆ ಮಾಡಿದರು. ಆದರೆ ವಿಷ್ಣು ಅವರೆಲ್ಲರನ್ನೂ ಮೀರಿದ ಭರವಸೆಯನ್ನು ಬಹುಬೇಗ ಮೂಡಿಸಿದ. ‘ರಾಮಾಚಾರೀನ್ ಕೆಣಕೋ ಗಂಡು’ ಎಂಬ ಸಾಲಿನಿಂದ ಕೂಡ ವಿಷ್ಣು ಚಿತ್ರರಂಗದಲ್ಲಿ ಮುಂದೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅವನ ಮೇಲೆ ಆಪಾದನೆಗಳ ಸುರಿಮಳೆಯಾಯಿತು. ಅವನು ಜನರೊಂದಿಗೆ ಬೆರೆಯುವುದಿಲ್ಲ, ಅವನಿಗೆ ಬಹಳ ಜಂಭ ಇತ್ಯಾದಿ ಕಪ್ಪು ಚುಕ್ಕೆಗಳನ್ನು ಮೂಡಿಸುವ ಪ್ರಯತ್ನಗಳು ನಡೆದವು.
 

ಇಂಥ ಪರಿಸ್ಥಿತಿಯಲ್ಲಿ ‘ಗಂಧದ ಗುಡಿ’ ಚಿತ್ರದಲ್ಲಿ ರಾಜ್‌ಕುಮಾರ್‌ ಜೊತೆ ಅವನು ನೆಗೆಟಿವ್‌ ಪಾತ್ರದಲ್ಲಿ ಅಭಿನಯಿಸಿದ. ಅದರಿಂದ ಅವನು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಕ್ಲೈಮ್ಯಾಕ್ಸ್‌ ಚಿತ್ರೀಕರಣದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಜವಾದ ಗುಂಡುಗಳನ್ನು ತುಂಬಿದ ಡಬಲ್‌ ಬ್ಯಾರಲ್‌ ಗನ್‌ ವಿಷ್ಣುವರ್ಧನ್‌ ಕೈಲಿತ್ತು. ಅದೃಷ್ಟವಶಾತ್‌ ಅದನ್ನು ಅವನು ಫೈರ್‌ ಮಾಡಲಿಲ್ಲ. 


ಇನ್ನು ಸಿನೆಮಾ ಕ್ಲೈಮ್ಯಾಕ್ಸ್ ನಲ್ಲಿ ವಿಷ್ಣುವಿನ ಕೈಗೆ ತಾಕಿದ ಗುಂಡು ನಿಜವಾದದ್ದು ಎಂಬ ಮಾತಿದೆ. ರಾಜ್ ಕುಮಾರ‍್ ವಿಷ್ಣುಗೆ ನಿಜವಾದ ಗನ್ ನಿಂದ ಫೈರ‍್ ಮಾಡಿದರು ಅಂತ ಸುದ್ದಿ ಇದೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ಯಾಕೆಂದರೆ, ವಿಷ್ಣು ಮತ್ತು ರಾಜ್ ಕುಮಾರ‍್ ಬಗ್ಗೆ ಜನರು ಇಲ್ಲಸಲ್ಲದ ಗುಲ್ಲೆಬ್ಬಿಸಿದರು.
 

ಕೆಲವರು ಕಥೆಗಳನ್ನು ಕಟ್ಟಿ, ವಿಷ್ಣುವನ್ನು ನಿಜವಾದ ವಿಲನ್‌ ಎಂಬಂತೆ ದೂಷಿಸಿದರು. ರಾಜ್‌ಕುಮಾರ್‌, ವಿಷ್ಣು ಸಂಬಂಧ ಒಂದು ರೀತಿಯಲ್ಲಿ ಭಾರತ–ಪಾಕಿಸ್ತಾನ ನಡುವಿನ ಸಂಬಂಧ ಎಂಬಂತೆ ಆಯಿತು. ನಮ್ಮ ಚಿತ್ರರಂಗದವರು ಮೊದಲಿನಿಂದಲೂ ತಮಾಷೆ ನೋಡುವುದರಲ್ಲಿ ನಿಸ್ಸೀಮರು. ‘ಮಗುವನ್ನು ಚಿವುಟುವುದು, ಆಮೇಲೆ ತೊಟ್ಟಿಲನ್ನು ತೂಗುವುದು’ ಅನೇಕರಿಗೆ ಅಭ್ಯಾಸ. ಆ ಗುಲ್ಲೆದ್ದ ಸಂದರ್ಭದಲ್ಲಿ ಯಾರಾದರೂ ಒಬ್ಬರು ಜವಾಬ್ದಾರಿಯಿಂದ ಒಂದೇ ಒಂದು ಪತ್ರಿಕಾ ಹೇಳಿಕೆ ನೀಡಿದ್ದರೂ ಅದು ಸುಳ್ಳು, ಕಟ್ಟುಕತೆ ಎನ್ನುವುದು ಸ್ಪಷ್ಟವಾಗುತ್ತಿತ್ತು.
 

ಆದರೆ ಯಾರೂ ಆ ಧೈರ್ಯ ಮಾಡಲಿಲ್ಲ. ವಿಷ್ಣು ಆಗಿನ್ನೂ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ಅಂಥ ಸಂದರ್ಭದಲ್ಲಿ ನೆಗೆಟಿವ್‌ ಪಾತ್ರ ನಿರ್ವಹಿಸುವ ಅವನ ನಿರ್ಣಯವೇ ತಪ್ಪಾಗಿತ್ತು. ವೀರಾಸ್ವಾಮಿ ಹಾಗೂ ಚಿ.ಉದಯಶಂಕರ್‌ ಸೃಷ್ಟಿಸಿದ ಆ ಪಾತ್ರವನ್ನು ವಿಷ್ಣು ಒಪ್ಪಿಕೊಂಡಿದ್ದೂ ಋಣಸಂದಾಯದ ದೃಷ್ಟಿಯಿಂದಲೇ. ವೀರಾಸ್ವಾಮಿಯವರ ಮಾತಿಗೆ ಕಟ್ಟುಬಿದ್ದು ಅವನು ಆ ಪಾತ್ರವನ್ನು ಒಪ್ಪಿಕೊಂಡಿದ್ದು. ಆ ಪಾತ್ರ ಮಾಡಿದ ಮೇಲೆ ಜೀವನಪರ್ಯಂತ ಒಂದು ವರ್ಗದ ಜನರ ದ್ವೇಷ ಕಟ್ಟಿಕೊಳ್ಳುವಂತೆ ಆಗಿದ್ದು ಮಾತ್ರ ದುರಂತ. ‘ಈ ರಾಮಾಚಾರೀನ್‌ ಕೆಣಕೋ ಗಂಡು’ ಎಂಬ ಸಾಲು ಜೀವನವಿಡೀ ಅವನನ್ನು ಕಾಡುತ್ತಲೇ ಇತ್ತು.
***
ಕಾಲಕ್ರಮೇಣ ನಾನು ಚಿತ್ರರಂಗದ ಪಟ್ಟುಗಳನ್ನು ಕಲಿಯುವುದರಲ್ಲೇ ನಿರತನಾದೆ. ಕಾಲೇಜಿಗೆ ತಿಲಾಂಜಲಿ ಇಟ್ಟೆ. ಕರೆಸ್ಪಾಂಡೆನ್ಸ್‌ನಲ್ಲಿ ಬಿ.ಎ. ಮಾಡೋಣ ಎಂದುಕೊಂಡರೆ ಅದೂ ಆಗಲಿಲ್ಲ. ವಿಷ್ಣು, ಅಂಬಿ ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದರು. ಅವರ ಶೂಟಿಂಗ್‌ ನೋಡುವುದೇ ನನ್ನ ಕಾಯಕ. ಅಂಬಿ, ನಾನು ನನ್ನ ಮೋಟಾರ್‌ ಬೈಕ್‌ನಲ್ಲೇ ಹೆಚ್ಚಾಗಿ ಸುತ್ತುತ್ತಿದ್ದೆವು.
 

ನನ್ನ ತಂದೆ ‘ಶೃಂಗೇರಿ ಮಹಾತ್ಮೆ’ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಾ ಇದ್ದರು. ಆ ಚಿತ್ರದ ಶಂಕರಾಚಾರ್ಯರ ಪಾತ್ರವನ್ನು ಮಾಡಬೇಕೆನ್ನುವುದು ವಿಷ್ಣು ಬಯಕೆ. ಹೇಗಾದರೂ ಮಾಡಿ ನನ್ನ ತಂದೆಯನ್ನು ಒಪ್ಪಿಸುವಂತೆ ದುಂಬಾಲುಬಿದ್ದ. ನನ್ನ ತಂದೆಯನ್ನು ಚಿತ್ರರಂಗದಲ್ಲಿ ಎಲ್ಲರೂ ‘ದಾದಾ’ ಎಂದು ಕರೆಯುತ್ತಿದ್ದರು. ಅವನೂ ಹಾಗೆಯೇ ಕರೆಯುತ್ತಿದ್ದ. ಶಂಕರಾಚಾರ್ಯರ ಪಾತ್ರವನ್ನು ಯಾವುದೇ ಸಂಭಾವನೆ ಇಲ್ಲದೆ ನಿರ್ವಹಿಸಲು ಅವನು ಸಿದ್ಧನಿದ್ದ. ನನ್ನ ತಂದೆ ಸ್ಟಾರ್‌ ವ್ಯವಸ್ಥೆಯ ವಿರೋಧಿ. ಸಮಯ ಸಂದರ್ಭ ನೋಡಿ ನಾನು ವಿನಂತಿಸಿಕೊಂಡರೂ ಅದು ಫಲ ನೀಡಲಿಲ್ಲ. ಅವರು ಹೊಸಬರನ್ನು ಹಾಕಿಕೊಂಡು ‘ಶೃಂಗೇರಿ ಮಹಾತ್ಮೆ’ ಸಿನಿಮಾ ಮುಗಿಸಿದರು.

 ಲೇಖಕರು
ಎಸ್.ವಿ. ರಾಜೇಂದ್ರ ಸಿಂಗ್ ಬಾಬು 
ಉಲ್ಲೇಖ: ಮುಖಪುಟದ ಮಾಹಿತಿ

ಹುಡುಗಿ ವೇಷದಲ್ಲಿ ದೆಹಲಿ ಸುತ್ತಾಡಿದ ನಟ ಅಮೀರ್‌ ಖಾನ್‌.


ದೆಹಲಿ : ಅಯ್ಯಯ್ಯೋ.. ನಿಮಗಿದು ಗೊತ್ತಾ? ಬಾಲೀವುಡ್‌ನ ಖ್ಯಾತ ನಟ ಅಮೀರ್‌ ಖಾನ್‌ ಅವರು ತುಟಿಗೆ ಲಿಪ್‌ಸ್ಟಿಕ್‌ ಹಚ್ಚಿಕೊಂಡು, ಹುಡುಗಿಯರ ಗಾಗ್ರಾ ಉಟ್ಟುಕೊಂಡು ದೆಹಲಿಯಲ್ಲಿ ಸುತ್ತಾಡಿದ್ದರಂತೆ.

ಅಯ್ಯಯ್ಯೋ.. ನಟ ಅಮೀರ್‌ ಖಾನ್‌ಗೆ ಏನಾಗಿದೆ? ಅವರು ಯಾಕೆ ಹೀಗಾಡ್ತಿದ್ದಾರೆ? ಹೆಣ್ಣಿನ ಉಡುಪು ಧರಿಸುವ ಚಟ ಅಮೀರ್‌ ಖಾನ್‌ಗೆ ಯಾಕೆ ಬಂತು? ಎಂದು ಶಾಕ್‌ ಆಗಬೇಡಿ.

ಧೂಮ್‌ 3 ಚಿತ್ರದ ನಂತರ ಅಮೀರ್‌ ಖಾನ್‌ ಮತ್ತೆ ಫುಲ್‌ ಬಿಸಿಯಾಗಿದ್ದಾರೆ. ರಾಜ್‌ ಕುಮಾರ್‌ ಹಿರಾನಿಯವರ ಪಿಕೆ ಸಿನೆಮಾದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ. ಈ ಚಿತ್ರದಲ್ಲಿ ನಟಿ ತನ್ನ ಲಿಪ್‌ಸ್ಟಿಕ್‌, ಗಾಗ್ರಾ ಮತ್ತು ಹೆಲ್ಮೆಟ್‌ ಅನ್ನು ಯಾವುದೋ ಸನ್ನಿವೇಷದಲ್ಲಿ ಬಿಟ್ಟು ಹೋಗಿರುತ್ತಾರೆ. ಅದನ್ನು ನಟ ಅಮೀರ್‌ ಖಾನ್‌ ಅವರು ತೆಗೆದುಕೊಳ್ಳುತ್ತಾರೆ. ನಾಯಕ ನಟಿಯನ್ನು ಹುಡುಕುವ ಸನ್ನಿವೇಶವೊಂದರಲ್ಲಿ ಅಮೀರ್‌ ಖಾನ್‌ ನಾಯಕಿಯ ಲಿಪ್‌ಸ್ಟಿಕ್‌ ಹಚ್ಚಿಕೊಂಡು, ಆಕೆಯ ಗಾಗ್ರಾ ತೊಟ್ಟುಕೊಂಡು ಆಕೆಗಾಗಿ ದೆಹಲಿ ತುಂಬ ಹುಡುಕುತ್ತಿರುತ್ತಾರೆ.

ಅಮೀರ್‌ ಖಾನ್‌ ಅಭಿನಯದ ಈ PK ಚಿತ್ರದಲ್ಲಿ  ತೆಲುಗಿನ ಖ್ಯಾತ ನಟಿ ಕನ್ನಡದ ಬಾಲೆ ಅನುಷ್ಕ ಶರ್ಮಾ ಅಭಿನಯಿಸುತ್ತಿದ್ದಾರೆ.

ಎಲ್ಲರನ್ನೂ ನಗಿಸಿದ ಧೀರೇಂದ್ರ ಗೋಪಾಲ್‌ ಸಾಯುವ ಮುನ್ನ ಅತ್ತುಬಿಟ್ಟರು
ನಿಮಗೆ ಕನ್ನಡ ಸಿನೆಮಾದಲ್ಲಿ ನಟಿಸಿದ ಹೆಚ್. ಎನ್. ಗೋಪಾಲರಾವ್ ಅವರು ಗೊತ್ತಾ? ಹೀಗೆ ಕೇಳಿದ್ರೆ ಯಾರಿಂದಲೂ ಉತ್ತರ ಸಿಗುವುದೇ ಇಲ್ಲ.. ಇದೇ ಪ್ರೆಶ್ನೆಯನ್ನು ಸ್ವಲ್ಪ ತಿರುಚಿ ಕೇಳಿ ನೋಡಿ.. ಆಗ ಬರುವ ಉತ್ತರವೇ ವಿಭಿನ್ನ

ನಿಮಗೆ ಶಿವನೇ ಶಂಭುಲಿಂಗಾ..! ಅನ್ನೋ ಡೈಲಾಗ್ ಗೊತ್ತಾ? ಅಂತ ಯಾರಾದ್ರೂ ಕನ್ನಡಿಗರಿಗೆ ಕೇಳಿ. ಅವರು ಹೇಳುವುದು ಒಂದೇ.. ಯಾರಿಗ್ರೀ ಗೊತ್ತಿಲ್ಲ? ನಮ್ ಧೀರೇಂದ್ರ ಗೋಪಾಲ್‌ ಅವರದ್ದು ಕಣ್ರೀ.. ಅಂತ..

ಹೌದು.. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಶಿವನೇ ಶಂಭುಲಿಂಗ ಅನ್ನೋ ಡೈಲಾಗ್ ಒಂದೇ ಸಾಕು ಮಹೋನ್ನತ ಮಾತಿನ ಮಾಣಿಕ್ಯ, ಹಾಸ್ಯ ಸಾರ್ವಭೌಮ ಧೀರೇಂದ್ರ ಗೋಪಾಲ್ ಅವರ ಪರಿಚಯ ಹೇಳೋದಕ್ಕೆ. ಎಂತಹ ಖಳನಾಯಕನ ಪಾತ್ರವನ್ನು ಕೊಟ್ಟರೂ ಅದರೊಳಗೆ ಹಾಸ್ಯದ ಜೇನು ಬೆರೆಸಿ ಆ ಪಾತ್ರಕ್ಕೆ ಮತ್ತಷ್ಟು ಮೆರುಗು ತಂದುಕೊಡಬಲ್ಲ ಶಕ್ತಿ ಹೊಂದಿದ ಹಾಸ್ಯ ದೊರೆ ಅವರು.

ಧೀರೇಂದ್ರ ಗೋಪಾಲ್ ಹೆಚ್ಚು ಕಾಣಿಸಿಕೊಂಡಿದ್ದು ಖಳನಾಯಕನ ಪಾತ್ರಗಳು. ಆದರೆ ಅವರ ಪಾತ್ರಗಳಲ್ಲಿ ಅದ್ಭುತ ಸಂಭಾಷಣಾ ಚತುರತೆ ಇತ್ತು. ಹೀಗಾಗಿಯೇ ಅಂದಿನ ಕಾಲದಲ್ಲಿ ಧೀರೇಂದ್ರ ಗೋಪಾಲ್‌ ಅವರ ಕಾಲ್‌ಶೀಟ್‌ಗಾಗಿ ಕಾದು ಕುಳಿತಿರುತ್ತಿದ್ದರು ಸಿನೆಮಾ ನಿರ್ಮಾಪಕರು.

ಧೀರೇಂದ್ರ ಗೋಪಾಲರು ಹುಟ್ಟಿದ್ದು ಏಪ್ರಿಲ್ 12, 1940 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದ ಜೋಡಿಗುಬ್ಬಿ ಎಂಬ ಗ್ರಾಮದಲ್ಲಿ ಜನಿಸಿದ ಧೀರೇಂದ್ರ ಗೋಪಾಲ್ ಅವರ ಮೊದಲಿನ ಹೆಸರು ಹೆಚ್. ಎನ್. ಗೋಪಾಲರಾವ್.

ಆರಂಭದಿಂದಲೂ ರಂಗಭೂಮಿಯತ್ತ ತಮ್ಮ ಚಿತ್ತವನ್ನು ಕೇಂದ್ರೀಕರಿಸಿಕೊಂಡು ಬೆಳೆದ ಧೀರೇಂದ್ರ ಗೋಪಾಲ್‌ ಅವರ ಬದುಕಿಗೆ ತಿರುವು ಸಿಕ್ಕಿದ್ದು ಶಾಲೆಯಲ್ಲಿ. ಒಮ್ಮೆ ಅವರ ಶಾಲೆಯಲ್ಲಿ ಸಮಾರಂಭವೊಂದನ್ನು ಏರ್ಪಡಿಸಿದ್ದರು. ಅಲ್ಲಿಗೆ ಗುಬ್ಬಿ ವೀರಣ್ಣನವರೂ ಆಗಮಿಸಿದ್ದರು. ಆಗ ಧೀರೇಂದ್ರ ಗೋಪಾಲ್‌ ಅವರ ಏಕಪಾತ್ರಾಭಿನಯವನ್ನು ಕಂಡು ಮೆಚ್ಚಿಕೊಂಡರು. ಧೀರೇಂದ್ರ ಗೋಪಾಲರಲ್ಲಿ ಅದ್ಭುತ ಕಲಾವಿದನನ್ನು ಕಂಡರು ಗುಬ್ಬಿ ವೀರಣ್ಣನವರು.

ನಂತರ ಅವರಿಗೆ ತಮ್ಮ ನಾಟಕ ತಂಡವನ್ನು ಸೇರಲು ಆಹ್ವಾನ ನೀಡಿದರು.
ಆರಂಭದಲ್ಲಿ 'ವಾಲಿ' ಪಾತ್ರದ ಮೂಲಕ ರಂಗಭೂಮಿಗೆ ಪದಾರ್ಪಣೆ ಮಾಡಿದ ಧೀರೇಂದ್ರ ಗೋಪಾಲರು, ದೇವೇಂದ್ರ, ದುರ್ಯೋಧನನ ಪಾತ್ರದಿಂದ ಹೆಚ್ಚು ಪ್ರಸಿದ್ಧಿಯನ್ನು ಪಡೆದರು. 'ಸರ್ವಮಂಗಳ ನಾಟಕ ಸಭಾ'ದ ಟಿಪ್ಪು ಸುಲ್ತಾನ್,  'ಮುದುಕನ ಮದುವೆ' ಧೀರೇಂದ್ರ ಗೋಪಾಲರ ಪ್ರಸಿದ್ಧ ನಾಟಕಗಳು.

ಒಮ್ಮೆ ನಿರ್ದೇಶಕ ಸಿ. ವಿ. ಶಿವಶಂಕರ್ ಅವರು ಚಿಕ್ಕದೊಂದು ಪಾತ್ರವೊಂದನ್ನು ಮಾಡುವಂತೆ ಧೀರೇಂದ್ರ ಗೋಪಾಲರಿಗೆ ಆಹ್ವಾನಿಸಿದರು. ಪಾತ್ರ ಚಿಕ್ಕದಾದರೂ ಅದಕ್ಕೆ ಜೀವ ತುಂಬುವ ಕುಶಲತೆ ಅವರಿಗಿತ್ತು. ಹೀಗಾಗಿಯೇ ಚಿಕ್ಕ ಪಾತ್ರದ ಅದ್ಭುತ ನಟನೆಯಿಂದಾಗಿ ಮುಂದೆ ಪುಟ್ಟಣ್ಣ ಕಣಗಾಲರ ನಾಗರಹಾವುಚಿತ್ರದಲ್ಲಿ ಕಾಣಿಸಿಕೊಂಡರು.

ಪಡುವಾರಳ್ಳಿ ಪಾಂಡವರುಚಿತ್ರದಲ್ಲಿನ ಅವರ ಹಳ್ಳಿಯ ಗೌಡನ ಪಾತ್ರವನ್ನಂತೂ ಯಾರೂ ಮರೆಯಲು ಸಾಧ್ಯವೇ ಇಲ್ಲ. ಈ ಚಿತ್ರದ ಧೀರೇಂದ್ರ ಗೋಪಾಲ್ ಮತ್ತು ಮುಸುರಿ ಕೃಷ್ಣಮೂರ್ತಿ ಜೋಡಿ ಮಾಡಿದ ಮೋಡಿ, ಖಳ ಪಾತ್ರ ನಿರ್ವಹಣೆಗಳಿಗೊಂದು ಹೊಸ ಭಾಷ್ಯವನ್ನೇ ಬರೆದುಬಿಟ್ಟಿತು.

ಕಷ್ಟವನ್ನು ಕಣ್ಣೆದುರು ಕಂಡರೆ ಅದಕ್ಕೆ ಸ್ಪಂದಿಸುತ್ತಿದ್ದ ಕರುಣಾಮಯಿಯಾಗಿದ್ದರು ಧೀರೇಂದ್ರ ಗೋಪಾಲ್‌. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ.

ಧೀರೇಂದ್ರ ಗೋಪಾಲರು ಮೂಲತಃ ರಂಗಭೂಮಿಯಿಂದ ಬೆಳೆದವರು. ಆದರೆ ನಂತರದ ದಿನಗಳಲ್ಲಿ ರಂಗಭೂಮಿಗಳು ನಷ್ಟಕ್ಕೆ ತುತ್ತಾದವು. ಅಂತಹ ಸಂದರ್ಭದಲ್ಲಿಯೂ ಕೂಡ ಧೀರೇಂಧ್ರ ಗೋಪಾಲ್‌ ಅವರಿಗೆ ಬೇಡಿಕೆ ಕಡಿಮೆಯಾಗಿರಲಿಲ್ಲ. ಅವರು ಯಾವುದೇ ನಾಟಕದಲ್ಲಿ ಅಭಿನಯಿಸಿದರೂ, ಸಂಜೆ ಮನೆಗೆ ಬರುವಾಗ ಅವರ ಸಂಪಾದನೆಯ ಬಹಳಷ್ಟು ಭಾಗವನ್ನು ನಷ್ಟಕ್ಕೊಳಗಾದ ರಂಗಭೂಮಿ ಮಾಲೀಕನಿಗೆ ನೀಡುತ್ತಿದ್ದರು. ಹೀಗೆ ದಾನ ಮಾಡುತ್ತ ಬಂದವರು ಸ್ವತಃ ತಾವೇ ಉಪವಾಸದ ದಿನಗಳನ್ನು ಕಳೆದಿದ್ದಾರೆ ಎಂಬುದು ನಿಜಕ್ಕೂ ದುರಂತವೇ ಸರಿ.


ಲಾಭಕ್ಕಾಗಿ ಧೀರೇಂದ್ರ ಗೋಪಾಲರ ಹಿಂದೆ ಬಿದ್ದ ಸಿನೆಮಾ ಮಂದಿ ನಂತರದ ದಿನಗಳಲ್ಲಿ ಇವರತ್ತ ತಲೆ ಕೂಡ ಹಾಕಿ ನೋಡಲಿಲ್ಲ ಎಂಬುದು ಅವರ ಪತ್ನಿಯ ದುಗುಡ. ಧೀರೇಂದ್ರ ಗೋಪಾಲ್‌ ಸಾವಿಗೀಡಾದಾಗ ನೋಡಲು ಬಂದವರು ಕೇವಲ ದೊಡ್ಡಣ್ಣ ಮತ್ತಿಬ್ಬರು ಮಂದಿ ಮಾತ್ರ.

ಕೊನೆಯ ದಿನಗಳಲ್ಲಿ ಧೀರೇಂದ್ರ ಗೋಪಾಲರಿಗೆ ಕಾಡಿದ್ದು ಸಾಲದ ಶೂಲಗಳು. ಬಂದಿದ್ದನ್ನೆಲ್ಲಾ ದಾನ ಮಾಡುತ್ತಿದ್ದ ಧೀರೇಂದ್ರ ಗೋಪಾಲರಿಗೆ ನಂತರದ ದಿನಗಳಲ್ಲಿ ಯಾರೂ ಕೂಡ ಸೂಕ್ತವಾಗಿ ಸಹಾಯ ಮಾಡಲಿಲ್ಲ. ಇವರ ಅಭೂತ ಪೂರ್ವ ಅಭಿನಯಕ್ಕಾಗಿ, ಸಿನೆಮಾ ಸಾಧನೆಗಾಗಿ 1998 ರಲ್ಲಿ ರಾಜ್ಯ ಪ್ರಶಸ್ತಿ ಕೂಡ ಲಭಿಸಿತು. ಆದ್ರೆ ರಾಜ್ಯ ಪ್ರಶಸ್ತಿ ದೊರೆತವರಿಗೆ ಸರ್ಕಾರದ ವತಿಯಿಂದ ಸೈಟ್ ಸಿಗುತ್ತದೆ. ಧೀರೇಂದ್ರ ಗೋಪಾಲರ ವಿಷಯದಲ್ಲಿ ಸರ್ಕಾರ ಕೂಡ ದಿವ್ಯ ನಿರ್ಲಕ್ಷ ತೋರಿತ್ತು. ಯಾಕಂದ್ರೆ ಸರ್ಕಾರದ ಸೈಟ್‌ ಧೀರೇಂದ್ರ ಗೋಪಾಲ್ ಅವರಿಗೆ ಸಿಗಲಿಲ್ಲ. ಧೀರೇಂದ್ರ ಗೋಪಾಲರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಕೂಡ ಲಭಿಸಿತು. ಆದ್ರೆ ಅದರಿಂದ ಧೀರೆಂದ್ರ ಗೋಪಾಲ್‌ ಅವರ ಬದುಕಿಗೆ ಯಾವುದೇ ರೀತಿಯ ಆಧಾರ ಕೂಡ ಸಿಗಲಿಲ್ಲ. 

2000 ರಲ್ಲಿ ಎಸ್. ನಾರಾಯಣ್ ನಿರ್ದೇಶನದ 'ಅಂಜಲಿ ಗೀತಾಂಜಲಿ' ಸಿನೆಮಾದಲ್ಲಿ ಧೀರೇಂದ್ರ ಗೋಪಾಲರು ನಟಿಸುತ್ತಿದ್ದರು. ಅವರಿಗೆ ಅನಾರೋಗ್ಯವಿದ್ದರೂ ಸಿನೆಮಾ ಕೆಲಸವನ್ನು ಮಾತ್ರ ಎಂದಿಗೂ ನಿಲ್ಲಿಸಲಿಲ್ಲ. ಬಹುಶಃ ಧೀರೇಂದ್ರ ಗೋಪಾಲರ ಅಭಿನಯ ಚಾತುರ್ಯತೆ ಆ ದೇವರಿಗೂ ಇಷ್ಟವಾಯಿತು ಎನಿಸುತ್ತದೆ. ನಮ್ಮನ್ನು ರಂಜಿಸು ಬಾ ಎಂದು ಕರೆದುಕೊಂಡು ಬಿಟ್ಟ ಆ ಭಗವಂತ. ಡಿಸೆಂಬರ್ 25, 2000 ದಂದು ಹೃದಯಾಘಾತದಿಂದಾಗಿ ಧೀರೇಂದ್ರ ಗೋಪಾಲರು ಬದುಕಿಗೆ ವಿದಾಯ ಹೇಳಿದರು.

ಧೀರೇಂದ್ರ ಗೋಪಾಲ್‌ ಅವರ ಬದುಕಿನ ಕೊನೆಯ ದಿನಗಳು ನರಕಕ್ಕೆ ಸಮನಾಗಿದ್ದಂತೆ ಭಾಸವಾಗಿದ್ದು ಮಾತ್ರ ಸುಳ್ಳಲ್ಲ. ಬದುಕಿನ ನೋವುಗಳನ್ನು ಮರೆಯುವ ಸಲುವಾಗಿ ಧೀರೇಂದ್ರ ಗೋಪಾಲ್ ಅವರು ಕುಡಿತದ ಮೊರೆ ಹೋದರು.. ಸದಾ ಕಾಲ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯ ಸಾರ್ವಭೌಮ ಕೊನೆಯ ದಿನಗಳಲ್ಲಿ ಬದುಕಿನ ನೋವುಗಳನ್ನು ತಾಳಲಾರದೇ ಕಣ್ಣೀರು ಹಾಕಿಬಿಟ್ಟರು.

ಓ ಬದುಕೇ... ನೀನೆಷ್ಟು ಕ್ರೂರಿ..?
ನಗಿಸಿ ಅಳಿಸುವೆ ಏಕೆ ಯಾಮಾರಿ??

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು