Recent Movies

ಸಿನೆಮಾ

Share This Article To your Friends

Showing posts with label ರಾಜಕೀಯ. Show all posts
Showing posts with label ರಾಜಕೀಯ. Show all posts

ಸಿಎಂ ಆಗೋಕೆ ರೆಡಿಯಾಗಿ ಎಂದು ಬಿಎಸ್ವೈಗೆ ಫೋನ್ ಮಾಡಿ ಹೇಳಿದ ಕಾಂಗ್ರೆಸ್ ನಾಯಕ..!


ಸಿಎಂ ಆಗೋಕೆ ರೆಡಿಯಾಗಿ ಎಂದು ಬಿಎಸ್ವೈಗೆ

ಫೋನ್ ಮಾಡಿ ಹೇಳಿದ ಕಾಂಗ್ರೆಸ್ ನಾಯಕ..!


ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸ್ತಾ ಇದೆ. ಅತೃಪ್ತರನ್ನು ಸಮಾಧಾನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಎಷ್ಟೇ ಟ್ರೈ ಮಾಡಿದರೂ ಅದು ಸಾಧ್ಯವಾಗುತ್ತಿಲ್ಲ.  ಇದರ ನಡುವಲ್ಲೇ ಇಲ್ಲಿನ ಸಹವಾಸವೇ ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಗೆ ಹೋಗಿ ಕುಳಿತಿದ್ದರು. ಇತ್ತ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಕೂಡ  ಸೈಲೆಂಟಾಗಿಬಿಟ್ಟಿದ್ದರು. 


ಇಂಥಾ ಟೈಮಲ್ಲಿ ಅತೃಪ್ತರನ್ನು ಕಟ್ಟು ಹಾಕುವುದು ಕಷ್ಟ ಎಂಬುದು ಕಾಂಗ್ರೆಸ್ ಒಳಗಿನವರೇ ಮಾತನಾಡಿಕೊಳ್ಳೋದಕ್ಕೆ ಶುರು ಮಾಡಿದ್ದರು. ಇನ್ನು ಪಕ್ಷಗಳು ಬೇರೆಯಾದರೂ  ಒಳಗೊಳಗೆ ಎಲ್ಲರೂ ಗೆಳೆಯರ ಥರ ಇರುತ್ತಾರೆ ಎಂಬುದು ಜಗತ್ತಿಗೇ ಗೊತ್ತಿರುವಂಥಾ ಸತ್ಯ. ಮೇಲ್ನೋಟಕ್ಕೆ ದ್ವೇಷಿಗಳಂತೆ ಕಾಣಿಸಿದರು, ಒಳಗೊಳಗೇ ಉತ್ತಮ  ಸಂಬಂಧವನ್ನು ಹೊಂದಿರುತ್ತಾರೆ ಎಲ್ಲಾ ಪಕ್ಷಗಳ ನಾಯಕರು. ಇದೇ ಥರ ಬಿಜೆಪಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ ಒಬ್ಬ ಕಾಂಗ್ರೆಸ್ ನಾಯಕ ಬಿಜೆಪಿಯ ಮತ್ತೊಬ್ಬ  ನಾಯಕನಿಗೆ ಕರೆ ಮಾಡಿದ್ದು, ಭಿನ್ನಮತ ಶಮನವಾಗುತ್ತಿಲ್ಲ. ಕೇಂದ್ರದ ಮಾತಿಗೂ ಬಗ್ಗುತ್ತಿಲ್ಲ. ಸಿದ್ದರಾಮಯ್ಯ, ಡಿಕೆಶಿವಕುಮಾರ್ ಭಿನ್ನಮತ ಶಮನಕ್ಕೆ ಬರ್ತಾನೇ ಇಲ್ಲ. ಇದೆಲ್ಲಾ  ನೋಡಿದ್ರೆ, ಭಿನ್ನಮತೀಯರು ಸರ್ಕಾರ ಬೀಳಿಸುವ ಸಾಧ್ಯತೆ ಇದೆ ಎಂದು ಫೋನ್ ನಲ್ಲಿ ಮಾತನಾಡಿದ್ದರಂತೆ.


ಇನ್ನು ಇಷ್ಟೆಲ್ಲಾ ಮಾತನಾಡುತ್ತಿದ್ದಾಗಲೇ ಬಿಜೆಪಿ ನಾಯಕ ಹಾಗಿದ್ದರೆ ಬಿಜೆಪಿ ಕಡೆ ಬರುವವರು ಯಾರಾದರೂ ಇದ್ದಾರಾ ಎಂದು ಪ್ರಶ್ನೆ ಮಾಡಿದ್ದರಂತೆ. ಆಗ ಕಾಂಗ್ರೆಸ್ ನಾಯಕ,  ಭಿನ್ನಮತ ಶಮನವಾಗದೇ ಇದ್ದರೆ ಏನು ಬೇಕಾದ್ರೂ ಆಗಬಹುದು. ಸಿಟ್ಟಿನಲ್ಲಿ ಭಿನ್ನಮತೀಯರೆಲ್ಲರೂ ಎಲ್ಲಿ ಬೇಕಾದರೂ ಹೋಗಬಹುದು. ಹಂಗೇನಾದ್ರೂ ಆಗಿದ್ದೇ ಆದ್ರೆ,  ಬಿಎಸ್ವೈಗೆ ಯಾವುದಕ್ಕೂ ರೆಡಿಯಾಗಿರೋದಕ್ಕೆ ಹೇಳಿ. ಮತ್ತೊಮ್ಮೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸೋದಕ್ಕೆ ಸಿದ್ಧವಾಗಿದ್ರೆ ಒಳ್ಳೇದು ಎಂದರಂತೆ.


ಇಷ್ಟು ಮಾತುಕಥೆಗಳು ನಡೆಯುತ್ತಿದ್ದಂತೆ, ಇಬ್ಬರೂ ನಾಯಕರು ನಕ್ಕು ಸುಮ್ಮನಾದರೆಂತೆ. ಹೀಗಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಫೋನ್ ಸಂಭಾಷಣೆ  ನಡೆದಿತ್ತು ಎಂಬ ಸುದ್ದಿಗಳು ಅಲ್ಲಲ್ಲಿ ಓಡಾಡುತ್ತಿದೆ. ಆದರೆ ಹೀಗೆ ಮಾತನಾಡಿದ ಆ ನಾಯಕರು ಯಾರು ಎಂಬುದು ತಿಳಿದು ಬಂದಿಲ್ಲ..


Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ಡಾ.ಕೆ.ಸುಧಾಕರ್ ಸಚಿವ ಸ್ಥಾನ ನುಂಗಿದ್ಯಾರು ಗೊತ್ತಾ? ಹೇಗೆ ನಡೀತು ಗೊತ್ತಾ ಸಚಿವ ಸಂಪುಟದ ಗೇಮ್ ಪ್ಲಾನ್?


<iframe src="https://www.facebook.com/plugins/like.php?href=https%3A%2F%2Fwww.facebook.com%2FEagleTelegraph%2F&width=124&layout=button_count&action=like&size=small&show_faces=false&share=true&height=46&appId=799972166874116" width="124" height="46" style="border:none;overflow:hidden" scrolling="no" frameborder="0" allowtransparency="true" allow="encrypted-media"></iframe>

ಡಾ.ಕೆ.ಸುಧಾಕರ್ ಸಚಿವ ಸ್ಥಾನ ನುಂಗಿದ್ಯಾರು ಗೊತ್ತಾ?-

ಹೇಗೆ ನಡೀತು ಗೊತ್ತಾ ಸಚಿವ ಸಂಪುಟದ ಗೇಮ್ ಪ್ಲಾನ್?


 ಬುಧವಾರ ಮಧ್ಯಾಹ್ನ 2.12ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ವತಿಯಿಂದ 15 ಮತ್ತು ಜೆಡಿಎಸ್ ವತಿಯಿಂದ 9 ಒಟ್ಟು 25 ಮಂದಿ ಸಚಿವ ಸಂಪುಟವನ್ನು ಸೇರಿದ್ದಾರೆ. ಈ ವೇಳೆ ಹಲವು ನಾಯಕರನ್ನು ಕೈ ಬಿಡಲಾಗಿದ್ದು ರೇಸ್ ನಲ್ಲಿದ್ದ ಚಿಕ್ಕಬಳ್ಳಾಪುರ ಎಂಎಲ್ಎ ಡಾ.ಕೆ.ಸಧಾಕರ್ ಗೂ ಹಿನ್ನಡೆಯಾಗಿದೆ.
Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ಮೂಲಗಳ ಪ್ರಕಾರ ಡಾ.ಕೆ.ಸುಧಾಕರ್ ಗೆ ಈಸಲ ಸಚಿವ ಸ್ಥಾನ ಸಿಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಡಾ.ಕೆ.ಸುಧಾಕರ್ ಸೇರಿದಂತೆ ಹಲವು ಸಿದ್ದು ಬೆಂಬಲಿಗರಿಗೆ  ಸಚಿವ ಸ್ಥಾನ ಕೈ ತಪ್ಪಿದೆ.

ಎಂಬಿ ಪಾಟೀಲ, ಎಸ್.ಆರ್.ಪಾಟೀಲ, ಯಶವಂತ ರಾಯಗೌಡ ಪಾಟೀಲ, ಹೀಗೆ ಹಲವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಗುರ್ತಿಸಿಕೊಂಡಿದ್ರಿಂದ ಹಲವರಿಗೆ ಹಿನ್ನಡೆಯಾಗಿದೆ.

ಡಾ.ಕೆ.ಸುಧಾಕರ್ ಕೈ ತಪ್ಪಿದ್ದು ಯಾಕೆ? 

ಇನ್ನು ಕಾಂಗ್ರೆಸ್ ಯಂಗ್ ಲೀಡರ್ ಗಳ ಪೈಕಿ ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಪಟ್ಟಿಯಲ್ಲಿ ಡಾ.ಕೆ.ಸುಧಾಕರ್ ಹೆಸರು ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಯಾಕಂದ್ರೆ ಡಾ.ಕೆ.ಸುಧಾಕರ್ ಸಿದ್ದರಾಮಯ್ಯಗೆ ಆಪ್ತರಾಗಿದ್ದು, ರಾಹುಲ್ ಗಾಂದಿ ಮತ್ತು ಸೋನಿಯಾಗಾಂಧಿ ಜೊತೆಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಇದೆಲ್ಲದರ ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಒಮ್ಮೆ ಗೆದ್ದ ವ್ಯಕ್ತಿ ಮತ್ತೊಮ್ಮೆ ಗೆದ್ದ ಇತಿಹಾಸವೇ ಇರಲಿಲ್ಲ. ಆದರೆ ಡಾ.ಕೆ.ಸುಧಾಕರ್ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ. ಸ್ವ ಪಕ್ಷವದವರೇ ಭಿನ್ನ ಮತದ ಬಾವುಟ ಹಾರಿಸಿದ್ದರೂ, ಎದುರಾಳಿಗಳು ಆರೋಪಗಳ ಬ್ರಹ್ಮಾಸ್ತ್ರಗಳನ್ನು ಬೀಸಿದ್ರೂ, ಅವೆಲ್ಲವನ್ನೂ ಎದುರಿಸಿ 30 ಸಾವಿರಕ್ಕೂ ಹೆಚ್ಚು ಅಂತರಗಳಲ್ಲಿ ಡಾ.ಕೆ.ಸುಧಾಕರ್ ಗೆಲುವು ಸಾಧಿಸಿದ್ರು.
Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು


ಜನಪ್ರಿಯತೆ ಮತ್ತು ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಗೆ ಆಪ್ತರಾಗಿದ್ದ ಕಾರಣ ಡಾ.ಕೆ.ಸುಧಾಕರ್ ಮಂತ್ರಿಯಾಗೋದು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲಾ ನಿರೀಕ್ಷೆಗಳೂ ಉಲ್ಟಾ ಆಗಿದ್ದವು.

ಡಾ.ಕೆ.ಸುಧಾಕರ್ ಮೇಲೆ ದೇವೇಗೌಡರಿಗೆ ಸಿಟ್ಟು?

ಇನ್ನು ಕೆಲವು ಮೂಲಗಳ ಪ್ರಕಾರ ಚಿಕ್ಕಬಳ್ಳಾಪುರ ಮಾಜಿ ಜೆಡಿಎಸ್ ಶಾಸಕ ಕೆಪಿ ಬಚ್ಚೇಗೌಡ ಕುಮಾರ ಸ್ವಾಮಿ ಮತ್ತು ದೇವೇಗೌಡರನ್ನು ಭೇಟಿಯಾಗಿ ಚಿಕ್ಕಬಳ್ಳಾಪುರದ ಸನ್ನಿವೇಷವನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಎಷ್ಟೇ ಆರೋಪಗಳು ಮಾಡಿದರೂ ಸುಧಾಕರ್ ಸೋಲಿಸಲು ಸಾಧ್ಯವಾಗಲಿಲ್ಲ. ಮಂತ್ರಿಸ್ಥಾನ ಸಿಕ್ಕರೆ ಚಿಕ್ಕಬಳ್ಳಾಪುರದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ಕೆಪಿ ಬಚ್ಚೇಗೌಡ ತಮ್ಮ ವರಿಷ್ಠರ ಬಳಿ ಅವಲತ್ತುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಿಂದಲೇ ಅಖಾಡಕ್ಕೆ ಇಳಿದಿದ್ರು. ಆಗ ಕುಮಾರ ಸ್ವಾಮಿಗೆ ಸೋಲಾಗಿತ್ತು. ಕಾಂಗ್ರೆಸ್ ವತಿಯಿಂದ ವೀರಪ್ಪ ಮೋಯ್ಲಿ ಆಯ್ಕೆಯಾಗಿದ್ದರು. ಇಷ್ಟೇ ಅಲ್ಲ. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಸುಧಾಕರ್ ಛಿದ್ರ ಮಾಡಿದ್ದರು. ಕೆವಿ ನಾಗರಾಜ್ ಸೇರಿದಂತೆ ಹಲವು ಜೆಡಿಎಸ್ ನಾಯಕರನ್ನು ಸೆಳೆದುಕೊಂಡಿದ್ದರು ಸುಧಾಕರ್. ಪ್ರಚಾರದ ವೇಳೆ ಚಿಕ್ಕಬಳ್ಳಾಪುರಕ್ಕೆ ದೇವೇಗೌಡರು ಆಗಮಿಸಿದಾಗ, ಕೆವಿ ನಾಗರಾಜ್ ಪಕ್ಷ ಬಿಟ್ಟಿದ್ದನ್ನು ನೆನೆದು ಕಣ್ಣೀರು ಹಾಕಿದ್ದರು.

ದೊಡ್ಡ ಗೌಡರನ್ನು ಕಣ್ಣೀರು ಹಾಕಿಸಿದ, ನಿಮ್ಮನ್ನು ಲೋಕಸಭೆಯಲ್ಲಿ ಸೋಲಿಸಿದ ಮತ್ತು ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಪಕ್ಷವನ್ನು ಛಿದ್ರ ಛಿದ್ರ ಮಾಡಿದ ಸುಧಾಕರ್ ಗೆ ಮಂತ್ರಿಸ್ಥಾನ ಸಿಗದಂತೆ ನೋಡಿಕೊಳ್ಳಿ ಎಂದು ಕೆಪಿ ಬಚ್ಚೇಗೌಡ ಕುಮಾರ ಸ್ವಾಮಿಯವರಿಗೆ ಹೇಳಿದ್ದರು ಎಂಬ ಸುದ್ದಿ ಇದೆ. ಹೀಗಾಗಿ ದೇವೇಗೌಡರ ಕಡೆಯಿಂದ ಲಾಬಿ ನಡೆಸಿ ಡಾ.ಕೆ.ಸುಧಾಕರ್ ಮಂತ್ರಿಸ್ಥಾನ ತಪ್ಪಿಸಲಾಯಿತು ಅಂತ ಹೇಳಲಾಗ್ತಿದೆ.

ಒಳಗೇ ಇದ್ದಾರೆ ಹಲವು ಶತ್ರುಗಳು

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಸಚಿವಾಕಾಂಕ್ಷಿಗಳು ಹೆಚ್ಚಾಗಿದ್ದು, ಒಳಗಿದ್ದವರೇ ಲಾಬಿ ನಡೆಸಿ ಮಂತ್ರಿಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಸೋನಿಯಾಗಾಂಧಿವರೆಗೆ ಉತ್ತಮ ಬಾಂಧವ್ಯ ಹೊಂದಿದ ಸುಧಾಕರ್ ಗೆ ಮಂತ್ರಿಸ್ಥಾನ ಕೊಡಿಸಿದರೆ ಮುಂದೊಂದು ದಿನ ಎಲ್ಲರನ್ನೂ ಮೀರಿ ಬೆಳೆಯಬಹುದು ಎಂದು ಒಳಗಿನವರೇ ಪ್ಲಾನ್ ಮಾಡಿ ಡಾ.ಕೆ.ಸುಧಾಕರ್ ಗೆ ಮಂತ್ರಿಸ್ಥಾನವನ್ನು ತಪ್ಪಿಸಿರಬಹುದು ಎಂಬ ಅನುಮಾನಗಳೂ ಇವೆ.
Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ಎರಡನೇ ಪಟ್ಟಿಯಲ್ಲಿ ಸಿಗುತ್ತಾ ಸ್ಥಾನ?

22 ಸ್ಥಾನಗಳ ಪೈಕಿ ಕಾಂಗ್ರೆಸ್  15 ಮಂದಿಯನ್ನ ಸಂಪುಟಕ್ಕೆ ಸೇರಿಸಿದೆ. ಇನ್ನೂ 7 ಸ್ಥಾನಗಳನ್ನು ಹಾಗೆಯೇ ಬಿಡಲಾಗಿದೆ. ಸದ್ಯದ ಪರಿಸ್ತಿತಿ ನೋಡ್ಕೊಂಡು, ಭಿನ್ನಮತೀಯರನ್ನು ಸಮಾಧಾನ ಮಾಡಿದ ನಂತರ, ಎರಡನೆಯ ಪಟ್ಟಿಯನ್ನು ಸಿದ್ಧಮಾಡಬಹುದು ಎಂಬ ಮಾಹಿತಿ ಇದೆ. ಅದರಲ್ಲಿ ಅವಕಾಶ ವಂಚಿತರಿಗೆ ಪಟ್ಟ ಕಟ್ಟಬಹುದು ಎಂಬ ಮಾತಿದೆ. ಅದರಲ್ಲಿ ಎಂಬಿ ಪಾಟೀಲ, ತನ್ವೀರ್ ಸೇಠ್, ಎನ್.ಎ.ಹ್ಯಾರೀಸ್, ಹೆಚ್.ಕೆ.ಪಾಟೀಲ, ಡಾ.ಕೆ.ಸುಧಾಕರ್, ಆನಂದ್ ಸಿಂಗ್, ಮೊದಲಾದವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ.


Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

 ನೂತನ ಸಚಿವರ ಪಟ್ಟಿ (ಕಾಂಗ್ರೆಸ್)

ಆರ್ .ವಿ.ದೇಶಪಾಂಡೆ - ಗ್ರಾಮೀಣಾಭಿವೃದ್ಧಿ

ಡಿ.ಕೆ.ಶಿವಕುಮಾರ್  - ಇಂಧನ
ಕೆ.ಜೆ. ಜಾರ್ಜ್  - ಬೃಹತ್ ಕೈಗಾರಿಕೆ
ಕೃಷ್ಣಬೈರೇಗೌಡ  - ಸಂಸದೀಯ ವ್ಯವಹಾರ
ಶಿವಶಂಕರ ರೆಡ್ಡಿ - ಕೃಷಿ
ರಮೇಶ್ ಜಾರಕಿಹೊಳಿ - ಸಮಾಜ ಕಲ್ಯಾಣ
ಪ್ರಿಯಾಂಕ್ ಖರ್ಗೆ - ಐಟಿಬಿಟಿ
ಯು.ಟಿ.ಖಾದರ್ - ನಗರಾಭಿವೃದ್ಧಿ
ಜಮೀರ್ ಅಹ್ಮದ್ - ವಸತಿ, ಅಲ್ಪಸಂಖ್ಯಾತ 
ಶಿವಾನಂದ ಪಾಟೀಲ್ - ಆರೋಗ್ಯ
ವೆಂಕಟರಮಣಪ್ಪ - ಮೀನುಗಾರಿಕೆ
ರಾಜಶೇಖರ್ ಪಾಟೀಲ್- ಅರಣ್ಯ
ಪುಟ್ಟರಂಗಶೆಟ್ಟಿ - ಕಾರ್ಮಿಕ
ಶಂಕರ್ - ಯುವಜನ ಮತ್ತು ಕ್ರೀಡೆ
ಜಯಮಾಲ - ಮಹಿಳಾ ಮತ್ತು ಕಲ್ಯಾಣ


Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

 ನೂತನ ಸಚಿವರ ಪಟ್ಟಿ (ಜೆಡಿಎಸ್)

ಎಚ್.ಡಿ.ರೇವಣ್ಣ - ಲೋಕೋಪಯೋಗಿ
ಬಂಡೆಪ್ಪ ಕಾಶೆಂಪುರ - ಅಬಕಾರಿ
ಜಿ.ಟಿ.ದೇವೇಗೌಡ - ಕಂದಾಯ
ಮನಗೂಳಿ - ಸಣ್ಣ ಕೈಗಾರಿಕೆ
ಗುಬ್ಬಿ ಶ್ರೀನಿವಾಸ್- ತೋಟಗಾರಿಕೆ
ವೆಂಕಟರಾವ್ ನಾಡಗೌಡ - ಸಣ್ಣ ನೀರಾವರಿ
ಸಿ.ಎಸ್.ಪುಟ್ಟರಾಜು - ಸಾರಿಗೆ
ಸಾ.ರಾ.ಮಹೇಶ್- ಸಹಕಾರ 
ಎನ್.ಮಹೇಶ್ - ಪ್ರವಾಸೋದ್ಯ,
ಡಿ.ಸಿ.ತಮ್ಮಣ್ಣ - ಉನ್ನತ ಶಿಕ್ಷಣ

Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ನರೇಂದ್ರ ಮೋದಿ-ಅಮಿತ್ ಶಾ ಇಬ್ಬರನ್ನೂ ಬಂಧಿಸಲು ಮುಂದಾದ ಸಿಬಿಐನರೇಂದ್ರ ಮೋದಿ-ಅಮಿತ್ ಶಾ ಇಬ್ಬರನ್ನೂ ಬಂಧಿಸಲು ಮುಂದಾದ ಸಿಬಿಐ


ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ. ಅಮಿತ್ ಶಾ ಕೇಂದ್ರ ಮಂತ್ರಿ. ಜೊತೆಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಆದರೆ ಈ ಇಬ್ಬರು ನಾಯಕರನ್ನೂ ಬಂಧಿಸುವ ಸಲುವಾಗಿ ಸಿಬಿಐ ಅಧಿಕಾರಿಗಳು ನಿರ್ಧರಿಸಿದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಗುಜರಾತ್ ನಿವೃತ್ತ ಡಿಐಜಿ ಡಿಜಿ ವಂಜಾರಾ ಇಂಥದ್ದೊಂದು ಆಘಾತಕಾರಿ ಸುದ್ದಿಯನ್ನು ಹೊರ ಹಾಕಿದ್ದು, ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಸಿಬಿಐ ಅಧಿಕಾರಿಗಳು ಬಂಧಿಸಲು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ

ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಬಂಧಿಸಬೇಕಿದೆ. ದಯವಿಟ್ಟು ಇದಕ್ಕೆ ಅನುಮತಿಯನ್ನು ನೀಡಿ ಎಂದು ಸಿಬಿಐ ಅಧಿಕಾರಿಗಳು ಸಿಬಿಐನ ವಿಶೇಷ ಕೋರ್ಟ್ ಮುಂದೆ ಮನವಿಯನ್ನ ಸಲ್ಲಿಸಿದ್ದರು. ಈ ಸಂಬಂಧ ಸಿಬಿಐ ಕೋರ್ಟ್ ಪರಿಶೀಲನೆ ನಡೆಸಿ ಅನುಮತಿ ನೀಡುವ ಬಗ್ಗೆ ಸಮಾಲೋಚನೆ ಮಾಡಿತ್ತು ಎಂದು ಗುಜರಾತ್ ನಿವೃತ್ತ ಡಿಐಜಿ ವಂಜಾರಾ ತಿಳಿಸಿದ್ದಾರೆ.


2004ರಲ್ಲಿ ನಡೆದ ಇಶ್ರತ್ ಜಹಾನ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಆರೋಪಿಗಳೆಂದು ಪರಿಗಣಿಸಲಾಗಿತ್ತು. ನಡೆದಿದ್ದು ನಕಲಿ ಎನ್ ಕೌಂಟರ್ ಎಂದು ಕೆಲವರು ಕೋರ್ಟಿನ ಮೆಟ್ಟಿಲೇರಿದ್ದರು. ಈ ಸಂಬಂಧ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ನರೇಂದ್ರ ಮೋದಿಯನ್ನು ರಹಸ್ಯವಾಗಿ ವಿಚಾರಣೆಯನ್ನೂ ನಡೆಸಿದ್ದರು ಎಂದು ತಿಳಿದು ಬಂದಿದೆ

ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣ ದಿನದಿಂದ  ದಿನಕ್ಕೆ ಬಿಗಡಾಯಿಸ್ತಾ ಹೋದಂತೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಅಂತ ಸಿಬಿಐ ಅಧಿಕಾರಿಗಳು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಎಷ್ಟು ಪ್ರಯತ್ನಿಸಿದರೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಬಂಧಿಸಲು ಸಾಧ್ಯವಾಗಲಿಲ್ಲ. 2014ರಲ್ಲಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಅಮಿತ್ ಶಾಗೆ ಸಿಬಿಐ ಕೋರ್ಟ್ ಕ್ಲೀನ್ ಚಿಟ್ ನೀಡಿತು ಎಂದು ಗುಜರಾತ್ ನಿವೃತ್ತ ಡಿಜಿಪಿ ವಂಜಾರಾ ತಿಳಿಸಿದ್ದಾರೆ.


ಇನ್ನು ಇಶ್ರತ್ ಜಹಾನ್ ಉಗ್ರಳಲ್ಲ. ಆಕೆ ಅಮಾಯಕಳು. 2004ರಲ್ಲಿ ನಡೆದ ಎನ್ ಕೌಂಟರ್ ನಕಲಿ ಎಂದು ಆರೋಪಿಸಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಹಲವರ ಮೇಲೆ ಆರೋಪಗಳನ್ನು ಹೊರಿಸಲಾಗಿತ್ತು. ಸಿಬಿಐ ಅಧಿಕಾರಿಗಳು ಮೋದಿ ಮತ್ತು ಅಮಿತ್ ಶಾ ಇಬ್ಬರ ಮೇಲೂ ಅನುಮಾನ ಪಟ್ಟಿದ್ದರು. ಆದರೆ ಅಮೆರಿಕ ಜೈಲಿನಲ್ಲಿರೋ ಉಗ್ರ ಡೇವಿಟ್ ಹೆಡ್ಲಿ 2016ರಲ್ಲಿ ಭಾರತದ ಕೋರ್ಟ್ ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡಿದ ಹೇಳಿಕೆಯಲ್ಲಿ, ಇಶ್ರತ್ ಜಹಾನ್ ಲಕ್ಷರ್ ಎ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಮಾನವ ಬಾಂಬರ್ ಆಗಿದ್ದಳು. ಮತ್ತು ಮೋದಿಯ ಹತ್ಯೆಗೆ ಎಂದು ಇಶ್ರತ್ ಜಹಾನ್ ಮತ್ತು ಆಕೆಯ ತಂಡ ಸಿದ್ದವಾಗಿ ಓಡಾಡುತ್ತಿತ್ತು ಎಂದು ಹೇಳಿಕೆ ಕೊಟ್ಟಿದ್ದ. ಈ ಹೇಳಿಕೆಯ ನಂತರ ಮೋದಿ ವಿರುದ್ಧ ಎದ್ದಿದ್ದ ಆರೋಪಗಳು ತಣ್ಣಗಾಗಿದ್ದವು.ಅತಿ ದೊಡ್ಡ ಶಾಕ್ ಕೊಡಲು ರೆಡಿಯಾದ ಮೋದಿ-ಶಾ. ರಾಜ್ಯ ನಾಯಕರಿಗೆ ಫೋನ್ ಮಾಡಿ ಮೋದಿ ಹೇಳಿದ್ದೇನು?Modi Planning List

ಕರ್ನಾಟಕ ಚುನಾಣೆಯ ನಂತರ ಮೋದಿ ಮತ್ತು ಅಮಿತ್ ಶಾ ಇಬ್ಬರೂ ಸೈಲೆಂಟಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಗಳಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿದ್ದರೂ, ಮೋದಿ ಒಂದು ಮಾತನ್ನೂ ಆಡ್ತಾ ಇಲ್ಲ. ಬಿಜೆಪಿ ಚಾಣಕ್ಯ ಅಮಿತ್ ಶಾನೂ ತುಟಿಕ್ ಪಿಟಿಕ್ ಅಂತಿಲ್ಲ. ಹಾಗಂತ ಇಬ್ಬರೂ ಸುಮ್ಮನಿದ್ದಾರೆ ಅಂತ ಅಂದುಕೊಂಡ್ರೆ ಅದು ತಪ್ಪಾಗಿಬಿಡುತ್ತೆ.
Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು
ಸದ್ಯಕ್ಕೆ ಯಾವುದೇ ವಿಷಯದ ಬಗ್ಗೆ ಮಾತನಾಡದೇ ಇರೋದಕ್ಕೆ ಮೋದಿ ಮತ್ತು ಅಮಿತ್ ಶಾ ನಿರ್ಧಾರ ಮಾಡಿದ್ದಾರೆ ಅಂತ ತಿಳಿದು ಬಂದಿದೆ. ಸಣ್ಣ ಪುಟ್ಟ ಸಮಸ್ಯೆಗಳು ಮತ್ತು ಸೋಲುಗಳು ಎದುರಾದರೂ, ಅವುಗಳ ಬಗ್ಗೆ ದೀರ್ಘವಾಗಿ ಯೋಚನೆ ಮಾಡುವುದು ಬೇಡ ಎಂದು ಇಬ್ಬರೂ ನಾಯಕರು ನಿರ್ಧರಿಸಿದ್ದಾರೆ ಅಂತ ಹೇಳಲಾಗ್ತಿದೆ. ಸೋಲಿನ ವಿಚಾರಗಳ ಬಗ್ಗೆ ಚಿಂತಿಸದೇ ಮುಂದಿನ ಬಹುದೊಡ್ಡ ವಿಚಾರದ ಬಗ್ಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಅಮಿತ್ ಶಾಗೆ ಮೋದಿ ಹೇಳಿದ್ದಾರೆ ಎನ್ನಲಾಗಿದೆ.

2019ರಲ್ಲಿ ಲೋಕಸಭಾ ಚುನಾವಣೆ ಇದೆ. 2014ರಲ್ಲಿ ಇದ್ದ ಪರಿಸ್ತಿತಿ ಈಗ ಇಲ್ಲವಾಗಿದೆ. ನಿರ್ಲಕ್ಷವಹಿಸಿದ್ರೆ ಸಾಲು ಸಾಲು ರಾಜ್ಯಗಳನ್ನು ಸೋತಂತೆ, ಲೋಕಸಭೆಯಲ್ಲೂ ದೊಡ್ಡ ಮಟ್ಟದ ಹಿನ್ನಡೆಯಾಗೋ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಯಲ್ಲಿ ಯಾಮಾರಬಾರದು ಅಂತ ಮೋದಿ – ಶಾ ನಿರ್ಧಾರ ಮಾಡಿದ್ದು, ಅದಕ್ಕಾಗಿ ರಣತಂತ್ರಗಳನ್ನು ಹೆಣೀತಿದ್ದಾರೆ.

ಇದರ ಜೊತೆಗೆ ಎಲ್ಲೆಲ್ಲಿ ಸಮ್ಮಿಶ್ರ ಸರ್ಕಾರಗಳು ರಚನೆಯಾಗಿವೆಯೋ, ಆ ಎಲ್ಲಾ ರಾಜ್ಯಗಳಲ್ಲೂ ಮೋದಿ ವಿಶೇಷ ಕಾಳಜಿ ವಹಿಸುವಂತೆ ರಾಜ್ಯ ಉಸ್ತುವಾರಿ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಕರ್ನಾಟಕದ ಮೇಲೆ ವಿಶೇಷ ನಿಗಾ ಇಡುವಂತೆ ರಾಜ್ಯ ನಾಯಕರಿಗೆ ಗುಪ್ತ ಸಂದೇಶ ರವಾನಿಸಲಾಗಿದೆ ಎಂಬ ಮಾತಿದೆ. ಮುಂದಿನ ಆರು ತಿಂಗಳ ಕಾಲ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಮುಂದುವರಿಯಲಿ. ಆರು ತಿಂಗಳ ನಂತರ ರಾಜ್ಯ ಸರ್ಕಾರವನ್ನು ಹೇಗೆ ಬುಡಮೇಲು ಮಾಡಬೇಕು? ಯಾವೆಲ್ಲಾ ಬ್ರಹ್ಮಾಸ್ತ್ರಗಳನ್ನು ಸಮ್ಮಿಶ್ರ ಸರ್ಕಾರದ ಮೇಲೆ ಪ್ರಯೋಗಿಸಬೇಕು ಎಂಬುದನ್ನು ಅರಿತುಕೊಂಡು, ಆ ನಿಟ್ಟಿನಲ್ಲಿ  ಕಾರ್ಯೋನ್ಮುಖವಾಗುವಂತೆ ರಾಜ್ಯ ನಾಯಕರಿಗೆ ಮೋದಿ ಮತ್ತು ಅಮಿತ್ ಶಾ ಹೇಳಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಲೋಕಸಭಾ ಚುನಾವಣೆ ವೇಳೆಯಷ್ಟರಲ್ಲಿ ಅತಿ ದೊಡ್ಡ ಬ್ರೇಕಿಂಗ್ ನ್ಯೂಸ್ ಕೊಡೋ ಲೆಕ್ಕಾಚಾರದಲ್ಲಿ ಮೋದಿ ಮತ್ತು ಅಮಿತ್ ಶಾ ಟೀಂ ಇದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ.

Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ಬಿಜೆಪಿ ಕಾರ್ಯಕರ್ತನನ್ನು ಕೊಂದು ಪತ್ರ ಬರೆದಿಟ್ಟ ಹಂತಕರು.ರಹಸ್ಯ ಪತ್ರದಲ್ಲಿದೆ ಭಯಂಕರ ವಿಷಯ!
ಬಿಜೆಪಿ ಕಾರ್ಯಕರ್ತನನ್ನು ಕೊಂದು ಪತ್ರ ಬರೆದಿಟ್ಟ ಹಂತಕರು

ಪೊಲೀಸರ ಕೈಗೆ ಸಿಕ್ಕ ರಹಸ್ಯ ಪತ್ರದಲ್ಲಿದೆ ಭಯಂಕರ ವಿಷಯ!ಬಿಜೆಪಿ ಕಾರ್ಯಕರ್ತರ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೋದಿ ಸರ್ಕಾರ ಅಧಿಕಾರದಲ್ಲಿದ್ದರೂ ಯಾವುದೇ ಕಠಿಣ ಕ್ರಮಗಳು ಕೈಗೊಳ್ಳದೇ ಇರೋದು ಅಪರಾಧ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ಲೆಕ್ಕವಿಲ್ಲದಷ್ಟು ಬಿಜೆಪಿ ಕಾರ್ಯಕರ್ತರನ್ನು ಕೊಂದ ನರರಾಕ್ಷಸರು ಇದೀಗ ಮತ್ತೊಬ್ಬನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಶವದ ಪಕ್ಕದಲ್ಲಿ ಒಂದು ಪತ್ರವನ್ನು ಬರೆದಿಟ್ಟಿದ್ದು, ಆ ಪತ್ರವನ್ನು ಓದಿದವರ ಗುಂಡಿಗೆಯೇ ನಡುಗುತ್ತಿದೆ.


`ಓಟ್ ಹಾಕಿದ ದಿನದಿಂದ ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೆವು. ಆದರೆ ನೀನು ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಆಗ ನಿನ್ನನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಆದರೆ ಈಗ ನಿನ್ನನ್ನು ಕೊಂದು ಮುಗಿಸಿದ್ದೇವೆ. ನಾವು ಅಂದುಕೊಂಡಿದ್ದನ್ನು ಮಾಡಿ ಮುಗಿಸಿದ್ದೇವೆ. ಇನ್ನು ಮುಂದೆ ಯಾರು ಬಿಜೆಪಿ ಅಂತ ಕೂಗಾಡ್ತಾರೋ ಅವರೆಲ್ಲರಿಗೂ ಇದೇ ಗತಿ’


ಹೀಗಂತ  ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ ನಂತರ, ಕಿರಾತಕರು ಪತ್ರ ಒಂದನ್ನು ಬರೆದಿಟ್ಟು ಬಿಜೆಪಿಗರಿಗೆ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರನ್ನು ಜೀವ ಭಯದಲ್ಲಿ ನಡುಗುವಂತೆ ಮಾಡುತ್ತಿದೆ.

ಅಂದ್ಹಾಗೆ, ಬಿಜೆಪಿ ಕಾರ್ಯಕರ್ತನ ಭಯಂಕರ ಹತ್ಯೆ ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ. ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಆಗಾಗ ತಿಕ್ಕಾಟಗಳು ನಡೀತಾನೇ ಇರುತ್ತವೆ. ಇತ್ತೀಚೆಗಷ್ಟೇ ಪಂಚಾಯ್ತಿ ಚುನಾವಣೆ ನಡೆದಿತ್ತು. ಆ ಸಮಯದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕೊಲ್ಲಲು ಸಂಚು ರೂಪಿಸಿದ್ದರು ದುಷ್ಕರ್ಮಿಗಳು. ಆದರೆ ಚುನಾವಣೆ ನಂತರ ಬಿಜೆಪಿ ಕಾರ್ಯಕರ್ತ ಸಿಕ್ಕೇ ಇರಲಿಲ್ಲ. ಅಂತಿಮವಾಗಿ ಬುಧವಾರ ಬಿಜೆಪಿ ಕಾರ್ಯಕರ್ತನನ್ನು ಹಿಡಿದು ಕೊಲ್ಲುವ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ ದುರಾತ್ಮರು.

ಮೃತಪಟ್ಟ ಬಿಜೆಪಿ ಕಾರ್ಯಕರ್ತನ ಹೆಸರು ತ್ರಿಲೋಚನ್ ಮಹಾತೋ ಎಂದು ತಿಳಿದು ಬಂದಿದ್ದು, ಪಶ್ಚಿಮ ಬಂಗಾಳದ ಬಲರಾಮ್ ಪುರದಲ್ಲಿನ ಸುಪುರ್ದಿ ಹಳ್ಳಿಯಲ್ಲಿ ಘಟನೆ ನಡೆದಿದೆ. ಈ ಸಂಬಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ

ಆಂಧ್ರದ ಅಮರಾವತಿಯಲ್ಲಿ ಕಪ್ಪಾಗುತ್ತಿದೆ ಆಕಾಶ.. ಚಂದ್ರಬಾಬು ನಾಯ್ಡು ಶಾಕ್!

ಆಂಧ್ರದ ಅಮರಾವತಿಯಲ್ಲಿ ಆಕಾಶ ಕಪ್ಪಾಗುತ್ತಿರುವುದೇಕೆ?
ಇದನ್ನು ನೋಡಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಶಾಕ್ ಕರ್ನಾಟಕದ ನೆರೆ ರಾಜ್ಯವಾಗಿರೋ ಆಂಧ್ರಪ್ರದೇಶದಲ್ಲಿ ಬೆಚ್ಚಿ ಬೀಳಿಸುವಂಥಾ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ಆಂಧ್ರದದ ಗುಂಟೂರು ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಹೊಸ ರಾಜಧಾನಿ ಅಮರಾವತಿಯಲ್ಲಿ ಗಗನವೇ ಕಪ್ಪಾಗುತ್ತಿರುವಂಥಾ ಚಿತ್ರಣ ಬೆಳಕಿಗೆ ಬಂದಿವೆ

ಮೂಲಗಳ ಪ್ರಕಾರ ಆಂಧ್ರಪ್ರದೇಶ ಇಬ್ಭಾಗವಾದ ನಂತರ, ತೆಲಂಗಾಣ ರಾಜಧಾನಿಯಾಗಿ ಹೈದ್ರಾಬಾದ್ ಸೇರಿಕೊಂಡಿತ್ತು. ಆಂದ್ರಕ್ಕೆ ಹೊಸ ರಾಜಧಾನಿಯ ಹುಡುಕಾಟ ಶುರುವಾಯ್ತು. ಆಗ ಆಂದ್ರ ಸಿಎಂ ಚಂದ್ರಬಾಬು  ನಾಯ್ಡು ಗುಂಟೂರು ಬಳಿ 1700 ಎಕರೆ ಪ್ರದೇಶ ಕೃಷಿ ಭೂಮಿಯಲ್ಲಿ ಹೊಸ ರಾಜಧಾನಿಯನ್ನು ಕಟ್ಟಲು ಮುಂದಾದರು.

2014ರಿಂದಲೇ ಹೊಸ ರಾಜಧಾನಿ ಅಮರಾವತಿಯ ನಿರ್ಮಾಣ ಕಾರ್ಯ ಶುರುವಾಗಿದ್ದು, ಸಿಂಗಪೂರ್ ಮಾದರಿಯಲ್ಲಿ ಅಮರವಾತಿ ನಿರ್ಮಾಣವಾಗುತ್ತಿದೆ. ಇದರಲ್ಲಿ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿಯ ಕಲಾ ಕೈಚಳಕವೂ ಇದೆ ಎಂದು ತಿಳಿದು ಬಂದಿದೆ.

ಆಂದ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇನ್ನೇನು ಕೆಲವೇ ವರ್ಷಗಳಲ್ಲಿ ಜಗತ್ತೇ ತಿರುಗಿ ನೋಡುವಂಥಾ ಅಮರಾವತಿ ನಿರ್ಮಾಣವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಿಂಗಾಪುರದಂಥಾ ಸುಂದರ ರಾಜಧಾನಿ ನಿರ್ಮಾಣವಾಗುವುದರ ನಡುವಲ್ಲೇ ಅಮರಾವತಿಯಲ್ಲಿ ಬೆಚ್ಚಿ ಬೀಳುವಂಥಾ ಘಟನೆಗಳು  ಗೋಚರಿಸುತ್ತಿವೆ. ಅಮರಾವತಿ ಪ್ರದೇಶದ ಸುತ್ತಮುತ್ತ ಆಕಾಶ  ಕಪ್ಪಾಗುತ್ತಿದ್ದು, ಸೂರ್ಯನಿದ್ದರೂ ಕತ್ತಲೆಯ ವಾತಾವರಣ ಸೃಷ್ಟಿಯಾದಂತಾಗುತ್ತಿದೆ

ಅಮರಾವತಿಯಲ್ಲಿ ಆಕಾಶ ಕಪ್ಪಾಗಲು ಕಾರಣವೇನು?
ಇನ್ನು ಆಂಧ್ರದ ಅಮರಾವತಿಯಲ್ಲಿ ಆಕಾಶ ಕಪ್ಪಾಗಿ ಕಾಣಿಸುತ್ತಿರುವುದರಿಂದ ಜನರೆಲ್ಲಾ ಆತಂಕಗೊಂಡಿದ್ದಾರೆ. ಈ ಸಂಬಂಧ ಆಂಧ್ರ ಸರ್ಕಾರವೂ ಪರಿಶೀಲನೆ ನಡೆಸಿದ್ದು, ಇದೆಲ್ಲಾ ಅಮರಾವತಿ ರಾಜಧಾನಿ ನಿರ್ಮಾದಿಂದ ಎದ್ದ ಧೂಳಿನ ಪರಿಣಾಮ ಎಂದು ತಿಳಿದು ಬಂದಿದೆ.

2014ರಿಂದ ಅಮರಾವತಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಟ್ಟಡಗಳಿಗಾಗಿ ಭೂಮಿಯನ್ನು ಅಗೆಯಲಾಗುತ್ತಿದೆ. ಪಾಯ ತೋಡುತ್ತಿರುವುದರ ಜೊತೆಗೆ ಕಟ್ಟಡ ನಿರ್ಮಾಣದಿಂದ ಪರಿಸರವನ್ನು ಸೇರುತ್ತಿರುವ, ಸಿಮೆಂಟ್ ಧೂಳಿನ ಕಣಗಳು, ಮಣ್ಣಿನ ಕಣಗಳು, ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತಿರುವ ಯಂತ್ರೋಪಕರಣಗಳ ಹೊಗೆ ಎಲ್ಲವೂ ಆಕಾಶದಲ್ಲಿ ಜಮಾವಣೆಗೊಳ್ಳುತ್ತಿದ್ದು, ಇಡೀ ಆಕಾಶವೇ ಕಪ್ಪಾಗಿ ಕಾಣಿಸುತ್ತಿದೆ.

ಅಮರಾವತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡಗಳು ಜಮಾವಣೆಗೊಂಡಿದ್ದು, ಮೋಡದ ನಡುವೆ ಧೂಳಿನ ಕಣಗಳು ಸೇರಿಕೊಂಡಿರೋದ್ರಿಂದ, ಆ ಭಾಗದಲ್ಲಿ ಆಕಾಶ ಕಪ್ಪಾಗಿ ಕಾಣಿಸುತ್ತಿದೆ. ಸೂರ್ಯನ ಬೆಳಕನ್ನು ಧೂಳಿನ ಕಣಗಳು ತಡೆ ಹಿಡಿಯುತ್ತಿರುವುದರಿಂದ ಕತ್ತಲೆಯ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿನ ಧೂಳನ್ನು ನಿವಾರಿಸಲು ಮತ್ತು ಇಲ್ಲಿನ ಮಣ್ಣನ್ನು ಬೆರೆ ಕಡೆ ಸ್ಥಳಾಂತರಿಸಲು ನೂರಾರು ಕೋಟಿಯಷ್ಟು ವೆಚ್ಚ ತಗುಲುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸದ್ಯ ಅಮರಾವತಿಯಲ್ಲಿ ನಿರ್ಮಾಣವಾಗಿರೋ ಪರಿಸ್ಥಿತಿ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡುರನ್ನು ಕಂಗಾಲಾಗಿಸಿದೆ.

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು