Recent Movies

ಸಿನೆಮಾ

Share This Article To your Friends

Showing posts with label ದೇವರ ವಿಷ್ಯ. Show all posts
Showing posts with label ದೇವರ ವಿಷ್ಯ. Show all posts

ವಿಸ್ಮಯ ಸೃಷ್ಟಿಸುತ್ತಿದೆ ಈ ಶಿವಲಿಂಗ!


ಕಲಿಯುಗದಲ್ಲಿ ಒಂದು ಪವಾಡ ನಡೆಯುತ್ತಿದೆ. ಶಿವಲಿಂಗ ಒಂದು ವಿಸ್ಮಯಕ್ಕೆ ಕಾರಣವಾಗಿದೆ. ಆ ಶಿವಲಿಂಗದ ವಿಸ್ಮಯವನ್ನು ಕಂಡು ನೋಡುಗರೆಲ್ಲಾ ಬೆರಗಾಗುತ್ತಿದ್ದಾರೆ. ಶಿವಲಿಂಗದ ಅಚ್ಚರಿಯನ್ನು ಕಂಡು ಮೂಕ ವಿಸ್ಮಿತರಾಗುತ್ತಿದ್ದಾರೆ.

ಅಂದ್ಹಾಗೆ ಶಿವಲಿಂಗ ಸೃಷ್ಟಿಸುತ್ತಿರುವ ಅಚ್ಚರಿಯಾದ್ರೂ ಏನು ಗೊತ್ತಾ? ದೇಗುಲದ ಗರ್ಭಗುಡಿಯಲ್ಲಿರೊ ಈ ಶಿವಲಿಂಗದ ಮೇಲೆ ನೀರಿನ ಮೂಲಕ ಶುದ್ಧೀಕರಿಸುವ ಕೆಲಸ ನಡೀತಿತ್ತು. ಈ ವೇಳೆ ಶಿವಲಿಂಗದ ಮೇಲೆ ‘ಓಂ’ ಆಕಾರದ ಚಿಹ್ನೆ ಗೋಚರವಾಗುತ್ತಿದೆ. ಇದು ಅಚ್ಚರಿ ಎಂದು ತಿಳಿದ ಪುರೋಹಿತರು, ಮತ್ತೊಮ್ಮೆ ಶಿವಲಿಂಗದ ಮೇಲೆ ನೀರನ್ನು ಹಾಕ್ತಾರೆ. ಆ ನಂತರವೂ ಶಿವಲಿಂಗದ ಮೇಲೆ ಓಂ ಆಕಾರ ಗೋಚರಿಸುತ್ತಿದೆ.

ಶಿವಲಿಂಗದಲ್ಲಿ ಸೃಷ್ಟಿಯಾಗುತ್ತಿರುವ ಈ ಓಂ ಆಕಾರವನ್ನು ಕಂಡು, ಜನರೆಲ್ಲಾ ಮೂಕ ವಿಸ್ಮಿತರಾಗುತ್ತಿದ್ದಾರೆ. ಇದೆಲ್ಲಾ ಶಿವನ ಪವಾಡವೇ ಅಂತ ನಂಬುತ್ತಿದ್ದಾರೆ.

ಇವು ದುಡ್ಡಲ್ಲೇ ಕಟ್ಟಿದ ದೇಗುಲಗಳು

ಭಾರತ ಬಡ ರಾಷ್ಟ್ರ ಅಂತ ಅಂದುಕೊಳ್ಳೋರಿಗೆ, ಇವತ್ತಿನ ಸ್ಟೋರಿ ನೋಡಿದ್ರೆ ಅಸಲಿ ವಿಷ್ಯ ಗೊತ್ತಾಗುತ್ತೆ.. ಯಾಕಂದ್ರೆ, ಭಾರತದ ದೇವರಲ್ಲಿ ಇರೋ ದುಡ್ಡು ಬೇರೆ ಯಾವ ದೇಶದಲ್ಲೂ ಇಲ್ಲಾ.. ಅದಿಕ್ಕೇ ನೋಡಿ.. ದೇಗುಲವನ್ನೇ ದುಡ್ಡಿನಿಂದ ಅಲಂಕಾರ ಮಾಡ್ತಾರೆ ಭಕ್ತರು.. ಒಂದಲ್ಲ ಎರಡಲ್ಲ.. ಸಾವಿರ ರೂಪಾಯಿಗಳಿಂದ್ಲೇ ಗೋಡೆಗಳಿಗೆ ಶೃಂಗಾರ.. ಕೋಟಿ ಕೋಟಿ ರೂಪಾಯಿಗಳಿಂದ ಮಹಾಲಕ್ಷ್ಮಿಗೆ  ಅಲಂಕಾರ..

ಯಸ್.. ಭಾರತ ಬಡರಾಷ್ಟ್ರ.. ಭಾರತದಲ್ಲಿರೋರೆಲ್ಲಾ ಬಡವರು ಅನ್ನೋರು, ಖಂಡಿತ್ವಾಗ್ಲೂ ಇವತ್ತಿನ ಸ್ಟೋರಿಯನ್ನ ಕಂಪ್ಲೀಟಾಗಿ ಓದ್ಲೇಬೇಕು.. ಯಾಕಂದ್ರೆ ಭಾರತಕ್ಕೆ ಬಡ ರಾಷ್ಟ್ರ ಅನ್ನೋ ಹಣೆ ಪಟ್ಟಿ, ಬರೀ ಹೆಸರಲ್ಲಿ ಮಾತ್ರ ಇದೆ.. ಆದ್ರೆ ಭಾರತ ನಿಜ್ವಾಗ್ಲೂ ಬಡರಾಷ್ಟ್ರ ಅಲ್ವೇ ಅಲ್ಲ.. ಕೋಟಿ ಕೋಟಿ ದುಡ್ಡನ್ನು ದೇವರಿಗೆ ದಾನ ಕೊಡೋಷ್ಟು ಶ್ರೀಮಂತರಿರೋ, ಸಿರಿವಂತ ರಾಷ್ಟ್ರ ಕಣ್ರಿ ನಮ್ಮ ಭಾರತ ದೇಶ....

ಹೌದು.. ಒಂದಲ್ಲ ಎರಡಲ್ಲ.. ಕೋಟಿ ಕೋಟಿ ಕರೆನ್ಸಿಯಲ್ಲಿ ದೇವರಿಗೆ ಅಲಂಕಾರ ಮಾಡೋ ಜನ್ರು ಇರೋದು ನಮ್ಮ ಭಾರತದಲ್ಲೇ.. ಅದ್ರಲ್ಲೂ ದಕ್ಷಿಣ ಭಾರತದಲ್ಲೇ ಜಾಸ್ತಿ.. ಬೆಳಗಾಗೆದ್ದು, ದುಡ್ಡು ಕೊಡಮ್ಮ ತಾಯಿ ಬೇಡ್ಕೊಳ್ಳೋ ಭಕ್ತರು, ಅದೇ ದೇವರಿಗೆ ದುಡ್ಡಲ್ಲೇ ಅಲಂಕಾರ ಮಾಡಿರೋ ಒರಿಜಿನಲ್ ಕಥೆ ಇದೆ.. ಬೆಲೆದುಡ್ಡಿನ ಅಧಿದೇವತೆ ಅಂದ್ರೇನೇ ಲಕ್ಷ್ಮಿ ಕಣ್ರಿ.. ಆದ್ರೆ ಅದೇ ಲಕ್ಷ್ಮಿಗೆ ದುಡ್ಡು ನೀಡೋಷ್ಟು ಸಿರಿವಂತ ಭಕ್ತರು ನಮ್ಮ ನೆಲದಲ್ಲಿದ್ದಾರೆ ಅನ್ನೋದಕ್ಕೆ ಇಲ್ಲಿದೆ ನೋಡಿ ಒಂದು ಸಾಕ್ಷಿ..


ನೋಡ್ರಿ.. ಎಲ್ ನೋಡಿದ್ರೂ ಬರೀ ದುಡ್ಡೆ.. ದುಡ್ಡಿನ ಅಧಿದೇವತೆಯನ್ನು ದುಡ್ಡಿನಿಂದ್ಲೇ ಅಲಂಕಾರ ಮಾಡಿದ್ದಾರೆ ಭಕ್ತರು.. ಇದು ಉತ್ತರ ಭಾರತದಲ್ಲಿರೋ ಮಹಾಲಕ್ಷ್ಮಿ ದೇವಸ್ಥಾನ... ದುಡ್ಡಿನ ದೇವತೆಯಾಗಿರೋ ಲಕ್ಷ್ಮಿಗೆ ನಾನಾ ಅವತಾರಗಳಿವೆ.. ಉತ್ತರ ಭಾರತದಲ್ಲಿ ಈ ಮಹಾತಾಯಿಯನ್ನು 9 ಅವತಾರಗಳಲ್ಲಿ ಪೂಜಿಸಲಾಗುತ್ತೆ.. ನವರಾತ್ರಿ ಸಂದರ್ಭದಲ್ಲಿ ದುಡ್ಡಿನ ದೇವತೆಯನ್ನು ಇದೇ ರೀತಿ ದುಡ್ಡಿನಿಂದ್ಲೇ ಅಲಂಕರಿಸಲಾಗುತ್ತೆ..

ಬರೀ ದೇವಿಯನ್ನು ಮಾತ್ರ ಅಲ್ಲಾ ಕಣ್ರಿ.. ದೇವಿ ಇರೋ ಈ ಇಡೀ ದೇವಸ್ಥಾನವನ್ನೇ ದುಡ್ಡಿನಿಂದ ಮುಚ್ಚಿ ಬಿಡ್ತಾರೆ.. ಬಣ್ಣ ಬಣ್ಣದ ಕಲರ್ ಪೇಪರ್​ಗಳಿಂದ ಗೋಡೆಯನ್ನು ಸಿಂಗಾ ಮಾಡೋ ಹಾಗೇ, ಕೋಟಿ ಕೋಟಿ ರೂಪಾಯಿಗಳನ್ನು, ಸಾವಿರ ರೂಪಾಯಿ ನೋಟುಗಳಿಂದ್ಲೇ ಸಿಂಗಾರ ಮಾಡಲಾಗುತ್ತೆ. ನೀವು ಈ ದೇವಸ್ಥಾನಕ್ಕೆ ಬಂದರೆ ಸಾಕು ಕಣ್ರಿ,... ನೆಲಾನೇ ಕಾಣ್ಸೋದಿಲ್ಲ.. ಕಣ್ಣು ಹಾಯಿಸಿದ ಕಡೆ ಎಲ್ಲಾ ಬರೀ ದುಡ್ಡು ದುಡ್ಡು ದುಡ್ಡು..

ಬಡ ರಾಷ್ಟ್ರ ಅಂತ ಕರೆಸಿಕೊಳ್ಳೋ ಭಾರತದಲ್ಲಿ, ಇದೊಂಥರ ಅಚ್ಚರಿನೇ ಕಣ್ರಿ.. ಇಲ್ಲಿಗೆ ಬರೋ ಭಕ್ತರು ಈ ಮಹಾಮಾತೆಗೆ ತಮ್ಮ ದುಡ್ಡಿನಿಂದ ಸಿಂಗರಿಸಿ ಹೋಗ್ತಾರೆ ಕಣ್ರಿ.. ಬಂದೋರೆಲ್ಲಾ ಸಾವಿರಾರು ರೂಪಾಯಿಗಳನ್ನು ದೇವಿಗೆ ನೀಡಿ ಹೋಗ್ತಾರೆ. ಅದ್ರ ಜೊತೆಗೆ ಸುತ್ತಮುತ್ತಲಿನ ವ್ಯಾಪಾರಿಗಳು, ಈ ಮಾತೆಯನ್ನ ಅಲಂಕಾರಿಸೋದಕ್ಕೆ ಅಂತಲೇ, ಲಕ್ಷಾಂತರ ರೂಪಾಯಿಗಳನ್ನ ನೀಡ್ತಾರೆ..

ಇದೊಂದೇ ಅಲ್ಲ ಕಣ್ರಿ.. ಇದಕ್ಕಿಂತ ಮೀರಿಸೋದ ದುಡ್ಡಿನ ದೇವಸ್ಥಾನಗಳು ನಮ್ಮ ಭಾರತದಲ್ಲಿವೆ. ಅದ್ರಲ್ಲೂ ನಮ್ಮ ಕರ್ನಾಟಕಕ್ಕೆ ಹೊಂದಿಕೊಂಡೇ ಇರೋ ಆಂಧ್ರ ಮತ್ತು ತೆಲಂಗಾಣದಲ್ಲೂ, ದುಡ್ಡಿನ ದೇವಿಯನ್ನ ದುಡ್ಡಿನಿಂದಲೇ ಅಲಂಕರಿಸಲಾಗುತ್ತೆ..
ಇಲ್ನೋಡಿ.. ಇದು ಆಂಧ್ರದಲ್ಲಿರೋ ದುರ್ಗಾ ಮಾತೆಯ ದೇವಸ್ಥಾನ ಕಣ್ರಿ.. ಇಲ್ಲೂ ಕೂಡ ಮಹಾಮಾತೆಯನ್ನು ದುಡ್ಡಿನಿಂದ ಅಲಂಕರಿಸಲಾಗಿದೆ. ಆಂಧ್ರ ಅಂದ್ರೆ ಕೇಳ್ಬೇಕಾ..? ಇಲ್ಲಿರೋದು ಕೋಟಿ ಕುಳಗಳು.. ಹಬ್ಬ ಹರಿದಿನ ಬಂದ್ರೆ ಸಾಕು.. ಬರೀ ದೇವಿಯ ಮೂರ್ತಿಯನ್ನು ಮಾತ್ರವಲ್ಲ.. ಗೋಡೆಗಳು ಸೇರಿದಂತೆ, ಇಡೀ ದೇವಸ್ಥಾನವನ್ನೇ, ದುಡ್ಡಿನಿಂದ ಅಲಂಕಾರ ಮಾಡಲಾಗುತ್ತೆ.. ಪ್ರತಿಯೊಂದು ಗೋಡೆಗಳು, ಮೇಲ್ಛಾವಣಿ ಎಲ್ಲಾನೂ ನೋಟುಗಳಿಂದ್ಲೇ ಡೆಕೋರೇಷನ್ ಮಾಡಲಾಗುತ್ತೆ. ಬರೀ ಸಾವಿರ ರೂಪಾಯಿಗಳನ್ನ ಲೆಕ್ಕಾ ಹಾಕಿದ್ರೇನೇ, 30 ಲಕ್ಷ ಆಗುತ್ತೆ ಕಣ್ರಿ..

ಸ್ಥಳೀಯ ವ್ಯಾಪಾರಿಗಳು ಮತ್ತು ಭಕ್ತರು ಕೊಟ್ಟಿರೋ ದುಡ್ಡನ್ನು, ಹೀಗೆ ಅಲಂಕಾರಕ್ಕಾಗಿ ಬಳಸಲಾಗುತ್ತೆ ಕಣ್ರಿ.. ದೇವಿಯನ್ನ ಈ ರೀತಿ ದುಡ್ಡಿನಿಂದ ಅಲಂಕಾರ ಮಾಡಿದ್ರೆ, ಆಕೆ ಮನಸ್ಸು ಕರಗುತ್ತಂತೆ ಕಣ್ರಿ.. ಹೀಗೆ ಅಲಂಕಾರ ಮಾಡಿದ ಭಕ್ತರ ಮನೆಯಲ್ಲಿ ಸದಾ ನೆಲೆಸಿರ್ತಾಳೆ ಅನ್ನೋದು ಭಕ್ತರ ನಂಬಿಕೆ.. ಅದಿಕ್ಕೆ ನೋಡಿ.. ಲಕ್ಷ್ಮಿಯನ್ನು ಕರೆನ್ಸಿ ನೋಟಗಳಿಂದ್ಲೇ ಸಿಂಗಾರಗೊಳಸಿಲಾಗಿದೆ.

ಬರೀ ಇಷ್ಟನ್ನೇ ನೋಡಿ ಶಾಕ್ ಆಗ್ಬೇಡಿ.. ಇದಕ್ಕಿಂತ ರೋಚಕವಾದ ದುಡ್ಡಿನ ದೇಗುಲಗಳು ನಮ್ಮ ನೆಲದಲ್ಲಿವೆ. ಅವುಗಳನ್ನೇನಾದ್ರೂ ನೀವು ನೋಡಿದ್ರೆ, ಒಂದ್ ಕ್ಷಣ ಅವಕ್ಕಾಗಿ ಬಿಡ್ತೀರ.. ಮುಂದೆ ಓದಿ
------------------------------
ಆಂಧ್ರದಲ್ಲಿರೋ ಬಹುತೇಕರು ದುಡ್ಡಿನ ಕುಳಗಳೇ.. ಆಂಧ್ರ ಮಣ್ಣಲ್ಲಿ ದುಡ್ಡಿನ ಗಿಡಾನೇ ಬೆಳೆಯುತ್ತೆ ಅನ್ಸುತ್ತೆ.. ಅದಿಕ್ಕೆ ಹೂವಿನ ಗಿಡದಿಂದ ಹೂ ತಂದು ದೇವ್ರಿಗೆ ಇಡೋ ಬದ್ಲು, ದುಡ್ಡಿನ ಗಿಡದಿಂದ ದುಡ್ಡನ್ನು ತಂದು, ದೇವ್ರನ್ನ ಅಲಂಕರಿಸ್ತಾರೆ.. ಆಂಧ್ರದಲ್ಲಿರೋ ಆ ದುಡ್ಡಿನ ದೇಗುಲಗಳ ಅಚ್ಚರಿಯ ಸ್ಟೋರಿ ಇಲ್ಲಿವೆ ಓದಿ.

ಆಂಧ್ರ ಮತ್ತು ತೆಲಂಗಾಣ ಪ್ರದೇಶಗಳು ಅಂದ್ರೇನೇ ಹಾಗೆ ಕಣ್ರಿ.. ದೇವರನ್ನು ದುಡ್ಡಿನಿಂದ ಅಲಂಕರಿಸೋ ಭಕ್ತರು ಇಲ್ಲಿ ಎಥೇಚ್ಚವಾಗಿದ್ದಾರೆ. ದಸರಾ ಹಬ್ಬ ಬಂತು ಅಂದ್ರೆ, ಲಕ್ಷ್ಮಿ ದೇವಿಯನ್ನು ದುಡ್ಡಿನಿಂದ ಸಿಂಗರಿಸಿ ಪೂಜೆ ಮಾಡ್ತಾರೆ.. ಒಂಭತ್ತು ದಿನಗಳ ಕಾಲ ಇಲ್ಲಿ ಮಹಾಲಕ್ಷ್ಮಿಯನ್ನು ವಿವಿಧ ಬಗೆಯಾಗಿ ಬಣ್ಣ ಬಣ್ಣದ ನೋಟುಗಳಿಂದ ಸಿಂಗರಿಸಿ ಸಂತುಷ್ಟರಾಗ್ತಾರೆ ಭಕ್ತರು..


ಇಲ್ನೋಡಿ.. ಇದು ಆಂಧ್ರಾದ ಅಮಲಾಪುರಂನಲ್ಲಿರೋ ಕನ್ನಿಕಾ ಪರಮೇಶ್ವರಿ ದೇವಸ್ಥಾನ...ಇಲ್ಲೂ ಅಷ್ಟೇ ಕಣ್ರಿ.. ಐಶ್ವರ್ಯ ಲಕ್ಷ್ಮಿಯನ್ನು, ಐಶ್ವರ್ಯದಿಂದಲೇ ಅಭಿಷೇಕ ಮಾಡಿದ್ದಾರೆ.. ಈ ಕನ್ನಿಕಾ ಪರಮೇಶ್ವರಿಯನ್ನು ಬರೀ ದುಡ್ಡಿನಿಂದಲೇ ಸಿಂಗಾರಿಸಲಾಗಿದೆ. ಮೇಲೆ ನೋಡಿ.. ಹಬ್ಬ ಹರಿದಿನಗಳಲ್ಲಿ ಕಲರ್ ಪೇಪರ್​ಗಳನ್ನು ಕಟ್ ಮಾಡಿ ಡೆಕೋರೇಷನ್ ಮಾಡೋ ಹಾಗೇ, ಗರಿ ಗರಿ ನೋಟುಗಳಿಂದ ದೇವಸ್ಥಾನವನ್ನು ಡೆಕೋರೇಟ್ ಮಾಡಿದ್ದಾರೆ. ಅದೂ ಒಂದಲ್ಲ ಎರಡಲ್ಲಾ ಕಣ್ರಿ... ಬರೋಬ್ಬರಿ 1 ಕೋಟಿ 80 ಲಕ್ಷ ರೂಪಾಯಿ ಗರಿ ಗರಿ ನೋಟುಗಳಿಂದ, ದುಡ್ಡಿನ ದೇವತೆಯನ್ನು  ಸಿಂಗರಿಸಲಾಗಿದೆ.


ಇಲ್ನೋಡ್ರೀ.. ರಾಶಿ ರಾಶಿಯಾಗಿ ಜೋಡಿಸಲಾಗಿರೋ ಗರಿ ಗರಿ ನೋಟುಗಳನ್ನ ನೋಡಿ.. ರಿಸರ್ವ್​ ಬ್ಯಾಂಕ್​ನಲ್ಲೂ ಇಷ್ಟೋಂದು ದುಡ್ಡನ್ನ ಹೀಗೆ ಜೋಡಿಸ್ತಾರೋ ಇಲ್ಲೋ ಗೊತ್ತಿಲ್ಲ.. ಆದ್ರೆ ಆಂಧ್ರಾದಲ್ಲಿ ದೇವರಿಗಾಗಿ ಭಕ್ತರು ಜೋಡಿಸಿರೋ ದುಡ್ಡಿದು..ಇದು ಮೆಹಬೂಬ್ ನಗರದಲ್ಲಿರೋ ಕನ್ನಿಕಾ ಪರಮೇಶ್ವರಿ ದೇವಸ್ಥಾನ.. ಇಲ್ಲೂ ಕೂಡ ಈ ಮಹಾಮಾತೆಯನ್ನು ದುಡ್ಡಿನಿಂದ ಸಿಂಗರಿಸಲಾಗಿದೆ.. ಒಂದು ಇಂಚು ಕೂಡ ಜಾಗ ಇಲ್ಲದಂಗೆ, ಹಣದಿಂದ ಮುಚ್ಚಿದ್ದಾರೆ ಕಣ್ರಿ ಈ ದೇವಿಯನ್ನ..

ಒಂದು ಕೋಟಿ ಅಲ್ಲ.. ಎರಡು ಕೋಟಿನೂ ಅಲ್ಲ.. ಮೂರರಿಂದ ನಾಲ್ಕು ಕೋಟಿಯಷ್ಟು ಹಣವನ್ನು, ಇಲ್ಲಿ ಸಾಲಾಗಿ ಜೋಡಿಸಲಾಗಿದೆ ಕಣ್ರಿ... ಇದ್ರ ಜೊತೆಗೆ ಇಲ್ಲಿಗೆ ಬರೋ ಭಕ್ತರು ಕೂಡ ತಮ್ಮಲ್ಲಿರೋ ನೋಟುಗಳನ್ನು ಈ ದೇವಿಗೆ ಸಮರ್ಪಿಸಿ ಹೋಗ್ತಾರೆ.. ಆ ನೋಟುಗಳೂ ಕೂಡ, ಈ ದೇಗುಲದ ಗೋಡೆ ಗೋಡೆಗಳಲ್ಲಿ ಸಿಂಗಾರಗೊಂಡು, ದೇವಿಯ ಐಶ್ವರ್ಯವನ್ನು ಹೆಚ್ಚಿಸುತ್ತೆ.. ಜೊತೆಗೆ, ದೇಗುಲದ ಅಂದವನ್ನೂ ಹೆಚ್ಚಿಸುತ್ತೆ.. ಇಷ್ಟೇ ಅಲ್ಲ, ಲಕ್ಷ್ಮಿಯನ್ನು ಆರಾಧಿಸೋ ಭಕ್ತರು ದುಡ್ಡಿನ ಅಧಿದೇವತೆಯನ್ನು ನವರಾತ್ರಿಗಳಲ್ಲಿ ಹೀಗೆ ದುಡ್ಡಿನಿಂದ ಅಲಂಕರಿಸಿ ದೇವಿಯ ಕೃಪೆಗೆ ಪಾತ್ರರಾಗ್ತಾರೆ.. ಆದ್ರೆ ವಿಘ್ನ ವಿನಾಶಕನನ್ನು ದುಡ್ಡಿನಿಂದ ಅಲಂಕಾರ ಮಾಡಲಾಗುತ್ತೆ..
ಇಲ್ನೋಡಿ.. ಗಣೇಶನನ್ನ ಹೇಗೆ ದುಡ್ಡಿನಿಂದ ಅಲಂಕಾರ ಮಾಡಿದ್ದಾರೆ ಅಂತ... ನೂರರಿಂದ ಹಿಡ್ದು, ಸಾವಿರ ರೂಪಾಯಿ ನೋಟುಗಳಿಂದ ಈ ಗಣೇಶನನ್ನ ಸಿಂಗರಿಸಲಾಗಿದೆ.

ಅಂದ್ಹಾಗೆ ಈ ದೃಶ್ಯಗಳು ಕಂಡು ಬಂದಿದ್ದು ಗುಂಟೂರಿನಲ್ಲಿ ಕಣ್ರಿ.. ನವರಾತ್ರಿಗಳಲ್ಲಿ ಲಕ್ಷ್ಮಿಯನ್ನು ದುಡ್ದಡಿನಿಂದ ಸಿಂಗರಿಸೋ ಭಕ್ತರು, ಗಣೇಶನನ್ನು ಗಣೇಶ ಚೌತಿಯ ಟೈಮಲ್ಲಿ ದುಡ್ಡಿನಿಂದ ಅಲಂಕಾರ ಮಾಡ್ತಾರೆ. ಮೇಲ್ ನೋಡ್ರಿ.. ಗಣೇಶನನ್ನ ಇರಿಸಲಾಗಿರೋ ಚಪ್ಪರ ಕೂಡ ದುಡ್ಡಿಂದೆ ಕಣ್ರಿ.. ಅಷ್ಟೇ ಅಲ್ಲ, ಅಕ್ಕ ಪಕ್ಕ ಅಲಂಕಾರಕ್ಕೆ ಅಂತ ಜೋಡಿಸಿರೋದು ಕೂಡ, ಗರಿ ಗರಿ ನೋಟುಗಳನ್ನೇ..ಗಣೇಶನ ಕಿರೀಟ ಕೂಟ, ಗರಿ ಗರಿ ನೋಟಿನಿಂದ ಅಲಂಕರಿಸಲಾಗಿದೆ. ಚಕ್ರದಂತೆ ಕಾಣೋ ಅಲಂಕಾರಿಕ ಜಾಗವನ್ನೂ ನೋಟುಗಳಿಂದ್ಲೇ ಜೋಡಿಸಲಾಗಿದೆ.

ಇನ್ನು ಇದೇ ಥರ ಗಣೇಶನನ್ನು ದುಡ್ಡಿನಿಂದ ಅಲಂಕಾರ ಮಾಡಿರೋ ಮತ್ತೊಂದು ದೇಗುಲ ಇದೇ ಭಾಗದ ಅದಿಲಾಬಾದ್​ನಲ್ಲಿದೆ.. ಇಲ್ನೋಡಿ.. ಗಣೇಶನ ಹಣೆಯನ್ನ, 20 ರೂಪಾಯಿ, 500 ರೂಪಾಯಿ ಮತ್ತು ಒಂದು ಸಾವಿರ ರೂಪಾಯಿಗಳ ನೋಟುಗಳಿಂದ ಸಿಂಗರಿಸಲಾಗಿದೆ.

ಬರೀ ನೋಟುಗಳು ಮಾತ್ರ ಅಲ್ಲ.. ನಾಣ್ಯಗಳಿಂದಲೂ ಗಣೇಶನನ್ನು ಅಲಂಕರಿಸ್ತಾರೆ ಇಲ್ಲಿನ ಭಕ್ತರು..ರಾಶಿ ರಾಶಿ ಅಸಲಿ ನೋಟುಗಳಿಂದ ಅಲಂಕೃತನಾಗಿರೋ ಗಣೇಶನನ್ನ ನೋಡೋಕೆ ಒಂಥರ ಆನಂದ ಕಣ್ರಿ.. ಅದಿಕ್ಕೇನೇ.. ಈ ಗಣೇಶನನ್ನ ನೋಡೋಕೆ, ದೂರದೂರಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ.. ಕ್ಯೂನಲ್ಲಿ ನಿತು ಗಣೇಶನ ದರ್ಶನ ಪಡೀತಾರೆ.

ಇಷ್ಟೇ ಅಲ್ಲ.. ವಿಘ್ನ ನಿವಾರಕ ವಿನಾಯಕನನ್ನು ದುಡ್ಡಿನಿಂದ ಸಿಂಗರಿಸೋ ಭಕ್ತರು ತಮಿಳುನಾಡಿನಲ್ಲೂ ಇದ್ದಾರೆ ಕಣ್ರಿ.. ಇಲ್ಲಿನ ಕುಂಭ ಕೋಣಂನಲ್ಲಿರೋ ವಿನಾಯಕನಿಗೆ ದುಡ್ಡಿನಿಂದ ಅಲಂಕಾರ ಮಾಡ್ತಾರೆ ಭಕ್ತರು.. ಬರೀ ಭಾರತದ ರೂಪಾಯಿಗಳು ಮಾತ್ರವಲ್ಲ.. ಅಮರಿಕನ್ ಡಾಲರ್ಗಳಿಂದಲೂ ಕುಂಭಕೋಣಂನ ಗಣೇಶ ಅಲಂಕಾರಗೊಳ್ತಾನೆ..

ನಿಮಗೆ ಗೊತ್ತಿಲ್ಲದ ಅದೆಷ್ಟೋ ದುಡ್ಡಿನ ದೇಗುಲಗಳು ನಿಮ್ಮ ನಡುವೇನೇ ಇವೆ.. ಆ ದೇಗುಲಗಳನ್ನು ನಿಮಗೆ ದರ್ಶನ ಮಾಡಿಸ್ತೀವಿ.. ಮುಂದೆ ಓದಿ..
------------------
ದೇಹಿ ಅಂತ ಬೇಡಿದ ಭಕ್ತರಿಗೆ, ಆ ಧನ ಲಕ್ಷ್ಮಿ ಒಲೀತಾಳೆ.. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡಿಯಿರೋ ಅನ್ನೋ ಹಾಗೇ, ದೇವರು ಕೊಟ್ಟ ದುಡ್ಡನ್ನು ದೇವ್ರಿಗೆ ಸಮರ್ಪಿಸಿ ಧನ್ಯರಾಗ್ತಾರೆ ಭಕ್ತರು.. ಹೀಗೆ ಮಾಡಿದ್ರೆ ನಿಜಕ್ಕೂ ದೇವಿಯ ಕೃಪೆಗೆ ಪಾತ್ರರಾಗಬಹುದಾ..? ಇಲ್ಲಿದೆ ನೋಡಿ ಒಂದು ರೋಚಕ ಕಥೆ..

ಭಕ್ತಿಯ ಪರಾಕಾಷ್ಟೆ ತಲುಪಿದ ಭಕ್ತರು, ದೇವರಿಗಾಗಿ ಏನು ಬೇಕಾದ್ರೂ ಮಾಡ್ತಾರೆ. ಇವ್ರ ನಿಷ್ಕಲ್ಮಶ ಬಕ್ತಿ ಆ ದೇವಿಗೆ ಇಷ್ಟವಾಯ್ತು ಅಂದ್ರೆ, ಅಂಥವರ ಮನೆಯಲ್ಲಿ ಈ ಮಹಾಲಕ್ಷ್ಮಿ ನೆಲೆಸ್ತಾಳೆ ಅನ್ನೋ ನಂಬಿಕೆ ಇದೆ. ಹೀಗೆ ದೇವರನ್ನು ಅಲಂಕರಿಸಿ ಪೂಜಿಸಿದವರಿಗೆ ಒಳ್ಳೇದ್ ಕೂಡ ಆಗಿದ್ಯಂತೆ.. ಅದಕ್ಕಾಗಿನೇ.. ಭಕ್ತರು ಹೀಗೆ ದುಡ್ಡಿನ ಅಧಿದೇವತೆಯನ್ನು ದುಡ್ಡಿನಿಂದಲೇ ಸಿಂಗರಿಸ್ತಿರೋದು..

ಆಂಧ್ರದ ಬಹುತೇಕ ಪ್ರದೇಶಗಳಲ್ಲಿ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಈ ರೀತಿ ದುಡ್ಡಿನಿಂದ ದೇವರನ್ನು ಅಲಂಕರಿಸೋ ಪದ್ಧತಿ ಇದೆ. ಉತ್ತರ ಭಾರತದ ಕೆಲ ಪ್ರದೇಶಗಳಲ್ಲೂ, ಇಂಥ ಸಂಪ್ರದಾಯವಿದೆ.ಇನ್ನು ಇದು ಆಂಧ್ರದಲ್ಲಿರೋ ಮತ್ತೊಂದು ದೇವಸ್ಥಾನ.. ವಾಸವೀ ದೇವಿಯ ಅವತಾರದಲ್ಲಿ ನೆಲೆಸಿದ್ದಾಳೆ ಸಾಕ್ಷಾತ್​ ದುರ್ಗಾ ಮಾತೆ.. ನವರಾತ್ರಿ ಸಂದರ್ಭದಲ್ಲಿ, ಈ ದುರ್ಗಾ ಮಾತೆಯನ್ನು ಹೀಗೆ ನೋಟುಗಳಿಂದ ಅಲಂಕರಿಸಲಾಗುತ್ತೆ ಕಣ್ರಿ.. ನೋಟುಗಳನ್ನೇ ಸೀರೆಯಂತೆ ಸಿಂಗರಿಸಿ, ದೇವಿಗೆ ಅಲಂಕಾರ ಮಾಡಲಾಗಿದೆ..  ಹಿಂದೆ ಇರೋ ಚಕ್ರವೂ ನೋಟುಗಳಿಂದಲೇ ಡೆಕೋರೇಟ್ ಮಾಡಲಾಗಿದೆ. ಈ ದೇವಿ ನೆಲೆಸಿರೋ ದೇವಸ್ಥಾನದ ಪ್ರತಿಯೊಂದು ಭಾಗದಲ್ಲೂ ಇರೋದು ನೋಟುಗಳೇ ಕಣ್ರಿ.. ಕೋಟಿ ಕೋಟಿ ನೋಟುಗಳ ನಡುವೆ ರಾರಾಜಿಸುವಂತೆ ನೆಲೆಸಿದ್ದಾಳೆ ಈ ಮಹಾ ಮಾತೆ.. ದುಡ್ಡಿ ನಡುವೆ ಸಿಂಗಾರಗೊಂಡ ದುರ್ಗಾ ಮಾತೆಯನ್ನು ನೋಡೋದಕ್ಕೆ, ಇಲ್ಲಿಗೆ ಸಾವಿರಾರು ಪ್ರಮಾಣದಲ್ಲಿ ಭಕ್ತರು ಆಗಮಿಸ್ತಾರೆ. ದೇವಿಯ ರ್ದಶನ ಪಡೆದು ಪುನೀತರಾಗ್ತಿದ್ದಾರೆ.

ಇನ್ನು ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರೋ ದುರ್ಗಾಮಾತೆಗೂ ಹಣದ ಅಲಂಕಾರ ಮಾಡ್ತಾರೆ.. ಇಲ್ಲಿ ನೆಲೆಸಿರೋ ದೇವಿಯನ್ನ  ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚಿನ ನೋಟುಗಳಿಂದ ಅಲಂಕಾರ ಮಾಡಿದ್ದಾರೆ. ಅದೇ ನೋಟುಗಳಿಂದಲೇ, ಮಹಾಮಾತೆಗೆ ಮಂಟಪ ಕಟ್ಟಿ, ಅದರೊಳಗೆ ಆಕೆಯನ್ನ ಪ್ರತಿಷ್ಟಾಪಿಸಿದ್ದಾರೆ..

ಇನ್ನು ವಾರಂಗಲ್​​ನಲ್ಲೂ ದುರ್ಗಾದೇವಿಯನ್ನು ಹೀಗೇ ಅಲಂಕಾರ ಮಾಡ್ತಾರೆ ಕಣ್ರಿ. ನೂರರಿಂದ 1 ಸಾವಿರ ರೂಪಾಯಿಗಳ ನೋಟುಗಳನ್ನು ಹಾರ ಮಾಡಿ ದೇವಿಗೆ ಅರ್ಪಿಸಲಾಗುತ್ತೆ.. ದೇವಿಯ ಮಂಟಪದಿಂದ ಹಿಡಿದು, ಅಲ್ಲಿ ಸಿಂಗರಿಸಲಾಗಿರೋ ಎಲ್ಲಾ ಜಾಗಗಳೂ, ದುಡ್ಡಿನಿಂದಲೇ ಮುಚ್ಚಿಕೊಂಡಿದೆ..

ಇವೆಲ್ಲಾ ನೋಡಿದ್ರೆ, ನಿಜಕ್ಕೂ ಅಚ್ಚರಿಯಾಗುತ್ತೆ ಕಣ್ರಿ.. ಹೀಗೆ ದೇವರ ಹೆಸರಲ್ಲಿ ದೇಗುಲವನ್ನು ದುಡ್ಡಿನಿಂದ ಸಿಂಗರಿಸೋದು ಒಂದು ರೀತಿಯ ಅಚ್ಚರಿಯಾದ್ರೆ, ಮತ್ತೊಂದು ಮಹದಚ್ಚರಿ ಏನ್ ಗೊತ್ತಾ..? ಈ ಯಾವ ದೇಗುಲದಲ್ಲೂ, ಕಳ್ಳರ ಕರಿ ನೆರಳು ಬಿದ್ದಿಲ್ಲ..

ಭಕ್ತರು ತನಗರ್ಪಿಸಿದ ಸಂಪತ್ತನ್ನ, ಈ ದೇವಿಯೇ ಕಾಪಾಡಿಕೊಳ್ತಿದ್ದಾಳೆ. ಅದ್ರ ಜೊತೆಗೆ, ತಮ್ಮಲ್ಲಿರೋ ಸಂಪತ್ತನ್ನು ಹೀಗೆ ದಾನವಾಗಿ ಕೊಡೋ ಮನಸ್ಥಿತಿ ಇರೋ ಉದಾರ ವ್ಯಕ್ತಿಗಳನ್ನು, ಮನಸಾರೆ ಆಶೀರ್ವದಿಸ್ತಿದ್ದಾಳೆ..

ದುಡ್ಡಿನ ದೇಗುಲ ನಿರ್ಮಿಸಿ, ಅದರಲ್ಲಿ ದುಡ್ಡಿನ ಅಧಿದೇವತೆಯನ್ನು ಪ್ರತಿಷ್ಟಾಪಿಸಿದ್ರೆ, ಒಳ್ಳೇದಾಗುತ್ತೆ ಅನ್ನೋ ನಂಬಿಕೆ ಇದೆ. ಇದ್ರಿಂದ ಒಳಿತನ್ನ ಕಂಡವರೂ ಇದ್ದಾರೆ. ಅದಕ್ಕೇನೇ ವಿಶೇಷ ಸಂದರ್ಭಗಳಲ್ಲಿ, ಹೀಗೆ ದೇವರನ್ನು ದುಡ್ಡಿನಿಂದ ಅಲಂಕರಿಸಿ ಕಣ್ತುಂಬಿಕೊಳ್ತಾರೆ ಭಕ್ತರು..

ಹಿಂದೂ ದೇವರಿಗೆ ವಿದೇಶಿಗರೇ ವಿಲನ್!

ವಿದೇಶೀ ನೆಲದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೀತಿದೆ ಅಟ್ಯಾಕ್.. ಭಾರತದ ಧರ್ಮ ಸಹಿಷ್ಣುತೆ ಬಗ್ಗೆ ಭಾಷಣ ಮಾಡಿದ ಒಬಾಮಾ ನಾಡಲ್ಲೇ, ಹಿಂದೂ ದೇವಾಲಯಗಳ ಮೇಲೆ ನಡೀತಿದೆ ದಾಳಿ. ವಿದೇಶದಲ್ಲಿ ಎಷ್ಟು ಹಿಂದೂ ದೇವಾಲಯಗಳ ಮೇಲೆ ಅಟ್ಯಾಕ್ ಆಗಿದೆ ಗೊತ್ತಾ..?

ಯಸ್.. ಇದು ನಿಜಾ.. ಜಗತ್ತನ್ನು ಕಾಪಾಡೋ ದೇವ್ರಿಗೇ ಈಗ ಕಿಡಿಗೇಡಿಗಳ ಭಯ ಶುರುವಾಗಿದೆ ಕಣ್ರಿ.. ವಿದೇಶದಲ್ಲಿರೋ ಹಿಂದೂ ದೇವಾಲಯಗಳ ಮೇಲೆ ಮೇಲಿಂದ ಮೇಲೆ ದಾಳಿ ನಡೀತಿದೆ. ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಬಂದಿದ್ದ ಬರಾಕ್ ಒಬಾಮಾ, ಧರ್ಮ ಸಹಿಷ್ಣುತೆನೇ ಭಾರತದ ಶಕ್ತಿ ಅಂತ ಹೇಳಿದ್ರು.. ಈ ನೆಲದ ಧರ್ಮ ಸಹಿಷ್ಣುತೆಯನ್ನು ಮೆಚ್ಚಿದ್ರು.

ಬುದ್ದಿ ಹೇಳೋರೇ ಬದ್ನೇಕಾಯಿ ತಿಂತಾರೆ ಅಂತಾರಲ್ಲಾ.. ಹಾಗಿದೆ ಕಣ್ರೀ ಅಮೆರಿಕದ ನಡೆ.. ಯಾಕಂದ್ರೆ, ಒಬಾಮಾ ನಾಡಲ್ಲೇ ಧರ್ಮಾಂಧರ ದರ್ಬಾರ್ ನಡೀತಿದೆ. ಹಿಂದೂ ದೇಗುಲಗಳ ಮೇಲೆ ಕಿಡಿಗೇಡಿಗಳು ನಿರಂತರವಾಗಿ ದಾಳಿ ನಡೆಸ್ತಾನೇ ಇದ್ದಾರೆ.

ಒಬಾಮಾ ನಾಡಲ್ಲೇ ಹಿಂದೂ ದೇವಾಲಯಗಳ ಮೇಲೆ ದಾಳಿ
ಒಂದೇ ತಿಂಗಳಲ್ಲಿ ಎರಡು ದೇವಾಲಯಗಳ ಮೇಲೆ ಅಟ್ಯಾಕ್

ಯಸ್​.. ನೀವು ನಂಬ್ತೀರೋ ಬಿಡ್ತಿರೋ ಗೊತ್ತಿಲ್ಲ.. ಒಂದೇ ತಿಂಗಳಲ್ಲಿ ಎರಡು ಹಿಂದೂ ದೇವಾಲಯಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ.

---------------------------------
ದಿನಾಂಕ : 26, ಫೆಬ್ರವರಿ, 2015
ದಾಳಿ : ಸನಾತನ ಧರ್ಮ ಕೇಂದ್ರ
ಸ್ಥಳ : ಕೆಂಟ್​​, ವಾಷಿಂಗ್​ಟನ್​ ಡಿಸಿ
---------------------------------

 ಇಲ್ನೋಡಿ.. ಒಬಾಮಾ ನಾಡಲ್ಲಿರೋ ಹಿಂದೂ ದೇವಸ್ಥಾನದ ಗತಿ ಏನಾಗಿದೆ ಅಂತ.. ಇದು ವಾಷಿಂಗ್​ಟನ್​ ಡಿಸಿಯಲ್ಲಿರೋ ಸನಾತನ ಧರ್ಮ ಕೇಂದ್ರ. ಗುರುವಾರ ರಾತ್ರಿ ದೇವಸ್ಥಾನದಿಂದ ಹೋಗಿದ್ದ ಜನರು, ಶುಕ್ರವಾರ ಬೆಳಿಗ್ಗೆ ವಾಪಸ್ ಬಂದು ನೋಡೋಷ್ಟ್ರಲ್ಲಿ, ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ವು.. ಇಷ್ಟೇ ಅಲ್ಲ, ದೇಗುಲದ ಗೋಡೆ ಮೇಲೆ ‘ಫಿಯರ್​’ ಅಂತ ಬರೆದು ಭಯ ಸೃಷ್ಟಿಸಿದ್ರು ಧರ್ಮಾಂಧರು.. ಇನ್ನು ಈ ಸನಾತನ ಧರ್ಮ ಕೇಂದ್ರದ ಮೇಲೆ ದಾಳಿ ನಡೆಯೋದಕ್ಕಿಂತ ಜಸ್ಟ್ 10 ದಿನ ಮೊದ್ಲು, ಬೇರೊಂದು ಹಿಂದೂ ದೇವಸ್ಥಾನದ ಮೇಲೆ ಅಟ್ಯಾಕ್ ನಡೆದಿತ್ತು..


---------------------------------
ದಿನಾಂಕ : 16, ಫೆಬ್ರವರಿ, 2015
ದಾಳಿ : ಹಿಂದೂ ದೇವಸ್ಥಾನ ಮತ್ತು ಸಾಂಸ್ಕೃತಿಕ ಕೇಂದ್ರ
ಸ್ಥಳ : ಬೋಥೆಲ್ ನಗರ, ವಾಷಿಂಗ್​ಟನ್​ ಡಿಸಿ
---------------------------------

ಫೆಬ್ರುವರಿ 17, 2015 ರ ಶಿವರಾತ್ರಿಗೆ, ಅಮೆರಿಕದ ಹಿಂದೂಗಳೆಲ್ಲಾ ತಯಾರಿ ನಡೆಸಿದ್ರು.. ಬೋಥೆಲ್​​ ನಗರದಲ್ಲಿರೋ ಹಿಂದೂ ದೇವಸ್ಥಾನ ಮತ್ತು ಸಾಂಸ್ಕೃತಕ ಕೇಂದ್ರ ಎಲ್ಲಾ ರೀತಿಯಲ್ಲೂ ಸಿಂಗಾರಗೊಂಡಿತ್ತು. ಆದರೆ ಶಿವರಾತ್ರಿಯ ಹಿಂದಿನ ದಿನಾನೇ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ರು.. ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಲ್ಲದೇ, ಶಿವನ ಮೂರ್ತಿಯನ್ನು ಧ್ವಂಸಗೊಳಿಸಿದ್ರು ವಿಧ್ವಂಸಕರು..

ಗುಂಡಿನ ದಾಳಿ ನಡೆಸಿದ ಕಿಡಿಗೇಡಿಗಳು ಒಬ್ಬನ ಜೀವವನ್ನೇ ಬಲಿ ತೆಗೆದುಕೊಂಡಿದ್ರು.. ಇನ್ನು ಇಲ್ಲೂ ಕೂಡ ಒಂದು ಸಂದೇಶವನ್ನು ಬರೆದು ಹೋಗಿದ್ರು.. ಅದೇ ಗೆಟ್ ಔಟ್​..


ಯಸ್.. ಹಿಂದೂಗಳನ್ನು ಅಮೆರಿಕ ನೆಲದಿಂದ ಓಡಿಸೋ ಹುನ್ನಾರ ಕಿಡಿಗೇಡಿಗಳದ್ದು ಅನ್ನೋದು ಅಲ್ಲಿ ಸ್ಪಷ್ಟವಾಗಿ ಗೊತ್ತಾಗಿಬಿಟ್ಟಿತ್ತು. ಯಾಕಂದ್ರೆ, ದೇವಸ್ಥಾನದ ಮೇಲೆ ದಾಳಿ ನಡಿಸಿದ ಕಿಡಿಗೇಡಿಗಳು ಗೆಟ್​ ಔಟ್​ ಅಂತ ಬೆರೆದು ಹೋಗಿದ್ರು. ಅದರ ಪಕ್ಕ ನಾಜಿ ಪಂಥದ ಸ್ವಸ್ತಿಕ್​​ ಚಿಹ್ನೆ ಕೂಡ ಇತ್ತು..

ಇನ್ನು ಈ ದೇವಸ್ಥಾನದಿಂದ ಅರ್ಧ ಕಿ.ಮೀ ದೂರ ಇರೋ ಸ್ಕೈ ವೀವ್​​ ಮಿಡಲ್​​ ಸ್ಕೂಲ್​ ಮೇಲೂ ಕಿಡಿಗೇಡಿಗಳು ದಾಳಿ ಮಾಡಿದ್ರು.. ಆ ಸ್ಕೂಲಿನ ಗೋಡೆ ಮೇಲೂ ಒಂದು ಸಂದೇಶ ಇತ್ತು..

ಗೆಟ್ ಔಟ್​​ ಮುಸ್ಲಿಂ ಅನ್ನೋ ಸಂದೇಶ ಬರೆದಿದ್ದ ಕಿಡಿಗೇಡಗಳು, ಅಲ್ಲೂ ಕೂಡ ನಾಜಿ ಪಂಥದ ಸ್ವಸ್ತಿಕ್ ಸಿಂಬಲ್​ ಇತ್ತು..!

---------------------------------
2013-14 ರಲ್ಲೂ ಮುಂದುವರಿದ ದಾಳಿ
ಜಾರ್ಜಿಯಾಯದಲ್ಲಿ ಶಿವನ ಮೂರ್ತಿ ಧ್ವಂಸ
---------------------------------
ಇನ್ನು ಜಾಜಿರ್ಯಾದ ಈ ಶಿವನ ದೇವಸ್ಥಾನದ ಮೇಲೆ, ಈ ಹಿಂದಿನಿಂದಲೂ ವಿಧ್ವಂಸಕರು ಕಣ್ಣು ಹಾಕಿದ್ದಾರೆ. 2013 ರಲ್ಲಿ ಈ ದೇವಸ್ಥಾನದ ಮೇಲೆ ದಾಳಿ ನಡೆದಿತ್ತು. ಆದ್ರೆ ಅಷ್ಟ್ರಲ್ಲೇ ಜಸ್ಟ್ ಮಿಸ್ಸು ಅನ್ನೋ ಹಾಗೇ, ದೊಡ್ಡ ದುರಂತವೊಂದು ತಪ್ಪಿತ್ತು.. ಅಷ್ಟ ಮಾತ್ರಕ್ಕೆ ಪಾತಕಿಗಳು ಸುಮ್ಮನಾಗಲಿಲ್ಲ.. 2014ರ ಆಗಸ್ಟ್ ನಲ್ಲಿ ಮತ್ತೆ ಅಟ್ಯಾಕ್ ಮಾಡಿದ ಕಿಡಿಗೇಡಿಗಳು, ಶಿವನ ಮೂರ್ತಿಯನ್ನು ಧ್ವಂಸಗೊಳಿಸಿದ್ರು.. ಇಲ್ಲೂ ಕೂಡ ಲೋಲ್​, ಹ ಹ ಅಂತ ಕುಹಕದ ನಗೆ ಬೀರುವ ಸಂದೇಶ ಬರೆದಿದ್ರು ಆಗಂತುಕರು

ಒಂದಲ್ಲಾ ಎರಡಲ್ಲ.. ಅಮೆರಕದ ನೆಲದಲ್ಲಿರೋ ಹಿಂದೂ ದೇವಾಲಯಗಳ ಮೇಲೆ ಅಲ್ಲಿನ ಕಿಡಿಗೇಡಿಗಳು ದಾಳಿ ನಡೆಸ್ತಾನೇ ಇದ್ದಾರೆ. ಅವ್ರ ಟಾರ್ಗೆಟ್ ಬರೀ ಹಿಂದೂ ದೇವಸ್ಥಾನಗಳು ಮಾತ್ರವಲ್ಲ.. ಬಹುಸಂಖ್ಯಾತ ಕ್ರಿಶ್ಚಿಯನ್ನರನ್ನು ಹೊರತುಪಡಿಸಿ ಉಳಿದವರೆಲ್ಲರನ್ನೂ ಅಮೆರಿಕದಿಂದ ಹೊರ ಹಾಕೋದೇ ಅವ್ರ ಮೇನ್​​ ಉದ್ದೇಶ ಕಣ್ರಿ.. ಅದಿಕ್ಕೆ, ಸಿಕ್ಕ ಸಿಕ್ಕ ಧರ್ಮ ಕೇಂದ್ರದ ಮೇಲೆ ದಾಳಿ ಮಾಡಿ, ಅದ್ರ ಮೇಲೆ ಗೆಟ್ ಔಟ್​ ಅಂತ ಬರೆದು, ನೀವು ಇಲ್ಲಿಂದ ಹೊರಟು ಹೋಗಿ ಅಂತ ಭಯ ಸೃಷ್ಟಿಸ್ತಿದ್ದಾರೆ.

ಬರೀ ಅಮೆರಿಕ ಮಾತ್ರವಲ್ಲ, ಜಗತ್ತಿನಾದ್ಯಂತ ಹಿಂದೂ ದೇವಾಲಯಗಳಿವೆ. ಆದ್ರೆ ಅವೆಲ್ಲಾ ಎಷ್ಟು ಡೇಂಜರ್ ಜೋನ್​ನಲ್ಲಿವೆ.. ಎಷ್ಟು ಹಿಂದೂ ದೇವಸ್ಥಾನಗಳ ಮೇಲೆ ಭೀಕರ ದಾಳಿ ಆಗಿದೆ ಅನ್ನೋದನ್ನು ಮುಂದೆ ಓದಿ
-----------------------------------------------------
ಜಗತ್ತಿನಾದ್ಯಂತ ಹಿಂದೂ ದೇವಾಲಯಗಳು ವಿಸ್ತಾರಗೊಳ್ಳುತ್ತಲೇ ಇವೆ. ಆದ್ರೆ ಆಧುನಿಕ ಜಗತ್ತಿನಲ್ಲೂ ಘಜ್ನಿ ಮನಸ್ಥಿತಿಯ ಮಂದಿ, ದೇಗುಲಗಳ ಮೇಲೆ ದಾಳಿ ನಡೆಸ್ತಾನೇ ಇದ್ದಾರೆ. ವಿದೇಶಗಳಲ್ಲಿ ಹಿಂದೂ ದೇಗುಲಗಳ ಮೇಲೆ ನಡೀತಿರೋ ಆ ವಿಧ್ವಂಸಕ ಕೃತ್ಯಗಳ ಡೀಟೇಲ್ಸ್ ಇಲ್ಲಿದೆ ನೋಡಿ..

ಅಮೆರಿಕ ಒಂದ್ರಲ್ಲೇ ಒಂದೇ ತಿಂಗಳಲ್ಲಿ ಎರಡು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿ, ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. ಆದ್ರೆ ಇದು ಕೇವಲ ಅಮೆರಿಕದಲ್ಲಿ ಮಾತ್ರ ಅಲ್ಲ.. ಜಗತ್ತಿನಾದ್ಯಂತ ಇರೋ ಹಿಂದೂ ದೇವಾಲಯಗಳ ಪರಿಸ್ತಿತಿ ಇದೆ.

----------------------
2013 ರಲ್ಲಿ ಕೆನಡಾದ ದೇಗುಲದ ಮೇಲೆ ದಾಳಿ
ಕಿಡಿಗೇಡಿಗಳಿಂದ ಲಕ್ಷ್ಮಿ ನಾರಾಯಣ ದೇಗುಲ ಧ್ವಂಸ
------------------------


ಇದು ಕೆನಡಾದ ಬ್ರಿಟೀಶ್​ ಕೊಲಂಬಿಯಾದಲ್ಲಿರೋ ಲಕ್ಷ್ಮೀ ನಾರಾಯಣ ದೇವಸ್ಥಾನ.. ಕೆನಡಾದಲ್ಲಿರೋ ಹಿಂದೂಗಳಿಗೆ ಈ ದೇವಸ್ಥಾನವೇ ಹಿಮಾಲಯದ ಕಾಶಿ ಇದ್ದಂಗೆ ಕಣ್ರಿ. ಯಾವುದೇ ಹಬ್ಬ ಹರಿದಿನ ಬಂದ್ರೂ, ಎಲ್ಲಾ ಇಲ್ಲೇ ಸೇರ್ಕೊಂಡು ಆಚರಣೆ ಮಾಡ್ತಾರೆ. ಆದ್ರೆ ಈ ದೇವಸ್ಥಾನದ ಮೇಲೂ ದಾಳಿ ಮಾಡಿದ್ಧಾರೆ ವಿಧ್ವಂಸಕರು..

ಇದು 2013, ಜೂನ್​ 23 ನೇ ತಾರೀಕು ಮಧ್ಯರಾತ್ರಿಯಲ್ಲಿ, ನಡೆದ ವಿಧ್ವಂಸಕ ಕೃತ್ಯ.. ಬೇಸ್​ ಬಾಲ್ ಬ್ಯಾಟ್​ಗಳಿಂದ ದೇವಸ್ಥಾನದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದ್ರು ಆಗಂತುಕರು. ಘಟನೆ ವೇಳೆ ಬ್ಯಾಟ್​ನ ಒಂದು ತುಣುಕು ಅಲ್ಲಿ ಬಿದ್ದಿತ್ತು.. ಅದು ದೇವಾಲಯದ ಮೇಲೆ ದಾಳಿ ಮಾಡಿದವರು ಯಾರು ಅನ್ನೋ ಸಾಕ್ಷಿ ಹೇಳಿತ್ತು..
----------------------
2013 ರಲ್ಲಿ ಲಂಡನ್​​ನ ಆದಿಶಕ್ತಿ ದೇವಸ್ಥಾನ ಧ್ವಂಸ
ಸಿಸಿಟಿವಿಯಲ್ಲಿ ಸರೆಯಾಯ್ತು ಆಗಂತುಕನ ಕಳ್ಳಾಟ..!
------------------------

ಇಲ್ನೋಡಿ.. ಇದು ಮಹಾಶಕ್ತಿ ಸ್ವರೂಪಿಣಿಯಾದ ಆಸಿಶಕ್ತಿಯ ದೇವಸ್ಥಾನ.. ಹೀಂದೂ ಮಹಾಮಾತೆಯನ್ನು ಲಂಡನ್​ನಲ್ಲಿ ಪ್ರತಿಷ್ಠಾಪಿಸಿದ ಭಕ್ತರು, ಕಷ್ಟ ಅಂದಾಗೆಲ್ಲಾ ಮಾತೆಯ ಪಾದಕ್ಕೆ ಬಿದ್ದು ಆಶೀರ್ವಾದ ಪಡೀತಿದ್ರು.. ದೇಹಿ ಎಂದು ಬಂದವರಿಗೆ ದಯ ತೋರೋ ದೇವಿಯ ಮೇಲೆ ಆವತ್ತೊಂದಿನ ಆಗಂತುಕ ಎಂಟ್ರಿ ಕೊಟ್ಟಿದ್ದ..

ನೋಡಿ.. ಚೆನ್ನಾಗಿ ನೋಡಿ.. ಕೈನಲ್ಲಿ ಒಂದಷ್ಟು ಸ್ಫೋಟಕಗಳನ್ನು​ ಹಿಡ್ಕೊಂಡು ಕಳ್ ಹೆಜ್ಜೆ ಇಟ್ಕೊಂಡು ಬರ್ತಾ ಇದ್ದಾನಲ್ಲಾ.. ಇವ್ನೇ ಆಗಂತುಕ.. ರಾತ್ರೋ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಿಡಿಗೇಡಿ ವ್ಯಕ್ತಿ, ತಾನು ತಂದಿದ್ದ ಸ್ಫೋಟಕಗಳನ್ನು ದೇಗುಲದ ಒಳಗಿಡ್ತಾನೆ.. ಆಮೇಲೆ ಮತ್ತೆ ಹೊರಗೆ ಹೋಗಿ, ಒಂದು ಕ್ಯಾನ್​ನಲ್ಲಿ ಪೆಟ್ರೋಲ್​ ತರ್ತಾನೆ.. ಆ ಪೆಟ್ರೋಲನ್ನು ದೇವಸ್ಥಾನದ ಒಳಗೆ ಮತ್ತು ಸ್ಫೋಟಕ ವಸ್ತುಗಳ ಮೇಲೆ ಸುರಿದು, ಬೆಂಕಿ ಹಚ್ಚಿ ಬಿಡ್ತಾನೆ.. ದೇವಸ್ಥಾನದಲ್ಲಿ ಆಗಂತುಕ ಏನೆಲ್ಲಾ ಮಾಡ್ತಾ ಇದ್ನೋ, ಅವೆಲ್ಲವೂ ದೇವಸ್ಥಾನದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗ್ತಾ ಇದ್ವು.
2013 ರಲ್ಲಿ ನಡೆದ ಈ ಘಟನೆ, ಲಂಡನ್​ನಲ್ಲಿ ನೆಲೆಸಿರೋ ಹಿಂದೂಗಳಲ್ಲಿ ಆತಂಕ ಸೃಷ್ಟಿಸಿತ್ತು. ಆದ್ರೆ, ಯಾವುದಕ್ಕೂ ಜಗ್ಗದ ಆದಿಶಕ್ತಿಯ ಮಕ್ಕಳು, ಮತ್ತೆ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ. ಆದ್ರೂ ಮತ್ತೆ ಈ ದೇವಸ್ಥಾನದ ಮೇಲೆ ಅಟ್ಯಾಕ್ ಆಗಬಹುದೇನೋ ಅನ್ನೋ ಆತಂಕದಲ್ಲೇ ದೇವಿಗೆ ಪ್ರತಿನಿತ್ಯ ಪೂಜೆ ನಡೀತಿದೆ.
-----------
ಡಿ.​​ 2011 ರಲ್ಲಿ ಕೃಷ್ಣನ ದೇವಾಲಯದ ಮೇಲೆ ದಾಳಿ
ಡೆನ್ಮಾರ್ಕ್​ನ ಕೂಪನ್​ಹೇಗನ್​ನಲ್ಲಿ ಘಟನೆ
--------------------

ಇನ್ನು ಇಡೀ ಜಗತ್ತನ್ನೇ ಬೆರಳ ತುದಿಯಲ್ಲಿ ಕುಣಿಸಿದ ಶ್ರೀ ಕೃಷ್ಣನನ್ನೂ ವಿಧ್ವಂಸಕರು ಸುಮ್ಮನೇ ಬಿಟ್ಟಿಲ್ಲ.. 2011 ರ ಡಿಸೆಂಬರ್​ನಲ್ಲಿ ಡೆನ್ಮಾರ್ಕ್​ನ ಕೂಪನ್​​ಹೇಗನ್​​ನಲ್ಲಿರೋ ಹರೇ ಕೃಷ್ಣ ದೇವಸ್ಥಾನದ ಮೇಲೆ ಹಾಡ ಹಗಲಲ್ಲೇ ದಾಳಿ ನಡೆದಿತ್ತು..
ಆವತ್ತು ಸಂಜೆ ಟೈಮಲ್ಲಿ, ಎಲ್ಲಾ ಕೃಷ್ಣನ ಭಕ್ತರು ಕೃಷ್ಣನ ಜಪದಲ್ಲಿ ಮಗ್ನರಾಗಿದ್ರು.. ಹರೇ ಕೃಷ್ಣ ಹರೇ ರಾಮ ಅಂತ, ಕೃಷ್ಣನ ನಾಮಸ್ಮರಣೆ ಮಾಡ್ತಿದ್ರು.. ಅದೇ ಟೈಮಲ್ಲಿ, ಹೊರಗಡೆಇಂದ ಕಲ್ಲುಗಳು ನುಗ್ಗಿ ಬಂದವು.. ಕಿಟಕಿ ಗಾಜುಗಳನ್ನು ತೂರಿಕೊಂಡು ಬಂದ ಕಲ್ಲುಗಳು, ಕೃಷ್ಣನ ಭಕ್ತರನ್ನು ಬೆಚ್ಚಿ ಬೀಳಿಸಿತ್ತು..!
----------------
ಮಾರ್ಚ್​ 2011 ರಲ್ಲಿ ಆಸ್ಟ್ರೇಲಿಯಾದಲ್ಲಿ ದಾಳಿ
ಐತಿಹಾಸಿಕ ಹಿಂದೂ ದೇವಾಲಯ ಧ್ವಂಸ..!
--------------
ಇದು ಆಸ್ಟ್ರೇಲಿಯಾದ ನೆಲದಲ್ಲಿರೋ ಶ್ರೀ ಕೃಷ್ಣನ ಐತಿಹಾಸಿಕ ಮಂದಿರ.. ಅಬರ್ನ್​ ಪ್ರದೇಶದಲ್ಲಿರೋ ಈ ಮಂದಿರದ ಮೇಲೂ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮಾಚ್​​ 11, 2011 ರಲ್ಲಿ ಮುಸುಕು ಧಾರಿ ಗನ್​ ಮ್ಯಾನ್​ ಒಬ್ಬ, ಶ್ರೀ ಕೃಷ್ಣನ ಸನ್ನಿಧಾನಕ್ಕೆ ಗುಂಡಿಟ್ಟಿದ್ದ.. ಆ ಆಗಂತುಕ ಹಾರಿಸಿದ ಗುಂಡಿನ ರಭಸಕ್ಕೆ ಸಾಕ್ಷಿಯಾಗಿ ನಿಂತಿದ್ದವು, ದೇವಾಲಯದ ಈ ಗೋಡೆಗಳು..

ಈ ಶ್ರೀ ಮಂದಿರ ಉಗ್ರರ ಹಿಟ್​ ಲಿಸ್ಟ್​ನಲ್ಲಿ ಟಾಪ್​ ಸ್ಥಾನದಲ್ಲಿದೆ ಕಣ್ರಿ.. ಅದಿಕ್ಕೆ 2000 ರಲ್ಲಿ, 2004 ರಲ್ಲಿ ಮತ್ತು 2011 ರಲ್ಲಿ.. ಹೀಗೆ ಹಲವು ಬಾರಿ ಈ ದೇಗುಲದ ಮೇಲೆ ದಾಳಿಯಾಗಿವೆ.ಹೀಗೆ ಸಾಲು ಸಾಲು ದಾಳಿಗಳು, ಹಿಂದೂ ದೇವರ ಮೇಲಿನ ಕಿಡಿಗೇಡಿಗಳ ದಾಳಿಗೆ ಸಾಕ್ಷಿಯಾಗಿ ನಿಂತಿವೆ. ಇಷ್ಟಿದ್ರೂ, ಆಗಂತುಕರಿಗೆ ಹೆದರದೇ, ಹಿಂದೂ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸ್ತಿದ್ದಾರೆ ಸಾವಿರಾರು ಭಕ್ತರು..

ಕಟ್ಟಾ ವಿರೋಧಿ ಪಾಕಿಸ್ತಾನದಲ್ಲೂ ಹಿಂದೂ ದೇವಾಲಯಗಳಿವೆ. ಅಲ್ಲಿ ನಡೆಯೋ ದೇವಾಲಯಗಳ ದಾಳಿ ಮಾತ್ರ ನಿಜಕ್ಕೂ ಬೆಚ್ಚಿ ಬೀಳಿಸುವಂಥದ್ದು. ಆ ರೋಚಕ ದಾಳಿಯ ಬಗ್ಗೆ ಮುಂದೆ ಓದಿ
-------------------------------------------------------------
ಪಾಕಿಸ್ತಾನ ಭಾರತದ ಕಟ್ಟಾ ವಿರೋಧಿ.. ಅಂಥ ಜಾಗದಲ್ಲಿ ಹಿಂದೂ ದೇವಾಲಯ ಕಟ್ಬೇಕು ಅಂದ್ರೆ, ನಿಜಕ್ಕೂ ಡಬಲ್ ಗುಂಡಿಗೆ ಇರಬೇಕು.. ಯಾಕಂದ್ರೆ, ಅಲ್ಲಿ ಯಾವಾಗ ಏನಾಗುತ್ತೆ ಅನ್ನೋದು ಯಾರಿಗೂ ಗೊತ್ತೇ ಆಗಲ್ಲ.. ಸ್ವಲ್ಪ ಯಾಮಾರಿದ್ರೂ, ಇಡೀ ಪ್ರದೇಶವೇ ಹೊತ್ತಿ ಉರಿದು ಬಿಡುತ್ತೆ..

ಭಾರತದ ಕಟ್ಟಾ ವಿರೋಧಿ ಪಾಕಿಸ್ತಾನದ ನೆಲದಲ್ಲೂ ಸಾಕಷ್ಟು ಹಿಂದೂ ದೇವಾಲಯಗಳಿವೆ. ಇಸ್ಲಾಂ ನಾಡಿನಲ್ಲಿ ಹಿಂದೂ ಧರ್ಮದ ಹೆಜ್ಜೆಗುರುತಗಳಿವೆ.. ಆದ್ರೆ ಇಲ್ಲೇನಾದ್ರೂ ದೇಗುಲಗಳ ಮೇಲೆ ದಾಳಿಗಳು ನಡೆದ್ರೆ, ಅದು ಅತ್ಯಂತ ಭೀಕರ ಮತ್ತು ಭಯಾನಕವಾಗಿರುತ್ತೆ ಕಣ್ರಿ..

ಪಾಕ್​ ನೆಲದಲ್ಲೂ ಹಿಂದೂ ದೇಗುಲಗಳ ಮೇಲೆ ದಾಳಿ
ಅಟ್ಯಾಕ್​​ ನಡೆದಾಗ ಹೊತ್ತಿ ಉರಿಯುತ್ತೆ ಇಡೀ ಊರು!ಯಸ್​.. ಇದು ಪಾಕಿಸ್ತಾನದ ಘೋರ ದೇಗುಲ ದಾಳಿಗೆ ಸಾಕ್ಷಿ ಕಣ್ರಿ.. ಹಿಂದೂಗಳ ಮೇಲೆ ಸಿಟ್ಟಿಗೆದ್ದ ಕಲ ಪಾಕಿಸ್ತಾನಿ ಗುಂಪುಗಳು, ಹಿಂದೂ ದೇವಾಲಯಕ್ಕೇ ಬೆಂಕಿ ಇಟ್ಟಿರೋ ದೃಶ್ಯ ಇದು.. ಮಾರ್ಚ್​ 16, 2014 ರಲ್ಲಿ ನಡೆದಿರೋ ಈ ದೃಶ್ಯ ಪಾಕ್​ ನೆಲದಲ್ಲಿ ಬದುಕ್ತಾ ಇರೋ ಹಿಂದೂ ಧರ್ಮೀಯರ ಎದೆಯಲ್ಲಿ ಇಂದಿಗೂ ನಡುಕ ಹುಟ್ಟಿಸ್ತಿದೆ. ಇನ್ನು ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡಿದ ಕೆಲ ಗುಂಪುಗಳು, ದೇವಾಲಯ ಕೆಡವೋ ಪ್ರಯತ್ನ ಮಾಡಿದ್ದೂ ಇದೆ.. ಹಿಂದೂ ಧರ್ಮೀಯರ ಪವಿತ್ರ ಗ್ರಂಥ ಭಗವದ್ಗೀತೆಯನ್ನೂ ಸುಟ್ಟು ಹಾಕಿದ್ದಾರೆ ಕೆಲ ಕಿಡಿಗೇಡಿಗಳು..

ಒಂದಲ್ಲ ಎರಡಲ್ಲಾ.. ಪಾಕ್​ನಲ್ಲಿ ಬದುಕ್ತಾ ಇರೋ ಹಿಂದೂ ಧರ್ಮೀಯರಿಗೆ ಇದೊಂಥರ ನರಕವೇ ಆಗ್ಬಿಟ್ಟಿದೆ . ಇದೆಲ್ಲದಕ್ಕಿಂತ ಘನ ಘೋರವಾದ ದೇಗುಲ ದಾಳಿ ನಡೆದಿದ್ದು ಬಾಂಗ್ಲಾದೇಶದಲ್ಲಿ..

2013 ರಲ್ಲಿ ಬಾಂಗ್ಲಾದ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿದ ಆಗಂತುಕರ ತಂಡ, ಇಲ್ಲಿನ 76 ಹಿಂದೂ ಕುಟುಂಬದ ಮೇಲೂ ಅಟ್ಯಾಕ್​ ಮಾಡಿದ್ರು.. ಇದ್ರಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ರು..

ಈ ವೇಳೆ 5 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸ ಮಾಡಿದ್ರು ಕಿಡಿಗೇಡಿಗಳು.. ಬಾಂಗ್ಲಾದಲ್ಲಿ ನಡೆದ ಈ ಡೆಡ್ಲಿಯೆಸ್ಟ್ ಅಟ್ಯಾಕ್​​ ಇಂದಿಗೂ ಮಾಸದ ನೆನಪಾಗಿ, ಇಲ್ಲಿನ ಜನರ ಕಣ್ಣಲ್ಲಿ, ಜೀವಂತ ವ್ಯಥೆಯಾಗಿ ಉಳಿದುಬಿಟ್ಟಿದೆ.

ಘಜ್ನಿ ಕಾಲದಿಂದಲೂ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೀತಿದೆ. ಆದ್ರೆ, ದೇವಾಕಯಗಳ ನಿರ್ಮಾಣ ಮಾತ್ರ ನಿಲ್ತಿಲ್ಲ.. ದಾಳಿ ನಂತರ, ಮತ್ತೊಮ್ಮೆ ಅದ್ಭುತ ಶಕ್ತಿ ಕೇಂದ್ರವಾಗಿ ದೇಗುಲಗಳು ಎದ್ದು ನಿಲ್ತಿವೆ. ಇದು ನಿಜಕ್ಕೂ ಗ್ರೇಟ್ ಅಲ್ವಾ?

ಕಾಪಾಡಿ ಎಂದು ಕೂಗ್ತಿದ್ದಾಳೆ ಗೊರವನಹಳ್ಳಿ ಲಕ್ಷ್ಮಿ!ಮಹಾಲಕ್ಷ್ಮಿ.. ಕೇಳಿದ್ದನ್ನು ಕರುಣಿಸೋ ಧನಲಕ್ಷ್ಮಿನೂ ಅವಳೇ.. ಸಂತಾನವನ್ನು ಕರುಣಿಸುವ ಸಂತಾನಲಕ್ಷ್ಮಿಯೂ ಅವಳೇ.. ಅಂಥಾ ಮಹಾಲಕ್ಷ್ಮಿಗೆ ಈಗ ಸಂಕಟ ಶುರುವಾಗಿದೆ. ಗೊರವನ ಹಳ್ಳಿಯಲ್ಲಿ ನೆಲೆಸಿರೋ ಲಕ್ಷ್ಮಿಗೆ ಕೆಲವರು ಕಾಟ ಕೊಡ್ತಿದ್ದಾರೆ. ಐಶ್ವರ್ಯ ಲಕ್ಷ್ಮಿಯ ಐಶ್ವರ್ಯವನ್ನೇ ಕೆಲವರು ಕೊಳ್ಳೇ ಹೊಡೀತಿದ್ದಾರೆ. ಹೀಗಾಗಿ ಎಲ್ಲರಿಗೂ ಒಳ್ಳೇದು ಮಾಡೋ ಲಕ್ಷ್ಮೀನೇ ಈಗ ಸಹಾಯಕ್ಕಾಗಿ ಅಂಗಲಾಚ್ತಿದ್ದಾಳೆ.


ಮಹಾಲಕ್ಷ್ಮಿ.. ಅನಾದಿ ಕಾಲದಿಂದಲೂ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾ ಬಂದಿರೋ, ಭಾಗ್ಯ ಲಕ್ಷ್ಮಿ.. ಗೊರವನ ಹಳ್ಳಿಯಲ್ಲಿ ನೆಲೆಸುವ ಮೂಲಕ, ಗೊರವನ ಹಳ್ಳಿಯನ್ನು ಪುಣ್ಯ ಭೂಮಿಯನ್ನಾಗಿ ಮಾಡಿದ ಮಹಾತಾಯಿ..


ಗೊರವನ ಹಳ್ಳಿ ಮಹಾಲಕ್ಷ್ಮಿ ಅಂದ್ರೆ ಸಾಕು.. ಭಕ್ತಿ ಭಾವ ಉಕ್ಕಿ ಹರಿಯುತ್ತೆ.. ಯಾಕಂದ್ರೆ, ಅಮ್ಮಾ ತಾಯಿ.. ನನ್ನ ಸಂಕಷ್ಟ ದೂರ ಮಾಡಮ್ಮ ಅಂತ ಬೇಡ್ಕೊಂಡ್ರೆ ಸಾಕು.. ಈ ಮಹಾತಾಯಿ ಅವರನ್ನು ಉದ್ಧರಿಸ್ತಾಳೆ.. ಎಲ್ಲರ ಸಂಕಷ್ಟಗಳನ್ನು ನಿವಾರಿಸ್ತಾಳೆ. ಕಲಿಯುಗದಲ್ಲೂ ಕಾಣಿಸಿಕೊಳ್ಳೋ ಈ ಕರುಣಾಮಯಿ, ಕಂಗಾಲದವರಿಗೆ ಕರುಣೆ ತೋರಿ ಕೃಪೆ ನೀಡ್ತಾಳೆ. ಇದೇ ಕಾರಣಕ್ಕೆ, ಲಕ್ಷಾಂತರ ಮಂದಿ ಈ ಗೊರವನಹಳ್ಳಿಗೆ ಬಂದು, ಮಹಾಲಕ್ಷ್ಮಿಯ ಪಾದಕ್ಕೆ ಬಿದ್ದು ಧನ್ಯರಾಗ್ತಾರೆ.


ಆದ್ರೆ ಎಲ್ಲರ ಸಂಕಷ್ಟಗಳನ್ನು ನಿವಾರಿಸೋ ಈ ಮಹಾತಾಯೀನೇ ಈಗ ಸಂಕಷ್ಟದಲ್ಲಿ ಸಿಲುಕಿದ್ದಾಳೆ.. ಕಲಿಯುಗದ ಕರುಣಾಮಯಿನೇ ಈಗ ಕಂಗಾಲಾಗಿದ್ದಾಳೆ..  ಮನುಷ್ಯರು ಮಾಡ್ತಿರೋ ಮೋಸಕ್ಕೆ, ಈ ಮಹಾಮಾತೆ ಮುನಿಸಿಕೊಂಡಿದ್ದಾಳೆ.


ಯಸ್​.. ಗೊರವನಹಳ್ಳಿಗೆ ಬರೋ ಲಕ್ಷಾಂತರ  ಮಂದಿ, ಮಹಾಮಾತೆಗೆ  ತಮ್ಮ ಕೈಲಾದಷ್ಟು ಕಾಣಿಕೆ ಸಮರ್ಪಿಸ್ತಾರೆ. ಹೀಗೆ ಸಮರ್ಪಿಸೋ ಕಾಣಿಕೆ, ವರ್ಷಕ್ಕೆ ಕೋಟಿಗಳ ಲೆಕ್ಕದಲ್ಲಿರುತ್ತೆ.. ಈ ಕೋಟಿ ಕೋಟಿ ಕಾಣಿಕೆಯ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಮಹಾಲಕ್ಷ್ಮಿಯ ಐಶ್ವರ್ಯವನ್ನು ಲೂಟಿ ಮಾಡೋದಕ್ಕೆ ಒಳಗೊಳಗೇ ಹುನ್ನಾರ ನಡೀತಿದೆ. ದೇವಿಯ ಮೈಮೇಲಿದ್ದ ಚಿನ್ನಾಭರಣಗಳಿಂದ ಹಿಡಿದು ಕಾಣಿಕೆಯಿಂದ ಬಂದ ಕೋಟಿ ಕೋಟಿ ಹಣಕ್ಕೆ ಕನ್ನ ಹಾಕೋಕೆ ಕೆಲವರು ಸಂಚು ನಡೆಸ್ತಿದ್ದಾರೆ.


ಈ ಗೊರವನಹಳ್ಳಿ ಮಹಾ ಲಕ್ಷ್ಮಿ, ಕಲಿಯುಗದಲ್ಲೂ ತುಂಬಾನೇ ಪವರ್​ಫುಲ್​.. ಅಷ್ಟಕ್ಕೂ ಮಹಾಲಕ್ಷ್ಮಿ ಈ ಗೊರವನಹಳ್ಳಿಯಲ್ಲಿ ಬಂದು ನೆಲೆಸಿದ್ದರ ಹಿಂದೆ ಒಂದು ರೋಚಕ ಕಥೆ ಇದೆ. ಕರುಣೆಯಿಂದ ಬೇಡಿದ್ರೆ ಕೇಳಿದ್ದನ್ನು ಕೊಡ್ತಾಳೆ.. ವಂಚಿಸೋ ಮಂದಿಗೆ ಶಾಪವನ್ನೂ ಕೊಟ್ಟಿರೋ ಇತಿಹಾಸ ಕೂಡ ಇದೆ..


ಅದು ನೂರಾರು ವರ್ಷಗಳ ಹಳೆಯ ಮಾತು.. ತುಮಕೂರಿನ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಅಬ್ಬಯ ಅನ್ನೋ ವ್ಯಕ್ತಿ ಇದ್ದ. ಒಂದು ದಿನ ಆತನಿಗೆ, ಹೆಣ್ಣಿನ ಅಶರೀರವಾಣಿಯೊಂದು ಕೇಳಿಸ್ತು.. ನಾನು ನಿಮ್ಮ ಮನೆಗೆ ಬರ್ರೀನಿ.. ಕರ್ಕೊಂಡು ಹೋಗು ಅಂತ, ಆ ಅಶರೀರವಾಣಿ  ಹೇಳಿತ್ತು..


ಆ ಆಸರೀರವಾಣಿ ಪದೇ ಪದೇ ಕೇಳಿಸ್ತಾ ಇತ್ತು.. ಇದ್ರಿಂದ ವಿಚಲಿತನಾದ ಅಬ್ಬಯ್ಯ, ತನಗಾದ ಅನುವವನ್ನ ತನ್ನ ತಾಯಿಗೆ ಹೇಳಿದ.. ಇನ್ನೊಮ್ಮೆ ಆ ಅಶರೀರವಾಣಿ ಕೇಳಿಸಿದ್ರೆ, ನೀನು ದೆವ್ವವಾದ್ರೆ, ಅಲ್ಲೇ ಇರು.. ದೇವರಾದ್ರೆ ಬಾ ಅಂತ ಹೇಳು ಅಂತ, ಅಬ್ಬಯ್ಯನ ತಾಯಿ ಹೇಳಿದ್ಳು..


ತಾಯಿಯ ಮಾತಿಗೆ ಒಪ್ಪಿಕೊಂಡ ಅಬ್ಬಯ್ಯ ತನ್ನ ಕೆಲಸವನ್ನು ಮುಂದುವರೆಸಿದ.. ಮತ್ತೆ ಅದೇ ಆಶರೀರವಾಣಿ ಕೇಳಿಸ್ತು ಅನ್ನಯ್ಯನಿಗೆ. ತಾಯಿ ಹೇಳಿದಂತೆ, ದೆವ್ವವಾದ್ರೆ ಬರಬೇಡ.. ದೇವರಾದ್ರೆ ಬಾ ಅಂತ ಹೇಳಿದ.. ಮಹಾಲಕ್ಷ್ಮಿ  ಕೊಳದಿಂದ ಎದ್ದು ಬಂದು, ಅಬ್ಬಯ್ಯನ ಮನೆ ಸೇರಿದ್ಳು.. ಅಂದಿನಿಂದ ಗೊರವನಹಳ್ಳಿ ಪವಿತ್ರ ಪುಣ್ಯ ಕ್ಷೇತ್ರವಾಗಿ ಪರಿವರ್ತನೆಯಾಯ್ತು..


ಅಬ್ಬಯ್ಯ ಮತ್ತವನ ತಾಯಿಯ ಮರಣಾ ನಂತರ ಮಹಾಲಕ್ಷ್ಮಿಯ ಉಸ್ತುವಾರಿ ತೋಟದಪ್ಪನಿಗೆ ಸೇರಿತ್ತು. ಆದ್ರೆ ಆತ ದೇವಿಯನ್ನು ನಿರ್ಲಕ್ಷಿಸೋಕೆ ಶುರು ಮಾಡಿದ. ಅಬ್ಬಯ್ಯನ ಮನೆಯಲ್ಲಿದ್ದ ದೇವಿಯನ್ನು ಈಗಿನ ದೇವಾಲಯವಿರೋ ಜಾಗದಲ್ಲಿ ತಂದು ಪ್ರತಿಷ್ಠಾಪಿಸಿದ. ಆದ್ರೆ ಪೂಜೆ ಪುನಸ್ಕಾರಗಳನ್ನು ಮಾತ್ರ ಮಾಡ್ಲೇ ಇಲ್ಲ.. ಇದ್ರಿಂದ ಮಹಾಮಾತೆ ಲಕ್ಷ್ಮಿ ಮುನಿಸಿಕೊಂಡುಬಿಟ್ಟಳು. ತೋಟದಪ್ಪ ಅನೇಕ ಕಷ್ಟನಷ್ಟಗಳಿಗೆ ತುತ್ತಾಗಬೇಕಾಯ್ತು.. ಅಷ್ಟೇ ಅಲ್ಲ, ಗೊರವನಹಳ್ಳಿಗೂ ಕೂಡ ಗರ ಬಡಿದುಬಿಡ್ತು..ಇದಾದ ನಂತರ ಗೊರವನಹಳ್ಳಿ ಮಹಾಲಕ್ಷ್ಮಿಗೆ ಪೂಜೆ ಪುನಷ್ಕಾರಗಳನ್ನು ಪ್ರಾರಂಭಿಸಿ, ದೇವಿಗೆ ದೇಗುಲ ಕಟ್ಟಿಸಿದ್ದು, ಇದೇ ಗೊರವನಹಳ್ಳಿಯ ಸೊಸೆ ಕಮಲಮ್ಮ.. 1925 ರ ನಂತರದಲ್ಲಿ ಮಹಾಲಕ್ಷ್ಮಿಯ ದೇಗುಲ ಜೀರ್ಣೋದ್ಧಾರವಾಯ್ತು.. ಗ್ರಾಮಸ್ಥರ ಮನವೊಲಿಸಿ ಕಮಲಮ್ಮನವರು ದೇಗುಲದ ನಿರ್ಮಾಣ ಮಾಡಿದ್ರು.. ಇದ್ರಿಂದಾಗಿ ಮಹಾಲಕ್ಷ್ಮಿ ಸಂತುಷ್ಠಳಾದಳು.. ಬೇಡಿ ಬಂದ ಲಕ್ಷಾಂತರ ಮಂದಿ ಭಕ್ತರನ್ನು ಅನುಗ್ರಹಿಸುವ ಮೂಲಕ, ಎಲ್ಲೆಡೆ ಮನೆ ಮಾತಾದಳು.. ಇದೇ ಕಾರಣಕ್ಕೆ, ಲಕ್ಷಾಂತರ ಮಂದಿ ಈ ಮಹಾಮಾತೆಯನ್ನು ನೋಡೋಕೆ, ಗೊರವನಹಳ್ಳಿಗೆ ಬರ್ತಾ ಇದ್ದಾರೆ.. ಬಂದ ಭಕ್ತರು ಮಹಾಲಕ್ಷ್ಮಿಗೆ ತಮ್ಮ ಕೈಲಾದ ಕಾಣಿಕೆಯನ್ನು ನೀಡಿ ಹೋಗ್ತಾರೆ.. ಚಿನ್ನಾಭರಣಗಳನ್ನು ದೇವಿಗೆ ಅರ್ಪಿಸಿ ಹೋಗ್ತಾರೆ.. ಆದರೆ ಈ ಕಾಣಿಕೆ ಮತ್ತು ಚಿನ್ನಾಭರಣಗಳ ಮೇಲೆ ಕೆಲವರು ಕಣ್ಣು ಹಾಕಿದ್ದಾರೆ. ಐಶ್ವರ್ಯ ಲಕ್ಷ್ಮಿಯ ಐಶ್ವರ್ಯವನ್ನೇ ದೋಚಿದ್ದಾರೆ.


ಸಂಕಷ್ಟ ದೂರ ಮಾಡೋ ಮಹಾಲಕ್ಷ್ಮಿನೇ ಈಗ ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಅಲ್ಲಿಒನ ಕೆಲವರು ಸಂಚುಕೋರರು ಬರೀ ಕಾಣಿಕೆಯನ್ನು ಮಾತ್ರ ಕೊಳ್ಳೆ ಹೊಡೆದಿಲ್ಲ.. ದೇವಿಯ ಮೈಮೇಲಿದ್ದ ಚಿನ್ನಾಭರಣವನ್ನೂ ಲೂಟಿ ಮಾಡಿದ್ದಾರಂತೆ. ಜನರ ಕಣ್ಣಿಗೆ ಮಣ್ಣೆರಚಬೇಕು ಅಂತ, ದೇವಿಯ ಮೈಮೇಲೆ ನಕಲಿ ಒಡವೆಗಳನ್ನ ಹಾಕಿದ್ದಾರಂತೆ.. ಹಾಗಿದ್ರೆ ದೇವಿಯ ಐಶ್ವರ್ಯವನ್ನು ದೋಚಿದ ಆ ಖದೀಮರು ಯಾರು?  ಮುಂದೆ ಓದಿ
----------------------------------------

ಗೊರವನಹಳ್ಳಿ ಲಕ್ಷ್ಮಿ ದೇಗುಲದಲ್ಲಿ ದೊಡ್ಡ ಗೋಲ್​ಮಾಲ್​ ನಡೀತಿದೆ. ದೇವಿಯ ಚಿನ್ನಾಭರಣಗಳಿಂದ ಹಿಡಿದು, ಭಕ್ತರು ಕೊಟ್ಟ ಕಾಣಿಕೆ ಹಣವನ್ನು ವಂಚಕರು ಗುಳುಂ ಮಾಡ್ತಿದ್ದಾರೆ. ಇದು ಅಲ್ಲಿನ ಗ್ರಾಮಸ್ಥರಿಗೆ ಗೊತ್ತಾಗಿದ್ದೇ ತಡ.. ಅವ್ರೆಲ್ಲಾ ಸಿಡಿದೆದ್ದಿದ್ರು.. ಅಷ್ಟಕ್ಕೂ ಗೊರವನಹಳ್ಳಿ ಲಕ್ಷ್ಮಿ ದೇಗುಲದಲ್ಲಿ ನಡೀತಿರೋ ಗೋಲ್​ಮಾಲ್​ ಆದ್ರೂ ಏನು..? ದೇವಿಯ ಚಿನ್ನಕ್ಕೆ ಕನ್ನ ಹಾಕಿರೋ ಆ ಖತರ್ನಾಕ್​​ ವ್ಯಕ್ತಿಗಳು ಯಾರು..? ಇಲ್ಲಿದೆ ನೋಡಿ ಅದ್ರ ಕಂಪ್ಲೀಟ್​ ಡೀಟೇಲ್​​


ಗೊರವನಹಳ್ಳಿಯ ಲಕ್ಷ್ಮಿ ದೇವಸ್ಥಾನದಲ್ಲಿ ಭಾರೀ ದೊಡ್ಡ ಗೋಲ್​ ಮಾಲ್​ ನಡೀತಿದೆ ಅನ್ನೋದು ನಿಜ ಕಣ್ರಿ.. ದೇವಸ್ಥಾನದ ಆಡಳಿತ ಮಂಡಳಿಯಿಂದ ಹಿಡ್ದು, ಅಲ್ಲಿನ ಕೆಲವು ಪ್ರಭಾವಿಗಳು ದೇಗುಲದ ಸಂಪತ್ತನ್ನ ಲೂಟಿ ಮಾಡೋದಕ್ಕೆ ಟ್ರೈ ಮಾಡ್ತಿದ್ದಾರೆ ಕಣ್ರಿ.. ಬೆಳಗೆದ್ದು ದೇವರಿಗೆ ಕೈಮುಗಿಯೋ ಕಮಿಟಿಯವ್ರೇ, ರಾತ್ರಿ ಆದ್ರೆ ದೇವಿಯ ಚಿನ್ನಾಭರಣಕ್ಕೆ ಕೈ ಹಾಕ್ತಿದ್ದಾರಂತೆ.. ದೇಗುಲಕ್ಕೆ ಬರೋ ಭಕ್ತರು ನೋಡೋ ಕೋಟ್ಯಾಂತರ ರೂಪಾಯಿ ಕಾಣಿಕೆಯನ್ನು ಕೂಡ, ಕಮಿಟಿಯವರು ಗುಳುಂ ಅನಿಸ್ತಿದ್ದಾರಂತೆ..


ನಯವಂಚರ ಕಾಟದಿಂದ ನರಳಾಡ್ತಿರೋ ಮಹಾಲಕ್ಷ್ಮಿ ಈಗ ಸಂಕಷ್ಟದಲ್ಲಿದ್ದಾಳೆ. ತನ್ನ ಆಸ್ತಿ ಮತ್ತು ಚಿನ್ನಾಭರಣಗಳನ್ನು ಲೂಟಿ ಮಾಡ್ತಿರೋದನ್ನು ಕಂಡು, ಕಾಪಾಡಿ ಕಾಪಾಡಿ ಅಂತ ಆ ದೇವಿನೇ ಅಂಗಲಾಚೋ ಪರಿಸ್ಥಿತಿ ಬಂದಿದೆ.


ಅಸಲಿಗೆ ಈ ಮಹಾಲಕ್ಷ್ಮಿಯ ದೇಗುಲ ಇರೋದು ಗೊರವನಹಳ್ಳಿಯಲ್ಲಿ.. ಆದ್ರೆ ದೇವಾಲಯದ ಉಸ್ತುವಾರಿ ವಹಿಸಿಕೊಂಡಿರೋ ಕಮಿಟಿಯಲ್ಲಿ ಸ್ಥಳೀಯರಿಗಿಂತ ಬೇರೆಯವರೇ ಜಾಸ್ತಿ ಕಣ್ರಿ.. 14 ಮಂದಿ ಇರೋ ಕಮಿಟಿಯಲ್ಲಿ 12 ಮಂದಿ ಬೆಂಗಳೂರಿನವರೇ ಇದ್ದಾರೆ ಅಂದ್ರೆ ನಿಜಕ್ಕೂ ನೀವು ನಂಬ್ಲೇಬೇಕು.. ದೇವಸ್ಥಾನದ ಇತಿಹಾಸ ಗೊತ್ತಿಲ್ಲ.. ಗೊರವನಹಳ್ಳಿಗೂ ಅವ್ರಿಗೂ ಸಂಬಂಧಾನೇ ಇಲ್ಲ.. ಅಂಥವ್ರು ಕಮಿಟಿಯಲ್ಲಿ ಸೇರ್ಕೊಂಡು ದೇವಸ್ಥಾನದ ಸಂಪತ್ತನ್ನು ಲೂಟಿ ಮಾಡ್ತಿದ್ದಾರೆ. ಕೇವಲ ಇಬ್ಬರು ಸ್ಥಳೀಯರನ್ನು ಕಮಿಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಅದೂ ನೆಪಕ್ಕೆ ಮಾತ್ರ..


ದೇವಸ್ಥಾನದ ಕಮಿಟಿಯಲ್ಲಿ ಪರ ಊರಿನವರು ಸೇರ್ಕೊಂಡು, ದೇವಿಯ ಆಸ್ತಿ ದೋಚ್ತಿದ್ದಾರಂತೆ. ಕಮಿಟಿಯಲ್ಲಿ ಸ್ಥಳೀಯರು ಇದ್ರೆ, ದೇಗುಲದಲ್ಲಿ ಗೋಲ್ ಮಾಲ್ ನಡೆಯೋದಕ್ಕೆ ಬಿಡೋದಿಲ್ಲ.. ಹೀಗಾಗಿ ಬೇರೆ ಊರಿನವರನ್ನು ಕಮಿಟಿಯಲ್ಲಿ ಸೇರಿಸಿಕೊಂಡ್ರೆ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಹಾಗೇ, ದೇಗುಲದ ಆಸ್ತಿಯನ್ನು ಸುಲಭವಾಗಿ ನುಂಗಿ ಹಾಕ್ಬಹುದು.. ಕಮಿಟಿಯಲ್ಲಿ ಕೆಟ್ಟ ಹುಳುಗಳು ಸೇರ್ಕೊಂಡು, ಗೊರವನಹಳ್ಳಿಯನ್ನು ಗೆದ್ದಲು ತಿಂತಿವೆ. ಭಾರೀ ದೊಡ್ಡ ಗೋಲ್​ಮಾಲ್​ ನಡೆಸ್ತಿದ್ದಾರೆ ಅನ್ನೋದು ಸ್ಥಳೀಯರ ಆರೋಪ.. ಹೀಗಾಗಿ ಆಡಳಿತ ಮಂಡಳಿಯ ವಿರುದ್ಧ ಗೊರವನ ಹಳ್ಳಿ ಜನರು ಸಿಡಿದೆದ್ದಿದ್ದಾರೆ.


ದೇವಿ ಮೈಮೇಲಿರೋ ಚಿನ್ನಾಭರಣಗಳು ನಕಲಿ..!
ಧರ್ಮದರ್ಶಿಯ ಮನೆ ಸೇರಿತಾ ಅಸಲಿ ಬಂಗಾರ..?
10 ಕೆಜಿ ಬಂಗಾರ 100 ಕೆಜಿ ಬೆಳ್ಳಿ ನುಂಗಿದ್ನಾ ರಂಗಶಾಮಯ್ಯ..?


ಯಸ್.. ಒಂದಲ್ಲ ಎರಡಲ್ಲ ಸ್ವಾಮಿ.. ಮಹಾಲಕ್ಷ್ಮಿಯ ಮೈಮೇಲಿದ್ದ ಬರೋಬ್ಬರಿ 10 ಕೆಜಿ ಚಿನ್ನವನ್ನು ಈ ಧರ್ಮದರ್ಶಿ ರಂಗಶಾಮಯ್ಯ ನುಂಗಿ ಹಾಕಿದ್ದಾರಂತೆ.. 100 ಕೆಜಿಯಷ್ಟು ಬೆಳ್Lಈಯನ್ನು ನುಂಗಿ ನೀರ್​​ ಕುಡಿದಿದ್ದಾರಂತೆ.. ದೇವಿಯ ಮೈಮೇಲೆ ನಕಲಿ ಚಿನ್ನ ಮತ್ತು ನಕಲಿ ಬೆಳ್ಳಿಯನ್ನು ಹಾಕಿ, ಅಸಲಿಯ ಚಿನ್ನ ಮತ್ತು ಬೆಳ್ಳಿಯನ್ನು ತನ್ನ ಮನೆಗೆ ತಗೊಂಡ್ ಹೋಗಿದ್ದಾರಂತೆ. ಸದ್ಯಕ್ಕೀಗ ಗೊರವನಹಳ್ಳಿಯ ಈ ಲಕ್ಷ್ಮಿ ಮೈಮೇಲೆ ಇರೋದು  ಹಂಡ್ರೆಡ್ ಪರ್ಸೆಂಟ್​​ ನಕಲಿ ಒಡವೆಗಳು ಅನ್ನೋದು ಊರಿನವರ ಆರೋಪ..


ಹೊಲ ಕಾಯೋದಕ್ಕೆ ಅಂತ ಬೇಲಿ ಹಾಕ್ತಾರೆ.. ಇಲ್ಲಿ ಬೇಲಿನೇ ಎದ್ದು ಹೊಲ ಮೇಯ್ತಿದೆ. ದೇಗುಲದ ರಕ್ಷಣಗೆ ಅಂತ ಇರೋ ಕಮಿಟಿಯವ್ರೇ ದೇವರನ್ನು ದೋಚಿ, ಚಿನ್ನಾಭರಣಗಳಿಗೆ ಕನ್ನ ಹಾಕಿದ್ದಾರೆ.
ಅದ್ರಲ್ಲೂ ಧರ್ಮದರ್ಶಿ ರಂಗಶಾಮಯ್ಯ ಭಾರೀ ಗೋಲ್​ಮಾಲ್ ಮಾಡಿದ್ದಾರಂತೆ. ಮಹಾಲಕ್ಷ್ಮಿಯ ಸನ್ನಿಧಾನಕ್ಕೆ ಬರೋ ಭಕ್ತರು ತಾಯಿಗೆ ಕೇಜಿಗಟ್ಟಲೇ ಚಿನ್ನಾಭರಣಗಳನ್ನು ನೀಡ್ತಾರೆ.. ಆದ್ರೆ ಹಗಲಲ್ಲಿ ದೇವಿಯ ಮೈಮೇಲೆ ಇಟ್ಟಂತೆ ಮಾಡಿ, ರಾತ್ರಿ ಹೊತ್ತು ಅದನ್ನು ಎಗರಿಸಿಕೊಂಡು ಹೋಗ್ತಾರಂತೆ. ಜನರಿಗೆ ಅನುಮಾನ ಬರದೇ ಇರಲಿ ಅಂತ ಅಸಲಿ ಚಿನ್ನಾಭರಣಗಳ ಬದಲಿಗೆ ದೇವಿಯ ಮೈಮೇಲೆ ನಕಲಿ ಒಡವೆಗಳನ್ನ ಹಾಕಲಾಗಿದ್ಯಂತೆ.  ಗೊರವನಹಳ್ಳಿಯನ್ನು ಉದ್ಧರಿಸೋ ಮಹಾಲಕ್ಷ್ಮಿಗೇ ಇಂಥಾ ಮೋಸ ಆಗ್ತಿದೆ ಅಂದ್ರೆ, ಸ್ಥಳಿಯರು ಸುಮ್ನೇ ಬಿಡ್ತಾರಾ..? ತಾಯಿಯ ಸಂಪತ್ತ ಉಳಿಸೋದಕ್ಕೆ ಅಂತ ಗ್ರಾಮಸ್ಥರು ಹೋರಾಟಕ್ಕೆ ಇಳಿದೇ ಬಿಟ್ರು..


ಇದೇ ಕಾರಣಕ್ಕೆ.. ಇದೇ ಕಾರಣಕ್ಕೆ ಕಣ್ರಿ.. ಪವಿತ್ರ ತಾಣವಾಗಿ ಶಾಂತಚಿತ್ತದಿಂದ ಇದ್ದ ಗೊರವನಹಳ್ಳಿ ಕ್ಷೇತ್ರ, ರೌದ್ರ ನರ್ತನಕ್ಕೆ ಸಾಕ್ಷಿಯಾಗಿದ್ದು.. ದೇಗುಲವನ್ನು ಕಾಪಾಡ್ಬೇಕಾದೋರು, ಒಂದಲ್ಲ ಎರಡಲ್ಲ, ಕೋಟ್ಯಾಂತರ ರೂಪಾಯಿಗಳ ಗೋಲ್​ಮಾಲ್​ಗೆ ಸಾಕ್ಷಿಯಾಗಿದ್ದಾರೆ ಅಂತ ತಿಳಿದಿದ್ದಕ್ಕೆ. ಆಡಳಿತ ಮಂಡಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದು..


ಈ ದೇಗುಲದಲ್ಲಿ ಬೇರೆ ಊರಿನವರದ್ದೇ ಕಾರ್​ಬಾರು ಕಣ್ರಿ.. ಅದಿಕ್ಕೆ ಇಷ್ಟೋಂದು ಪ್ರಮಾಣದ ಗೋಲ್​ಮಾಲ್​ ನಡೆದಿದೆ.. ಇದೇ ವಿಷ್ಯಕ್ಕೇನೇ ಇಲ್ಲಿನ ಸ್ಥಳೀತರು ಕಮಿಟಿ ಮೆಂಬರ್​ಗಳ ವಿರುದ್ಧ ತೊಡೆ ತಟ್ಟಿ ನಿಂತಿದ್ದು. ದೇವರ ಸಂಪತ್ತನ್ನು ಲೂಟಿ ಮಾಡೋಕೆ ನಿಂತಿರೋರ ವಿರುದ್ಧ ಕಿಡಿ ಕಾರಿದ್ದು.. ಚಿನ್ನಾಭರಣಗಳ ಗೋಲ್​ಮಾಲ್​ನಿಂದ ಹಿಡಿದು, ಏನೆಲ್ಲಾ ಅವ್ಯವಹಾರ ನಡೆದಿದೆ ಅನ್ನೋದನ್ನ ತನಿಖೆ ನಡೆಸಬೇಕು ಅಂತ ಪಟ್ಟು ಹಿಡಿದದ್ದು..


ಆದ್ರೆ ದೇವಾಲಯದಲ್ಲಿ ಅಂಥದ್ದೇನು ನಡೆದೇ ಇಲ್ಲ.. ಇದೆಲ್ಲಾ ಕೆಲವರು ಮಾಡೋ ಗಿಮಿಕ್ಕು.. ದೇವಸ್ಥಾನದ ಕಮಿಟಿಯಲ್ಲಿ ಯಾರು ಬೇಕಾದ್ರೂ ಸದಸ್ಯರಾಗಬಹುದು.. ಯಾರು ಬೇಕಾದ್ರೂ, ಅಧ್ಯಕ್ಷರಾಗಬಹುದು.. ಕಾನೂನಿನ ಪ್ರಕಾರವೇ ಎಲ್ಲಾ ಪ್ರಕ್ರಿಯೆ ನಡೆದಿದೆ ಅಂತಾರೆ ಕಮಿಟಿಯ ಅಧ್ಯಕ್ಷರು


ಇವ್ರು ಏನೇ ಹೇಳ್ಲಿ.. ಆದ್ರೆ ಬೆಂಕಿ ಇಲ್ದೇ ಹೇಗೆ ಹೊಗೆ ಆಡೋದಿಲ್ವೋ..? ಹಾಗೇನೇ ಇಲ್ಲೂ ಕೂಡ ಆಗ್ತಿದೆ. ಇಲ್ಲಿ ಸ್ಥಳೀಯರು ಈ ಪ್ರಮಾಣದಲ್ಲಿ ರೊಚ್ಚಿಗೆದ್ದಿದ್ದಾರೆ ಅಂದ್ರೆ, ಇಲ್ಲೊಂದು ಬಹುದೊಡ್ಡ ಗೋಲ್ ಮಾಲ್ ನಡೆದಿದೆ ಅನ್ನೋದು ಸ್ಪಷ್ಟವಾಗುತ್ತೆ. ಆದ್ರೆ, ಕಮಿಟಿಯವರೆಲ್ಲಾ ಸೇರಿ ಅದನ್ನು ಮುಚ್ಚಿ ಹಾಕೋದಕ್ಕೆ ಪ್ರಯತ್ನಿಸ್ತಿದ್ದಾರೆ ಕಣ್ರಿ.. ಇದು ಗೊರವನಹಳ್ಳಿಯ ಮಕ್ಕಳನ್ನು ಸಿಡಿದೇಳುವಂತೆ ಮಾಡಿದೆ.

ಈ ಪ್ರತಿಭಟನೆಯಿಂದಾಗಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸುವಂತಾಗಿ, ಗೊರವನಹಳ್ಳಿ ದೇವಸ್ಥಾನವನ್ನ ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಆ ಮೂಲಕ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಿದೆ ಗೊರವನಹಳ್ಳಿಯ ಶ್ರೀ ಲಕ್ಷ್ಮಿಯ ದೇವಸ್ಥಾನ

ಪಾಕ್​ನಲ್ಲಿದೆ ಅಡ್ವಾಣಿ ಪೂಜಿಸೋ ಹಿಂದೂ ದೇಗುಲ..

ಪಾಕಿಸ್ತಾನ.. ಭಾರತದ ಕಟ್ಟಾ ವಿರೋಧಿ ರಾಷ್ಟ್ರ.. ಆದ್ರೆ ಹಿಂದೂಗಳ ಆರಾಧ್ಯ ದೇವರನ್ನು ತನ್ನ ನೆಲದಲ್ಲಿ ಪೂಜಿಸುತ್ತಿದೆ. ವೈರಿ ರಾಷ್ಟ್ರದಲ್ಲಿರೋ ಹಿಂದೂಗಳ ಪರಮ ಪವಿತ್ರವಾದ ಪುಣ್ಯ ಕ್ಷೇತ್ರ ಯಾವುದು? ಅಡ್ವಾಣಿಯನ್ನೂ ತನ್ನತ್ತ ಸೆಳೆದಿದೆ ಆ ತೀರ್ಥ ಕ್ಷೇತ್ರದ ಇತಿಹಾಸ ಏನು..? ಜಗತ್ತನ್ನೇ ನಿಬ್ಬೆರಗಾಗಿಸುವಂಥ ಶಕ್ತಿ ಆ ತೀರ್ಥಕ್ಕೆ ಇದ್ಯಾ? ಈ ಸ್ಟೋರಿ ಓದಿ.. ನಿಮಗೇ ಗೊತ್ತಾಗುತ್ತೆ

    ಪಾಕಿಸ್ತಾನ.. ಬಹುತೇಕ ಮುಸ್ಲಿಂ ಸಮುದಾಯವೇ ನೆಲೆಸಿರೋ ನೆಲ ಅದು.. ಸ್ವತಂತ್ರ್ಯ ಬಂದಾಗಿನಿಂದ ಹಿಡ್ದು, ಇಲ್ಲಿಯವರೆಗೆ.. ಭಾರತದ ಜೊತೆಗೆ ಹಗೆತನ ಸಾಧಿಸಿಕೊಂಡು ಬರ್ತಾನೇ ಇರೋ ಕಡು ವೈರಿ ರಾಷ್ಟ್ರದಲ್ಲಿ, ಒಂದು ಪೌರಾಣಿಕ ಕ್ಷೇತ್ರ ಇದೆ. ಅದೂ ಹಿಂದೂ ದೇವರು ನೆಲೆಸಿರೋ ಪರಮ ಪುಣ್ಯವಾದ ಕ್ಷೇತ್ರ..
   
    ನಿಜ.. ಇದು ನಂಬೋದಕ್ಕೆ ಆಗದೇ ಇರೋ ಒಂದು ಕಠು ಸತ್ಯ ಕಣ್ರಿ... ನಮ್ಮ ಮೇಲೆ ಹಗೆತನ ಸಾಧಿಸ್ತಿರೋ ವೈರಿ ರಾಷ್ಟ್ರದಲ್ಲೇ, ಒಂದು ಪರಮ ಪುಣ್ಯವಾದ ಹಿಂದೂ ದೇವರ ತೀರ್ಥ ಕ್ಷೇತ್ರ ಇದೆ.. ಆ ತೀರ್ಥ ಕ್ಷೇತ್ರ ಸಾಮಾನ್ಯವಾದದ್ದಲ್ಲ.. ಇತಿಹಾಸ ಪುರಾಣಗಳಲ್ಲಿ ಉಲ್ಲೇಖವಾಗಿರೋ ಶಕ್ತಿಯುತ ಪುಣ್ಯ ಕ್ಷೇತ್ರ..


    ಇದೇ ನೋಡಿ.. ಪಾಕ್ ನೆಲದಲ್ಲಿರೋ ಹಿಂದೂಗಳ ಆ ಪವಿತ್ರ ತೀರ್ಥ ಕ್ಷೇತ್ರ.. ಸಾಕ್ಷಾತ್ ಶಿವನು ನೆಲೆಸಿರೋ ಕಟಾಸ್ ರಾಜ್ ಅನ್ನೋ ಪುಣ್ಯ ಕ್ಷೇತ್ರ.. ಪಾಕಿಸ್ತಾನದ ಚಕ್ವಾಲ್​ ಜಿಲ್ಲೆಯಲ್ಲಿರೋ ಈ ಕಟಾಸ್ ರಾಜ್ ಕ್ಷೇತ್ರ, ಹಿಂದೂಗಳ ಪವಿತ್ರ ತೀರ್ಥ ಕ್ಷೇತ್ರವಾಗಿದೆ. ಈ ಕಟಾಸ್ ರಾಜ್​​ ದೇಗುಲದ ಮುಂದೆ ಇರೋ ಕುಂಡದ ತೀರ್ಥ ತುಂಬಾನೇ ಶಕ್ತಿಯುತವಾಗಿದೆ.

    ನಿಮ್ಗೆ ಗೊತ್ತಿಲ್ಲದ ಇನ್ನೂ ಒಂದು ಸತ್ಯ ಹೇಳ್ತೀವಿ ಕೇಳಿ.. ಜಗತ್ತಿನಲ್ಲಿರೋ ಅತ್ಯಂತ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಇದು ಎರಡನೇ ಪುಣ್ಯ ತೀರ್ಥ ಕ್ಷೇತ್ರ.. ಈ ಕುಂಡದಲ್ಲಿರೋ ನೀರನ್ನು ಕುಡಿದ್ರೆ, ಮೋಕ್ಷ ಸಿಗುತ್ತಂತೆ.. ಮಕ್ಕಳಾಗದವರಿಗೆ ಮಕ್ಕಳಾಗುತ್ತಂತೆ. ಎಲ್ಲಾ ಪಾಪ ಕರ್ಮಗಳು ಕಳೆಯುತ್ತವಂತೆ. ಈ ಕುಂಡದಲ್ಲಿ ಮಿಂದೆದ್ದವರು ಹಲವು ಖಾಯಿಲೆಗಳಿಂದ ಗುಣಮುಖರಾಗಿದ್ದಾರಂತೆ..

    ಕಟಾಸ್​​​ರಾಜ್​​ನಲ್ಲಿರೋ ಈ ಕುಂಡಕ್ಕೆ ಇಷ್ಟೋಂದು ಶಕ್ತಿ ಹೇಗೆ ಬಂತು..? ಅದ್ರಲ್ಲೂ ಪಾಕಿಸ್ತಾನದಂಥ ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇವರು ನೆಲೆಸಿದ ರೀತಿಯಾದ್ರೂ ಹೇಗೆ ಅನ್ನೋ ಹಲವು ಅಚ್ಚರಿಯ ಪ್ರಶ್ನೆಗಳನ್ನು ನಿಮ್ಮನ್ನ ಕಾಡ್ತಾ ಇರಬಹುದು.. ಅದಕ್ಕೆಲ್ಲಾ ಉತ್ತರ ಇತಿಹಾಸದ ಪುಟಗಳಲ್ಲಿದೆ. ಅಸಲಿಗೆ ಪಾಕಿಸ್ತಾನದ ನೆಲದಲ್ಲಿರೋ ಕಟಾಸ್​ ರಾಜ್​ ತೀರ್ಥ ಕ್ಷೇತ್ರದ ಈ ಕುಂಡ, ಸಾಕ್ಷಾತ್ ಶಿವನಿಂದಲೇ ಸೃಷ್ಟಿಯಾದ ಪೌರಾಣಿಕ ಕುಂಡ.

    ನಿಜ.. ಶಿವ ಪುರಾಣದ ಪ್ರಕಾರ ಇದು ಸಾಕ್ಷಾತ್ ಶಿವನ ಕಣ್ಣೀರಿಂದ ಸೃಷ್ಟಿಯಾದ ಪವಿತ್ರ ಕುಂಡ ಕಣ್ರಿ.. ಪರಶಿವನ ಪತ್ನಿ ಪಾರ್ವತಿ ಅಗ್ನಿಕುಂಡಕ್ಕೆ ಜಿಗಿದು ಸ್ವರ್ಗಸ್ಥಳಾದಾಗ, ಶಿವನಿಗೆ ತಡೆದುಕೊಳ್ಳೋಕೆ ಆಗದಂಥ ದುಃಖವಾಗುತ್ತೆ. ಅದೇ ನೋವಲ್ಲಿ ಜೋರಾಗಿ ಕಣ್ಣೀರು ಹಾಕ್ತಾನೆ. ಎರಡು ಕಣ್ಣಿಂದ ಹರಿದ ಕಣ್ಣೀರು ಎರಡು ಸ್ಥಳಗಳಲ್ಲಿ ಬಿದ್ದು ಕುಂಡವಾಗುತ್ತೆ. ಒಂದು ಕುಂಡ ಭಾರತದ ಅಜ್ಮೀರ್​ನಲ್ಲಿರೋ ಪುಷ್ಕರ್​​ನಲ್ಲಿದೆ. ಮತ್ತೊಂದು ಕಣ್ಣಿನಿಂದ ಹರಿದ ನೀರೇ ಪಾಕಿಸ್ತಾನದ ಕಟಾಸ್​​ರಾಜ್​ನಲ್ಲಿರೋ ಈ ಕುಂಡ

   
    ಈ ಅಮರ ಕುಂಡದ ಇತಿಹಾಸ ಇಲ್ಲಿಗೇ ಮುಗಿಯೋದಿಲ್ಲ ಕಣ್ರಿ.. ಪಾಂಡವರು ತಮ್ಮ 14 ವರ್ಷಗಳ ವನವಾಸದಲ್ಲಿ, 4 ವರ್ಷಗಳನ್ನ ಇದೇ ಜಾಗದಲ್ಲಿ ಕಳೆದಿದ್ರು ಅಂತ ಹೇಳಲಾಗುತ್ತೆ. ಈ ಕುಂಡದ ತೀರ್ಥವೇ ಅವರ ದಾಹ ನೀಗಿಸಿತ್ತು ಅಂತ ಪುರಾಣ ಹೇಳುತ್ತೆ.

    ಈ ಕಲಿಯುಗದಲ್ಲೂ ಈ ತೀರ್ಥ ಕ್ಷೇತ್ರದಲ್ಲಿನ ನೀರು, ಹಲವು ವಿಸ್ಮಯಗಳಿಗೆ ಕಾರಣವಾಗಿದೆ. ಈಗ್ಲೂ ಹರಕೆ ಹೊತ್ತು ಬರುವ ಭಕ್ತರು ಈ ಕುಂಡದ ಪವಿತ್ರ ನೀರಿನಲ್ಲಿ ಮಿಂದೆದ್ರೆ, ಅವರ ಇಷ್ಟಾರ್ಥಗಳು ಈಡೇರುತ್ತಂತೆ.

    ಈ ಕಟಾಸ್​​ ರಾಜ್​​ ತೀರ್ಥ ಕ್ಷೇತ್ರದ ಮಹತ್ವ ಎಂಥಾದ್ದು ಗೊತ್ತಾ..? ತನಗೆ ಬೇಕು ಅಂದವರನ್ನು ಎಷ್ಟೇ ದೂರ ಇದ್ರೂ ಕರೆಸಿಕೊಳ್ಳುತ್ತೆ. ಬಿಜೆಪಿ ಹಿರಿಯ ಮುಖಂಡ ಎಲ್​.ಕೆ.ಅಡ್ವಾಣಿಯವರನ್ನೂ ತನ್ನತ್ತ ಕರೆಸಿಕೊಂಡಿದೆ ಈ ಕ್ಷೇತ್ರ. ಈ ಬಗ್ಗೆ ಹೆಚ್ಚಿನ ಸ್ಟೋರಿ ಮುಂದಿದೆ ಓದಿ
--------------------------------------------------
 
  ಈ ಸ್ಟೋರಿಯನ್ನ ನೋಡಿದ್ಮೇಲೆ, ಪಾಕ್ ನೆಲದಲ್ಲಿರೋ ಆ ಪವಿತ್ರ ಹಿಂದೂ ತೀರ್ಥ ಕ್ಷೇತ್ರಕ್ಕೆ, ನಾವೂ ಒಂದ್ಸಲ ಹೋಗ್ಬೇಕು ಅಂತ ಅನ್ನಿಸ್ತಾ ಇರಬೇಕಲ್ವಾ..? ಅದು ಅಷ್ಟು ಸುಲಭದ ಕೆಲಸವಲ್ಲ.. ವೈರಿ ರಾಷ್ಟ್ರದಲ್ಲಿರೋ ಆ ಪವಿತ್ರ ಕ್ಷೇತ್ರಕ್ಕೆ ಕಾಲಿಡಬೇಕು ಅಂದ್ರೆ, ಅದೃಷ್ಠ ಇರಬೇಕು.. ಜೊತೆಗೆ ಆ ದೇವರ ಅನುಗ್ರಹಾನೂ ಇರಬೇಕು..


    ನಿಜ.. ಪಾಕಿಸ್ತಾನದ ನೆಲದಲ್ಲಿರೋ, ಹಿಂದೂಗಳ ಈ ಪವಿತ್ರ ತೀರ್ಥಕ್ಷೇತ್ರವನ್ನು ನೀವು ದರ್ಶನ ಮಾಡ್ಬೇಕು ಅಂದ್ರೆ ಅದು ಅಷ್ಟು ಸುಲಭವಲ್ಲ. ಹಿಂದೂ ತೀರ್ಥಯಾತ್ರಿಗಳ ಸುರಕ್ಷತೆ ದೃಷ್ಟಿಯಿಂದ ಭಾರತ ಸರ್ಕಾರವೇ ಪ್ರತಿ ವರ್ಷದ ಶಿವರಾತ್ರಿ ಟೈಮಲ್ಲಿ, 200 ಮಂದಿಯನ್ನ ಇಲ್ಲಿಗೆ ಸುರಕ್ಷಿತವಾಗಿ ಕಳಿಸೋ ವ್ಯವಸ್ಥೆ ಮಾಡುತ್ತೆ.

    ಕಟಾಸ್​​​ರಾಜ್​ ತೀರ್ಥ ಕ್ಷೇತ್ರಕ್ಕೆ ಬರಬೇಕು ಅಂತ ಅನ್ಕೊಂಡಿರೋರೆಲ್ಲಾ, ಮೊದಲು ದೆಹಲಿಯಲ್ಲಿ ಒಟ್ಟಿಗೆ ಸೇರಬೇಕು.. ನಂತರ ಅಲ್ಲಿಂದ ಟ್ರೈನ್​ನಲ್ಲಿ ಅಮೃತ್​ಸರಕ್ಕೆ ಬರಬೇಕು. ಇಲ್ಲಿ ಸ್ವರ್ಣ ಮಂದಿರದಂತೆ ಕಾಣ್ತಾ ಇದ್ಯಲ್ಲ.. ಇದು ಅಮೃತ್ಸರದಲ್ಲಿರೋ ದುರ್ಗಯಾನಾ ಮಂದಿರ.. ಇಲ್ಲಿಂದಲೇ ಕಟಾಸ್​ರಾಜ್​​ ಯಾತ್ರೆ ಶುರುವಾಗೋದು..ದುರ್ಗಾಮಾತೆ ದರ್ಶನ ಪಡೆದ ನಂತರ, ವಿಶ್ವಮಾತಾ ಮಂದಿರಕ್ಕೆ ಹೋಗ್ತಾರೆ. ಗುಹೆಯಂಥ ದೇಗುಲದಲ್ಲಿ ಬಗ್ಗಿಕೊಂಡೇ ಹೋಗ್ಬೇಕು.. ಈ ದೇಗುಲದಲ್ಲಿ ಶಿವ, ಬ್ರಹ್ಮ, ಸೇರಿದಂತೆ ಎಲ್ಲಾ ದೇವತೆಗಳು ಇಲ್ಲಿ ನೆಲೆಸಿದ್ದಾರೆ ಕಣ್ರಿ. ಈ ದೇಗುಲದೊಳಗೆ ಕಾಲಿಟ್ರೆ, ನರನಾಡಿಗಳಲ್ಲೂ ಭಕ್ತಿರಸ ಉಕ್ಕಿ ಹರಿಯುತ್ತೆ.

    ಇನ್ನು ಇಲ್ಲಿ ಕಾಣೋ ಕುಂಡದಲ್ಲಿ ಮುಳುಗೆದ್ದವರು, ಸಕಲ ಪಾಪಗಳಿಂದ ಮುಕ್ತರಾಗ್ತಾರೆ ಅನ್ನೋ ನಂಬಿಕೆ ಇದೆ. ವಿಶ್ವಮಾತೆಯ ದರ್ಶನದ ಪಡೆದ ನಂತರ, ಪವಿತ್ರ ಸರೋವರದ ನಡುವೆ ಇರೋ ಸ್ವರ್ಣ ಮಂದಿರದ ಕಡೆಗೆ ಹೆಜ್ಜೆ ಹಾಕಲಾಗುತ್ತೆ. ಇಲ್ಲಿ ಶ್ರೀರಾಮನ ಶ್ರೀಮತಿ ಸೀತಾಮಾತೆ ಈ ಕುಂಡದಲ್ಲಿ ಒಮ್ಮೆ ಸ್ನಾನ ಮಾಡಿದ್ಳು ಅಂತ ಕೂಡ ಕತೆ ಇದೆ. ಸ್ವರ್ಣಮಂದಿರದಿಂದಾಗಿ, ರಾತ್ರಿ ಟೈಮಲ್ಲಿ ಈ ಸರೋವರಾ ಕೂಡ ಚಿನ್ನದಂತೆ ಕಂಗೊಳಿಸುತ್ತೆ. ಇಲ್ಲಿನ ಗುರುದ್ವಾರದಲ್ಲಿ ಪೂಜೆ ಮುಗಿಸಿದ ನಂತರ ಕಟಾಸ್ ರಾಜ್​ಗೆ ಜೈಕಾರ ಹಾಕಿಕೊಂಡು, ಯಾತ್ರೆ ಶುರುಮಾಡ್ತಾರೆ. ಅಲ್ಲಿಂದ ನೇರವಾಗಿ ಬರೋದು ಅಟಾರಿ ರೈಲ್ವೇ ಸ್ಟೇಷನ್​ಗೆ..

    ಇದು ಭಾರತ ಮತ್ತು ಪಾಕಿಸ್ತಾನವನ್ನು ಜೋಡಿಸುವ ಏಕೈಕ ರೈಲು ನಿಲ್ದಾಣ.. ಇಲ್ಲಿಂದ ವಾಘಾ ಬಾರ್ಡರ್​​ 2 ಕಿಮಿ ಅಷ್ಟೇ.. ಭಾರತದ ರೂಪಾಯಿಯನ್ನ ಪಾಕಿಸ್ತಾನದ ಕರೆನ್ಸಿಗೆ ಬದಲಾಯಿಸಿಕೊಂಡು, ದೇವರ ಜಪ ಮಾಡ್ತಾ ರೈಲು ಹತ್ತುತಾರೆ..

    ಇನ್ನು ಲಾಹೋರ್​ಗೆ ಬರೋ ಭಾರತದ ಯಾತ್ರಾರ್ಥಿಗಳಿಗೆ ಇಲ್ಲಿನ ಗುರುದ್ವಾರದಲ್ಲಿ ಉಳಿದುಕೊಳ್ಳೋಕೆ ವ್ಯವಸ್ಥೆ ಮಾಡಲಾಗಿರುತ್ತೆ. ಇಲ್ಲಿ ಬೆಳಗಿನ ತಿಂಡಿ ಮುಗಿಸಿಕೊಂಡು, ಬಸ್ಸಿನಲ್ಲಿ ಮುಂದಿನ ಯಾತ್ರೆ ಶುರು ಮಾಡ್ತಾರೆ.. ಅದೂ ಕಟಾಸ್ ರಾಜ್ ಮತ್ತು ಭೋಲೆನಾಥನನಿಗೆ ಜೈ ಕಾರ ಹಾಕೊಂಡು..

    ಬೆಟ್ಟ ಗುಡ್ಡಗಳ ನಡುವಿನ ಸುದೀರ್ಘ ಪಯಣದ ನಂತರ, ಕಟಾಸ್ ರಾಜ್ ಬಂದೇ ಬಿಡುತ್ತೆ.. ಇಲ್ಲಿಗೆ ಬರೋ ಹಿಂದೂ ಭಕ್ತರನ್ನ ಸ್ವಾಗತಿಸೋದಕ್ಕೆ, ಪಾಕಿಸ್ತಾನವೇ ಸಜ್ಜಾಗಿ ನಿಂತಿರುತ್ತೆ.. ಅಷ್ಟೇ ಅಲ್ಲ, ಅವ್ರಿಗೆ ಇರೋದಕ್ಕೆ ಬೇಕಾದ ವ್ಯವಸ್ಥೆ ಕೂಡ ಮಾಡಿಕೊಡುತ್ತೆ ಪಾಕಿಸ್ತಾನ.. ತಾವು ತಂಗಿರೋ ಪ್ರದೇಶದಿಂದ ಹಾಗೆ ದೂಕ್ಕೆ ಕಣ್ಣು ಹಾಯಿಸಿದ್ರೇ ಸಾಕು ಕಣ್ರಿ.. ಕಣ್ಮುಂದೆನೇ ಕಾಣುತ್ತೆ ಕಟಾಸ್​ ರಾಜ್​ ದೇಗುಲ.. ಅಲ್ಲೇ ಕಾಣುತ್ತೆ ಸಾಕ್ಷಾತ್ ಶಿವನೇ ಸೃಷ್ಟಿಸಿದ ಪವಿತ್ರ ಪುಣ್ಯವಾದ ಈ ಕುಂಡ..

    ಈ ಕುಂಡದಲ್ಲಿ ಸ್ನಾನವಾದ ನಂತರಾನೇ ದೆಗುಲವನ್ನ ಪ್ರವೇಶಿಸಬೇಕು.. ಅದು ಇಲ್ಲಿನ ನಿಯಮ.. ಇನ್ನು ಇದು ಒಟ್ಟು 7 ಮಂದಿರಗಳ ಒಂದು ಸಮ್ಮಿಲನ. ಕ್ರಿ.ಪೂ 650 ರಿಂದ 950 ರ ಕಾಲದಲ್ಲಿ ಈ ದೇಗುಲದ ನಿಮಾರ್ಣ ಆಗಿದೆ ಅಂತ ಅಂದಾಜಿಸಲಾಗಿದೆ. ಅಂದ್ರೆ, 2500 ವರ್ಷಗಳಿಗಿಂತಲೂ ಹಳೆಯ ಕಾಲದ ದೇವಸ್ಥಾನ ಇದು..
   
    ಈ ದೇಗುಲವನ್ನ ಚೌಕಾಕಾರವಾಗಿ ಕಟ್ಟಲಾಗಿದೆ. ಪೂರ್ವದ ದಿಕ್ಕಿನಲ್ಲಿ ಪ್ರವೇಶ ದ್ವಾರ ಇದೆ. ದಕ್ಷಿಣದಲ್ಲಿ ಹನುಮಂತನ ಮಂದಿರವಿದೆ. ಮಂದಿರದೊಳಗೆ ಬಂದ ಭಕ್ತರು, ಮೊದಲಿಗೆ ಬಿಲ್ವಪತ್ರೆಯನ್ನಿಟ್ಟು, ಶಿವಲಿಂಗಕ್ಕೆ ಪೂಜೆ ಸಲ್ಲಿಸ್ತಾರೆ. ನಂತರ ಹೂವು, ಹಣ್ಣುಗಳನ್ನು ಶಿವನಿಗೆ ಸಮರ್ಪಿಸಿ, ಪಾವನರಾಗ್ತಾರೆ. ಇನ್ನು ಇಲ್ಲಿಗೆ ಬರೋ ಕೆಲವರು, ಶಿವನ ಭಜನೆ ಮಾಡ್ತಾ, ಶಿವನಾಮಸ್ಮರಣೆಯಲ್ಲಿ ಮುಳುಗಿಬಿಡ್ತಾರೆ.

    ಶಿವನ ದರ್ಶನವಾದ ನಂತರ ಭಾರತದ ಹಿಂದೂ ಯಾತ್ರಾರ್ಥಿಗಳ ಜೊತೆಗೆ ಪಾಕಿಸ್ತಾನ ಸರ್ಕಾರ ಂದು ಸಂವಾದ ಕಾರ್ಯಕ್ರಮ ಇಟ್ಟುಕೊಳ್ಳುತ್ತೆ. ಪಾಕಿಸ್ತಾನದ ಮಂತ್ರಿಗಳು, ಹಿರಿಯ ಅಧಿಕಾರಿಗಳು ಅಲ್ಲಿಗೆ ಬಂದು, ಯಾತ್ರಿಕರ ಜೊತೆ ಸಂವಾದ ನಡೆಸ್ತಾರೆ. ಈ ದೇಗುಲದ ಬಗ್ಗೆ ಜೀರ್ಣೋದ್ಧಾರದ ಬಗ್ಗೆ ಚರ್ಚೆ ನಡೆಸ್ತಾರೆ.. ನಂತರ ಭಾರತದ ಯಾತ್ರಾರ್ಥಿಗಳಿಗೆ ಅತಿಥಿ ಸತ್ಕಾರ ನೀಡಿ, ಅಲ್ಲಿಂದ ಬೀಳ್ಕೊಡಲಾಗುತ್ತೆ..

    ಇಂಥಾ ಐತಿಹಾಸಿಕ ಹಿಂದೂ ಪುಣ್ಯಕ್ಷೇತ್ರದಿಂದ, ಬಿಜೆಪಿ ಭೀಷ್ಮ ಎಲ್​.ಕೆ.ಅಡ್ವಾಣಿಗೆ ಪವಿತ್ರ ಕುಂಡದ ತೀರ್ಥ ಪ್ರತೀವರ್ಷ ಹೋಗುತ್ತೆ. ಸ್ವತಃ ಪಾಕಿಸ್ತಾನ ಸರ್ಕಾರಾನೇ ಅದನ್ನ ಅಡ್ವಾಣಿಯವ್ರಿಗೆ ಕಳಿಸಿಕೊಡುತ್ತೆ.. ಆ ದೇಗುಲಕ್ಕೂ ಅಡ್ವಾಣಿಗೂ ಇರೋ ಆ ಅನುಬಂಧ ಏನು? ಪಾಕಿಸ್ತಾನ ಸರ್ಕಾರಾನೇ ಮುತುವರ್ಜಿವಹಿಸಿ ಆ ಪವಿತ್ರ ಕುಂಡದ ತೀರ್ಥ ಕಳಿಸುತ್ತೆ ಅಂದ್ರೆ, ಅದರ ಹಿಂದಿರೋ ಮರ್ಮವೇನು? ಮುಂದಿದೆ ಓದಿ ಆ ಸ್ಟೋರಿ
------------------------------
    ಪಾಕಿಸ್ತಾನದ ನೆಲದಲ್ಲಿ ಬೇರೂರಿರೋ ಹಿಂದೂ ತೀರ್ಥಕ್ಷೆತ್ರದ ಜೀರ್ಣೋದ್ದಾರಕ್ಕೆ, ಸ್ವತಃ ಪಾಕಿಸ್ತಾನಾನೇ ಮುಂದಾಗಿದೆ. ಇದಕ್ಕೆ ಸ್ಫೂರ್ತಿ ಯಾರ್ ಗೊತ್ತೇನ್ರಿ..? ಭಾರತದ ಹಿರಿಯ ರಅಜಕೀಯ ಮುತ್ಸದ್ದಿ.. ಬಿಜೆಪಿಯ ಭೀಷ್ಮ ಎಲ್​.ಕೆ ಅಡ್ವಾಣಿ..ನಿಜ... ಪಾಕ್​ ನೆಲದ ದೇಗುಲದ ಜೀರ್ಣೋದ್ದಾರಕ್ಕೆ ಪಣ ತೊಟ್ಟ ವ್ಯಕ್ತಿ ಬೇರೆ ಯಾರೂ ಅಲ್ಲ. ಅದು ಬಿಜೆಪಿಯ ಭೀಷ್ಮ ಎಲ್​.ಕೆ.ಅಡ್ವಾಣಿ.. ಭಾರತ ಮತ್ತು ಪಾಕಿಸ್ತಾನ 1947 ರಲ್ಲಿ ಇಬ್ಭಾಗವಾದಾಗ, ಹಿಂದೂಸ್ತಾನಕ್ಕೆ ಸೇರಿದ್ದ ಈ ಕಟಾಸ್​ರಾಜ್​​ ದೇಗುಲ ಪಾಕ್​​ ಪಾಲಾಯ್ತು.. ಇದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತುಂಬಾನೇ ಹಳಸಿತ್ತು. ಇದ್ರಿಂದಾಗಿ ಈ ಪವಿತ್ರ ತೀರ್ಥಕ್ಷೇತ್ರಕ್ಕೆ ಹೋಗಿ ಶಿವನ ದರ್ಶನ ಪಡೀಬೇಕು.. ಈ ಕುಂಡದಲ್ಲಿ ಮಿಂದೇಳಬೆಕು ಅನ್ನೋ ಭಕ್ತರ ಆಸೆ ಕೇವಲ ಆಸೆಯಾಗಿಯೇ ಉಳಿದು ಬಿಟ್ತು. ಆದ್ರೆ 2004 ರಲ್ಲಿ ಎನ್​ಡಿ.ಎ ಸರ್ಕಾರ ಅಧಿಕಾರದಲ್ಲಿದ್ದಾಗ, ಪಾಕಿಸ್ತಾನದ ಜೊತೆ ಬಾಂಧವ್ಯ ವೃದ್ಧಿಗಾಗಿ ಪ್ರಯತ್ನಿಸಿದ್ರು. ಇದಕ್ಕೆ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್​ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ರು.. ಅಷ್ಟೇ ಅಲ್ಲ, ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾದ ಈ ಕಟಾಸ್​ರಾಜ್​​ ದೇಗುಲದ ಜೀರ್ಣೋದ್ದಾರಕ್ಕೂ ಅಡಿಪಾಯ ಹಾಕಿದ್ರು.

    ಇನ್ನು ಇದೇ ವೇಳೆ ಭಾರತದ ಯಾತ್ರಾರ್ಥಿಗಳಿಗೂ ಈ ಪುಣ್ಯಕ್ಷೇತ್ರ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಯ್ತು. 2005 ರಲ್ಲಿ ಸ್ವತಃ ಎಲ್​ಕೆ ಅಡ್ವಾಣಿನೇ ಈ ತೀರ್ಥ ಕ್ಷೇತ್ರಕ್ಕೆ ಬಂದು, ಈ ಕುಂಡದಲ್ಲಿ ಮಿಂದೆದ್ದಿದ್ರು..

    ಅಂದಿನಿಂದ ಪಾಕಿಸ್ತಾನದ ನೆಲದಲ್ಲಿರೋ, ಈ ಹಿಂದೂ ತೀರ್ಥಕ್ಷೇತ್ರದ ಅಭಿವೃದ್ಧಿಗೆ ಪಾಕ್ ಸರ್ಕಾರ ಬೆನ್ನೆಲುಬಾಗಿ ನಿಂತಿದೆ. 2 ಕೋಟಿ ರೂಪಾಯಿಯಲ್ಲಿ ಶಿವಲಿಂಗಕ್ಕೆ ಮತ್ತೆ ಐತಿಹಾಸಿಕ ಮೆರುಗು ನೀಡಿದೆ. 2006-07 ರಲ್ಲಿ ಈ ದೇಗುಲದ ಜೀರ್ಣೋದ್ದಾರಕ್ಕೆ ಪಾಕ್ ಸರ್ಕಾರ ನೀಡಿದ ಮೊತ್ತ, ಬರೋಬ್ಬರಿ 8 ಕೋಟಿ..

    ಈ ಕಟಾಸ್​​ರಾಜ್​​ ಪುಣ್ಯಕ್ಷೇತ್ರದ ಜೀರ್ಣೋದ್ದಾರವಾಗಿದ್ದು ಅಡ್ವಾಣಿಯಿಂದ.. ಭಾರತದ ಹಿಂದೂ ಭಕ್ತರಿಗೆ ಈ ತೀರ್ಥ ಕ್ಷೇತ್ರ ಬಾಗಿಲು ತೆಗೆದಿದ್ದು ಅಡ್ವಾಣಿಯಿಂದ.. ಆಧುನಿಕ ಯುಗದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭಾವೈಕ್ಯತೆಯ ಕುರುಹಾಗಿ ಈ ಕಟಾಸ್​ರಾಜ್​ ತಲೆ ಎತ್ತಿದ್ದು ಎಲ್​ಕೆ ಅಡ್ವಾಣಿಯಿಂದ. ಇದೇ ಕಾರಣಕ್ಕೆ ಕಣ್ರಿ.. ಪ್ರತಿ ವರ್ಷ ತಪ್ಪದೇ ಈ ಪವಿತ್ರ ಕುಂಡದ ತೀರ್ಥವನ್ನ, ಎಲ್​ಕೆ ಅಡ್ವಾಣಿಯವರಿಗೆ ಕಳಿಸಿಕೊಡುತ್ತೆ ಪಾಕಿಸ್ತಾನದ ಸರ್ಕಾರ...


    ಈಗಲೂ ಮರೆತಿಲ್ಲ.. ಅಡ್ವಾಣಿಯವರ ಈ ಕಾರ್ಯವನ್ನ ಪಾಕಿಸ್ತಾನ ಈಗ್ಲೂ ಮರೆತಿಲ್ಲ.. ಅದೇ ಕಾರಣಕ್ಕೆ.. ಈ ವರ್ಷ ಕೂಡ ಈ ಪವಿತ್ರ ಕುಂಡದ ತೀರ್ಥವನ್ನು ಎಲ್​.ಕೆ.ಅಡ್ವಾಣಿಯವರಿಗೆ ಕಳಿಸಿಕೊಟ್ಟಿದೆ ಪಾಕಿಸ್ತಾನ. ಆ ಮೂಲಕ ಭಾರತ ಮತ್ತು ಪಾಕಿಸ್ತಾನದ ಭಾವೈಕ್ಯತೆಗೆ ಶ್ರಮಿಸಿದ ಅಡ್ವಾಣಿಯವರಿಗೆ ಗೌರವ ಸೂಚಿಸಿದೆ.

    ಏನೇ ಆಗ್ಲಿ.. ವೈರಿ ನಾಡಲ್ಲಿ ಹಿಂದೂ ತೀರ್ಥಕ್ಷೇತ್ರ ಇರೋದೇ ವಿಶೇಷ.. ಅದ್ರಲ್ಲೂ ಪಾಕ್​ ಸರ್ಕಾರಾನೇ ಆ ತೀರ್ಥ ಕ್ಷೇತ್ರದ ಜೀರ್ಣೋದ್ಧಾರಕ್ಕೆ ನಿಂತಿರೋದು ಅಚ್ಚರಿನೇ ಸರಿ.. ಉಬಯ ದೇಶಗಳ ನಡುವಿನ ವಿರಸದ ನಡುವೇನೂ, ಈ ಹಿಂದೂ ಕ್ಷೇತ್ರ ಸೇಫಾಗಿದೆ ಅನ್ನೋದೇ ಒಂದು ಸಮಾಧಾನದ ಸಂಗತಿ.

ಜಗತ್ತಿನ 10 ಅತಿ ಎತ್ತರದ `ಶಿವ'ಮೂರ್ತಿಗಳು..!

ಇವತ್ತು ಶಿವರಾತ್ರಿ.. ಪರಶಿವನ ಧ್ಯಾನದಲ್ಲೇ ನೀವೆಲ್ಲಾ ಇದ್ದೀರ ಅಂತ ನಮಗ್ ಗೊತ್ತು. ನಿಮಗೆಲ್ಲರಿಗೂ ಇವತ್ತು ಆ ಪರಶಿವನ ದರ್ಶನ ಮಾಡಿಸ್ಬೇಕು ಅಂತಾನೇ ನಾವೀವತ್ತು ಬಂದಿದ್ದೀವಿ. ಜಗತ್ತಿನಾದ್ಯಂತ ಇರುವ ಎತ್ತರ ಶಿವಮೂರ್ತಿಯ ದರ್ಶನ ಮಾಡಿ.. ಶಿವನ ಕೃಪೆಗೆ ಪಾತ್ರರಾಗಿ.

ಓಂ ನಮಃ ಶಿವಾಯ.. ಶಿವಾಯ ನಮಃ.. ಹೀಗೆ ನೀವು ನಾನಾ ವಿಧವಾಗಿ ಆ ಪರಶಿವನ ಧ್ಯಾನ ಮಾಡ್ತಿದ್ದೀರ ಅಂತ ನಮಗ್ ಗೊತ್ತು..  ಶಿವನ ದರ್ಶನ ಪಡೆಯೋದಕ್ಕೆ ತುದಿಗಾಲಲ್ಲಿ ನಿಂತ್ಕೊಂಡಿದ್ದೀರ ಅಂತಲೂ ಗೊತ್ತು. ಶಿವರಾತ್ರಿಯ ದಿನದಂದು  ಧರೆಗಿಳಿದುಬರುವ ಆ ಶಿವ, ತನ್ನ ಭಕ್ತರಿಗೆಲ್ಲಾ ಆಶೀರ್ವಾದಿಸ್ತಾನೆ ಅನ್ನೋ ಪ್ರತೀತಿ ಇದೆ. ಪ್ರತಿ ಶುಕ್ರವಾರದಂದು ಪಾರ್ವತಿಯ ಜೊತೆಗೆ  ಲೋಕಸಂಚಾರ ನಡೆಸೋ ಈಶ್ವರ, ಜಗತ್ತಿನಾದ್ಯಂತ ನೆಲೆಸಿದ್ದಾನೆ. ಬೇಡಿದ ಭಕ್ತರ ಮನದಲ್ಲಿ ಸದಾ ನೆಲೆಯೂರಿದ್ದಾನೆ. ಸದ್ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಲೇ ಬಂದಿದ್ದಾನೆ.

ಕರ್ನಾಟಕದ ಮುರುಡೇಶ್ವರ ಸೇರಿದಂತೆ, ಭಾರತ, ನೇಪಾಳ ಹೀಗೆ ಜಗತ್ತಿನಾದ್ಯಂತ ಪೂಜೆಗೊಳಪಟ್ಟಿದ್ದಾನೆ ಪರಮಾತ್ಮ.. ಹೀಗೆ ವಿವಿಧ ದೇಶಗಳಲ್ಲಿ, ವಿವಿಧ ಪ್ರದೇಶಗಳಲ್ಲಿ ನೆಲೆ ನಿಂತ ಶಿವನ ಬಗ್ಗೆ ಇವತ್ತು ನಾವ್ ನಿಮಗೆ ಹೇಳ್ತೀವಿ ಕೇಳಿ..

-----------------------------

ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಬೆಲೆಶ್ವರ ಮಹಾದೇವ
ಸ್ಥಳ : ಒಡಿಶಾ
ಎತ್ತರ : 61 ಅಡಿ
ನಿರ್ಮಾಣ : ಮಾರ್ಚ್​ 6, 2013

ಜಗತ್ತಿನ ಎತ್ತರದಲ್ಲಿ 11ನೇ ಸ್ಥಾನ

ಒಡಿಶಾದ ಬಂಜಾನಗರ್​​​ ಪ್ರದೇಶದಲ್ಲಿ ಈ ಶಿವನ ದೇವಾಲಯ ಇದೆ. ಈ ದೇಗುಲದಲ್ಲಿ ನೆಲೆಸಿರೋ ಶಿವನನ್ನು ಬೆಲೆಶ್ವರ ಮಹಾದೇವ ಅಂತಲೇ ಭಕ್ತರು ಕರೀತಾರೆ. ಸುಮಾರು 61 ಅಡಿ ಎತ್ತರದಲ್ಲಿ ಶಾಂತಚಿತ್ತನಾಗಿ ನೆಲೆಸಿರುವ ಈ ಪರಶಿವನನ್ನು ಮಾರ್ಚ್​ 6, 2013 ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಜಗತ್ತಿನ 11 ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.
-----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಕೆಂಪ್​ಫೋರ್ಟ್ ಶಿವನ ದೇವಾಲಯ
ಸ್ಥಳ : ಬೆಂಗಳೂರು
ಎತ್ತರ : 65 ಅಡಿ
ಜಗತ್ತಿನ ಎತ್ತರದಲ್ಲಿ 10 ನೇ ಸ್ಥಾನ


ಬೆಂಗಳೂರಿನಲ್ಲಿರೋ ಶಿವನ ಮೂರ್ತಿ ಕೂಡ, ಜಗತ್ತಿನ ಎತ್ತರದ ಶಿವಮೂರ್ತಿಗಳಲ್ಲಿ ಒಂದಾಗಿದೆ. ಶಿವರಾತ್ರಿ ಬಂತು ಅಂದ್ರೆ ಸಾಕು.. ಭಕ್ತರು ಸಾಲುಗಟ್ಟಿ ನಿಂತು, ಅತಿ ಎತ್ತರ ಶಿವನನ್ನು ಪೂಜಿಸ್ತಾರೆ. 1993 ರಲ್ಲಿ ವ್ಯಕ್ತಿಯೊಬ್ಬರ ಕನಸಲ್ಲಿ ಬಂದು, ಬೆಂಗಳೂರಿನ ಕೆಂಪ್​​ಫೋರ್ಟ್​ನಲ್ಲಿ ಮಂದಿರ ಕಟ್ಟುವಂತೆ ಹೇಳಿದ್ನಂತೆ. ಆ ಕಾರಣಕ್ಕಾಗಿ 65 ಅಡಿ ಎತ್ತರದ ಶಿವನ ಮೂರ್ತಿಯನ್ನು ಕೆಂಪ್​ಪೋರ್ಟ್​ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಜಗತ್ತಿನಲ್ಲಿರೋ ಶಿವನ ಮೂರ್ತಿಗಳಿಗೆ ಹೋಲಿಸಿದ್ರೆ, ಕೆಂಪ್​​ಫೋರ್ಟ್​ನಲ್ಲಿರೋ ಶಿವನ ಮೂರ್ತಿ, 10 ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.
-----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಗೌರಿಶಂಕರ ದೇವಾಲಯ
ಸ್ಥಳ : ನವದೆಹಲಿ
ಎತ್ತರ : 74 ಅಡಿ
ಜಗತ್ತಿನ ಎತ್ತರದಲ್ಲಿ 9 ನೇ ಸ್ಥಾನ


ಇದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರೋ ಶಿವಾಲಯ. ಇಲ್ಲಿ ನೆಲೆಯೂರಿರುವ ಶಿವನಿಗೆ 800 ವರ್ಷಗಳ ಇತಿಹಾಸವಿದೆ. ಹೀಗಾಗಿ ಲಕ್ಷಾಂತರ ಮಂದಿ ಭಕ್ತರು ಈ ಶಿವನ ದರ್ಶನಕ್ಕಾಗಿ ದೆಹಲಿಗೆ ಆಗಮಿಸ್ತಾರೆ. ಅದ್ರಲ್ಲೂ ಶಿವರಾತ್ರಿ ಬಂದ್ರೆ ಸಾಕು, ಭಕ್ತರ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತೆ. ದೆಹಲಿಯಲ್ಲಿರೋ ಈ ಶಿವನ ಮೂರ್ತಿ 74 ಅಡಿ ಎತ್ತರವಿದೆ. ಜಗತ್ತಿನಲ್ಲಿರೋ ಅತಿ ಎತ್ತರದ ಶಿವನ ಮೂರ್ತಿಗಳಲ್ಲಿ, ಇದು 9 ನೇ ಸ್ಥಾನವನ್ನು ಪಡೆದಿದೆ.
-----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಜಬಲ್​​ಪುರ್​​ ಶಿವಾಲಯ
ಸ್ಥಳ : ಕಚ್ನಾರ್​​, ಮಧ್ಯಪ್ರದೇಶ
ಎತ್ತರ : 76 ಅಡಿ
ಜಗತ್ತಿನ ಎತ್ತರದಲ್ಲಿ 8 ನೇ ಸ್ಥಾನ

ಇದು ಮಧ್ಯಪ್ರದೇಶದ ಜಬಲ್​​ಪುರದಲ್ಲಿರುವ ಶಿವಾಲಯ. 2006 ರಲ್ಲಿ ಇಲ್ಲಿನ ಕಚ್ನಾರ್​​ ನಗರದಲ್ಲಿ, ಈ ಬೃಹತ್​ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸುಮಾರು 76 ಅಡಿ ಎತ್ತರವಿರುವ ಈ ಶಿವನ ಮೂರ್ತಿ, ಜಗತ್ತಿನ 8 ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಜೊತೆಗೆ 12 ಜ್ಯೋತಿರ್ಲಿಂಗಗಳನ್ನೂ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಶಾಂತಚಿತ್ತನಾಗಿ, ತಪೋನಿರತನಾಗಿರುವ ಶಿವನನ್ನು ನೋಡೋದಕ್ಕೆ, ಲಕ್ಷಾಂತರ ಮಂದಿ ಇಲ್ಲಿಗೆ ಬರ್ತಾರೆ. ಶಿವನ ಆಶೀರ್ವಾದ ಪಡೆದು, ಪಾವನರಾಗ್ತಿದ್ದಾರೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ನಾಗೇಶ್ವರ ದೇಗುಲ
ಸ್ಥಳ : ದ್ವಾರಕ, ಗುಜರಾತ್​
ಎತ್ತರ : 82 ಅಡಿ
ಜಗತ್ತಿನ ಎತ್ತರದಲ್ಲಿ 7 ನೇ ಸ್ಥಾನ

ಇದು ಹಿಂದೂಗಳ ಪವಿತ್ರ ಭೂಮಿಯಾದ ಗುಜರಾತ್​ನ ದ್ವಾರಕದಲ್ಲಿದೆ. ಇಲ್ಲಿ ನಾಗೇಶ್ವರ ಎಂಬ ಹೆಸರಿನಲ್ಲಿ ಸಾಕ್ಷಾತ್ ಪರಶಿವನು ನೆಲೆಸಿದ್ದಾನೆ. ನೂರಾರು ವರ್ಷಗಳ ಇತಿಹಾಸ ಹೊಂದಿರೋ ಈ ದೇಗುಲದ ಬಗ್ಗೆ, ಶಿವ ಪುರಾಣದಲ್ಲಿ ಉಲ್ಲೇಖವಿದೆ. ಇಲ್ಲಿಗೆ ಬಂದ್ರೆ, ಜ್ಯೋತಿರ್ಲಿಂಗಗಳ ದರ್ಶನದ ಜೊತೆಗೆ 82 ಅಡಿ ಎತ್ತರವಿರುವ ಶಿವನ ಮೂರ್ತಿಯ ದರ್ಶನ ಪಡೀಬಹುದು. ಇಲ್ಲಿ ನೆಲೆಸಿರೋ ಶಿವನ ಮೂರ್ತಿ, ಜಗತ್ತಿನ 7 ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ ಅನ್ನೋದು ಮತ್ತೊಂದು ವಿಶೇಷ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ಶಿವಗಿರಿ ಶಿವಮೂರ್ತಿ
ಸ್ಥಳ : ಬಿಜಾಪುರ, ಕರ್ನಾಟಕ
ಎತ್ತರ : 85 ಅಡಿ
ನಿರ್ಮಾಣ : ಫೆ.26, 2006
ಜಗತ್ತಿನ ಎತ್ತರದಲ್ಲಿ 6 ನೇ ಸ್ಥಾನ

ಕರ್ನಾಟಕದ ಬಿಜಾಪುರದಲ್ಲೂ, ಪರಶಿವನು ನೆಲೆಸಿದ್ದಾನೆ. ಟಿಕೆ ಪಾಟೀಲ್​​​ ಬನಕಟ್ಟಿ ಟ್ರಸ್ಟ್​​ ವತಿಯಿಂದ 2006 ರಲ್ಲಿ ಶಿವನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಿಜಾಪುರದಲ್ಲಿರೋ ಈ ಶಿವನ ಮೂರ್ತಿ ಬರೋಬ್ಬರಿ 85 ಅಡಿ ಉದ್ದ ಇದೆ. ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿಗಳಲ್ಲಿ, ಬಿಜಾಪುರದಲ್ಲಿರೋ ಈ ಶಿವನ ಮೂರ್ತಿ 6 ನೇ ಸ್ಥಾನವನ್ನು ಹೊಂದಿದೆ. ಶಿವಗಿರಿಯಲ್ಲಿ ನೆಲೆಸಿರೋ ಈ ಶಿವನ ಮೂರ್ತಿ, ಸಾಕಷ್ಟು ಭಕ್ತರನ್ನು ತನ್ನತ್ತ ಸೆಳೀತಿದೆ.

ಭಾರತವನ್ನು ಹಿಂದೂಸ್ತಾನ ಅಂತ ಕರೀತಾರೆ. ಆದ್ರೆ ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿ ಹಿಂದೂಸ್ತಾನದಲ್ಲಿ ಇಲ್ಲ.. ಹಾಗಿದೆ ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿ ಇರೋದಾದ್ರೂ ಎಲ್ಲಿ..? ಹೇಳ್ತೀವಿ ಬ್ರೇಕ್ ಆದ್ಮೇಲೆ..
-----------------------------------------------
ಕರ್ನಾಟಕದ ಮುರುಡೇಶ್ವರದಲ್ಲಿಯೂ ಶಿವ ನೆಲೆಸಿದ್ದಾನೆ. 2010 ರವರೆಗೆ, ಮುರುಡೇಶ್ವರದ ಶಿವನ ಮೂರ್ತಿಯೇ ಜಗತ್ತಿನ ಅತಿ ಎತ್ತರದ ಶಿವ ಮೂರ್ತಿಯಾಗಿತ್ತು. ಆದ್ರೆ 2011 ರಲ್ಲಿ ವಿದೇಶದಲ್ಲಿ ಅದಕ್ಕಿಂತಲೂ ಎತ್ತರದ ಶಿವನ ಮೂರ್ತಿಯನ್ನು ನಿರ್ಮಾಣ ಮಾಡಲಾಯ್ತು. ಈಗ ಅದೇ ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿ ಅಂತ ಹೇಳಲಾಗ್ತಿದೆ.

ಭಾರತದಲ್ಲಿ ಶಿವನ ಆರಾಧಕರು ಹೆಚ್ಚಾಗಿದ್ದಾರೆ. ಹೀಗಾಗಿ ಹಿಂದಿನಿಂದಲೂ ಸಾಕಷ್ಟು ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗ್ತಿದೆ. ಹರಿದ್ವಾರ, ಮುರುಡೇಶ್ವರ, ಸೇರಿದಂತೆ ವಿದೇಶಗಳಲ್ಲೂ ಶಿವನ ದೇಗುಲ ನಿರ್ಮಿಸಿ, ಶಿವನ ಮೂರ್ತಿಯನ್ನು ಪೂಜಿಸಲಾಗ್ತಿದೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ಪುರಿಯಲ್ಲಿ ನೆಲೆನಿಂತ ಹರ
ಸ್ಥಳ : ಹರಿದ್ವಾರ, ಉತ್ತರಾಖಂಡ್​
ಎತ್ತರ : 100 ಅಡಿ
ಜಗತ್ತಿನ ಎತ್ತರದಲ್ಲಿ 5 ನೇ ಸ್ಥಾನ

ಹರಿದ್ವಾರ ಪೌರಾಣಿಕ ಕ್ಷೇತ್ರ ಅನ್ನೋದ್ರಲ್ಲಿ ಎರಡು ಮಾತಿಲ್ಲ.. ಹೆಸರೇ ಹೇಳುವಂತೆ ಇದು ಹರಿ ನೆಲೆಸಿದ ಕ್ಷೆತ್ರ.. ಹೀಗಾಗಿ ಇಲ್ಲಿ ಹರನನ್ನು ಕೂಡ ಪೂಜಿಸಲಾಗುತ್ತೆ. ಈ ಕ್ಷೇತ್ರದಲ್ಲಿ ಹರನನ್ನು ಪೂಜಿಸುವುದರಿಂದ, ಹರ್​ ಕಿ ಪುರಿ ಅಂತ ಕರೀತಾರೆ. ರಿಶಿಕೇಶ್​ ಮತ್ತು ಹರಿದ್ವಾರಕ್ಕೆ ಸಾಗುವ ಮಾರ್ಗದಲ್ಲಿ ಗಂಗಾ ನದಿಯ ತಟದಲ್ಲಿ ಶಿವ ನೆಲೆಸಿದ್ದಾನೆ. ನಿಂತ ಭಂಗಿಯಲ್ಲಿರುವ ಶಿವನ ಎತ್ತರ ಬರೋಬ್ಬರಿ 100 ಅಡಿ. ಕೈನಲ್ಲಿ ತ್ರಿಶೂಲ ಹಿಡಿದು ನಿಂತು, ಬಂದು ಹೋಗೋ ಭಕ್ತರನ್ನು ಆಶೀರ್ವದಿಸ್ತಿದ್ದಾನೆ. ಆಕಾಶದೆತ್ತರಕ್ಕೆ ಇರಿವ ಈ ಶಿವನ ಮೂರ್ತಿ, ಜಗತ್ತಿನ 5 ನೇ ಎತ್ತರದ ಶಿವನ ಮೂರ್ತಿಯಾಗಿದೆ. ಇವತ್ತು ಶಿವರಾತ್ರಿಯ ಸಂಭ್ರಮವಾದ್ದರಿಂದ, ಬೃಹತ್ ಶಿವನನ್ನು ಪೂಜಿಸಲು, ಇಂದು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದಾರೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ಮಂಗಲ್​ ಮಹಾದೇವ
ಸ್ಥಳ : ಮಾರಿಷಸ್​ ಗಣರಾಜ್ಯ
ಎತ್ತರ : 108 ಅಡಿ
ನಿರ್ಮಾಣ: 2007
ಜಗತ್ತಿನ ಎತ್ತರದಲ್ಲಿ 4 ನೇ ಸ್ಥಾನ

ಇನ್ನು ಮಾರೀಷಸ್​ನಲ್ಲೂ ಅದ್ಭುತವಾದ ಶಿವಾಲಯವಿದೆ. ಮಂಗಲ್​ ಮಹಾದೇವ್​​ ಅಂತ ಮಾರೀಷಸ್​ನಲ್ಲಿ ನೆಲೆಸಿದ್ದಾನೆ ಮಹಾದೇವ.. ಇನ್ನು 1893 ರಲ್ಲಿ ಹಿಂದೂ ಪೂಜಾರಿಯೊಬ್ಬರಿಗೆ ಬಿದ್ದ ಕನಸು, ಈ ದೇವಾಲಯ ನಿರ್ಮಾಣಕ್ಕೆ ಕಾರಣವಾಯ್ತು.. ಹಿಂದೂಗಳೇ ಹಣ ಹಾಕಿ ನಿರ್ಮಾಣ ಮಾಡಿದ ಈ ಮಂಗಲ್ ಮಹಾದೇವನ ಮೂರ್ತಿಯನ್ನು 2007 ರಲ್ಲಿ ಲೋಕಾರ್ಪಣೆ ಮಾಡಲಾಯ್ತು. 108 ಅಡಿ ಎತ್ತರವಿರುವ ಈ ಶಿವನ ಮೂರ್ತಿ, ಜಗತ್ತಿನ 4 ನೇ ಅತ್ಯಂತ ಎತ್ತರದ ಶಿವನ ಮೂರ್ತಿಯಾಗಿದೆ. ಮಹಾದೇವನ ಆಕಾಶದೆತ್ತರದ ಮೂರ್ತಿ, ಜಗತ್ತಿನ ಜನರನ್ನು ಕೈಬೀಸಿ ಕರೀತಿದೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ನಾಂಚಿ ಶಿವಮೂರ್ತಿ
ಸ್ಥಳ : ಸಿದ್ದೇಶ್ವರ ಧಾಮ, ಸಿಕ್ಕಿಂ
ಎತ್ತರ : 108 ಅಡಿ
ಜಗತ್ತಿನ ಎತ್ತರದಲ್ಲಿ 3 ನೇ ಸ್ಥಾನ

ಇನ್ನು ಭಾರತದಲ್ಲಿರೋ ಸಿಕ್ಕಿಂ ಪ್ರದೇಶದಲ್ಲೂ ಎತ್ತರದ ಶಿವನ ಮೂರ್ತಿ ಇದೆ. ಇಲ್ಲಿನ ಸಿದ್ದೇಶ್ವರ ಧಾಮದಲ್ಲಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 2011 ರಲ್ಲಿ ಈ ಶಿವನ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಗಿದ್ದು, ಬರೋಬ್ಬರಿ 108 ಅಡಿ ಎತ್ತರವಿದೆ. ಬೃಹದಾಕಾರವಾದ ಈ ಶಿವನ ಮೂರ್ತಿ ಜಗತ್ತಿನ 3 ನೇ ಅತಿ ಎತ್ತರದ ಮೂರ್ತಿಯಾಗಿದೆ. ಶಿವಾರಾಧಕರು, ಪ್ರವಾಸಿಗರು ಸೇರಿದಂತೆ, ದಿನಕ್ಕೆ ಸಾವಿರಾರು ಮಂದಿ ಇಲ್ಲಿಗೆ ಬಂದು ಶಿವನ ಕೃಪೆಗೆ ಪಾತ್ರರಾಗ್ತಿದ್ದಾರೆ.
-----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಮುರುಡೇಶ್ವರದ ಶಿವ ಮೂರ್ತಿ
ಸ್ಥಳ : ಮುರುಡೇಶ್ವರ, ಕರ್ನಾಟಕ
ಎತ್ತರ : 122 ಅಡಿ
ಜಗತ್ತಿನ ಎತ್ತರದಲ್ಲಿ 2 ನೇ ಸ್ಥಾನ

ಇನ್ನು ಕರ್ನಾಟಕದ ಪವಿತ್ರ ಕ್ಷೇತ್ರವಾದ ಮುರುಡೇಶ್ವರದಲ್ಲೂ ಆಕಾಶದೆತ್ತರಕ್ಕೆ ನೆಲೆಸಿದ್ದಾನೆ ಈ ಪರಶಿವ. ಶಿವನ ಆತ್ಮಲಿಂಗ ಗೋಕರ್ಣದಲ್ಲಿ ಭೂಸ್ಪರ್ಶವಾದಾಗ, ರಾವಣ ಸಿಟ್ಟಿಗೆದ್ದು ಆತ್ಮಲಿಂಗವನ್ನು ಛಿದ್ರಗೊಳಿಸಿ ಎಸೀತಾನೆ. ಆ ವೇಳೆ ಶಿವನ ಆತ್ಮಲಿಂಗದ ಒಂದು ಭಾಗ ಮುರುಡೇಶ್ವರದಲ್ಲಿ ಬೀಳುತ್ತೆ. ಹೀಗಾಗಿ ಇಲ್ಲಿ ಶಿವನನ್ನು ಆರಾಧಿಸಲಾಗುತ್ತೆ.  ಸಮುದ್ರ ತೀರದಲ್ಲಿ ತಪೋನಿರತನಾಗಿರುವಂತೆ ಕಾಣುವ, ಆಕಾಶದೆತ್ತರದ ಶಿವನ ಮೂರ್ತಿ, ನೋಡುಗರನ್ನು ಮನಸೆಳೆಯುತ್ತೆ. ಇದು 122 ಅಡಿ ಎತ್ತರವಿದ್ದು, ಭಾರತದ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಇನ್ನು ಜಗತ್ತಿನಾದ್ಯಂತ ಇರೋ ಶಿವನ ಮೂರ್ತಿಗಳಿಗೆ ಹೋಲಿಸಿದ್ರೆ, ಮುರುಡೇಶ್ವರದ ಶಿವನ ಮೂರ್ತಿ, ಎರಡನೇ ಸ್ಥಾನವನ್ನು ಅಲಂಕರಿಸಿದೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ಕೈಲಾಸನಾಥ ಮಹಾದೇವ
ಸ್ಥಳ : ನೇಪಾಳ
ಎತ್ತರ : 143 ಅಡಿ
ನಿರ್ಮಾಣ : 2011
ಜಗತ್ತಿನ ಎತ್ತರದಲ್ಲಿ 1 ನೇ ಸ್ಥಾನ

ಭಾರತವನ್ನು ಹೊರತುಪಡಿಸಿದ್ರೆ, ಅತಿ ಎತ್ತರದ ಶಿವನ ಮೂರ್ತಿ ಇರೋದು ನೆರೆ ರಾಷ್ಟ್ರ ನೇಪಾಳದಲ್ಲಿ.. ಭಕ್ತಾಪುರ್​ ಜಿಲ್ಲೆಯ ಸಾಂಗ ಪ್ರದೇಶದಲ್ಲಿ ಕೈಲಾಸನಾಥ ಮಹಾದೇವನಾಗಿ ಪರಶಿವನು ನೆಲೆಸಿದ್ದಾನೆ.. ನಿಂತ ಭಂಗಿಯಲ್ಲಿರುವ ಪರಶಿವನ ಮೂರ್ತಿಯನ್ನು, ತಾಮ್ರ, ಜಿಂಕ್​​, ಸಿಮೆಂಟ್​ ಮತ್ತು ಉಕ್ಕಿನಿಂದ ತಯಾರಿಸಲಾಗಿದೆ. 143 ಅಡಿ ಎತ್ತರವಿರುವ ಈ ಶಿವನ ಮೂರ್ತಿಯನ್ನು, ಜೂನ್​ 21, 2011 ರಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಇದು ಜಗತ್ತಿನ ಅತಿ ಎತ್ತರ ಶಿವನ ಮೂರ್ತಿಯಾಗಿದ್ದು, 1 ನೇ ಸ್ಥಾನದಲ್ಲಿದೆ.

ನೇಪಾಳದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಹಿಂದೂ ದೇವಾಲಯಗಳು ಕೂಡ ನೇಪಾಳದಲ್ಲಿ ಹೆಚ್ಚಾಗಿವೆ. ಹೀಗಾಗಿ ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿಯನ್ನು ನಿರ್ಮಾಣ ಮಾಡುವ ಮೂಲಕ, ಪರಶಿವನನ್ನು ನೇಪಾಳದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಈ ಬೃಹದಾಕಾರವಾದ ಶಿವನ ದರ್ಶನಕ್ಕೆ ಅಂತಲೇ, ಸಾಕಷ್ಟು ಜನರು ಇಲ್ಲಿಗೆ ಬರ್ತಾರೆ.. ಭಕ್ತಿಯಿಂದ ನಮಿಸಿ, ಪಾದಕ್ಕೆ ಎರಗ್ತಾರೆ. ಶಿವನ ಕೃಪೆಗೆ ಪಾಗತ್ರರಾಗ್ತಾರೆ.

ಇದುವರೆಗೂ ನೀವು ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿಗಳ ದರ್ಶನ ಮಾಡಿದ್ದೀರ.. ಆದ್ರೆ ಜಗತ್ತಿನ ಅತಿ ಎತ್ತರದ ಶಿವಲಿಂಗಗಳ ಬಗ್ಗೆ ಮಾಹಿತಿ ನೀಡ್ತೀವಿ ಒಂದು ಬ್ರೇಕ್ ಆದ್ಮೇಲೆ
------------------------------------------------
ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿ ಇರೋದು ನೇಪಾಳದಲ್ಲಿ.. ಆ ಮೂಲಕ, ಸಾಕಷ್ಟು ಭಕ್ತರಿಗೆ ತನ್ನ ದರ್ಶನ ನೀಡ್ತಿದ್ದಾನೆ. ಆದ್ರೆ ಜಗತ್ತಿನ ಅತಿ ಎತ್ತರದ ಶಿವಲಿಂಗದ ರೂಪದಲ್ಲಿ ಭಾರತದಲ್ಲಿ ನೆಲೆಯೀರಿದ್ದಾನೆ ಆ ಪರಮೇಶ್ವರ..

ಜಗತ್ತಿನ ಉದ್ದಾರಕ್ಕೆ ಅಂತ ಸಮುದ್ರ ಮಂಥನದ ವೇಳೆ ಉದ್ಭವಿಸಿದ ವಿಷವನ್ನು ಸೇವಿಸಿದ ವಿಷಕಂಠನಿಗೆ, ಭಕ್ತರು ಅಂದ್ರ ಪ್ರಾಣ. ಭಕ್ತಿಯಿಂದ ಭಗವಂತನನ್ನು  ಪ್ರಾರ್ಥನೆ ಮಾಡಿದ್ರೆ ಸಾಕು.. ಅವ್ರಿಗೆ ಕೇಳಿದ್ದೆಲ್ಲವನ್ನೂ ಕರುಣಿಸ್ತಾನೆ ಈ ಕರುಣಾಮಯಿ.. ಹೀಗಾಗಿನೇ ಭಕ್ತರು ಮೂರ್ತಿಯ ರೂಪದಲ್ಲಿ ಶಿವನನ್ನು ಆರಾಧಿಸ್ತಿದ್ದಾರೆ. ಶಿವಲಿಂಗದ ರೂಪದಲ್ಲಿ ಪ್ರತಿಷ್ಠಾಪಿಸಿ, ಪೂಜಿಸ್ತಿದ್ದಾರೆ. ಇಡೀ ಜಗತ್ತಿನಲ್ಲಿರೋ ಶಿವಲಿಂಗಗಳಲ್ಲಿ ಭಾರತದಲ್ಲಿರೋ ಶಿವಲಿಂಗಗಳೇ ಅತಿ ಎತ್ತರದ್ದು..
-------------------------
ಜಗತ್ತಿನ ಎತ್ತರದ ಶಿವಲಿಂಗ
-------------------------
ಸ್ಥಳ : ಜಾರ್ಖಂಡ್​
ಎತ್ತರ : 65 ಅಡಿ
ನಿರ್ಮಾಣ : 30 ವರ್ಷಗಳ ಹಿಂದೆ
ಜಗತ್ತಿನ ಎತ್ತರದಲ್ಲಿ 4 ನೇ ಸ್ಥಾನ

ಪರಶಿವ ಅಮೂರ್ತ ಸ್ವರೂಪಿ.. ಇಂಥದ್ದೇ ರೂಪ ಅನ್ನೋದು ಆತನಿಗಿಲ್ಲ.. ಭಕ್ತರಿಗೆ ದರ್ಶನ ನೀಡೋದಕ್ಕೆ ಅಂತ ವಿವಿಧ ರೂಪದಲ್ಲಿ ಧರೆಗಿಳಿದು ಬರ್ತಾನೆ. ಹೀಗೆ ಆತನ ರೂಪಗಳಲ್ಲಿ ಒಂದಾಗಿರೋದು ಈ ಶಿವಲಿಂಗ..

ಇದು ಜಾರ್ಖಂಡ್​ನ ಛೋಟಾನಾಗ್​ಪುರ್​​ದಲ್ಲಿರೋ ಅತಿ ಎತ್ತರದ ಶಿವಲಿಂಗ. ಗಿರಿದಿ ಜಿಲ್ಲೆಯ ಹರಿಹರಧಾಮದಲ್ಲಿರುವ ಈ ಶಿವಲಿಂಗ, ಇಡೀ ದೇಶ ಮಾತ್ರವಲ್ಲ, ಜಗತ್ತಿನಲ್ಲೇ ಪ್ರಖ್ಯಾತಿಯಾಗಿದೆ. ನದಿ ನೀರಿನಿಂದ ಸುತ್ತುವರಿದ 25 ಎಕೆರೆ ಪ್ರದೇಶದಲ್ಲಿ ಶಿವಲಿಂಗದ ರೂಪದಲ್ಲಿ ವಿರಾಜಮಾನವಾಗಿ ನೆಲೆಯೂರಿದ್ದಾನೆ ಈ ಈಶ್ವರ.. ಈ ಶಿವಲಿಂಗ ಸುಮಾರು 65 ಅಡಿ ಎತ್ತರವಿದೆ. 30 ವರ್ಷಗಳ ಹಿಂದೆ ಈ ಶಿವಲಿಂಗ ನಿರ್ಮಾಣ ಮಾಡಲಾಗಿದೆ. ಜಗತ್ತಿನ ಶಿವಲಿಂಗಗಳಲ್ಲಿ ಇದು ನಾಲ್ಕನೇ ಅತಿ ಎತ್ತರವಾದ ಶಿವಲಿಂಗವಾಗಿದೆ. ಶ್ರಾವಣ ಪೌರ್ಣಮಿಯಂದು ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಾರೆ. ಆ ಮೂಲಕ, ಲಿಂಗದ ರೂಪದಲ್ಲಿ ಬೃಹದಾಕಾರವಾಗಿ ನೆಲೆಯೂರಿರೋ ಪಾರ್ವತಿಪತಿಯನ್ನು ಆರಾಧಿಸ್ತಾರೆ..
-------------------------
ಜಗತ್ತಿನ ಎತ್ತರದ ಶಿವಲಿಂಗ
-------------------------
ಸ್ಥಳ : ತಮಿಳುನಾಡು
ಎತ್ತರ : 90 ಅಡಿ
ನಿರ್ಮಾಣ : ಅಕ್ಟೋಬರ್​​ 15, 1989
ಜಗತ್ತಿನ ಎತ್ತರದಲ್ಲಿ 3 ನೇ ಸ್ಥಾನ

ಈ ಶಿವಲಿಂಗವನ್ನೊಮ್ಮೆ ನೋಡಿ.. ಇದು ತಮಿಳುನಾಡಿನಲ್ಲಿರೋ ಸರ್ವೇಶ್ವರ ದೇಗುಲದಲ್ಲಿದೆ.  ತಮಿಳುನಾಡಿನ ತಾಮರೈಪಾಕಮ್​ ಪ್ರದೇಶದಲ್ಲಿರೋ ಈ ಶಿವಲಿಂಗವನ್ನ, ಅಕ್ಟೋಬರ್​​ 15, 1989 ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಆ ಮೂಲಕ ಶಿವನ ಆರಾಧನೆಯಲ್ಲಿ ಮುಳುಗಿದ್ದಾರೆ ಇಲ್ಲಿನ ಭಕ್ತರು.

ಇನ್ನು ಈ ಶಿವಲಿಂಗವು ಭೂಮಿಯಿಂದ ಸುಮಾರು 90 ಅಡಿ ಎತ್ತರವಿದೆ. ಹೀಗಾಗಿ ಇದು ಜಗತ್ತಿನ ಅತಿ ಎತ್ತರದ ಶಿವಲಿಂಗಗಳಲ್ಲಿ, ಮೂರನೆಯದ್ದಾಗಿದೆ. ಪ್ರತಿ ನಿತ್ಯ ಪೂಜಾವಿಧಿ ವಿಧಾನಗಳೊಂದಿಗೆ ಈ ಶಿವಲಿಂಗಕ್ಕೆ ಪೂಜೆ ನೆರವೇರಿಸಲಾಗುತ್ತೆ. ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸೋ ಭಕ್ತರು ಶಿವಲಿಂಗದ ದರ್ಶನ ಮಾಡಿ, ತನ್ಮಯರಾಗ್ತಾರೆ.
-------------------------
ಜಗತ್ತಿನ ಎತ್ತರದ ಶಿವಲಿಂಗ
-------------------------
ಸ್ಥಳ : ಹೈದ್ರಾಬಾದ್​​
ಎತ್ತರ : 108 ಅಡಿ
ನಿರ್ಮಾಣ : 2010
ಜಗತ್ತಿನ ಎತ್ತರದಲ್ಲಿ 2 ನೇ ಸ್ಥಾನ

ಇಲ್ನೋಡಿ.. ಇದು ಜಗತ್ತಿನ 2 ನೇ ಅತಿ ಎತ್ತರದ ಶಿವಲಿಂಗ.. ಜಗತ್ತಿನ ಅತಿ ಎತ್ತರದ ಎರಡನೇ ಶಿವಲಿಂಗ ಇರೋದು ಭಾರತದ ಮುತ್ತಿನ ನಗರಿ ಹೈದ್ರಾಬಾದ್​​ನಲ್ಲಿ.. ಸಿದ್ದೇಶ್ವರ ಪೀಠದವತಿಯಿಂದ ಈ ಬೃಹತ್ ಶಿವಲಿಂವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 2010 ರಲ್ಲಿ ಧರ್ಮ ರಕ್ಷಾ ಮಹಾಯಾಗ ಮಾಡೋ ಮೂಲಕ, ಈ ಶಿವಲಿಂಗವನ್ನು ಲೋಕಾರ್ಪಣೆ ಮಾಡಲಾಯ್ತು.. ಆಗಸದೆತ್ತರಕ್ಕೆ ಕಾಣುವ ಈ ಶಿವಲಿಂಗ, ಬರೋಬ್ಬರಿ 108 ಅಡಿಗಳಷ್ಟಿದೆ. ಆ ಮೂಲಕ ಜಗತ್ತಿನ ಎರಡನೆಯ ಅತಿ ಎತ್ತರದ ಶಿವಲಿಂಗ ಅನ್ನೋ ಹಿರಿಮೆಗೆ ಪಾತ್ರವಾಗಿದೆ.
-------------------------
ಜಗತ್ತಿನ ಎತ್ತರದ ಶಿವಲಿಂಗ
-------------------------
ಸ್ಥಳ : ಕೋಲಾರ, ಕರ್ನಾಟಕ
ಎತ್ತರ : 108 ಅಡಿ
ನಿರ್ಮಾಣ :
ಜಗತ್ತಿನ ಎತ್ತರದಲ್ಲಿ 1 ನೇ ಸ್ಥಾನ

ಇದೇ ನೋಡಿ.. ಜಗತ್ತಿನ ಅತಿ ಎತ್ತರದ ಶಿವಲಿಂಗ...  ಇದು ಇರೋದು ಕರುನಾಡಿನ ಮಡಿಲಲ್ಲೇ.. ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿ ಸಮೀಪದಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ತ್ರೇತಾಯುಗದ ಇತಿಹಾಸಹೊಂದಿರುವ ಕೋಟಿಲಿಂಗೇಶ್ವರದಲ್ಲಿ, ಮೊದಕಲು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು, ಸಾಕ್ಷಾತ್​ ಶ್ರೀರಾಮ..

ಇನ್ನು ಇಲ್ಲಿರುವ ಕೋಟಿ ಲಿಂಗಗಳಲ್ಲಿ ಒಂದು ಬೃಹದಾಕಾರವಾದ ಶಿವಲಿಂಗವಿದೆ. 108 ಅಡಿಗಳಷ್ಟು ಎತ್ತರವಿರುವ ಈ ಶಿವಲಿಂಗ, ಜಗತ್ತಿನ ಅತಿ ಎತ್ತರದ ಶಿವಲಿಂಗವಾಗಿದೆ.

ಜಗತ್ತಿನ ಅತಿ ಎತ್ತರದ ಶಿವಲಿಂಗದ ದರ್ಶನಕ್ಕೆ, ಸಾಗರೋಪಾದಿಯಲ್ಲಿ ಭಕ್ತರು ಬರ್ತಾರೆ. ಕರ್ನಾಟಕ ಮಾತ್ರವಲ್ಲ, ದೇಶ ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಬರ್ತಾರೆ. ಕೋಟಿ ಲಿಂಗಗಳ ರೂಪದಲ್ಲಿರೋ ಶಿವನ ಪಾದಕ್ಕೆ ಎರಗಿ, ಶಿವನ ಕೃಪೆಗೆ ಪಾತ್ರರಾಗ್ತಾರೆ..

ಕರ್ನಾಟಕ ಮಣ್ಣಿನ ಕಣಕಣದಲ್ಲೂ ಶಿವನ ಸತ್ವವಿದೆ. ಮುರುಡೇಶ್ವರದಲ್ಲಿ ಶಾಂತಚಿತ್ತನಾಗಿ ತಪೋನಿರತನಾಗಿದ್ರೆ, ಕೋಲಾರದ ಕೋಟಿ ಲಿಂಗೇಶ್ವರದಲ್ಲಿ, ಲಿಂಗಗಳ ರೂಪದಲ್ಲಿ ಭಕ್ತರಿಗೆ ದರ್ಶನ ನೀಡ್ತಿದ್ದಾನೆ. ಆ ಮೂಲಕ, ತನ್ನನ್ನು ಆರಾಧಿಸೋ ಭಕ್ತರ ಸಂಕಷ್ಟಗಳನ್ನು ನಿವಾರಿಸ್ತಿದ್ದಾನೆ.

ತಿಮ್ಮಪ್ಪನನ್ನು ವರಿಸಿದಳಾ ಮುಸ್ಲಿಂ ಯುವತಿ..?ತಿರುಪತಿಯ ಬಾಲಾಜಿ ವಿವಾಹ ಯಾರ್ ಜೊತೆ ಆಯ್ತು..? ಈ ಪ್ರಶ್ನೆಗೆ ಯಾರನ್ನು ಕೇಳಿದ್ರೂ, ಶ್ರೀ ಲಕ್ಷ್ಮಿ ಜೊತೆ ಆಯ್ತು ಎಲ್ರೂ ಹೇಳ್ತಾರೆ.. ಆದ್ರೆ ಈಗ ಹೊಸ ಅಂಶವೊಂದು ಬೆಳಕಿಗೆ ಬಂದಿದೆ. ತಿರುಪತಿ ತಿಮ್ಮಪ್ಪ ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ರಂತೆ..? ಇದು ನಿಜಾನಾ..? ಅಷ್ಟಕ್ಕೂ ಆ ಯುವತಿಯಾದ್ರೂ ಯಾರು..? ಈ ಸ್ಟೋರಿ ನೋಡಿ ನಿಮ್ಗೇ ಗೊತ್ತಾಗುತ್ತೆ..

ಓಂ ಶ್ರೀ ವೆಂಕಟೇಶ್ವರಾಯ ನಮಃ... ಗೋವಿಂದಾಯ ನಮಃ.. ಇದು ಕೋಟ್ಯಾಂತರ ಭಕ್ತರ ಎದೆಯೊಳಗಿಂದ ಉಕ್ಕಿ ಹರಿಯುವ ಪದಗಳು.. ಕೇಳಿದ್ದನ್ನು ಕರುಣಿಸೋ ಕರುಣಾಮಯಿಯ ದರ್ಶನಕ್ಕೆ ದೇಶ ವಿದೇಶಗಳಿಂದಲೂ ಭಕ್ತರು ಬರ್ತಾರೆ. ಬ್ಯುಸಿ ಶೆಡ್ಯೂಲ್ ನಡುವೆಯೂ ತಿರುಪತಿಗೆ ಬಂದು, ತಿಮ್ಮಪ್ಪನಿಗೆ ನಮಿಸಿ ಹೋಗ್ತಾರೆ.

ತಿಮ್ಮಪ್ಪ ಅಂದ್ರೆ ಸಾಕು.. ಜಗತ್ತಿನ ಜನರಿಗೆ ಥಟ್ ಅಂತ ನೆನಪಾಗೋದು, ಹಿಂದೂ ಧರ್ಮ.. ಯಾಕಂದ್ರೆ, ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು, ಶ್ರೀ ವೆಂಕಟೇಶ್ವರ ಎಂಬ ಹೆಸರಿನಲ್ಲಿ ತಿರುಪತಿಯಲ್ಲಿ ನೆಲೆಸಿದ್ದಾನೆ. ಹೀಗಾಗಿ ತಿರುಪತಿ ಅಂದ್ರೆ, ಹಿಂದೂಗಳ ಪವಿತ್ರ ಕ್ಷೇತ್ರ ಅನ್ನೋದ್ರಲ್ಲಿ ಎರಡು ಮಾತಿಲ್ಲ..


ಆದ್ರೆ ಈ ಪವಿತ್ರ ತಾಣದಲ್ಲಿ ಜಾತಿ ಧರ್ಮದ ಭೇಧವಿಲ್ಲ.. ಶುದ್ಧ ಮನಸ್ಸಿನಿಂದ, ಭಕ್ತಿ ಭಾವದಿಂದ ನಮಿಸಿದ್ರೆ ಸಾಕು, ಎಲ್ಲರಿಗೂ ಒಲಿದು ಬಿಡ್ತಾನೆ ಈ ತಿಮ್ಮಪ್ಪ. ಅದಕ್ಕಾಗೇ, ಇಲ್ಲಿ ಎಲ್ಲಾ ಧರ್ಮದವರು, ಎಲ್ಲಾ ಜಾತಿಯವರು ಬರ್ತಾರೆ. ತಿಮ್ಮಪ್ಪನ ಪಾದಕ್ಕೆ ಬಿದ್ದು ಆಶೀರ್ವಾದ ಪಡೀತಾರೆ.

ಆದ್ರೆ ಪುರಾಣ ಪುಣ್ಯಗಳ ಪ್ರಕಾರ, ಶ್ರೀ ವೆಂಕಟೇಶ್ವರ ಹಿಂದೂ ದೇವರು.. ಆತ ಮದುವೆಯಾಗಿರೋದು ಪದ್ಮಾವತಿ ಮತ್ತು ಲಕ್ಷ್ಮಿಯನ್ನು.. ಪುರಾಣಗಳಲ್ಲಿ ಉಲ್ಲೇಖವಿರುವಂತೆ, ಪದ್ಮಾವತಿ ಮತ್ತು ಲಕ್ಷ್ಮಿ ಎರಡೂ, ಲಕ್ಷ್ಮಿಯ ಅವತಾರಗಳೇ.. ಲಕ್ಷ್ಮಿ ಕೂಡ ಹಿಂದೂಗಳ ಆರಾಧ್ಯ ದೇವತೆ ಅನ್ನೋದು ಎಲ್ಲರಿಗೂ ಗೊತ್ತಿದೆ.

ಆದ್ರೆ ವಿಷ್ಯ ಇದಲ್ಲ.. ಹೊಸ ಸುದ್ದಿಯೊಂದು ಈಗ ಎಲ್ಲೆಡೆ ಗದ್ದಲ ಸೃಷ್ಟಿಸುತ್ತಿದೆ. ತಿರುಪತಿ ಗಿರಿವಾಸ, ಶ್ರೀ ಶ್ರೀನಿವಾಸ ಮುಸ್ಲಿಂ ಯುವತಿಯನ್ನು ವರಿಸಿದ್ದಾರಂತೆ.. ಮುಸ್ಲಿಂ ಯುವತಿಯೋರ್ವಳು ಶ್ರೀ ವೆಂಕಟೇಶ್ವರನನ್ನು ಮದುವೆಯಾಗಿದ್ದಾಳಂತೆ..!

ಇದನ್ನ ಕೇಳಿದ ತಕ್ಷಣ ನಿಮಗೆ ಶಾಕ್ ಆಗಬಹುದು.. ಆದ್ರೆ ಹೀಗಂತ ಒಂದು ಸುದ್ದಿ ಈಗ ಸದ್ದು ಮಾಡ್ತಿದೆ. ಆ ಮೂಲಕ, ಶ್ರೀನಿವಾಸನ ಮದುವೆ ವಿಚಾರ, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಂಡ ಮುಸ್ಲಿಂ ಯುವತಿಯೋರ್ವಳು, ಶತಮಾನಗಳ ಹಿಂದೆಯೇ ಶ್ರೀ ವೆಂಕಟೇಶ್ವರನನ್ನು ವರಿಸಿದ್ದಾಳಂತೆ.

ಈ ವಿಷ್ಯ ಹೊರ ಬೀಳ್ತಿದ್ದಂತೆ, ತಿಮ್ಮಪ್ಪನ ಭಕ್ತರು ಒಂದು ಕ್ಷಣ ಶಾಕ್​ಗೆ ಒಳಗಾಗಿದ್ದಂತೂ ಸತ್ಯ. ಇದು ನಿಜಾನಾ,..? ಅಥವ ಇದೊಂದು ಕೇವಲ ಗಾಳಿ ಸುದ್ದೀನ ಅನ್ನೋ ಅನುಮಾನ ಕೂಡ ಎಲ್ಲರಲ್ಲೂ ಮನೆ ಮಾಡಿತ್ತು.. ಆದ್ರೆ, ಅದೆಲ್ಲದಕ್ಕಿಂತ ಮಿಗಿಲಾಗಿ, ಶ್ರೀನಿವಾಸನ ಕಲ್ಯಾಣದ ಹಿಂದೆ ಒಂದು ದೊಡ್ಡ ರಹಸ್ಯ ಅಡಗಿದೆ ಅನ್ನೋದು ಖಾತ್ರಿಯಾಗಿತ್ತು..

ಯಸ್​.. ಒಂದು ಮೂಲದ ಮಾಹಿತಿ ಪ್ರಕಾರ, ಶ್ರೀ ವೆಂಕಟೇಶ್ವರನನ್ನು ಬಿಬಿ ನಂಚಾರಿ ಅನ್ನೋ ಮುಸ್ಲಿಂ ಯುವತಿ ವರಿಸಿದ್ದಾಳೆ ಅಂತ ಹೇಳಲಾಗುತ್ತಿದೆ. ಯಾವಾಗ ಎಲ್ಲಿ ಈ ಮದುವೆ ನಡೀತು ಅನ್ನೋಕ್ಕೂ ಒಂದು ಕಥೆ ಹುಟ್ಟಿಕೊಂಡಿದೆ. ಸುಮಾರು 450 ವರ್ಷಗಳ ಹಿಂದೆ ಶ್ರೀ ವೆಂಕಟೇಶ್ವರನ ಮದುವೆ ನಡೆದಿತ್ತಂತೆ. ಪೂಜೆಗೆಂದು ಬಂದಿದ್ದ ಬಿಬಿ ನಂಚಾರಿ, ಏಳು ಬೆಟ್ಟದ ಒಡೆಯನನ್ನ ಒಲಿಸಿಕೊಂಡು, ವಿವಾಹವಾಗಿದ್ದಾರಂತೆ.

ಇದು ನಂಬೋದಕ್ಕೆ ಆಗದೇ ಇರುವಂಥ ವಿಷ್ಯ.. ಆದ್ರೆ ಕೆಲವೊಂದು ಮೂಲಗಳನ್ನು ಕೆದಕುತ್ತಾ ಹೋದಾಗ, ಈ ಎಲ್ಲಾ ವಿಷಯಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತೆ. ಪದ್ಮಾವತಿ ಮತ್ತು ಲಕ್ಷ್ಮಿ ಮಾತ್ರವಲ್ಲ, ಬಿಬಿ ನಂಚಾರಿ ಅನ್ನೋ ಯುವತಿ, ಶ್ರೀ ವೆಂಕಟೇಶ್ವರನನ್ನ ವರಿಸಿದ್ದಾಳಂತೆ..

ಅಷ್ಟಕ್ಕೂ ಈ ಬಿಬಿ ನಂಚಾರಿ ಯಾರು..? ಆಕೆ ತಿರುಪತಿ ತಿಮ್ಮಪ್ಪನನ್ನು ಯಾವಾಗ ಮದುವೆಯಾಗಿದ್ಳು..? -------------------------------------------------------------------
ಬಿಬಿ ನಂಚಾರಿ.. ಆಕೆ ಒಂದು ರಾಜಮನೆತನಕ್ಕೆ ಸೇರಿದವಳು.. ಆಕೆಯ ಧರ್ಮ ಇಸ್ಲಾಂ ಆಗಿತ್ತು.. ವೆಂಕಟೇಶ್ವರನ ರೂಪಕ್ಕೆ ಮರುಳಾಗಿ, ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಂಡು, ವಿವಾಹ ಕೂಡ ಆಗಿದ್ರಂತೆ..!

ಬಿಬಿ ನಂಚಾರಿ ಶ್ರೀ ವೆಂಕಟೇಶ್ವರನನ್ನು ಆಕೆ ಮದುವೆಯಾಗಿದ್ದು ನಿಜಾನಾ..? ಅಷ್ಟಕ್ಕೂ ಬಿಬಿ ನಂಚಾರಿ ಯಾರು..? ಈ ಪ್ರಶ್ನೆಗಳಿಗೆ ಉತ್ತರ ಹುಡುಕೋಕೆ ಹೊರಟ್ರೆ, ದೆಹಲಿಯನ್ನಾಳಿದ ಸುಲ್ತಾನರ ಇತಿಹಾಸ ತೆರೆದುಕೊಳ್ಳುತ್ತೆ..

ಯಸ್​.. ಶ್ರೀ ವೆಂಕಟೇಶ್ವರನನ್ನು ಮದುವೆಯಾಗಿದ್ದಾಳೆ ಅಂತ ಹೇಳಲಾಗ್ತಿರೋ ಬಿಬಿ ನಂಚಾರಿ, ದೆಹಲಿ ಸುಲ್ತಾನರ ಮನೆತನಕ್ಕೆ ಸೇರಿದವಳು ಅಂತ ಹೇಳಲಾಗ್ತಿದೆ.

ಅದು ಸುಮಾರು 700 ವರ್ಷಗಳ ಹಿಂದಿನ ಇತಿಹಾಸ.. ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಶುರುವಾಗಿತ್ತು.. ದಿನೇ ದಿನೇ ಪ್ರಾಬಲ್ಯ ಗಳಿಸ್ತಿದ್ದ ದೆಹಲಿಯ ಸುಲ್ತಾನರ ಸಾಮ್ರಾಜ್ಯ, ನಿಧಾನವಾಗಿ ದಕ್ಷಿಣ ಭಾರತದತ್ತ ವಿಸ್ತರಿಸಿತ್ತು. ಯುದ್ಧ ಪ್ರಿಯರಾದ ಸುಲ್ತಾನರು, ಹೈದರಾಬಾದ್ ಮೇಲೂ ತಮ್ಮ ಹಿಡಿತ ಸಾಧಿಸಿದ್ರು.. ಸಾಮ್ರಾಜ್ಯ ವಿಸ್ತರಣೆಯ ನೆಪದಲ್ಲಿ ದೆಹಲಿ ಸುಲ್ತಾನರು ಈ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೂ ಲಗ್ಗೆ ಇಟ್ಟರು..ದೆಹಲಿ ಸುಲ್ತಾನರು ಸುಮಾರು 450 ವರ್ಷಗಳ ಹಿಂದೆ, ಆಂಧ್ರ ಪ್ರದೇಶದ ಮೇಲೆ ದಾಳಿ ಇಟ್ಟರು. ಅಲ್ಲಿ ‘ದೂದೆಕುಲು’ ಅನ್ನೋ ಸಮುದಾಯದವರು ವಾಸ ಮಾಡ್ತಿದ್ರು.. ಬುಡಕಟ್ಟು ಜನಾಂಗಕ್ಕೆ ಸೇರಿದ ಇವ್ರು, ತಿಮ್ಮಪ್ಪನ ಆರಾಧಕರಾಗಿದ್ದರು.. ಆದ್ರೆ ದೆಹಲಿ ಸುಲ್ತಾನರು ಅದ್ಯಾವುದನ್ನೂ ಪರಿಗಣಿಸದೇ, ಇವ್ರ ಬುಡಕಟ್ಟು ಜನರ ಮೇಲೆ ದಾಳಿ ಇಟ್ರು.. ಸುಲ್ತಾನರು ಝಳಪಿಸಿದ ಕತ್ತಿಗೆ, ಬುಡಕಟ್ಟು ಜನರ ನೆತ್ತರು ಹರಿಯತೊಡಗಿತು. ಇದ್ರಿಂದ ಕುಪಿತಗೊಂಡ ವೆಂಕಟೇಶ್ವರ ದೆಹಲಿ ಸುಲ್ತಾನರಿಗೆ ಶಾಪ ಕೊಟ್ನಂತೆ..

ಇದಾದ ನಂತರ ದೆಹಲಿ ಸುಲ್ತಾನರ ಮನೆತನಕ್ಕೆ ಸೇರಿದ ಬಿಬಿ ನಂಚಾರಿ, ಒಮ್ಮೆ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬಂದ್ರಂತೆ. ಆಗ ವೆಂಕಟೇಶ್ವರನ ರೂಪ ಲಾವಣ್ಯಕ್ಕೆ ಮನಸೋತುಬಿಟ್ರಂತೆ..!

ಹಿಂದೂ ಧರ್ಮದ ಸಂಪ್ರದಾಯದಂತೆ, ತನ್ನ ಆಚಾರ ವಿಚಾರಗಳನ್ನು ಬದಲಿಸಿಕೊಂಡು, ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಳ್ಳಲು ಅಣಿಯಾದಳಂತೆ..!

ವೆಂಕಟೇಶ್ವರನಿಗೆ ಮನಸೋತ ಬಿಬಿ ನಂಚಾರಿ, ಹಗಲಿರುಳು ಬಾಲಾಜಿಯನ್ನು ಒಲಿಸಿಕೊಳ್ಳೋಕೆ ಜಪತಪಗಳನ್ನ ಮಾಡಿದ್ರಂತೆ.. ನಂಚಾರಿಯ ಭಕ್ತಿಗೆ ಒಲಿದ ಬಾಲಾಜಿ, ನಂಚಾರಿಯ ತಂದೆ ಮತ್ತು ದೆಹಲಿಯ ಸುಲ್ತಾನನ ಕನಸಲ್ಲಿ ಬಂದು, ನಿನ್ನ ಮಗಳನ್ನು ನನಗೆ ಕೊಟ್ಟು ಕಲ್ಯಾಣ ಮಾಡು. ನಿನ್ನ ಎಲ್ಲಾ ಶಾಪಗಳು ಮುಕ್ತವಾಗುತ್ತವೆ ಅಂತ ಹೇಳಿದ್ನಂತೆ...

ಬಾಲಾಜಿ ಕನಸಲ್ಲಿ ಬಂದು ಹೇಳಿದ್ದೇ ತಡ, ದೆಹಲಿಯ ಸುಲ್ತಾನ ತನ್ನ ಮಗಳನ್ನು ವೆಂಕಟೇಶ್ವರನ ಜೊತೆ ಮದುವೆ ಮಾಡಲು ನಿರ್ಧರಿಸಿದ್ರಂತೆ. ಶ್ರೀ ವೆಂಕಟೇಶ್ವರನ ರೂಪ ಮತ್ತು ಲಾವಣ್ಯಕ್ಕೆ ಮರುಳಾಗಿದ್ದ ಬಿಬಿ ನಂಚಾರಿ ಕೂಡ, ಶ್ರೀನಿವಾಸನ ಜೊತೆ ಕಲ್ಯಾಣಕ್ಕೆ ಒಪ್ಪಿಕೊಂಡ್ರಂತೆ. ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಂಡ ಬಿಬಿ ನಂಚಾರಿ, ಸುಮಾರು 450 ವರ್ಷಗಳ ಹಿಂದೆ ಶ್ರೀ ವೆಂಕಟೇಶ್ವರನನ್ನು ವಿವಾಹವಾದ್ರಂತೆ. ಮುಸ್ಲಿಂ ಧರ್ಮೀಯರಾಗಿದ್ರೂ, ಹಿಂದೂ ದೇವರ ಜೊತೆ ನಂಚಾರಿಯ ಕಲ್ಯಾಣವಾಯ್ತಂತೆ..!

ಇನ್ನು ವೆಂಕಟೇಶ್ವರನನ್ನು ವಿವಾಹವಾದ ಮುಸ್ಲಿಂ ಯುವತಿ ಬಿಬಿ ನಂಚಾರಿಯ ಬಗ್ಗೆ ಒಂದು ಪುಸ್ತಕ ಕೂಡ  ಬಂದಿದೆ. ‘ಬಿಬಿ ನಂಚಾರಿ ಪ್ರಬಂಧಂ’ ಅನ್ನೋ ತೆಲುಗು ಪುಸ್ತಕದಲ್ಲಿ ಬಿಬಿ ನಂಚಾರಿಯ ಬದುಕು ಮತ್ತು ಶ್ರೀನಿವಾಸನ ಜೊತೆಗಿನ ಕಲ್ಯಾಣದ ಬಗೆಗಿನ ಕಥೆ ಇದೆ ಅಂತ ಹೇಳಲಾಗ್ತಿದೆ. ಸಿವಿ ಸುಬ್ಬಣ್ಣ ಅನ್ನೋರು ಈ ಪುಸ್ತಕವನ್ನು ಬರೆದಿದ್ದು, ತಿರುಪತಿ ತಿರುಮಲ ಟ್ರಸ್ಟ್​​ ವತಿಯಿಂದ ಈ ಪುಸ್ತಕ ಬಿಡುಗಡೆ ಮಾಡಲಾಗಿದೆ.

ಅಷ್ಟೇ ಅಲ್ಲ, ತಿರುಪತಿ ಸಮೀಪದಲ್ಲೇ ಬಿಬಿ ನಂಚಾರಿಯಮ್ಮನ ದೇವಾಲಯವನ್ನೂ ಕಟ್ಟಲಾಗಿದೆ. ಆ ಮೂಲಕ, ಬಿಬಿ ನಂಚಾರಿಯಮ್ಮನನ್ನು ತಿಮ್ಮಪ್ಪನ ಪತ್ನಿ ಅಂತ ಸ್ವೀಕರಿಸಲಾಗಿದೆ ಎಂದು ಹೇಳಲಾಗ್ತಿದೆ

ಸಿವಿ ಸುಬ್ಬಣ್ಣ ಬರೆದಿರೋ ಪುಸ್ತಕದಲ್ಲಿ ಬಿಬಿ ನಂಚಾರಿ ಬಗ್ಗೆ ಉಲ್ಲೇಖ ಇದೆ. ಮುಸ್ಲಿಂ ರಾಜಮನೆತನದ ಯುವತಿಯನ್ನ ಶ್ರೀ ವೆಂಕಟೇಶ್ವರನೇ ವರಿಸಿದ್ದ ಅಂತ ಆ ಪುಸ್ತಕದಲ್ಲಿ ಹೇಳಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ನಿಜಾ..? -------------------------------------------------
ಬಿಬಿ ನಂಚಾರಿಯನ್ನು ತಿರುಪತಿ ತಿಮ್ಮಪ್ಪ ಮದುವೆ ಆಗಿದ್ದಾನೆ ಅನ್ನೋ ಮಾತನ್ನೂ ಯಾರಿಂದಲೂ ನಂಬೋಕೆ ಆಗ್ತಿಲ್ಲ.. ಇದು ಕೇವಲ ಅವರಿವರು ಹೇಳೋ ಕಥೆ ಅಂತ ಹೇಳಲಾಗ್ತಿದೆ. ಯಾಕಂದ್ರೆ, ತಿಮ್ಮಪನ ಇತಿಹಾಸಕ್ಕೂ, ಬಿಬಿ ನಂಚಾರಿಯ ಇತಿಹಾಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಿದ್ರೆ, ಈ ಕಥೆ ಹುಟ್ಟಿಕೊಂಡಿದ್ಯಾಕೆ..? ಬಿಬಿ ನಂಚಾರಿ ತಿಮ್ಮಪ್ಪನನ್ನು ಮದುವೆಯಾಗಿಲ್ವಾ..? ಈ ರಿಪೋರ್ಟ್​ ನೋಡಿ.. ನಿಮ್ಗೇ ಗೊತ್ತಾಗುತ್ತೆ..

ಶ್ರೀನಿವಾಸನ ಕಲ್ಯಾಣದ ವಿಚಾರ ಒಂದು ನಿಗೂಢತೆಯಿಂದ ಕೂಡಿದೆ. ಆ ನಿಗೂಢತೆಯ ಜೊತೆಗೆ ಒಂದಷ್ಟು ಕಾಲ್ಪನಿಕ ಕಥೆಗಳು ಸೇರಿಕೊಂಡಿವೆ. ಹೀಗಾಗಿ ಬಿಬಿ ನಂಚಾರಿಯನ್ನು ಶ್ರೀನಿವಾಸ ವಿವಾಹವಾಗಿದ್ದಾನೆ ಅನ್ನೋ ಕಥೆಗಳು ಹುಟ್ಟಿಕೊಂಡಿವೆ. ಆದ್ರೆ ಬಿಬಿ ನಂಚಾರಿ ಮತ್ತು ಶ್ರೀನಿವಾಸನನಿಗೂ ಮದುವೆಯಾಗಿಲ್ಲ.. ಅಸಲಿಗೆ ಶ್ರೀನಿವಾಸನ ಜೊತೆ ಬಿಬಿ ನಂಚಾರಿಯ ಮದುವೆ ಆಗಿದೆ ಅನ್ನೋ ಮಾತೇ ಸುಳ್ಳು..!


ಯಸ್​.. ಬಿಬಿ ನಂಚಾರಿ ಮುಸ್ಲಿಂ ಧರ್ಮೀಯಳಾಗಿದ್ದಳು ಅನ್ನೋದು ಸತ್ಯ.. ದೆಹಲಿ ಸುಲ್ತಾನರ ರಾಜಮನೆತನಕ್ಕೆ ಸೇರಿದ್ದಳು ಅನ್ನೋದು ಕೂಡ ಅಷ್ಟೇ ಸತ್ಯ.. ಆದ್ರೆ ಶ್ರೀನಿವಾಸನ ಜೊತೆ ಮದುವೆಯಾಗಿದ್ದಾಳೆ ಅನ್ನೋ ಮಾತು ಮಾತ್ರ ಸತ್ಯವಲ್ಲ..

ಕ್ರಿ.ಪೂ 500ರಲ್ಲಿ ತಿರುಪತಿಯಲ್ಲಿ ನೆಲೆ ನಿಂತ ತಿಮ್ಮಪ್ಪ
ಬಿಬಿ ನಂಚಾರಿ ಇತಿಹಾಸ ಕೇವಲ 450 ವರ್ಷಗಳದ್ದು

ಯಸ್.. ಇತಿಹಾಸದ ಪುಟ ಕೆದಕಿ ನೋಡಿದ್ರೆ, ಕಾಲಮಾನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಈ ತಿರುಪತಿಯಲ್ಲಿ ತಿಮ್ಮಪ್ಪ ನೆಲೆ ನಿಂತು ಅದೆಷ್ಟೋ ಸಾವಿರ ವರ್ಷಗಳಾಗಿವೆ. ಚೋಳರ ಕಾಲದ್ದು ಎನ್ನಲಾಗಿರೋ ತಿಮ್ಮಪ್ಪನ ದೇಗುಲವನ್ನು, ಕ್ರಿ.ಪೂರ್ವ 500 ರಲ್ಲಿ ನಿರ್ಮಾಣ ಮಾಡಲಾಗಿದೆ ಅಂತ ಇತಿಹಾಸ ಹೇಳುತ್ತೆ. ಅಂದ್ರೆ, ಸುಮಾರು 2 ಸಾವಿರದ 515 ವರ್ಷಗಳ ಹಿಂದೆ ತಿರುಪತಿ ತಿಮ್ಮಪ್ಪನ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಆದ್ರೆ ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆ ಶುರುವಾಗಿದ್ದೇ, ಕ್ರಿ.ಶ 12 ನೇ ಶತಮಾನದಲ್ಲಿ..

ಕ್ರಿ.ಶ 1206 ರಲ್ಲಿ ಕುತ್ಬುದ್ದೀನ್ ಐಬಕ್​​ ಸ್ಥಾಪಿಸಿದ ಗುಲಾಮಿ ಸಂತತಿಯಿಂದ, ಭಾರತದಲ್ಲಿ ಮುಸ್ಲೀಮರ ಆಳ್ವಿಕೆ ಶುರುವಾಗಿತ್ತು.. ಅಂದ್ರೆ ಶ್ರೀ ವೆಂಕಟೇಶ್ವರ ತಿರುಪತಿಯಲ್ಲಿ ನೆಲೆ ನಿಂತಾದ ಸುಮಾರು 1700 ವರ್ಷಗಳ ನಂತರ ಭಾರತದಲ್ಲಿ ಮುಸ್ಲಿಂ ಆಳ್ವಿಕೆ ಶುರುವಾಯ್ತು. ಹೀಗಿರುವಾಗ, ಶ್ರೀ ವೆಂಕಟೇಶ್ವರ ಮುಸ್ಲಿಂ ಯುವತಿಯನ್ನು ವರಿಸೋದಾದ್ರೂ ಹೇಗೆ ಸಾಧ್ಯ..?


ಇನ್ನೂ ಬಿಬಿ ನಂಚಾರಿಗೆ ಕೇವಲ 450 ವರ್ಷಗಳ ಇತಿಹಾಸವಿದೆ. ಅಂದ್ರೆ ಬಿಬಿ ನಂಚಾರಿ ಬದುಕಿದ್ದ ಕಾಲಮಾನ ಸುಮಾರು 14-15ನೇ ಶತಮಾನ.. ತಿಮ್ಮಪ್ಪ ತಿರುಮಲದಲ್ಲಿ ನೆಲೆ ನಿಂತು, ಸುಮಾರು 2 ಸಾವಿರ ವರ್ಷಗಳ  ನಂತರ ಬಿಬಿ ನಂಚಾರಿಯ ಬದುಕು ಪ್ರಾರಂಭವಾಗುತ್ತೆ. ಹೀಗಿರುವಾಗ 2 ಸಾವಿರ ವರ್ಷಗಳ ಅಂತರವಿರುವ ಬಾಲಾಜಿಯನ್ನು, ಬಿಬಿ ನಂಚಾರಿ ಒಲಿಸಿಕೊಂಡು ವಿವಾಹವಾಗಿದ್ದಾಳೆ ಅಂದ್ರೆ, ಇದ್ರಲ್ಲಿ ಎಷ್ಟು ಸತ್ಯ ಇದೆ ಅಂತ ನೀವೇ ಊಹೆ ಮಾಡ್ಕೊಳ್ಳಿ..

ಅಸಲಿಗೆ ಬಿಬಿ ನಂಚಾರಿ ಮತ್ತು ಶ್ರೀನಿವಾಸನ ನಡುವಿನ ಕಥೆಯನ್ನೇ ಇಲ್ಲಿ ತಿರುಚಲಾಗಿದೆ. ಆ ಮೂಲಕ, ತಿಮ್ಮಪ್ಪನ ಮುಸ್ಲಿಂ ಪತ್ನಿ ಎಂದು ಬಿಬಿ ನಂಚಾರಿಯನ್ನು ಕರೆಯಲಾಗ್ತಿದೆ. ಇದು ಸತ್ಯವಲ್ಲ.. ಯಾಕಂದ್ರೆ, ಬಿಬಿ ನಂಚಾರಿ ಶ್ರೀನಿವಾಸನನ್ನು ಮದುವೆಯಾಗಿಲ್ಲ.. ಆಕೆ ಕೇವಲ ಶ್ರೀನಿವಾಸನ ಪರಮ ಭಕ್ತೆ..!

ಸುಮಾರು 450 ವರ್ಷಗಳಿಗೂ ಹಿಂದೆ, ದೆಹಲಿ ಸುಲ್ತಾನರು ತಮ್ಮ ಸಾಮ್ರಾಜ್ಯವನ್ನು ಆಂಧ್ರದವರೆಗೆ ವಿಸ್ತರಿಸ್ತಾರೆ. ಈ ವೇಳೆ ಸುಲ್ತಾನರ ಮನೆತನಕ್ಕೆ ಸೇರಿದ ಬಿಬಿ ನಂಚಾರಿ, ಕೂಡ ಆಂಧ್ರಕ್ಕೆ ಕಾಲಿಡ್ತಾಳೆ.. ಈ ವೇಳೆ ಏಳು ಬೆಟ್ಟದಲ್ಲಿ ನೆಲೆಸಿರೋ ತಿಮ್ಮಪ್ಪನ ಸನ್ನಿಧಾನಕ್ಕೂ ಬರ್ತಾಳೆ. ಅಲ್ಲಿ ತಿಮ್ಮಪ್ಪನ ರೂಪ ಮತ್ತು ಲಾವಣ್ಯವನ್ನು ನೋಡಿ ಮಾರು ಹೋಗ್ತಾಳೆ. ಅದ್ರ ಜೊತೆಗೆ ತಿಮ್ಮಪ್ಪನ ದರ್ಶನದಿಂದಾಗಿ ದೆಹಲಿ ಸುಲ್ತಾನರ ಕೆಲವು ಸಮಸ್ಯೆಗಳು ಕೂಡ ನಿವಾರಣೆಯಾಗ್ತವೆ. ಇದು ಬಿಬಿ ನಂಚಾರಿಗೆ ತಿಮ್ಮಪ್ಪನ ಮೇಲಿರೋ ಭಕ್ತಿಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತೆ..

ಮುಸ್ಲಿಂ ಧರ್ಮೀಯಳಾಗಿದ್ದರೂ, ಹಿಂದೂ ಸಂಪ್ರದಾಯದಂತೆ, ತಿಮ್ಮಪ್ಪನನ್ನು ವಿಧಿಬದ್ಧವಾಗಿ ಪೂಜಿಸ್ತಾಳೆ.. ಆರಾಧಿಸ್ತಾಳೆ. ವೆಂಕಟೇಶ್ವರನ ಸೇವೆಗೆ ನಿಂತ ಬಿಬಿ ನಂಚಾರಿ, ಮದುವೆಯ ಆಸೆಯನ್ನೇ ಬಿಟ್ಟು ಬಿಡ್ತಾಳೆ.. ತನು ಮನದಲ್ಲಿ ಶ್ರೀ ವೆಂಕಟೇಶ್ವರನನ್ನೇ ತುಂಬಿಕೊಳ್ತಾಳೆ.

ಬಾಲಾಜಿಯ ಪರಮ ಭಕ್ತೆಯಾಗಿದ್ದ ಬಿಬಿ ನಂಚಾರಿ, ‘ವೆಂಕಟೇಶ್ವರನೇ ನನ್ನ ಪತಿ.. ವೆಂಕಟೇಶ್ವರನೇ ನನ್ನ ದೈವ.. ವೆಂಕಟೇಶ್ವರನೇ ನನ್ನ ಸರ್ವಸ್ವ ಎಂದು, ಬದುಕಿನ ಕಣ ಕಣದಲ್ಲೂ ವೆಂಕಟೇಶ್ವರನನ್ನೇ ಸ್ಮರಿಸ್ತಾಳೆ’. ಆ ಮೂಲಕ, ತಿರುಪತಿ ತಿಮ್ಮಪ್ಪನ ಸೇವೆಯಲ್ಲಿಯೇ ತನ್ನ ಜೀವನವನ್ನು ಕಳೀತಾಳೆ. ಆದ್ರೆ ಭಕ್ತೆಯ ಭಾವನೆಗಳನ್ನು ಇತಿಹಾಸದ ಪುಟಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಲಾಗ್ತಿದೆ. ತಿಮ್ಮಪ್ಪನ ಭಕ್ತೆಯನ್ನು, ತಿಮ್ಮಪ್ಪನ ಪತ್ನಿ ಎನ್ನುವ ಮೂಲಕ, ಮುಸ್ಲಿಂ ಯುವತಿ ಬಿಬಿ ನಂಚಾರಿಯನ್ನು ಶ್ರೀನಿವಾಸ ಕಲ್ಯಾಣವಾಗಿದ್ದಾನೆ ಅಂತ ಹೇಳಲಾಗಿದೆ.

ಒಟ್ಟಾರೆ, ಬಿಬಿ ನಂಚಾರಿ ಮತ್ತು ವೆಂಕಟೇಶ್ವರನ ಕಲ್ಯಾಣದ ಕಥೆ ಒಂದು ಕಟ್ಟು ಕಥೆ ಅಂತ ಹೇಳಲಾಗ್ತಿದೆ. ನಂಚಾರಿ ಕೇವಲ ವೆಂಕಟೇಶ್ವರನ ಭಕ್ತೆ ಮಾತ್ರ.

ನೋಡಿದ್ರಲ್ಲಾ..? ಸತ್ಯಾಸತ್ಯತೆ ಏನು ಅಂತ.. ದೆಹಲಿ ಸುಲ್ತಾನರ ಮನೆತನಕ್ಕೆ ಸೇರಿದ ಮುಸ್ಲಿಂ ಮಹಿಳೆ ಬಿಬಿ ನಂಚಾರಿ, ಶ್ರೀನಿವಾಸನ ಪರಮ ಭಕ್ತೆ ಅಷ್ಟೇ.. ಆದ್ರೆ, ಕಾಲಾನಂತರದಲ್ಲಿ, ಸಂಹನದ ತೊಡಕಿನಿಂದಾಗಿ, ಭಕ್ತೆಯನ್ನು ಪತ್ನಿ ಅಂತ ತಪ್ಪಾಗಿ ಅರ್ಥೈಸಲಾಗ್ತಿದೆ.

ಕಲಿಯುಗದಲ್ಲೂ ಪ್ರತ್ಯಕ್ಷನಾಗ್ತಿದ್ದಾನೆ ತಿಮ್ಮಪ್ಪ..!
ಕಲಿಯುಗದಲ್ಲೂ ಪ್ರತ್ಯಕ್ಷನಾಗ್ತಿದ್ದಾನೆ ತಿಮ್ಮಪ್ಪ..!
ಮಾತುಬಾರದ ಹುಡುಗ ಮಾತನಾಡಿದ್ದು ಹೇಗೆ..?
ರಾತ್ರಿ ಹೊತ್ತಲ್ಲಿ ತಿರುಮಲಕ್ಕೆ ಬರ್ತಾನಂತೆ ಬಾಲಾಜಿ..!
---------------------------------------------
------------------------------------
ತಿರುಪತಿ ತಿಮ್ಮಪ್ಪನ ಲೀಲೆ ಅಗಾಧ.. ಬೇಡಿದ ಭಕ್ತರ ಕಷ್ಟಗಳನ್ನು ಈಡೇರಿಸೋದಕ್ಕೆ, ಕಲಿಯುಗದಲ್ಲೂ ತಿಮ್ಮಪ್ಪ ಪ್ರತ್ಯಕ್ಷನಾಗ್ತಿದ್ದಾನಂತೆ.. ತಿರುಮಲಕ್ಕೆ ಬರೋ ಎಲ್ಲಾ ಭಕ್ತರನ್ನೂ ಹರಸ್ತಿದ್ದಾನೆಂತೆ.. ಇದಕ್ಕೆ ಪುಷ್ಠಿ ನೀಡುವಂತ ಹಲವು ವಿಸ್ಮಯಗಳು ತಿರುಪತಿಯಲ್ಲಿ ನಡೀತಿವೆ.

ಏಳು ಬೆಟ್ಟದ ಒಡೆಯ.. ತಿರುಪತಿ ಗಿರಿವಾಸ.. ಶ್ರೀ ವೆಂಕಟೇಶ.. ದೇವನೊಬ್ಬ ನಾಮ ಹಲವು ಅನ್ನೋ ಹಾಗೆ, ತಿರುಪತಿ ತಿಮ್ಮಪ್ಪನಿಗೆ ಇರೋ ಹೆಸರುಗಳೂ ಅಪಾರ.. ವೆಂಕಟೇಶ, ತಿಮ್ಮಪ್ಪ, ಬಾಲಾಜಿ, ಅಂತ ಹತ್ತಾರು ಹೆಸ್ರುಗಳಿದ್ರೂ, ಭಕ್ತರು ಕರೆಯೋದು ಮಾತ್ರ ಗೋವಿಂದ ಅಂತಲೇ..

ಗೋವಿಂದ ಗೋವಿಂದ ಅಂತ ಭಕ್ತರು ಕರೆದ್ರೆ ಸಾಕು.. ಈ ಕಲಿಯುಗದಲ್ಲೂ ತಿಮ್ಮಪ್ಪ ಪ್ರತ್ಯಕ್ಷನಾಗ್ತಾನಂತೆ.. ಬೇಡಿದ ಭಕ್ತರ ಕಷ್ಟಗಳನ್ನು ಆಲಿಸ್ತಾನಂತೆ.. ಆ ಕಷ್ಟಗಳಿಂದ ತನ್ನ ಭಕ್ತರನ್ನು ದೂರ ಮಾಡ್ತಾನಂತೆ.. ಅದಕ್ಕಾಗಿಯೇ ತಿರುಪತಿಗೆ ಬರೋ ಭಕ್ತರ ಸಂಖ್ಯೆ, ದಿನೇ ದಿನೇ ಹೆಚ್ಚಾಗ್ತಿದ್ಯಂತೆ..

ತಿರುಪತಿಯಲ್ಲಿ ತಿಮ್ಮಪ್ಪ ಈಗಲೂ ಇದ್ದಾನೆ ಅಂತ ಭಕ್ತರು ಮಾತನಾಡಿಕೊಳ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂಥ ಹತ್ತು ಹಲವು ವಿಸ್ಮಯಗಳು ಕೂಡ, ತಿರುಪತಿಯಲ್ಲಿ ನಡೀತಿವೆ. ತಿಮ್ಮಪ್ಪನ ಸನ್ನಿಧಾನದಲ್ಲಿ ನಡೆದ ವಿಸ್ಮಯಗಳನ್ನು ನೋಡಿದ್ರೆ, ನೀವು ಕೂಡ ಒಂದು ಕ್ಷಣ ಬೆಚ್ಚಿ ಬೀಳ್ತೀರಾ.. ಕಲಿಯುಗದಲ್ಲಿ ಇದೆಲ್ಲಾ ಸಾಧ್ಯಾನಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರ.. ತಿಮ್ಮಪ್ಪ ಈಗ್ಲೂ ತಿರುಪತಿಯಲ್ಲಿ ಇದ್ದಾನೆ.. ಬೇಡಿ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸ್ತಿದ್ದಾನೆ ಅಂತ, ನೀವು ಕೂಡ ನಂಬ್ತೀರ..

ಮಾತುಬಾರದ ಹುಡುಗ ಮಾತನಾಡಿಬಿಟ್ಟ..!
 2002 ರಲ್ಲಿ ವಿಸ್ಮಯ ಸೃಷ್ಟಿಸಿದ ತಿಮ್ಮಪ್ಪ..!

ಈತನ ಹೆಸ್ರು ದೀಪಕ್​ ಅಂತ.. ದೆಹಲಿ ಮೂಲದವನು.. ಈತ 4 ವರ್ಷದವನಾಗಿದ್ದಾಗ, ಇದ್ದಕ್ಕಿದ್ದಂತೆ ಮಾತು ಹೋಯ್ತು.. ಯಾವ ಡಾಕ್ಟರ್​ಗೆ ತೋರಿಸಿದ್ರೂ, ಯಾವ ಊರು ಸುತ್ತಿದ್ರೂ, ಈತನಿಗೆ ಮಾತು ಬರಲೇ ಇಲ್ಲ.. ಕಂಡ ಕಂಡ ದೇವ್ರಿಗೆ ಕೈ ಮುಗಿದ್ರೂ,  ಮಗನ ಸಮಸ್ಯೆ ಪರಿಹಾರವಾಗ್ಲಿಲ್ಲ.. ಕೊನೆಯದಾಗಿ ಇವ್ರು ಬಂದಿದ್ದು ತಿಮ್ಮಪ್ಪನ ಸನ್ನಿಧಾನಕ್ಕೆ,..
 
ಮಗನಿಗೆ ಮಾತು ಬರೋದಿಲ್ಲ ಅಂತ ಇವ್ರೆಲ್ಲಾ ನಿರ್ಧರಿಸಿಬಿಟ್ಟಿದ್ರು.. ಆದ್ರೆ ನಿಮ್ಮ ಮಗನನ್ನು ತಿರುಪತಿಗೆ ಕರ್ಕೊಂಡು ಹೋಗಿ ಒಳ್ಳೇದಾಗುತ್ತೆ ಅಂತ ಕೆಲವರು ಹೇಳಿದ್ರು.. ಅದರಂತೆ ಮನಸ್ಸಿಗೆ ಸಮಾಧಾನವಾದ್ರೂ ಸಿಗಲಿ ಅನ್ನೋ ಕಾರಣಕ್ಕೆ 2002 ರಲ್ಲಿ ದೀಪಕ್​ ಮತ್ತು ಕುಟುಂಬದವರು ತಿರುಪತಿಗೆ ಬಂದ್ರು..  ತಿಮ್ಮಪ್ಪನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಬಾಲಾಜಿಯ ದರ್ಶನ ಪಡೆದ್ರು.. ವಿಚಿತ್ರವೋ, ವಿಸ್ಮಯವೋ ಗೊತ್ತಿಲ್ಲ.. ತಿಮ್ಮಪ್ಪನ ಈತನಿಗೆ ಮಾತು ಕೊಟ್ಟುಬಿಟ್ಟಿದ್ದ.. 14 ವರ್ಷ ಮಾತನಾಡದ ದೀಪಕ್​​, ಗೋವಿಂದನಿಗೆ ನಮಿಸಿದ ಕ್ಷಣವೇ, ಪಟ ಪಟ ಅಂತ ಮಾತನಾಡೋಕೆ ಶುರು ಮಾಡಿದ.. ಈತ ಹೇಗೆ ಮಾತಾಡ್ತಾನೆ ಅನ್ನೋದನ್ನು ನೀವೇ ಒಂದ್ಸಲ ಕೇಳಿಸಿಕೊಳ್ಳಿ

ಮಗನಿಗೆ ಮಾತು ಬಂದಿದ್ದೇ ತಡ, ಹೆತ್ತವರಿಗೆ ಎಲ್ಲಿಲ್ಲದ ಸಂತೋಷ.. ತಿಮ್ಮಪ್ಪನ ಲೀಲೆ ಬಗ್ಗೆ ದೀಪಕ್​ರ ತಾಯಿ ಹೇಳೋದು ಹೀಗೆ..

ಉಮಾ -‘ನನ್ನ ಮಗ 14 ವರ್ಷಗಳಿಂದ ಮಾತನಾಡ್ತಾ ಇರಲಿಲ್ಲ. ದೇವರ ದರ್ಶನದಿಂದ ಮಾತನಾಡ್ತಿದ್ದಾನೆ)ದೀಪಕ್​​ನ 

ಈ ದೀಪಕ್​ಗೆ ಮಾತು ಬಂದಿದ್ದು ನಿಜಕ್ಕೂ ವಿಸ್ಮಯ.. ದೇಶ ವಿದೇಶಗಳನ್ನು ಸುತ್ತಿದ್ರೂ ಪರಿಹಾರವಾಗದ ಸಮಸ್ಯೆ, ತಿಮ್ಮಪ್ಪನ ಸನ್ನಿಧಾನದಲ್ಲಿ ಪರಿಹಾರವಾಗಿದೆ. ಮಾಗತುಬಾರದ ವ್ಯಕ್ತಿ ಪಟ ಪಟ ಅಂತ ಮಾತನಾಡೋದಕ್ಕೆ ಶುರು ಮಾಡಿದ್ದಾನೆ. ಕಲಿಯುಗದಲ್ಲಿ, ಇಂಥದ್ದೊಂದು ವಿಸ್ಮಯ ನಡೆದಿರೋದು, ನಿಜಕ್ಕೂ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಅಷ್ಟೇ ಅಲ್ಲ, ತಿಮ್ಮಪ್ಪನ ಸನ್ನಿಧಾನದಲ್ಲಿ ಇಂಥದ್ದೊಂದು ಅಚ್ಚರಿಯ ಘಟನೆ ನಡೆದಿರೋದು ಕಂಡು, ‘ತಿಮ್ಮಪ್ಪ ತಿರುಪತಿಯಲ್ಲಿ ನೆಲೆಸಿದ್ದಾನೆ. ಕಲಿಯುಗದಲ್ಲೂ ಭಕ್ತರ ಕಷ್ಟಗಳನ್ನು ನಿವಾರಿಸ್ತಿದ್ದಾನೆಅಂತ ಮಾತನಾಡಿಕೊಳ್ತಿದ್ದಾರೆ.

ಇಷ್ಟೇ ಅಲ್ಲ.. ರಾತ್ರಿ ಸಮಯದಲ್ಲಿ ತಿರುಮಲ ಪೂರ್ತಿ ಸುತ್ತಾಡ್ತಾನಂತೆ ತಿಮ್ಮಪ್ಪ.. ದರ್ಶನಕ್ಕೆ ಕಾಯ್ತಾ ಇರೋ ಭಕ್ತರನ್ನ ಭೇಟಿ ಮಾಡಿ, ಅವರ ಕಷ್ಟಗಳನ್ನ ಆಲಿಸ್ತಾನಂತೆ. 1979 ರಲ್ಲಿ ನಡೆದ ಘಟನೆ, ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತೆ. ಆವತ್ತು ಏನಾಯ್ತು..? 
--------------------------------------
ಅದು ನವೆಂಬರ್​​ 7, 1979.. ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಒಂದು ವಿಸ್ಮಯ ನಡೆದಿತ್ತು.. ಆ ವಿಸ್ಮಯವನ್ನು ಕಂಡವರು, ನಿಜಕ್ಕೂ ಮೂಕ ವಿಸ್ಮಿತರಾದ್ರು.. ಅಷ್ಟಕ್ಕೂ ಆವತ್ತು ತಿರುಪತಿಯಲ್ಲಿ ನಡೆದಿದ್ದೇನು ಅಂತೀರಾ..? ಇಲ್ಲಿದೆ ನೋಡಿ ಆ ಸ್ಟೋರಿ.

ತಿರುಪತಿ ಅಂದ್ರೆ ವಿಸ್ಮಯಗಳ ತಾಣ.. ಇಲ್ಲಿ ಆಗಾಗ ವಿಸ್ಮಯಗಳು ನಡೀತಾನೇ ಇರುತ್ತೆ.. ಅಗೆದಷ್ಟು ವಿಸ್ಮಯಗಳ ರಾಶಿಯೇ ಇದೆ ಈ ತಿಮ್ಮಪ್ಪನ ಸನ್ನಿಧಿಯಲ್ಲಿ.. 
 
ಪ್ರತಿ ದಿನ ಮಧ್ಯರಾತ್ರಿ 1.30ಕ್ಕೆ ಏಕಾಂತ ಸೇವೆಯನ್ನು ನೆರವೇರಿಸಲಾಗುತ್ತೆ.. ಇದಾದ ನಂತರ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಗುತ್ತೆ.. ಮತ್ತೆ ಗರ್ಭಗುಡಿಯ ಬಾಗಿಲು ತೆಗೆಯೋದು ಬೆಳಿಗ್ಗೆ 3 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ..

.​​7, 1979ರಲ್ಲಿ ನಡೆದಿತ್ತು ಮತ್ತೊಂದು ವಿಸ್ಮಯ
ತಿಮ್ಮಪ್ಪನ ಸನ್ನಿಧಾನದಲ್ಲಿ ತಂತಾನೇ ಘಂಟನಾದ..!

ಹೌದು.. ನವೆಂಬರ್​ ​​7, 1979ರಲ್ಲಿ ಒಂದು ವಿಚಿತ್ರ ನಡೆದಿತ್ತು.. ಏಕಾಂತ ಸೆವೆಯ ನಂತರ ತಿಮ್ಮಪ್ಪನ ಗರ್ಭಗುಡಿಯನ್ನು ಮುಚ್ಚಲಾಗಿತ್ತು. ಇದಾದ ನಂತರ ಸುಮಾರು 2 ಗಂಟೆ 30 ನಿಮಿಷಕ್ಕೆ ದೇವಾಲಯದ ಗಂಟೆಗಳೆಲ್ಲಾ ಇದ್ದಕ್ಕಿದ್ದಂತೆ ಹೊಡೆದುಕೊಳ್ಳೋಕೆ ಶುರುವಾದವು..

ಯಾವಾಗ ದೇವಾಲಯದಲ್ಲಿ ಗಂಟೆಗಳು ಇದ್ದಕ್ಕಿದ್ದಂತೆ ಹೊಡೆದುಕೊಳ್ಳೋಕೆ ಶುರುವಾಯ್ತೋ..? ಆಗ ತಿರುಮಲ ಬೆಟ್ಟದಲ್ಲಿ ಒಂದು ಮಿಂಚಿನ ಬೆಳಕು ಕಾಣಿಸಿಕೊಂಡಿತು.. ಇದನ್ನು ಕಂಡ ಅಲ್ಲಿನ ಭಕ್ತರಿಗೆ ಎಲ್ಲಿಲ್ಲದ ಅಚ್ಚರಿ..


ತಿಮ್ಮಪ್ಪನಿಂದ ಪ್ರತಿ ದಿನವೂ ಲೋಕಸಂಚಾರ
ಬಾಲಾಜಿಗೆ ಗಂಟೆಗಳಿಂದ ಬಹುಪರಾಕ್​..!

ಅಲ್ಲಿನ ಭಕ್ತರು ನಂಬಿರೋ ಪ್ರಕಾರ, ತಿರುಪತಿ ತಿಮ್ಮಪ್ಪ ಪ್ರತಿ ದಿನ ರಾತ್ರಿ ಲೋಕ ಸಂಚಾರ ನಡೆಸ್ತಾನಂತೆ. ಭಕ್ತರ ಮನೆಗಳಿಗೆ ತೆರಳಿ, ಅವರಿಗೆ ದರ್ಶನ ನೀಡ್ತಾನಂತೆ.. ಅದ್ರಲ್ಲೂ ತನ್ನ ದರ್ಶನಕ್ಕಾಗಿ ಕ್ಯೂನಲ್ಲಿ ಕಾದು ಕುಳಿತಿರೋ ಭಕ್ತರ ಬಳಿಗೆ  ಬಂದು, ಅವರಿಗೆ ಆಶೀರ್ವದಿಸ್ತಾನಂತೆ..

ಹೀಗೆ ಹೀಗೆ ಲೋಕ ಸಂಚಾರ ನಡೆಸಿದ ತಿರುಪತಿ ಗಿರಿವಾಸ ಬೆಳಿಗ್ಗೆ 3 ಗಂಟೆಯೊಳಗೆ ವಾಪಸ್ ತಿರುಮಲಕ್ಕೆ ಬಂದು, ಗರ್ಭಗುಡಿ ಸೇರಿಕೊಳ್ತಾನಂತೆ.. ಆವತ್ತು ತಿಮ್ಮಪ್ಪ ಗರ್ಭಗುಡಿಗೆ ವಾಪಸ್ ಬರುವಾಗ, ದೇವಾಸ್ಥಾನದ ಗಂಟೆ ಸದ್ದು, ತಿಮ್ಮಪ್ಪನನ್ನು ಬರಮಾಡಿಕೊಂಡವು ಅಂತ ಹೇಳಲಾಗ್ತಿದೆ.

ಈ ಎಲ್ಲಾ ಅನುಭವಗಳನ್ನು ತಿಮ್ಮಪ್ಪನ ಭಕ್ತರು ತಮ್ಮ ಬ್ಲಾಗ್​​ನಲ್ಲಿ ಬರೆದುಕೊಂಡಿದ್ದಾರೆ.

ಬೆಳ್ಳಂ ಬೆಳಿಗ್ಗೆ ಅರ್ಚಕನಿಗೆ ಕಾದಿತ್ತು ಅಚ್ಚರಿ..!
ಬ್ರಾಹ್ಮಿ ಮುಹೂರ್ತದಲ್ಲಿ ಭಕ್ತನಿಗೆ ದರ್ಶನ..!

ಸುಮಾರು ನಲವತ್ತು ವರ್ಷಗಳ ಹಿಂದೆ, ಸಾಯಿ ಬಾಬಾನ ವೇಷದಲ್ಲಿ ಬಂದ ಬಾಲಾಜಿ, ಪ್ರಧಾನ ಅರ್ಚಕನಿಗೆ ದರ್ಶನ ಕೊಟ್ಟಿದ್ನಂತೆ. ಆ ಅನುಭವಗಳನ್ನು ಕೂಡ ಕೆಲವರು ಅಂತರ್ಜಾಲದಲ್ಲಿ ಹೇಳಿಕೊಂಡಿದ್ದಾರೆ.

ಅರ್ಚಕ ಪಾದ ಮುಟ್ಟಿದಾಗ ಗೋಚರವಾಯ್ತು ಅಚ್ಚರಿ!
ಕಣ್ಣು ಬಿಟ್ಟು ಭಕ್ತನತ್ತ ನೋಡಿದ ಬಾಲಾಜಿ..!

ಪ್ರತಿ ದಿನದಂತೆ, ತಿಮ್ಮಪ್ಪನ ಪೂಜೆಗೆ ಅಂತ ಅರ್ಚಕರೊಬ್ಬರು ಬೆಳಿಗ್ಗೆ 3 ಗಂಟೆಗೆ ಗರ್ಭಗುಡಿ ಪ್ರವೇಶ ಮಾಡಿದ್ದಾರೆ. ಈ ವೇಳೆ ವಿಗ್ರಹದ ಪಾದವನ್ನು ಮುಟ್ಟಿದಾಕ್ಷಣ, ಅದು ಶಿಲೆಯ ಬದಲು ಮನುಷ್ಯನ ರೂಪ ತಾಳಿತ್ತು ಅಂತ ಹೇಳಲಾಗಿದೆ.

ಅಷ್ಟೇ ಅಲ್ಲ, ನವೆಂಬರ್​​4, 1978 ರಲ್ಲಿ ಭಕ್ತರೊಬ್ಬರು ತಿಮ್ಮಪ್ಪನ ಬಳಿಗೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ, ತಿರುಪತಿಯಲ್ಲಿ ನೆಲೆಸಿರುವ ತಿಮ್ಮಪ್ಪನೇ ಸ್ವತಃ ಕಣ್ಣು ಬಿಟ್ಟು, ಭಕ್ತನನ್ನು ಹರಸಿದ್ದಾನಂತೆ. ಹೀಗಂತ ಭಕ್ತರೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಹೀಗೆ ತಿರುಪತಿಯಲ್ಲಿ ನೆಲೆಸಿರೋ ವೆಂಕಟೇಶ್ವರ, ಕಲಿಯುಗದಲ್ಲೂ ಭಕ್ತರಿಗೆ ದರ್ಶನ ನೀಡ್ತಾ ಇದ್ದಾನೆ.. ಆಗಾಗ ಭಕ್ತರ ಕಣ್ಣಿಗೆ ಕಾಣಿಸಿಕೊಂಡು, ತನ್ನ ಇರುವಿಕೆಯ ಬಗ್ಗೆ ಸೂಚನೆ ನೀಡ್ತಿದ್ದಾನೆ..

ಇಷ್ಟೇ ಅಲ್ಲ.. ವೈಂಕುಂಠ ಏಕಾದಶಿ ದಿನ ಕಾಣಿಸಿಕೊಂಡ ಚಂದ್ರನಲ್ಲೂ ಒಂದು ವಿಚಿತ್ರ ಆಕಾರ ಗೋಚರವಾಗಿದೆ. ತಿರುಮಲದಲ್ಲಿರುವ ಏಳು ಬೆಟ್ಟದಲ್ಲೂ ತಿಮ್ಮಪ್ಪನ ಇರುವಿಕೆ ಕಾಣಿಸುತ್ತೆ.. 
----------------------------------------------------

ಅದು ಏಕಾದಶಿಯ ದಿನ.. ತಿರುಪತಿಗೆ ತೆರಳಿದ್ದ ಭಕ್ತರು, ಹಾಗೇನೇ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಣ ಮಾಡ್ತಿದ್ರು.. ಆಗ ಚಂದ್ರನಿಗೆ ಒಂಚೂರು ಜೂಮ್ಹಾಕಿದ್ರು.. ಆಗ ಚಂದ್ರನ ಮೇಲ್ಮೈಲೆ ಒಂದು ವಿಚಿತ್ರ ಗೋಚರವಾಯ್ತು.. 

ತಿರುಪತಿಯ ಬಾಲಾಜಿ ಕಲಿಯುಗದಲ್ಲೂ ಭಕ್ತರಿಗೆ ಕಾಣಿಸಿಕೊಳ್ತಿದ್ದಾನೆ. ಆಗಾಗ ಕೆಲವು ವಿಸ್ಮಯಗಳನ್ನು ಸೃಷ್ಟಿಸಿ, ತನ್ನ ಇರುವಿಕೆಯನ್ನು ನರಮಾನವರಿಗೆ ತಿಳಿಸ್ತಾ ಇದ್ದಾನೆ. ಇದಕ್ಕೆ ಪುಷ್ಠಿ ನೀಡುವಂತೆ ಹಲವು ಘಟನೆಗಳು ನಡೆದಿವೆ. ಇದರ ಸಾಲಿಗೆ ಮತ್ತೊಂದು ಘಟನೆ ಕೂಡ ಸೇರ್ಪಡೆಗೊಂಡಿದೆ. ಅದೇ ವೈಕುಂಠ ಏಕಾದಶಿಯಂದು ಕಾಣಿಸಿಕೊಂಡ ಚಂದ್ರನ ಆಕಾರ..

ತಿರುಪತಿಗೆ ಬರ್ತಾ ಇದ್ದ ಭಕ್ತರು, ತಮ್ಮ ಪ್ರಯಾಣವನ್ನು ಮೊಬೈಲ್​ನಲ್ಲಿ ಚಿತ್ರೀಕರಣ ಮಾಡ್ತಾ ಇದ್ರು.. ಈ ವೇಳೆ ಭೂಮಿಯ ಮೇಲೆ ಬೆಳದಿಂಗಳು ಚೆಲ್ತಾ ಇದ್ದ ಚಂದಿರನ ರೂಪ ಕಂಡಿದೆ. ಹಾಗೆ ನೋಡ್ತಾ ಇರಬೇಕಾದ್ರೆ, ಆ ಚಂದ್ರನಲ್ಲಿ ಒಂದು ವಿಚಿತ್ರ ಆಕಾರ ಕಾಣಿಸಿಕೊಂಡಿದೆ. ಚಂದ್ರನ ಮೇಲ್ಮೈ ಮೇಲೆ ಕಾಣಿಸಿಕೊಂಡ ಆ ಆಕಾರ ಏನು ಅಂತ ಜೂಮ್ ಹಾಕಿ ನೋಡಿದ್ರೆ, ಅಲ್ಲಿ ಒಂದು ಅಚ್ಚರಿ ಎದುರಾಗಿತ್ತು..

ತಿಮ್ಮಪ್ಪನಿಗೆ ಪ್ರಿಯವಾದ ಆ ದಿನದಂದು, ಚಂದ್ರನ ಮೇಲ್ಮೈ ಮೇಲೆ ಓಂ ಆಕಾರ ಕಾಣಿಸ್ತಿತ್ತು..

ನೋಡಿದ್ರಲ್ಲಾ.. ತಿರುಪತಿ ತಿಮ್ಮಪ್ಪನ ಅಂಗಳದಲ್ಲಿ, ಏನೆಲ್ಲಾ ವಿಸ್ಮಯಗಳು ಕಾಣಿಸಿಕೊಳ್ತಿವೆ ಅಂತ.. ಚಂದ್ರನಲ್ಲಿ ವಿಚಿತ್ರ ಆಕಾರ ಕಾಣಿಸಿಕೊಳ್ತಿರೋದು ಇದೇ ಮೊದಲೇನಲ್ಲ.. ಈ ಹಿಂದೆ ಚಂದ್ರನ ಮೇಲೆ ಮೂರು ಬಿಳಿ ಪಟ್ಟೆಗಳು ಕಾಣಿಸಿಕೊಂಡಿದ್ದವು.. ಅದು ದೇವರಿಗೆ ವಿಭೂತಿ ಹಚ್ಚಿದ ರೀತಿಯಲ್ಲಿತ್ತು.. ಅದು ಕೂಡ ತಿರುಮಲದಲ್ಲಿ ನಡೀತಿರೋ ವಿಸ್ಮಯಗಳಲ್ಲಿ ಒಂದು..

ತಿರುಮಲದ ಬೆಟ್ಟದಲ್ಲೂ ಅಡಗಿದೆ ವಿಸ್ಮಯ..!
ಏಳು ಬೆಟ್ಟದಲ್ಲೂ ಕಾಣಿಸುತ್ತೆ ತಿಮ್ಮಪ್ಪನ ಇರುವಿಕೆ

ಇನ್ನು ತಿರುಮಲದ ಏಳು ಬೆಟ್ಟಗಳಲ್ಲೂ ಕೂಡ, ತಿಮ್ಮಪ್ಪನ ಅಸ್ತಿತ್ವ ಕಾಣಿಸುತ್ತೆ. ಏಳು ಬೆಟ್ಟಗಳನ್ನು ಒಂದು ಆಂಗಲ್​ನಲ್ಲಿ ನೋಡಿದ್ರೆ, ಅದ್ರಲ್ಲಿ ತಿರುಪತಿ ತಿಮ್ಮಪ್ಪನ ಮುಖ ಕಾಣಿಸುತ್ತೆ..

ಈ ಚಿತ್ರ ನೋಡಿ. ಇದ್ರಲ್ಲಿ ತಿಮ್ಮಪ್ಪನ ಹಣೆ, ಆತನ ಹಣೆಯ ಮೇಲಿರುವ ನಾಮ, ಕಣ್ಣುಗಳಂತೆ ಕಾಣುವ ಆಕಾರ, ಮೂಗು ಮತ್ತು ತುಟಿ ಎಲ್ಲವೂ ಅಚ್ಚುಕಟ್ಟಾಗಿ ಕಾಣಿಸುತ್ತೆ.. ಇದನ್ನು ನೋಡಿದ್ರೆ, ತಿರುಮಲದ ಈ ಏಳು ಬೆಟ್ಟಗಳಲ್ಲೂ ತಿಮ್ಮಪ್ಪನ ಅಸ್ತಿತ್ವ ಇದೆ ಅನ್ನೋದು ಸ್ಪಷ್ಟವಾಗುತ್ತೆ..

ಭಕ್ತರ ಮನೆಯಲ್ಲಿ ವಿಸ್ಮಯ ಸೃಷ್ಟಿಸಿ ಬಾಲಾಜಿ
ಪೂಜೆಗಿಟ್ಟಿದ್ದ ನೈವೇದ್ಯ ಇದ್ದಕ್ಕಿದ್ದಂತೆ ಮಾಯ..!

ಇಷ್ಟೇ ಅಲ್ಲ, ದೇವರ ಮನೆಯಲ್ಲಿ ಈ ಬಾಲಾಜಿಯನ್ನು ಪೂಜಿಸಿ, ನೈವೇದ್ಯೆ ಮಾಡಿದ ನಂತರ, ಅದನ್ನು ತಿಂದಿರೋ ಕೆಲವು ವಿಚಿತ್ರ ಘಟನೆಗಳೂ ನಡೆದಿವೆಯಂತೆ.. 

ನೈವೇದ್ಯಕ್ಕೆ ಇಡಲಾಗಿದ್ದ ಬಾಳೆ ಹಣ್ಣು ಅರ್ಧ ಖಾಲಿಯಾಗಿದೆ. ಬೊಟ್ಟಲು ತುಂಬ ಇಡಲಾಗಿದ್ದ ಅನ್ನದಲ್ಲಿ ಒಂದು ಸ್ಪೂನ್​​ ಖಾಲಿಯಾಗಿದೆ. ಬ್ರೆಡ್ಮೇಲೆ ಓಂ ಆಕಾರ ಮತ್ತು ತ್ರಿಶೂಲದ ಆಕಾರಗಳು ಕಾಣಿಸಿಕೊಂಡಿದ್ದು, ವಿಚಿತ್ರವನ್ನು ಸೃಷ್ಟಿಸಿವೆ. ಇವೆಲ್ಲಾ ನೋಡಿದರೆ, ಇದು ಕನಸೋ ನನಸೋ ಅನ್ನೋದೇ ಗೊತ್ತಾಗೋದಿಲ್ಲ.. ನಂಬಬೇಕಾ ಬಿಡ್ಬೇಕಾ ಅನ್ನೋದು ಕೂಡ ತಿಳಿಯೋದಿಲ್ಲ.. ಆದ್ರೆ, ಪರಮ ಭಕ್ತನಿಗೆ ಕಾಣಿಸಿಕೊಳ್ಳೋ ತಿಮ್ಮಪ್ಪ, ಆಗಿಂದಾಗೆ ಇಂಥ ಅಚ್ಚರಿಗಳನ್ನು ಸೃಷ್ಟಿಸುವ ಮೂಲಕ, ನಿಬ್ಬೆರಗಾಗುವಂತೆ ಮಾಡ್ತಾ ಇದ್ದಾನೆ.

ಇಂಥಾ ಹತ್ತಾರು ವಿಸ್ಮಯಗಳನ್ನು, ವಿಚಿತ್ರಗಳನ್ನು ಸೃಷ್ಟಿಸೋ ಮೂಲಕ, ತನ್ನ ಇರುವಿಕೆಯನ್ನು ತೋರಿಸ್ತಿದ್ದಾನೆ ತಿರುಪತಿ ತಿಮ್ಮಪ್ಪ.. ಈ ಕಲಿಯುಗದಲ್ಲೂ ಭಕ್ತರಿಗೆ ದರ್ಶನ ನೀಡುವ ಮೂಲಕ, ಬೇಡಿ ಬಂದ ಭಕ್ತರ ಕಷ್ಟಗಳನ್ನು ಈಡೇರಿಸ್ತಿದ್ದಾನೆ. ಹೀಗಾಗಿನೇ, ದಿನ ನಿತ್ಯ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗ್ತಾ ಇದೆ.

ಕೇಳಿದ್ದನ್ನು ಕೊಡೋ ಕಲಿಯುಗ ಕಾಮಧೇನುವಿನ ದರ್ಶನ ಪಡೆಯೋಕೆ, ಪ್ರತಿ ನಿತ್ಯವೂ ಲಕ್ಷಾಂತರ ಮಂದಿ ಭಕ್ತರು ಬರ್ತಾ ಇದ್ದಾರೆ. ಮೂರು ನಾಲ್ಕು ದಿನಗಳ ಕಾಲ ಕ್ಯೂನಲ್ಲಿ ನಿಂತು ತಿಮ್ಮಪ್ಪನ ದರ್ಶನ ಪಡೀತಿದ್ದಾರೆ. ಆ ಮೂಲಕ, ತಮ್ಮ ಕಷ್ಟನಷ್ಟಗಳನ್ನು ಪರಿಹರಿಸಪ್ಪಾ ಅಂತ ತಿಮ್ಮಪ್ಪನಲ್ಲಿ ಬೇಡಿಕೊಳ್ತಿದ್ದಾರೆ. ಬೇಡದವರಿಗೆ ಆಶೀರ್ವಾದ ನೀಡೋ ತಿಮ್ಮಪ್ಪ, ಕೆಲವರಿಗೆ ಮಾತ್ರ ಪ್ರತ್ಯಕ್ಷವಾಗಿ ಕಾಣಿಸಿಕೊಂಡು ದರ್ಶನ ನೀಡ್ತಿದ್ದಾನಂತೆ. ಹೀಗಂತ ಇಲ್ಲಿನ ಭಕ್ತರು ಹತ್ತಾರು ಕಥೆಗಳನ್ನು ಹೇಳ್ತಿದ್ದಾರೆ. ಭಕ್ತರು ಹೇಳೋದನ್ನು ಕೇಳಿದ್ರೆ, ಇದೆಲ್ಲಾ ನಿಜಾನಾ..? ಅಥವ ಕೇಲವ ಭ್ರಮೇನಾ ಅನ್ನೋ ಹತ್ತಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತವೆ. ಆದ್ರೆ. ಕಂಡವರಿಗೆ ಮಾತ್ರವೇ ಗೊತ್ತು, ಭಗವಂತನ ಮಹಿಮೆ.. ಪರಮ ಬಕ್ತರಿಗೆ ಮಾತ್ರ ಇಂಥ ಅನುಭವಗಳಾಗುತ್ತವೆ. ಎಲ್ಲರಿಗೂ ಭಗವಂತನ ದರ್ಶನವಾಗಲೀ, ಆತನ ಇರುವಿಕೆಯ ಅನುಭವವಾಗಲೀ ಆಗೋದಿಲ್ಲ ಅನ್ನೋದು ಮತ್ತೆ ಕೆಲವರ ವಾದ..

ನೋಡಿದ್ರಲ್ಲಾ.. ಈ ಕಲಿಯುಗದಲ್ಲೂ ತಿಮ್ಮಪ್ಪ ಏನೆಲ್ಲಾ ಪವಾಡಗಳನ್ನು ಸೃಷ್ಟಿಸ್ತಿದ್ದಾನೆ ಅಂತ.. ಮಾತು ಬಾರದ ಹುಡುಗ ಮಾತನಾಡ್ತಾನೆ ಅಂದ್ರೆ, ಅದು ಸಾಮಾನ್ಯವಾದ ವಿಷಯ ಅಲ್ಲ.. ಚಂದ್ರನಲ್ಲಿ ಓಂಕಾರ ಕಾಣಿಸಿಕೊಳ್ಳೋದು, ರಾತ್ರಿ ಸಮಯದಲ್ಲಿ, ದೇವಾಲಯದ ಗಂಟೆಗಳು ಇದ್ದಕ್ಕಿದ್ದಂತೆ ಹೊಡೆದುಕೊಳ್ಳೋದು, ಎಲ್ಲವೂ ನಮ್ಮ ಊಹೆಗೂ ಮೀರಿದ್ದು.. ಇವೆಲ್ಲವೂ ತಿಮ್ಮಪ್ಪನ ಇರುವಿಕೆಯನ್ನು ಸಾರಿ ಹೇಳುತ್ತವೆ ಅನ್ನೋದು ಸಂಪ್ರದಾಯವಾದಿಗಳ ಅಂಬೋಣ..

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು