Recent Movies

ಸಿನೆಮಾ

Share This Article To your Friends

Showing posts with label ವಿದ್ಯುಮಾನಗಳು. Show all posts
Showing posts with label ವಿದ್ಯುಮಾನಗಳು. Show all posts

ಪೀಸ್ ಪೀಸ್ ಆಗುತ್ತಾ ತಾಜ್​ ಮಹಲ್? ಧರೆಗೆ ಉರುಳುತ್ತಾ ಜಗತ್ತಿನ ಏಳನೇ ಅದ್ಭುತ?

  ಪೀಸ್ ಪೀಸ್ ಆಗುತ್ತಾ ತಾಜ್​ ಮಹಲ್?

 ಧರೆಗೆ ಉರುಳುತ್ತಾ ಜಗತ್ತಿನ ಏಳನೇ ಅದ್ಭುತ?


ಪ್ರೀತಿಯ ಸಂಕೇತವಾಗಿರೋ ತಾಜ್ಮಹಲ್​​ ಪೀಸ್ ಪೀಸ್ ಆಗುತ್ತಾ? ಪ್ರೇಮಸೌಧ ಧರೆಗುರುಳುತ್ತಾ? ಶಹಜಹಾನ್​​ ಲವ್ಸ್ಟೋರಿ ಎಂಡ್ ಆಗುತ್ತಾ? ಇಂಥದ್ದೊಂದು ಆತಂಕ ಇದೀಗ ಎಲ್ಲರನ್ನ ಕಾಡ್ತಾ ಇದೆ. ಯಾಕಂದ್ರೆ ಪ್ರೇಮ ಸ್ಮಾರಕ ತಾಜ್ ಮಹಲ್ಕೆಡವೋದಕ್ಕೆ ಪ್ಲಾನ್ ನಡೀತಿದೆ. ಒಂದು ವೇಳೆ ಲೆಕ್ಕಾಚಾರಗಳು ವಾಸ್ತವಕ್ಕೆ ತಿರುಗಿದ್ದೇ ಆದ್ರೆ, ಆಗ್ರಾದಲ್ಲಿರೋ ಪ್ರೇಮಪುರದಲ್ಲಿ ಪ್ರೇಮ ಸ್ಮಾರಕವೇ ಇರೋದಿಲ್ಲ

Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು


ಪ್ರೇಮಸೌಧಕ್ಕೂ ಅಂಟಿಕೊಂಡಿತ್ತು ವಿವಾದಗಳ ನಂಟು!
ವಿವಾದಗಳಿಂದಲೇ ತತ್ತರಿಸಿತ್ತು ಆಗ್ರೇಶ್ವರನ ಆಲಯ..!

ತಾಜ್ಮಹಲ್​​​ ಶುಭ್ರವಾಗಿ ನಿಂತಿದ್ರೂ, ಶ್ವೇತವರ್ಣದ ನಡುವಲ್ಲೇ ವಿವಾದದ ಚುಕ್ಕೆಗಳು ಅಂಟಿಕೊಂಡಿವೆ. ಇತಿಹಾಸದ ಪುಟಗಳಿಂದ, ಇವತ್ತಿನವರೆಗೂ ತಾಜ್ ಮಹಲ್​​ ಸುತ್ತ ವಿವಾದಗಳೇ ಸದ್ದು ಮಾಡ್ತಿವೆ. ಅಂಥಾ ವಿವಾದಗಳಲ್ಲಿ ಒಂದು ಇದು ಶಿವನ ದೇಗುಲ ಅನ್ನೋದು.. 


ಇದು ಶಹಜಹಾನ್ ಕಟ್ಟಿಸಿದ ಪ್ರೇಮ ಸೌಧ ಅಂಥ ಎಲ್ರೂ ಹೇಳ್ತಾರೆ. ಆದ್ರೆ ಪ್ರೇಮಸೌಧ ನಿರ್ಮಾಣವಾಗಿರೋದು ಶಿವನ ಆಲಯದಲ್ಲಿ ಅಂತಾನೂ ಸುದ್ದಿ ಇದೆ. ಆಗ್ರಾ ಅನ್ನೋದು ಅಗ್ರೇಶ್ವರ ನೆಲೆಸಿದ ಸ್ಥಾನ. ಅಂದ್ರೆ ಸಾಕ್ಷಾತ್ ಶಿವ ನೆಲೆಸಿದ ಪುಣ್ಯ ಭೂಮಿ ಇದು.. ಅಗ್ರೇಶ್ವರನ ನೆಲೆಸಿದ ಪುಣ್ಯಭೂಮಿಯಲ್ಲಿ ಅತಿ ದೊಡ್ಡ ಶಿವನ ದೇಗುಲವಿತ್ತು. ದೇಗುಲವೇ ತಾಜ್ ಮಹಲ್ ಆಗಿದೆ ಅನ್ನೋದು ಹಲವರ ಆರೋಪ..

ಇದು ತಾಜ್ ಮಹಲ್ ಅಲ್ಲ.. ಇದು ತೇಜೋ ಮಹಾಲಯ.. ಅಂದ್ರೆ ಇದು ಹಿಂದೂ ದೇವಸ್ಥಾನ ಆಗಿತ್ತು.. ಆದ್ರೆ  ಶಹಜಹಾನ್ ಪ್ರದೇಶದ ಮೇಲೆ ದಾಳಿ ಮಾಡಿ, ಅಗ್ರೇಶ್ವರ ನೆಲೆಸಿದ ನೆಲವನ್ನ ವಶಪಡಿಸಿಕೊಂಡ. ನಂತರ ತೇಜೋ ಮಹಲ್ಅನ್ನ ತಾಜ್ ಮಹಲ್ ಆಗಿ ಬದಲಾಯಿಸಿದ ಅನ್ನೋದು ಹಲವರ ಮಾತು.. ಸದ್ಯಕ್ಕೇನೋ ಶಹಜಹಾನ್ ಪ್ರೇಮಸೌಧ ಅಂತಾನೇ ಅಧಿಕೃತವಾಗಿ ಗುರ್ತಿಸಿಕೊಂಡಿದ್ರೂ, ಇದು ಶಿವನ ತೇಜೋಮಹಲ್ ಅನ್ನೋ ವಾವದನ್ನ ಇವತ್ತಿಗೂ ಮಂಡಿಸ್ತಿದ್ದಾರೆ ಅದೆಷ್ಟೋ ಜನ..
ಯೋಗಿ ಆದಿತ್ಯನಾಥ್ ​​ ಉತ್ತರ ಪ್ರದೇಶದ ಸಿಎಂ ಆದ ನಂ, ತಾಜ್ ಮಹಲ್​​ ಮತ್ತೆ ವಿವಾದದ ಕೇಂದ್ರಬಿಂದುವಾಗಿತ್ತು.. ಮೊದಲಿಂದಲೂ ತಾಜ್ ಮಹಲ್ಅನ್ನ ಪ್ರೇಮಸೌಧ ಅಂತ ಒಪ್ಪೋದಕ್ಕೆ ತಯಾರಿಲ್ಲದ ಯೋಗಿ, ಇದನ್ನ ತೇಜೋ ಮಹಲ್​​.. ಇದು ಶಿವನ ದೇವಾಲಯ ಅಂತಾನೇ ಹೇಳ್ತಾ ಬಂದಿದ್ರು.. ಯೋಗಿಯ ಮಾತುಗಳು ತಾಜ್ಮಹಲ್​​ ಇರುವಿಕೆಯನ್ನೇ ಪ್ರಶ್ನಿಸುವಂತಿತ್ತು. ಇದರ ನಡುವಲ್ಲೇ ಯೋಗಿ ಉತ್ತರ ಪ್ರದೇಶದ ಸಿಎಂ ಆದ್ರು.. ಸಿಎಂ ಆದ ಕೂಡ್ಲೇ ಯೋಗಿ ಕಣ್ಣು ಬಿದ್ದಿದ್ದು  ತಾಜ್ ಮಹಲ್ಮೇಲೇನೇ.ಇದು ನಮ್ಮ ಸಂಸ್ಕೃತಿಯ ಪ್ರತೀಕ ಅಲ್ವೇ ಅಲ್ಲ ಅಂದಿದ್ರು.. ಇಷ್ಟೇ ಅಲ್ಲ.. ವಿಶ್ವದ ಏಳನೇ ಅದ್ಭುತಗಳಲ್ಲಿ ಒಂದಾಗಿರೋ ತಾಜ್ಮಹಲ್​​ ಅನ್ನ, ಉತ್ತರಪ್ರದೇಶದ ಪ್ರವಾಸಿ ತಾಣಗಳ ಪಟ್ಟಿಯಿಂದಲೇ ಕೈ ಬಿಟ್ಟಿದ್ರು..


Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು
ಯೋಗಿ ಆದಿತ್ಯನಾಥ್​​ ಸಿಎಂ ಆದ ನಂ, ತಾಜ್ಮಹಲ್​​ಗೆ ಏನಾಗುತ್ತೋ ಏನೋ ಅನ್ನೋ ಆತಂಕ ಸೃಷ್ಟಿಯಾಗಿತ್ತು.. ಆದ್ರೆ ಇತ್ತೀಚಿನ ದಿನಗಳಲ್ಲಿ ವಿವಾದ ತಣ್ಣಗಾಗಿತ್ತು. ಇನ್ನೇನು ಎಲ್ಲವೂ ಕೂಲಾಯ್ತು ಅಂತಿರುವಾಗ್ಲೇ, ತಾಜ್ಮಹಲ್​​​ ಪೀಸ್ ಪೀಸ್ ಆಗುತ್ತೆ ಅನ್ನೋ ಸುದ್ದಿ ಓಡಾಡ್ತಿದೆ. ಇನ್ನು ಕೆಲವೇ ದಿನಗಳಲ್ಲಿ ತಾಜ್ ಮಹಲ್​​ ತುಂಡು ತುಂಡಾಗಿ ಧರೆಗುರುಳೋ ಸಾಧ್ಯತೆ ಇದೆ.. ಅಂದ್ಹಾಗೆ ತಾಜ್ ಮಹಲ್​​ ಪೀಸ್ ಪೀಸ್  ಆದ್ರೆ, ಅದಕ್ಕೆ ಕಾರಣ ಯೋಗಿ ಆದಿತ್ಯನಾಥ್ಅಂತ ಅನ್ಕೋಬೇಡಿ.. ಯಾಕಮದ್ರೆ, ತಾಜ್ ಮಹಲ್​​ ಪೀಸ್ ಪೀಸ್ ಆಗೋದಕ್ಕೂ, ಯೋಗಿಗೂ ಸಂಬಂಧವಿಲ್ಲ.. ಯಾಕಂದ್ರೆ ತಾಜ್ಮಹಲ್​​ ಕಣ್ಮರೆಯಾಗೋದಕ್ಕೆ ಕಾರಣ, ಇಲ್ಲಿ ಹೆಚ್ಚಾಗ್ತಿರೋ ಪ್ರವಾಸಿಗರ ಸಂಖ್ಯೆ..

ಹೆಚ್ಚಾಗುತ್ತಿದೆ ತಾಜ್​​ಮಹಲ್​​ಗೆ ಬರೋ ಪ್ರವಾಸಿಗರ ಸಂಖ್ಯೆ!
ಜನಸಂದಣಿ, ವಾಹನ ದಟ್ಟಣೆ ಕಡಿಮೆ ಮಾಡಲು ನಡೆದಿದೆ ಪ್ಲಾನ್!

ಆಗ್ರಾದ ಹೊರವಲಯಕ್ಕೆ ತಾಜ್ ಮಹಲ್​​ ಶಿಫ್ಟ್ ಮಾಡಲು ಚಿಂತನೆ!
ಅದು ಸಾಧ್ಯವಾಗದಿದ್ರೆ ಜಮುನಾ ನದಿ ಪಕ್ಕಕ್ಕೆ ತಾಜ್​​ ಶಿಫ್ಟ್​​..!

ತಾಜ್ಮಹಲ್​​ ಇರೋದು ಆಗ್ರಾದ ಹೃದಯ ಭಾಗದಲ್ಲಿ.. ಜಗತ್ತಿನ ಏಳನೇ ಅದ್ಭುತ ಎನಿಸಿರೋ ತಾಜ್​​​ ಮಹಲ್​​ ಅನ್ನ ನೋಡೋದಕ್ಕೆ, ಜಗತ್ತಿನ ಮೂಲೆ ಮೂಲೆಗಳಿಂದ ಜನ ಬರ್ತಾರೆ. ಪ್ರವಾಸಿಗರ ಸಂಖ್ಯೆಯಲ್ಲಿ ದಿನೇ ದಿನೆ ಹೆಚ್ಚಳವಾಗ್ತಿರೋದ್ರಿಂದ, ಇಲ್ಲಿ ಜನಸಂದಣಿ ಹೆಚ್ಚಾಗ್ತಿದೆ. ವಾಹನ ದಟ್ಟಣೆನೂ ಜಾಸ್ತಿಯಾಗ್ತಿದೆ. ಜನ ಓಡಾಡೋದಕ್ಕೂ ಕಷ್ಟ ಆಗ್ತಿದೆ.. ಇಷ್ಟೆ ಅಲ್ಲ.. ವಾಹನಗಳು ಓಡಾಟಕ್ಕೆ ದೊಡ್ಡ ಮಟ್ಟದ ಸಮಸ್ಯೆ ಆಗ್ತಿದೆ. ಹೀಗಾಗಿ ಸಮಸ್ಯೆ ನಿವಾರಣೆ ಆಗ್ಬೇಕು ಅಂದ್ರೆ, ಇಡೀ ತಾಜ್ಮಹಲ್ಅನ್ನೇ ಆಗ್ರಾದ ಹೊರ ವಲಯಕ್ಕೆ ಶಿಫ್ಟ್ ಮಾಡಬೇಕು ಅನ್ನೋ ಲೆಕ್ಕಾಚಾರ ನಡೆದಿದೆ. 

Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ತಾಜ್ ಮಹಲ್ ಇರೋದು ಜಮುನಾ ನದಿಯ ತಟದಲ್ಲಿ. ಇಲ್ಲಿಂ ತಾಜ್ ಮಹಲ್ ಅನ್ನ ಆಗ್ರಾದ ಹೊರ ಭಾಗಕ್ಕೆ ಶಿಫ್ಟ್ ಮಾಡಬೇಕು ಅನ್ನೋ ಲೆಕ್ಕಾಚಾರವಿದೆ. ಒಂದು ವೇಳೆ ಅಷ್ಟು ದೂರಕ್ಕೆ ತಾಜ್ ಮಹಲ್ ಅನ್ನ ಶಿಫ್ಟ್ ಮಾಡೋದಕ್ಕೆ ಸಾಧ್ಯವಾಗದೇ ಇದ್ರೆ, ಜಮುನಾ ನದಿಯ ಎಡಭಾಗದಿಂದ ಬಲಭಾಗದತ್ತ ಶೀಪ್ಟ್​​ ಮಾಡೋ ಲೆಕ್ಕಾಚಾರವಿದೆ. ನದಿ ಪಕ್ಕಕ್ಕೆ ತಾಜ್ ಮಹಲ್ ಶಿಫ್ಟ್ ಆದ್ರೆ, ಇಲ್ಲಿ ಗೆ ಬರೋ ಮಾರ್ಗವೂ ಬದಲಾಗುತ್ತೆ.. ಆಗ ಟ್ರಾಫಿಕ್ ಅಟೋಮೆಟಿಕ್ ಆಗಿ ಕಡಿಮೆಯಾಗುತ್ತೆ..

ಆಧುನಿಕ ಟೆಕ್ನಾಲಜಿ ಬಳಸಿ ತಾಜ್ಮಹಲ್ ಶಿಫ್ಟ್​..?

ಇಡೀ ಕಟ್ಟಡವನ್ನೇ ಬುಡ ಸಮೇತ ಎತ್ಕೊಂಡ್​​ ಹೋಗುವಂಥಾ ಟೆಕ್ನಾಲಜಿ ಆಲ್ರೆಡಿ ವಿದೇಶದಲ್ಲಿ ಬಂದಾಗಿದೆ. ಟೆಕ್ನಾಲಜಿ ಬಳಸಿಕೊಂಡೇ, ದೊಡ್ಡ ದೊಡ್ಡ ಕಟ್ಟಡಗಳನ್ನ ಬೇರೆ ಕಡೆ ಶಿಫ್ಟ್ ಮಾಡಲಾಗಿದೆ. ಈಜಿಪ್ಟ್​​ನಲ್ಲಿ ಬೃಹದಾಕಾರವಾದಂಥಾ ಪಿರಮಿಡ್ ಅನ್ನ ಯಶಸ್ವಿಯಾಗಿ ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಇದೇ ಟೆಕ್ನಾಲಜಿಯನ್ನ ಬಳಸಿಕೊಂಡು ಹಲವು ದೇಗುಲಗಳನ್ನೂ  ಶಿಫ್ಟ್ ಮಾಡಲಾಗಿದೆ. ಇದನ್ನೇ ಈಗ ತಾಜ್ ಮಹಲ್​​  ಶಿಫ್ಟ್ ಮಾಡೋದಕ್ಕೆ ಬಳಸಿಕೊಳ್ಳೋ ಸಾಧ್ಯತೆ ಇದೆ ಅಂತ ಅಂದಾಜಿಸಲಾಗ್ತಿದೆ..

Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು


ಭಾರತದ ಹಲವು ದೇಗುಲಗಳನ್ನೂ ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಹಲವು ಕಟ್ಟಡಗಳನ್ನ ಬೇರೆ ಕಡೆ ಶಿಫ್ಟ್ ಮಾಡಲಾಗಿದೆ. ಇಷ್ಟೇ ಅಲ್ಲ. ಶ್ರೀರಂಗಪಟ್ಟಣದಲ್ಲಿದ್ದ ಟಿಪ್ಪು ಸುಲ್ತಾನ್​​ ಶಸ್ತ್ರಾಗಾರವನ್ನು ಶಿಫ್ಟ್ ಮಾಡಿದ್ದು ಇಂಥದ್ದೇ ಟೆಕ್ನಾಲಜಿಯನ್ನ ಬಳಸ್ಕೊಂಡು. ಟೆಕ್ನಾಲಜಿ ಬಳಸಿಕೊಂಡೇ ತಾಜ್ ಮಹಲ್ ಅನ್ನ ಶಿಫ್ಟ್ ಮಾಡೋ ಲೆಕ್ಕಾಚಾರವಿದೆ. ಆದ್ರೆ ಥರ ಶಿಫ್ಟ್ ಮಾಡುವಾಗ ಸ್ವಲ್ಪ ಯಾಮಾರಿದ್ರೂ ಇಡೀ ಕಟ್ಟಡವೇ ನೆಲಸಮವಾಗೋ ಸಾಧ್ಯತೆನೂ ಇದೆ. ಹೀಗಾಗಿ ತಜ್ಞರು ಇನ್ನೊಂದು ಉಪಾಯವನ್ನೂ ಕಂಡುಕೊಳ್ತಿದ್ದಾರೆ


ತಾಜ್ಮಹಲ್ಕಟ್ಟಡವನ್ನು ತುಂಡು ತುಂಡಾಗಿಸ್ತಾರಾ..?
ಬಿಡಿ ಭಾಗಗಳನ್ನು ಹೊತ್ತೊಯ್ದು ಬೇರೆಡೆ ಮರುನಿರ್ಮಾಣ?

ಆಧುನಿಕ ಟೆಕ್ನಾಲಜಿ ಬೇಡ ಅಂದ್ರೆ, ತಾಜ್ ಮಹಲ್ ಅನ್ನ ಶಿಫ್ಟ್ ಮಾಡೋದಕ್ಕೆ ಬೇರೊಂದು ಉಪಾಯವಿದೆ. ತಾಜ್ ಮಹಲ್ ಅನ್ನ ತುಂಡು ತುಂಡಾಗಿ ಕತ್ತರಿಸಿ, ಭಾಗಗಳನ್ನು ಬೇರೆ ಕಡೆ ಹೊತ್ತೊಯ್ದು, ಅದನ್ನು ಅಲ್ಲಿ ಮರು ಜೋಡಣೆ ಮಾಡೋ ಪ್ಲಾನ್ ಕೂಡ ಇದೆ. ಹೀಗೆ ಮಾಡಿದ್ರೆ, ತಾಜ್ ಮಹಲ್ಅನ್ನ ಬೇರೆ ಕಡೆ ಎಲ್ಲಿ ಬೇಕಾದ್ರೂ ಸುಲಭವಾಗಿ ಶಿಫ್ಟ್ ಮಾಡಬಹುದು ಅನ್ನೋ ಲೆಕ್ಕಾಚಾರವಿದೆ. 


ಹಿಂದೆ ಈಜಿಪ್ಟ್ನಲ್ಲಿನ ಒಂದು ಮಂದಿರವನ್ನ 800ಕ್ಕೂ ಹೆಚ್ಚು ಭಾಗಗಳಾಗಿ ತುಂಡರಿಸಿ, ಅದನ್ನ ಬೇರೆ ಕಡೆ ತಗೊಂಡ್ ಹೋಗಿ ಮರುಜೋಡಣೆ ಮಾಡಲಾಗಿತ್ತು. ಈಗ ಅದೇ ಥರ ತಾಜ್ ಮಹಲ್ಅನ್ನ ತುಂಡು ತುಂಡಾಗಿ ಕತ್ತರಿಸಿ, ಭಾಗಗಳನ್ನ ಬೇರೆ ಪ್ರದೇಶಗಳಿಗೆ ಸಾಗಿಸಿ, ಅಲ್ಲಿ ಮರುಜೋಡಣೆ ಮಾಡೋ ಆಲೋಚನೆನೂ ಇದೆ..


Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು
ತಾಜ್ ಮಹಲ್ಭವ್ಯ ನಿರ್ಮಾಣವಾಗಿದೆ. ಜಗತ್ತಿನ ಏಳನೇ ಅದ್ಭುತವನ್ನ ತುಂಡು ತುಂಡಾಗಿ ಕತ್ತರಿಸೋದಕ್ಕೆ ಹಲವರಿಂದ ವಿರೋಧವಿದೆ. ಇನ್ನು ಆಧುನಿಕ ಟೆಕ್ನಾಲಜಿ ಮೂಲಕ ಶಿಫ್ಟ್ ಮಾಡೋದ್ರಿಂದಾನೂ, ತಾಜ್ಮಹಲ್​​ಗೆ ಧಕ್ಕೆಯಾಗೋ ಆತಂಕ ಇದೆ. ಹೀಗಾಗಿ ಯಾವ ರೀತಿ ತಾಜ್ ಮಹಲ್ಶಿಫ್ಟ್ ಮಾಡ್ತಾರೋ, ಯಾವ ರೀತಿ ಪ್ರೇಮಸೌಧವನ್ನ ಸ್ಥಳಾಂತರಿಸ್ತಾರೋ, ಯಾವ ರೀತಿ ಸಮಸ್ಯೆಯನ್ನ ಉತ್ತರ ಪ್ರದೇಶ ಸರ್ಕಾರ ನಿಭಾಯಿಸುತ್ತೋ ಕಾದು ನೋಡಬೇಕಿದೆ..

Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು