Recent Movies

ಸಿನೆಮಾ

Share This Article To your Friends

Showing posts with label ವಿಸ್ಮಯಗಳು. Show all posts
Showing posts with label ವಿಸ್ಮಯಗಳು. Show all posts

ಈ ತೀರ್ಪು ನೀಡಿದ ಅರ್ಧ ಗಂಟೆಯಲ್ಲೇ ಸುಪ್ರೀಂ ಕೋರ್ಟ್ ವೆಬ್ಸೈಟ್ ಹ್ಯಾಕ್!


ದೇಶದ ಅತ್ಯುನ್ನತ ಕೋರ್ಟ್ ಎನಿಸಿಕೊಂಡಿರುವ ಸುಪ್ರಿಂ ಕೊರ್ಟ್ ದಿನಕ್ಕೆ ಎಷ್ಟೋ ಕಲಾಪಗಳನ್ನ ಬಗೆಹರಿಸುತ್ತಾನೆ ಇರುತ್ತೆ, ಅದೆಷ್ಟೊ ತೀರ್ಪುಗಳನ್ನ ಕೊಡ್ತಾನೆ ಇರುತ್ತೆ. ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟ್ ನೀಡುವ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತೆ.  ಎಲ್ಲಾ ತೀರ್ಪುಗಳನ್ನ ನೀಡುವ ಹಾಗೆ ಸುಪ್ರೀಂ ಕೋರ್ಟ್ ತೀರ್ಪನ್ನ ನೀಡಿತ್ತು ಅದಾದ ಅರ್ಧ ಗಂಟೆಯಲ್ಲೇ ಸುಪ್ರೀಂ ಕೋರ್ಟ್ ವೆಬ್ಸೈಟ್ ಹ್ಯಾಕ್ ಮಾಡಲಾಗಿದೆ ಅಷ್ಟಕ್ಕೂ ತೀರ್ಪು ಏನು ಗೊತ್ತಾ?

ತಿಮ್ಮಪ್ಪನನ್ನು ವರಿಸಿದಳಾ ಮುಸ್ಲಿಂ ಯುವತಿ..?ತಿರುಪತಿಯ ಬಾಲಾಜಿ ವಿವಾಹ ಯಾರ್ ಜೊತೆ ಆಯ್ತು..? ಈ ಪ್ರಶ್ನೆಗೆ ಯಾರನ್ನು ಕೇಳಿದ್ರೂ, ಶ್ರೀ ಲಕ್ಷ್ಮಿ ಜೊತೆ ಆಯ್ತು ಎಲ್ರೂ ಹೇಳ್ತಾರೆ.. ಆದ್ರೆ ಈಗ ಹೊಸ ಅಂಶವೊಂದು ಬೆಳಕಿಗೆ ಬಂದಿದೆ. ತಿರುಪತಿ ತಿಮ್ಮಪ್ಪ ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ರಂತೆ..? ಇದು ನಿಜಾನಾ..? ಅಷ್ಟಕ್ಕೂ ಆ ಯುವತಿಯಾದ್ರೂ ಯಾರು..? ಈ ಸ್ಟೋರಿ ನೋಡಿ ನಿಮ್ಗೇ ಗೊತ್ತಾಗುತ್ತೆ..

ಓಂ ಶ್ರೀ ವೆಂಕಟೇಶ್ವರಾಯ ನಮಃ... ಗೋವಿಂದಾಯ ನಮಃ.. ಇದು ಕೋಟ್ಯಾಂತರ ಭಕ್ತರ ಎದೆಯೊಳಗಿಂದ ಉಕ್ಕಿ ಹರಿಯುವ ಪದಗಳು.. ಕೇಳಿದ್ದನ್ನು ಕರುಣಿಸೋ ಕರುಣಾಮಯಿಯ ದರ್ಶನಕ್ಕೆ ದೇಶ ವಿದೇಶಗಳಿಂದಲೂ ಭಕ್ತರು ಬರ್ತಾರೆ. ಬ್ಯುಸಿ ಶೆಡ್ಯೂಲ್ ನಡುವೆಯೂ ತಿರುಪತಿಗೆ ಬಂದು, ತಿಮ್ಮಪ್ಪನಿಗೆ ನಮಿಸಿ ಹೋಗ್ತಾರೆ.

ತಿಮ್ಮಪ್ಪ ಅಂದ್ರೆ ಸಾಕು.. ಜಗತ್ತಿನ ಜನರಿಗೆ ಥಟ್ ಅಂತ ನೆನಪಾಗೋದು, ಹಿಂದೂ ಧರ್ಮ.. ಯಾಕಂದ್ರೆ, ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು, ಶ್ರೀ ವೆಂಕಟೇಶ್ವರ ಎಂಬ ಹೆಸರಿನಲ್ಲಿ ತಿರುಪತಿಯಲ್ಲಿ ನೆಲೆಸಿದ್ದಾನೆ. ಹೀಗಾಗಿ ತಿರುಪತಿ ಅಂದ್ರೆ, ಹಿಂದೂಗಳ ಪವಿತ್ರ ಕ್ಷೇತ್ರ ಅನ್ನೋದ್ರಲ್ಲಿ ಎರಡು ಮಾತಿಲ್ಲ..


ಆದ್ರೆ ಈ ಪವಿತ್ರ ತಾಣದಲ್ಲಿ ಜಾತಿ ಧರ್ಮದ ಭೇಧವಿಲ್ಲ.. ಶುದ್ಧ ಮನಸ್ಸಿನಿಂದ, ಭಕ್ತಿ ಭಾವದಿಂದ ನಮಿಸಿದ್ರೆ ಸಾಕು, ಎಲ್ಲರಿಗೂ ಒಲಿದು ಬಿಡ್ತಾನೆ ಈ ತಿಮ್ಮಪ್ಪ. ಅದಕ್ಕಾಗೇ, ಇಲ್ಲಿ ಎಲ್ಲಾ ಧರ್ಮದವರು, ಎಲ್ಲಾ ಜಾತಿಯವರು ಬರ್ತಾರೆ. ತಿಮ್ಮಪ್ಪನ ಪಾದಕ್ಕೆ ಬಿದ್ದು ಆಶೀರ್ವಾದ ಪಡೀತಾರೆ.

ಆದ್ರೆ ಪುರಾಣ ಪುಣ್ಯಗಳ ಪ್ರಕಾರ, ಶ್ರೀ ವೆಂಕಟೇಶ್ವರ ಹಿಂದೂ ದೇವರು.. ಆತ ಮದುವೆಯಾಗಿರೋದು ಪದ್ಮಾವತಿ ಮತ್ತು ಲಕ್ಷ್ಮಿಯನ್ನು.. ಪುರಾಣಗಳಲ್ಲಿ ಉಲ್ಲೇಖವಿರುವಂತೆ, ಪದ್ಮಾವತಿ ಮತ್ತು ಲಕ್ಷ್ಮಿ ಎರಡೂ, ಲಕ್ಷ್ಮಿಯ ಅವತಾರಗಳೇ.. ಲಕ್ಷ್ಮಿ ಕೂಡ ಹಿಂದೂಗಳ ಆರಾಧ್ಯ ದೇವತೆ ಅನ್ನೋದು ಎಲ್ಲರಿಗೂ ಗೊತ್ತಿದೆ.

ಆದ್ರೆ ವಿಷ್ಯ ಇದಲ್ಲ.. ಹೊಸ ಸುದ್ದಿಯೊಂದು ಈಗ ಎಲ್ಲೆಡೆ ಗದ್ದಲ ಸೃಷ್ಟಿಸುತ್ತಿದೆ. ತಿರುಪತಿ ಗಿರಿವಾಸ, ಶ್ರೀ ಶ್ರೀನಿವಾಸ ಮುಸ್ಲಿಂ ಯುವತಿಯನ್ನು ವರಿಸಿದ್ದಾರಂತೆ.. ಮುಸ್ಲಿಂ ಯುವತಿಯೋರ್ವಳು ಶ್ರೀ ವೆಂಕಟೇಶ್ವರನನ್ನು ಮದುವೆಯಾಗಿದ್ದಾಳಂತೆ..!

ಇದನ್ನ ಕೇಳಿದ ತಕ್ಷಣ ನಿಮಗೆ ಶಾಕ್ ಆಗಬಹುದು.. ಆದ್ರೆ ಹೀಗಂತ ಒಂದು ಸುದ್ದಿ ಈಗ ಸದ್ದು ಮಾಡ್ತಿದೆ. ಆ ಮೂಲಕ, ಶ್ರೀನಿವಾಸನ ಮದುವೆ ವಿಚಾರ, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಂಡ ಮುಸ್ಲಿಂ ಯುವತಿಯೋರ್ವಳು, ಶತಮಾನಗಳ ಹಿಂದೆಯೇ ಶ್ರೀ ವೆಂಕಟೇಶ್ವರನನ್ನು ವರಿಸಿದ್ದಾಳಂತೆ.

ಈ ವಿಷ್ಯ ಹೊರ ಬೀಳ್ತಿದ್ದಂತೆ, ತಿಮ್ಮಪ್ಪನ ಭಕ್ತರು ಒಂದು ಕ್ಷಣ ಶಾಕ್​ಗೆ ಒಳಗಾಗಿದ್ದಂತೂ ಸತ್ಯ. ಇದು ನಿಜಾನಾ,..? ಅಥವ ಇದೊಂದು ಕೇವಲ ಗಾಳಿ ಸುದ್ದೀನ ಅನ್ನೋ ಅನುಮಾನ ಕೂಡ ಎಲ್ಲರಲ್ಲೂ ಮನೆ ಮಾಡಿತ್ತು.. ಆದ್ರೆ, ಅದೆಲ್ಲದಕ್ಕಿಂತ ಮಿಗಿಲಾಗಿ, ಶ್ರೀನಿವಾಸನ ಕಲ್ಯಾಣದ ಹಿಂದೆ ಒಂದು ದೊಡ್ಡ ರಹಸ್ಯ ಅಡಗಿದೆ ಅನ್ನೋದು ಖಾತ್ರಿಯಾಗಿತ್ತು..

ಯಸ್​.. ಒಂದು ಮೂಲದ ಮಾಹಿತಿ ಪ್ರಕಾರ, ಶ್ರೀ ವೆಂಕಟೇಶ್ವರನನ್ನು ಬಿಬಿ ನಂಚಾರಿ ಅನ್ನೋ ಮುಸ್ಲಿಂ ಯುವತಿ ವರಿಸಿದ್ದಾಳೆ ಅಂತ ಹೇಳಲಾಗುತ್ತಿದೆ. ಯಾವಾಗ ಎಲ್ಲಿ ಈ ಮದುವೆ ನಡೀತು ಅನ್ನೋಕ್ಕೂ ಒಂದು ಕಥೆ ಹುಟ್ಟಿಕೊಂಡಿದೆ. ಸುಮಾರು 450 ವರ್ಷಗಳ ಹಿಂದೆ ಶ್ರೀ ವೆಂಕಟೇಶ್ವರನ ಮದುವೆ ನಡೆದಿತ್ತಂತೆ. ಪೂಜೆಗೆಂದು ಬಂದಿದ್ದ ಬಿಬಿ ನಂಚಾರಿ, ಏಳು ಬೆಟ್ಟದ ಒಡೆಯನನ್ನ ಒಲಿಸಿಕೊಂಡು, ವಿವಾಹವಾಗಿದ್ದಾರಂತೆ.

ಇದು ನಂಬೋದಕ್ಕೆ ಆಗದೇ ಇರುವಂಥ ವಿಷ್ಯ.. ಆದ್ರೆ ಕೆಲವೊಂದು ಮೂಲಗಳನ್ನು ಕೆದಕುತ್ತಾ ಹೋದಾಗ, ಈ ಎಲ್ಲಾ ವಿಷಯಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತೆ. ಪದ್ಮಾವತಿ ಮತ್ತು ಲಕ್ಷ್ಮಿ ಮಾತ್ರವಲ್ಲ, ಬಿಬಿ ನಂಚಾರಿ ಅನ್ನೋ ಯುವತಿ, ಶ್ರೀ ವೆಂಕಟೇಶ್ವರನನ್ನ ವರಿಸಿದ್ದಾಳಂತೆ..

ಅಷ್ಟಕ್ಕೂ ಈ ಬಿಬಿ ನಂಚಾರಿ ಯಾರು..? ಆಕೆ ತಿರುಪತಿ ತಿಮ್ಮಪ್ಪನನ್ನು ಯಾವಾಗ ಮದುವೆಯಾಗಿದ್ಳು..? -------------------------------------------------------------------
ಬಿಬಿ ನಂಚಾರಿ.. ಆಕೆ ಒಂದು ರಾಜಮನೆತನಕ್ಕೆ ಸೇರಿದವಳು.. ಆಕೆಯ ಧರ್ಮ ಇಸ್ಲಾಂ ಆಗಿತ್ತು.. ವೆಂಕಟೇಶ್ವರನ ರೂಪಕ್ಕೆ ಮರುಳಾಗಿ, ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಂಡು, ವಿವಾಹ ಕೂಡ ಆಗಿದ್ರಂತೆ..!

ಬಿಬಿ ನಂಚಾರಿ ಶ್ರೀ ವೆಂಕಟೇಶ್ವರನನ್ನು ಆಕೆ ಮದುವೆಯಾಗಿದ್ದು ನಿಜಾನಾ..? ಅಷ್ಟಕ್ಕೂ ಬಿಬಿ ನಂಚಾರಿ ಯಾರು..? ಈ ಪ್ರಶ್ನೆಗಳಿಗೆ ಉತ್ತರ ಹುಡುಕೋಕೆ ಹೊರಟ್ರೆ, ದೆಹಲಿಯನ್ನಾಳಿದ ಸುಲ್ತಾನರ ಇತಿಹಾಸ ತೆರೆದುಕೊಳ್ಳುತ್ತೆ..

ಯಸ್​.. ಶ್ರೀ ವೆಂಕಟೇಶ್ವರನನ್ನು ಮದುವೆಯಾಗಿದ್ದಾಳೆ ಅಂತ ಹೇಳಲಾಗ್ತಿರೋ ಬಿಬಿ ನಂಚಾರಿ, ದೆಹಲಿ ಸುಲ್ತಾನರ ಮನೆತನಕ್ಕೆ ಸೇರಿದವಳು ಅಂತ ಹೇಳಲಾಗ್ತಿದೆ.

ಅದು ಸುಮಾರು 700 ವರ್ಷಗಳ ಹಿಂದಿನ ಇತಿಹಾಸ.. ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಶುರುವಾಗಿತ್ತು.. ದಿನೇ ದಿನೇ ಪ್ರಾಬಲ್ಯ ಗಳಿಸ್ತಿದ್ದ ದೆಹಲಿಯ ಸುಲ್ತಾನರ ಸಾಮ್ರಾಜ್ಯ, ನಿಧಾನವಾಗಿ ದಕ್ಷಿಣ ಭಾರತದತ್ತ ವಿಸ್ತರಿಸಿತ್ತು. ಯುದ್ಧ ಪ್ರಿಯರಾದ ಸುಲ್ತಾನರು, ಹೈದರಾಬಾದ್ ಮೇಲೂ ತಮ್ಮ ಹಿಡಿತ ಸಾಧಿಸಿದ್ರು.. ಸಾಮ್ರಾಜ್ಯ ವಿಸ್ತರಣೆಯ ನೆಪದಲ್ಲಿ ದೆಹಲಿ ಸುಲ್ತಾನರು ಈ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೂ ಲಗ್ಗೆ ಇಟ್ಟರು..ದೆಹಲಿ ಸುಲ್ತಾನರು ಸುಮಾರು 450 ವರ್ಷಗಳ ಹಿಂದೆ, ಆಂಧ್ರ ಪ್ರದೇಶದ ಮೇಲೆ ದಾಳಿ ಇಟ್ಟರು. ಅಲ್ಲಿ ‘ದೂದೆಕುಲು’ ಅನ್ನೋ ಸಮುದಾಯದವರು ವಾಸ ಮಾಡ್ತಿದ್ರು.. ಬುಡಕಟ್ಟು ಜನಾಂಗಕ್ಕೆ ಸೇರಿದ ಇವ್ರು, ತಿಮ್ಮಪ್ಪನ ಆರಾಧಕರಾಗಿದ್ದರು.. ಆದ್ರೆ ದೆಹಲಿ ಸುಲ್ತಾನರು ಅದ್ಯಾವುದನ್ನೂ ಪರಿಗಣಿಸದೇ, ಇವ್ರ ಬುಡಕಟ್ಟು ಜನರ ಮೇಲೆ ದಾಳಿ ಇಟ್ರು.. ಸುಲ್ತಾನರು ಝಳಪಿಸಿದ ಕತ್ತಿಗೆ, ಬುಡಕಟ್ಟು ಜನರ ನೆತ್ತರು ಹರಿಯತೊಡಗಿತು. ಇದ್ರಿಂದ ಕುಪಿತಗೊಂಡ ವೆಂಕಟೇಶ್ವರ ದೆಹಲಿ ಸುಲ್ತಾನರಿಗೆ ಶಾಪ ಕೊಟ್ನಂತೆ..

ಇದಾದ ನಂತರ ದೆಹಲಿ ಸುಲ್ತಾನರ ಮನೆತನಕ್ಕೆ ಸೇರಿದ ಬಿಬಿ ನಂಚಾರಿ, ಒಮ್ಮೆ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬಂದ್ರಂತೆ. ಆಗ ವೆಂಕಟೇಶ್ವರನ ರೂಪ ಲಾವಣ್ಯಕ್ಕೆ ಮನಸೋತುಬಿಟ್ರಂತೆ..!

ಹಿಂದೂ ಧರ್ಮದ ಸಂಪ್ರದಾಯದಂತೆ, ತನ್ನ ಆಚಾರ ವಿಚಾರಗಳನ್ನು ಬದಲಿಸಿಕೊಂಡು, ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಳ್ಳಲು ಅಣಿಯಾದಳಂತೆ..!

ವೆಂಕಟೇಶ್ವರನಿಗೆ ಮನಸೋತ ಬಿಬಿ ನಂಚಾರಿ, ಹಗಲಿರುಳು ಬಾಲಾಜಿಯನ್ನು ಒಲಿಸಿಕೊಳ್ಳೋಕೆ ಜಪತಪಗಳನ್ನ ಮಾಡಿದ್ರಂತೆ.. ನಂಚಾರಿಯ ಭಕ್ತಿಗೆ ಒಲಿದ ಬಾಲಾಜಿ, ನಂಚಾರಿಯ ತಂದೆ ಮತ್ತು ದೆಹಲಿಯ ಸುಲ್ತಾನನ ಕನಸಲ್ಲಿ ಬಂದು, ನಿನ್ನ ಮಗಳನ್ನು ನನಗೆ ಕೊಟ್ಟು ಕಲ್ಯಾಣ ಮಾಡು. ನಿನ್ನ ಎಲ್ಲಾ ಶಾಪಗಳು ಮುಕ್ತವಾಗುತ್ತವೆ ಅಂತ ಹೇಳಿದ್ನಂತೆ...

ಬಾಲಾಜಿ ಕನಸಲ್ಲಿ ಬಂದು ಹೇಳಿದ್ದೇ ತಡ, ದೆಹಲಿಯ ಸುಲ್ತಾನ ತನ್ನ ಮಗಳನ್ನು ವೆಂಕಟೇಶ್ವರನ ಜೊತೆ ಮದುವೆ ಮಾಡಲು ನಿರ್ಧರಿಸಿದ್ರಂತೆ. ಶ್ರೀ ವೆಂಕಟೇಶ್ವರನ ರೂಪ ಮತ್ತು ಲಾವಣ್ಯಕ್ಕೆ ಮರುಳಾಗಿದ್ದ ಬಿಬಿ ನಂಚಾರಿ ಕೂಡ, ಶ್ರೀನಿವಾಸನ ಜೊತೆ ಕಲ್ಯಾಣಕ್ಕೆ ಒಪ್ಪಿಕೊಂಡ್ರಂತೆ. ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಂಡ ಬಿಬಿ ನಂಚಾರಿ, ಸುಮಾರು 450 ವರ್ಷಗಳ ಹಿಂದೆ ಶ್ರೀ ವೆಂಕಟೇಶ್ವರನನ್ನು ವಿವಾಹವಾದ್ರಂತೆ. ಮುಸ್ಲಿಂ ಧರ್ಮೀಯರಾಗಿದ್ರೂ, ಹಿಂದೂ ದೇವರ ಜೊತೆ ನಂಚಾರಿಯ ಕಲ್ಯಾಣವಾಯ್ತಂತೆ..!

ಇನ್ನು ವೆಂಕಟೇಶ್ವರನನ್ನು ವಿವಾಹವಾದ ಮುಸ್ಲಿಂ ಯುವತಿ ಬಿಬಿ ನಂಚಾರಿಯ ಬಗ್ಗೆ ಒಂದು ಪುಸ್ತಕ ಕೂಡ  ಬಂದಿದೆ. ‘ಬಿಬಿ ನಂಚಾರಿ ಪ್ರಬಂಧಂ’ ಅನ್ನೋ ತೆಲುಗು ಪುಸ್ತಕದಲ್ಲಿ ಬಿಬಿ ನಂಚಾರಿಯ ಬದುಕು ಮತ್ತು ಶ್ರೀನಿವಾಸನ ಜೊತೆಗಿನ ಕಲ್ಯಾಣದ ಬಗೆಗಿನ ಕಥೆ ಇದೆ ಅಂತ ಹೇಳಲಾಗ್ತಿದೆ. ಸಿವಿ ಸುಬ್ಬಣ್ಣ ಅನ್ನೋರು ಈ ಪುಸ್ತಕವನ್ನು ಬರೆದಿದ್ದು, ತಿರುಪತಿ ತಿರುಮಲ ಟ್ರಸ್ಟ್​​ ವತಿಯಿಂದ ಈ ಪುಸ್ತಕ ಬಿಡುಗಡೆ ಮಾಡಲಾಗಿದೆ.

ಅಷ್ಟೇ ಅಲ್ಲ, ತಿರುಪತಿ ಸಮೀಪದಲ್ಲೇ ಬಿಬಿ ನಂಚಾರಿಯಮ್ಮನ ದೇವಾಲಯವನ್ನೂ ಕಟ್ಟಲಾಗಿದೆ. ಆ ಮೂಲಕ, ಬಿಬಿ ನಂಚಾರಿಯಮ್ಮನನ್ನು ತಿಮ್ಮಪ್ಪನ ಪತ್ನಿ ಅಂತ ಸ್ವೀಕರಿಸಲಾಗಿದೆ ಎಂದು ಹೇಳಲಾಗ್ತಿದೆ

ಸಿವಿ ಸುಬ್ಬಣ್ಣ ಬರೆದಿರೋ ಪುಸ್ತಕದಲ್ಲಿ ಬಿಬಿ ನಂಚಾರಿ ಬಗ್ಗೆ ಉಲ್ಲೇಖ ಇದೆ. ಮುಸ್ಲಿಂ ರಾಜಮನೆತನದ ಯುವತಿಯನ್ನ ಶ್ರೀ ವೆಂಕಟೇಶ್ವರನೇ ವರಿಸಿದ್ದ ಅಂತ ಆ ಪುಸ್ತಕದಲ್ಲಿ ಹೇಳಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ನಿಜಾ..? -------------------------------------------------
ಬಿಬಿ ನಂಚಾರಿಯನ್ನು ತಿರುಪತಿ ತಿಮ್ಮಪ್ಪ ಮದುವೆ ಆಗಿದ್ದಾನೆ ಅನ್ನೋ ಮಾತನ್ನೂ ಯಾರಿಂದಲೂ ನಂಬೋಕೆ ಆಗ್ತಿಲ್ಲ.. ಇದು ಕೇವಲ ಅವರಿವರು ಹೇಳೋ ಕಥೆ ಅಂತ ಹೇಳಲಾಗ್ತಿದೆ. ಯಾಕಂದ್ರೆ, ತಿಮ್ಮಪನ ಇತಿಹಾಸಕ್ಕೂ, ಬಿಬಿ ನಂಚಾರಿಯ ಇತಿಹಾಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಿದ್ರೆ, ಈ ಕಥೆ ಹುಟ್ಟಿಕೊಂಡಿದ್ಯಾಕೆ..? ಬಿಬಿ ನಂಚಾರಿ ತಿಮ್ಮಪ್ಪನನ್ನು ಮದುವೆಯಾಗಿಲ್ವಾ..? ಈ ರಿಪೋರ್ಟ್​ ನೋಡಿ.. ನಿಮ್ಗೇ ಗೊತ್ತಾಗುತ್ತೆ..

ಶ್ರೀನಿವಾಸನ ಕಲ್ಯಾಣದ ವಿಚಾರ ಒಂದು ನಿಗೂಢತೆಯಿಂದ ಕೂಡಿದೆ. ಆ ನಿಗೂಢತೆಯ ಜೊತೆಗೆ ಒಂದಷ್ಟು ಕಾಲ್ಪನಿಕ ಕಥೆಗಳು ಸೇರಿಕೊಂಡಿವೆ. ಹೀಗಾಗಿ ಬಿಬಿ ನಂಚಾರಿಯನ್ನು ಶ್ರೀನಿವಾಸ ವಿವಾಹವಾಗಿದ್ದಾನೆ ಅನ್ನೋ ಕಥೆಗಳು ಹುಟ್ಟಿಕೊಂಡಿವೆ. ಆದ್ರೆ ಬಿಬಿ ನಂಚಾರಿ ಮತ್ತು ಶ್ರೀನಿವಾಸನನಿಗೂ ಮದುವೆಯಾಗಿಲ್ಲ.. ಅಸಲಿಗೆ ಶ್ರೀನಿವಾಸನ ಜೊತೆ ಬಿಬಿ ನಂಚಾರಿಯ ಮದುವೆ ಆಗಿದೆ ಅನ್ನೋ ಮಾತೇ ಸುಳ್ಳು..!


ಯಸ್​.. ಬಿಬಿ ನಂಚಾರಿ ಮುಸ್ಲಿಂ ಧರ್ಮೀಯಳಾಗಿದ್ದಳು ಅನ್ನೋದು ಸತ್ಯ.. ದೆಹಲಿ ಸುಲ್ತಾನರ ರಾಜಮನೆತನಕ್ಕೆ ಸೇರಿದ್ದಳು ಅನ್ನೋದು ಕೂಡ ಅಷ್ಟೇ ಸತ್ಯ.. ಆದ್ರೆ ಶ್ರೀನಿವಾಸನ ಜೊತೆ ಮದುವೆಯಾಗಿದ್ದಾಳೆ ಅನ್ನೋ ಮಾತು ಮಾತ್ರ ಸತ್ಯವಲ್ಲ..

ಕ್ರಿ.ಪೂ 500ರಲ್ಲಿ ತಿರುಪತಿಯಲ್ಲಿ ನೆಲೆ ನಿಂತ ತಿಮ್ಮಪ್ಪ
ಬಿಬಿ ನಂಚಾರಿ ಇತಿಹಾಸ ಕೇವಲ 450 ವರ್ಷಗಳದ್ದು

ಯಸ್.. ಇತಿಹಾಸದ ಪುಟ ಕೆದಕಿ ನೋಡಿದ್ರೆ, ಕಾಲಮಾನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಈ ತಿರುಪತಿಯಲ್ಲಿ ತಿಮ್ಮಪ್ಪ ನೆಲೆ ನಿಂತು ಅದೆಷ್ಟೋ ಸಾವಿರ ವರ್ಷಗಳಾಗಿವೆ. ಚೋಳರ ಕಾಲದ್ದು ಎನ್ನಲಾಗಿರೋ ತಿಮ್ಮಪ್ಪನ ದೇಗುಲವನ್ನು, ಕ್ರಿ.ಪೂರ್ವ 500 ರಲ್ಲಿ ನಿರ್ಮಾಣ ಮಾಡಲಾಗಿದೆ ಅಂತ ಇತಿಹಾಸ ಹೇಳುತ್ತೆ. ಅಂದ್ರೆ, ಸುಮಾರು 2 ಸಾವಿರದ 515 ವರ್ಷಗಳ ಹಿಂದೆ ತಿರುಪತಿ ತಿಮ್ಮಪ್ಪನ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಆದ್ರೆ ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆ ಶುರುವಾಗಿದ್ದೇ, ಕ್ರಿ.ಶ 12 ನೇ ಶತಮಾನದಲ್ಲಿ..

ಕ್ರಿ.ಶ 1206 ರಲ್ಲಿ ಕುತ್ಬುದ್ದೀನ್ ಐಬಕ್​​ ಸ್ಥಾಪಿಸಿದ ಗುಲಾಮಿ ಸಂತತಿಯಿಂದ, ಭಾರತದಲ್ಲಿ ಮುಸ್ಲೀಮರ ಆಳ್ವಿಕೆ ಶುರುವಾಗಿತ್ತು.. ಅಂದ್ರೆ ಶ್ರೀ ವೆಂಕಟೇಶ್ವರ ತಿರುಪತಿಯಲ್ಲಿ ನೆಲೆ ನಿಂತಾದ ಸುಮಾರು 1700 ವರ್ಷಗಳ ನಂತರ ಭಾರತದಲ್ಲಿ ಮುಸ್ಲಿಂ ಆಳ್ವಿಕೆ ಶುರುವಾಯ್ತು. ಹೀಗಿರುವಾಗ, ಶ್ರೀ ವೆಂಕಟೇಶ್ವರ ಮುಸ್ಲಿಂ ಯುವತಿಯನ್ನು ವರಿಸೋದಾದ್ರೂ ಹೇಗೆ ಸಾಧ್ಯ..?


ಇನ್ನೂ ಬಿಬಿ ನಂಚಾರಿಗೆ ಕೇವಲ 450 ವರ್ಷಗಳ ಇತಿಹಾಸವಿದೆ. ಅಂದ್ರೆ ಬಿಬಿ ನಂಚಾರಿ ಬದುಕಿದ್ದ ಕಾಲಮಾನ ಸುಮಾರು 14-15ನೇ ಶತಮಾನ.. ತಿಮ್ಮಪ್ಪ ತಿರುಮಲದಲ್ಲಿ ನೆಲೆ ನಿಂತು, ಸುಮಾರು 2 ಸಾವಿರ ವರ್ಷಗಳ  ನಂತರ ಬಿಬಿ ನಂಚಾರಿಯ ಬದುಕು ಪ್ರಾರಂಭವಾಗುತ್ತೆ. ಹೀಗಿರುವಾಗ 2 ಸಾವಿರ ವರ್ಷಗಳ ಅಂತರವಿರುವ ಬಾಲಾಜಿಯನ್ನು, ಬಿಬಿ ನಂಚಾರಿ ಒಲಿಸಿಕೊಂಡು ವಿವಾಹವಾಗಿದ್ದಾಳೆ ಅಂದ್ರೆ, ಇದ್ರಲ್ಲಿ ಎಷ್ಟು ಸತ್ಯ ಇದೆ ಅಂತ ನೀವೇ ಊಹೆ ಮಾಡ್ಕೊಳ್ಳಿ..

ಅಸಲಿಗೆ ಬಿಬಿ ನಂಚಾರಿ ಮತ್ತು ಶ್ರೀನಿವಾಸನ ನಡುವಿನ ಕಥೆಯನ್ನೇ ಇಲ್ಲಿ ತಿರುಚಲಾಗಿದೆ. ಆ ಮೂಲಕ, ತಿಮ್ಮಪ್ಪನ ಮುಸ್ಲಿಂ ಪತ್ನಿ ಎಂದು ಬಿಬಿ ನಂಚಾರಿಯನ್ನು ಕರೆಯಲಾಗ್ತಿದೆ. ಇದು ಸತ್ಯವಲ್ಲ.. ಯಾಕಂದ್ರೆ, ಬಿಬಿ ನಂಚಾರಿ ಶ್ರೀನಿವಾಸನನ್ನು ಮದುವೆಯಾಗಿಲ್ಲ.. ಆಕೆ ಕೇವಲ ಶ್ರೀನಿವಾಸನ ಪರಮ ಭಕ್ತೆ..!

ಸುಮಾರು 450 ವರ್ಷಗಳಿಗೂ ಹಿಂದೆ, ದೆಹಲಿ ಸುಲ್ತಾನರು ತಮ್ಮ ಸಾಮ್ರಾಜ್ಯವನ್ನು ಆಂಧ್ರದವರೆಗೆ ವಿಸ್ತರಿಸ್ತಾರೆ. ಈ ವೇಳೆ ಸುಲ್ತಾನರ ಮನೆತನಕ್ಕೆ ಸೇರಿದ ಬಿಬಿ ನಂಚಾರಿ, ಕೂಡ ಆಂಧ್ರಕ್ಕೆ ಕಾಲಿಡ್ತಾಳೆ.. ಈ ವೇಳೆ ಏಳು ಬೆಟ್ಟದಲ್ಲಿ ನೆಲೆಸಿರೋ ತಿಮ್ಮಪ್ಪನ ಸನ್ನಿಧಾನಕ್ಕೂ ಬರ್ತಾಳೆ. ಅಲ್ಲಿ ತಿಮ್ಮಪ್ಪನ ರೂಪ ಮತ್ತು ಲಾವಣ್ಯವನ್ನು ನೋಡಿ ಮಾರು ಹೋಗ್ತಾಳೆ. ಅದ್ರ ಜೊತೆಗೆ ತಿಮ್ಮಪ್ಪನ ದರ್ಶನದಿಂದಾಗಿ ದೆಹಲಿ ಸುಲ್ತಾನರ ಕೆಲವು ಸಮಸ್ಯೆಗಳು ಕೂಡ ನಿವಾರಣೆಯಾಗ್ತವೆ. ಇದು ಬಿಬಿ ನಂಚಾರಿಗೆ ತಿಮ್ಮಪ್ಪನ ಮೇಲಿರೋ ಭಕ್ತಿಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತೆ..

ಮುಸ್ಲಿಂ ಧರ್ಮೀಯಳಾಗಿದ್ದರೂ, ಹಿಂದೂ ಸಂಪ್ರದಾಯದಂತೆ, ತಿಮ್ಮಪ್ಪನನ್ನು ವಿಧಿಬದ್ಧವಾಗಿ ಪೂಜಿಸ್ತಾಳೆ.. ಆರಾಧಿಸ್ತಾಳೆ. ವೆಂಕಟೇಶ್ವರನ ಸೇವೆಗೆ ನಿಂತ ಬಿಬಿ ನಂಚಾರಿ, ಮದುವೆಯ ಆಸೆಯನ್ನೇ ಬಿಟ್ಟು ಬಿಡ್ತಾಳೆ.. ತನು ಮನದಲ್ಲಿ ಶ್ರೀ ವೆಂಕಟೇಶ್ವರನನ್ನೇ ತುಂಬಿಕೊಳ್ತಾಳೆ.

ಬಾಲಾಜಿಯ ಪರಮ ಭಕ್ತೆಯಾಗಿದ್ದ ಬಿಬಿ ನಂಚಾರಿ, ‘ವೆಂಕಟೇಶ್ವರನೇ ನನ್ನ ಪತಿ.. ವೆಂಕಟೇಶ್ವರನೇ ನನ್ನ ದೈವ.. ವೆಂಕಟೇಶ್ವರನೇ ನನ್ನ ಸರ್ವಸ್ವ ಎಂದು, ಬದುಕಿನ ಕಣ ಕಣದಲ್ಲೂ ವೆಂಕಟೇಶ್ವರನನ್ನೇ ಸ್ಮರಿಸ್ತಾಳೆ’. ಆ ಮೂಲಕ, ತಿರುಪತಿ ತಿಮ್ಮಪ್ಪನ ಸೇವೆಯಲ್ಲಿಯೇ ತನ್ನ ಜೀವನವನ್ನು ಕಳೀತಾಳೆ. ಆದ್ರೆ ಭಕ್ತೆಯ ಭಾವನೆಗಳನ್ನು ಇತಿಹಾಸದ ಪುಟಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಲಾಗ್ತಿದೆ. ತಿಮ್ಮಪ್ಪನ ಭಕ್ತೆಯನ್ನು, ತಿಮ್ಮಪ್ಪನ ಪತ್ನಿ ಎನ್ನುವ ಮೂಲಕ, ಮುಸ್ಲಿಂ ಯುವತಿ ಬಿಬಿ ನಂಚಾರಿಯನ್ನು ಶ್ರೀನಿವಾಸ ಕಲ್ಯಾಣವಾಗಿದ್ದಾನೆ ಅಂತ ಹೇಳಲಾಗಿದೆ.

ಒಟ್ಟಾರೆ, ಬಿಬಿ ನಂಚಾರಿ ಮತ್ತು ವೆಂಕಟೇಶ್ವರನ ಕಲ್ಯಾಣದ ಕಥೆ ಒಂದು ಕಟ್ಟು ಕಥೆ ಅಂತ ಹೇಳಲಾಗ್ತಿದೆ. ನಂಚಾರಿ ಕೇವಲ ವೆಂಕಟೇಶ್ವರನ ಭಕ್ತೆ ಮಾತ್ರ.

ನೋಡಿದ್ರಲ್ಲಾ..? ಸತ್ಯಾಸತ್ಯತೆ ಏನು ಅಂತ.. ದೆಹಲಿ ಸುಲ್ತಾನರ ಮನೆತನಕ್ಕೆ ಸೇರಿದ ಮುಸ್ಲಿಂ ಮಹಿಳೆ ಬಿಬಿ ನಂಚಾರಿ, ಶ್ರೀನಿವಾಸನ ಪರಮ ಭಕ್ತೆ ಅಷ್ಟೇ.. ಆದ್ರೆ, ಕಾಲಾನಂತರದಲ್ಲಿ, ಸಂಹನದ ತೊಡಕಿನಿಂದಾಗಿ, ಭಕ್ತೆಯನ್ನು ಪತ್ನಿ ಅಂತ ತಪ್ಪಾಗಿ ಅರ್ಥೈಸಲಾಗ್ತಿದೆ.

ಕಲಿಯುಗದಲ್ಲೂ ಪ್ರತ್ಯಕ್ಷನಾಗ್ತಿದ್ದಾನೆ ತಿಮ್ಮಪ್ಪ..!
ಕಲಿಯುಗದಲ್ಲೂ ಪ್ರತ್ಯಕ್ಷನಾಗ್ತಿದ್ದಾನೆ ತಿಮ್ಮಪ್ಪ..!
ಮಾತುಬಾರದ ಹುಡುಗ ಮಾತನಾಡಿದ್ದು ಹೇಗೆ..?
ರಾತ್ರಿ ಹೊತ್ತಲ್ಲಿ ತಿರುಮಲಕ್ಕೆ ಬರ್ತಾನಂತೆ ಬಾಲಾಜಿ..!
---------------------------------------------
------------------------------------
ತಿರುಪತಿ ತಿಮ್ಮಪ್ಪನ ಲೀಲೆ ಅಗಾಧ.. ಬೇಡಿದ ಭಕ್ತರ ಕಷ್ಟಗಳನ್ನು ಈಡೇರಿಸೋದಕ್ಕೆ, ಕಲಿಯುಗದಲ್ಲೂ ತಿಮ್ಮಪ್ಪ ಪ್ರತ್ಯಕ್ಷನಾಗ್ತಿದ್ದಾನಂತೆ.. ತಿರುಮಲಕ್ಕೆ ಬರೋ ಎಲ್ಲಾ ಭಕ್ತರನ್ನೂ ಹರಸ್ತಿದ್ದಾನೆಂತೆ.. ಇದಕ್ಕೆ ಪುಷ್ಠಿ ನೀಡುವಂತ ಹಲವು ವಿಸ್ಮಯಗಳು ತಿರುಪತಿಯಲ್ಲಿ ನಡೀತಿವೆ.

ಏಳು ಬೆಟ್ಟದ ಒಡೆಯ.. ತಿರುಪತಿ ಗಿರಿವಾಸ.. ಶ್ರೀ ವೆಂಕಟೇಶ.. ದೇವನೊಬ್ಬ ನಾಮ ಹಲವು ಅನ್ನೋ ಹಾಗೆ, ತಿರುಪತಿ ತಿಮ್ಮಪ್ಪನಿಗೆ ಇರೋ ಹೆಸರುಗಳೂ ಅಪಾರ.. ವೆಂಕಟೇಶ, ತಿಮ್ಮಪ್ಪ, ಬಾಲಾಜಿ, ಅಂತ ಹತ್ತಾರು ಹೆಸ್ರುಗಳಿದ್ರೂ, ಭಕ್ತರು ಕರೆಯೋದು ಮಾತ್ರ ಗೋವಿಂದ ಅಂತಲೇ..

ಗೋವಿಂದ ಗೋವಿಂದ ಅಂತ ಭಕ್ತರು ಕರೆದ್ರೆ ಸಾಕು.. ಈ ಕಲಿಯುಗದಲ್ಲೂ ತಿಮ್ಮಪ್ಪ ಪ್ರತ್ಯಕ್ಷನಾಗ್ತಾನಂತೆ.. ಬೇಡಿದ ಭಕ್ತರ ಕಷ್ಟಗಳನ್ನು ಆಲಿಸ್ತಾನಂತೆ.. ಆ ಕಷ್ಟಗಳಿಂದ ತನ್ನ ಭಕ್ತರನ್ನು ದೂರ ಮಾಡ್ತಾನಂತೆ.. ಅದಕ್ಕಾಗಿಯೇ ತಿರುಪತಿಗೆ ಬರೋ ಭಕ್ತರ ಸಂಖ್ಯೆ, ದಿನೇ ದಿನೇ ಹೆಚ್ಚಾಗ್ತಿದ್ಯಂತೆ..

ತಿರುಪತಿಯಲ್ಲಿ ತಿಮ್ಮಪ್ಪ ಈಗಲೂ ಇದ್ದಾನೆ ಅಂತ ಭಕ್ತರು ಮಾತನಾಡಿಕೊಳ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂಥ ಹತ್ತು ಹಲವು ವಿಸ್ಮಯಗಳು ಕೂಡ, ತಿರುಪತಿಯಲ್ಲಿ ನಡೀತಿವೆ. ತಿಮ್ಮಪ್ಪನ ಸನ್ನಿಧಾನದಲ್ಲಿ ನಡೆದ ವಿಸ್ಮಯಗಳನ್ನು ನೋಡಿದ್ರೆ, ನೀವು ಕೂಡ ಒಂದು ಕ್ಷಣ ಬೆಚ್ಚಿ ಬೀಳ್ತೀರಾ.. ಕಲಿಯುಗದಲ್ಲಿ ಇದೆಲ್ಲಾ ಸಾಧ್ಯಾನಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರ.. ತಿಮ್ಮಪ್ಪ ಈಗ್ಲೂ ತಿರುಪತಿಯಲ್ಲಿ ಇದ್ದಾನೆ.. ಬೇಡಿ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸ್ತಿದ್ದಾನೆ ಅಂತ, ನೀವು ಕೂಡ ನಂಬ್ತೀರ..

ಮಾತುಬಾರದ ಹುಡುಗ ಮಾತನಾಡಿಬಿಟ್ಟ..!
 2002 ರಲ್ಲಿ ವಿಸ್ಮಯ ಸೃಷ್ಟಿಸಿದ ತಿಮ್ಮಪ್ಪ..!

ಈತನ ಹೆಸ್ರು ದೀಪಕ್​ ಅಂತ.. ದೆಹಲಿ ಮೂಲದವನು.. ಈತ 4 ವರ್ಷದವನಾಗಿದ್ದಾಗ, ಇದ್ದಕ್ಕಿದ್ದಂತೆ ಮಾತು ಹೋಯ್ತು.. ಯಾವ ಡಾಕ್ಟರ್​ಗೆ ತೋರಿಸಿದ್ರೂ, ಯಾವ ಊರು ಸುತ್ತಿದ್ರೂ, ಈತನಿಗೆ ಮಾತು ಬರಲೇ ಇಲ್ಲ.. ಕಂಡ ಕಂಡ ದೇವ್ರಿಗೆ ಕೈ ಮುಗಿದ್ರೂ,  ಮಗನ ಸಮಸ್ಯೆ ಪರಿಹಾರವಾಗ್ಲಿಲ್ಲ.. ಕೊನೆಯದಾಗಿ ಇವ್ರು ಬಂದಿದ್ದು ತಿಮ್ಮಪ್ಪನ ಸನ್ನಿಧಾನಕ್ಕೆ,..
 
ಮಗನಿಗೆ ಮಾತು ಬರೋದಿಲ್ಲ ಅಂತ ಇವ್ರೆಲ್ಲಾ ನಿರ್ಧರಿಸಿಬಿಟ್ಟಿದ್ರು.. ಆದ್ರೆ ನಿಮ್ಮ ಮಗನನ್ನು ತಿರುಪತಿಗೆ ಕರ್ಕೊಂಡು ಹೋಗಿ ಒಳ್ಳೇದಾಗುತ್ತೆ ಅಂತ ಕೆಲವರು ಹೇಳಿದ್ರು.. ಅದರಂತೆ ಮನಸ್ಸಿಗೆ ಸಮಾಧಾನವಾದ್ರೂ ಸಿಗಲಿ ಅನ್ನೋ ಕಾರಣಕ್ಕೆ 2002 ರಲ್ಲಿ ದೀಪಕ್​ ಮತ್ತು ಕುಟುಂಬದವರು ತಿರುಪತಿಗೆ ಬಂದ್ರು..  ತಿಮ್ಮಪ್ಪನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಬಾಲಾಜಿಯ ದರ್ಶನ ಪಡೆದ್ರು.. ವಿಚಿತ್ರವೋ, ವಿಸ್ಮಯವೋ ಗೊತ್ತಿಲ್ಲ.. ತಿಮ್ಮಪ್ಪನ ಈತನಿಗೆ ಮಾತು ಕೊಟ್ಟುಬಿಟ್ಟಿದ್ದ.. 14 ವರ್ಷ ಮಾತನಾಡದ ದೀಪಕ್​​, ಗೋವಿಂದನಿಗೆ ನಮಿಸಿದ ಕ್ಷಣವೇ, ಪಟ ಪಟ ಅಂತ ಮಾತನಾಡೋಕೆ ಶುರು ಮಾಡಿದ.. ಈತ ಹೇಗೆ ಮಾತಾಡ್ತಾನೆ ಅನ್ನೋದನ್ನು ನೀವೇ ಒಂದ್ಸಲ ಕೇಳಿಸಿಕೊಳ್ಳಿ

ಮಗನಿಗೆ ಮಾತು ಬಂದಿದ್ದೇ ತಡ, ಹೆತ್ತವರಿಗೆ ಎಲ್ಲಿಲ್ಲದ ಸಂತೋಷ.. ತಿಮ್ಮಪ್ಪನ ಲೀಲೆ ಬಗ್ಗೆ ದೀಪಕ್​ರ ತಾಯಿ ಹೇಳೋದು ಹೀಗೆ..

ಉಮಾ -‘ನನ್ನ ಮಗ 14 ವರ್ಷಗಳಿಂದ ಮಾತನಾಡ್ತಾ ಇರಲಿಲ್ಲ. ದೇವರ ದರ್ಶನದಿಂದ ಮಾತನಾಡ್ತಿದ್ದಾನೆ)ದೀಪಕ್​​ನ 

ಈ ದೀಪಕ್​ಗೆ ಮಾತು ಬಂದಿದ್ದು ನಿಜಕ್ಕೂ ವಿಸ್ಮಯ.. ದೇಶ ವಿದೇಶಗಳನ್ನು ಸುತ್ತಿದ್ರೂ ಪರಿಹಾರವಾಗದ ಸಮಸ್ಯೆ, ತಿಮ್ಮಪ್ಪನ ಸನ್ನಿಧಾನದಲ್ಲಿ ಪರಿಹಾರವಾಗಿದೆ. ಮಾಗತುಬಾರದ ವ್ಯಕ್ತಿ ಪಟ ಪಟ ಅಂತ ಮಾತನಾಡೋದಕ್ಕೆ ಶುರು ಮಾಡಿದ್ದಾನೆ. ಕಲಿಯುಗದಲ್ಲಿ, ಇಂಥದ್ದೊಂದು ವಿಸ್ಮಯ ನಡೆದಿರೋದು, ನಿಜಕ್ಕೂ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಅಷ್ಟೇ ಅಲ್ಲ, ತಿಮ್ಮಪ್ಪನ ಸನ್ನಿಧಾನದಲ್ಲಿ ಇಂಥದ್ದೊಂದು ಅಚ್ಚರಿಯ ಘಟನೆ ನಡೆದಿರೋದು ಕಂಡು, ‘ತಿಮ್ಮಪ್ಪ ತಿರುಪತಿಯಲ್ಲಿ ನೆಲೆಸಿದ್ದಾನೆ. ಕಲಿಯುಗದಲ್ಲೂ ಭಕ್ತರ ಕಷ್ಟಗಳನ್ನು ನಿವಾರಿಸ್ತಿದ್ದಾನೆಅಂತ ಮಾತನಾಡಿಕೊಳ್ತಿದ್ದಾರೆ.

ಇಷ್ಟೇ ಅಲ್ಲ.. ರಾತ್ರಿ ಸಮಯದಲ್ಲಿ ತಿರುಮಲ ಪೂರ್ತಿ ಸುತ್ತಾಡ್ತಾನಂತೆ ತಿಮ್ಮಪ್ಪ.. ದರ್ಶನಕ್ಕೆ ಕಾಯ್ತಾ ಇರೋ ಭಕ್ತರನ್ನ ಭೇಟಿ ಮಾಡಿ, ಅವರ ಕಷ್ಟಗಳನ್ನ ಆಲಿಸ್ತಾನಂತೆ. 1979 ರಲ್ಲಿ ನಡೆದ ಘಟನೆ, ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತೆ. ಆವತ್ತು ಏನಾಯ್ತು..? 
--------------------------------------
ಅದು ನವೆಂಬರ್​​ 7, 1979.. ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಒಂದು ವಿಸ್ಮಯ ನಡೆದಿತ್ತು.. ಆ ವಿಸ್ಮಯವನ್ನು ಕಂಡವರು, ನಿಜಕ್ಕೂ ಮೂಕ ವಿಸ್ಮಿತರಾದ್ರು.. ಅಷ್ಟಕ್ಕೂ ಆವತ್ತು ತಿರುಪತಿಯಲ್ಲಿ ನಡೆದಿದ್ದೇನು ಅಂತೀರಾ..? ಇಲ್ಲಿದೆ ನೋಡಿ ಆ ಸ್ಟೋರಿ.

ತಿರುಪತಿ ಅಂದ್ರೆ ವಿಸ್ಮಯಗಳ ತಾಣ.. ಇಲ್ಲಿ ಆಗಾಗ ವಿಸ್ಮಯಗಳು ನಡೀತಾನೇ ಇರುತ್ತೆ.. ಅಗೆದಷ್ಟು ವಿಸ್ಮಯಗಳ ರಾಶಿಯೇ ಇದೆ ಈ ತಿಮ್ಮಪ್ಪನ ಸನ್ನಿಧಿಯಲ್ಲಿ.. 
 
ಪ್ರತಿ ದಿನ ಮಧ್ಯರಾತ್ರಿ 1.30ಕ್ಕೆ ಏಕಾಂತ ಸೇವೆಯನ್ನು ನೆರವೇರಿಸಲಾಗುತ್ತೆ.. ಇದಾದ ನಂತರ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಗುತ್ತೆ.. ಮತ್ತೆ ಗರ್ಭಗುಡಿಯ ಬಾಗಿಲು ತೆಗೆಯೋದು ಬೆಳಿಗ್ಗೆ 3 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ..

.​​7, 1979ರಲ್ಲಿ ನಡೆದಿತ್ತು ಮತ್ತೊಂದು ವಿಸ್ಮಯ
ತಿಮ್ಮಪ್ಪನ ಸನ್ನಿಧಾನದಲ್ಲಿ ತಂತಾನೇ ಘಂಟನಾದ..!

ಹೌದು.. ನವೆಂಬರ್​ ​​7, 1979ರಲ್ಲಿ ಒಂದು ವಿಚಿತ್ರ ನಡೆದಿತ್ತು.. ಏಕಾಂತ ಸೆವೆಯ ನಂತರ ತಿಮ್ಮಪ್ಪನ ಗರ್ಭಗುಡಿಯನ್ನು ಮುಚ್ಚಲಾಗಿತ್ತು. ಇದಾದ ನಂತರ ಸುಮಾರು 2 ಗಂಟೆ 30 ನಿಮಿಷಕ್ಕೆ ದೇವಾಲಯದ ಗಂಟೆಗಳೆಲ್ಲಾ ಇದ್ದಕ್ಕಿದ್ದಂತೆ ಹೊಡೆದುಕೊಳ್ಳೋಕೆ ಶುರುವಾದವು..

ಯಾವಾಗ ದೇವಾಲಯದಲ್ಲಿ ಗಂಟೆಗಳು ಇದ್ದಕ್ಕಿದ್ದಂತೆ ಹೊಡೆದುಕೊಳ್ಳೋಕೆ ಶುರುವಾಯ್ತೋ..? ಆಗ ತಿರುಮಲ ಬೆಟ್ಟದಲ್ಲಿ ಒಂದು ಮಿಂಚಿನ ಬೆಳಕು ಕಾಣಿಸಿಕೊಂಡಿತು.. ಇದನ್ನು ಕಂಡ ಅಲ್ಲಿನ ಭಕ್ತರಿಗೆ ಎಲ್ಲಿಲ್ಲದ ಅಚ್ಚರಿ..


ತಿಮ್ಮಪ್ಪನಿಂದ ಪ್ರತಿ ದಿನವೂ ಲೋಕಸಂಚಾರ
ಬಾಲಾಜಿಗೆ ಗಂಟೆಗಳಿಂದ ಬಹುಪರಾಕ್​..!

ಅಲ್ಲಿನ ಭಕ್ತರು ನಂಬಿರೋ ಪ್ರಕಾರ, ತಿರುಪತಿ ತಿಮ್ಮಪ್ಪ ಪ್ರತಿ ದಿನ ರಾತ್ರಿ ಲೋಕ ಸಂಚಾರ ನಡೆಸ್ತಾನಂತೆ. ಭಕ್ತರ ಮನೆಗಳಿಗೆ ತೆರಳಿ, ಅವರಿಗೆ ದರ್ಶನ ನೀಡ್ತಾನಂತೆ.. ಅದ್ರಲ್ಲೂ ತನ್ನ ದರ್ಶನಕ್ಕಾಗಿ ಕ್ಯೂನಲ್ಲಿ ಕಾದು ಕುಳಿತಿರೋ ಭಕ್ತರ ಬಳಿಗೆ  ಬಂದು, ಅವರಿಗೆ ಆಶೀರ್ವದಿಸ್ತಾನಂತೆ..

ಹೀಗೆ ಹೀಗೆ ಲೋಕ ಸಂಚಾರ ನಡೆಸಿದ ತಿರುಪತಿ ಗಿರಿವಾಸ ಬೆಳಿಗ್ಗೆ 3 ಗಂಟೆಯೊಳಗೆ ವಾಪಸ್ ತಿರುಮಲಕ್ಕೆ ಬಂದು, ಗರ್ಭಗುಡಿ ಸೇರಿಕೊಳ್ತಾನಂತೆ.. ಆವತ್ತು ತಿಮ್ಮಪ್ಪ ಗರ್ಭಗುಡಿಗೆ ವಾಪಸ್ ಬರುವಾಗ, ದೇವಾಸ್ಥಾನದ ಗಂಟೆ ಸದ್ದು, ತಿಮ್ಮಪ್ಪನನ್ನು ಬರಮಾಡಿಕೊಂಡವು ಅಂತ ಹೇಳಲಾಗ್ತಿದೆ.

ಈ ಎಲ್ಲಾ ಅನುಭವಗಳನ್ನು ತಿಮ್ಮಪ್ಪನ ಭಕ್ತರು ತಮ್ಮ ಬ್ಲಾಗ್​​ನಲ್ಲಿ ಬರೆದುಕೊಂಡಿದ್ದಾರೆ.

ಬೆಳ್ಳಂ ಬೆಳಿಗ್ಗೆ ಅರ್ಚಕನಿಗೆ ಕಾದಿತ್ತು ಅಚ್ಚರಿ..!
ಬ್ರಾಹ್ಮಿ ಮುಹೂರ್ತದಲ್ಲಿ ಭಕ್ತನಿಗೆ ದರ್ಶನ..!

ಸುಮಾರು ನಲವತ್ತು ವರ್ಷಗಳ ಹಿಂದೆ, ಸಾಯಿ ಬಾಬಾನ ವೇಷದಲ್ಲಿ ಬಂದ ಬಾಲಾಜಿ, ಪ್ರಧಾನ ಅರ್ಚಕನಿಗೆ ದರ್ಶನ ಕೊಟ್ಟಿದ್ನಂತೆ. ಆ ಅನುಭವಗಳನ್ನು ಕೂಡ ಕೆಲವರು ಅಂತರ್ಜಾಲದಲ್ಲಿ ಹೇಳಿಕೊಂಡಿದ್ದಾರೆ.

ಅರ್ಚಕ ಪಾದ ಮುಟ್ಟಿದಾಗ ಗೋಚರವಾಯ್ತು ಅಚ್ಚರಿ!
ಕಣ್ಣು ಬಿಟ್ಟು ಭಕ್ತನತ್ತ ನೋಡಿದ ಬಾಲಾಜಿ..!

ಪ್ರತಿ ದಿನದಂತೆ, ತಿಮ್ಮಪ್ಪನ ಪೂಜೆಗೆ ಅಂತ ಅರ್ಚಕರೊಬ್ಬರು ಬೆಳಿಗ್ಗೆ 3 ಗಂಟೆಗೆ ಗರ್ಭಗುಡಿ ಪ್ರವೇಶ ಮಾಡಿದ್ದಾರೆ. ಈ ವೇಳೆ ವಿಗ್ರಹದ ಪಾದವನ್ನು ಮುಟ್ಟಿದಾಕ್ಷಣ, ಅದು ಶಿಲೆಯ ಬದಲು ಮನುಷ್ಯನ ರೂಪ ತಾಳಿತ್ತು ಅಂತ ಹೇಳಲಾಗಿದೆ.

ಅಷ್ಟೇ ಅಲ್ಲ, ನವೆಂಬರ್​​4, 1978 ರಲ್ಲಿ ಭಕ್ತರೊಬ್ಬರು ತಿಮ್ಮಪ್ಪನ ಬಳಿಗೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ, ತಿರುಪತಿಯಲ್ಲಿ ನೆಲೆಸಿರುವ ತಿಮ್ಮಪ್ಪನೇ ಸ್ವತಃ ಕಣ್ಣು ಬಿಟ್ಟು, ಭಕ್ತನನ್ನು ಹರಸಿದ್ದಾನಂತೆ. ಹೀಗಂತ ಭಕ್ತರೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಹೀಗೆ ತಿರುಪತಿಯಲ್ಲಿ ನೆಲೆಸಿರೋ ವೆಂಕಟೇಶ್ವರ, ಕಲಿಯುಗದಲ್ಲೂ ಭಕ್ತರಿಗೆ ದರ್ಶನ ನೀಡ್ತಾ ಇದ್ದಾನೆ.. ಆಗಾಗ ಭಕ್ತರ ಕಣ್ಣಿಗೆ ಕಾಣಿಸಿಕೊಂಡು, ತನ್ನ ಇರುವಿಕೆಯ ಬಗ್ಗೆ ಸೂಚನೆ ನೀಡ್ತಿದ್ದಾನೆ..

ಇಷ್ಟೇ ಅಲ್ಲ.. ವೈಂಕುಂಠ ಏಕಾದಶಿ ದಿನ ಕಾಣಿಸಿಕೊಂಡ ಚಂದ್ರನಲ್ಲೂ ಒಂದು ವಿಚಿತ್ರ ಆಕಾರ ಗೋಚರವಾಗಿದೆ. ತಿರುಮಲದಲ್ಲಿರುವ ಏಳು ಬೆಟ್ಟದಲ್ಲೂ ತಿಮ್ಮಪ್ಪನ ಇರುವಿಕೆ ಕಾಣಿಸುತ್ತೆ.. 
----------------------------------------------------

ಅದು ಏಕಾದಶಿಯ ದಿನ.. ತಿರುಪತಿಗೆ ತೆರಳಿದ್ದ ಭಕ್ತರು, ಹಾಗೇನೇ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಣ ಮಾಡ್ತಿದ್ರು.. ಆಗ ಚಂದ್ರನಿಗೆ ಒಂಚೂರು ಜೂಮ್ಹಾಕಿದ್ರು.. ಆಗ ಚಂದ್ರನ ಮೇಲ್ಮೈಲೆ ಒಂದು ವಿಚಿತ್ರ ಗೋಚರವಾಯ್ತು.. 

ತಿರುಪತಿಯ ಬಾಲಾಜಿ ಕಲಿಯುಗದಲ್ಲೂ ಭಕ್ತರಿಗೆ ಕಾಣಿಸಿಕೊಳ್ತಿದ್ದಾನೆ. ಆಗಾಗ ಕೆಲವು ವಿಸ್ಮಯಗಳನ್ನು ಸೃಷ್ಟಿಸಿ, ತನ್ನ ಇರುವಿಕೆಯನ್ನು ನರಮಾನವರಿಗೆ ತಿಳಿಸ್ತಾ ಇದ್ದಾನೆ. ಇದಕ್ಕೆ ಪುಷ್ಠಿ ನೀಡುವಂತೆ ಹಲವು ಘಟನೆಗಳು ನಡೆದಿವೆ. ಇದರ ಸಾಲಿಗೆ ಮತ್ತೊಂದು ಘಟನೆ ಕೂಡ ಸೇರ್ಪಡೆಗೊಂಡಿದೆ. ಅದೇ ವೈಕುಂಠ ಏಕಾದಶಿಯಂದು ಕಾಣಿಸಿಕೊಂಡ ಚಂದ್ರನ ಆಕಾರ..

ತಿರುಪತಿಗೆ ಬರ್ತಾ ಇದ್ದ ಭಕ್ತರು, ತಮ್ಮ ಪ್ರಯಾಣವನ್ನು ಮೊಬೈಲ್​ನಲ್ಲಿ ಚಿತ್ರೀಕರಣ ಮಾಡ್ತಾ ಇದ್ರು.. ಈ ವೇಳೆ ಭೂಮಿಯ ಮೇಲೆ ಬೆಳದಿಂಗಳು ಚೆಲ್ತಾ ಇದ್ದ ಚಂದಿರನ ರೂಪ ಕಂಡಿದೆ. ಹಾಗೆ ನೋಡ್ತಾ ಇರಬೇಕಾದ್ರೆ, ಆ ಚಂದ್ರನಲ್ಲಿ ಒಂದು ವಿಚಿತ್ರ ಆಕಾರ ಕಾಣಿಸಿಕೊಂಡಿದೆ. ಚಂದ್ರನ ಮೇಲ್ಮೈ ಮೇಲೆ ಕಾಣಿಸಿಕೊಂಡ ಆ ಆಕಾರ ಏನು ಅಂತ ಜೂಮ್ ಹಾಕಿ ನೋಡಿದ್ರೆ, ಅಲ್ಲಿ ಒಂದು ಅಚ್ಚರಿ ಎದುರಾಗಿತ್ತು..

ತಿಮ್ಮಪ್ಪನಿಗೆ ಪ್ರಿಯವಾದ ಆ ದಿನದಂದು, ಚಂದ್ರನ ಮೇಲ್ಮೈ ಮೇಲೆ ಓಂ ಆಕಾರ ಕಾಣಿಸ್ತಿತ್ತು..

ನೋಡಿದ್ರಲ್ಲಾ.. ತಿರುಪತಿ ತಿಮ್ಮಪ್ಪನ ಅಂಗಳದಲ್ಲಿ, ಏನೆಲ್ಲಾ ವಿಸ್ಮಯಗಳು ಕಾಣಿಸಿಕೊಳ್ತಿವೆ ಅಂತ.. ಚಂದ್ರನಲ್ಲಿ ವಿಚಿತ್ರ ಆಕಾರ ಕಾಣಿಸಿಕೊಳ್ತಿರೋದು ಇದೇ ಮೊದಲೇನಲ್ಲ.. ಈ ಹಿಂದೆ ಚಂದ್ರನ ಮೇಲೆ ಮೂರು ಬಿಳಿ ಪಟ್ಟೆಗಳು ಕಾಣಿಸಿಕೊಂಡಿದ್ದವು.. ಅದು ದೇವರಿಗೆ ವಿಭೂತಿ ಹಚ್ಚಿದ ರೀತಿಯಲ್ಲಿತ್ತು.. ಅದು ಕೂಡ ತಿರುಮಲದಲ್ಲಿ ನಡೀತಿರೋ ವಿಸ್ಮಯಗಳಲ್ಲಿ ಒಂದು..

ತಿರುಮಲದ ಬೆಟ್ಟದಲ್ಲೂ ಅಡಗಿದೆ ವಿಸ್ಮಯ..!
ಏಳು ಬೆಟ್ಟದಲ್ಲೂ ಕಾಣಿಸುತ್ತೆ ತಿಮ್ಮಪ್ಪನ ಇರುವಿಕೆ

ಇನ್ನು ತಿರುಮಲದ ಏಳು ಬೆಟ್ಟಗಳಲ್ಲೂ ಕೂಡ, ತಿಮ್ಮಪ್ಪನ ಅಸ್ತಿತ್ವ ಕಾಣಿಸುತ್ತೆ. ಏಳು ಬೆಟ್ಟಗಳನ್ನು ಒಂದು ಆಂಗಲ್​ನಲ್ಲಿ ನೋಡಿದ್ರೆ, ಅದ್ರಲ್ಲಿ ತಿರುಪತಿ ತಿಮ್ಮಪ್ಪನ ಮುಖ ಕಾಣಿಸುತ್ತೆ..

ಈ ಚಿತ್ರ ನೋಡಿ. ಇದ್ರಲ್ಲಿ ತಿಮ್ಮಪ್ಪನ ಹಣೆ, ಆತನ ಹಣೆಯ ಮೇಲಿರುವ ನಾಮ, ಕಣ್ಣುಗಳಂತೆ ಕಾಣುವ ಆಕಾರ, ಮೂಗು ಮತ್ತು ತುಟಿ ಎಲ್ಲವೂ ಅಚ್ಚುಕಟ್ಟಾಗಿ ಕಾಣಿಸುತ್ತೆ.. ಇದನ್ನು ನೋಡಿದ್ರೆ, ತಿರುಮಲದ ಈ ಏಳು ಬೆಟ್ಟಗಳಲ್ಲೂ ತಿಮ್ಮಪ್ಪನ ಅಸ್ತಿತ್ವ ಇದೆ ಅನ್ನೋದು ಸ್ಪಷ್ಟವಾಗುತ್ತೆ..

ಭಕ್ತರ ಮನೆಯಲ್ಲಿ ವಿಸ್ಮಯ ಸೃಷ್ಟಿಸಿ ಬಾಲಾಜಿ
ಪೂಜೆಗಿಟ್ಟಿದ್ದ ನೈವೇದ್ಯ ಇದ್ದಕ್ಕಿದ್ದಂತೆ ಮಾಯ..!

ಇಷ್ಟೇ ಅಲ್ಲ, ದೇವರ ಮನೆಯಲ್ಲಿ ಈ ಬಾಲಾಜಿಯನ್ನು ಪೂಜಿಸಿ, ನೈವೇದ್ಯೆ ಮಾಡಿದ ನಂತರ, ಅದನ್ನು ತಿಂದಿರೋ ಕೆಲವು ವಿಚಿತ್ರ ಘಟನೆಗಳೂ ನಡೆದಿವೆಯಂತೆ.. 

ನೈವೇದ್ಯಕ್ಕೆ ಇಡಲಾಗಿದ್ದ ಬಾಳೆ ಹಣ್ಣು ಅರ್ಧ ಖಾಲಿಯಾಗಿದೆ. ಬೊಟ್ಟಲು ತುಂಬ ಇಡಲಾಗಿದ್ದ ಅನ್ನದಲ್ಲಿ ಒಂದು ಸ್ಪೂನ್​​ ಖಾಲಿಯಾಗಿದೆ. ಬ್ರೆಡ್ಮೇಲೆ ಓಂ ಆಕಾರ ಮತ್ತು ತ್ರಿಶೂಲದ ಆಕಾರಗಳು ಕಾಣಿಸಿಕೊಂಡಿದ್ದು, ವಿಚಿತ್ರವನ್ನು ಸೃಷ್ಟಿಸಿವೆ. ಇವೆಲ್ಲಾ ನೋಡಿದರೆ, ಇದು ಕನಸೋ ನನಸೋ ಅನ್ನೋದೇ ಗೊತ್ತಾಗೋದಿಲ್ಲ.. ನಂಬಬೇಕಾ ಬಿಡ್ಬೇಕಾ ಅನ್ನೋದು ಕೂಡ ತಿಳಿಯೋದಿಲ್ಲ.. ಆದ್ರೆ, ಪರಮ ಭಕ್ತನಿಗೆ ಕಾಣಿಸಿಕೊಳ್ಳೋ ತಿಮ್ಮಪ್ಪ, ಆಗಿಂದಾಗೆ ಇಂಥ ಅಚ್ಚರಿಗಳನ್ನು ಸೃಷ್ಟಿಸುವ ಮೂಲಕ, ನಿಬ್ಬೆರಗಾಗುವಂತೆ ಮಾಡ್ತಾ ಇದ್ದಾನೆ.

ಇಂಥಾ ಹತ್ತಾರು ವಿಸ್ಮಯಗಳನ್ನು, ವಿಚಿತ್ರಗಳನ್ನು ಸೃಷ್ಟಿಸೋ ಮೂಲಕ, ತನ್ನ ಇರುವಿಕೆಯನ್ನು ತೋರಿಸ್ತಿದ್ದಾನೆ ತಿರುಪತಿ ತಿಮ್ಮಪ್ಪ.. ಈ ಕಲಿಯುಗದಲ್ಲೂ ಭಕ್ತರಿಗೆ ದರ್ಶನ ನೀಡುವ ಮೂಲಕ, ಬೇಡಿ ಬಂದ ಭಕ್ತರ ಕಷ್ಟಗಳನ್ನು ಈಡೇರಿಸ್ತಿದ್ದಾನೆ. ಹೀಗಾಗಿನೇ, ದಿನ ನಿತ್ಯ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗ್ತಾ ಇದೆ.

ಕೇಳಿದ್ದನ್ನು ಕೊಡೋ ಕಲಿಯುಗ ಕಾಮಧೇನುವಿನ ದರ್ಶನ ಪಡೆಯೋಕೆ, ಪ್ರತಿ ನಿತ್ಯವೂ ಲಕ್ಷಾಂತರ ಮಂದಿ ಭಕ್ತರು ಬರ್ತಾ ಇದ್ದಾರೆ. ಮೂರು ನಾಲ್ಕು ದಿನಗಳ ಕಾಲ ಕ್ಯೂನಲ್ಲಿ ನಿಂತು ತಿಮ್ಮಪ್ಪನ ದರ್ಶನ ಪಡೀತಿದ್ದಾರೆ. ಆ ಮೂಲಕ, ತಮ್ಮ ಕಷ್ಟನಷ್ಟಗಳನ್ನು ಪರಿಹರಿಸಪ್ಪಾ ಅಂತ ತಿಮ್ಮಪ್ಪನಲ್ಲಿ ಬೇಡಿಕೊಳ್ತಿದ್ದಾರೆ. ಬೇಡದವರಿಗೆ ಆಶೀರ್ವಾದ ನೀಡೋ ತಿಮ್ಮಪ್ಪ, ಕೆಲವರಿಗೆ ಮಾತ್ರ ಪ್ರತ್ಯಕ್ಷವಾಗಿ ಕಾಣಿಸಿಕೊಂಡು ದರ್ಶನ ನೀಡ್ತಿದ್ದಾನಂತೆ. ಹೀಗಂತ ಇಲ್ಲಿನ ಭಕ್ತರು ಹತ್ತಾರು ಕಥೆಗಳನ್ನು ಹೇಳ್ತಿದ್ದಾರೆ. ಭಕ್ತರು ಹೇಳೋದನ್ನು ಕೇಳಿದ್ರೆ, ಇದೆಲ್ಲಾ ನಿಜಾನಾ..? ಅಥವ ಕೇಲವ ಭ್ರಮೇನಾ ಅನ್ನೋ ಹತ್ತಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತವೆ. ಆದ್ರೆ. ಕಂಡವರಿಗೆ ಮಾತ್ರವೇ ಗೊತ್ತು, ಭಗವಂತನ ಮಹಿಮೆ.. ಪರಮ ಬಕ್ತರಿಗೆ ಮಾತ್ರ ಇಂಥ ಅನುಭವಗಳಾಗುತ್ತವೆ. ಎಲ್ಲರಿಗೂ ಭಗವಂತನ ದರ್ಶನವಾಗಲೀ, ಆತನ ಇರುವಿಕೆಯ ಅನುಭವವಾಗಲೀ ಆಗೋದಿಲ್ಲ ಅನ್ನೋದು ಮತ್ತೆ ಕೆಲವರ ವಾದ..

ನೋಡಿದ್ರಲ್ಲಾ.. ಈ ಕಲಿಯುಗದಲ್ಲೂ ತಿಮ್ಮಪ್ಪ ಏನೆಲ್ಲಾ ಪವಾಡಗಳನ್ನು ಸೃಷ್ಟಿಸ್ತಿದ್ದಾನೆ ಅಂತ.. ಮಾತು ಬಾರದ ಹುಡುಗ ಮಾತನಾಡ್ತಾನೆ ಅಂದ್ರೆ, ಅದು ಸಾಮಾನ್ಯವಾದ ವಿಷಯ ಅಲ್ಲ.. ಚಂದ್ರನಲ್ಲಿ ಓಂಕಾರ ಕಾಣಿಸಿಕೊಳ್ಳೋದು, ರಾತ್ರಿ ಸಮಯದಲ್ಲಿ, ದೇವಾಲಯದ ಗಂಟೆಗಳು ಇದ್ದಕ್ಕಿದ್ದಂತೆ ಹೊಡೆದುಕೊಳ್ಳೋದು, ಎಲ್ಲವೂ ನಮ್ಮ ಊಹೆಗೂ ಮೀರಿದ್ದು.. ಇವೆಲ್ಲವೂ ತಿಮ್ಮಪ್ಪನ ಇರುವಿಕೆಯನ್ನು ಸಾರಿ ಹೇಳುತ್ತವೆ ಅನ್ನೋದು ಸಂಪ್ರದಾಯವಾದಿಗಳ ಅಂಬೋಣ..

ಬಾಳೆ ಹಣ್ಣಿನಲ್ಲಿದೆ ‘ಪವರ್​​’..!


ಊಟ ಆದ್ಮೇಲೆ ಒಂದು ಬಾಳೆ ಹಣ್ಣು ತಿನ್ನದೇ ಇದ್ರೆ, ಊಟ ಪೂರ್ತಿ ಆಗೋದೇ ಇಲ್ಲ.. ಊಟಾನ ಸಂಪೂರ್ಣ ಮಾಡೋಕೆ ಬಾಳೆ ಹಣ್ಣು ಬೇಕೇ ಬೇಕು.. ಯಾಕಂದ್ರೆ, ಬಾಳೆ ಹಣ್ಣು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತೆ.. ಇಷ್ಟೇ ಆಗಿದ್ರೆ ಈವತ್ತು ನಾವು ನಿಮಗೆ ಇಷ್ಟೋಂದು ಬಿಲ್ಡಪ್ ಕೊಡ್ತಾ ಇರಲಿಲ್ಲ.. ಬಾಳೆ ಹಣ್ಣಿನಲ್ಲಿ ನಿಮಗೆ ಗೊತ್ತಿಲ್ಲದೇ ಇರೋ ಸತ್ಯಗಳು ಅಡಗಿವೆ. ಅದು ಏನು ಅಂತೀರಾ..? ನೀವೇ ನೋಡಿ..

ಬಾಳೆ ಹಣ್ಣು.. ದಿ ಪವರ್ಫುಲ್ ಫ್ರೂಟ್ ಇನ್ ದಿ ಅರ್ತ್​.. ಹೀಗಂತ ಹೇಳಿದ್ರೆ ನೀವು ನಿಜಕ್ಕೂ ನಂಬೋದಿಲ್ಲ ಬಿಡಿ.. ಯಾಕಂದ್ರೆ ನೀವು ನಂಬದೇ ಇರುವಂಥ ಶಕ್ತಿ, ಬಾಳೆ ಹಣ್ಣಿಗೆ ಇದೆ.

 ಯಸ್.. ಬಾಳೆ ಹಣ್ಣಿನಲ್ಲಿರೋ ಕಂಟೆಂಟ್ಇದ್ಯಲ್ಲ, ಅದು ನಿಮ್ಮ ದೇಹಕ್ಕೆ ತುಂಬಾನೇ ಒಳ್ಳೇದು.. ಇದ್ರಲ್ಲಿ ಸಕ್ಕರೆ, ಸುಕ್ರೋಸ್,  ಫ್ರುಕ್ಟೋಸ್ ಮತ್ತು ಗ್ಲೂಕೋಸ್​​​​ ಅಂಶಗಳು ಹೆಚ್ಚಾಗಿವೆ. ನಾರಿನ ಅಂಶ ಕೂಡ ಹೆಚ್ಚಾಗಿರೋದ್ರಿಂದ, ಮಾನವನ ದೇಹಕ್ಕೆ ಬೇಕಾದ ಶಕ್ತಿಯನ್ನು ಬಾಳೆ ಹಣ್ಣು ಒದಗಿಸುತ್ತೆ. ಒಂದೇ ಒಂದು ಬಾಳೆ ಹಣ್ಣು ತಿಂದ್ರೆ ಸಾಕು, ನಿಮ್ಮ ಶಕ್ತಿ ಏಕ್ ದಂ ಡಬಲ್ ಆದಂತಾಗುತ್ತೆ..!
ಎರಡು ಬಾಳೆ ಹಣ್ಣು ತಿಂದ್ರೆ 90 ನಿಮಿಷ ಶಕ್ತಿ..!
ಅಥ್ಲೆಟ್ಗಳ ಫೇವರೇಟ್ ಫ್ರೂಟ್ಬನಾನಾ..!

ಇನ್ನು ಬಾಳೆ ಹಣ್ಣು, ದೇಹಕ್ಕೆ ಸಾಕಷ್ಟು ಪ್ರಮಾಣದ ಎನರ್ಜಿ ಕೊಡುತ್ತೆ. ಕೇವಲ 2 ಬಾಳೆ ಹಣ್ಣುಗಳನ್ನು ತಿಂದ್ರೆ ಸಾಕು.. ಸುಮಾರು 90 ನಿಮಿಷಗಳವರೆಗೆ ಕೆಲಸ ಮಾಡಬಹುದು.. ಅಷ್ಟೋಂದು ಪ್ರಮಾಣದ ಶಕ್ತಿಯನ್ನು, ಬಾಳೆ ಹಣ್ಣು ಪೂರೈಕೆ ಮಾಡುತ್ತೆ. ಅದ್ರಿಂದಾನೇ, ಬಹಳಷ್ಟು ಕ್ರೀಡಾಪಟುಗಳು ಬಾಳೆ ಹಣ್ಣನ್ನು ಹೆಚ್ಚಾಗಿ ತಿಂತಾರೆ. ದೇಹವನ್ನು ಫಿಟ್ ಅಂಡ್ ಫೈನ್ ಆಗಿ ಇಟ್ಟುಕೊಳ್ಳೋಕೆ, ಬಾಳೆ ಹಣ್ಣು ತುಂಬಾನೇ ಇಂಪಾರ್ಟೆಂಟ್ಆಗಿದೆ.


ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ..!
ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡುತ್ತೆ..!

ವಾ4: ಇನ್ನು ಬಾಳೆ ಹಣ್ಣು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಊಟ ಆದ್ಮೇಲೆ ಎಲ್ರೂ ಬಾಳೆ ಹಣ್ಣು ತಿಂತಾರೆ. ಅಷ್ಟೇ ಅಲ್ಲ, ನಿಮ್ಮ ಮಾನಸಿಕ ಖಿನ್ನತೆಯನ್ನು ಕೂಡ ಇದು ಕಡಿಮೆ ಮಾಡುತ್ತೆ.. ಇದ್ರಲ್ಲಿ ಟ್ರೈಪ್ಟೋಫನ್ ಎಂಬ ಪ್ರೋಟಿನ್ ಆಂಶ ಇರೋದ್ರಿಂದ  ಅದು ದೇಹದೊಳಗೆ ಹೋಗಿ, ಸಿರೋಟೋನಿನ್ ಆಗಿ ಪರಿವರ್ತನೆಗೊಳ್ಳುತ್ತೆ. ಸಿರೋಟಿನ್ ಅಂಶ ನಿಮ್ಮ ಮನಸ್ತಿತಿಯನ್ನು ಕೂಲಾಗಿ ಇರಿಸುತ್ತೆ. ಮಾನಸಿಕವಾಗಿ ನಿಮ್ಮನ್ನು ಸಬಲರನ್ನಾಗಿ ಮಾಡುತ್ತೆ.

ರಕ್ತ ಸಂಚಾರವನ್ನು ಹೆಚ್ಚಿಸುತ್ತೆ
ರಕ್ತ ಹೀನತೆ ಕಡಿಮೆ ಮಾಡುತ್ತೆ..!

5: ಇನ್ನು ಬಾಳೆ ಹಣ್ಣಿನಲ್ಲಿ ವಿಟಮಿನ್ಬಿ ಅಂಶ ಇರೋದ್ರಿಂದ, ರಕ್ತ ಹೀನತೆಯನ್ನು ಕಡಿಮೆ ಮಾಡುತ್ತೆ. ಅಷ್ಟೆ ಅಲ್ಲ, ರಕ್ತ  ಸಂಚಲನ ಹೆಚ್ಚಿಸಿ, ನಿಮ್ಮನ್ನ ಸದಾ ಚೈತನ್ಯಶೀಲರಾಗಿ ಇರುವಂತೆ ಮಾಡುತ್ತೆ. ಸುಸ್ತು, ಆಯಾಸದಿಂದ ನಿಮ್ಮನ್ನ ದೂರ ಇಡುತ್ತೆ. ಹೀಗಾಗಿನೇ ಅಮೆರಿಕಾದಲ್ಲಿ ಬಾಳೆ ಹಣ್ಣಿಗೆ ವಿಶೇಷ ಸ್ಥಾನ ಇದೆ.

ಿಮ್ಮ ಬ್ರೈನ್ಗೆ ನೀಡುತ್ತೆ ಪವರ್​​..!
ಬಯಲಾಯ್ತು ಂಶೋಧನೆಯ ಸತ್ಯ

ವಾ6: ಇನ್ನು ಬಾಳೆ ಹಣ್ಣನ್ನು ತಿನ್ನೋದ್ರಿಂದ, ಮಿದುಳಿನ ಶಕ್ತಿ ಹೆಚ್ಚುತ್ತದೆ ಅಂತ ಸಂಶೋಧನೆಯೊಂದು ತಿಳಿಸಿದೆ. ಇಂಗ್ಲೆಂಡ್​​ ಟ್ವಿಕೆನ್ಹ್ಯಾಮ್​​ ಶಾಲೆಯ 200 ವಿದ್ಯಾರ್ಥಿಗಳಿಗೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಅತ್ರಿ ಸಮಯದಲ್ಲಿ ದಿನ ನಿತ್ಯ ಬಾಳೆ ಹಣ್ಣನ್ನು ನೀಡಲಾಯ್ತು.. ಇದ್ರಿಂದ ವಿದ್ಯಾರ್ಥಿಗಳ ಮಿದುಳಿನ ಶಕ್ತಿ ಹೆಚ್ಚಾಗಿದ್ದು, ಅದ್ಭುತವಾದ ಶೈಕ್ಷಣಿಕ ಸಾಧನೆ ಮಾಡಿದ್ರು.. ಬಾಳೆಹಣ್ಣಿನಲ್ಲಿರೋ ಪೊಟ್ಯಾಷಿಯಮ್​​ ಅಂಶ, ನಿಮ್ಮನ್ನ ಅಲರ್ಟ್ಆಗಿರುವಂತೆ ಮಾಡೋದ್ರಿಂದ, ಮಿದುಳು ಚುರುಕಾಗಿ ಕೆಲಸ ಮಾಡುತ್ತೆ.

ಜಡತ್ವ, ಮಲಬದ್ಧತೆಯನ್ನು ನಿವಾರಿಸುತ್ತೆ
ಎದೆ ಉರಿ, ನಿಶಕ್ತಿಯನ್ನು ದೂರ ಮಾಡುತ್ತೆ

ವಾ7: ಬಾಳೆ ಹಣ್ಣಿನ ಮಿಲ್ಕ್ಶೇಖ್​​​ ಕುಡಿಯೋದು, ಜೇನಿನೊಂದಿಗೆ ಬಾಳೆ ಹಣ್ಣಿನ ಜ್ಯೂಸ್​​ ಕುಡಿಯೋದ್ರಿಂದ, ಮಲಬದ್ಧತೆಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತೆ.. ಅಷ್ಟೇ ಅಲ್ಲಮ, ಜಡತ್ವವನ್ನು ನಿವಾರಿಸುತ್ತದೆ. ಎದೆ ಉರಿ, ಮತ್ತು ಬೆಳಗಿನ ಜಾವದ ನಿಶಕ್ತಿಯನ್ನ ದೂರ ಮಾಡುವಲ್ಲಿ ಬಾಳೆ ಹಣ್ಣು ಸಖತ್ತಾಗಿ ಕೆಲಸ ಮಾಡುತ್ತೆ..

ಸೊಳ್ಳೆ ಕಡಿತಕ್ಕೆ ಬಾಳೆ ಹಣ್ಣು ಮದ್ದು..!
ನರಗಳ ಸ್ಟ್ರಾಂಗ್ಮಾಡುತ್ತೆ ಬನಾನಾ..!

ವಾ8: ಬಾಳೆ ಹಣ್ಣನ್ನು ಸೊಳ್ಳೆ ಕಡಿದ ಜಾಗಕ್ಕೆ ಹಚ್ಚೋದ್ರಿಂದ, ಸೊಳ್ಳೆ ಕಡಿತದಿಂದ ತೊಂದರೆಗೊಳಗಾದ ಚರ್ಮ ಸ್ಮೂತ್ ಆಗುತ್ತೆ. ಬಾಳೆ ಹಣ್ಣಿನಲ್ಲಿರೋ ವಿಟಮಿನ್ಗಳು ಮತ್ತು ನಾರಿನ ಅಂಶಗಳು, ನರಗಳನ್ನು ಬಲಿಷ್ಟಗೊಳಿಸುತ್ತೆ.


ಕೆಲಸದ ಒತ್ತಡ ನಿವಾರಣೆಗೆ ಬೇಕು ಬಾಳೆ ಹಣ್ಣು
ಆಸ್ಟ್ರೇಲಿಯಾದಲ್ಲಿಬಾಳೆ ಪವರ್​’ ವರ್ಕೌಟ್​!

9: ಇತ್ತೀಚಿನ ದಿನಗಳಲ್ಲಿ, ಎಲ್ಲರಿಗೂ ಒತ್ತಡ ಹೆಚ್ಚಾಗ್ತಾ ಇದೆ. ಮಕ್ಕಳಿಗೆ ಓದಿನ ಒತ್ತಡ ಇದ್ರೆ, ಅಪ್ಪ ಅಮ್ಮನಿಗೆ ಕೆಲಸದ ಒತ್ತಡ.. ಸಂಸಾರದ ಒತ್ತಡ.. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಆಸ್ಟ್ರೇಲಿಯಾದ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗಿರೋರು, ಒತ್ತಡದಿಂದ ಬಳಲ್ತಾ ಇರೋ ರೋಗಿಗಳು.. ಹೀಗಾಗಿ ಅವರಿಗೆ ಆಹಾರ ಮತ್ತು ಚಿಕಿತ್ಸೆಯ ಜೊತೆಗೆ ಪ್ರತಿ ನಿತ್ಯ ಬಾಳೆ ಹಣ್ಣನ್ನು ನೀಡೋದರ ಮೂಲಕ ಒತ್ತಡ ನಿವಾರಣೆ ಮಾಡಲಾಗಿದೆ. ಇದಾದ ನಂತರ ಮನೆಗೆ ಹಿಂದಿರುಗಿದ್ರೂ, ಅವ್ರು ಬಾಳೆಹಣ್ಣನ್ನು ತಿನ್ನೋದು ಕಂಟಿನ್ಯೂ ಮಾಡಿದ್ದಾರೆ.

ರುಳಿನ ಸಮಸ್ಯೆ ಇದ್ರೆ ಬಾಳೆ ಹಣ್ಣು ತಿನ್ನಿ

10: ನಿಮಗೇನಾದ್ರೂ ಕರುಳಿನ ಸಮಸ್ಯೆ ಇದ್ರೆ, ಬಾಳೆ ಹಣ್ಣು ಸೇವಿಸಿ.. ಆಗ ಬಾಳೆ ಹಣ್ಣಿನಲ್ಲಿರೋ ಅಂಶ ನಿಮ್ಮ ಕರುಳಿನ ಸಮಸ್ಯೆಯನ್ನು ದೂರ ಮಾಡುತ್ತೆ. ಅಷ್ಟೇ ಅಲ್ಲ ಅಸಿಡಿಟಿಯನ್ನು ಕೂಡ ನಿವಾರಿಸುತ್ತೆ ಬಾಳೆ ಹಣ್ಣು..!

ದೇಹದ ಟೆಂಪರೇಚರ್​​ ಕಂಟ್ರೋಲ್ ಮಾಡುತ್ತೆ
ನಿಮ್ಮನ್ನು ಯಾವಾಗ್ಲೂ ಕೂಲಾಗಿ ಇಡುತ್ತೆ

12: ಇನ್ನು ಬಾಳೆ ಹಣ್ಣಿನಲ್ಲಿರೋ ಪ್ರೊಟಿನ್ ಮತ್ತು ವಿಟಮಿನ್ಗಳು, ದೇಹದ ಟೆಂಪರೇಚರ್​​ ಅನ್ನು ಕಂಟ್ರೋಲ್ ಮಾಡುತ್ತೆ. ಇದ್ರಲ್ಲಿರೋ ಕೂಲಿಂಗ್ ಕಂಟ್ರೋಲಿಂಗ್ ಅಂಶ, ನಿಮ್ಮನ್ನು ದೈಹಿಕವಾಗಿ  ಮತ್ತು ಮಾನಸಿಕವಾಗಿ ಕೂಲಾಗಿ ಇರಿಸುತ್ತೆ. ಎಮೋಷನ್ ಕಂಟ್ರೋಲ್ ಮಾಡಿ, ನಿಮ್ಮನ್ನ ಸದಾ ಖುಷಿ ಖುಷಿಯಾಗಿ ಇರುವಂತೆ ಮಾಡುತ್ತೆ.. ಅಷ್ಟೇ ಅಲ್ಲ, ಬಾಳೆ ಹಣ್ಣು ಸೇವನೆ ಮಾಡೋದ್ರಿಂದ, ಸಣ್ಣ ಪುಟ್ಟ ಖಾಯಿಲೆಗಳಿಂದ ನಿಮ್ಮನ್ನು ದೂರ ಇಡುತ್ತೆ.

ಿನವೂ ತಿನ್ನಿ ಬಾಳೆ ಹಣ್ಣು..!

ವಾ13: ಪ್ರತಿ ದಿನವೂ ಆಪಲ್​​ ತಿನ್ನಿ, ವೈದ್ಯರನ್ನು ದೂರ ಇಡಿ ಅನ್ನೋ ಮಾತಿದೆ. ಆದ್ರೆ ಬಾಳೆ ಹಣ್ಣಿನಲ್ಲಿ ಆಪಲ್ಗಿಂತಲೂ ಹೆಚ್ಚಿನ ಪ್ರೊಟಿನ್ಮತ್ತು ವಿಟಮಿನ್ಗಳಿದೆ. ಅದ್ರಿಂದ ಪ್ರತಿ ದಿನ ಬಾಳೆ ಹಣ್ಣು ತಿನ್ನಿ.. ಡಾಕ್ಟರ್​​ರಿಂದ ದೂರ ಇರಿ.. ಆರೋಗ್ಯವಾಗಿರಿ.. ಮಾನಸಿಕವಾಗಿ ಖುಷಿಯಾಗಿರಿ..

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು