Recent Movies

ಸಿನೆಮಾ

Share This Article To your Friends

Showing posts with label ದೆವ್ವ-ಭೂತಗಳ ಕಥೆ. Show all posts
Showing posts with label ದೆವ್ವ-ಭೂತಗಳ ಕಥೆ. Show all posts

ಇಲ್ಲಿ ಪ್ರೇತಗಳಿಗೂ ಮದುವೆ ಮಾಡ್ತಾರೆ..!

 ಮದುವೆ ಅನ್ನೋದು ಬರೀ ಮನುಷ್ಯರಿಗೆ ಮಾತ್ರ ಅಲ್ಲ.. ಕಪ್ಪೆಗಳಿಗೂ ಮಾಡ್ತಾರೆ.. ಕತ್ತೆಗಳಿಗೂ ಮಾಡ್ತಾರೆ.. ಒಂದೊಂದ್ ಕಡೆ ಮರ, ಕಲ್ಲುಗಳಿಗೂ ಮದುವೆ ಮಾಡ್ತಾರೆ. ಆದ್ರೆ ಈ ಊರಲ್ಲಿ ಸತ್ತಿರೋ ಆತ್ಮಗಳಿಗೂ ಮದ್ವೆ ಮಾಡ್ತಾರೆ..

ಮದುವೆಯಾಗದೆ ಸತ್ತ ಪ್ರೇತಾತ್ಮಗಳು ಜನರಿಗೆ ಹೆಚ್ಚಾಗಿ ಕಾಟ ಕೊಡುತ್ತಂತೆ.. ಇಂಥಾ ಅವಿವಾಹತ ಪ್ರೇತಗಳ ಕಾಟದಿಂದ ತಪ್ಪಿಸಿಕೊಳ್ಬೇಕು ಅಂದ್ರೆ, ಆ ಆತ್ಮಕ್ಕೆ ಮತ್ತೊಂದು ಆತ್ಮದ ಜೊತೆ ಮದುವೆ ಮಾಡಿಸ್ಬೇಕು.. ಅಂದ್ಹಾಗೆ ಈ ಆತ್ಮಗಳಿಗೆ ಮದುವೆ ಮಾಡೋದು ಅಷ್ಟೋಂದು ಸುಲಭದ ಮಾತಲ್ಲ.. ಪ್ರೇತಗಳ ಮದುವೆಗೂ ಮುಹೂರ್ತ ನೋಡ್ಬೇಕು.. ಒಂದು ಆತ್ಮಕ್ಕೆ ಪಕ್ಕಾ ಸೂಟಾಗೋ ಮತ್ತೊಂದು ಪ್ರೇತವನ್ನು ಹುಡುಕಬೇಕು.. ಆ ಎರಡೂ ಪ್ರೇತಗಳ ಜಾತಕ ಕೂಡ ನೋಡ್ಬೇಕು.. ಆ ಎರಡೂ ಪ್ರೇತ ಜಾತಕಗಳೂ ಕೂಡ ಪಕ್ಕಾ ಮ್ಯಾಚ್ ಆಗ್ಬೇಕು.. ಪ್ರೇತಗಳ ಗೋತ್ರ ನೋಡಿನೇ ಮದುವೆ ಮಾಡಲಾಗುತ್ತೆ..

ಕೆಲವೊಮ್ಮೆ, ಗೋತ್ರ ಹೊಂದಾಣಿಕೆ ಆಗದೇ ಇದ್ರೇ, ಅನುರೂಪವಾದ ಜೋಡಿ ಪ್ರೇತಾತ್ಮ ಸಿಗದೇ ಇದ್ರೆ,ಕಲ್ಪವೃಕ್ಷವನ್ನೇ ವಧು ಅಥವಾ ವರನ ರೂಪದಲ್ಲಿ ಇರಿಸಿ, ಮದುವೆ ಮಾಡಲಾಗುತ್ತೆ..

ಹೀಗೆ ಪ್ರೇತಾತ್ಮಗಳಿಗೆ ಮದುವೆ ಮಾಡೋ ಸಂಪ್ರದಾಯ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಚಾಲ್ತಿಯಲ್ಲಿದೆ. ಇಲ್ಲಿನ ಜನಾರ್ದನ ದೇವರ ಸನ್ನಿಧಾನದಲ್ಲಿ ಪ್ರೇತಗಳಿಗೆ ಮದುವೆ ಮಾಡಲಾಗುತ್ತೆ..!

ಜನಾರ್ಧನ ದೆವರ ಕೈಯ್ಯಲ್ಲಿ ಶಂಖ, ಚಕ್ರ ಗಧೆಯ ಜೊತೆಗೆ ಪಿಂಡ ಕೂಡ ಇದೆ. ಹೀಗಾಗಿ ಈ ಕ್ಷೇತ್ರಕ್ಕೆ ವಿಶೇಷ ಮನ್ನಣೆ ಇದೆ. ವೈದಿಕ ಪದ್ದತಿಯಂತೆ ಈ ಪ್ರೇತ ವಿವಾಹ ಕಾರ್ಯಕ್ರಮ ನಡೆಯುತ್ತೆ.. ಮನುಷ್ಯರ ಮದುವೆನಲ್ಲಿ ಏನೆಲ್ಲಾ ಆಚರಣೆಗಳನ್ನು ಅನುಸರಿಸಲಾಗುತ್ತೋ, ಆ ಎಲ್ಲಾ ಆಚರಣೆ, ಸಂಪ್ರದಾಯಗಳನ್ನು ಇಲ್ಲಿ ಪಾಲನೆ ಮಾಡಲಾಗುತ್ತೆ.

ಒಂದು ಪ್ರೇತದ ತೆಂಗಿನ ಕಾಯಿಯೊಂದಿಗೆ, ಇನ್ನೊಂದು ಪ್ರೇತದ ತೆಂಗಿನ ಕಾಯಿ ಜೊತೆಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಲಾಗುತ್ತೆ.
ಈ ಪ್ರೇತಗಳಿಗೂ ಕೂಡ, ಅಗ್ನಿ ಸಾಕ್ಷಿಯಾಗಿ, ಮಾಂಗಲ್ಯಧಾರಣೆ ಮಾಡಲಾಗುತ್ತೆ.. ಈ ಪ್ರೇತದ ಬಾದಿಯಿಂದ ಬಳಲ್ತಾ ಇರೋರ ಕುಟುಂಬ, ಪ್ರೇತ ವಿವಾಹಕ್ಕೆ ಸಾಕ್ಷಿಯಾಗಿರ್ತಾರೆ.. ಅಕ್ಷತೆ ಹಾಕಿ, ನಿಮ್ಮ ವಿವಾಹ ಜೀವನ ಚೆನ್ನಾಗಿರಲಿ ಅಂತ ನೆರೆದವರೆಲ್ಲಾ ಹರಸ್ತಾರೆ.. ಈ ರೀತಿ ಅತೃಪ್ತ ಆತ್ಮಗಳಿಗೆ ಮದುವೆ ಮಾಡಿಸಿದ್ರೆ, ಒಳ್ಳೇದಾಗುತ್ತೆ ಅನ್ನೋ ಮಾತುಗಳು ಕೂಡ ಈ ಭಾಗದಲ್ಲಿ ಕೇಳಿ ಬರ್ತವೆ.

ಆಧುನಿಕ ಜಗತ್ತಿನಲ್ಲಿ, ವಿಜ್ಞಾನ ಯುಗದಲ್ಲಿ, ಇಂಥಾ ಆಚರಣೆಗಳೆಲ್ಲಾ ನಾಟಕೀಯ ಅನ್ನಿಸಬಹುದು. ಆದರೆ ಇಂತಹಾ ವಿಶಿಷ್ಟ ಆಚರಣೆಗಳ ಇಲ್ಲಿನ ಜನರ ಜೀವನದಲ್ಲಿ ಬೆರೆತು ಹೋಗಿದೆ. ಜೀವಂತ ವ್ಯಕ್ತಿಗಳನ್ನೇ ಗೌರವದಿಂದ ಕಾಣದ ಈ ದಿನಗಳಲ್ಲಿ ಪ್ರೇತಾತ್ಮಗಳಿಗೂ ಮದುವೆ ಮಾಡಿ, ಅತೃಪ್ತ ಆತ್ಮಗಳಿಗೆ ತೃಪ್ತಿ ನೀಡುವ ಈ ಸಂಪ್ರದಾಯದ ಬಗ್ಗೆ ಏನ್​ ಅನ್ಬೇಕೋ ಗೊತ್ತಿಲ್ಲ.

ಶೇಖ್​(ಸ್ಪಿಯ)ರ್​

ಆ ಮನೆಯಲ್ಲಿ ಗಡಿಯಾರ ನಿಂತಾಗಲೆಲ್ಲಾ ಹೆಣ ಬೀಳುತ್ತ್ತವೆ..!
ನಾರ್ಥೆಕ್ವೆಲ್ಸ್‌‌‌‌ನಲ್ಲಿ ಒಂದು ಪರಿವಾರ ವಾಸವಿತ್ತು. ಆ ಮನೆಯ ಒಡತಿ ಹೆಸರು ಪೈಟ್ರಿಕರ್ಪಿಯರಸನ್‌‌‌.. ಆಕೆಗೆ  73 ವರ್ಷವಾಗಿದೆ. ಈಕೆಯ ಬದುಕಿನಲ್ಲಿ ನಡೆದ ಒಂದು ಭೀಕರ ಭಯಾನಕ ಘಟನೆಯನ್ನು ನಿಮ್ಮ ಮುಂದೆ ಇಡ್ತಾ ಇದೀನಿ.

1962ರಲ್ಲಿ ಈಕೆಯ ತಾತ ಸಾಚವಿಗೀಡಾಗ್ತಾರೆ. ಆ ದಿನ ತಾತನ ಸಾವಿನ ನೋವಿನಲ್ಲಿದ್ದ ಆಕೆಗೆ ಒಂದು ಅಚ್ಚರಿ ಕಾದಿರುತ್ತೆ.. ಈಕೆಯ ತಾತ ಸಾವಿಗೀಡಾದ ಕ್ಷಣವೇ ಅಂದ್ರೆ ಮಧ್ಯಾಹ್ನ 3 ಗಂಟೆಗೆ ಅವರ ಮನೆಯಲ್ಲಿದ್ದ ಗಡಿಯಾರ ಕೂಡ ನಿಂತು ಹೋಗಿರುತ್ತೆ..

ಇದು ಕಾಕತಾಳೀಯ ಆಂತ ಎಲ್ಲರೂ ಕೂಡ ಸುಮ್ಮನಾಗ್ತಾರೆ. ಆದ್ರೆ ಕೆಲವು ವರ್ಷಗಳ ನಂತರ
ಅಂದ್ರೆ 1975ರಲ್ಲಿ ಈಕೆಯ ತಂದೆ ಸಾವನ್ನಪ್ಪುತಾರೆ. ಆಗಲೂ ಪೈಟ್ರಿಕರ‍್ ಪಿಯರಸ್‌ಸನ್‌ ಗಡಿಯಾರದ ಕಡೆ ಕಣ್ಣು ಹಾಯಿಸ್ತಾಳೆ. ಆಗ ಆಕೆಗೆ ನಿಜಕ್ಕೂ ಶಾಕ್ ಕಾದಿತ್ತು.. ಯಾಕಂದ್ರೆ ಆಗಲೂ ಕೂಡ ಆಕೆಯ ಮನೆಯಲ್ಲಿದ್ದ ಗಡಿಯಾರ ನಿಂತು ಹೋಗಿತ್ತು.. ಈ ಹಿಂದೆ ತಾತನ ಸಾವಿನ ಸಮಯದಲ್ಲೂ ಗಡಿಯಾರ ನಿಂತಿದ್ದು ಆಕೆಗೆ ನೆನಪಾಯ್ತು. ಎರಡನ್ನೂ ನೆನೆಸಿಕೊಂಡ ಆಕೆ ನಿಜಕ್ಕೂ ಬೆಚ್ಚಿ ಬಿದ್ದಿದ್ಳು.

ಮನೆಯೊಳಗಿನ ಈ ವಿಚಿತ್ರ ಇಷ್ಟಕ್ಕೆ ನಿಲ್ಲಲಿಲ್ಲ. 2002ರಲ್ಲಿ ಈಕೆ ತನ್ನ ಪತಿ ಜೊತೆ ಸುತ್ತಾಡಲು ಹೊರಗೆ ಹೋಗಿದ್ರು.. ಆದ್ರೆ ಹೊರಗೆ ಹೋದ ಸಮಯದಲ್ಲಿ ಮನೆಯಲ್ಲಿಯೇ ಇದ್ದ ಈಕೆಯ ತಾಯಿ ತಾಯಿಯ ಸಾವಿಗೀಡಾಗ್ತಾಳೆ.. ಅಚ್ಚರಿ ಅಂದರೆ ಆಗಲೂ ಕೂಡ ಮನೆಯಲ್ಲಿದ್ದ ಗಡಿಯಾರ ಬಂದ್ ಆಗಿತ್ತು..

ಪೈಟ್ರಿಕರ್ಪಿಯರಸನ್‌‌‌ ಮನೆಯಲ್ಲಿ ಯಾವಾಗ ಸಾವುಗಳು ಸಂಭವಿಸುತ್ತವೆಯೋ, ಆಗೆಲ್ಲಾ ಗಡಿಯಾರ ಕೂಡ ನಿಂತು ಹೋಗ್ತಿತ್ತು.. ಇದು ಅಚ್ಚರಿಯಾದ್ರೂ ಸತ್ಯ.. ನಂಬಲು ಅಸಾಧ್ಯವಾದ್ರೂ, ನಂಬಲೇಬೇಕಾದ ಸತ್ಯ..
ಈ ಘಟನೆಯಿಂದಾಗಿ ಈಕೆಗೆ ಮನೆಯಲ್ಲಿ ಇರೋಕೆ ತುಂಬಾನೇ ಭಯ ಆಗ್ತಿದ್ಯಂತೆ. ಇನ್ನು ಗಡಿಯಾರವನ್ನು ನೋಡಿದ್ರೆ ಸಾಕು ಈಕೆಗೆ ತುಂಬಾನೆ ಭಯವಾಗ್ತಿದ್ಯಂತೆ. ಗಡಿಯಾರವೇ ಭೂತವಾಗಿ ಮನೆಯವರನ್ನು ಸಾಯಿಸುತ್ತಿದೆ ಅಂತ ಅಲ್ಲಿನ ಜನ್ರು ಮಾತಾಡಿಕೊಳ್ತಿದ್ದಾರೆ.

ಮಾಹಿತಿ : ಡೆಲಿ ಮೆಲ್

ಛಳಿಯಲ್ಲಿ, ಮೈ ಬಿಸಿಯಾದ ಕಥೆ


ರಾತ್ರಿ ಹನ್ನೆರಡು ವರೆಗೆ ಆಗಿತ್ತು... ನಾನು ನನ್ ಗಂಡ ಇಬ್ರೂ ಮಂಗ್ಳೂರ್ಗ್ ಹೋಗ್ತಾ ಇದ್ವಿ.. ಕಾರಲ್ಲಿ... ನಾನು ಅವರ ಪಕ್ಕಾನೇ ಕೂತ್ಕೊಂಡಿದ್ದೆ.. ಅವರು ಡ್ರೈವ್ ಮಾಡ್ತಾ ಇದ್ರು.. ರಾತ್ರಿ ಆಗಿದ್ರಿಂದ ನಿಧಾನಕ್ಕೆ ನಾನು ನಿದ್ದೆಗೆ ಜಾರ್ಬಿಟ್ಟೆ.

ಸ್ವಲ್ಪ ಹೊತ್ತಾದ್ಮೇಲೆ ಯಾಕೋ ಛಳಿ ಜಾಸ್ತಿ ಆಗೋಯ್ತು.. ಮಲೆನಾಡಿನ ಪ್ರದೇಶ ಅಲ್ವಾ.. ಅದಿಕ್ಕೆ ಛಳಿ ಜಾಸ್ತಿ ಆಗ್ತಿತ್ತು ಅನ್ಕೊಂಡೆ..  ಕಣ್ ತೆರೆದು ನೋಡಿದೆ.. ಕಾರು ನಿಂತಿತ್ತು.. ಪಕ್ಕ ನೋಡಿದೆ.. ನಮ್ಮೋರು ಇರಲಿಲ್ಲ..

 ಸುತ್ಲೂ ನಾಯಿಗಳು ನರಿಗಳೂ ಕೂಗ್ತಾ ಇದ್ವು.. ಹಿಂದೆ ತಿರುಗಿ ನೋಡಿದೆ.. ಯಾರೂ ಇರಲಿಲ್ಲ.. ನಮ್ಮೋರು ಎಲ್ಹೋದ್ರು ಅಂತ ಯೋಚನೆ ಮಾಡ್ತಾ ಇದ್ದೆ.. ಅಷ್ಟರಲ್ಲೇ ಕಾರ್ ಡೋರ್ ಓಪನ್ ಅಯ್ತು.. ಸಡನ್ ಆಗಿ ತಿರುಗಿ ನೋಡಿದೆ.. ನಮ್ಮೋರೆ.. ಅಬ್ಬಾ.. ಸಮಾಧಾನ ಆಯ್ತು.. 

“ಎಲ್ಲಿಗ್ರೀ ಹೋಗಿದ್ರೀ ಒಬ್ಬಳನ್ನೇ ಬಿಟ್ಟು” ಅಂತ ಕೇಳ್ದೆ.. ಇಲ್ಲೇ ಹೋಗಿದ್ದೆ ಕಣೆ ಅಂತ ಬಂದು ಒಳಗೆ ಕೂತ್ಕೊಂಡ್ರು.. ಕಾರ್ ಸ್ಟಾರ್ಟ ಮಾಡಿದ್ರು.. ನಾನು ಹಿಂದಿನ ಸೀಟಲ್ಲಿ ಇದ್ದ ಸ್ವೆಟರ್ ತಗೊಂಡು ನಮ್ಮೋರ್ ಕಡೆ ತಿರುಗಿ ನೋಡಿದೆ.. ಅರೆ.. ಅವ್ರೇ ಇರಲಿಲ್ಲ.. ಡ್ರೈವಿಂಗ್ ಸೀಟ್ ಖಾಲಿ ಆಗಿತ್ತು..!   

ಇದ್ದಕ್ಕಿದ್ದಂಗೆ ಕಾರ್ ಮೇಲೆ ಯಾರೋ ಕುಟ್ಟುತಾ ಇರೋ ಶಬ್ಧ.. ಧಡ್ ಧಡ್ ಅಂತ.. ಭಯದಲ್ಲೇ ಕೆಳಗಿಳಿದು ನಿಧಾನಕ್ಕೆ ಮೇಲೆ ನೋಡಿದೆ.. ಯಾರೋ ವಿಚಿತ್ರವಾದ ವ್ಯಕ್ತಿ ನನ್ನ ಗಂಡನ ತಲೇನ ಕತ್ತರಿಸಿ, ಆ ತಲೆಯಿಂದಾನೇ ಕಾರ್ ಮೇಲೆ ಧಡ್ ಧಡ್ ಅಂತ ಕುಟ್ತಾ ಇದ್ದ.. ಕಾರ್ ಹಿಂದೆ ನೋಡಿದೆ.. ಅಲ್ಲಿ ರುಂಡ ಇಲ್ಲದ ನನ್ನ ಗಂಡನ ಮುಂಡ ಬಿದ್ದಿತ್ತು..

ಗೋರಿ ಮೇಲಿನ ಬರಹ.. ಕಥೆಗಾರ ಕಂಡ ಸತ್ಯ..!!


ಸಿನೆಮಾ ಪ್ರೊಡ್ಯೂಸರ್ ಒಬ್ರು ನನ್ ಹತ್ರ ಬಂದು ದೆವ್ವದ ಕಥೆ ಬರೆದು ಕೊಡಿ ಸಿನೆಮಾ ಮಾಡ್ತೀವಿ ಅಂತ ಹೇಳಿದ್ರು.. ದೆವ್ವದ ಕಥೆ ಬರಿಯೋಕೆ ಅಂತ ನಾನು ಬೆಂಗಳೂರಿನಲ್ಲಿರೋ ಸ್ಮಶಾನಕ್ಕೆ ಹೋದೆ.. ರಾತ್ರಿ ಹನ್ನೆರಡು ಮೂವತ್ತು ಆಗಿತ್ತು.. ಸ್ಮಶಾನದ ಒಳಗೆ ಬೆಳದಿಂದಳು ಬಿಟ್ರೆ, ಗೋರಿಗಳು ಮಾತ್ರ ಕಾಣ್ತಾ ಇದ್ದವು.. ನಾನು ಒಂದೊಂದ್ ಹೆಜ್ಜೆ ಇಟ್ಟಾಗಲೂ ಏನೋ ಶಬ್ಧ ಕೇಳಿಸ್ತಾ ಇತ್ತು.. ಯಾರೋ ನನ್ನ ಫಾಲೋ ಮಾಡ್ತಿದ್ದಾರೆ ಅನಿಸ್ತು.. ತಿರುಗಿ ನೋಡಿದ್ರೆ, ಯಾರೂ ಇಲ್ಲ.. ಕಾಲಿನ ಕೆಳಗೆ ನೋಡಿದೆ..!!
 
 ಮರದಿಂದ ಬಿದ್ದ ಎಲೆಗಳ ಮೆಲೆ ನಾನ್ ಕಾಲಿಟ್ಟಾಗ ಕರ್.. ಕರ್ ಅಂತ ಶಬ್ಧ ಬರ್ತಾ ಇತ್ತು.. ಸ್ವಲ್ಪ ಸಮಾಧಾನ ಆಯ್ತು.. ಧೈರ್ಯದಿಂದ ಮುಂದೆ ಹೋದೆ.. ಯಾವ್ದೋ ಕಲ್ಲಿಗೆ ಎಡವಿ ಮುಂದಿದ್ದ ಗೋರಿ ಮೇಲೆ ಬಿದ್ದೆ.. ಹಣೆಗೆ ಸ್ವಲ್ಪ ಏಟಾಗಿ ರಕ್ತ ಬರ್ತಾ ಇತ್ತು.. ತಲೆ ಎತ್ತಿ ನೋಡಿದೆ.. ಗೋರಿ ಮೇಲೆ ಬರೆದಿದ್ದ ಅಕ್ಷರ ನೋಡಿದೆ.. ಒಂದು ಕ್ಷಣ ನನ್ ಹೃದಯ ಹೊಡ್ಕೊಳ್ಳೋದೇ ನಿಂತೋಯ್ತು.. ಅದು ಬೇರೆ ಯಾರ್ದೂ ಅಲ್ಲ.. ನನ್ ಹತ್ರ ಬಂದು ದೆವ್ವದ ಕಥೆ ಬರೆದುಕೊಡಿ ಸಿನೆಮಾ ಮಾಡ್ತೀನಿ ಅಂತ ಹೇಳಿದ್ರಲ್ವಾ.. ಅದೇ ಪ್ರೊಡ್ಯೂಸರ್ ದು.. 

 ದೆವ್ವ ಇರೋದು ಕನ್ಫರ್ಮ ಆಯ್ತು.. ಎದ್ದು ಓಡೋಕ್ ಟ್ರೈ ಮಾಡ್ದೆ.. ಆದ್ರೆ ನನ್ ಕಾಲ್ನ ಯಾರೋ ಹಿಡ್ಕೊಂಡಿದ್ರು.. ಅದೇ ಟೈಮ್ ಗೆ ಕಂಬ್ಳಿ ಹೊದ್ಕೊಂಡಿದ್ದ ಒಬ್ಬ ವ್ಯಕ್ತಿ ಬಂದ.. ಹೇಯ್ ಭೂತವೇ.. ಒಳಗೆ ಹೋಗಿ ಮಲಗು.. ಚೇಷ್ಟೆ ಮಾಡಬೇಡ.. ಅಂತ ಹೇಳ್ದ.. ಅದು ನನ್ ಕಾಲ ಬಿಟ್ತು.. ಓಡು.. ಇಂಥ ಪರೀಕ್ಷೆಗಳನ್ನು ಮಾಡ್ಬೇಡ.. ನಿಂಗ್ ಹೆಂಗ್ ತೋಚುತ್ತೋ ಅಂತ ಕಥೆಗಳನ್ನು ಬರೀ.. ದೆವ್ವ ಭೂತ ಇದ್ಯೋ ಇಲ್ಲ ಅಂತ ಟೆಸ್ಟ್ ಮಾಡೋಕ್ ಬಂದ್ರೆ ದೆವ್ವಗಳಿಗೆ ಕೋಪ ಬರುತ್ತೆ.. ಓಡು.. ನಿಲ್ಬೇಡ ಓಡು ಅಂತ ಹೇಳಿದ.. ನಾನು ಅಲ್ಲಿಂದ ಹಿಂದೆ ತಿರುಗಿ೯ ನೋಡದಂತೆ ಓಡಿ ಬಂದು ಮನೇಗ್ ಸೇರಿದೆ.. ಆಮೇಲೆ ಗೊತ್ತಾಯ್ತು,., ನನ್ನನ್ನ ದೆವ್ವಗಳಿಂದ ಬಿಡಿಸಿದ್ದು ಅದೇ ಸ್ಮಶಾನವಾಸಿ ಸತ್ಯ ಹರಿಶ್ಚಂದ್ರ ಅಂತ.. ಹೌದು.. ಹರಿಶ್ಚಂದ್ರ ಈಗ್ಲೂ ಕೂಡ ಸ್ಮಶಾನ ಕಾಯ್ತಾ ಇದ್ದಾನೆ.. ದೆವ್ವಗಳಿಂದ ಜನರಿಗೆ ತೊಂದರೆ ಅಗ್ದೇ ಇರೋ ಹಾಗೆ ಕಾಯ್ತಾ ಇದ್ದಾನೆ..

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು