Recent Movies

ಸಿನೆಮಾ

Share This Article To your Friends

Showing posts with label ನೀತಿ ಕಥೆಗಳು. Show all posts
Showing posts with label ನೀತಿ ಕಥೆಗಳು. Show all posts

ಹಿಂದೂ ಸಂಪ್ರದಾಯಗಳ ವೈಜ್ಞಾನಿಕ ಕಾರಣ

 
ಹಿಂದೂ ಧರ್ಮದ ಸಂಪ್ರದಾಯಗಳು ಮತ್ತು ಆಚರಣೆಯಲ್ಲಿ ಅಡಗಿರುವ ವೈಜ್ಞಾನಿಕ ಸತ್ಯಾಂಶಗಳು ಇಲ್ಲಿವೆ ನೋಡಿ

ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದು.

ಸಾಮಾನ್ಯವಾಗಿ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದರಿಂದಾಗಿ  ನಮಗೆ ಅದೃಷ್ಟ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹಿಂದಿನ ಕಾಲದಲ್ಲಿ ನಾಣ್ಯಗಳನ್ನು ಬಹುತೇಕ ತಾಮ್ರದಲ್ಲಿಯೇ ಮಾಡಲಾಗುತ್ತಿತ್ತು. ಆದರೆ ಇಂದು ಸ್ಟೇನ್ಲೆಸ್ ಸ್ಟೀಲ್ನಲ್ಲಿ ಮಾಡಲಾಗುತ್ತಿದೆ. ತಾಮ್ರವು ಒಂದು ಅದ್ಭುತವಾದ ಲೋಹವಾಗಿದ್ದು, ಮಾನವನ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಪ್ರಯೋಜನಕಾರಿಯಾದ ತಾಮ್ರದ ನಾಣ್ಯಗಳನ್ನು ನದಿಯಲ್ಲಿ ಎಸೆಯುವುದರಿಂದ ನದಿಯ ನೀರು ಶುದ್ಧವಾಗುವುದರ ಜೊತೆಗೆ ಆ ಮೂಲಕ ಸ್ವಲ್ಪ ತಾಮ್ರವು ನಮ್ಮ ದೇಹವನ್ನು ಸೇರುವ ವ್ಯವಸ್ಥೆಯನ್ನ ನಮ್ಮ ಪೂರ್ವಜರು ಮಾಡಿದ್ದರು. ಇದು ಒಂದು ಸಂಪ್ರದಾಯವಾಗಿ ಇಂದಿಗೂ ನಡೆದುಕೊಂಡು ಬಂದಿದೆ.

ಎರಡು ಅಂಗೈಗಳನ್ನ ಜೋಡಿಸಿ ನಮಸ್ಕಾರ ಮಾಡುವುದು

ಹಿಂದೂ ಸಂಪ್ರದಾಯದಲ್ಲಿ ಅತಿಥಿಗಳನ್ನು ಅಥವಾ ಹಿರಿಯರನ್ನು ಕಂಡಾಗ ಅವರನ್ನು ಸ್ವಾಗತಿಸಲು "ನಮಸ್ಕಾರ" ಮುದ್ರೆ ಎಂದರೆ ಎರಡು ಅಂಗೈಗಳನ್ನು ಜೋಡಿಸುವ ಕ್ರಿಯೆಯನ್ನು ಮಾಡಲಾಗುತ್ತದೆ. ಇನ್ನು ಇದರ ಹಿಂದಿನ ವೈಜ್ಞಾನಿಕ ಸತ್ಯಾಂಶವನ್ನು ನೋಡುವುದಾದರೆ, ಎರಡು ಕೈಗಳ ಅಂಗೈಗಳನ್ನು ಪರಸ್ಪರ ಜೋಡಿಸುವುದರಿಂದ ಹತ್ತು ಬೆರಳುಗಳು ಪರಸ್ಪರ ಕೂಡುತ್ತವೆ. ಆಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ತಾಕುತ್ತವೆ. ಇದರಿಂದ ನಮಗೆ ಪರಿಚಯವಾಗುವ ವ್ಯಕ್ತಿಯ ಹೆಸರನ್ನು ದೀರ್ಘಕಾಲ ನಾವು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಾವು ದೈಹಿಕವಾಗಿ ಆ ವ್ಯಕ್ತಿಯನ್ನು ಸ್ಪರ್ಶಿಸಲು ಹೋಗದ ಕಾರಣ, ಯಾವುದೇ ಕೀಟಾಣುಗಳು ಸಹ ನಮ್ಮ ಸಂಪರ್ಕಕ್ಕೆ ಬರುವುದಿಲ್ಲ ಅನ್ನೋದು.

ಮಹಿಳೆಯರು ಕಾಲುಂಗರ ಧರಿಸುವುದು

ಹೆಂಗಸರು ಕಾಲುಂಗುರ ಹಾಕಿಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಅದೇನೆಂದರೆ ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಈ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ. ಇದರಲ್ಲಿರುವ ನರವು ನೇರವಾಗಿ ಗರ್ಭಾಶಯ ಮತ್ತು ಹೃದಯವನ್ನು ಸಂಪರ್ಕಿಸುತ್ತದೆ. ಇದಕ್ಕೆ ಕಾಲುಂಗುರವನ್ನು ಹಾಕಿಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುತ್ತದೆ. ಇದರಿಂದ ಗರ್ಭಕೋಶಕ್ಕೆ ನಿರಂತರವಾಗಿ ರಕ್ತ ಪೂರೈಕೆಯು ಸರಾಗವಾಗಿ ಸಾಗುತ್ತದೆ, ಮತ್ತು ಋತು ಚಕ್ರವು ಯಾವುದೇ ದೋಷಗಳಿಲ್ಲದೆ ನಡೆಯುತ್ತದೆ.ಕಾಲುಂಗರದಲ್ಲಿ ಉಪಯೋಗಿಸುವ ಬೆಳ್ಳಿ ಲೋಹವು ಅತ್ಯುತ್ತಮವಾದ ವಾಹಕವಾಗಿದ್ದು, ಇದು ಭೂಮಿಯಲ್ಲಿನ ಧೃವೀಯ ಶಕ್ತಿಗಳನ್ನು ಎಳೆದುಕೊಂಡು ಅದನ್ನು ದೇಹಕ್ಕೆ ರವಾನಿಸುತ್ತೆ.

ಹಣೆಗೆ ತಿಲಕ ಹಚ್ಚುವ ಕ್ರಮ
ಪುರಾತನ ಕಾಲದಿಂದಲೂ ಹಣೆಯ ಎರಡು ಹುಬ್ಬುಗಳ ನಡುವಿನ ಭಾಗದಲ್ಲಿ ನೆಲೆಸಿರುವ ಸ್ಥಳವನ್ನು ಮಾನವ ದೇಹದ ಪ್ರಧಾನ ನರಕೇಂದ್ರ ಅಂತ ಪರಿಗಣಿಸಲಾಗಿದೆ. ತಿಲಕವು ದೇಹದಲ್ಲಿನ ಶಕ್ತಿಯು ಪೋಲಾಗುವುದುನ್ನು ತಡೆಯುತ್ತದೆ. ಈ ಎರಡು ಹುಬ್ಬುಗಳ ನಡುವೆ ಇಡುವ ಕೆಂಪು"ಕುಂಕುಮ"ವು ದೇಹದಲ್ಲಿನ ಶಕ್ತಿಯನ್ನು ಮರು ಸಂಚಯಗೊಳಿಸುತ್ತದೆ ಮತ್ತು ಏಕಾಗ್ರತೆಯ ವಿವಿಧ ಘಟ್ಟಗಳನ್ನು ನಿಯಂತ್ರಿಸುತ್ತದೆ.

ದೇವಾಲಯಗಳಲ್ಲಿ ಗಂಟೆಗಳು

ಜನರು ದೇವಾಲಯಗಳಿಗೆ ಭೇಟಿ ನೀಡಿದಾಗ ಗರ್ಭಗುಡಿಯನ್ನು ಪ್ರವೇಶಿಸುವ ಮೊದಲು ಘಂಟೆಯನ್ನು ಬಾರಿಸುತ್ತಾರೆ. ಕಾರಣವೇನೆಂದರೆ ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆಯಂತೆ. ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತೆ. ಈ ಘಂಟೆಯನ್ನು ಯಾವ ಪ್ರಕಾರ ಮಾಡಿರುತ್ತಾರೆ ಅಂದರೆ ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆಯಂತೆ. ನಾವು ಯಾವಾಗ ಘಂಟೆಯನ್ನು ಹೊಡೆಯುತ್ತೇವೆಯೋ, ಆಗ ಅದು ಕನಿಷ್ಟ 7 ಸೆಕೆಂಡ್ಗಳ ಕಾಲ ಪ್ರತಿ ಧ್ವನಿಸುತ್ತೆ.

ನವರಾತ್ರಿಗಳ ಆಚರಣೆ
ನವರಾತ್ರಿಗಳು ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದಿನ ಜೀವನಕ್ಕು ಮತ್ತು ಇಂದಿನ ಜೀವನಕ್ಕು ಅಜಗಜಾಂತರ ವ್ಯತ್ಯಾಸಗಳು ನಮಗೆ ಕಂಡು ಬರುತ್ತವೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು-ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ನೀವು ಎಂದಾದರು ಆಲೋಚಿಸಿದ್ದೀರೇ? ನಾವೇಕೆ ವರ್ಷಕ್ಕೆ ಒಂದು ದೀಪಾವಳಿ, ಹೋಳಿಯನ್ನು ಆಚರಿಸುತ್ತೇವೆ ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. ಹೌದು ವಸಂತ ನವರಾತ್ರಿ ಮತ್ತು ಶರನ್ನಾವರಾತ್ರಿ ಎಂಬ ಎರಡು ನವರಾತ್ರಿಗಳನ್ನು ನಾವು ಆಚರಿಸುತ್ತೇವೆ. ಈ ಎರಡು ಮಾಸಗಳು ಋತು ಬದಲಾವಣೆಯನ್ನು ಹೊಂದಿರುವ ಮಾಸಗಳಾಗಿದ್ದು, ನಮ್ಮ ಆಹಾರ ಸೇವನೆಯ ಕ್ರಮವು ಈ ಅವಧಿಯಲ್ಲಿ ಪರಸ್ಪರ ಬದಲಾವಣೆಯಿಂದ ಕೂಡಿರುತ್ತದೆ. ನವರಾತ್ರಿಗಳು ನಮ್ಮನ್ನು ನಾವು ಈ ಆಹಾರ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುವ ಗುಣಗಳನ್ನು ಹೊಂದಿದೆ. ಅದು ಹೇಗೆಂದರೆ ಆಸ್ತಿಕ ಭಕ್ತ ಸಮೂಹವು ಈ ನವರಾತ್ರಿಗಳ ಸಂದರ್ಭದಲ್ಲಿ ಉಪವಾಸವಿರುತ್ತಾರೆ. ಇದರಿಂದ ಅವರು ಹೊಸ ಆಹಾರ ಶೈಲಿಗೆ ಒಗ್ಗಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಜನರು ಉಪ್ಪು ಮತ್ತು ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ಮತ್ತು ದೃಢ ನಿರ್ಧಾರದ ಶಕ್ತಿಯನ್ನು (ಉಪವಾಸ ಮಾಡುವುದರಿಂದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿಯು ಹೆಚ್ಚಾಗುತ್ತದೆ) ಹೆಚ್ಚಿಸುತ್ತದೆ ಮತ್ತು ಕೊನೆಗೆ ಆ ಋತುವಿನಲ್ಲಿ ಸಂಭವಿಸುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.

ತುಳಸಿ ಗಿಡಗಳನ್ನು ಪೂಜಿಸುವುದು

ನಾವೇಕೆ ತುಳಸಿ ಗಿಡಗಳನ್ನು ಪೂಜಿಸುತ್ತೇವೆ ಅಂದ್ರೆ  ಹಿಂದೂ ಧರ್ಮವು "ತುಳಸಿ" ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. " ಪವಿತ್ರ ತುಳಸಿ" ಎಂದು ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣಬಹುದು. ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗು ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.

ಅರಳಿ ಮರವನ್ನು ಪೂಜಿಸುವುದು

"ಅರಳಿ ಮರ" ಅಥವಾ "ಅಶ್ವತ್ಥ ವೃಕ್ಷ" ಎಂದು ಕರೆಯಲ್ಪಡುವ ಮರವನ್ನು ನಾವು ಸಾಮಾನ್ಯವಾಗಿ ಎಲ್ಲಾ ಊರುಗಳ ನಾಗರ ಕಟ್ಟೆ, ಅಶ್ವತ್ಥ ಕಟ್ಟೆ, ದೇವಾಲಯಗಳ ಬಳಿಯಲ್ಲಿ ಕಾಣುತ್ತೇವೆ. ನಿಜ ಹೇಳಬೇಕೆಂದರೆ ಇದು ಸಾಮಾನ್ಯ ಮನುಷ್ಯರಿಗೆ ನೆರಳನ್ನು ಬಿಟ್ಟರೆ ಬೇರೇನು ನೀಡುವುದಿಲ್ಲ. ಇದರಲ್ಲಿ ರುಚಿಕರವಾದ ಹಣ್ಣು ನೀಡುವುದಿಲ್ಲ. ಆದರೂ ಒಬ್ಬ ಸಾಮಾನ್ಯ ಹಳ್ಳಿಯವರೂ ಸಹ ಇದನ್ನು ಬೆಳೆಸಿ, ಪೋಷಿಸಿ, ಇದರ ರಕ್ಷಣೆಗೆ ನಿಂತಿರುತ್ತಾರೆ ಎಂದರೆ ಅಂತಹದು ಏನಿದೆ ಈ ಮರದಲ್ಲಿ ? ಹೌದು, ಇದೆ. ಅದನ್ನೆ ನಮ್ಮ ಪೂರ್ವಿಕರು ಕಂಡು ಹಿಡಿದಿದ್ದು, ಈ ಮರವು ರಾತ್ರಿ ಸಮಯದಲ್ಲಿ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿದೆ. ಇಂತಹ ಮರವು ಮನುಕುಲಕ್ಕೆ ಅತ್ಯಾವಶ್ಯಕ ಎಂದು ಪರಿಗಣಿಸಿಯೇ, ಅಶ್ವತ್ಥ ವೃಕ್ಷಕ್ಕೆ ಇದಕ್ಕೆ ತ್ರಿಮೂರ್ತಿಗಳ ಆವಾಸ ಸ್ಥಾನವೆಂದು ಕರೆದು ಇದನ್ನು ಪೂಜಿಸಲು ತಿಳಿಸಿದ್ದಾರೆ.

ಗಂಡಸರ ತಲೆಯ ಮೇಲೆ ಶಿಖೆ
ಆಯುರ್ವೇದದ ಆದಿ ತಜ್ಞನಾದ ಸುಶ್ರುತ ಋಷಿಯು ತಲೆಯಲ್ಲಿನ ಅತ್ಯಂತ ಸೂಕ್ಷ್ಮ ಭಾಗವನ್ನು ಅಧಿಪತಿ ಮರ್ಮ ಎಂದು ಗುರುತಿಸಿದ್ದನು. ಇದು ಎಲ್ಲಾ ನರಗಳು ಕೂಡುವು ಭಾಗವಾಗಿದೆ. ಶಿಖೆಯು ಈ ಭಾಗವನ್ನು ರಕ್ಷಿಸುತ್ತದೆ. ಇದು ಮೆದುಳಿನ ಕೆಳಗೆ ಇರುವ ಬ್ರಹ್ಮರಂಧ್ರವನ್ನು ಕಾಪಾಡುತ್ತದೆ. ಇಲ್ಲಿಗೆ ದೇಹದ ಕೆಳಭಾಗದಿಂದ ಬರುವ ಸುಶುಮ ನಾಡಿಯು ಸಂಪರ್ಕಿಸುತ್ತದೆ. ಯೋಗದಲ್ಲಿ ಬ್ರಹ್ಮ ರಂಧ್ರವು ಏಳು ಚಕ್ರಗಳಲ್ಲಿಯೇ ಅತ್ಯಂತ ಶ್ರೇಷ್ಟವಾದ ಚಕ್ರವಾಗಿರುತ್ತದೆ. ಇದು ಸಾವಿರ ದಳಗಳ ಕಮಲಕ್ಕೆ ಸರಿಸಮವೆಂಬ ಭಾವನೆ ಯೋಗಿಗಳಲ್ಲಿ ಇದ್ದು, ಜ್ಞಾನ ಕೇಂದ್ರದಂತೆ ಕೆಲಸ ಮಾಡುತ್ತದೆ. ಶಿಖೆಯು ಈ ಕೇಂದ್ರವನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ಓಜಸ್ಸು ಎಂಬ ಶಕ್ತಿಯನ್ನು ಸಂರಕ್ಷಿಸುತ್ತದೆ.

ನೆಲದ ಮೇಲೆ ಕುಳಿತು ಊಟಮಾಡುವುದು

ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಅದು ಯೋಗ ಸಾಧನೆಯ ಒಂದು ಆಸನವೆನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಹೇಳುವಂತೆ  ಸುಖವಾಗಿ ಅಂದರೆ ಯಾವುದೇ ನೋವಿಲ್ಲದೆ ಕೂರಬಹುದಾದ ಆಸನ. ಈ ಆಸನದಲ್ಲಿ ಕೂರುವುದರಿಂದ ರಕ್ತ ಪರಿಚಲನೆಯು ಯಾವುದೇ ಅಡೆತಡೆಗಳಿಲ್ಲದೆ ನಡೆದು, ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನೇ ನಾವು ಕುರ್ಚಿಯ ಮೇಲೆ ಕುಳಿತು ಅಥವಾ ನಿಂತು ಊಟ ಮಾಡುವುದರಿಂದ ನಮಗೆ ಈ ಪ್ರಯೋಜನಗಳು ಸಿಗುವುದಿಲ್ಲ.

ಉತ್ತರಕ್ಕೆ ತಲೆ ಇಟ್ಟು  ಮಲಗಬಾರದು

ಇದರ ಹಿಂದೆ ಒಂದು ಕಟ್ಟುಕತೆಯಿದೆ, ಅದೇನೆಂದರೆ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ದೆವ್ವ,ಭೂತಗಳನ್ನು ಆಹ್ವಾನಿಸಿದಂತಾಗುತ್ತವೆ ಎಂಬುದು. ಆದರೆ ವಿಜ್ಞಾನವು ಹೇಳುವುದೇನೆಂದರೆ ಮಾನವ ದೇಹಕ್ಕೆ ತನ್ನದೇ ಆದ ಕಾಂತ ಕ್ಷೇತ್ರ ಇರುತ್ತದೆ,ಇದನ್ನು ಹೃದಯದ ಕಾಂತ ಅಥವಾ ಮ್ಯಾಗ್ನೆಟಿಕ್ ಕ್ಷೇತ್ರ ಎಂದು  ಕರೆಯುತ್ತಾರೆ. ಏಕೆಂದರೆ ರಕ್ತ ಪರಿಚಲನೆಯ ಕಾರಣವಾಗಿ, ಮತ್ತು ಭೂಮಿಯೇ ಒಂದು ದೊಡ್ಡ ಸೂಜಿಗಲ್ಲು ಅಥವಾ ಮ್ಯಾಗ್ನೆಟ್. ಯಾವಾಗ ನಾವು ಉತ್ತರಕ್ಕೆ ತಲೆ ಇಟ್ಟು ಮಲಗುತ್ತೇವೆಯೋ, ಆಗ ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದುಕೊಳ್ಳುತ್ತದೆ. ಇದರಿಂದ ಮುಂದೆ ರಕ್ತದ ಒತ್ತಡ ಮತ್ತು ಹೃದ್ರೋಗದಂತಹ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಈ ಕಾಂತ ಕ್ಷೇತ್ರದ ಸಮತೋಲವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಇದರ ಜೊತೆಗೆ ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಕಬ್ಬಿಣಾಂಶವಿರುತ್ತದೆ. ನಾವು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಆ ಕಾಂತ ಕ್ಷೇತ್ರದಿಂದ ಆಕರ್ಷಣೆಯಾಗುವ ನಮ್ಮ ದೇಹದ ಕಬ್ಬಿಣಾಂಶವು ತಲೆಯಲ್ಲಿ ಶೇಖರಗೊಳ್ಳುತ್ತದೆ. ಇದರಿಂದ ತಲೆನೋವು , ಅಲ್ಜೀಮರ್ ಕಾಯಿಲೆ, ಪ್ರಜ್ಞಾಶೂನ್ಯತೆ, ಪಾರ್ಕಿನ್ಸನ್ ಕಾಯಿಲೆಯಂತ ಮೆದುಳಿನ ಕಾರ್ಯ ಕ್ಷೀಣಿಸುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರ ಹಿಂದೂಗಳು ಸೂರ್ಯ ಭಗವಾನ್ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿಕಾಲದಿಂದಲು ನಡೆದು ಬಂದಿದೆ. ಬೆಳಗ್ಗೆ ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಇದನ್ನು ಮಾಡುತ್ತಾರೆ. ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ
ಮಕ್ಕಳಿಗೆ ಕಿವಿ ಚುಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖವಾದ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈಧ್ಯರು ಸಹ ಈ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಚುಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಿಸಿಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ. ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕಿವಿಗಳಿಗೆ ಫ್ಯಾಶನ್ ಆಗಿ ತೋರುವ ಕಿವಿಯೋಲೆಗಳನ್ನು ಧರಿಸುತ್ತಿರೋದು.

ಹಣೆಗೆ ಸಿಂಧೂರ ಅಥವಾ ಕುಂಕುಮ ಹಚ್ಚುವುದು

ಮದುವೆಯಾದ ಹೆಂಗಸರು ಹಣೆಯಲ್ಲಿ ಧರಿಸುವ ಸಿಂಧೂರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಸಿಂಧೂರವನ್ನು ಅರಿಶಿಣ-ಸುಣ್ಣ ಮತ್ತು ಪಾದರಸದ ಲೋಹಗಳನ್ನು ಸೇರಿಸಿ ಮಾಡಿರುತ್ತಾರೆ. ಪಾದರಸವು ಸ್ವಾಭಾವಿಕವಾಗಿ ರಕ್ತದ ಒತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಲೈಂಗಿಕಾಸಕ್ತಿಯನ್ನು ಸಹ ಕೆರಳಿಸುತ್ತದೆ. ಇದರಿಂದಾಗಿಯೇ ವಿಧವೆಯರು ಸಿಂಧೂರವನ್ನು ಧರಿಸಲು ಸಂಪ್ರದಾಯ ನಿಷೇಧ ಹೇರಿರುವುದು. ಅಲ್ಲದೇ ಪಾದರಸವು ಒತ್ತಡ ಮತ್ತು ಆಯಾಸವನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ತನ್ನಲ್ಲಿ ಹೊಂದಿದೆ.

ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ

ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನಲೆಯ ವ್ಯಕ್ತಿಗಳು ಆಗಿರುತ್ತಾರೆ. ಯಾವಾಗ ಅವರು ನಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಈ ಕ್ರಿಯೆಯು ನಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ  ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ. ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ, ಇದನ್ನು ಕರುಣಾ ಎಂದು ಕರೆಯುತ್ತಾರೆ. ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು ಹೆಚ್ಚಿಸುತ್ತದೆ ಮತ್ತು ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಎರಡು ಮನಸ್ಸು, ಹೃದಯಗಳನ್ನು ಬೆಸೆಯುತ್ತದೆ.. ಯಾವಾಗ ನೀವು ನಿಮ್ಮ ಕೈಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ " ಧಾರಕಗಳಾಗಿ" ಕಾರ್ಯನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿಯನ್ನು " ನೀಡುವ" ಅಂಶವಾಗಿ ಗುರುತಿಸಲ್ಪಡುತ್ತದೆ.

ನಾವೇಕೆ ಉಪವಾಸವಿರುತ್ತೇವೆ
ಉಪವಾಸದ ಹಿಂದಿನ ತತ್ವವು ಆಯುರ್ವೇದದಲ್ಲಿ ಅಡಗಿದೆ. ಈ ಪ್ರಾಚೀನ ವೈಧ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳಾಗಿರುತ್ತದೆ ಎಂದು ಹೇಳುತ್ತದೆ. ಈ ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರಬಹುದು. ಹೀಗಾಗಿ ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದಲ್ಲಿ ಶೇ 80% ರಷ್ಟು ನೀರು ಮತ್ತು ಶೇ.20% ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಈ ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸುತ್ತದೆ.

ನಾವೇಕೆ ವಿಗ್ರಹಗಳನ್ನು ಪೂಜಿಸುತ್ತೇವೆ


ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರ ಮನುಷ್ಯನು ತಾನು ನೋಡುವುದರ ಆಧಾರದ ಮೇಲೆ ಆಲೋಚನೆಗಳನ್ನು ಹೊಂದುತ್ತಾನಂತೆ. ಒಂದು ವೇಳೆ ನಿಮ್ಮ ಮುಂದೆ ಮೂರು ವಸ್ತುಗಳು ಇದ್ದಲ್ಲಿ, ಅದರಲ್ಲಿ ಯಾವ ವಸ್ತುವನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳು ಬದಲಾಗುತ್ತವೆಯಂತೆ. ಈ ಕಾರಣವಾಗಿಯೇ ಪ್ರಾಚೀನ ಕಾಲದಲ್ಲಿ ಮೂರ್ತಿ ಪೂಜೆಯು ಆರಂಭಗೊಂಡಿತು. ಯಾವಾಗ ಜನರು ದೇವರನ್ನು ಮೂರ್ತಿಯ ರೂಪದಲ್ಲಿ ನೋಡಲು ಆರಂಭಿಸಿದರೋ, ಆಗಲೇ ಅವರ ಮನಸ್ಸನ್ನು ಏಕ ಚಿತ್ತದಿಂದ ದೇವರ ಮೇಲೆ ನೆಲೆಗೊಳಿಸಲು ಸಾಧ್ಯವಾಗುತ್ತ ಹೋಯಿತು. ಇದರಿಂದ ಅವರ ಧ್ಯಾನಕ್ಕೆ ಯಾವುದೇ ಭಂಗ ಬರುತ್ತಿರಲಿಲ್ಲ ಮತ್ತು ಅವರಲ್ಲಿ ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತಿತ್ತು.

ಭಾರತೀಯ ಮಹಿಳೆಯರು ಬಳೆಗಳನ್ನು ಧರಿಸುವುದು

ಸಾಮಾನ್ಯವಾಗಿ ಮನುಷ್ಯರಲ್ಲಿ ಮೊಣಕೈ ಭಾಗವು ಅತಿ ಹೆಚ್ಚು ಸಕ್ರಿಯವಾಗಿರುವ ಭಾಗವಾಗಿದೆ. ಇದರ ಜೊತೆಗೆ ಇದೇ ಭಾಗದಲ್ಲಿನ ನಾಡಿಯನ್ನು ಪರೀಕ್ಷಿಸಿಯೇ ಜನರಿಗೆ ಬರುವ ವಿವಿಧ ಕಾಯಿಲೆಗಳನ್ನು ಗುರುತಿಸಬಹುದು. ಮಹಿಳೆಯರು ಬಳೆಗಳನ್ನು ತಮ್ಮ ಅಂಗೈಗೆ ಧರಿಸಿಕೊಳ್ಳುವುದು ತಿಳಿದ ವಿಚಾರವೇ. ಇದರಿಂದ ಬಳೆಗಳ ನಿರಂತರ ಘರ್ಷಣೆಯು ಈ ಭಾಗದ ಮೇಲೆ ಆಗುತ್ತಿರುತ್ತದೆ. ಆಗ ಇದು ದೇಹದಲ್ಲಿನ ರಕ್ತ ಪರಿಚಲನೆಯು ಅಧಿಕಗೊಳ್ಳುತ್ತದೆ. ಕೆಲವೊಮ್ಮೆ ನಮ್ಮ ದೇಹದಲ್ಲಿ ಸೃಷ್ಟಿಯಾಗುವ ವಿದ್ಯುತ್ ನಮ್ಮ ತ್ವಚೆಯ ಮೂಲಕ ಹೊರ ಬರುತ್ತದೆ, ಆಗ ಬಳೆಗಳು ಅದನ್ನು ಎಳೆದುಕೊಂಡು ಪುನಃ ನಮ್ಮ ದೇಹಕ್ಕೆ ರವಾನಿಸುತ್ತವೆ. ಏಕೆಂದರೆ ಬಳೆಗಳು ದುಂಡಗೆ ವೃತ್ತಾಕಾರವಾಗಿ ಇರುವುದರಿಂದ ವಿದ್ಯುತ್ ಇತರ ಕಡೆ ಪ್ರವಾಹಿಸಲು ಸಾಧ್ಯವಾಗದೆ ಮರಳಿ ದೇಹಕ್ಕೆ ರವಾನೆಯಾಗುತ್ತದೆ

13 ವರ್ಷದ ಬಾಲೆಯ ‘ಎದೆಗರ್ಭ’ದಲ್ಲಿತ್ತು ಮೌಂಟ್ ಎವರೆಸ್ಟ್

ಆಕೆಯ ವಯಸ್ಸು ಕೇವಲ 13 ವರ್ಷ ಮಾತ್ರ.. ಆದ್ರೆ ಅವಳು ಮಾನಸಿಕವಾಗಿ ಪ್ರಬುದ್ಧಳಾಗಿದ್ದಳು.. ದೈಹಿಕವಾಗಿ ಸಮರ್ಥಳಾಗಿದ್ದಳು.. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಆಕೆಯ ಮನದಲ್ಲಿ ಒಂದು ಬಯಕೆ ಚಿಗುರೊಡೆಯಿತು. ಬಯಕೆಯ ಬೆನ್ನು ಹತ್ತಿದ ಬಾಲೆ, 13 ವರ್ಷದಲ್ಲಿಯೇ ತನ್ನ ಗುರಿ ತಲುಪಿದ್ದಾಳೆ. ಅಂದ್ಹಾಗೆ ಆ ಬಾಲೆ ಯಾರು ಗೊತ್ತಾ..?  ಮಲವತ್ ಪೂರ್ಣ..





ಪೂರ್ಣಾಳ ವಯಸ್ಸು ಕೇವಲ 13 ವರ್ಷ. ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡ್ಬೇಕು ಅನ್ನೋದು ಆಕೆಯ ಮನದಾಳದಲ್ಲಿ ಉದ್ಭವಿಸಿದ ಬಯಕೆ.  ಆಸೆಯನ್ನು ‘ಎದೆಗರ್ಭ’ದಲ್ಲಿ ಹೊತ್ತು, ಮಾತೆಯ ಮಮತೆ ನೀಡಿ ಪೋಷಿಸಿ, ಬೆಳೆಸಿದಳು.

ಸೂಕ್ತ ತರಬೇತಿ ಪಡೆದ ಆಂಧ್ರಪ್ರದೇಶದ ಪೂರ್ಣ, ಕಳೆದ ಮೇ 25, 2014 ರಲ್ಲಿ ನೇಪಾಳದ ಗಡಿ ಭಾಗದಿಂದ ಮೌಂಟ್ ಎವರೆಸ್ಟ್ ಹತ್ತುವ ನಿರ್ಧಾರ ಮಾಡಿದಳು. ಕೊರೆಯುವ ಚಳಿಗೆ ಜಗ್ಗದೇ, ಎವೆರೆಸ್ಟ್ ಮೇಲೆಕ್ಕೆ ಹೆಜ್ಜೆ ಹಾಕತೊಡಗಿದಳು.. ಆಕೆ 3,300 ಮೀಟರ್ ಎತ್ತರಕ್ಕೆ ಹೋದಾಗ ಆಕೆಯ ಕಣ್ಣಿಗೆ ಬಿದ್ದ ದೃಶ್ಯವನ್ನು ನೋಡಿ ಆಕೆ ನಿಜಕ್ಕೂ ಬೆಚ್ಚಿ ಬಿದ್ದಿದ್ದಳು.
ಯಾಕೆಂದ್ರೆ ಅಲ್ಲಿ ಆರು ಅನಾಥ ಹೆಣಗಳು ವಿರೂಪವಾಗಿ ಬಿದ್ದಿದ್ದವು...!


ಯಸ್.. ಅವು ಮೌಂಟ್ ಎವರೆಸ್ಟ್ ಹತ್ತಲು ಹೋದ ಯಾತ್ರಿಕರ ಹೆಣಗಳು..! ಅದನ್ನು ಕಂಡು ಪೂರ್ಣಗೆ ಶಾಕ್ ಆಯ್ತು.. ಆದ್ರೂ ಕೂಡ ತನ್ನ ಮನದೊಳಗಿನ ಛಲವನ್ನು ಬಿಡಲಿಲ್ಲ.. ಸಾವಿಗಿಂತ ಸಾಧನೆ ಮುಖ್ಯ ಎಂದು ಪಟ್ಟು ಹಿಡಿದ ಬಾಲೆ, ಮತ್ತೆ ಮುಂದಕ್ಕೆ ಹೆಜ್ಜೆ ಇಡುತ್ತಾ ನಡೆದಳು.. ಅಂತಿಮವಾಗಿ ಮೌಂಟ್ ಎವೆರಸ್ಟ್​​ನ ತುತ್ತ ತುದಿಯನ್ನು ತಲುಪುವುದರ ಮೂಲಕ ತನ್ನ ಸಾಧನೆಯ ದಾಹವನ್ನು ತಣಿಸಿಕೊಂಡಿದ್ದಾಳೆ..!

ವಯಸ್ಸು ಚಿಕ್ಕದಾದ್ರೂ, ಆಕೆಯ ಮನದ ಇಂಗಿತ ಮತ್ತು ಸಾಧಿಸುವ ಛಲವನ್ನು ಎಲ್ಲರೂ ಮೆಚ್ಚಲೇ ಬೇಕು... ಪೂರ್ಣಾಳ ಬದುಕಿನ ಹೆಜ್ಜೆಗಳು ನಿಜಕ್ಕೂ ಎಲ್ಲರಿಗೂ ಮಾದರಿ.. ಏನಂತೀರಿ..?

ಸವಿ ನೆನಪಿನ
ಶೇಖ್​​(ಸ್ಪಿಯ)ರ್


ಬ್ರಹ್ಮನ ಬರಹವನ್ನು ಅಳಿಸಿ, ಹೊಸ ಭವಿಷ್ಯ ಬರೆದುಕೊಂಡ..! ತಪ್ಪು ಯಾರದು ಗೊತ್ತಾ..?


ಬಸ್ಸಪ್ಪ ಎಂಬ ಹುಡುಗ ಬಹಳ ಬುದ್ದಿವಂತ.. ಓದಿನಲ್ಲಿ ಸದಾ ಮುಂದು.. ಯಾರು ಎಂಥದ್ದೇ ಪ್ರೆಶ್ನೆಗಳನ್ನು ಕೇಳಿದ್ರೂ ತಕ್ಷಣವೇ ಥಟ್ ಅಂತ ಉತ್ತರಿಸುತ್ತಿದ್ದ.. ಖಾಸಗಿ ಶಾಲೆ ಸೇರಿಸಲು ಆ ಹುಡುಗನ ತಂದೆಗೆ ಸಾಧ್ಯವಾಗದ ಪರಿಸ್ಥಿತಿ. ಸರ್ಕಾರಿ ಶಾಲೆ ನೀಡಿದ ಉಚಿತ ಶಿಕ್ಷಣವೇ ಬಸ್ಸಪ್ಪನ ಬುದ್ದಿವಂತಿಕೆಯನ್ನು ಚುರುಕುಗೊಳಿಸಿತ್ತು..

ಹತ್ತನೇ ತರಗತಿಯವರೆಗೆ ಆತ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ಮುಗಿಸಿದ.. ನಂತರ ಬಸ್ಸಪ್ಪ ಸೈನ್ಸ್ ತೆಗೆದುಕೊಳ್ಳಲು ಮುಂದಾದ.. ಅಂತೂ ಇಂತು ಹರಸಾಹಸ ಪಟ್ಟು ಸೈನ್ಸ್ ಸೇರಿದ,. ಪಿಯುಸಿ ಕೂಡ ಮುಗಿಸಿದ. ನಂತರ ಆತನ ಗುರಿ ಇದ್ದದ್ದು, ದೊಡ್ಡ ಖಗೋಳ ವಿಜ್ಞಾನಿಯಾಗಬೇಕು ಅಂತ..


ಸಿಇಟಿನಲ್ಲಿ ಉತ್ತಮ ಅಂಕಗಳನ್ನೂ ಪಡೆದ. ಆದ್ರೆ ಆತನಿಗೆ ಸೀಟು ಸಿಗಲಿಲ್ಲ.. ಕಾರಣ ಬಸ್ಸಪ್ಪ ಮೇಲ್ಜಾತಿಗೆ ಸೇರಿದವನಾಗಿದ್ದ.. ಜಾತಿವಾರು ಮೀಸಲಾತಿಯಲ್ಲಿ, ಹಲವರಿಗೆ ಸೀಟುಗಳು ದಕ್ಕಿದವು.. ಆದ್ರೆ ಅವರೆಲ್ಲರಿಗಿಂತಲೂ ಹೆಚ್ಚಿನ ಅಂಕಗಳನ್ನು ಗಳಿಸಿದ್ದ ಬಸ್ಸಪ್ಪನಿಗೆ ಸೀಟು ಸಿಗಲಿಲ್ಲ..!

 

ಖಗೋಳ ವಿಜ್ಞಾನಿಯೇ ಆಗಬೇಕು ಅಂತ ಹಠ ಹಿಡಿದ ಬಸ್ಸಪ್ಪನ ಓದು, ಸಿಇಟಿಗೆ ಅಂತ್ಯವಾಗುವ ಕಾಲ ಬಂದೇ ಬಿಟ್ಟಿತು.. ಮೇಲ್ಜಾತಿಗೆ ಸೇರಿದವನೆಂಬ ಕಾರಣಕ್ಕಾಗಿ, ಆತನಿಗೆ ಅವಕಾಶಗಳು ಕೈತಪ್ಪಿ ಹೋದವು..! ಆದರೆ ಹೊಟ್ಟೆ ಕೇಳಬೇಕಲ್ಲಾ..? ಬದುಕಿಗಾಗಿ ಗ್ಯಾರೇಜ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡ.. ಬಸ್ಸಪ್ಪನ ಓದಿನ ಬದುಕು ಅಲ್ಲಿಗೆ, ದಿ ಎಂಡ್ ಆಗಿ ಬಿಟ್ಟಿತು..! ಇದಾದ ಇಪ್ಪತ್ತೈದು ವರ್ಷಗಳ ನಂತರ ಬಸ್ಸಪ್ಪನ ಮಗ ಸಿಇಟಿ ಬರೆದ.. ಅಂದು ತಂದೆ ಅಗಾಧ ಪ್ರಮಾಣದಲ್ಲಿ ಅಂಕಗಳನ್ನು ಗಳಿಸಿದರೂ, ಸರ್ಕಾರಿ ಸೀಟು ಸಿಗಲಿಲ್ಲ.. ಆದ್ರೆ ಇಂದು ಬಸ್ಸಪ್ಪನ ಮಗ ಜಸ್ಟ್ ಪಾಸ್ ಆಗಿದ್ದಾನೆ.. ಆದ್ರೆ, ಸಿಇಟಿನಲ್ಲಿ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ..! ಹೇಗೆ ಗೊತ್ತಾ..?

“ಅಂದು ಮೇಲ್ಜಾತಿಯವನಾಗಿದ್ದ ಬಸ್ಸಪ್ಪ ನಂತರದಲ್ಲಿ ಬೇರೊಂದು ಧರ್ಮಕ್ಕೆ ಮತಾಂತರಗೊಂಡಿದ್ದ..! ಆ ಮೂಲಕ ತನ್ನ ಮಗನಿಗೆ ಸರ್ಕಾರಿ ಸೀಟು ಕೊಡಿಸುವಲ್ಲಿ ಬಸ್ಸಪ್ಪ ಯಶಸ್ವಿಯಾದ..!

ಬಸ್ಸಪ್ಪ ಮಾಡಿದ್ದು ತಪ್ಪಾ..? ಉತ್ತರಿಸುವ ಅನಿವಾರ್ಯತೆ ಇದೆ..!

ಲೇಖಕರು
ಸವಿ ನೆನಪಿನ 
ಶೇಖ್‌(ಸ್ಪಿಯ)ರ್‌

ಬದಲಾಯ್ತು ಬದುಕು, ಮುಖದ ಮೇಲಣ ಬಣ್ಣದಂತೆ..!





ನನಗಿನ್ನೂ ನನೆಪಿದೆ.. ಅದು ಸುಮರು ೨೩ ವರ್ಷಗಳಿಗಿಂತಲೂ ಹಿಂದಿನ ಮಾತು.. ನಾನಾಗ ಮೂರು, ನಾಲ್ಕು ವರ್ಷದ ಹುಡುಗನಾಗಿದ್ದೆ.. ಬಡತನ ಅನ್ನೋದು, ನಮ್ಮ ಮನೆಯ ಬಂಧುವಾಗಿತ್ತು.. ವ್ಯವಸಾಯವೇ ಮೂಲಾಧಾರವಾಗಿದ್ದ ಫ್ಯಾಮಿಲಿ.. ಹೊಲದ ಮೂಲೆಯಲ್ಲಿ ಬೆಳೆದ ತರಕಾರಿಯೇ ತುತ್ತಿನ ಚೀಲ ತುಂಬಿಸುತ್ತಿತ್ತು.. ಅಂತಹ ಪರಿಸ್ಥಿತಿಯಲ್ಲಿ ಬಣ್ಣದ ಹಬ್ಬ ಹೋಳಿಯನ್ನು ಆಚರಿಸಲು ಊರೆಲ್ಲಾ ಸಜ್ಜಾಗಿ ನಿಂತಿತ್ತು.. ನನ್ನ ವಯಸ್ಸಿನ ಮಕ್ಕಳು ಬಣ್ಣವನ್ನು ಖರೀದಿಸಿ, ಒಬ್ಬರ ಮುಖಕ್ಕೆ ಒಬ್ಬರು ಹಚ್ಚುತ್ತಿದ್ದರು.. ಆದ್ರೆ ನನ್ನಲ್ಲಿ ಬಣ್ಣ ಹಚ್ಚಲು ಏನೂ ಇರಲಿಲ್ಲ.. ಅಪ್ಪನನ್ನು ಕೇಳಿದೆ.. ಬಣ್ಣ ತರಲು ದುಡ್ಡು ಕೊಡು ಅಂತ.. ಆಗ ಅಪ್ಪ, ಜೇಬಿಗೆ ಕೈ ಹಾಕಿ, ತಡಕಾಡಿ, ಕೊನೆಗೆ ಒಂದು ಪೈಸೆಯನ್ನು ತೆಗೆದು ಕೊಟ್ರು.. ಅದರಲ್ಲಿ ಒಂಚು ಚಿಕ್ಕ ಬಣ್ಣದ ಪ್ಯಾಕೆಟ್ ತಗೊಂಡು ಸ್ನೇಹಿತರಿಗೆ ಹಚ್ಚಿದೆ.. ಆದ್ರೆ ಒಬ್ಬನ ಮುಖಕ್ಕೆ ಹಚ್ಚುವಷ್ಟರಲ್ಲಿ ಆ ಬಣ್ಣ ಖಾಲಿಯಾಗಿತ್ತು.. ಏನು ಮಾಡಲಿ..? ಓಕುಳಿಯಾಡುವ ತುಡಿತ ನನ್ನಲ್ಲಿದೆ.. ಆದ್ರೆ ಹಣವೇ ಇಲ್ಲ..!
 
ಆ ಸಮಯದಲ್ಲಿ ಪಕ್ಕದ ಮನೆಯವರು ಓಡಿ ಬಂದು ಬಂಡಿ ಎಣ್ಣಿ” ಅಂದ್ರೆ “ಎತ್ತಿನ ಗಾಡಿಯ ಚಕ್ರಕ್ಕೆ ಹಾಕುವ ಕಪ್ಪು ಎಣ್ಣೆ” ಯನ್ನು ತಗೊಂಡು ಬಂದು, ಸ್ನೇಹಿತನೊಬ್ಬನಿಗೆ ಹಚ್ಚಿ ಸಂಭ್ರಮಿಸಿದ್ರು.. ಆಗ ನಾನು ಓಡಿ ಹೋಗಿ ಮನೆಯಲ್ಲಿದ್ದ ’ಬಂಡಿ ಎಣ್ಣೆ’ ಅಂದ್ರೆ ಎತ್ತಿನ ಗಾಡಿಗೆ ಹಾಕುತ್ತಿದ್ದ ಕಪ್ಪು ಎಣ್ಣೆಯನ್ನು ತಗೊಂಡು ಬಂದೆ.. ಉಳಿದ ಎಲ್ಲಾ ಸ್ನೇಹಿತರಿಗೂ ಆ ಕಪ್ಪು ಎಣ್ಣೆಯನ್ನು ಹಚ್ಚಿ ಖುಷಿ ಪಟ್ಟಿದ್ದೆ.. ನಂತರದ ದಿನಗಳಲ್ಲಿ, ಯಾವಾಗ ಹೋಳಿ ಹಬ್ಬ ಬಂದ್ರೂ ಕೂಡ, ಆ ಕಪ್ಪು ಎಣ್ಣೆಯೇ ನಮ್ಮ ಹಬ್ಬವನ್ನು ಪರಿಪೂರ್ಣಗೊಳಿಸುತ್ತಿತ್ತು.. ಖುಷಿ ನೀಡ್ತಾ ಇತ್ತು.. 

 
ಆದ್ರೆ ಇಂದು ಎಲ್ಲವೂ ಬದಲಾಗಿದೆ.. ಜೇಬಿನಲ್ಲಿ ಹಣವಿದೆ.. ಬಣ್ಣದ ಪ್ಯಾಕೆಟ್ ಮಾತ್ರವಲ್ಲಾ, ಬಣ್ಣದ ಚೀಲವನ್ನೇ ಖರೀದಿಸಬಹುದು.. ಆದ್ರೆ ಅಂದು ಹಣವಿಲ್ಲದೇ ಇದ್ದಾಗ, ಕಪ್ಪು ಬಣ್ಣದ “ಬಂಡಿ ಎಣ್ಣೆ” ನೀಡಿದ ಖುಷಿ, ಈಗಿನ ರಂಗು ರಂಗಿನ ಬಣ್ಣ ನೀಡುತ್ತಿಲ್ಲ..!  ಹಣ ಬರುವ ಬದಲಿಗೆ ನಾ ಕಳೆದ ಆ ಬಾಲ್ಯ ಮತ್ತೆ ಬರಬಾರದೇ..?

ನೋಬೆಲ್‌ ಗೆದ್ದ ವಿಜ್ಞಾನಿ ಬಳಿಯಲ್ಲಿ ಮೊಬೈಲ್‌ ಇಲ್ಲ..!

ವಾಷಿಂಗ್ಟನ್‌ :  'ದೇವಕಣ' ಸಿದ್ಧಾಂತವನ್ನು ಪ್ರತಿಪಾದಿಸಿದ ವಿಜ್ಞಾನಿ ಪೀಟರ್‌ ಹಿಗ್ಸ್‌ ಅವರು ಮೊಬೈಲ್‌ ಮತ್ತು ಕಂಪ್ಯೂಟರನ್ನು ಬಳಸುವುದಿಲ್ಲವಂತೆ. ಅಷ್ಟೆ ಅಲ್ಲ, ಅವರದ್ದು ಸ್ವಂತ ಮೊಬೈಲ್‌ ಇಲ್ಲವೇ ಇಲ್ಲವಂತೆ. ಇದನ್ನು ಸ್ವತಃ ಪೀಟರ್‌ ಹಿಗ್ಸ್‌ ಅವರೇ ಮಾಧ್ಯಮ ಮಿತ್ರರ ಎದುರು ಬಹಿರಂಗ ಪಡಿಸಿದ್ದಾರೆ. 'ನನಗೆ ನೊಬೆಲ್‌ ಪ್ರಶಸ್ತಿ ಬಂದಿದೆ ಎಂಬ ವಿಷಯವನ್ನು ಸ್ಥಳೀಯ ವ್ಯಕ್ತಿಯೊಬ್ಬ ತಿಳಿಸಿದನು. ಅವನು ಶುಭಾಶಯ ಕೋರಿದಾಗಲೇ ನನಗೆ ನೊಬೆಲ್‌ ಪ್ರಶಸ್ತಿ ಸಿಕ್ಕಿದ್ದರ ಬಗ್ಗೆ ಗೊತ್ತಾಗಿದ್ದು' ಎಂದು ಹಿಗ್ಸ್‌ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಡಾ. ಫ್ರಾಂಕೊಯಿಸ್‌ ಎಂಗ್ಲರ್ಟ್‌ ಅವರೊಂದಿಗೆ ಜೊತೆಗೂಡಿ ದೇವಕಣವನ್ನು ಸಂಶೋಧನೆ ಮಾಡಿದಕ್ಕಾಗಿ ಪೀಟರ್‌ ಹಿಗ್ಸ್‌ ಅವರಿಗೆ ಇತ್ತೀಚೆಗಷ್ಟೇ ನೋಬೆಲ್‌ ಪ್ರಶಸ್ತಿ ಸಿಕ್ಕಿತ್ತು. ಡಾ ಫ್ರಾಂಕಾಯಿಸ್‌ ಕೂಡ ಇದೇ ಮಾತನ್ನು ಹೇಳ್ತಾರೆ. "ಹಿಗ್ಸ್‌ ಅವರು ಇದುವರೆಗೂ ಯಾವುದೇ ಮೊಬೈಲ್‌ ಫೋನ್‌ ಅನ್ನು ಬಳಸಿಲ್ಲ. ಅವರು ಕಂಪ್ಯೂಟರ್‌ ಕೂಡ ಬಳಸುವುದಿಲ್ಲ. ಸದಾ ತಮ್ಮ ಸಂಶೋಧನೆಯಲ್ಲಿಯೇ ಮಗ್ನರಾಗಿರುತ್ತಾರೆ. ಹೀಗಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸಾಧನೆಯ ರಹಸ್ಯವನ್ನು ಬಿಚ್ಚಿಟ್ಟರು.

ಮಹಾತ್ಮಾ ಗಾಂಧಿ ವಿದೇಶದಲ್ಲಿ "ದಸರಾ" ಆಚರಿಸಿದ್ದರು.



ದ.ಆಫ್ರಿಕ : ಮಹಾತ್ಮಾ ಗಾಂಧಿಜಿಯವರು ವಿದೇಶದಲ್ಲಿ ಇದ್ದ ಸಮಯದಲ್ಲಿ "ದಸರಾ ಹಬ್ಬ"ವನ್ನು ಅಲ್ಲಿನ ಭಾರತೀಯ ಮೂಲ ನಿವಾಸಿಗಳೊಂದಿಗೆ ಸೇರಿ ವಿಜೃಂಭಣೆಯಿಂದ ಆಚರಿಸಿದ್ದರು. ಈ ಅದ್ದೂರಿ ವಿದೇಶೀ ದಸರಾದಲ್ಲಿ ವಿಡಿ ಸಾವರ್ಕರ್‌ ಕೂಡ ಭಾಗಿಯಾಗಿದ್ದರು.

ಮಹಾತ್ಮಾ ಗಾಂಧಿಯವರಿಗೆ ಭಾರತೀಯ ಸಂಪ್ರದಾಯಗಳ ಮೇಲೆ ಹೆಚ್ಚಿನ ಗೌರವವಿತ್ತು. ತಾವು ಎಲ್ಲೇ ಇದ್ದರೂ ಭಾರತೀಯ ಸಂಪ್ರದಾಯಗಳನ್ನು, ನಿಯಮಗಳನ್ನು ಎಂದಿಗೂ ಮುರಿಯುತ್ತಿರಲಿಲ್ಲ. ವಿಧಿವತ್ತಾಗಿ ಪಾಲನೆ ಮಾಡುತ್ತಿದ್ದರು.

ವಿದೇಶದಲ್ಲಿ ಮಾಂಸಾಹಾರವೇ ಹೆಚ್ಚಾಗಿದ್ದ ಸಮಯದಲ್ಲಿ, ಸಸ್ಯಹಾರಿಗಳಾಗಿದ್ದ ಮಹಾತ್ಮಾ ಗಾಂಧಿಯವರು ದಕ್ಷಿಣ ಲಂಡನ್ನಿನಲ್ಲಿ ಸಸ್ಯಾ ಹಾರಿಗಳ ಸೊಸೈಟಿಯನ್ನು ಕಟ್ಟಿದ್ದರು.  ಇದೇ ಸಮಯದಲ್ಲಿ ವಿನಾಯಕ ಸಾವರ್ಕರ್‌ ಮತ್ತು ಅಲ್ಲಿನ ನಿವಾಸಿಗಳೊಂದಿಗೆ ಜೊತೆಗೂಡಿ ದಸರಾ ಹಬ್ಬವನ್ನು ಆಚರಿಸಿದರು. ಚತುರವಾಗ್ಮಿಯಾಗಿದ್ದ ವಿಡಿ ಸಾವರ್ಕರ್‌ ಅವರು ಈ ಸಮಯದಲ್ಲಿ ಅದ್ಭುತವಾಗಿ ಭಾಷಣ ಮಾಡಿದ್ದರು. ಈ ಭಾಷಣವೇ ಆ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು.

ಕುಪೋಷಣೆಗೆ ಒಳಗಾದ ವಿದ್ಯಾವಂತರ ಮೆದುಳುಗಳು.




ಭಾರತ ವಿಶ್ವದ ಜ್ಞಾನ ಕಣಜ.. ಭಾರತೀಯ ವಿದ್ಯಾರ್ಥಿಗಳು ಮಾಹಿತಿ ಜಗತ್ತಿನ ಆಧಾರ ಸ್ಥಂಭಗಳು ಎಂದು ಸ್ವತಃ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾರವರೇ ಹಿಂದೊಮ್ಮೆ ಭಾರತಕ್ಕೆ ಭೇಟಿಯಿತ್ತಾಗ ಹೊಗಳಿ ಹೋಗಿದ್ದರು. ಅದರಲ್ಲೂ ಬೆಂಗಳೂರಿಗರು ಜ್ಞಾನ ಸಾಗರದ ಒಡೆಯರು ಎಂಬುದನ್ನು ಸ್ವತಃ ದೊಡ್ಡಣ್ಣನೇ ಒಪ್ಪಿಕೊಂಡಿದ್ದಾನೆ. 

ಭಾರತದಲ್ಲಿರುವ ಕೋಟ್ಯಾಂತರ ಜನರು ಈಗೀಗ ಅಕ್ಷರ ಬೆಳಕಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.. ಐಟಿ ಬಿಟಿಗಳ ಮೂಲಕ ಮಾಹಿತಿ ವಿನಿಮಯದಲ್ಲಿ ಸಾಕಷ್ಟು ಕೊಡುಗೆಯನ್ನು ಭಾರತೀಯರು ನೀಡಿದ್ದಾರೆ. ತನ್ಮೂಲಕ ಭಾರತದ ಅಭಿವೃದ್ದಿಯಲ್ಲಿ ಸಹಭಾಗಿಗಳಾಗಿದ್ದಾರೆ. 

ಕೆಲವು ದಿನಗಳ ಹಿಂದೆ ಹವಾಮಾನದಲ್ಲಿ ಧಿಡೀರ್ ವೈಪರಿತ್ಯಗಳು ಕಾಣಸಿಗುವಂತೆ ಏಕಾಏಕಿ ಅಂತರ್ ರಾಷ್ಟ್ರೀಯ ಶೇರ್ ಮಾರ್ಕೇಟ್ ನಲ್ಲಿ ಧಿಡೀರ್ ವೈಪರಿತ್ಯಗಳು ಕಂಡುಬಂದವು. ಲಾಭದ ಕುದುರೆ ಏರಿದ್ದ ಅನೇಕ ಸಾಫ್ಟ್ ವೇರ್ ಕಂಪೆನಿಗಳು ತಮ್ಮ ಉದ್ಯೋಗಿಗಳ ವೇತನಕ್ಕೆ ಲಗಾಮು ಹಾಕಿದವು. ಅಷ್ಟೇ ಅಲ್ಲ, ಇನ್ನೂ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಮನೆಗಟ್ಟಿದವು. 

ಪಾರ್ಟಿ, ಪಬ್ಬು, ಶಾಪಿಂಗ್ ಅಂತ ಐಶಾರಾಮಿ ಬದುಕಿಗೆ ಒಗ್ಗಿಕೊಂಡಿದ್ದ ಅದೆಷ್ಟೋ ಜನರ ಬದುಕಿನ ಬಂಡಿಯ ಗಾಲಿಗಳು ತುಂಡರಿಸಿ ಹೋದವು. ಆ ದೇವರು ಮಾಡಿಟ್ಟ ವಿದ್ಯಾವಂತರ ಮೆದುಳು ವೈರಸ್ ಗೆ ತುತ್ತಾಯ್ತು. ಪರಿಣಾಮವಾಗಿ ಬದುಕಿಗೆಂದು ಭಗವಂತ ಮಾಡಿಟ್ಟ ಪ್ರೋಗ್ರಾಮ್ ಉಲ್ಟಾಪಲ್ಟಾ ಆಗಿಬಿಟ್ಟಿತು. ನೋಡ ನೋಡುತ್ತಿದ್ದಂತೆಯೇ ಬದುಕು ಹ್ಯಾಂಗಾಗಿ ಹೋಗಿಬಿಟ್ಟಿತ್ತು..

ಕೆಲಸ ಕಳೆದುಕೊಂಡ ನೋವು ಮುಂದಿನ ಬದುಕಿನ ಆಸೆಗಳನ್ನು ಕಮರಿಸಿಬಿಟ್ಟಿತ್ತು. ಹೀಗೆ ಉದ್ಯೋಗ ಕಳೆದುಕೊಂಡ ಗೆಳೆಯನೊಬ್ಬ ನೋವಿನಿಂದಲೇ ಮನೆಗೆ ಮರಳಿದ.. ಅವನು ಖಾಸಗೀ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿ.. ಆದರೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯ ಮೇಲಾದ ವೈರಸ್ ಅಟ್ಯಾಕ್ ಗೆ ಅವನ ಕೆಲಸ ತುತ್ತಾಗಿಬಿಟ್ಟಿತ್ತು. ಹೀಗಾಗಿ ಸಂಸ್ಥೆಯವರು ಅವನನ್ನು ಸಂಸ್ಥೆಯಿಂದ ಎರೇಸ್ ಮಾಡಿಬಿಟ್ಟಿದ್ದರು. 

ಇಷ್ಟಕ್ಕೇ ಬೇಸತ್ತ ಅವನು ಚಿಂತಾಕ್ರಾಂತನಾಗಿ ಕೂತುಬಿಟ್ಟ.. ಮುಂದಿನ ಬದುಕಿನ ಬಗ್ಗೆ ಆಲೋಚಿಸದೇ ಹಿಂದಿನ ಬದುಕಿನ ಕ್ಷಣಗಳನ್ನು ನೆನೆದು “ಅಯ್ಯೋ ಎಂಥಾ ಕೆಲಸ ಹೋಯ್ತಪ್ಪಾ” ಅಂತ ದುಃಖಿಸುತ್ತಿದ್ದ. ಅವನ ಮನಸ್ಸಿನ ತುಂಬ ಮೆದುಳಿನ ತುಂಬಾ ಅದೇ ತುಂಬಿಹೋಗಿತ್ತು.. ಸಾಧ್ಯವಾದಷ್ಟು ಸಮಾಧಾನ ಮಾಡಿ ಆವತ್ತು ರಾತ್ರಿ ಮನೆಗೆ ಬಂದೆ..
ಮರುದಿನ ಬೆಳಿಗ್ಗೆ ನಾನಿನ್ನು ಹಾಸಿಗೆಯಲ್ಲಿರುವಾಗಲೇ ನನ್ನ ಫೋನು ರಿಂಗಿಣಸಿತ್ತು.. ನಿದ್ದೆಗಣ್ಣಲ್ಲಿ ಯಾರದು ಅಂತ ನೋಡದೇ ನೇರವಾಗಿ ಕಿವಿಗಿಟ್ಟುಕೊಂಡು “ಹಲೋ..” ಎಂದೆ..

ಅತ್ತಿಂದ ಕೇಳಿದ್ದು ಅಳುವಿನ ಕೂಗು.. ಯಾರದು? ಏನಾಗಿದೆ? ಎಂದು ಧಿಗ್ಗನೇ ಎದ್ದು ನಂಬರ್ ನೋಡಿದೆ.. ಅದು ಗೆಳೆಯನ ಹೆಂಡತಿ ನಂಬರ್.. ಏನಾಯಿರು ಎಂದು ಎಷ್ಟು ಕೇಳಿದರ ಅತ್ತಿಂದ ಉತ್ತರವಿಲ್ಲದ ಅಳು ಮಾತ್ರವೇ ಪ್ರತಿಕ್ರಿಯೆಯಾಗಿತ್ತು.. “ಅರೇ... ಕೆಲಸ ಹೋಯ್ತು ಅಂತ ಫ್ರೆಂಡ್ ಏನಾದರೂ ಹೋಗಿಬಿಟ್ಟನಾ..?” ನನ್ನ ತಲೆಯಲ್ಲಿ ಇದೊಂದೇ ಪ್ರೆಶ್ನೆ...

ಸ್ವಲ್ಪ ಸುಧಾರಿಸಿಕೊಂಡು ಸಮಾಧಾನ ಮಾಡಿ “ಏನೂ ಆಗಲ್ಲ.. ಯಾಕಿಷ್ಟು ಅಳ್ತಿದೀರ.. ಏನಾಯಿತು?” ಅಂತ ಕೇಳಿದೆ.. “ಅವರಿಗೆ ಹಾರ್ಟ ಅಟ್ಯಾಕ್ ಆಗಿದೆ. ಆಸ್ಪತ್ರೆಲಿದೀವಿ. ಕೈಕಾಲೇ ಓಡ್ತಿಲ್ಲ ನನಗೆ.. ಪ್ಲೀಸ್ ಬೇಗ ಬರ್ತೀರ?” ಅಂತ ಹೇಳಿದ್ರು. ಬ್ರೇಕಿಂಗ್ ನ್ಯೂಸ್ ಇರಬಹುದು ಅಂತ ಅಂದುಕೊಂಡೆ.. ಜಸ್ಟ್ ಮಿಸ್ ಆಗಿ ಅದು ಶಾಕಿಂಗ್ ನ್ಯೂಸ್ ಆಗಿತ್ತು.. ಗೆಳೆಯನಿನ್ನೂ ಬದುಕೇ ಇದ್ದ..!! 

ಗೆಳೆಯನ ತಂದೆಯನ್ನು ಕರೆದುಕೊಂಡು ಬೈಕಿನಲ್ಲಿ ಆಸ್ಪತ್ರೆಗೆ ಧಿಡೀರ್ ಭೇಟಿಕೊಟ್ಟೆವು. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಗೆಳೆಯ.. ಪಕ್ಕದಲ್ಲಿ ದುಃಖಿಸುತ್ತಿದ್ದ ಗೆಳೆಯನ ಪತ್ನಿ.. ಸನ್ನಿವೇಷ ಕಣ್ಣೀರಿನ ನೋವನ್ನು ನಮ್ಮಲ್ಲೂ ತರಲೆತ್ನಿಸುವಂತಿತ್ತು.. ಬೆಡ್ ಮೇಲಿದ್ದ ಮಗನನ್ನು ನೋಡಿ ತಂದೆಗೂ ಪುತ್ರ ವಾತ್ಸಲ್ಯ ತುಂಬಿಬಂತು. ಆದರೂ ಅದಾವುದನ್ನೂ ಅಲ್ಲಿ ಪ್ರದರ್ಶಿಸಲಿಲ್ಲ.. ಮಗ ಮತ್ತು ಸೊಸೆಯನ್ನು ಮಾತಾಡಿಸಿ ಒಂಚೂರು ಧೈರ್ಯ ತುಂಬಿದರು.. ನಂತರ ನಾನು ಡಾಕ್ಟರ್ ಹತ್ರ ಹೋಗಿ ಏನಾಯಿತು? ಯಾಕಿಂಗಾಯಿತು ಅಂತ ಒಂಚೂರು ಇನ್ವೆಸ್ಟಿಗೇಷನ್ ಮಾಡಿದೆ.. ಡಾಕ್ಟರ್ ತಮ್ಮ ಇನ್ವೆಸ್ಟಿಗೇಷನ್ ರಿಪೋರ್ಟ ಅನ್ನು ಬಿಚ್ಚಿಟ್ಟರು. “ಅವರ ಮನಸ್ಸಿನಲ್ಲಿ ಏನೋ ಗಾಢವಾದ ನೋವಿದೆ..ಆ ನೋವಿನಿಂದಲೇ ಈ ಹಾರ್ಟ ಅಟ್ಯಾಕ್ ಆಗಿದೆ” ಅಂದುಬಿಟ್ಟರು..
 
ಹೌದು.. ಅವನ ಮನಸ್ಸಿನಲ್ಲಿ ಇದ್ದದ್ದು ಕೆಲಸ ಹೋಯ್ತಲ್ಲ ಅನ್ನೋ ಗಾಢ ನೋವು.. ಮುಂದಿನ ಬದುಕು ಹೇಗಪ್ಪಾ ಅನ್ನೋ ಆಲೋಚನೆ... ಇಬ್ಬರು ಮಕ್ಕಳನ್ನು ಹೇಗಪ್ಪಾ ಸಾಕೋದು ಅನ್ನೋ ಚಿಂತಾತ್ಮಕ ವೇದನೆ ಗೆಳಯನನ್ನು ಹಿಂಡಿ ಹಿಪ್ಪೆ ಮಾಡಿತ್ತು.. 

ಡಾಕ್ಟರ್ ಹತ್ತಿರ ಮಾತಾಡಿದ ನಂತರ ನೇರವಾಗಿ ಗೆಳೆಯನಿದ್ದ ವಾರ್ಡಗೆ ಹೋದೆ.. ಅವರ ತಂದೆ ಡಾಕ್ಟರ್ ಏನಂದ್ರಪ್ಪಾ? ಅಂತ ದುಗುಡದಲ್ಲಿಯೇ ಕೇಳಿದರು.. “ನೋಡಿ ಸರ್.. ನಿಮ್ಮ ಮಗನಿಗೆ ಕೆಲಸ ಹೋಯ್ತಲ್ಲಾ ಅನ್ನೋ ಚಿಂತೇನೇ ಜಾಸ್ತಿ ಆಗ್ಬಿಟ್ಟಿದೆ.. ಅದರ ಬಗ್ಗೆ ಜಾಸ್ತಿ ಯೋಚನೆ ಮಾಡಿ ಮಾಡಿ, ಮನಸ್ಸಿಗೆ ಹಚ್ಕೊಂಡಿದಾನೆ. ಅದಕ್ಕೆ ಹಾರ್ಟ ಅಟ್ಯಾಕ್ ಆಗಿದ್ಯಂತೆ.. ಡಾಕ್ಟರ್ ಹೇಳಿದ್ರು” ಅಂತ ಇದ್ದದ್ದು ಇದ್ದಂಗೆ ಗೆಳೆಯನ ಅಸಹಾಯತೆಯನ್ನು ಕಂಡು ಕೋಪದಲ್ಲಿ ಬೈದುಬಿಟ್ಟೆ..

ಆಗ ಆ ಮುದಿ ಜೀವ ವಾತ್ಸಲ್ಯಭರಿತವಾಗಿ ತನ್ನ ಕರುಳಿನ ಮಾತುಗಳನ್ನು, ಬದುಕಿನ ಅನುಭವಗಳನ್ನು ಬಿಚ್ಚಿಟ್ಟಿತು “ನೋಡಪ್ಪಾ.. ನೀನು ಓದಿರೋನು.. ಒಂದು ಕಂಪೆನಿ ನಿನ್ನನ್ನ ಕೆಲಸದಿಂದ ತೆಗೆದಾಕಿತು ಅಂತ ನಿನಗೆ ಬದುಕೇ ಇಲ್ಲಾ ಆಂತ ಅಂದುಕೊಳ್ತೀಯ ಯಾಕೆ? ನಾನೇನಾದರೂ ನಿನ್ನಂತೆ ಯೋಚನೆ ಮಾಡಿದ್ರೆ ನಾನು ತಿಂಗಳಿಗೊಮ್ಮೆ ಸಾಯುತ್ತಿದ್ದೆ.. ನಾನು ಕೂಲಿ ಮಾಡಿ ನಿನ್ನ, ನಿನ್ನ ತಮ್ಮನ್ನ, ನಿನ್ನ ಅಕ್ಕನನ್ನ ಸಾಕಿದ್ದೀನಿ.. ಓದಿಸಿದ್ದೀನಿ.. ಒಂದು ಕಡೆ ಬಿಲ್ಡಿಂಗ್ ಕಟ್ಟೋದು ಮುಗೀತು ಅಂದ್ರೆ ಮತ್ತೊಂದು ಕಡೆ ಎಲ್ಲಾದ್ರೂ ಕೆಲಸ ಹುಡುಕಿಕೊಂಡು ಹೋಗ್ತಿದ್ದೆ.. ಅಲ್ಲಿ ಸ್ವಲ್ಪ ದಿನ ಕೆಲಸ ಮಾಡಿ ಅದು ಮುಗಿದ್ಮೇಲೆ ಇನ್ನೊಂದುಕಡೆ.. ಹೀಗೆ ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ಕೆಲಸ ಹೋಗ್ತಿತ್ತು ನಂದು.. ಆದ್ರೂ ನಿಮ್ಮನ್ನ ನಾನು ಸಾಕಲಿಲ್ಲವಾ? ಓದದೇ ಇರೋ ನಾನೇ ಮೂರು ಮಕ್ಕಳನ್ನು ಸಾಕಿದ್ದೀನಿ.. ಓದಿಸಿ ಮದುವೆ ಮಾಡಿದೀನಿ.. ಇನ್ನು ಓದಿ ವಿದ್ಯಾವಂತನಾಗಿರೋ ನೀನು ನಿನ್ನ ಎರಡು ಮಕ್ಕಳನ್ನು ಸಾಕೋದಕ್ಕೆ ಆಗೋದಿಲ್ವಾ? ಯೋಚನೆ ಮಾಡು..!! ಕೆಲಸ ಹೋಯ್ತು ಅಂತ  ಮನಸ್ಸಿಗೆ ಹಚ್ಕೊಂಡು ಕೂತರೇ ಎಲ್ಲವೂ ಸರಿ ಹೋಗುತ್ತಾ? ಯೋಚನೆ ಮಾಡ್ಬೇಕು.. ಆದರೆ ಹಿಂದಿನ ಕೆಲಸ ಹೋಯ್ತು ಅಂತಲ್ಲಾ.. ಮುಂದೆ ಇದಕ್ಕೆ ಬದಲಾಗಿ ಏನು ಮಾಡಬೇಕು, ಹೇಗೆ ಬದುಕೋದು ಅನ್ನೋದನ್ನು ಯೋಚನೆ ಮಾಡ್ಬೇಕು.. ಓದದೇ ಇರೋ ನಾನೇ ಇಷ್ಟೋಂದು ಯೋಚನೆ ಮಾಡ್ತೀನಿ.. ಮತ್ತೆ ನೀನ್ ಯಾಕಪ್ಪಾ ಇದನ್ನು ಅರ್ಥ ಮಾಡ್ಕೊಳ್ತಿಲ್ಲ.. ಚಿಂತೆ ಮಾಡ್ಬೇಡ ಬಾ.. ನೀನ್ ಚೆನ್ನಾಗಿದ್ರೆ ಸಾಕು,, ನನ್ನಲ್ಲಿ ಇನ್ನು ಶಕ್ತಿ ಇದೆ.. ನಾನು ನಿನ್ನನ್ನು ಸಾಕ್ತೀನಿ” ಅಂತ ಪುತ್ರನ ಮನಸ್ಸಿಗೆ ಸಮಾಧಾನದ ನುಡಿಗಳನ್ನು ಉಣಬಡಿಸಿದ. 

ಹೌದು.. ತಂದೆಯ ಮಾತು ಆಗ ಅತನ ಕಿವಿಗೆ ನಾಟಿತ್ತು.. ಅಷ್ಟೇ ಅಲ್ಲ, ನನಗೂ ಆ ಮಾತುಗಳು ಉಳಿ ಪೆಟ್ಟಿನಂತೆ ಕೇಳಿಬಂದವು.. ಏನೂ ಓದದ ನಮ್ಮ ಪೂರ್ವಿಕರೇ ಎಂಟು ಹತ್ತು ಮಕ್ಕಳನ್ನು ಸಾಕಿದ್ದಾರೆ.. ಯಾವ ಕೆಲಸ ಇಲ್ಲದಿದ್ದರೂ ನಮ್ಮನ್ನು ಬದುಕಿನ ದಡಕ್ಕೆ ತಲುಪಿಸಿದ್ದಾರೆ,.. ಕೂಲಿ-ನಾಲಿ ಮಾಡಿ, ಹೊಟ್ಟಗೆ ಒಂದಿಟ್ಟು ಊಟ, ತಲೆಗೆ ಒಂದಿಷ್ಟು ಜ್ಞಾನವನ್ನು ತುಂಬಿದ್ದಾರೆ. ಹೀಗಿರುವಾಗ ಓದಿ ವಿದ್ಯಾವಂತರಾದ ಇಂದಿನ ಬಹುತೇಕರು ಯಾಕೆ ಹೀಗೆ ಆಲೋಚಿಸೋದಿಲ್ಲ.? ಓದದೇ ಇರುವವರು “ ಏನೂ ಓದದೇ ಇದ್ದರೂ ನಾನು ಬದುಕನ್ನು ಸಮರ್ಥವಾಗಿ ಎದುರಿಸುತ್ತೇನೆ.. ಇನ್ನೇನಾದರೂ ಒಂಚೂರು ಓದಿದ್ರೆ ದೇಶವನ್ನೇ ಆಳುತ್ತಿದ್ದೆ” ಎಂದು ಗರ್ವ ಪಡುತ್ತಾರೆ.. ಓದದೇ ಇರುವವರು ಇಷ್ಟೋಂದು ಗರ್ವದ ಬದುಕನ್ನು, ಹೆಮ್ಮೆಯ ನಿರಾಳತೆಯ ಜೀವನವನ್ನು ನಡೆಸುತ್ತಿರಬೇಕಾದರೇ ವಿದ್ಯಾವಂತರಾದವರೇಕೆ ಇಂಥಾ ದೃಢ ನಿರ್ಧಾರಗಳನ್ನು ಕೈಗೆತ್ತಿಕೊಳ್ಳುವುದಿಲ್ಲ..? ಯಾಕೆ ಒಂದೇ ವಿಚಾರವನ್ನು ಗಾಢವಾಗಿ ಪರಿಗಣಿಸಿ ಬದುಕನ್ನ ಕತ್ತಲೆಯ ಕೂಪಕ್ಕೆ ಕೊಂಡುಯ್ಯುತ್ತಾರೆ? 

ಈಗಲೂ ಕೋಟ್ಯಾನು ಕೋಟಿ ಜನರು ಅಕ್ಷರತೆಯಿಂದ ದೂರ ಉಳಿದು ತುತ್ತು ಅನ್ನವನ್ನು ಅರಸಿ ಕೂಲಿಯತ್ತ ಮುಖ ಮಾಡಿದ್ದಾರೆ. ಪ್ರತಿ ವಾರಕ್ಕೂ ಅವರ ಉದ್ಯೋಗ ಕಳೆದು ಹೋಗುತ್ತದೆ.. ಪ್ರತಿ ವಾರವೂ ಒಂದೊಂದು ಹೊಸ ಉದ್ಯೋಗವನ್ನು ಅವರು ಅನಿವಾರ್ಯವಾಗಿ ಅರಸಿಕೊಳ್ಳಲೇ ಬೇಕು.. ಅವರೇ ನಿರಾಳತೆಯ ಬದುಕಿನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.. ಮತ್ತೆ ವಿದ್ಯಾವಂತರೇಕೆ ಅವಿದ್ಯಾವಂತರಿಗೂ ಕಡೆಯದಾಗಿ ಬದುಕನ್ನು ದೂಡುತ್ತಿದ್ದಾರೆ..?? ಏನಾದಗಿದೆ ವಿದ್ಯಾವಂತರಿಗೆ..??
 
ಯಸ್... ಅವರ ಮೆದುಳು ಕುಪೋಷಣೆಗೆ ಒಳಗಾಗಿದೆ.. ವಿದ್ಯಾವಂತರ ಮೆದುಳು ಅಕ್ಷರಶಃ ಕುಪೋಷಣೆಯಗೆ ಬಲಿಯಾಗಿದೆ.. ನೋಡಲು ಮಾತ್ರ ಬೌದ್ಧಿಕತೆಯನ್ನು ಮೈಗೂಢಿಸಿಕೊಂಡ ಮೆದುಳಿನಲ್ಲಿ, ಬದುಕಿಗೆ ಬೇಕಾದಂತಹ ಪೋಷಣೆಯುಕ್ತ ವಿಟಮಿನ್ ಗಳು ಇಲ್ಲ.. ಬದಲಾಗಿ ಅಸೀಮಿತ ಕಲ್ಪನೆಗಳ ಭಾವೋದ್ವೇಗಗಳು ಮಿದುಳನ್ನು ಕಿತ್ತು ತಿನ್ನುವ ವೈರಸ್ ಗಳಾಗಿ ಮಾರ್ಪಡುತ್ತಿವೆ.. ಇದು ಇಡೀ ಮನುಜ ಕುಲವೇ ಆತಂಕ ಪಡುವಂತೆ ಮಾಡಿದೆ. ವಿದ್ಯಾವಂತರ ಅಸಾಧಾರಣ ಮೆದುಗಳನ್ನು ಅವಿದ್ಯಾವಂತರ ಮೆದುಳುಗಳಿಗೆ ಹೋಲಿಸಿದರೆ, ಅವಿದ್ಯಾವಂತರ ಮೆದುಳುಗಳು ಮನಸ್ಸನ್ನು ಸ್ಥಿಮಿತದಲ್ಲಿ ಇರಿಸಿಕೊಂಡು ಬದುಕಿನ ಏರಿಳಿತಗಳ ಭಾವೋದ್ವೇಗಗಳಿಗೆ ಸೂಕ್ತವಾಗಿ ಸ್ಪಂದಿಸುಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.. 








ಶೇಖ್(ಸ್ಪಿಯ)ರ‍್

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು