Recent Movies

ಸಿನೆಮಾ

Share This Article To your Friends

Showing posts with label ವಿಸ್ಮಯಗಳು. Show all posts
Showing posts with label ವಿಸ್ಮಯಗಳು. Show all posts

ಶಾಕಿಂಗ್.. ಶಿವನು ಮೂರನೇ ಕಣ್ಣು ಬಿಟ್ಟು ಹವಾಯಿ ದ್ವೀಪ ನೋಡಿದನೇ?ಶಿವನಿಗೆ ಮೂರು ಕಣ್ಣಿದೆ. ಆದ್ದರಿಂದಲೇ ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತೆ. ಮುಕ್ಕಣ್ಣ ತನ್ನ ಮೂರನೇ ಕಣ್ಣನ್ನು ಬಿಟ್ಟರೆ ಎದುರಿಗಿದ್ದವರು ಸುಟ್ಟು ಭಸ್ಮವಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಶಿವನನ್ನು ಕೆಣಕಿದ ಕಾಮ ನೋಡ ನೋಡುತ್ತಿದ್ದಂತೆ ಸುಟ್ಟು ಭಸ್ಮವಾದದ್ದು ಪೌರಾಣಿಕ ಇತಿಹಾಸ. ಆದರೆ ಪುರಾಣದ ವಿಷ್ಯಾ ಈಗ್ಯಾಕೆ ಅಂದ್ರಾ? ಸಾಕ್ಷಾತ್ ಪರಶಿವ ತನ್ನ ಮೂರನೇ ಕಣ್ಣನ್ನು ಬಿಟ್ಟು ಹವಾಯಿ ದ್ವೀಪದ ಕಡೆ ನೋಡಿದ್ದಾನೆ ಅನ್ನೋದು.

ಇದು ಕೇಳೋದಕ್ಕೆ ವಿಚಿತ್ರ ಅನ್ನಿಸಿದ್ರೂ ಸತ್ಯ. ಹವಾಯಿ ದ್ವೀಪದ ಕಡೆ ಶಿವನು ಕಣ್ಣು ಬಿಟ್ಟು ನೋಡಿದ್ದಾನೆ ಅಂತ ಕೆಲವರು ಮಾತಾಡಿಕೊಳ್ತಿದ್ದಾರೆ. ಮುಕ್ಕಣ್ಣ ತನ್ನ ಮೂರನೇ ಕಣ್ಣಿನಿಂದ ಹವಾಯಿ ದ್ವೀಪದ ಕಡೆ ನೋಡಿದ್ರಿಂದಲೇ, ಜ್ವಾಲಾಮುಖಿ ಸ್ಫೋಟಗೊಂಡು ಇಡೀ ಪ್ರದೇಶವನ್ನೇ ಭಸ್ಮ ಮಾಡುತ್ತಿದೆ ಅಂತ ಕಥೆ ಕಟ್ಟಲಾಗುತ್ತಿದೆ.

ಹವಾಯಿ ದ್ವೀಪದಲ್ಲಿ ಜ್ವಾಲಾಮುಖಿಗಳು ಆಗಿಂದಾಗಿ ಸ್ಫೋಟಗೊಳ್ಳುತ್ತಲೇ ಇರುತ್ತವೆ. ಆದರೆ ಇದೇ ಮೊದಲ ಬಾರಿಗೆ ಇಷ್ಟೋಂದು ಭಯಾನಕವಾಗಿ ಜನರೇ ಬೆಚ್ಚಿ ಬೀಳುವಂತೆ ಜ್ವಾಲಾಮುಖಿ ಸ್ಫೋಟಗೊಂಡು, ಬೆಂಕಿಯ ಹೊಳೆಯೇ ಹರಿಯುತ್ತಿದೆ. ಇದನ್ನು ನೋಡಿದ ಕೆಲವರು, ಶಿವನು ಮೂರನೇ ಕಣ್ಣಿನಿಂದ ಹವಾಯಿ ದ್ವೀಪದ ಕಡೆ ನೋಡಿರಬೇಕು, ಅದಕ್ಕೆ, ಹವಾಯಿ ದ್ವೀಪ ಸುಟ್ಟು ಬೂದಿಯಾಗುತ್ತಿದೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. 


ಇನ್ನು ಹವಾಯಿ ದ್ವೀಪದಲ್ಲಿ ಸ್ಫೋಟಗೊಂಡಿರುವ ಜ್ವಾಲಾಮುಖಿ, 110 ಮನೆಗಳು ಮತ್ತು ಬೃಹತ್ ಕಟ್ಟಡಗಳನ್ನು ಈಗಾಗಲೇ ಸುಟ್ಟು ಬೂದಿ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಅಂತ ವಿಜ್ಞಾನಿಗಳು ಅಂದಾಜಿಸುತ್ತಿದ್ದಾರೆ. ಹೀಗಾಗಿ ಸುತ್ತಮುತ್ತ ಇರೋ 2 ಸಾವಿರಕ್ಕೂ ಹೆಚ್ಚು ಮನೆಗಳನ್ನು ಖಾಲಿ ಮಾಡಿಸಲಾಗಿದೆ. 20 ಸಾವಿರಕ್ಕೂ ಹೆಚ್ಚು ಜನರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ.

ವಿಸ್ಮಯ ಸೃಷ್ಟಿಸುತ್ತಿದೆ ಈ ಶಿವಲಿಂಗ!


ಕಲಿಯುಗದಲ್ಲಿ ಒಂದು ಪವಾಡ ನಡೆಯುತ್ತಿದೆ. ಶಿವಲಿಂಗ ಒಂದು ವಿಸ್ಮಯಕ್ಕೆ ಕಾರಣವಾಗಿದೆ. ಆ ಶಿವಲಿಂಗದ ವಿಸ್ಮಯವನ್ನು ಕಂಡು ನೋಡುಗರೆಲ್ಲಾ ಬೆರಗಾಗುತ್ತಿದ್ದಾರೆ. ಶಿವಲಿಂಗದ ಅಚ್ಚರಿಯನ್ನು ಕಂಡು ಮೂಕ ವಿಸ್ಮಿತರಾಗುತ್ತಿದ್ದಾರೆ.

ಅಂದ್ಹಾಗೆ ಶಿವಲಿಂಗ ಸೃಷ್ಟಿಸುತ್ತಿರುವ ಅಚ್ಚರಿಯಾದ್ರೂ ಏನು ಗೊತ್ತಾ? ದೇಗುಲದ ಗರ್ಭಗುಡಿಯಲ್ಲಿರೊ ಈ ಶಿವಲಿಂಗದ ಮೇಲೆ ನೀರಿನ ಮೂಲಕ ಶುದ್ಧೀಕರಿಸುವ ಕೆಲಸ ನಡೀತಿತ್ತು. ಈ ವೇಳೆ ಶಿವಲಿಂಗದ ಮೇಲೆ ‘ಓಂ’ ಆಕಾರದ ಚಿಹ್ನೆ ಗೋಚರವಾಗುತ್ತಿದೆ. ಇದು ಅಚ್ಚರಿ ಎಂದು ತಿಳಿದ ಪುರೋಹಿತರು, ಮತ್ತೊಮ್ಮೆ ಶಿವಲಿಂಗದ ಮೇಲೆ ನೀರನ್ನು ಹಾಕ್ತಾರೆ. ಆ ನಂತರವೂ ಶಿವಲಿಂಗದ ಮೇಲೆ ಓಂ ಆಕಾರ ಗೋಚರಿಸುತ್ತಿದೆ.

ಶಿವಲಿಂಗದಲ್ಲಿ ಸೃಷ್ಟಿಯಾಗುತ್ತಿರುವ ಈ ಓಂ ಆಕಾರವನ್ನು ಕಂಡು, ಜನರೆಲ್ಲಾ ಮೂಕ ವಿಸ್ಮಿತರಾಗುತ್ತಿದ್ದಾರೆ. ಇದೆಲ್ಲಾ ಶಿವನ ಪವಾಡವೇ ಅಂತ ನಂಬುತ್ತಿದ್ದಾರೆ.

ಹೇಗೆ ಸತ್ತಳು ಗೊತ್ತಾ ಈ ಜಗತ್ ಪ್ರಸಿದ್ಧ ಸುಂದರಿ? ಕೇಳಿದರೆ ಶಾಕ್ ಆಗ್ತೀರಾ..!ಇದು ವಿಜ್ಞಾನ ಮತ್ತು ತಂತ್ರಜ್ಞಾನದ ಯುಗ. ಹಾವು ಕಚ್ಚಿದರೂ ಬದುಕಿಸುವಂತ ಕಾಲ ಇದು ಜೊತೆಗೆ ಮನುಷ್ಯನ ಯಾವುದೇ ಅಂಗ ವಿಫಲವಾದರೂ ಮತ್ತೆ ಆತನನ್ನು ಯತಾಸ್ಥಿತಿಗೆ ತರುವ ಕಾಲ ಇದು. ಇಂಥ ಕಾಲದಲ್ಲಿಯೂ ಕೇವಲ ಒಂದು ಕ್ರಿಮಿ ಕಚ್ಚಿದ್ದಕ್ಕಾಗಿ ಪ್ರಖ್ಯಾತ ಮಾಡೆಲ್ ಒಬ್ಬರು ಇಂದು ಜಗತ್ತಿನಿಂದ ಕಣ್ಮರೆಯಾಗಿದ್ದಾರೆ. ಇಷ್ಟಕ್ಕೂ ಮಾಡೆಲ್ ಯಾರು, ಆಕೆಯನ್ನು ಸಾಯಿಸಿದ ಭಯಾನಕ ಕ್ರಿಮಿ ಯಾವುದು ತಿಳ್ಕೋಬೇಕಾದ್ರೆ ಸ್ಟೋರಿ ಓದಿ.


ಇದು ಟಿಬಿಲಿಸಿಯಾದಲ್ಲಿ ನಡೆದ ದುರಂತ. ಇಲ್ಲಿನ ಜಾರ್ಜಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಜಿ ಮಾಡೆಲ್ ರೆಬೆಕಾ ಝೆನಿ ತಾನು ಜೀವಂತವಾಗಿರುವಾಗಲೇ ಕ್ರಿಮಿಗಳಿಂದ ಕಚ್ಚಿಸಿಕೊಂಡು ಮೃತಪಟ್ಟ ಪ್ರಸಿದ್ಧ ಮಾಡೆಲ್. ಈಕೆ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದುದರಿಂದ ಝೆನಿಯವರ ಮಗಳೇ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಳು. ಆಸ್ಪತ್ರೆಯಲ್ಲಿಯೇ ಝೆನಿಯವರು ಕ್ರಿಮಿಗಳಿಂದ ಕಚ್ಚಿಸಿಕೊಂಡು ಮೃತಪಟ್ಟಿದ್ದಾಳೆ. ಇಷ್ಟಕ್ಕೂ ಭಯಾನಕ ಕ್ರಿಮಿ ಯಾವುದು ಗೊತ್ತಾ?


ಝೆನಿಯವರ ಸಾವಿಗೆ ಕಾರಣವಾದ ಕ್ರಿಮಿ ಸ್ಕಾಬೀಸ್ ಕ್ರಿಮಿ!. ಕ್ರಿಮಿ ಮಾನವನ ದೇಹದ ಮೇಲೆ ಜೀವಿಸಿ ಚರ್ಮದ ಮೇಲಿನಪದರದಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಇದರಿಂದ ರಕ್ತ ವಿಷಗೊಂಡು ಸೋಂಕುತಗಲಿ ವ್ಯಕ್ತಿ ಮೃತಪಡುತ್ತಾನೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.

ಇನ್ಮುಂದೆ FIR ದಾಖಲಿಸಲು ಫಿಜ್ಜಾ ಕೊಡ್ಬೇಕು !


ಇನ್ಮುಂದೆ FIR  ದಾಖಲಿಸಲು ಫಿಜ್ಜಾ ಕೊಡ್ಬೇಕು !


ಪೊಲೀಸರು ಇರೋದು ರಕ್ಷಣೆಗೆ. ನಮಗೆ ಏನೆ ಸಮಸ್ಯೆ , ಕಷ್ಟ ಬಂದ್ರು ಅವರ ಹತ್ತಿರ ಧಾವಿಸಿ ಹೋಗ್ತೀವಿ. ಇದೇ ತರ ತನಗೆ ಸಮಸ್ಯೆ ಬಂದಾಗ ಪೊಲೀಸರ ನೆರವು ಕೇಳಲು ಹೋಗಿದ್ದ ವ್ಯಕ್ತಿಗೆ ಅಲ್ಲೊಂದು ಶಾಕ್ ಕಾದಿತ್ತು. ಯಾಕಂದ್ರೆ  FIR  ದಾಖಲಿಸಲು ವ್ಯಕ್ತಿಗೆ ಪಿಜ್ಜಾ ತರಲು ಹೇಳಿದ್ರು.

ಹೌದು ಇದು ವಿಚಿತ್ರ ಅನ್ನಿಸಿದ್ರು ಸತ್ಯ. ಉತ್ತರ ಪ್ರದೇಶದ ಲಖನೌ ಹಜರತ್ ಗಂಜ್ ಪೊಲೀಸ್ ಠಾಣೆಗೆ ಅಲ್ಲಿನ ರೆಸ್ಟೋರೆಂಟ್ ಮಾಲಿಕನೊಬ್ಬ ದೂರು ದಾಖಲಿಸಲು ಬಂದಾಗ ಅಲ್ಲಿನ ಮಹಿಳಾ ಇನ್ಸ್ಪೆಕ್ಟರ್ ಒಬ್ರು ಪಿಜ್ಜಾ ತೆಗೆದುಕೊಂಡು ಬರುವಂತೆ ಹೇಳಿದ್ರು. FIR ದಾಖಲೆಗಳನ್ನು ತೆಗೆದುಕೊಂಡು ಹೋಗುವಾಗ ಪಿಜ್ಜಾ ತರಬೇಕೆಂದು ಅಲ್ಲಿನ ಮಹಿಳಾ ಇನ್ಸ್ಪೆಕ್ಟರ್ ಹೇಳಿದ್ರು.

ಅಲ್ಲಿನ ಇನ್ಸ್ಪೆಕ್ಟರ್ ಪಿಜ್ಜಾ ಕೇಳಿದ ಉದ್ದೇಶ ವ್ಯಕ್ತಿ ರೆಸ್ಟೋರೆಂಟ್ ಮಾಲಿಕನಾಗಿದ್ದರಿಂದ ಆದ್ರೆ ವಿಷಯ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪಿಜ್ಜಾ ತಂದಿದ್ದಕ್ಕಾಗಿ ಹಣವನ್ನು ಕೂಡ ಪಾವತಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು ಸದ್ಯ ಅವರನ್ನ ಅಮಾನತುಗೊಳಿಸಲಾಗಿದೆ ಎಂದು ಎಸ್ ಎಸ್ ಪಿ ಹಿರೇಂದ್ರ ಕುಮಾರ್ ತಿಳಿಸಿದ್ದಾರೆ.

ಏಪ್ರಿಲ್ 24 ಕ್ಕೆ ಹುಟ್ಟುತ್ತಾನಂತೆ ಒಬ್ಬ ದೇವಮಾನವ!

ಏಪ್ರಿಲ್ 24 ಕ್ಕೆ ಹುಟ್ಟುತ್ತಾನಂತೆ ಒಬ್ಬ ದೇವಮಾನವ? 

ಹೌದು. ಇದೇ ಏಪ್ರಿಲ್ 24ಕ್ಕೆ ಓರ್ವ ಮಹಾಮಹಿಮ ಭೂಮಿ ಮೇಲೆ ಜನಿಸ್ತಾನಂತೆ. ಏಪ್ರಿಲ್ 24 ನಂತರದಲ್ಲಿ ಜಗತ್ತಿನಲ್ಲಿ ಹೊಸ ಶಕ್ತಿಯ ಅವತಾರವಾಗಲಿದೆ ಅಂತ ಕೆಲವರು ಭವಿಷ್ಯ ನುಡೀತಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ‘ಕಾನ್ಸ್ಪಿರೆಸಿ ಥಿಯರಿ'ಯನ್ನ (conspiracy theories) ಬಲವಾಗಿ ನಂಬಲಾಗುತ್ತೆಇದೇ ಥೆಯರಿಯಲ್ಲಿರೋ ಸರಣಿ ಸಿದ್ಧಾಂತಗಳೇ  ಬಾರಿ ಭೂಮಿಯ ಅಂತ್ಯವಾಗೋದು ಅಂತಾ ಹೇಳಲಾಗ್ತಿದೆಇಲ್ಲಿನ ಜನರು ನಂಬುವ ರಿವಿಲೇಷನ್​​ ಪುಸ್ತಕದ 12ನೇ ಪುಟದ 1ನೇ ಪ್ಯಾರಾದಲ್ಲಿ  ಭೂಮಿಯ ವಿನಾಶದ ಬಗ್ಗೆ ಹೇಳಲಾಗಿದೆಯಂತೆ.

ಇದೇ ಎಪ್ರಿಲ್​ 23ಕ್ಕೆ  ಭೂಮಿ ಹೊತ್ತಿ ಉರಿಯುತ್ತೆನೋಡ ನೋಡ್ತಿದ್ದಂತೆ ಭೂಮಂಡಲ ನಾಶವಾಗುತ್ತೆಜೊತೆಗೆ ಹೊಸ ಜಗತ್ತು ಕೂಡಾ ಆಗಲೇ ಸೃಷ್ಟಿಯಾಗುತ್ತೆ ಅಂತ ಕಾನ್ಸ್ಪಿರೆಸಿ ಥಿಯರಿ'ಯಲ್ಲಿ ಉಲ್ಲೇಖಿಸಲಾಗಿದೆಯಂತೆಅಷ್ಟೇ ಅಲ್ಲ ಅಲ್ಲಿನ ಧಾರ್ಮಿಕ ವಿದ್ವಾಂಸಕರು ಹೇಳಿರೋ ಪ್ರಕಾರ   ಭೂಮಿಯ ಅಂತ್ಯದ ವೇಳೆ ಸಕಲ ಜೀವರಾಶಿಗಳು ಸರ್ವನಾಶವಾಗಿ ಕೊನೆಗೆ ಉಳಿಯೋದು ಬರೀ ಶೂನ್ಯ.ಆಗ ಮತ್ತೆ ಸೃಷ್ಟಿಯ ಮರುಹುಟ್ಟು ಆಗುತ್ತಂತೆಆಗ ಓರ್ವ ಶಾಂತಿಧೂತ ಜನಿಸುತ್ತಾನಂತೆ ಶಾಂತಿ ಧೂತ ಯಾರು ಗೊತ್ತಾಏಸು ಕ್ರಿಸ್ತ ಅಂತ ನಂಬಲಾಗುತ್ತಿದೆ

ಏಪ್ರಿಲ್ 23 ನಂತರದಲ್ಲಿ ಭೂಮಿಗೆ ಕಂಟಕ ಎದುರಾಗಲಿದೆಆಗ 2ನೇಬಾರಿ ಯೇಸು ಕ್ರಿಸ್ತನ ಜನನವಾಗುತ್ತಂತೆ ಏಸು ಕ್ರಿಸ್ತನಿಂದಲೇ  ಭೂಮಿಯಲ್ಲಿ ಮತ್ತೆ ಶಾಂತಿ ಪ್ರೀತಿ ಮನೆಮಾಡುತ್ತಂತೆ.
ಜಗತ್ತನ್ನು ಕಾಡುತ್ತಿದೆ ಹೊಸ ಸಾವಿನ ಗೇಮ್. ಏನಿದು ಐರನ್ ಬೂಟ್ ಗೇಮ್ ?
ಕೆಲ ದಿನಗಳ ಹಿಂದೆ ಬ್ಲೂವೇಲ್ ಗೇಮ್ ಅನ್ನೋದು ಜನರನ್ನ ಬೆಚ್ಚಿ ಬೀಳಿಸಿತ್ತು. ಆಟದ ನೆಪದಲ್ಲಿ ಸಾಲು ಸಾಲು ಜೀವಗಳನ್ನು ಬಲಿ ತೆಗೆದುಕೊಳ್ತಿತ್ತು. ಗೇಮ್. ಆದ್ರೀಗ ಬ್ಲೂವೇಲ್ ಥರದ್ದೇ ಮತ್ತೊಂದು ಗೇಮ್ ಹುಟ್ಟಿಕೊಂಡಿದೆ. ಗೇಮ್ ಗೆ ಇದೀಗ ಕೇರಳದ ಯುವಕನೇ ಬಲಿಯಾಗಿದ್ದಾನೆ. ಅಂದ್ಹಾಗೆ ಯುವಕ ಗೇಮ್ ಆಡ್ತಾ ಆಡ್ತಾ ಸತ್ತಿದ್ದು ಎಲ್ಲಿ ಗೊತ್ತಾ? ಕರ್ನಾಟಕದಲ್ಲಿ. ಅದೂ ಚಿತ್ರದುರ್ಗದಲ್ಲಿ.

ಅಂದ್ಹಾಗೆ ಕೇರಳದ ಯುವಕ ಸತ್ತಿದ್ದು ಬ್ಲೂವೇಲ್ ಥರಾನೇ ಸಾವಿನ ಗೇಮ್ ಅನ್ನಿಸಿಕೊಂಡಿರೋ ಐರನ್ ಗೇಮ್ ನಿಂದ. ಐರನ್ ಬೂಟ್ ಗೇಮ್ ಅಂದ್ರೆ ಏನು ಅನ್ನೋದು ಬಹುಶಃ ಕೇಳಿರ್ಲಿಕ್ಕಿಲ್ಲ. ಐರನ್ ಬೂಟ್ ಗೇಮ್ ನಿಂದಾಗಿ ಕೇರಳದ ಯುವಕನೊಬ್ಬ ಚಿತ್ರದುರ್ಗದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೇಮ್ ನಿಂದ ಸಾಧನೆಯ ಮೆಟ್ಟಿಲು ತಲುಪಬೇಕೆಂದುಕೊಂಡಿದ್ದ ಯುವಕ ಗೇಮ್ ನಿಂದಾಗಿ ಸಾವಿನ ತೊಟ್ಟಿಲನ್ನು ಸೇರುವಂತಾಗಿದೆ.

ಐರನ್ ಬೂಟ್ ಗೇಮ್ ಎನ್ನುವುದು ಅಮೇರಿಕಾ ದೇಶ ನಡೆಸಿಕೊಡುವ ಆನ್ ಲೈನ್ ಬೈಕ್ ಗೇಮ್ ಆಗಿದ್ದು, 24 ಗಂಟೆಯಲ್ಲಿ 1624 ಕಿ.ಮೀ.ದೂರ ಬೈಕ್ ಸವಾರಿ ನಡೆಸುವ ಗುರಿ ಹೊಂದಿದೆ. ಮೊದಲು ಬೈಕ್ ಮೀಟರ್ ಬೋರ್ಡ್ ಫೋಟೋ ತೆಗೆದು ಅದನ್ನು ಆನ್ ಲೈನ್ ವಿಳಾಸಕ್ಕೆ ಅಪ್ಲೋಡ್ ಮಾಡಬೇಕು. ಬಳಿಕ ಗೇಮ್ ನಲ್ಲಿ ಭಾಗವಹಿಸುವ ವ್ಯಕ್ತಿ ತನ್ನ ಪಯಣವನ್ನ ಆರಂಭಿಸಬೇಕು. 24 ಗಂಟೆಯ ನಂತರ ತಾನು ಪ್ರಯಾಣಿಸಿದ ಕಿ.ಮೀ ಎಷ್ಟು ಎಂಬುದನ್ನು ಖಚಿತಪಡಿಸಲು ಮತ್ತೆ ಕಿ.ಮೀ ಬೋರ್ಡ್ ಅನ್ನು ಆನ್ ಲೈನ್ ವಿಳಾಸಕ್ಕೆ ಅಪ್ಲೋಡ್ ಮಾಡಬೇಕು. ಒಂದು ವೇಳೆ ಅವರ ಪ್ರಯಾಣ 24 ಗಂಟೆಯಲ್ಲಿ 1624 ಕಿ.ಮೀ ಆದಲ್ಲಿ ವ್ಯಕ್ತಿಗೆ ಐರನ್ ಬೂಟ್ ತಂಡದ ಸದಸ್ಯತ್ವ ಸಿಗುತ್ತದೆ.

ಐರನ್ ಬೂಟ್ ಗೇಮ್ ಚಾಲೆಂಜ್ ಪಡೆದಿದ್ದ ಕೇರಳದ ಮಿಥುನ್ ಎಂಬ ಯುವಕ ಕೊಯಂಬತೂರ್ ಮಾರ್ಗವಾಗಿ ಬೆಂಗಳೂರು, ಹುಬ್ಬಳ್ಳಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದ. ಪಯಣದ ವೇಳೆ ಮಾರ್ಗಮಧ್ಯ ಚಿತ್ರದುರ್ಗದಲ್ಲಿ ತನ್ನ ಜೀವನದ ಪಯಣವನ್ನೇ ಮುಗಿಸಿಬಿಟ್ಟ.

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು