Recent Movies

ಸಿನೆಮಾ

Share This Article To your Friends

Showing posts with label ರಾಜಕೀಯ. Show all posts
Showing posts with label ರಾಜಕೀಯ. Show all posts

RTI ನಿಂದ ಬಯಲಾಯ್ತು ಭಯಂಕರ ಸೀಕ್ರೆಟ್. ಮೋದಿ ಬಂದಮೇಲೆ ಹಿಂಗೆಲ್ಲಾ ನಡೀತಾ..?


ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ, ದೇಶದಲ್ಲಿ ಏನೆಲ್ಲಾ ಆಗಿದೆ ಅನ್ನೋದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. 4 ವರ್ಷಗಳಲ್ಲಿ ಮೋದಿ ಅಚ್ಚೇದಿನಗಳನ್ನು ಕೊಟ್ಟರಾ? ಅಥವ ಹಿಂದಿನ ಸರ್ಕಾರಗಳಿಗಿಂತ ಕೆಟ್ಟ ದಿನಗಳನ್ನೇ ನೀಡಿದ್ದಾರಾ ಅನ್ನೋ ಪ್ರಶ್ನೆಗಳು ಎದ್ದಿರುವಾಗಲೇ, ಶಾಕಿಂಗ್ ವಿಚಾರ ಒಂದು ಬಯಲಾಗಿದೆ.

ಪ್ರಸೇನ್ ಜಿತ್ ಬೋಸ್ ಎಂಬ ವ್ಯಕ್ತಿಯು ಹೊರ ಹಾಕಿರುವ ಮಾಹಿತಿ ಹಕ್ಕು ಅಧಿನಿಯಮದಿಂದ ಹೊರ ಬಿದ್ದ ವಿಷಯದ ಪ್ರಕಾರ, ಮೋದಿ ಅವಧಿಯಲ್ಲಿಯೇ ಅತಿ ಹೆಚ್ಚು ಬ್ಯಾಂಕ್ ವಂಚನೆಗಳು ನಡೆದಿವೆ ಎಂದು ಅಂಕಿ ಅಂಶಗಳಿಂದಲೇ ಹೊರ ಬಿದ್ದಿವೆ.

2008-2009ರಲ್ಲಿ 1,543 ಕೋಟಿ ವಂಚನೆ ನಡೆದಿತ್ತು. ಆದರೆ 2017-2018ರಲ್ಲಿ 22,470 ಕೋಟಿ ಬ್ಯಾಂಕ್ ವಂಚನೆ ನಡೆದಿದೆ ಎಂದು ತಿಳಿದು ಬಂದಿದೆ. 

ಕಳೆದ 10 ವರ್ಷಗಳಲ್ಲಿ ಎಷ್ಟು ಬ್ಯಾಂಕ್ ವಂಚನೆಗಳು ನಡೆದಿವೆ ಎಂದು ಮಾಹಿತಿ ಕಲೆ ಹಾಕಿದಾಗ, ರಿಜರ್ಸ್ ಬ್ಯಾಂಕ್  ಆಫ್ ಇಂಡಿಯಾನೇ ಅಂಕಿ ಅಂಶವನ್ನು ನೀಡಿದೆ ಎಂದು ತಿಳಿದು ಬಂದಿದೆ. ಇಷ್ಟೇ ಅಲ್ಲ.. ಮೋದಿ ಅವಧಿಯಲ್ಲಿ ಅಂದ್ರೆ 2014 ರಿಂದ 2018ರವರೆಗೆ, ಕೇವಲ ನಾಲ್ಕು ವರ್ಷಗಳಲ್ಲಿ 77 ಸಾವಿರ ಕೋಟಿ ಬ್ಯಾಂಕ್ ವಂಚನೆಗಳು ನಡೆದಿವೆ ಎಂದು ತಿಳಿದು ಬಂದಿದೆ.


ಇನ್ನು ಇಷ್ಟೋಂದು ದೊಡ್ಡ ಪ್ರಮಾಣದ ವಂಚನೆ ವಿರುದ್ಧ ಮೋದಿ ಸರ್ಕಾರ ಈಗಾಗಲೇ ಕಠಿಣ ನಿಯಮಗಳನ್ನು ತೆಗೆದುಕೊಂಡಿದ್ದು, ವಂಚಕರ ಆಸ್ತಿಪಾಸ್ತಿಯನ್ನು ಹರಾಜಿಗೆ ಹಾಕಿ, ಅದರಿಂದ ಬಂದ ಹಣದಲ್ಲಿ ಸಾಲವನ್ನು ರಿಕವರಿ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗ್ತಿದೆ. ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಹೀಗೆ ಅನೇಕರ ಆಸ್ತಿಯನ್ನು ಹರಾಜು ಹಾಕುವ ಪ್ರಯತ್ನ ನಡೀತಿದ್ದು, ದೇಶ ಬಿಟ್ಟು ಹೋದವರನ್ನು ಎಳೆದು ತರುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಇದೆಲ್ಲಾ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ತಿಳಿದಿಲ್ಲ.


ಚಿಕ್ಕಬಳ್ಳಾಪುರದ ಚುನಾವಣೆ ದಿಕ್ಕನ್ನೇ ಬದಲಿಸಿತು 3 ವಿಡಿಯೋ!

 
2018ರ ಕರ್ನಾಟಕದ ಚುನಾವಣೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೆತ್ರಗಳಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಿತ್ತು. ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೊಮ್ಮೆ ಗೆದ್ದ ಉದಾಹರಣೆಯೇ ಇರಲಿಲ್ಲ. ಆದರೆ ಆ ಇತಿಹಾಸವನ್ನು ಬ್ರೇಕ್ ಮಾಡಿದ್ದು ಡಾ.ಕೆ.ಸುಧಾಕರ್.


ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಗೆಲ್ಲಬಾರದು ಅಂತ ಅನೇಕರು ಸಂಚು ನಡೆಸಿದ್ದರು. ಕೊನೆ ಕ್ಷಣದಲ್ಲಿ ಸೋಶಿಯಲ್ ಮೀಡಿಯಾ ಬಳಸಿಕೊಂಡು ಡಾ.ಕೆ.ಸುಧಾಕರ್ ತೇಜೋವಧೆಗೆ ಮುಂದಾದರು. ಆದರೆ ವಿರೋಧಿಗಳ ಕುತಂತ್ರವನ್ನು ವಿಫಲಗೊಳಿಸಿದ್ದು ಒಂದು ವಿಡಿಯೋ.ಆ ವಿಡಿಯೋ ಡಾ.ಕೆ.ಸುಧಾಕರ್'ಗೆ ಮತ್ತೊಮ್ಮೆ ಗೆಲುವು ತಂದು ಕೊಟ್ಟಿತ್ತು.


ಡಾ.ಕೆ.ಸುಧಾಕರ್ 2013ರಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರದ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಮತ್ತೆ ಡಾ.ಕೆ.ಸುಧಾಕರ್ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಕ್ಷೇತ್ರದಲ್ಲಿ ಓಡಾಡ್ತಿತ್ತು. ಇದನ್ನು ಅರಿತ ವಿರೋಧಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಡಾ.ಕೆ.ಸುಧಾಕರ್ ತೇಜೋವಧೆ ಮಾಡುವಂಥಾ ವಿಡಿಯೋಗಳನ್ನು ಹರಿಯ ಬಿಟ್ಟಿತ್ತು. ಆ ವಿಡಿಯೋಗಳ ಹಿಂದೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನವೀನ್ ಕಿರಣ್ ಮತ್ತು ಆತನ ಬೆಂಬಲಿಗ ಪ್ರದೀಪ್ ಈಶ್ವರ್ ಇದ್ದರು ಎಂಬುದು ರಸಹ್ಯವಾಗೇನೂ ಉಳಿದಿಲ್ಲ. ಆದರೆ ಜನರ ಕಣ್ಣು ತೆರೆಸಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ವಿಡಿಯೋ


ಈ ವಿಡಿಯೋದಲ್ಲಿ, ಡಾ.ಕೆ.ಸುಧಾಕರ್ ಹೇಗೆಲ್ಲಾ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂಬ ಸತ್ಯಗಳಿದ್ದವು. ಇದನ್ನು ನೋಡಿದ ಕ್ಷೇತ್ರದ ಜನರ ಮನದಲ್ಲಿ ಸುಧಾಕರ್ ಬಗ್ಗೆ ಒಲವು ಹೆಚ್ಚಾಯಿತು. ಈ ವಿಡಿಯೋ ನೋಡಿದ ನಂತರ, ಡಾ.ಕೆ.ಸುಧಾಕರ್ ಬಗ್ಗೆ ವಿರೋಧಿಗಳು ಹೇಗೆಲ್ಲಾ ಅಪ ಪ್ರಚಾರ ಮಾಡುತ್ತಿದ್ದಾರೆ ಎಂಬುದು ಅರಿವಾಯ್ತು. ನವೀನ್ ಕಿರಣ್ ಕಡೆ ವಾಲಿದ್ದ ಜನರು, ಸೋಶಿಯಲ್ ಮೀಡಿಯಾಗಳಲ್ಲಿನ ಕೆಲವು ಹೃದಯ ಸ್ಪರ್ಷಿ ವಿಡಿಯೋಗಳನ್ನು ನೋಡಿ ಮತ್ತೆ ಡಾ.ಕೆ.ಸುಧಾಕರ್ ಬೆನ್ನಿಗೆ ನಿಂತರು. ಹೀಗಾಗಿ ಡಾ.ಕೆ.ಸುಧಾಕರ್ ಎರಡನೇ ಬಾರಿ ಶಾಸಕರಾಗಿ ಗೆದ್ದಿದ್ದು ಮಾತ್ರವಲ್ಲ.. ಎರಡನೇ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಶಾಸಕ ಅಂತ ಹೊಸ ದಾಖಲೆಯನ್ನೂ ಬರೆದಿದ್ದಾರೆ. 


ಎಲೆಕ್ಷನ್ ನಲ್ಲಿ ಸಿಕ್ಕ ಹಣವೆಷ್ಟು ಗೊತ್ತಾ?

ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಜಾರಿ ಕುರಿತಾದ ಮಾಹಿತಿಯನ್ನು ಒದಗಿಸಲಾಗಿದೆ.
1487 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 2065 ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ಸ್‍ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು ಇತರೆ ಮಾದರಿ ನೀತಿ ಸಂಹಿತೆ ತಂಡಗಳು 12537 ಗೋಡೆಬರಹಗಳು, 17693 ಪೋಸ್ಟರ್‍ಗಳು ಮತ್ತು 7,711 ಬ್ಯಾನರ್‍ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲಾಗಿದೆ ಹಾಗೂ Karnataka Open Places (Provision of Disfigurement) Act 1981 ಪ್ರಕಾರ 6 ಪ್ರಕರಣಗಳನ್ನು ನೋಂದಾಯಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಒಟ್ಟಾರೆ 6,866 ಗೋಡೆ ಬರಹ, 7,949 ಪೋಸ್ಟರ್‍ಗಳು ಮತ್ತು 2,543 ಬ್ಯಾನರ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದುಹಾಕಲಾಗಿದೆ.

29-4-18

48,41,520/- ರೂ.ಗಳ ನಗದು
ರೂ.2,00,000/- ಮೌಲ್ಯದ 1 ವಾಹನ
ರೂ.1,000/- ಮೌಲ್ಯದ 154 ಸ್ಕಾರ್ಪ್‍ಗಳು
ರೂ.1,500/- ಮೌಲ್ಯದ 157 ಕ್ಯಾಪ್‍ಗಳು
ರೂ.90/- ಮೌಲ್ಯದ 90 ಕರಪತ್ರಗಳು

ಒಟ್ಟಾರೆ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ರೂ.40,49,68,269/- ನಗದು, ರೂ.15,26,80,000/- ಮೌಲ್ಯದ 49 ಕೆ.ಜಿ. 552 ಗ್ರಾಂ ಚಿನ್ನ, ರೂ.15,97,200/- ಮೌಲ್ಯದ ಬೆಳ್ಳಿ, ರೂ.3,24,000/- ಮೌಲ್ಯದ 268 ತಾಮ್ರದ ಬಿಂದಿಗೆಗಳು (600 ಕೆ.ಜಿ. ತೂಕ), ಒಟ್ಟು ರೂ.2,11,46,959/- ಮೌಲ್ಯದ 267.49 ಲೀ. ಮದ್ಯ, ವಾಹನ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿವೆ.

30-4-18
 
ರೂ.4,11,70,975/- ಗಳ ನಗದು
ರೂ.3,50,000/- ಮೌಲ್ಯದ 4 ವಾಹನ
ರೂ.23,900/- ಮೌಲ್ಯದ ಪಟಾಕಿ
ರೂ.20,58,908/- ಮೌಲ್ಯದ 76 ಸೋಲಾರ್ ಲೈಟ್‍ & 53 ಫ್ಯಾನ್‍ಗಳು
46 ಮಿಕ್ಸರ್ ಗ್ರೈಂಡರ್‍ಗಳು
119 ಸ್ಯಾಮ್‍ಸಂಗ್ ಗ್ಯಾಲಕ್ಸಿ ಜೆ2 ಮೊಬೈಲ್‍ಗಳು

1-5-18
 
ರೂ.10,51,70,754/- ನಗದು
925.117 ಲೀ. ಮದ್ಯ
ರೂ.4,10,98,000/- ಮೌಲ್ಯದ ಚಿನ್ನ
ರೂ.2,40,000/- ಮೌಲ್ಯದ 12.165 ಕೆ.ಜಿ. ಬೆಳ್ಳಿ
ರೂ.13,94,65,723/- ಮೌಲ್ಯದ ಮತ್ತಿತರ ವಸ್ತುಗಳು
ರೂ.2,76,10,410/- ಮೌಲ್ಯದ 178 ವಾಹನಗಳು

2-5-18
ಅಲ್ಲದೇ ಪೊಲೀಸ್ ಪ್ರಾಧಿಕಾರಿಗಳು
ರೂ.15,378/- ಮೌಲ್ಯದ 50.4 ಲೀ. ಮದ್ಯ
ರೂ.19,200/- ಮೌಲ್ಯದ 128 ಸೀರೆಗಳು
ರೂ.42,35,000/- ಮೌಲ್ಯದ ನಗದು
ರೂ.16,92,48,047/- ಮೌಲ್ಯದ 44.283 ಕೆ.ಜಿ. ಚಿನ್ನ
ರೂ.2,60,930/- ಮೌಲ್ಯದ ಡಿಬಿಬಿಎಲ್ ಗನ್ ನಂ.18126 ಮತ್ತು 5 ಕಾಟ್ರಿಡ್ಜ್‍ಗಳು
135 ಸೀರೆಗಳು
160 ಲ್ಯಾಪ್‍ಟಾಪ್
687.333 ಲೀ. ಮದ್ಯ
7 ವಾಹನ ಮತ್ತು ಮತ್ತಿತರ ವಸ್ತುಗಳು


3-5-18
ರೂ.51,43,74,023/- ನಗದು

4-5-18
ಪೊಲೀಸ್ ಪ್ರಾಧಿಕಾರಗಳು 48 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿವೆ
ಫ್ಲೈಯಿಂಗ್ ಸ್ಕ್ವಾಡ್‍ಗಳು 878 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿವೆ
ಎಸ್‍ಎಸ್‍ಟಿಗಳು ನಗದು ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ 7 ಪ್ರಕರಣದಲ್ಲಿ ಎಫ್‍ಐಆರ್
ಒಟ್ಟು 148 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ.

5-5-18
10168.095 ಲೀ. ಐಎಂಎಲ್ ಮದ್ಯ
ರೂ.57,35,681/- ಮೌಲ್ಯದ ಇತರೆ ಮದ್ಯ
49 ಪ್ರಕರಣಗಳನ್ನು ದಾಖಲು
ಮದ್ಯದ ಪರವಾನಗಿ ಉಲ್ಲಂಘನೆ 39 ಪ್ರಕರಣಗಳು

6-5-18
306 ಪ್ರಕರಣಗಳನ್ನು ದಾಖಲು
ರೂ.23,85,22,234/- ಮೌಲ್ಯದ ಐಎಂಎಲ್ ಮದ್ಯ
514607.617 ಲೀ. ಇತರೇ ಮದ್ಯ ವಶಕ್ಕೆ
2193 ಪ್ರಕರಣಗಳು
ಮದ್ಯದ ಪರವಾನಗಿ ಉಲ್ಲಂಘನೆ 2289 ಪ್ರಕರಣಗಳು
ಎನ್‍ಡಿಪಿಎಸ್ ಕಾಯ್ದೆಯಡಿ 3 ಪ್ರಕರಣ
ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 7172 ಪ್ರಕರಣಗಳು
925 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.


7-5-18
ಸಿಆರ್‍ಪಿಸಿ ಕಾಯ್ದೆಯಡಿ 294 ವ್ಯಕ್ತಿಗಳಿಂದ ಮುಚ್ಚಳಿಕೆ
524 ವ್ಯಕ್ತಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್
56 ಪ್ರಕರಣಗಳನ್ನು ಸಿಆರ್‍ಪಿಸಿ ಕಾಯ್ದೆಯಡಿ ದಾಖಲು
896 ನಾಕಾಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ
71574 ಶಸ್ತ್ರಾಸ್ರ್ತಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ
ಒಟ್ಟು 97,043 ಶಸ್ತ್ರಾಸ್ತ್ರಗಳ ಪೈಕಿ 97,031 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ.
52 ಶಸ್ತ್ರಾಸ್ತ್ರಗಳ ಮುಟ್ಟುಗೋಲು
6 ಶಸ್ತ್ರಾಸ್ತ್ರದ ಪರವಾನಿಗೆಯನ್ನು ರದ್ದು

8-5-18
ನೀತಿ ಸಂಹಿತೆ ಜಾರಿಯಾದ ದಿನದಂದ ಈವರೆಗೆ
ಸಿಆರ್‍ಪಿಸಿ ಕಾಯ್ದೆಯಡಿಯಲ್ಲಿ 17898 ಪ್ರಕರಣ
01-01-2018 ರಿಂದ ಈವರೆಗೆ
ಒಟ್ಟು 49376 ಪ್ರಕರಣ ಸಿಆರ್‍ಪಿಸಿ ಕಾಯ್ದೆಯಡಿ ದಾಖಲು
23364 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ.
38425 ಜಾಮೀನು ರಹಿತ ವಾರೆಂಟ್‍ಗಳನ್ನು ಚುನಾವಣೆ ಹೊರಡಿಸಲಾಗಿದೆ.

ಇದೇ ಫಸ್ಟ್ ಟೈಂ ಮೋದಿ ಈ ವಿಷಯದ ಬಗ್ಗೆ ಮಾತಾಡಿದ್ದು


ಮೋದಿಯವರು ಅಂತೂ ತಮ್ಮ ಅಧಿಕಾರಾವಧಿಯಲ್ಲೇ ಮೊದಲ ಬಾರಿಗೆ ಈ ವಿಷಯದ ಕುರಿತು ಮಾತನಾಡಿಬಿಟ್ರು!


ಪ್ರಧಾನಿ ನರೇಂದ್ರ ಮೋದಿಯವರು ವಿದೇಶಗಳೊಂದಿಗೆ  ಉತ್ತಮ ಬಾಂಧವ್ಯ ನಿರ್ಮಾಣ ಮಾಡಲು  ವಿದೇಶಗಳಿಗೆಲ್ಲ ಹೋಗಿ ಭಾಷಣ ಮಾಡಿದ್ದಾರೆ. ಹಾಗೆ ದೇಶದ ಸ್ಥಿತಿಗತಿ ಹೇಗಿದೆ ಎಂದು ವಿಚಾರಿಸಲು ದೇಶದ ಮೂಲೆ ಮೂಲೆಗಳಲ್ಲೂ ಹೋಗಿ ಭಾಷಣ ಮಾಡಿದ್ದಾರೆ ಆದ್ರೆ ಅವರು ಹಿಂದೆಂದೂ ಈ ವಿಷಯದ ಕುರಿತು ಮಾತನಾಡಿರ್ಲಿಲ್ಲ. ಆದ್ರೆ ನಿನ್ನೆಯಷ್ಟೇ ಈ ವಿಷಯದ ಕುರಿತು ಮಾತನಾಡಿದ್ದು ಜನತೆಯಲ್ಲಿ ಅಚ್ಚರಿ ಮೂಡಿದೆ. ಹಾಗಾದ್ರೆ ಯಾವುದು ಆ ಅತಿಮುಖ್ಯವಾದ ವಿಷಯ..


ಪ್ರಧಾನಿ ಮೋದಿಯವರು ಕರ್ನಾಟಕ ವಿಧಾನಸಭಾ ಚುನಾವಣೆಯ ಸಮೀಪುಸುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಗೆ ಬಂದಿದ್ರು. ಅಲ್ಲಿ ತಮ್ಮ ಭಾಷಣವನ್ನು ಮಾಡುತ್ತಿರುವಾಗ ಮೊದಲ ಭಾರಿಗೆ ಮಹಾದಾಯಿ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಮಹಾದಾಯಿ ಸಮಸ್ಯ ಕುರಿತು ಮಾತುಕತೆ ವಿಚಾರವನ್ನ ಮಾಡುತ್ತೇನೆ. ಸಧ್ಯದಲ್ಲೇ ಈ ಮಹಾದಾಯಿ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಮೋದಿಯವರು ಭಾಷಣ ಮಾಡಿದ್ದಾರೆ. ಇವರ ಭಾಷಣಕ್ಕೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಏನ್ ಟ್ವೀಟ್ ಮಾಡಿದ್ದಾರೆ ಗೊತ್ತಾ ? ಕೇಳಿದ್ರೆ ಆಶ್ಚರ್ಯ ಪಡ್ತೀರಾ..


ಹೌದು ಸಾಮಾನ್ಯವಾಗಿ ರಾಜಕೀಯ ಹೇಗೆ ಅಂದರೆ ಒಂದು ಪಕ್ಷದವರು ಏನೇ ಒಳ್ಳೆ ಕೆಲ್ಸ ಮಾಡಿದ್ರು ವಿರೋಧ ಪಕ್ಷದವರು ಟೀಕೆ ಮಾಡೋದು ಸಹಜ. ಆದ್ರೆ ಮೋದಿಯವರು ಮಹಾದಾಯಿ ವಿಷಯ ಮಾತನಾಡಿದ್ದಕ್ಕಾಗಿ ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಹಾಗೆ ಆದಷ್ಟು ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ಈ ಮಹಾದಾಯಿ ಸಮಸ್ಯೆ ಕುರಿತು ಚರ್ಚೆ ಮಾಡಿ ಅಂತ ಧನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ


ಇಂಥವರಿಗೆ ಓಟ್ ಹಾಕಬೇಡಿ!


ಇಂಥವರಿಗೆ ಓಟ್ ಹಾಕಬೇಡಿ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಹಗಲು ರಾತ್ರಿ ಎನ್ನದೇ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಆದ್ರೆ ಪ್ರಜೆಗಳಲ್ಲಿ ಮಾತ್ರ ತಾವು ಯಾರಿಗೆ ಓಟ್ ಹಾಕ್ಬೇಕು ಅನ್ನೋ  ಗೊಂದಲ ಹೆಚ್ಚಾಗ್ತಾ ಇದೆ.


ನಿಜ.  ಉತ್ತಮ ಭವಿಷ್ಯಕ್ಕಾಗಿ, ಉತ್ತಮ ಸಮಾಜಕ್ಕಾಗಿ, ನಾವು ಯಾರಿಗೆ ಓಟ್ ಮಾಡ್ಬೇಕು. ಉತ್ತಮ ಅಭ್ಯರ್ಥಿಗೆ ಓಟ್ ಹಾಕ್ಬೇಕು ಅನ್ನೋದು ಎಲ್ಲರ ಮಾತು. ಹಾಗಾದ್ರೆ ಉತ್ತಮ ಅಭ್ಯರ್ಥಿ ಯಾರು ಉತ್ತಮ ಅಭ್ಯರ್ಥಿಗಳು ಹೇಗಿರ್ತಾರೆ. ಓಟ್ ಹಾಕುವಾಗ ನಾವು ಯಾವೆಲ್ಲ ಅಂಶಗಳನ್ನ ಗಮನದಲ್ಲಿ ಇಟ್ಕೊಬೇಕು.


1) ಪ್ರಜೆಗಳಿಗೆ ಕಷ್ಟ ಬಂದಾಗ ಸಹಾಯ ಮಾಡಿದರೆ ಅದು ಸಹಾಯ. ಆದರೆ ತನಗೆ ಕಷ್ಟ ಬಂದಾಗ ಪ್ರಜೆಗಳಿಗೆ ಸಹಾಯ ಮಾಡಿದರೆ ಅದು ಸಹಾಯ ಅಲ್ಲ ಅದನ್ನ ಸ್ವಾರ್ಥ ಅನ್ನಬಹುದು. ಹಾಗಾಗಿ ಚುನಾವಣೆ ಹತ್ತಿರ ಬಂದಾಗ ಮಾತ್ರ ತನ್ನ ಕ್ಷೇತ್ರದ ಅಭ್ಯರ್ಥಿಗಳಿಗೆ ಸಹಾಯ ಮಾಡುವವನು ಉತ್ತಮ ಅಭ್ಯರ್ಥಿ ಅಲ್ಲ.


2) ತನ್ನ ಅಧಿಕಾರಾವಧಿಯಲ್ಲಿ ಒಮ್ಮೆಯೂ ತನ್ನೆಲ್ಲ  ಕ್ಷೇತ್ರಗಳ ಸ್ಥಿತಿಗತಿಗಳನ್ನ ವಿಚಾರಿಸದವ ಚುನಾವಣೆ ಬಂದಾಗ ಮಾತ್ರ ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ಆಶ್ವಾಸನೆ ಕೊಡುವವನು ಉತ್ತಮ ಅಭ್ಯರ್ಥಿ ಅಲ್ಲ.


3) ಕೈಲಾಗದವರು ಸೋಲೊಪ್ಪಿಕೊಳ್ಳದೇ ದುರ್ಮಾರ್ಗ ಹಿಡಿಯುವವರು ಸ್ವಾರ್ಥ ಅಭ್ಯರ್ಥಿಗಳು. ತನ್ನಿಂದ ಅಭಿವೃಧ್ದಿ ಕೆಲಸ ಮಾಡಲು ಆಗಿಲ್ಲ, ತಾನು ಅಭಿವೃಧ್ದಿ ಕೆಲಸ ಮಾಡುವಲ್ಲಿ ವಿಫಲನಾಗಿದ್ದೇನೆ ಆದರೂ ನನಗೆ ಓಟ್ ಮಾಡಿ ಎಂದು ಹಣ ಹೆಂಡವನ್ನ ಹಂಚುವವ ಅಸಮರ್ಥ ಅಭ್ಯರ್ಥಿ  .


ಪ್ರಜೆಗಳಾದ ನಮಗೆ  ಪಕ್ಷಕ್ಕಿಂತ ಅಭ್ಯರ್ಥಿ ಮುಖ್ಯ  ನಮಗೆ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರಿಗೆ ನಮ್ಮ ಅಮೂಲ್ಯವಾದ ಮತವನ್ನು ಹಾಕೋಣ. ಮೇಲೆ ತಿಳಿಸಿದಂತ ದುಷ್ಟ, ಕನಿಷ್ಟ, ಅಭ್ಯರ್ಥಿಗಳಿಗಾಗಿ ನಮ್ಮ ವಜ್ರಕ್ಕಿಂತ ಹೆಚ್ಚಿಗೆ ಬೆಲೆಬಾಳುವ ಮತವನ್ನು ಹಾಳು ಮಾಡಿಕೊಳ್ಳುವುದು ಬೇಡ.


ಕೊನೆಗೊಂದು ಮಾತು ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ, ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ, ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತಾರೆ. ಪ್ರಪಂಚದಲ್ಲಿ ಎಲ್ಲರೂ ತನ್ನ ಲಾಭವನ್ನೇ ನೋಡುತ್ತಾರೆ.  ಹಾಗಾಗಿ ನಮಗೆ ಲಾಭವಾಗುವಂತೆ ಮಾಡುವ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಉತ್ತಮ ಸಮಾಜ ನಿರ್ಮಾಣ ಮಾಡೋಣ.


ಕಿಚ್ಚನಿಗೆ ಬಾದಾಮಿಯಲ್ಲಿ ಶಾಕ್ ಕೊಟ್ಟ ಜನ! ಬೆಚ್ಚಿ ಬಿದ್ದ ಸಿಎಂ ಸಿದ್ದರಾಮಯ್ಯ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾದಾಮಿಗೆ ಪ್ರಚಾರಕ್ಕೆ ಬರುವ ಮೊದಲೇ ಅಲ್ಲಿನ ಜನ ಶಾಕ್ ಕೊಟ್ಟಿದ್ದಾರೆ. ಇದೇ ಮೇ 9ನೇ ತಾರೀಕು ಕಿಚ್ಚ ಸುದೀಪ್ ಬಾದಾಮಿಗೆ ತೆರಳಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಬೇಕಿತ್ತು. ಆದರೆ ಬಾದಾಮಿಗೆ ತೆರಳುವ ಮೊದಲೇ ಕಿಚ್ಚನಿಗೆ ಶಾಕ್ ಕೊಟ್ಟಿದ್ದಾರೆ ಸ್ಥಳೀಯರು.

ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಬಾದಾಮಿಗೆ ಬಂದರೆ, ನಾವು ಸುಮ್ಮನಿರುವುದಿಲ್ಲ ಎಂದು ವಾಲ್ಮೀಕಿ ಸಮುದಾದ ಮುಖಂಡರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಸುದೀಪ್ ಪ್ರಚಾರದಿಂದ ವಾಲ್ಮೀಕಿ ಮತಗಳನ್ನು ಸೆಳೆಯಬಹುದು ಎಂದು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದರು. ಆದರೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಲ್ಲಿ ಸಿದ್ದರಾಮಯ್ಯ ವಿಫಲವಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಕಿಚ್ಚ ಸುದೀಪ್ ಸಿದ್ದರಾಮಯ್ಯ ಪರ ಪ್ರಚಾರ ಮಾಡಬಾರದು ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.

ಬಾದಾಮಿಯಲ್ಲಿ ಕುರುಬರು ಮತ್ತು ವಾಲ್ಮೀಕಿ ಸಮುದಾಯ ಹೆಚ್ಚಾಗಿ ಇರೋದ್ರಿಂದ ಕುರುಬರ ಮತಗಳು ಸಿದ್ದರಾಮಯ್ಯಗೆ ಹೋಗೋ ಸಾಧ್ಯತೆ ಇದೆ. ವಾಲ್ಮೀಕಿ ಮತಗಳನ್ನು ಸೆಳೆಯಲು ವಾಲ್ಮೀಕಿ ಸಮುದಾಯದ ಶ್ರೀರಾಮುಲುರನ್ನೇ ಅಖಾಡಕ್ಕೆ ಇಳಿಸಿದೆ ಬಿಜೆಪಿ. ಇಂಥಾ ಟೈಮಲ್ಲೇ ನೋಡಿ, ಶ್ರೀರಾಮುಲು ಮತ್ತು ಬಿಜೆಪಿಗೆ ಶಾಕ್ ಕೊಡುವ ನಿಟ್ಟಿನಲ್ಲಿ ಮತ್ತು ವಾಲ್ಮೀಕಿ ಸಮುದಾಯದ ಮತ ಸೆಳೆಯಲು ಸಿದ್ದರಾಮಯ್ಯ ಕಿಚ್ಚ ಸುದೀಪ್ ಅವರನ್ನು ಕರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಿಚ್ಚನ ಬರುವಿಕೆಯನ್ನು ಅರಿತ ವಾಲ್ಮೀಕಿ ಸಮುದಾಯದ ಜನ, ಸುದೀಪ್ ವಿರುದ್ಧ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಈ ನೆಲಕ್ಕೆ ಸುದೀಪ್ ಕಾಲಿಡುವಂತಿಲ್ಲ. ಕಾಲಿಟ್ಟರೆ, ಅದು ವಾಲ್ಮೀಕಿ ಸಮುದಾಯಕ್ಕೆ ಮಾಡುವ ದ್ರೋಹ ಅಂತಿದ್ದಾರೆ.


ಹೇಗೆ ನಡೆದಿದೆ ಗೊತ್ತಾ ಸಿದ್ದು ಸೋಲಿಸಲು ಮಾಸ್ಟರ್ ಪ್ಲಾನ್?ಬಿಜೆಪಿಯಲ್ಲಿ ರಾಜ್ಯ ನಾಯಕರು ಮತ್ತು ರಾಷ್ಟ್ರೀಯ ನಾಯಕರು ಎಲ್ಲರೂ ಒಟ್ಟಾಗಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಮೋದಿ, ಯೋಗಿ ಆದಿತ್ಯನಾಥ್ ಹೀಗೆ ಅನೇಕ ನಾಯಕರು ತಂಡೋಪತಂಡವಾಗಿ ರಾಜ್ಯಕ್ಕೆ ಬರ್ತಾ ಇದ್ದಾರೆ. ಆದ್ರೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಬ್ಬರೇ ಒಂಟಿಯಾಗಿ ಅಖಾಡಕ್ಕೆ ಧುಮುಕಿದ್ದಾರೆ.

ರಾಹುಲ್ ಗಾಂಧಿ ಆಗಾಗ ಬಂದು ಹೋಗ್ತಾ ಇದ್ದಾರೆ ಅನ್ನೋದು ಬಿಟ್ಟರೆ, ಸಿದ್ದರಾಮಯ್ಯನವರ ಹಿಂದೆ ಯಾವ ಕಾಂಗ್ರೆಸ್ ನಾಯಕರೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಸಿದ್ದು ಎಲ್ಲೇ ಹೋದರೂ ಒಂಟಿಯಾಗಿಯೇ ಪ್ರಚಾರ ನಡೆಸುತ್ತಿದ್ದಾರೆ. ಇದರ ಹಿಂದೆ ಬೇರೆಯದೇ ಮರ್ಮ ಇದೆ ಅಂತ ಹೇಳಲಾಗುತ್ತಿದೆ.

ಸದ್ಯಕ್ಕೆ ಓಡಾಡುತ್ತಿರುವ ಸುದ್ದಿ ಪ್ರಕಾರ, ಕಾಂಗ್ರೆಸ್ ನಲ್ಲಿ ಎಲ್ಲರೂ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದು, ಘಟಾನುಘಟಿ ನಾಯಕರು ಸಿದ್ದು ವಿರುದ್ಧ ಕತ್ತಿ ಮಸೀತಿದ್ದಾರೆ ಅನ್ನೋ ಮಾತಿದೆ. 2008ರಲ್ಲಿ ಖರ್ಗೆ ಪ್ರತಿಪಕ್ಷದ ನಾಯಕರಾಗಿದ್ದಾಗ, ಸಿದ್ದರಾಮಯ್ಯ ಕಣ್ಣು ಖರ್ಗೆ ಮೇಲೆ ಬಿದ್ದಿತ್ತು. ತನ್ನೇ ಆದ ಗೇಮ್ ಪ್ಲಾನ್ ಮಾಡಿ ಸಿದ್ದರಾಮಯ್ಯ ಖರ್ಗೆ ಸ್ಥಾನವನ್ನು ಕಿತ್ತುಕೊಂಡು ಬಿಟ್ಟಿದ್ದರು. ಖರ್ಗೆ ರಾಷ್ಟ್ರ ರಾಜಕಾರಣಕ್ಕೆ ತೆರಳ್ತಾ ಇದ್ದಂತೆ, 2013ರಲ್ಲಿ ಕಾಂಗ್ರೆಸ್ ಗೆದ್ದ ಪರಿಣಾಮ ಮುಖ್ಯಮಂತ್ರಿಯಾದ್ರು. ಒಂದು ವೇಳೆ ಖರ್ಗೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಇದ್ದಿದ್ರೆ, ಅವರೇ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಸಿದ್ದರಾಮಯ್ಯ ಮಾಡಿದ ಕೆಲಸದಿಂದ ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ತಪ್ಪಿತು ಅನ್ನೋ ಮಾತಿದೆ.

ಇನ್ನು ಹೈಕಮಾಂಡ್ ಮಾತಿಗೆ ತಲೆ ಬಾಗಿದ ಖರ್ಗೆ ಇಷ್ಟು ದಿನ ಸುಮ್ಮನಿದ್ದರು. ಆದ್ರೆ ಸಿದ್ದರಾಮಯ್ಯ ಆಗಾಗ ಮಾಡೋ ಭಾಷಣದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನಾನೇ ಸಿಎಂ ಆಗ್ತೀನಿ ಅಂತಿದ್ದಾರೆ. ಇದು ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ತಂದೊಡ್ಡಿದೆ. ಹೀಗಾಗಿ ಎಲ್ಲಾ ನಾಯಕರು ಈಗ ಸಿದ್ದು ವಿರುದ್ಧ ತಿರುಗಿ ಬಿದ್ದಿದ್ದು, ಸಿದ್ದುರನ್ನು ಒಂಟಿಯಾಗಿಸಿದ್ದಾರೆ ಅನ್ನೋ ಮಾತಿದೆ.

ಇನ್ನು ಖರ್ಗೆ ಸ್ಥಾನ ಕಿತ್ತುಕೊಂಡಿದ್ದ ಸಿದ್ದರಾಮಯ್ಯ, 2013ರಲ್ಲಿ ಜಿ ಪರಮೇಶ್ವರ್ ಅವ್ರನ್ನ ಸೋಲಿಸಿದ್ದರು ಅನ್ನೋ ಆರೋಪವೂ ಇದೆ.  ಹೀಗಾಗಿ ಪರಮೇಶ್ವರ್ ಗೂ ಸಿದ್ದು ಮೇಲೆ ಸಿಟ್ಟಿದೆ. ಡಿ.ಕೆ,ಶಿವಕುಮಾರ್  ಕೂಡ ನಾನು ಸಿಎಂ ಆಗಬಾರದಾ ಅಂತ ಅಲ್ಲಲ್ಲಿ ಪ್ರಶ್ನೆ ಮಾಡಿದ್ದಾರೆ. ಹೀಗೆ ಕಾಂಗ್ರೆಸ್ ನಲ್ಲಿ ಹಲವು ನಾಯಕರು ಸಿಎಂ ಆಗಬೇಕು ಅಂತ ಕನಸು ಕಾಣ್ತಿರೋ ಟೈಮಲ್ಲೇ, ಸಿಎಂ ಸಿದ್ದರಾಮಯ್ಯ, ಮುಂದಿನ ಸಲಾನೂ ನಾನೇ ಸಿಎಂ ಅಂತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಗೆದ್ದರೆ ನಮಗೆ ಸಿಎಂ ಸ್ಥಾನ ಸಿಗೋದಿಲ್ಲ ಅಂತ ಭಾವಿಸಿದ ಕೆಲವು ನಾಯಕರು, ಇದೀಗ ಸಿದ್ದರಾಮಯ್ಯರನ್ನ ಸೋಲಿಸಲು ಒಳಗೊಳಗೇ ಸಂಚು ನಡೆಸಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. 

ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡಗೆ ದಲಿತ ಮತ್ತು ಹಿಂದುಳಿದ ಮತಗಳು ಹೋಗುವಂತೆ ಮಾಸ್ಟರ್ ಪ್ಲಾನ್ ಮಾಡಲಾಗಿದೆ ಅನ್ನೋ ಸುದ್ದಿನೂ ಇದೆ. ಇನ್ನು ಬಾದಾಮಿಯಲ್ಲಿ ಕುರುಬರ ಸಂಖ್ಯೆ ಹೆಚ್ಚಾಗಿದ್ದು, ಅಲ್ಪಸಂಖ್ಯಾತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರೂ ಸಮ ಪ್ರಮಾಣದಲ್ಲಿದ್ದಾರೆ. ಶ್ರೀರಾಮುಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ಮತಗಳನ್ನು ಸೆಳೆಯುತ್ತಿದ್ದು, ಉಳಿದ ಮತಗಳನ್ನು ಹೇಗೆ ಸಿದ್ದುಗೆ ಬೀಳದಂತೆ ತಪ್ಪಿಸಬೇಕು ಎಂಬ ತಂತ್ರಗಳು ನಡೀತಾ ಇವೆ ಅನ್ನೋ ಸುದ್ದಿ ಓಡಾಡುತ್ತಿದೆ.

ಎರಡೂ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರೆ, ಸಿಎಂ ಆಗೋದಕ್ಕೆ ಸಾಧ್ಯವಿಲ್ಲ. ಆಗ ಸಿದ್ದು ಸಿಎಂ ರೇಸ್ ನಿಂದ ಹೊರಗುಳೀತಾರೆ. ಆಗ ಬಹುಮತ ಇಲ್ಲದಿದ್ದರೂ ಜೆಡಿಎಸ್ ಬೆಂಬಲ ಪಡೆದು ಸರ್ಕಾರ ರಚಿಸಬಹುದು ಅನ್ನೋದು ಕಾಂಗ್ರೆಸ್ ನಲ್ಲೇ ಇರೋ ಕೆಲವು ಪ್ರಭಾವಿ ನಾಯಕರ ರಣತಂತ್ರವಾಗಿದೆ ಅನ್ನೋ ಮಾತಿದೆ. ಹೀಗಾಗಿ ಸಿದ್ದು ವಿರುದ್ಧ ಕಾಂಗ್ರೆಸ್ ನಲ್ಲಿಯೇ ಸಂಚು ನಡೆದಿದೆ ಅನ್ನೋ ಮಾತು ಹೆಚ್ಚಾಗಿ ಸದ್ದು ಮಾಡ್ತಿದೆ.

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು