Recent Movies

ಸಿನೆಮಾ

Share This Article To your Friends

Showing posts with label ದೆವ್ವ-ಭೂತಗಳ ಕಥೆ. Show all posts
Showing posts with label ದೆವ್ವ-ಭೂತಗಳ ಕಥೆ. Show all posts

ನಮ್ಮೂರಿನ ದಾರಿಯಲ್ಲಿ ಅಡ್ಡ ಬಂದವರು ಯಾರು?


ಆವತ್ತು ಅಮವಾಸೆ ರಾತ್ರಿ......... ಸಂತೆ ಮುಗಿಸ್ಕೊಂಡು ಬಸ್ಸು ಹತ್ತಿ ನಮ್ಮೂರಿನ ಕ್ರಾಸ್ ವರೆಗೆ ಬಂದೆ........... ಆ ಕ್ರಾಸ್ ನಿಂದ ನಮ್ಮೂರಿಗೆ ಮೂರು ಕಿಲೋಮೀಟ್ರು ಕತ್ತಲಲ್ಲಿ ನಡ್ಕೋಂಡ್ ಹೋಗ್ಬೇಕು.. ಅಲ್ಲಿಂದ ನಾನು ನಡ್ಕೋಂಡು ಬರ್ತಾ ಇದ್ದೆ.... ಜೋರಾಗಿ ಗಾಳಿ ಬೀಸ್ತಾ ಇತ್ತು.......... ನಾಯಿಗಳೆಲ್ಲಾ ಕೂಗ್ತಾ ಇದ್ವು.......  ಆ ರೋಡಲ್ಲಿ,, ಯಾರ್ ಯಾರಿಗೋ ದೆವ್ವಗಳು ಕಾಣಿಸಿಕೊಂಡಿವೆ ಅಂತ ಜನ ಮಾತಾಡ್ಕೋತಾ ಇದ್ರು..... ಕೆಲವರಿಗೆ ಎಮ್ಮೇ ಥರ ಕಾಣಿಸಿಕೊಂಡಿತ್ತಂತೆ....... ಮತ್ತೆ ಕೆಲವರಿಗೆ ಕಪ್ಪೆ ಥರ ಕಾಣಿಸಿತ್ತಂತೆ..... ಆದ್ರೆ ಕೆಲವರಿಗೆ ಮಾತ್ರ ಬರೀ ದೆವ್ವದ ಧ್ವನಿ ಮಾತ್ರ ಕೇಳಿಸಿದ್ಯಂತೆ......... ಒಂದೊಂದ್ಸಲ ಎಲ್ಲೋ ದೂರದಲ್ಲಿ ಯಾರೋ ಹೆಣ್ಮಗಳು ಅಳೋ ಥರ ಕೇಳಿಸುತ್ತಂತೆ....... ಹತ್ರ ಹೋದ್ರೆ ಸಾಕು, ಇದ್ದಕ್ಕಿದ್ದಂತೆ ಜೋರಾಗಿ ನಗೋ ಶಬ್ಧ ಕೇಳ್‌ಸುತ್ತಂತೆ...

ಎಷ್ಟೋಸಲ ರಾತ್ರೋ ರಾತ್ರಿ ನಾನ್ ಒಬ್ಬಳೇ ಈ ರೋಡಲ್ಲಿ ಓಡಾಡಿದ್ದೆ... ಏನೂ ಅನಿಸಿರಲಿಲ್ಲ..... ಆದ್ರೆ ಆವತ್ತು ಅಮವಾಸೆ ಆಗಿದ್ರಿಂದ ಈ ಕಥೆಗಳು ಥಟ್ ಅಂತ ನೆನಪಾಯ್ತು....... ಈ ಕಥೆಗಳು ನೆನಪಾದ ತಕ್ಷಣ ಸ್ವಲ್ಪ ಭಯ ಶುರುವಾಯ್ತು... ಭಯ ಪಡದೇ ನಡ್ಕೊಂಡು ಹೋಗ್ತಾ ಇದ್ದೆ..... ಸ್ವಲ್ಪ ದೂರ ಹೋದ ತಕ್ಷಣ ಯಾರೋ ಅಳ್ತಾ ಇರೋ ಶಬ್ಧ ಕೇಳಿಸ್ತು... ಒಂದ್ ಕ್ಷಣ ಎದೆ ಝಲ್ ಅಂತು...... ಅದು ದೆವ್ವಾನೇ....... ನಾನು ಭಯಡದೇ ಯಾರು ಅಂತ ಕೂಗಿದೆ.... ತಕ್ಷಣ ಆ ಅಳು ನಿಂತೋಯ್ತು..... ನಾನು ಹಾಗೇ ಮುಂದೆ ನಡ್ಕೊಂಡು ಹೋಗ್ತಾ ಇದ್ದೆ.. ಎಮ್ಮೇ ಅಡ್ಡ ಬಂತು... ಮಧ್ಯ ದಾರೀಲಿ ನಿಂತ್ಕೊಂತು... ಅದೇ ಸಮಯಕ್ಕೆ ಸರಿಯಾಗಿ ಕತ್ತಲಲ್ಲಿ ಯಾರೋ ನಡ್ಕೊಂಡು ಬರ್ತಿರೋ ಸೌಂಡು.... ಅದು ಇನ್ನೊಂದು ದೆವ್ವ ಅಂತ ನಂಗೆ ಗೊತ್ತಾಯ್ತು.. ಅವತ್ತು ಅಮವಾಸೆ ಆಗಿದ್ರಿಂದ ಇರೋಬರೋ ದೆವ್ವಗಳು ನನ್ನನ್ನು ಸುತ್ತುಕೊಳ್ತಾ ಇವೆ ಅಂತ ನಂಗ್ ಗೊತ್ತಾಯ್ತು.. ಆ ಕಡೆಯಿಂದ ಬರ್ತಾ ಇರೋ ವ್ಯಕ್ತಿ ಆ ಎಮ್ಮೇ ಹತ್ರ ಬಂದು.. ನಡೀ.. ಹೋಗೋರಿಗೆ ದಾರಿ ಬಿಡು.. ತೊಂದ್ರೆ ಕೊಡ್ಬೇಡ ಅಂತ ಹೇಳಿದ.. ಆ ಎಮ್ಮೆ ದೆವ್ವ ಎದ್ದು ಪಕ್ಕಕ್ಕೆ ಹೋಯ್ತು.. ಆದ್ರೆ ಮನುಷ್ಯ ರೂಪದಲ್ಲಿರೋ ದೆವ್ವ ನನ್ ಕಡೇನೇ ಬರ್ತಾ ಇತ್ತು.....

 ನೋಡೋಕೆ ಕರ್ರಗೆ ಇತ್ತು....... ಭಯಾನಕವಾಗಿತ್ತು........ ಅದು ನನ್ ಕಡೆ ಬರ್ತಿದ್ರೆ ನನ್ ಎದೆ ಬಡಿತ ಜಾಸ್ತಿ ಆಗ್ತಾ ಇತ್ತು....... ಅದು ನನ್ ಎದುರಿಗೆ ಬಂದು ನಿಂತು ಜೋರಾಗಿ ನಗೋಕೆ ಶುರು ಮಾಡಿತು...... ನಾನು ಕಿಟಾರನೆ ಕಿರುಚಿಕೊಂಡು ಓಡೋಕೆ ಶುರು ಮಾಡಿದೆ..... ಅದು ನನ್ನ ಹಿಂದೆ ಓಡಿ ಬರ್ತಾ ಇತ್ತು...... ನಾನು ಓಡಿ, ಓಡಿ ನನ್ನ ಮನೆ ಹತ್ರ ಬಂದೆ.. ಆದ್ರೂ ಅದು ನನ್ನ ಹಿಂದೇನೇ ಬರ್ತಾ ಇತ್ತು.... ನಾನು ಜೋರಾಗಿ “ಬಾರೋ.. ಬಾ.. ಹೇ ದೆವ್ವ.. ನನ್ ಗಂಡ ಒಳಗಿದ್ದಾನೆ.. ಅವನಿಗೆ ಮಂತ್ರ ತಂತ್ರ ಎಲ್ಲಾ ಗೊತ್ತು.. ನಿನ್ ಆಟ ಏನೂ ನಡಿಯಲ್ಲ... ಬಾ.. ಅಂತ ಜೋರಾಗಿ ಕೂಗಿ ಹೇಳಿದೆ... ಆ ದೆವ್ವ ಇನ್ನಷ್ಟು ಜೋರಾಗಿ ನಗೋಕೆ ಶುರು ಮಾಡ್ತು... ನಿಧಾನವಾಗಿ ನನ್ನ ಹತ್ತಿರ ಬಂತು..... “ಲೇ ನಾನೇ ಕಣೆ ನಿನ್ ಗಂಡ.... ರಾತ್ರಿ ಆದ್ರೂ ನೀನ್ ನೀನ್ ಬರ್ಲಿಲ್ಲ.. ಅದಿಕ್ಕೆ ಹುಡುಕೊಂಡು ಬಂದೆ.. ನೀನು ನನ್ನನ್ನೇ ನೋಡಿ ಹೆದರ್ಕೊಂಡು ಓಡ್ತಿದ್ಯಲ್ವೇ..” ಅಂತ ಅಂದ... ಅಬ್ಬಾ.. ಒಂದು ಕ್ಷಣ ಜೀವವೇ ಝಲ್ ಅಂದಿತ್ತು ನನಗೆ.. ಅವತ್ತಿಂದ ನನ್ ಗಂಡನಿಗೆ ರಾತ್ರಿ ಎಲ್ಲೂ ಓಡಾಡ್ಬೇಡಿ ಅಂತ ಹೇಳಿದ್ದೀನಿ..

ನಾಯಿ ಬೊಗಳಿತು.. ಹೆಣ ಉರುಳಿತು..!!


ನಾನು ಅವತ್ತು ಮನೇಲಿ ಒಬ್ಳೆ ಮಲಗಿದ್ದೆ.......  ಬೆಕ್ಕು ಇದ್ದಕ್ಕಿದ್ದಂಗೆ ಕೂಗೋಕೆ ಶುರು ಮಾಡ್ತು...... ನಂಗೆ ಎಚ್ಚರ ಆಯ್ತು..... ಮನೇಲಿರೋ ಬೆಕ್ಕು ಕೂಗ್ತಾ ಇದೆ ಅಂತ ನಾನು ಸುಮ್ಮನಾದೆ..... ನಂಗೆ ಇನ್ನೇನು ನಿದ್ದೆ ಬರೋ ಟೈಮು........... ಅಷ್ಟರಲ್ಲೇ ನಾಯಿ ಬೊಗಳೋಕೆ ಶುರು ಮಾಡ್ತು.... ನಂಗೆ ಎಚ್ಚರ ಆಗಿ ಹೊರಗೆ ಬಂದು ನೋಡಿದೆ.. ಆಕಡೆಯಿಂದ ಈ ಕಡೆಗೆ.. ಈ ಕಡೆಯಿಂದ ಅಕಡೆಗೆ ನಾಯಿ ಓಡಾಡ್ತಾ... ಬೊಗಳ್ತಾ ಇತ್ತು..... ನಾನು ಎಷ್ಟೇ ಕೂಗಿದ್ರೂ ಅದು ಬೊಗಳೋದು ಮಾತ್ರ ನಿಲ್ಲಿಸಲಿಲ್ಲ... ಇದ್ದಕ್ಕಿದ್ದಂಗೆ ಎಲ್ಲೋ ಹಾಡ್ ಕೇಳಿಸ್ತಾ ಇತ್ತು.. incharave song..  ಯಾರೋ ಹುಡುಗಿ ನಮ್ಮ ಮನೆ ಮುಂದಿದ್ದ ತೋಟದಲ್ಲಿ ಹಾಡೇಳ್ಕೊಂಡು.. ಕುಣ್ಕೊಂಡು.. ಹೂ ಕೀಳ್ತಾ ಇದ್ಳು....!!
 
 ಅವಳನ್ನು ನೋಡಿದ ತಕ್ಷಣ ಗಂಟಲು ಒಣಗೋಗ್ಬಿಟ್ತು.. ಆ ಹೂಗಳನ್ನು ಕಿತ್ಕೊಂಡು ಮನೆ ಮುಂದಿದ್ದ ಮಾವಿನ ಗಿಡದ ಹತ್ರ ಹೋದ್ಳು... ಆ ಮರದ ಹತ್ರ ಹೂಗಳನ್ನು ಇಟ್ಟು ಅಳೋಕೆ ಶುರು ಮಾಡಿದ್ಳು........ ನಮ್ಮ ಮನೆ ನಾಯಿ ಆ ಮಾವಿನ ಮರದ ಹತ್ರ ಹೋಗಿ ಅಲ್ಲಿ ಮಣ್ಣನ್ನ ತಗೀತಾ ಇತ್ತು.. 

ಆ ಹುಡುಗಿ ನಮ್ಮ ನಾಯಿಗೆ ಒಂದು ಮುತ್ತು ಕೊಟ್ಟು ಥ್ಯಾಂಕ್ಸ್ ಹೇಳಿದ್ಳು...!!

ನಾಯಿ ತೆಗೆದಿದ್ದ ಗುಂಡಿಯಲ್ಲೇ ಮಲಗಿಬಿಟ್ಳು..... ಅದಾದ್ಮೇಲೆ ನಮ್ಮ ನಾಯಿ ಆ ಗುಂಡಿ ಹತ್ರ ಕೂತ್ಕೊಂಡು ಬೊಗಳೋಕೆ ಶುರು ಮಾಡ್ತು.... ನಾನು ಬ್ಯಾಟ್ರಿ ಹಿಡ್ಕೊಂಡು ಆ ಮಾವಿನ ಮರದ ಹತ್ರ ಹೋದೆ... ಟಾಮಿ  ಏನ್ ಮಾಡ್ತಿದ್ಯಾ.. ಹಿಂಗ್ಯಾಕ್ ಕೂಗ್ತಾ ಇದ್ಯಾ..?? ಬಾ ಒಳಗೆ.. ಇಲ್ಲಿ ದೆವ್ವ ಇದೆ.. ಅಂತ ಹೇಳ್ದೆ... ಅದಕ್ಕೆ ನಮ್ಮ ನಾಯಿ ನನ್ ಕಡೆ ಮುಖ ತಿರುಗಿಸಿ ದುರುಗುಟ್ಕೊಂಡು ನೋಡಿತು... “ಯಾರೇ ದೆವ್ವ... ಅವಳು ನನ್ ಹುಡುಗಿ.. ನಾವಿಬ್ರೂ ಇಂಟರ್ ಕ್ಯಾಸ್ಟ್ ಮದ್ವೆ ಆದ್ವಿ ಅಂತ,,   ನಿಮ್ಮಪ್ಪ ಚೇರ್ಮೆನ್ ಕಾಳಪ್ಪ ನನ್ನೂ ಅವಳನ್ನು ನಡು ರೋಡಲ್ಲಿ ನಿಲ್ಸಿ ಕರುಣೇನೇ ಇಲ್ದೇ ಕೊಂದ್ಬಿಟ್ಟ... ನನ್ನ ಊರಾಚೆ ಇರೋ ಹಾಳ್ ಬಾವೀಗ್ ಬಿಸಾಕಿ, ಅವಳನ್ನು ಇದೇ ಮರದ ಕೆಳಗೆ ಹೂತಾಕ್ದ.... ಅವಳು ಈಗ್ಲೂ ಅಂತರ ಪಿಶಾಚಿಯಾಗಿ ಅಲೀತಿದ್ದಾಳೆ.. ಅದ್ರೆ ನಾನು ನಾಯಿ ಜನ್ಮ ಪಡ್ಕೊಂಡು ಮತ್ತೆ ಈ ಭೂಮೀಗ್ ಬಂದಿದ್ದೀನಿ... ನಿಮ್ಮಪ್ಪನ್ ಸಾಯಿಸೋಕೆ... ನಮ್ಮಿಬ್ರನ್ನು ಯಾವ್ ಜಾಗದಲ್ಲಿ.. ಯಾವ್ ದಿನ ಸಾಯಿಸಿದ್ನೋ.. ಅದೇ ದಿನ.. ಅದೇ ಜಾಗದಲ್ಲಿ ನಿಮ್ಮಪ್ಪನ್ನ ಸಾಯಿಸ್ಬೇಕು ಅಂತ ಕಾಯ್ತಿದ್ದೀವಿ ಕಣೆ,... ಹೋಗು.. ಹೋಗೇ... ತಾಕತ್ತಿದ್ರೆ ನಿಮ್ಮಪ್ಪನ್ನ ಬದುಕಿಸ್ಕೋ ಹೋಗು.... ಬೌ.......

ದೆವ್ವ ಕೆಮ್ಮಿದಾಗ..!


    ನಾನು ಲತಾ.... ನಮ್ ತಾತಾಗೆ ಕೆಮ್ಮು ಇತ್ತು...... ಸಾಯೋ ಟೈಮಲ್ಲೂ ಕೂಡ ಕೆಮ್ಮು ಅವರನ್ನು ಕಾಡ್ತಾ ಇತ್ತು........... ಉಸಿರಾಡೋಕು ಕಷ್ಟ ಪಡ್ತಾ ಇದ್ರು.......... ಆದ್ರೆ ಅವರು ತೀರ್ ಹೋದ್ಮೇಲೂ ಕೂಡ ಅವರ ರೂಮಿಂದ ಅದೇ ಥರದ ಕೆಮ್ಮೋ ಸೌಂಡ್ ನ  ನಾನು ತುಂಬಾ ಸಲ ಕೇಳಿದ್ದೀನಿ..... ನಮ್ಮನೇಲಿ ರಾತ್ರಿ ಹತ್ ಗಂಟೆ ಆದ್ರೆ ಸಾಕು.. ಎಲ್ರೂ ಮಲಗಿಬಿಡ್ತಾರೆ... ಆದ್ರೆ ಹನ್ನೊಂದ್ ಗಂಟೆಗೆ ಸರಿಯಾಗಿ ತಾತನ ರೂಮಿನಿಂದ ಕೆಮ್ಮೋ ಶಬ್ಧ ಕೇಳಿಸುತ್ತೆ.......
 
 ಅದು ನಮ್ಮನೇಲಿ ಯಾರಿಗೆ ಕೇಳಿಸ್ತಿತ್ತೋ.. ಬಿಡ್ತಿತ್ತೋ ಗೊತ್ತಿಲ್ಲ... ಆದ್ರೆ ನನಗೆ ಮಾತ್ರ ಪಕ್ಕಾ ಕೇಳಿಸ್ತಾ ಇತ್ತು...... ಅವರು ಕೆಮ್ಮೋದು ಕೇಳಿ ನನಗೆ ಎಚ್ಚರ ಆಗ್ತಾ ಇತ್ತು...... ಲತಾ... ಒಂದ್ ಲೋಟ ನೀರ್ ತಗೋಂಡ್ ಬಾರಮ್ಮ ಅಂತ ತಾತ ನನಗೆ ಹೇಳ್ತಿದ್ರು... ಆ ಟೈಮಲ್ಲಿ ನಂಗೆ ಏನೂ ಗೊತ್ತಾಗ್ತಿರಲಿಲ್ಲ... ನಾನು ಮಾಮೂಲಿಯಾಗಿ ನೀರ್ ತಗೊಂಡ್ ಬರ್ತಾ ಇದ್ದೆ....... ಆದ್ರೆ ರೂಮ್ ಹತ್ರ ಬಂದ್ ತಕ್ಷಣ “ಒಳಗೆ ಬರ್ಬೇಡಮ್ಮ... ಅಲ್ಲೇ ಬಾಗ್ಲಲ್ಲಿ ಇಟ್ ಹೋಗು.. ನಾನು ಕುಡೀತೀನಿ ಅಂತ ಹೇಳ್ತಿದ್ರು ತಾತಾ....... ನಾನ್ ಹೋದ್ಮೇಲೆ ಅವ್ರು ನೀರ್ ಕುಡೀತಾ ಇದ್ರು..... ಬೆಳಿಗ್ಗೆ ಎದ್ದು ನೋಡಿದ್ರೆ ತಾತನ ರೂಮಿನ ಬಾಗಿಲಲ್ಲಿ ನಾನು ಇಟ್ಟ ನೀರಿನ ಲೋಟ ಹಾಗೇ ಇರ್ತಾ ಇತ್ತು........  ಆದ್ರೆ ಅದ್ರಲ್ಲಿರೋ ನೀರು ಮಾತ್ರ ಖಾಲಿಯಾಗಿರ್ತಾ ಇತ್ತು......

 ನಮ್ಮ ತಾತನ ಪುಣ್ಯ ತಿಥಿ ದಿನ, ಅವರಿಗೆ ಇಷ್ಟ ಅಂತ ಅಮ್ಮ ಪಾಯಸ ಮಾಡ್ತಿದ್ರು.. ನಾನು ಅಡಿಗೆ ಮನೇಲಿ ತರಕಾರಿ ಕಟ್ ಮಾಡ್ತಾ ಇದ್ದೆ... ಅಮ್ಮ ಹಾಲು ತರ್ತೀನಿ ನೋಡ್ಕೋ ಅಂತ ಅಂಗಡಿಗೆ ಹೋದ್ರು........ ನಾನು ತಲೆ ತಗ್ಗಿಸಿಕೊಂಡು ತರಕಾರಿ ಕಟ್ ಮಾಡ್ತಾ ಇದ್ದೆ.. ಇದ್ದಕ್ಕಿದ್ದಂಗೆ ಆ ಪಾಯಸದ ಮೇಲೆ ಮುಚ್ಚಿದ್ದ ಮುಚ್ಚಳ ಕೆಳಗೆ ಬಿತ್ತು........ ಪಾಯಸದ ಪಾತ್ರೆ ಕೂಡ ಚೆಲ್ಲಿಬಿಟ್ತು.. ಸ್ವಲ್ಪ ಬಿಸಿ ಪಾಯಸ ನನ್ ಮೇಲೂ ಬಿತ್ತು... ನಾನು ಅದನ್ನು ಒರೆಸಿಕೊಳ್ತಾ ಇದ್ದೆ...

 ಆದ್ರೆ ಕೆಳಗೆ ಬಿದ್ದಿದ್ದ ಪಾಯಸ ಸ್ವಲ್ಪ ಸ್ವಲ್ಪ ಖಾಲಿ ಆಗ್ತಾ ಇತ್ತು.. ಅದನ್ನು ಯಾರೋ ನೆಕ್ತಾ ಇರೋ ಹಾಗೆ ಕಾಣಿಸ್ತು... ಯಾಕಂದ್ರೆ ಅಲ್ಲಿ ನಾಲಿಗೆಯಿಂದ ನೆಕ್ಕಿರೋ ಥರ ಎಂಜಲು ಇತ್ತು... ನಾನು ವಿಚಲಿತಳಾಗಿ ಅದನ್ನೇ ನೋಡ್ತಾ ಇದ್ದೆ... ಪಾಯಸ ಪೂರ್ತಿ ಖಾಲಿಯಾದಮೇಲೆ “ಲತಾ.. ನೀರ್ ತಗೊಂಡ್ ಬಾರಮ್ಮ ಅಂತ ಧ್ವನಿ ಕೇಳಿಸಿತು.. ಅದು ತಾತನ ಧ್ವನಿ......!!

ಪಾಯಸ ತಿನ್ನೋವರೆಗೂ ಕೆಮ್ಮೂ ಕೂಡ ಬರಲಿಲ್ಲ.. ಆದ್ರೆ ಪಾಯಸ ತಿಂದ್ ಮೇಲೆ ಕೆಮ್ಮೋಕೆ ಶುರುಮಾಡಿದ್ರು.. ನಾನು ಹೊರಗೆ ಓಡ್ಹೋಗಿ ನಡೆದದ್ದನ್ನೇಲ್ಲಾ ಅಮ್ಮನಿಗೆ ಹೇಳಿದೆ.. ಅಮ್ಮ ಒಳಗೆ ಬಂದು ನೋಡಿದ್ರೆ ಅಲ್ಲಿ ಯಾರೂ ಇರಲಿಲ್ಲ... ಆದ್ರೆ ಪಾಯಸ ಮಾತ್ರ ಖಾಲಿ ಆಗಿತ್ತು.. ಪಾಯಸದ ಪಾತ್ರೆಯನ್ನು ಬೆಕ್ಕು ನೆಕ್ತಾ ಇತ್ತು....... ಅದು ಬೆಕ್ಕು.. ನೀನ್ ಭಯ ಪಟ್ಕೋಬೇಡ ಅಂತ ಅಮ್ಮ ನಂಗ್ ಹೇಳಿದ್ರು..... ಆದ್ರೆ ಅದು ನಿಜ್ವಾಗ್ಲೂ ಬೆಕ್ಕಾಗಿರಲಿಲ್ಲ ಅನ್ನೋದು ನನಗೆ ಮಾತ್ರಾ ಗೊತ್ತಿತ್ತು..

ಸಮಾಧಿಯೊಳಗಿನ ಸತ್ಯ- ಇದು10 ರೂಪಾಯಿ ನೋಟಿನ ನಿಗೂಢತೆ

ಕೆಲವು ತಿಂಗಳುಗಳ ಹಿಂದೆ ನಡೆದ “ಪಾಂಟಿ ಛಡ್ಡಾ” ಕೊಲೆ ಪ್ರಕರಣ ನಿಮಗೆ ಗೊತ್ತಿರಬಹುದು..  ಸಾವಿರಾರು ಕೋಟಿ ಒಡೆಯನಾಗಿದ್ದ ಉತ್ತರ ಪ್ರದೇಶದ ಮಧ್ಯದ ದೊರೆ “ಪಾಂಟಿ ಛಡ್ಡ” ಹಾಡು ಹಗಲೇ ಹೆಣವಾಗಿ ಹೋಗಿದ್ದ.. ಅದೂ ತನ್ನ ಸ್ವಂತ ತಮ್ಮನಿಂದಲೇ.. ಸಾವಿರಾರು ಕೋಟಿಯ ಒಡೆಯನೊಬ್ಬ, ಕೇವಲ ನೂರು ಕೋಟಿ ರೂಪಾಯಿಯ ಜಗಳದಲ್ಲಿ ಬೀದಿ ಹೆಣವಾಗಿ ಹೋಗಿದ್ದ ಅಂದ್ರೆ ಅದು ನಿಜಕ್ಕೂ ದೊಡ್ಡ ದುರಂತ.. ಕೋಟಿ ಕೋಟಿ ಇದ್ದರೂ ಅನುಭವಿಸಲಾಗದೇ ಮಣ್ಣು ಸೇರಿಬಿಟ್ಟರು “ಛಡ್ಡಾ ಬ್ರದರ್ಸ್”, ಹಣವೆಂಬ ಲೋಭ ಆ ಇಬ್ಬರಿಗೂ ಸ್ಮಶಾನದ ದಾರಿಯನ್ನು ತೋರಿಸಿತ್ತು..
ಈ ಕೊಲೆ ವಿಚಾರ ಈಗ್ಯಾಕೆ ಅಂತ ನೀವ್ ಅನ್ನಬಹುದು.. ಈ ಹಣ ಹೆತ್ತ ಸಂಬಂಧವನ್ನೇ ದೂರು ಮಾಡುತ್ತೆ.. ಕರುಳ ಬಳ್ಳಿಯನ್ನೇ ಕತ್ತರಿಸುತ್ತೆ.. ನೋವಿನ ಶೂಲಕ್ಕೆ ಏರಿಸುತ್ತೆ ಅನ್ನೋದನ್ನು ಮತ್ತೆ ಮತ್ತೆ ಸಾಬೀತುಪಡಿಸಿದೆ..
ಈಗ ಹೇಳೋಕೆ ಹೊರಟಿರೋ ಕಥೆ ನಿಜಕ್ಕೂ ಅಚ್ಚರಿಯ ಕಥೆ.. ಆತಂಕವನ್ನು ಹುಟ್ಟಿಸುವ ಕಥೆ.. ಅದೇ ಹತ್ತು ರೂಪಾಯಿಯ ಸುತ್ತಲು ಹೆಣೆದಿರುವ ಕಥೆ..
ಹತ್ತು ರೂಪಾಯಿಯ ನೋಟೊಂದು ಕ್ರೂರತೆಯನ್ನು ಮೆರೆದಿತ್ತು.. ಹೆಣ್ಣಿನ ಕಣ್ಣಲ್ಲಿ ನೀರಿನ ಬದಲಿಗೆ ರಕ್ತವನ್ನೇ ಹರಿಸಿತ್ತು ಅಂದ್ರೆ ನೀವು ನಂಬೋಕೆ ಸಾಧ್ಯಾನೇ ಇಲ್ಲ..
ಆ ಹತ್ತು ರೂಪಾಯಿಯಿಂದ ಆಕೆಯ ಜೀವನ ಆಗಿತ್ತು ತತ್ತರ..
ಅದು ಹೇಗೆ ಅಂತ ತಿಳ್ಕೋಬೇಕು ಅನ್ನೋದು ನಿಮ್ಮ ಕಾತರ..ಅಲ್ವಾ..?
ಹಾಗಾದ್ರೆ ಕೇಳಿ..
ಅದು 1970 ರ ಸಮಯ..  ಒಂದು ಗಾಢಾಂಧಕಾರದ ಹಳ್ಳಿ..  ಅದು ಒಂದು ರೀತಿಯಲ್ಲಿ ದೇವದಾಸಿಯೂರು ಎನ್ನಬಹುದು. ಬಂದವರು ಬರುತ್ತಾರೆ.. ಕೆಲಸ ಮುಗಿಸಿಕೊಂಡು ಹೋಗುತ್ತಾರೆ.. ಬಂದವರು ಬಿಟ್ಟು ಹೋಗೋದು ಒಂದೇ ಒಂದು.. ಅವರು ತಂದಿದ್ದ ಹಣ..  ಅಂಥ ಊರಲ್ಲಿ ಹುಟ್ಟಿದವಳು ಲಕ್ಷ್ಮಿ.  ಚಿಕ್ಕವಳಾಗಿದ್ದಾಗ ಯಾವ ಚಿಂತೆಯೂ ಇಲ್ಲದೇ ಬೆಳೆದಳು.. ಆದರೆ ಆಕೆ ಮಾಡಿದ ತಪ್ಪು ಎಂದರೆ ಆಕೆ ಬೆಳೆದದ್ದು”..!!
ಹೌದು.. ಒಂದು ದಿನ ಪಕ್ಕದ ಊರಿನ ಪಟೇಲಪ್ಪ ಆ ಊರಿಗೆ ಬಂದ.. ಯಾರದ್ದೋ ಮನೆಗೆ ಹೋಗುವ ಆತುರದಲ್ಲಿದ್ದ ಪಟೇಲಪ್ಪ ಲಕ್ಷ್ಮಿಯ ಮನೆ ಮುಂದೆ ಹಾದು ಹೋಗಬೇಕಾಗಿತ್ತು.. ಅದೇ ಸಮಯಕ್ಕೆ ಲಕ್ಷ್ಮಿ ತನ್ನ ಮನೆಯ ಮುಂದೆ ನಿಂತು ಬಟ್ಟೆ ಒಗೀತಾ ಇದ್ಳು. ಹೋಗಬೇಕಾದ ಮನೆಯನ್ನು ಮರೆತ ಪಟೇಲಪ್ಪ, ನೇರವಾಗಿ ಲಕ್ಷ್ಮಿಯ ಮನೆಯೊಳಗೆ ಹೊಕ್ಕ.. ಲಕ್ಷ್ಮಿಯ ತಂದೆಗೆ ಹತ್ತು ರೂಪಾಯಿ ಕೊಟ್ಟು ನಿನ್ನ ಮಗಳೊಂದಿಗೆ ಈ ದಿನ ಕಳೆಯಬೇಕು ಎಂದು ಹೇಳಿದ. ಆದ್ರೆ ಲಕ್ಷ್ಮಿಯ ತಂದೆ ತನ್ನ ಮಗಳಿಗೆ ಇದೆಲ್ಲದರ ಅರಿವಿಲ್ಲ ಎಂದು ಹೇಳಿದನು.. ಆದ್ರೆ ಪಟೇಲಪ್ಪ ಕೇಳಲಿಲ್ಲ “ಮನೆಗೆ ಬಂದವರ ತನುವನ್ನು ಸತ್ಕರಿಸದೇ ಕಳಿಸುವುದು ನಿಮ್ಮ ಸಂಪ್ರದಾಯ ಅಲ್ಲ. ಸಂಪ್ರದಾಯ ಮರೆತರೆ ದೈವತ್ವಕ್ಕೆ ಮಾಡಿದ ದ್ರೋಹ ನೆನಪಿರಲಿ” ಎಂದು ಭಯ ಹುಟ್ಟಿಸಿದನು. ದೇವರಿಗೆ ವಿರುದ್ಧವಾಗಿ ನಡೆದರೆ ಸರ್ವನಾಶವಾಗುತ್ತೇವೆ ಎಂಬ ಭಯ ಲಕ್ಷ್ಮಿಯ ತಂದೆಯಲ್ಲಿ ಕಾಡಿತು. ಹೀಗಾಗಿ ಹತ್ತು ರೂಪಾಯಿಯನ್ನು ನೋಡುತ್ತ, ನಿಧಾನವಾಗಿ ತನ್ನ ಕೈಯನ್ನು ಹತ್ತು ರೂಪಾಯಿಯ ಕಡೆಗೆ ನೀಡುತ್ತ ತನ್ನ ಸಮ್ಮತಿಯನ್ನು ಸೂಚಿಸಿದನು..
ಪಟೇಲಪ್ಪ ನಿಧಾನವಾಗಿ ಲಕ್ಷ್ಮಿಯ ಕೋಣೆಯೊಳಗೆ ಬಂದ.. ಅವನನ್ನು ಕಂಡ ಲಕ್ಷ್ಮಿ ಅಮ್ಮ ಅಂತ ಕಿರುಚಿದಳು. ಅದ್ರೆ ಅವರ ಅಪ್ಪ-ಅಮ್ಮ ಕೇಳಿದ್ರೂ ಕೇಳದವರಂತೆ ಹತ್ತು ರೂಪಾಯಿಯನ್ನೇ ನೋಡುತ್ತ ಕುಳಿತಿದ್ರು. “ಹತ್ತು ರೂಪಾಯಿ ಕೊಟ್ಟು ನಿಮ್ಮ ಅಪ್ಪ ಅಮ್ಮನಿಗೆ ಒಪ್ಪಿಸಿದ್ದೀನಿ.. ಅವರೇ ನನ್ನನ್ನು ನಿನ್ ಹತ್ರ ಬಿಟ್ಟಿದ್ದು ಅಂತ ಹೇಳಿದ ಪಟೇಲಪ್ಪ. ಅದನ್ನು ಕೇಳಿಸಿಕೊಂಡ ಲಕ್ಷ್ಮಿಗೆ ಆಘಾತವಾಯ್ತು.. ಹಣಕ್ಕಾಗಿ ಹೆತ್ತವರೇ ಹೀಗೆ ಮಾಡಿಬಿಟ್ರಾ ಅಂತ ಆತಂಕವಾಯ್ತು. ಆದ್ರೆ ಆಕೆಯ ಕಣ್ಣೀರಿಗೆ ಸ್ಪಂದಿಸುವವರು ಯಾರೂ ಇರಲಿಲ್ಲ.. ಆಕೆಯ ಕಣ್ಣೀರು ಕೂಡ ಅವಳ ಜೊತೆ ಇರಲಾಗದೇ ಜಾರಿ ನೆಲ ಸೇರುತ್ತಿದ್ದವು. ಪಾಪಿ ಪಟೇಲಪ್ಪನಿಗೆ ಅದ್ಯಾವುದೂ ಅರಿವಿಗೆ ಬರಲಿಲ್ಲ.. ಮದದಿಂದ ಅವಳ ಕೈ ಹಿಡಿದು ಎಳೆದ.  ಗಾಜಿನ ಬಳೆಗಳು ಪಟ ಪಟನೆಂದು ನೆಲ ಸೇರಿದವು.. ಏನು ಮಾಡ್ಬೇಕು ಅಂತ ತಿಳಿಯದೇ ಅಲ್ಲೇ ಬಿದ್ದಿದ್ದ ತನ್ನ ಒಡೆದ ಬಳೆಯನ್ನು ಎತ್ತಿಕೊಂಡು ಪಟೇಲಪ್ಪನ ಕಣ್ಣಿಗೆ ಚುಚ್ಚಿಬಿಟ್ಟಳು. ಕಿಟಾರನೆ ಕಿರುಚಿಕೊಂಡ ಪಟೇಲಪ್ಪ.. ಕೋಪಗೊಂಡಿದ್ದ ಲಕ್ಷ್ಮಿ ಮತ್ತೊಂದು ಬಳೆಯನ್ನು ಕಿತ್ತು ಇನ್ನೊಂದು ಕಣ್ಣಿಗೂ ಚುಚ್ಚಿಬಿಟ್ಟಳು.. ಹೊಟ್ಟೆಗೂ ಚುಚ್ಚಿ ಚಾಕುವಿನಂತೆ ಕೂಯ್ದು ಬಿಟ್ಟಳು.. ಹೊರಗೆ ಕುಳಿತಿದ್ದ ಆಕೆಯ ಅಪ್ಪ ಅಮ್ಮನಿಗೆ ಆ ಚೀರಾಟ ಕೇಳಿಸುತ್ತಿದ್ದರೂ ಅವರು ಏನು ಅಂತ ನೋಡುವ ಗೋಜಿಗೇ ಹೋಗಲಿಲ್ಲ.. ಪ್ರಥಮ ಸಮಾಗಮದಲ್ಲಿ ಚೀರಾಟ, ನರಳಾಟ ಮಾಮೂಲಿ ಅಂತ ಜಾಣ ಮೌನ ವಹಿಸಿದರು. ಹತ್ತು ರೂಪಾಯಿಯನ್ನೇ ಎವೆ ಇಕ್ಕದೇ ನೋಡುತ್ತ ಕುಳಿರು ಬಿಟ್ಟರು. ಆದರೆ ಒಳಗಡೆ ಪಟೇಲಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. 

ಕಾಳಿಯಂತೆ ನಿಂತು  ಬಾಗಿಲು ತೆಗೆದು ಹೊರ ಬಂದಳು ಲಕ್ಷ್ಮಿ.. “ಹತ್ತು ರೂಪಾಯಿ”ಗೆ ಮಗಳನ್ನೇ ಮಾರಿಬಿಟ್ರಲ್ಲಾ ಅಂತ ನೋವು ತಡಿಯೋಕೆ ಆಗದೇ, ಅಲ್ಲೇ ಮೂಲೆಯಲ್ಲಿ ಇದ್ದ ಒನಕೆಯಿಂದ ತನ್ನ ತಂದೆ ತಾಯಿಗೂ ಹೊಡೆದುಬಿಟ್ಟಳು. ರೋಷದ ಏಟಿಗೆ ಎರಡು ತಲೆಗಳಿಂದ ರಕ್ತ ಚಿರ‍್ರನೆ ಹಾರತೊಡಗಿತ್ತು.. ಸತ್ತರೂ ಆ ಹತ್ತು ರೂಪಾಯಿ ಬಿಡಲಿಲ್ಲ ಆಕೆಯ ಅಪ್ಪ.. ಅದನ್ನು ನೋಡಿದ ಲಕ್ಷ್ಮಿ ಗೆ ಒಂದೆಡೆ, ಈ ಹತ್ತು ರೂಪಾಯಿಯಿಂದಲೇ ಇಷ್ಟೆಲ್ಲಾ ಅವಾಂತರ ಆಯ್ತಲ್ವಾ ಅಂತ ಆಕೆಗೆ ಭಯ ಶುರುವಾಯಿತು.. ಮತ್ತೊಂದೆಡೆ ಪಟೇಲನ ಹೆಣ ನೋಡಿದರೆ ಊರಿವರು ಬಿಟ್ಟಾರಾ..?? ಕತ್ತು ಕೂಯ್ದು ಹೂತು ಬಿಡ್ತಾರೆ ಅಂತ ಜೀವ ಭಯ ಕೂಡ ಕಾಡತೊಡಗಿತ್ತು. ಅಬಲೆಯ ಮನ ಅಕ್ಷರಶಃ ಅಲುಗಾಡ ತೊಡಗಿತು.. ದುಗುಡ, ಭಯ ಒಟ್ಟಿಗೆ ಆವರಿಸಿ ಮನೆ ಬಿಟ್ಟು ಓಡಿ ಹೋಗಲು ನಿರ್ಧರಿಸಿದಳು. ಅವಸರದಿಂದಾಗಿ ಆಕೆಯ ಕಾಲು ಕಲ್ಲೊಂದಕ್ಕೆ ಎಡವಿ ಬಿಟ್ಟಿತು. ಪರಿಣಾಮವಾಗಿ, ತಮ್ಮ ಮನೆಯ ಮುಂದೆ ನಿಂತಿದ್ದ ಎತ್ತಿನ ಮೇಲೆ ಬಿದ್ದುಬಿಟ್ಟಳು. ಕ್ಷಣಾರ್ಧದಲ್ಲಿ ಎತ್ತಿನ ಕೊಂಬು ಆಕೆಯ ಹೊಟ್ಟೆಯನ್ನು ಸೇರಿಬಿಟ್ಟಿತ್ತು.. ಸಿಟ್ಟಿಗೆದ್ದ ಎತ್ತು ಜೋರಾಗಿ ತಲೆಯಾಡಿಸಿದ್ದೇ ತಡ, ಸುಂದರ ಯುವತಿ ತನ್ನ ಮನೆಯ ಜಗುಲಿಯ ಮೇಲೆ ಹೋಗಿ ಬಿದ್ದು ಬಿಟ್ಟಳು.. ರಕ್ತ ಆಕೆಯ ಸೌಂದರ್ಯವನ್ನು ಮುಚ್ಚಿ ಬಿಟ್ಟಿತ್ತು.  ಇದ್ದಕ್ಕಿದ್ದಂತೆ ಆ ಹತ್ತು ರೂಪಾಯಿ ಗಾಳಿಗೆ ಹಾರಿ ಆಕೆಯ ಎದೆಯ ಮೇಲೆ ಬಂದು ಕೂತುಬಿಟ್ಟಿತ್ತು..

ಅದನ್ನು ಕಂಡ ಆಕೆಗೆ ಇದು ಹಣವೋ ಅಥವ ವಿಧಿಯ ರೂಪವೋ ಅನ್ನೋ ದ್ವಂದ್ವ ಕಾಡ ತೊಡಗಿತ್ತು. ಸುಂದರವಾಗಿದ್ದ ಲಕ್ಷ್ಮಿಯ ಜೀವನವನ್ನು ಆ ಹತ್ತು ರೂಪಾಯಿ ನಾಶ ಮಾಡಿಬಿಟ್ಟಿತ್ತು. ಅದನ್ನು ಆಲೋಚಿಸುತ್ತಿರವಾಗಲೇ ಅಲ್ಲಿ ನಾಲ್ಕು ಹೆಣಗಳು ಧರೆಗುರುಳಿದ್ದವು.. ಆ ಹತ್ತು ರೂಪಾಯಿ “ಅಮಾಯಕ ಬಾಲೆ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಬಲಿ ತೆಗೆದುಕೊಂಡಿತ್ತು”
 
ಗೋಲಿ ಆಡುವ ಹುಡುಗನೊಬ್ಬ ಗೋಲಿ ಆಡುತ್ತ ಅತ್ತ ಬಂದಾಗ ಈ ದೃಶ್ಯವನ ನು ಕಂಡು ಊರಿನವರಿಗೆ ತಿಳಿಸಿದ. ಕಾರಣಗಳು, ಸಾವಿನ ನಿಗೂಢತೆಗಳು ತಿಳಿಸಲು ಅಲ್ಲಿ ಯಾರೂ ಬದುಕಿರಲಿಲ್ಲ.. ಹೆಣಗಳೇ ಎದ್ದು ಸಾವಿನ ಸ್ಟೋರಿ ಹೇಳಬೇಕಾದ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು . ಹೀಗಾಗಿ ಹಳ್ಳಿ ಜನ ಅದ್ಯಾವುದರ ಗೋಜಿಗೂ ಹೋಗಲಿಲ್ಲ.. ತಮ್ಮ ಸಂಪ್ರದಾಯದಂತೆ ಹೆಣಗಳನ್ನು ತೆಗೆದು ವಿಧಿ ವಿಧಾನದೊಂದಿಗೆ ಸಮಾಧಿ ಮಾಡಿದರು.. ಸಮಾಧಿ ಮಾಡಿ ಬರುವಾಗ ಆ ಪುಟ್ಟ ಗೋಲಿಯಾಡುವ ಹುಡುಗ ಹಿಂದೆ ತಿರುಗಿ ನೋಡಿದ. ಸಮಾಧಿಯ ಮೇಲೆ ಯಾವುದೋ ಒಂದು ಕಾಗದ ಅಲುಗಾಡತೊಡಗಿತ್ತು. ಹತ್ತಿರಕ್ಕೆ ಹೋಗಿ ನೋಡಿದ.. ಅದು ಬೇರೇನೂ ಅಲ್ಲ,,,,, ಅದೇ ಹತ್ತು ರೂಪಾಯಿಯ ನೋಟು.. ಸಮಾಧಿಯೊಳಗೆ ಮಲಗಿದ್ದ ಆ ಆತ್ಮಗಳು ಶಾಂತವಾಗಿತ್ತು.. ಆದರೆ ರಕ್ತದೋಕುಳಿಯನ್ನು ಆಡಿದ್ದ ಆ ಹತ್ತು ರೂಪಾಯಿ ಮೂರು ಹೆಣಗಳ ಸಮಾಧಿಯ ಮೇಲೆ ಕುಳಿತು ಗೆಲುವಿನ ನಗೆ ಬೀರುತ್ತಿತ್ತು….

ಚುಯಿಂಗಮ್ ನಿಂದ ಹೋಯ್ತು ಜೀವ.,??
ಮಂತ್ರವಾದಿ- ಹೇ ಲಲಿತ.. ಆವಾಹ ಯಾಮಿ..!! ಆವಾಹ ಯಾಮಿ..


ಲಲಿತ ದೆವ್ವ : ಹೇಳಿ ಮಂತ್ರವಾದಿಗಳೇ.. ನನ್ನಿಂದ ಏನಾಗಬೇಕು..??


ಮಂತ್ರವಾದಿ : ಹೇ ಲಲಿತೆ.. ನೀನು ಹುಣ್ಣಿಮೆ ದಿನ ವಿಜಯ್ ದೇಹಾನ ಸೇರ್ಕೊಂಡು, ಅವನು ರಕ್ತ ಕಾರಿ ಸಾಯೋ ಹಾಗೆ ಮಾಡ್ಬೇಕು..!!


ಲಲಿತ : ಇಲ್ಲ.. ನಾನು ಅಂಥ ಕೆಟ್ಟ ಕೆಲಸ ಮಾಡಲ್ಲ

ಮಂತ್ರವಾದಿ
 
: ಹ ಹ ಹ.. ಆಗಲ್ಲ ಅಂದ್ರೆ ಮಂತ್ರಗಳ ಮೂಲಕ ನಿನ್ನನ್ನು ದಿಗ್ಭಂಧನ ಹಾಕ್ತೀನಿ..!! ಚುಯಿಂಗ್ ಗಮ್ ತಿನ್ನಿಸ್ತೀನಿ.. ಹುಷಾರ್..!!


ಲಲಿತ : ನೋಡು ಮಂತ್ರವಾದಿಗಳೇ.. ನೀವು ಏನ್ ಬೇಕಾದ್ರೂ ಮಾಡಿ.. ಆದ್ರೆ ಚುಯಿಂಗ್ ಗಮ್ ಮಾತ್ರ ತಿನ್ನಿಸ್ಬೇಡಿ..


ಮಂತ್ರವಾದಿ : ಹ ಹ.. ಹೇ ಲಲಿತೆ..!! ನಿನ್ನ ಹೇಗೆ ಟಾರ್ಚರ್ ಕೊಡ್ಬೇಕು ಅಂತ ನಂಗೆ ಗೊತ್ತು.. ಹೇ ಚುಯಿಂಗ್ ಗಮ್ ತಗೊಂಡು ಬಾರೋ..!!

ಲಲಿತೆ : ಬೇಡ.. ಬೇಡ..!!


ಮಂತ್ರವಾದಿ : ತಗೋ ತಿನ್ನು

ಲಲಿತೆ: ಬೇಡ ಬೇಡ ಅಯ್ಯೋ..!! ಬೇಡ.. ನೀವ್ ಹೇಳಿದಂಗೆ ಕೇಳ್ತೀನಿ.. ನೀವು ಹೇಳಿದಂಗೆ ಕೇಳ್ತೀನಿ..


ಮಂತ್ರವಾದಿ : ಹ ಹ ಹ.. ನಾಕು ತೆಲಿಸು.. ನೀಕು ಎಲಾ ಒಪ್ಪಿಂಚಾಲೋ..!!


ಸುಜಾತ ದೆವ್ವ- ಲಲಿತಮ್ಮ..!! ಮಂತ್ರಗಳು ನಿಂಬೆ ಹಣ್ಣಿಗೆ ದೆವ್ವ ಭೂತಗಳು ಹೆದರುತ್ತೆ ಅಂತಾರೆ.. ಆದ್ರೆ ನೀನು ಚುಯಿಂಗ್ ಗಮ್ ಗೆ ಹೆದರ್ತೀಯಲ್ವಾ..?? ಯಾಕೆ,,??


ಲಲಿತೆ : ನನ್ನ ಜೀವ ಹೋಗಿದ್ದೇ ಚುಯಿಂಗ್ ಗಮ್ ನಿಂದ ಸುಜಾತ.. ನಾನು ಬೆಂಗಳೂರಿನ ಪ್ರೊಡಕ್ಷನ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲ್ಸ ಮಾಡ್ತಿದ್ದೆ.. ನಂಗೆ ಚುಯಿಂಗ್ ಗಮ್ ಅಂದ್ರೆ ತುಂಬಾ ಇಷ್ಟ..!! ಚುಯಿಂಗ್ ಗಮ್ ಇಲ್ದೇ ಒಂದು ಕ್ಷಣ ಕೂಡ ಇರ್ತಾ ಇರಲಿಲ್ಲ.. ಕೆಲಸ ಮಾಡ್ತಿದ್ರೂ ಬಾಯಲ್ಲಿ ಚುಯಿಂಗ್ ಗಮ್.. ಸ್ನಾನ ಮಾಡ್ತಿದ್ರೂ ಚೂಯಿಂಗ್ ಗಮ್ ತಿಂತಾ ಇದ್ದೆ..


ಆದ್ರೆ ಅದ್ಯಾಕೋ ಗೊತ್ತಿಲ್ಲ.. ಶಂಕರ್ ಕಡೆ ನನ್ನ ಮನಸ್ಸು ವಾಲಿತು.. ಅವನು ನನ್ನ ಕೈ ಕೆಳಗೆ ಕೆಲಸ ಮಾಡ್ತಿದ್ದ. ಅವನು ಬರಿಯೋ ಒಂದೋಂದು ಲವ್ ಸ್ಟೋರಿ ಕೂಡ ನನ್ನ ಇಂಪ್ರೆಸ್ ಮಾಡಿಬಿಟ್ತು.. ಆ ಸ್ಟೋರಿಗೆ ಅವನ ಆಲೋಚನಾ ಶಕ್ತಿಗೆ ಸೋತುಹೋದೆ..
ಆವತ್ತೊಂದಿನ ನನ್ನ ಆಸೆಯನ್ನು ಶಂಕರ್ ಗೆ ಹೇಳಬೇಕು ಅಂತ ಅನಿಸಿತು..
ನಮ್ಮ ಮನೆ ಪಾರ್ಟಿ ಗೆ ಕರೆದೆ..!! ಅವನಿಗೆ 24 ವರ್ಷ.. ನನಗೆ 30 ವರ್ಷ.. ಆದ್ರೇನಂತೆ..?? ಪ್ರೀತಿಗೆ ವಯಸ್ಸು ಮುಖ್ಯ ಅಲ್ಲ ಅಲ್ವಾ..?? ಪಾಕಿಸ್ತಾನದ ಹೀನಾ ರಬ್ಬಾನಿಕರ್, ಮತ್ತ್ತು ಭಿಲಾವ್ ಭುಟ್ಟೋ ಲವ್ ಮಾಡಿಲ್ವಾ..?? ಹಾಗೇನೇ ನಮ್ಮ ಪ್ರೇಮಾ ಕೂಡ ಅಂತ ಗಟ್ಟಿ ಧೈರ್ಯ ಮಾಡಿ ಅವನಿಗೆ ಹೇಳಿಬಿಟ್ಟೆ.. ಅದಿಕ್ಕೆ ಅವನು 


ಶಂಕರ್- ಮೇಡಂ. ನಾನು ನಮ್ಮ ಪ್ರೋಗ್ರಾಮ್ ಆಂಕರ್ ಶರ್ಮಿಳಾ ನ ಪ್ರೀತಿಸ್ತಾ ಇದ್ದೀನಿ.. ಅಂದು ಬಿಟ್ಟಡ..!!


ನನಗೆ ಅವಮಾನ ಆಯ್ತು.. ಹೇಗಾದ್ರೂ ಮಾಡಿ ಅವನನ್ನು ಪಡ್ಕೋಬೇಕು ಅನಿಸಿತು.. ಅವನ ಕಾಲಿಗೆ ಬಿದ್ದು ಕೇಳಿದೆ.. ಆದ್ರೂ ಅವನು ಕರಗಲಿಲ್ಲ.. ಬದಲಾಗಿ ನನಗೆ ಅವಮಾನ ಮಾಡಿಬಿಟ್ಟ..!! ನೀನು ಮುದುಕಿ.. ನನ್ನ ಇಷ್ಟ ಪಡೋಕೆ ನಾಚಿಕೆ ಆಗೋದಿಲ್ವ ಅಂತ ಅವಮಾನ ಮಾಡಿಬಿಟ್ಟ.. ನನಗೆ ಸಹಿಸೋಕೆ ಆಗಲಿಲ್ಲ. ಅದಿಕ್ಕೆ ನಾನು ಹೇಗಾದ್ರೂ ಮಾಡಿ ಅವರಿಬ್ಬರ ಪ್ರೇಮಕ್ಕೆ ಕೊಡಲಿ ಪೆಟ್ಟು ಹಾಕ್ಬೇಕು ಅಂತ ನಿರ್ಧಾರ ಮಾಡಿದೆ.


ಒಂದಿನ ನಾನೇ ಒಂದು ಗ್ರಾಫಿಕ್ಸ್ ಸಿ.ಡಿ.ಯನ್ನು ಮಾಡಿ ಅದನ್ನು ಅನಾಮಧ್ಯೇಯ ಹೆಸರಿನಲ್ಲಿ  ಕೊರಿಯರ್ ಮೂಲಕ ನಮ್ಮ ಆಫೀಸಿಗೆ ಕಳಿಸಿದೆ.. ಅದ್ರಲ್ಲಿ ಶಂಕರ್ ಪ್ರೀತಿಸ್ತಾ ಇದ್ದ ಹುಡುಗಿ ಶರ್ಮಿಳಾ ಬೇರೆ ವ್ಯಕ್ತಿ ಜೊತೆಗೆ ಸರಸ ಆಡ್ತಾ ಇರೋ ಹಾಗೆ ಗ್ರಾಫಿಕ್ಸ್ ಮಾಡಿದ್ದೆ.. ಆ ಸಿ.ಡಿ ಯಲ್ಲಿ ಏನಿರಬಹುದು ಅಂತ ಶರ್ಮಿಳಾ ಎಲ್ಲರ ಎದುರಿಗೇ ಸಿ,.ಡಿ ಆನ್ ಮಾಡಿದ್ಳು.. ಆಗ ಅವಳ ಮರ್ಯಾದೆ ಎಲ್ಲರೆದುರು ಹರಾಜಾಯ್ತು.. ಜನ ಆಡೋ ಮಾತುಗಳಿಗೆ ಶರ್ಮಿಳಾ ದಿಕ್ಕೆಟ್ಟು ಹೋದಳು.. ಆದ್ರೆ ನನಗೆ ಖುಷಿ ಅಯ್ತು.. ಯಾಕಂದ್ರೆ ಶರ್ಮಿಳಾ ಸರಿ ಇಲ್ಲ ಅಂದಾಗ ಶಂಕರ್ ನನ್ನ ಕಡೆ ತಿರುಗಬಹುದು ಅನ್ನೋ ಆಸೆ.. ಚುಯಿಂಗಮ್ ತಿನ್ನುತ್ತಾ ಖುಷಿ ಪಡ್ತಾ ಇದ್ದೆ.. ಬೆಳಿಗ್ಗೆ ಆಫೀಸಿಗೆ ಬರುವಾಗ ಶರ್ಮಿಳಾ ನೇಣು ಹಾಕಿಕೊಂಡಿದ್ದಾಳೆ ಅನ್ನೋ ವಿಷ್ಯ ತಿಳೀತು.


ಅದೇ ನೋವಿನಲ್ಲಿ ಇದ್ದ ಶಂಕರ್ ಗೆ ಸಮಾಧಾನದ ಮಾತು ಆಡಿ ಅವನನ್ನು ನನ್ನ ಹತ್ರ ಕರ್ಕೊಂಡೆ.,. ನಿಧಾನವಾಗಿ ಅವನ ಮನಸ್ಸನ್ನು ನನ್ನ ಕಡೆ ತಿರುಗಿಸಿಕೊಂಡೆ.. ಅವಳು ಸರಿ ಇಲ್ಲ.. ನಿನ್ನ ಪ್ರೀತಿಗೆ ಮೋಸ ಮಾಡಿ ಸರಸ ಸಲ್ಲಾಪ ಆಡಿದ್ದಾಳೆ.. ಎಷ್ಟೇ ಆದ್ರೂ ಆಕ್ಟ್ ಮಾಡೋಳು.. ನಿನ್ನ ಲೈಫ್ ನಲ್ಲೇ ಆಟ ಆಡಿದ್ಳು ಅಂತ ಇನ್ನಷ್ಟು ಅವಳ ಮೇಲೆ ಕೋಪ ಬರೋ ಹಾಗೆ ಮಾತಾಡಿದೆ.. ಅವನು ಅದೆಲ್ಲವನ್ನೂ ನಂಬಿಬಿಟ್ಟ..!! ಸಂಪೂರ್ಣವಾಗಿ ನನ್ನವನಾಗಿಬಿಟ್ಟ..!!ಒಂದಿನ ಅವನು ಕುಡಿಯೋಕೆ ಯಾವುದೋ ಫಾರಿನ್ ಡ್ರಿಂಕ್ಸ್ ತಂದಿದ್ದ..!! ನನಗೂ ಕುಡಿಯುವಂತೆ ಬಲವಂತ ಮಾಡಿದ.. ನಾನು ನಿನ್ನ ಇಷ್ಟೋಂದು ಪ್ರೀತಿಸ್ತೀನಿ.. ನನಗೋಸ್ಕರ ಸ್ವಲ್ಪ ಕುಡಿ ಅಂತ ಬಲವಂತ ಮಾಡಿದ.. ಎಷ್ಟೇ ಆದ್ರೂ ಅವನು ನನ್ನವನಾಗಿಬಿಟ್ಟನಲ್ಲ.. ಇನ್ನೇನಿದೆ ಅಂತ ಚುಯಿಂಗ್ ಗಮ್ ತಿನ್ನುತ್ತಲೇ ಕುಡಿಯೋಕೆ ಶುರು ಮಾಡಿದೆ.. ಇಬ್ಬರೂ ಕೋಣೆಗೆ ಬಂದೆವು.. ಮಧ್ಯದ ಮತ್ತಲ್ಲಿ ತಬ್ಬಿ ನಿಂತೆವು.. ಪ್ರೀತಿಯ ಉನ್ಮಾದ ಮತ್ತು ನಶೆಯ ಪ್ರಭಾವ ಹೆಚ್ಚಾಗಿತ್ತು.. ಆಗ ಶಂಕರ್ ಕೇಳಿದ.. ಶರ್ಮಿಳಾ ಮಾಡಿದ ಹಾಗೆ ನೀನು ನಂಗೆ ಮೋಸ ಮಾಡಲ್ಲಾ ತಾನೆ..?? ನನ್ನಿಂದ ದೂರ ಆಗಲ್ಲ ತಾನೆ ಅಂತ ಕೇಳಿದ ಶಂಕರ್. ಇಲ್ಲ.. ನಾನು ನಿನ್ನ ತುಂಬಾ ಪ್ರೀತಿಸ್ತೀನಿ.. ನೀನು ನನ್ನವನಾಗಬೇಕು. ಅಂತ ಹೇಳಿದೆ..!! 


 
ಆಗ ಅವನು ಅಷ್ಟೋಂದು ನನ್ನ ಮೇಲೆ ಪ್ರೀತೀನ..?? ನಾನು ಶರ್ಮಿಳಾನ ಮದ್ವೆ ಆಗಿದ್ರೆ ಏನ್ ಮಾಡ್ತಿದ್ದೆ ಅಂತ ಕೇಳಿದ. ಚುಯಿಂಗ್ ಗಮ್ ಅಗೆಯುತ್ತ ಅಗೆಯುತ್ತ ನನಗೆ ನಶೆ ಹೆಚ್ಚಾಗ್ತಾ ಇತ್ತು.. ನೀವು ಮದ್ವೆ ಆಗಬಾರದು.. ನಿಮ್ಮಿಬ್ಬರ ಪ್ರೀತಿ ಮುರಿಬೇಕು ಅಂತಾನೆ ಅವಳ ಬಗ್ಗೆ ಅಪ ಪ್ರಚಾರದ ಸಿಡಿ ಹುಟ್ಟು ಹಾಕಿದೆ.. ಎಲ್ಲ ನಿನಗೋಸ್ಕರ. ನೀನು ನನ್ನವನಾಗಬೇಕು ಅಂತ ಅಷ್ಟೇ.. ಅಂದೆ.. ಕ್ಷಣ ಹೊತ್ತು ಯೋಚಿಸಿ ನಿಧಾನವಾಗಿ ನನ್ನನ್ನು ಮಂಚದ ಮೇಲೆ ಮಲಗಿಸಿದ ನನ್ನ ಬಾಯಲ್ಲಿ ಚುಯಿಂಗ್ ಗಮ್ ಇತ್ತು..  ಅವನು ಪ್ರೀತಿಯಿಂದ ನನ್ನ ಮೂಗನ್ನು ಕಚ್ಚಿದ.. ಅಮಲಿನಲ್ಲಿದ್ದ ನನಗೆ ಉಸಿರು ಎಳೆದುಕೊಳ್ಳೋಕೆ ಆಗಲಿಲ್ಲ..  ಬಾಯಿಯಿಂದ ಉಸಿರು ಜೋರಾಗಿ ಎಳೆದುಕೊಂಡು ಬಿಟ್ಟೆ.. ಬಾಯಲ್ಲಿದ್ದ ಚುಯಿಂಗ್ ಗಮ್ ಗಂಟಲಿಗೆ ಬಂದು ಅಂಟಿಕೊಂಡಿತು..  ಚುಯಿಂಗ್ ಗಮ್ ಗಂಟಲಿನ ಸುತ್ತ ಸುತ್ತಿಕೊಂಡಿತ್ತು.. ಉಸಿರನ್ನು ಎಳೆದುಕೊಳ್ಳೋಕೆ ಆಗಲೇ ಇಲ್ಲ. ವಿಲ ವಿಲನೆ ಒದ್ದಾಡಿದೆ.. ಏನೇ ಆದ್ರೂ ಚುಯಿಂಗ್ ಗಮ್ ಹೊರಗೂ ಬರದೇ, ಒಳಗೂ ಹೋಗದೇ ಗಂಟಲಿನಲ್ಲೇ ಸುತ್ತಿಕೊಂಡಿತ್ತು.. ನಶೆಯ ಗುಂಗಲ್ಲಿ, ಒಂದೇ ನಿಮಿಷದಲ್ಲಿ, ಆ ಚುಯಿಂಗ್ ಗಮ್ ನನ್ನ ಜೀವಾನೇ ತೆಗೆದುಬಿಟ್ಟಿತ್ತು.. ಮಧುಚಂದ್ರಕ್ಕೆ ಹೋಗಬೇಕಾಗಿದ್ದ ನಾನು ಮಸಣದ ದಾರಿ ಹಿಡಿಯಬೇಕಾಯ್ತು.. ಅದಿಕ್ಕೆ ಯಾರೂ ಚುಯಿಂಗ್ ಗಮ್ ತಿನ್ನಬೇಡಿ.. ಎಲ್ಲದಕ್ಕೂ ಮಿತಿ ಇದೆ.. ಮಿತಿ ಮೀರಿದ್ರೆ ಎಲ್ಲದರಿಂದಲೂ ಅಪಾಯ ಇದೆ.. ನನ್ನ ಮಾತು ಕೇಳಿಲ್ಲ ಅಂದ್ರೆ ನೀವೂ ನನ್ ಥರ ದೆವ್ವ ಆಗಿ ಆಸೆಗಳು ಇಡೇರಿಸಿಕೊಳ್ಳೋಕೆ ಆಗದೇ ಒದ್ದಾಡಬೇಕಾಗುತ್ತೆ..

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು