Recent Movies

ಸಿನೆಮಾ

Share This Article To your Friends

Showing posts with label ಕ್ರಾಂತಿ ಅಲೆಗಳು. Show all posts
Showing posts with label ಕ್ರಾಂತಿ ಅಲೆಗಳು. Show all posts

ಕರ್ನಾಟಕದಲ್ಲಿ ಅಮಿತ್ ಶಾ ಪ್ರಯೋಗಿಸ್ತಿರೋದು 2400 ವರ್ಷದ ಹಿಂದಿನ ರಣತಂತ್ರ!ವಾಹ್..! ಇದಪ್ಪಾ ಚಾಣಕ್ಯನ ರಣತಂತ್ರ ಅಂದ್ರೆ... ರಾಜಕೀಯ ಲೋಕದ ಚಾಣಕ್ಯ ಅಂತಲೇ ಕರೆಯಲಾಗುವ ಅಮಿತ್ ಶಾ ಕರ್ನಾಟಕವನ್ನು ಗೆಲ್ಲೋದಕ್ಕೆ ಸಖತ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಚಂದ್ರಗುಪ್ತ ಮೌರ್ಯನನ್ನು ಮುಂದಿಟ್ಟುಕೊಂಡು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು 2400 ವರ್ಷಗಳ ಹಿಂದೆ ಆ ಚಾಣಕ್ಯ ಎಂಥಾ ತಂತ್ರಗಳನ್ನು ಹೆಣೆದಿದ್ದರೋ, ಅಂಥದ್ದೇ ತಂತ್ರಗಳನ್ನು ಆಧುನಿಕ ಚಾಣಕ್ಯ ಹೆಣೆದಿದ್ದಾರೆ.

ರಾಜನಾದನವನು ಮೊದಲು ಪ್ರಜೆಗಳ ಬೇಕು ಬೇಡಗಳನ್ನು ತಿಳಿದುಕೊಳ್ಳಬೇಕು. ತಳ ಮಟ್ಟದಲ್ಲಿ ಎಂಥಾ ಪರಿಸ್ಥಿತಿ ಇದೆ ಎಂಬುದನ್ನು ಅರಿತು, ಅವರನ್ನು ಸಂಘಟಿಸಬೇಕು ಅನ್ನೋದು ಮೌರ್ಯ ಸಾಮ್ರಾಜ್ಯ ಕಟ್ಟಿದ ಚಾಣಕ್ಯನ ತಂತ್ರಗಾರಿಕೆಯಾಗಿತ್ತು. ಅದೇ ತಂತ್ರವನ್ನು ಅಮಿತ್ ಶಾ ಮೋದಿ ಸಾಮ್ರಾಜ್ಯ ಕಟ್ಟಲು ಬಳಸುತ್ತಿದ್ದಾರೆ. ಮೋದಿಯನ್ನು ಮುಂದಿಟ್ಟುಕೊಂಡು ಸಾಮ್ರಾಜ್ಯ ಗೆಲ್ಲಲು ರೆಡಿಯಾಗಿರೋ ಬಿಜೆಪಿ ಚಾಣಕ್ಯ ಮೊದಲು ಮಾಡಿದ್ದು ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸುವ ಕೆಲಸ.

ಚುನಾವಣೆಗೂ ಮೊದಲೇ ಅಂದ್ರೆ ಒಂದು ವರ್ಷದ ಹಿಂದೆಯೇ ಕರ್ನಾಟಕಕ್ಕಾಗಿ  ರಣತಂತ್ರಗಳನ್ನು ಹೆಣೆದಿದ್ದ ಅಮಿತ್ ಶಾ, ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಂತೆ ರಾಜ್ಯ ನಾಯಕರಿಗೆ ಕರೆ ಕೊಟ್ಟಿದ್ದರು, ಅಷ್ಟು ಸಾಲದು ಅಂತ, ತಮ್ಮ ಸೇನೆಯನ್ನು ಕರ್ನಾಟಕಕ್ಕೆ ಕಳಿಸಿ ಕೊಟ್ಟಿದ್ದರು.

8 ತಿಂಗಳ ಹಿಂದೆ ಕರ್ನಾಟಕಕ್ಕೆ ಕಾಲಿಟ್ಟರು ಅಮಿತ್ ಶಾ ಆರ್ಮಿಯ 100 ಸೈನಿಕರು. ನಂತರದಲ್ಲಿ ಕರ್ನಾಟಕಕ್ಕೆ ಬಂದರು 400 ಜನರ ಅಮಿತ್ ಶಾ ಟೀಂ. ಆಮೇಲೆ 28 ಜನರ ಮತ್ತೊಂದು ಪ್ರಚಾರ ಪ್ರಮುಖರನ್ನೂ ಅಮಿತ್ ಶಾ ಕರೆ ತಂದರು, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದರು.

ತಳಮಟ್ಟದಲ್ಲಿ ಪಕ್ಷ ಸಂಘಟಿಸಿದ ನಂತರ, ಕೊನೆಯಲ್ಲಿ ಮತ್ತೊಂದು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ರು ಚಾಣಕ್ಯ ಏನದು ಗೊತ್ತಾ? ಕೊನೆ ಕ್ಷಣದಲ್ಲಿ ಮೋದಿ ಅಲೆಯನ್ನು ಸೃಷ್ಟಿಸುವುದು. ಹಾಗೆ ಮಾಡಿದರೆ ಸೋಲುವ ಸಾಧ್ಯತೆ ಇರೋ ಜಾಗಗಳಲ್ಲೂ ಮೋದಿ ಅಲೆಯಲ್ಲಿ ಗೆಲುವು ದಕ್ಕಬಹುದು ಅನ್ನೋ ತಂತ್ರಗಾರಿಕೆ ಇತ್ತು. ಎಲ್ಲವೂ ಅದರಂತೆಯೇ ನಡೀತಿದೆ. ಮೋದಿ ಅಲೆ ಕರ್ನಾಟಕದಲ್ಲಿ ಜೋರಾಗ್ತಿದೆ. ಇದರ ನಡುವಲ್ಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾತ್ ಅವ್ರನ್ನು ಕರ್ನಾಟಕಕ್ಕೆ ಕರೆತಂದು, ಪ್ರಚಾರ ಮಾಡಿಸಲಾಗುತ್ತಿದೆ. ಇವೆಲ್ಲವೂ ಬಿಜೆಪಿ ಪರವಾದ ಅಲೆಯನ್ನು ಹೆಚ್ಚಿಸುತ್ತಿದ್ದು, ಕರ್ನಾಟಕದಲ್ಲಿ ಕಮಲ ಅರಳೋದು ಬಹುತೇಕ ನಿಶ್ಚಿತ ಅಂತ ಹೇಳಲಾಗುತ್ತಿದೆ. 

ಆದ್ರೆ ಅಮಿತ್ ಶಾ ತಂತ್ರಗಾರಿಕೆ ಅರಿತ ಸಿದ್ದರಾಮಯ್ಯ  ಒಂಟಿಯಾಗಿ ಅಖಾಡಕ್ಕೆ ಧುಮುಕಿದ್ದು, ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ರಚಿಸಲು ಹೆಣಗಾಡುತ್ತಿದ್ದಾರೆ. ಇತ್ತ ಕುಮಾರ ಸ್ವಾಮಿ ಕೂಡ ಈ ಸಲ ಕಪ್ ನಮ್ದೇ ಅಂತ ಗುನುಗುತ್ತಿದ್ದಾರೆ. ಆದರೆ ಮತದಾರನ ಚಿತ್ತ ಯಾರತ್ತ ಅನ್ನೋದು ಕಾದು ನೋಡಬೇಕಿದೆ.

ಭಾರತದ ಮೊದಲ ಮಹಿಳಾ ಕಮಾಂಡರ್​!

ಮಹಿಳೆ ಅಂದ್ರೆ ಬರೀ ಅಡಿಗೆ ಮನೆಗೆ ಮಾತ್ರ ಸೀಮಿತ ಅಲ್ಲ.. ಅವಕಾಶ ಸಿಕ್ರೇ ಆಕೆ ಎಂಥ ದಿಟ್ಟ ಮಹಿಳೆಯಾಗಿ ಯಶಸ್ಸು ಗಳಿಸ್ತಾಳೆ ಅನ್ನೋದನ್ನ ತೋರಿಸೋದಕ್ಕೆ, ಇವತ್ತಿನ ಸ್ಟೋರಿಯನ್ನ ಹೊತ್ತು ತಂದಿದ್ದೀವಿ. ಶತೃಗಳನ್ನು ಸದೆಬಡಿಯೋ ವೀರರನ್ನು ದೇಶಕ್ಕೆ ನೀಡ್ತಾ ಇರೋ ಓರ್ವ ಸಾಹಸಿಯ ಕಥೆ ಇದು.. ಆಕೆ ಬದುಕೇ ಒಂದು ರೋಚಕತೆಯಿಂದ ಕೂಡಿದೆ.

ಯಸ್.. ಇವತ್ತು ನಾವ್ ನಿಮಗೆ ಹೇಳೋಕೆ ಹೊರಟಿರೋಸ್ಟೋರಿ ಅಂತಿಂಥದ್ದಲ್ಲ ಕಣ್ರಿ.. ಇಡೀ ಜಗತ್ತಿಗೆ ಭಾರತದ ಪವರ್ ಏನು ಅನ್ನೋದನ್ನು ತೋರಿಸೋಕೆ ಹೊರಟಿರೋ ರೋಚಕ ಸ್ಟೋರಿ ಇದೆ. ಅದ್ರಲ್ಲೂ ಭಾರತದ ಮಹಿಳೆ ಎಂಥ ದಿಟ್ಟ ಮಹಿಳೆ ಅನ್ನೋದನ್ನು ತೋರಿಸೋ ರೊಮಾಂಚಕಾರಿಯಾದ ಸ್ಟೋರಿ ಕಣ್ರಿ..

ದೇಶ ಕಾಯೋ ಕೆಲ್ಸಕ್ಕೆ ಸೇರ್ಬೇಕಾದ್ರೆ, ಗಟ್ಟಿ ಗುಂಡಿಗೆ ಇರಬೇಕು.. ಯಾವ ಟೈಮಲ್ಲಿ ಶತೃಗಳು ಎಲ್ಲಿ ದಾಳಿ ನಡೆಸ್ತಾರೋ ಗೊತ್ತಾಗೋದಿಲ್ಲ.. ಶತೃಗಳಿಗೆ ಮಣ್ಣು ಮುಕ್ಕಿಸೋ ಖದರ್​ನ ಜೊತೆಗೆ ಎಂಟೆದೆ ಭಂಟನಂಥ ಗುಂಡಿಗೆ ಇರಬೇಕು.. ಆಗ್ಲೇ ದೇಶ ಕಾಯೋ ಸೈನಿಕನಾಗೋದಕ್ಕೆ ಸಾಧ್ಯವಾಗೋದು.. ಆವತ್ತು ಮುಂಬೈ ತಾಜ್ ಹೊಟೆಲ್​​ ಮೇಲೆ ಉಗ್ರರು ದಾಳಿ ಮಾಡಿದಾಗ, ಈ ಎಂಟೆದೆ ಭಂಟರೇ ಉಗ್ರರನ್ನು ಮಟ್ಟ ಹಾಕಿದ್ದು.. ಕೈನಲ್ಲಿ ಎಕೆ47 ಹಿಡ್ಕೊಂಡು, ಹೆಲಿಕಾಪ್ಟರ್​ನ ಹಗ್ಗದಿಂದ ತಾಜ್ ಹೊಟೆಲ್​ ಮೇಲಿಳಿದು ಕಾರ್ಯಾಚರಣೆ ನಡೆಸಿದ್ರು.. ಇವ್ರು ಇಡೋ ಪ್ರತಿ ಹೆಜ್ಜೇನೂ ಚಾಣಾಕ್ಷತನೆಯಿಂದ ಕೂಡಿರುತ್ತೆ ಕಣ್ರಿ.. ಉಗ್ರರ ತಂತ್ರಕ್ಕೆ ಪ್ರತಿತಂತ್ರ ಹೂಡೋ ಟ್ರಿಕ್ಸ್ ಇವ್ರಿಗೆ ಗೊತ್ತಿರುತ್ತೆ.. ಆ ತಂತ್ರಗಳನ್ನು ಬಳಸಿಕೊಂಡೇ 2008 ರಲ್ಲಿ ನಡೆದ ಮುಂಬೈ ದಾಳಿಯಲ್ಲಿ, ನಮ್ಮ ಕಮಾಂಡೋಸ್​​ ಉಗ್ರರನ್ನು ಮಟ್ಟ ಹಾಕಿದ್ದು..

ನಮ್ಮ ದೇಶವನ್ನು ಇಂಚಿಂಚಾಗಿ ಕಾಪಾಡ್ತಿರೋ ಇಂಥಾ ಬ್ರಿಲಿಯಂಟ್​ ಕಮಾಂಡೋಗಳನ್ನು ಹುಟ್ಟು ಹಾಕಿದ್ದು ಒಬ್ಬ ಲೇಡಿ ಕಣ್ರಿ... ಅವ್ರೇ ಸೀಮಾ ರಾವ್​..!

ಯಸ್.. ಸೇನೆ ಸೇರ್ಬೇಕು ಅಂದ್ರೆ ಗುಂಡಿಗೆ ಗಟ್ಟಿ ಇರ್ಬೇಕು.. ಆದ್ರೆ ಎಂಟೆದೆ ಭಂಟರನ್ನೇ ನಡುಗಿಸಿದ ವೀರ ವನಿತೆ ಈ ಸೀಮಾ ರಾಯ್​... ಇವತ್ತು ನಮ್ಮ ದೇಶವನ್ನು ಕಾಪಾಡ್ತಾ ಇರೋ ಭಾರತದ ಕಮಾಂಡೋಗಳಿಗೆ ಟ್ರೈನಿಂಗ್ ಕೊಟ್ಟಿರೋ ಒನ್ ಅಂಡ್ ಓನ್ಲಿ ಲೇಡಿ ಕಮಾಂಡರ್​ ಇವ್ರು.. ನಮ್ಮ ದೇಶದಲ್ಲೇ ಈ ಮಹಿಳೇ ಥರ ಯಾರೂ ಇಲ್ಲ.. ಮಹಿಳಾ ಸಮಾಜವೇ ಹೆಮ್ಮೆ ಪಡೋ ಈ ಮಹಿಳಾ ಮಣಿ, ಭಾರತದ ಮೊಟ್ಟ ಮೊದಲ ಮಹಿಳಾ ಕಮಾಂಡರ್​ ಟ್ರೈನರ್​...

ಸಿಂಹ ಇವ್ರು.. ಶತೃಗಳು ಅಪ್ಪಿ ತಪ್ಪಿ ಇವ್ರ ಕೈಗೆ ಸಿಕ್ಕುಬಿಟ್ರೆ, ಅವ್ರ ಎದೆ ಬಗೆದು ಬಿಡೋ ವೀರ ವನಿತೆ.. ಭಾರತದ ಸಾವಿರಾರು ಯೋಧರಿಗೆ ಹೋರಾಟದ ಟ್ರಿಕ್ಸ್ ಕಲಿಸಿದ ಎಂಟೆದೆ ಗುಂಡಿಗೆ ಇರೋ ಭಾರತದ ದಿಟ್ಟ ಮಹಿಳೆ ಈ ಸೀಮಾ ರಾಯ್​..

ಶತೃಗಳ ಜೊತೆ ಸೆಣೆಸಾಡೋ ಸೈನಿಕರ ಕೆಲಸ ಅಂದ್ರೆನೇ ಸಾವಿನ ಜೊತೆ ಆಡೋ ಜೂಟಾಟ ಇದ್ದಂಗೆ ಕಣ್ರಿ.. ಇಂಥ ಸೈನಿಕರಿಗೇ ಶತೃಗಳನ್ನು ಮಟ್ಟ ಹಾಕೋ ಟ್ರಿಕ್ಸ್​ಗಳನ್ನ ಕೊಡೋ ಮಟ್ಟಕ್ಕೆ ಈ ಸೀಮಾ ರಾವ್​ ಬೇಳೆದಿದ್ದಾರೆ. ಕಳೆದ 18 ವರ್ಷಗಳಿಂದ ಸಾವಿರಾರು ಯೋಧರಿಗೆ ಮಾರ್ಷಲ್ ಆರ್ಟ್ಸ್​​​​ ಟ್ರಿಕ್ಸ್​ನ ಜೊತೆಗೆ ಶತೃಗಳನ್ನು ಮಣ್ಣು ಮುಕ್ಕಿಸೋದರ ಬಗ್ಗೆ ಕಮಾಂಡೋಗಳಿಗೆ ತರಬೇತಿ ನೀಡ್ತಿದ್ದಾರೆ.. ಭಾರತದ ದಿಟ್ಟ ವ್ಯಕ್ತಿತ್ವದ ಈ ಮಹಿಳೆಯ ಕಡೆ, ಈಗ ಇಡೀ ಜಗತ್ತೇ ತಿರುಗಿ ನೋಡ್ತಿದೆ ಕಣ್ರಿ..

ಇವ್ರು ಈ ಮಟ್ಟಕ್ಕೆ ಬೆಳೆದಿರೋದೇ ಒಂದು ರೋಚಕ ಕಥೆ ಇದೆ ಕಣ್ರಿ.. ನಿಜ್ವಾಗ್ಲೂ ನೀವು ಅದನ್ನು ಕೇಳಿದ್ರೆ, ಒಂದು ಕ್ಷಣ ಅಬ್ಬಬ್ಬಾ ಅಂದು ಬಿಡ್ತೀರ.. ಸೀಮಾ ರಾಯ್​​ ಈ ಮಟ್ಟಕ್ಕೆ ಬೆಳೆಯೋದಕ್ಕೆ ಕಾರಣಾನೇ ಇವ್ರ ತಂದೆ ಕಣ್ರಿ.. ಅವ್ರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವ್ರು.. ಅವ್ರ ಮಗಳಾದ ಸೀಮಾ ರಾಯ್​ಗೆ, ದೇಶಪ್ರೇಮ ಅನ್ನೋದು ರಕ್ತದ ಕಣದಲ್ಲೇ  ಬಂದ್ಬಿಟ್ಟಿದೆ..

ಈ ಸೀಮಾ ರಾವ್​ ಓದಿದ್ದು ವೈದ್ಯಕೀಯ ಶಿಕ್ಷಣ ಕಣ್ರಿ.. ಲಂಡನ್​ನಲ್ಲಿ ಎಂಬಿಎ ಕೂಡ ಮಾಡಿದ್ರು.. ಫಾರಿನ್​ಗೆ ಹೋಗಿ ಆರಾಮಾಗಿ ಸೆಟ್ಲ್​ ಅಗಿ, ಲಕ್ಷ ಲಕ್ಷ ಸಂಬಳ ತಗೊಂಡಿ ಇರಬಹುದಾಗಿತ್ತು.. ಆದ್ರೆ, ಅದೆಲ್ಲವನ್ನೂ ಬಿಟ್ಟು ಭಾರತದ ಮಾತೆಯ ವೀರ ಯೋಧರಿಗೆ, ತರಬೇತಿ ನೀಡೋಕೆ ಮುಂದಾದ್ರು..

ನಿಮ್ಗೆ ಗೊತ್ತಿಲ್ದೇ ಇರೋ ಇನ್ನೊಂದ್ ವಿಷ್ಯಾ ಇದೆ ಕಣ್ರಿ.. ಒಂದ್​ ಸಣ್ಣ ಉಪಕಾರ ಮಾಡಿದ್ರೂ, ಅದಕ್ಕೆ ಪ್ರತಿಫಲ ಮಾಡೋ ಕಾಲ ಇದು.. ಆದ್ರೆ ಯಾವ ಪ್ರತಿಫಲಾನೂ ಇಲ್ಲದೇ ಸಾವಿರಾರು ಕಮಾಂಡೋಗಳಿಗೆ ಟ್ರೀನಿಂಗ್ ನೀಡಿದ್ದಾರೆ. 18 ವರ್ಷಗಳ ಕಾಲ ಕಮಾಂಡೋಗಳಿಗೆ ಟ್ರೈನಿಂಗ್ ನೀಡಿದ ಸೀಮಾ ರಾವ್​, ಸರ್ಕಾರದಿಂದ ಒಂದ್ ಪೈಸೆ ದುಡ್ಡು ಕೂಡ ಇಸ್ಕೊಂಡಿಲ್ಲ..

ಯಾವ ಗೌರವ ಧನಾನೂ ಇಲ್ಲದೇ, ನಿಸ್ವಾರ್ಥ ಮನಸ್ಸಿನಿಂದ, ಭಾರತವನ್ನು ಕಾಪಾಡೋ ವೀರರಿಗೆ ತನ್ನಿಂದಾದ ಟ್ರಿಕ್ಸ್್ಗಳನ್ನು ಹೇಳಿಕೊಟ್ಟಿದ್ದಾರೆ. ನಾನು ಮಹಿಳೆ ಅನ್ನೋ ಕಟ್ಟುಪಾಡಿನ ಬಾರ್ಡರ್​ ದಾಟಿ ಬಂದು, ದೇಶ ಕಾಯೋ ದಿಟ್ಟ ಯೋಧರನ್ನು ಹುಟ್ಟು ಹಾಕ್ತಿದ್ದಾರೆ ಸೀಮಾ ರಾಯ್​.. ತಮ್ಮ ಸೇವೆಗೆ ದುಡ್ಡು ಕೂಡ ಪಡೆಯದೇ, ನಿಸ್ವಾರ್ಥ ದೇಶಸೇವೆ ಮಾಡಿದ್ದಾರೆ. ಆದ್ರೆ ನಿಜ ಜೀವನದಲ್ಲಿ ಆಕೆ ಅನುಭವಿಸಿದ ಪರಿಸ್ಥಿತಿ ಇದ್ಯಲ್ಲಾ.. ನಿಜಕ್ಕೂ ಯಾರಿಗೂ ಬೇಡ ಅನ್ಸುತ್ತೆ.. ಆ ಕರುಣಾಜನಕ ಕಥೆ ಮುಂದಿದೆ ಓದಿ..
------------------------------------
ಸೀಮಾ ರಾವ್​​ ಓದಿದ್ದು ಎಂಬಿಬಿಎಸ್.. ಮನಸ್ಸು ಮಾಡಿದ್ರೆ, ಕೈತುಂಬಾ ಸಂಬಳ ಬರೋ ಕೆಲಸ ನೋಡ್ಕೊಂಡು, ಫಾರಿನ್​ನಲ್ಲಿ ಸೆಟ್ಲ್​ ಆಗಬಹುದಿತ್ತು. ಆದ್ರೆ, ತಂದೆಯಿಂದ ಬಂದ ದೇಶ ಪ್ರೇಮ, ಆಕೆಯನ್ನು ಭಾರತದ ಸೇವೆಗೆ ಅಣಿಯಾಗುವಂತೆ ಮಾಡಿತ್ತು..

ಓದಿನಲ್ಲೂ ಸೀಮಾ ರಾವ್​ ಭೇಷ್ ಅನ್ನಿಸಿಕೊಂಡಾಕೆ ಕಣ್ರಿ.. ಎಂಬಿಬಿಎಸ್​, ಎಂಬಿಎ ಓದಿದ್ದಾರೆ. ಇದಾದ ನಂತರ, ಮಿಲಿಟರಿ ಸೈನ್ಸ್​ ಅನ್ನೂ ಅರೆದು ಕುಡಿದಿದ್ದಾರೆ.. ಕಾನೂನಿನಲ್ಲಿ ಪಿಹೆಚ್​ಡಿ ಮಾಡಿ, ಡಾಕ್ಟರ್​ ಸೀಮಾ ರಾವ್ ಅಂತ ಬಿರುದಾಂಕಿತರಾಗಿದ್ದಾರೆ.. ಕರಾಟೆ, ಮಾರ್ಷಲ್​ ಆರ್ಟ್​ನಲ್ಲಂತೂ, ಇವ್ರನ್ನು ಮೀರಿಸೋರು ಯಾರೂ ಇಲ್ಲ.. ಇದೇ ಇವ್ರಿಗೆ ವರವಾಗಿದ್ದು..

ಮಿಲಿಟರಿ ತಂಡದಲ್ಲಿ ಗಂಡಭೇರುಂಡನಾಗಿ ಹೋರಾಡಿದ ದೀಪಕ್ ರಾಯ್​ ಜೊತೆ ಸೀಮಾರಾಯ್​ ಮದುವೆಯಾಗುತ್ತೆ ಕಣ್ರಿ.. ಇವ್ರ ಈ ಸಾಧನೆಗೆ ಬೆನ್ನೆಲುಬಾಗಿ ನಿಲ್ತಾರೆ ದೀಪಕ್ ರಾಯ್.. 90 ರ ದಶಕದಲ್ಲಿ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಸೇನೆಗೆ ಸೇರಿಕೊಳ್ತಾರೆ.. ಆ ಮೂಲಕ, ಭಾರತದ ಮೊದಲ ಲೇಡಿ ಕಮಾಂಡೋ ಟ್ರೈನರ್ ಆಗಿ ತಮ್ಮ ಸೇವೆ ಆರಂಭಿಸ್ತಾರೆ..

ಯುದ್ಧಭೂಮಿಯಲ್ಲಿ ಶತೃ ಹೂಡುವ ತಂತ್ರಕ್ಕೆ ಹೇಗೆ ಪ್ರತಿ ತಂತ್ರ ಹೂಡ್ಬೇಕು ಅನ್ನೋ ಟ್ರಿಕ್ಸ್ ಅನ್ನ ಹೇಳಿಕೊಟ್ಟಿದ್ದಾರೆ. ವೈಮಾನಿಕ ಸಾಹಸದಲ್ಲೂ ಶೌರ್ಯ ಮರೆದಿದ್ದಾರೆ.. ಕೈನಲ್ಲಿ ಯಾವ ಆಯುಧ ಇಲ್ದೇ ಇದ್ರೂ, ಶತೃ ಎದುರಾದಾಗ, ಆತನನ್ನ ಹೇಗೆ ಕ್ಷಣಾರ್ಧದಲ್ಲಿ ನೆಲಕ್ಕುರುಳಿಸಬೇಕು ಅನ್ನೋ ಟ್ರಿಕ್ಸ್​ಗಳು ಸೀಮಾರಾಯ್​ಗೆ ಚೆನ್ನಾಗಿ ಗೊತ್ತಿದೆ. ಆ ತಂತ್ರಗಳನ್ನು ಕಮಾಂಡೋಗಳಿಗೆ ಕಲಿಸಿಕೊಟ್ಟಿದ್ದಾರೆ.

ಇನ್ನು ಸ್ಕೈ ಡೈವಿಂಗ್​ನಲ್ಲೂ ಸೀಮಾರಾಯ್​ಗೆ ಸರಿ ಸಾಟಿ ಯಾರೂ ಇಲ್ಲ ಕಣ್ರಿ.. ಹಾರೋ ವಿಮಾನದಿಂದ ನೆಲಕ್ಕೆ ಜಿಗಿದು, ಸಾಹಸ ಮೆರೆಯೋ ಎಂಟೆದೆ ಗುಂಡಿಗೆ ಇವ್ರದ್ದು.. ಬೆಟ್ಟ ಗುಡ್ಡಗಳಲ್ಲಿ, ಪವರ್ತಾರೋಹಣದಲ್ಲೂ, ಹಿಗ್ಗಿನಿಂದಲೇ ಮುನ್ನುಗ್ಗೋ ಛಲಗಾತಿ ಇವ್ರು..

ಮಹಿಳೆಯಾಗಿದ್ರೂ, ಇವ್ರು ಕಮಾಂಡೋಗಳಿಗೆ ನೀಡ್ತಿರೋ ಟ್ರೈನಿಂಗ್​ ತುಂಬಾನೇ ಮಹತ್ವದ್ದಾಗಿದೆ ಕಣ್ರಿ. ಅದ್ರಲ್ಲೂ 2008 ರಲ್ಲಿ ಮುಂಬೈ ಮೇಲೆ ದಾಳಿ ನಡೆದಾಗ, ಸೀಮಾ ರಾಯ್​ ತರಬೇತಿ ನೀಡಿದ ಕಮಾಂಡೋ ಪಡೆಯ ಸಾಹಸ ನಿಜಕ್ಕೂ ಮೆಚ್ಚಲೇ ಬೇಕು.. ಅದಿಕ್ಕೇ.. ಇವ್ರ ಸಾಹಸ ಪ್ರವೃತ್ತಿಯನ್ನು ಕಂಡ ಭಾರತ ಸೇನೆ, ಡಾ.ಸೀಮಾರಾವ್​ ಮತ್ತು ಪತಿ ದೀಪಕ್​ ರಾವ್​ ಅವ್ರನ್ನ ಗೌರವಿಸ್ತು. ಭಾರತದ ಎಲ್ಲಾ ರಾಜ್ಯಗಳಲ್ಲಿರೋ ಕಮಾಂಡೋ ಪಡೆಗೆ ಟ್ರೈನಿಂಗ್ ನೀಡೋದಕ್ಕೆ ಇವರನ್ನ ನೇಮಿಸಿತು..

ಸೇನಾ ಮುಖಂಡರ ಆದೇಶದ ಅನ್ವಯ ರಾಜ್ಯಗಳಲ್ಲಿರೋ ಕಮಾಂಡೋಪಡೆಗೆ ತರಬೇತಿ ನೀಡೋದಕ್ಕೆ ಅಂತ ಅಣಿಯಾತ್ತು ಈ ಸೀಮಾ ರಾವ್​​ ತಂಡ..
----------------------------------------------
ಭಾರತ ಸೇನೆಯಲ್ಲಿ 18 ವರ್ಷಗಳ ನಿಸ್ವಾರ್ಥ ಸೇವೆ
20 ರಾಜ್ಯಗಳಲ್ಲಿನ ಕಮಾಂಡೋಗಳಿಗೆ ತರಬೇತಿ
15 ಸಾವಿರ ಕಮಾಂಡೋಗಳಿಗೆ ಹೇಳಿಕೊಟ್ರು ಟ್ರಿಕ್ಸ್
----------------------------------------------

ಭಾರತ ಸೇನೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಸೀಮಾ ರಾವ್, ಒಟ್ಟು 18 ವರ್ಷಗಳ ಕಾಲ ಕಮಾಂಡೋಗಳಿಗೆ ಮಾರ್ಷಲ್ ಆರ್ಟ್ಸ್​​ ಟ್ರಿಕ್ಸ್​ಗಳನ್ನು ಹೇಳಿ ಕೊಟ್ಟಿದ್ದಾರೆ. ಸುಮಾರು 20 ರಾಜ್ಯಗಳಲ್ಲಿರೋ 15 ಸಾವಿರಕ್ಕೂ ಹೆಚ್ಚು ಕಮಾಂಡೋಗಳನ್ನು ಟ್ರೈನಪ್ ಮಾಡಿದ್ದಾರೆ.

ಗನ್ ಹಿಡ್ಕೊಂಡು ಎದುರಾಳಿ ಗುಂಡಿಗೆ ಸೀಳೋದೂ ಗೊತ್ತು., ಬರೀ ಗೈನಲ್ಲಿ ಎದುರಾಳಿಯ ಎದೆ ಬಗೆಯೋದು ಗೊತ್ತು.. ಆಧುನಿಕ ಯುದ್ಧ ತಂತ್ರಜ್ಞಾನಗಳ ಬಳಕೆ ಕೂಡ ಇವ್ರಿಗೆ ಕರಗತವಾಗಿತ್ತು. ಈ ಎಲ್ಲಾ ಟ್ರಿಕ್ಸ್​​ಗಳನ್ನು ಯುದ್ಧಭೂಮಿಯಲ್ಲಿ ನಿಂತು ಭಾರತ ಮಾತೆಯ ರಕ್ಷಣೆಗಾಗಿ ಹೋರಾಟ ಮಾಡ್ತಿರೋ ವೀರ ಯೋಧರಿಗೆ ಹೇಳಿ ಕೊಟ್ಟಿದ್ದಾರೆ.

ಸೀಮಾರಾವ್​ಗೆ ಗೊತ್ತಿಲ್ದೇ ಇರೋ ವಿಷ್ಯಾನೇ ಇಲ್ಲಾ.. ಅವ್ರು ಒಂದು ಕಾಲದಲ್ಲಿ ಬ್ಯೂಟಿ ಕ್ವೀನ್ ಆಗಿದ್ರು. ಸೇನಾ ಕಮಾಂಡರ್ ಆದ್ರು.. ಆಮೇಲೆ ಲೇಖಕರೂ ಆದ್ರು.. ಇಷ್ಟೆಲ್ಲಾ ವ್ಯಕ್ತಿತ್ವವುಳ್ಳ ಸೀಮಾರಾವ್​ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ..? ಆ ಸ್ಟೋರಿ ಕೇಳಿದ್ರೆ, ನಿಜಕ್ಕೂ ನೀವು ಕಣ್ಣೀರ್ ಹಾಕ್ತೀರ.. ಆ ಸ್ಟೋರಿ ಮುಂದಿದೆ ಓದಿ..
------------------------------------------------------------------
ಸೀಮಾ ಬಗ್ಗೆ ನೀವು ತಿಳ್ಕೊಬೇಕಾದಂಥ ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯಾ ಇದೆ.. ಅದೇನಪ್ಪಾ ಅಂದ್ರೆ, ಸೀಮಾರಾವ್ ಕೇವಲ ಸೇನಾ ಕಮಾಂಡರ್ ಟ್ರೈನರ್ ಮಾತ್ರವಲ್ಲ.. ಬ್ಯೂಟಿ ಕ್ವೀನ್ ಕೂಡ ಹೌದು.. ಪದಗಳನ್ನು ಅದ್ಬುತವಾಗಿ ಪೋಣಿಸೋ ಸಾಹಿತಿ ಕೂಡ ಹೌದು.. ಆದ್ರೆ ಸೇನೆಗೆ ಮಾತ್ರವೇ ತಮ್ಮ ಸಂಪೂರ್ಣ ಬದುಕನ್ನು ಮುಡಿಪಿಟ್ಟಿದ್ರು.. ಆದ್ರೆ ಅವ್ರ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ..? ಮುಂದೆ ಓದಿ

ಸೀಮಾರಾವ್ ಅಂತಿಂಥ ಹೆಣ್ಣಲ್ಲ.. ಮಹಿಳಾ ಮಾಣಿಕ್ಯ ಕಣ್ರಿ.. ಭಾರತದಂಥ ರಾಷ್ಟರರದಲ್ಲಿ ಮಿಲಿಟರಿ ಸೈನಿಕರಿಗೆ ತರಬೇತಿ ನೀಡೋ ಸಾಮರ್ಥ್ಯ ಇವ್ರಿಗೆ ಇದೆ ಅಂದ್ರೆ, ಇವ್ರ ತಾಕತ್ತು ಎಂಥದ್ದು ಅಂತ ಗೊತ್ತಾಗುತ್ತೆ..

ಇವ್ರು ಬರೀ ಸೇನಾ ಕ್ಷೇತ್ರದಲ್ಲಿ ಮಾತ್ರ ಹೆಸರಾಗಿಲ್ಲ ಕಣ್ರಿ. ಬ್ಯೂಟಿ ಕ್ಷೇತ್ರದಲ್ಲೂ ಮಿಂಚಿದ್ದಾರೆ.. ರೂಪದರ್ಶಿಯಾಗಿ ಕೂಡ, ತಮ್ಮನ್ನು ತಾವು ಗುರ್ತಿಸಿಕೊಂಡಿದ್ರು ಈ ಸೀಮಾ ರಾವ್​.. ಆದ್ರೆ ದೇಶಸೇವೆ ಅನ್ನೋದು ಇವ್ರನ್ನು ಕಮಾಂಡೋ ಟ್ರೈನರ್​ ಆಗಿ ಮಾಡ್ತು ಕಣ್ರಿ.. ಅದಿಕ್ಕೆ ಬಣ್ಣದ ಲೋಕವನ್ನು ಬಿಟ್ಟು, ವೈದ್ಯಕೀಯ ಪದವಿಯನ್ನು ಪಕ್ಕಕ್ಕಿಟ್ಟು, ಕಮಾಂಡೋಗಳಿಗೆ ತಂತ್ರಗಳನ್ನು ಕಲಿಸಿಕೊಡೋ ಶಕ್ತಿಯಾಗಿ ನಿಂತುಬಿಟ್ರು..

ಸೀಮಾ ರಾವ್​ ಶಿಷ್ಯನ ಜೊತೆ ಯಾವ ಶತೃವಾದ್ರೂ ಯುದ್ಧಕ್ಕೆ ಇಳಿದ ಅಂದ್ರೆ, ಆತನ ಮೈಮೂಳೆಗಳು ಕ್ಷಣಮಾತ್ರದಲ್ಲು ಪುಡಿ ಪುಡಿಯಾಗ್ತಿದ್ದಿದ್ದು ಗ್ಯಾರಂಟಿ ಕಣ್ರಿ.. ಬರೀ ಕೈನಲ್ಲೇ ಇದ್ರೂ, ಶತೃ ತನ್ನ ಆಯುದ್ಧ ತೆಗೆಯೋಷ್ಟ್ರಲ್ಲಿ ಮಣ್ಣು ಮುಕ್ಕಿಸಿಬಿಡ್ತಾರೆ..

ಇಂಥಾ ಹಲವಾರು ಟ್ರಿಕ್ಸ್್​ಗಳನ್ನು ಸೀಮಾರಾಯ್ ಕಮಾಂಢೋಗಳಿಗೆ ಹೇಳಿಕೊಟ್ಟಿದ್ದಾರೆ. ಇಷ್ಟೇ ಅಲ್ಲ, ತನ್ನಲ್ಲಿರೋ ತಂತ್ರಗಾರಿಕೆಯನ್ನ ಮುಂದಿನ ಜನಾಂಗಕ್ಕೂ ತಿಳಿಸ್ಬೇಕು ಅಂತ, ಪುಸ್ತಕದ ರೂಪದಲ್ಲಿ ಅದನ್ನು ಅಚ್ಚೊತ್ತಿದ್ದಾರೆ. ಮಾರ್ಷಲ್ ಆರ್ಟ್ಸ್​ ಮತ್ತು ತಂತ್ರಗಾರಿಕೆ ಜೊತೆಗೆ ಹಲವಾರು ಪುಸ್ತಕಗಳನ್ನ ಬರೆದಿದ್ದಾರೆ ಈ ಸೀಮಾ ರಾವ್​..

ಇವ್ರ ಈ ಸೇವೆಗೆ ರಾಷ್ಟ್ರಪತಿ ಪದಕ ಒಲಿದು ಬಂದಿದೆ. ಭಾರತದ ದಿಟ್ಟ ಮಹಿಳೆಯ ಸಾಹಸವನ್ನು ಕಂಡು ಬೆರಗಾದ ಅಮೆರಿಕ ಮತ್ತು ಮಲೇಷಿಯಾದಂಥ ದೇಶಗಳೂ ಕೂಡ, ಇವ್ರನ್ನ ಸನ್ಮಾನಿಸಿವೆ. ದೇಶಕ್ಕಾಗಿ ಇಷ್ಟೆಲ್ಲಾ ಸೇವೆ ಮಾಡಿದ ಈ ಸಾಹಸಿ, ಪರಿಸ್ಥಿತಿ ಈಗ ಅಧೋಗತಿ ತಲುಪಿದೆ.. ಈಗ್ಲೋ ಆಗ್ಲೋ ಅನ್ನೋ ಜೀವ ಭಯದಲ್ಲಿ ಸೀಮಾ ರಾವ್​ ಬದುಕ್ತಿದ್ದಾರೆ ಕಣ್ರಿ.

ತಮ್ಮ 18 ವರ್ಷದ ತರಬೇತಿಯಲ್ಲಿ, ಯಾರೂ ಮಾಡಲಾಗದ ಟ್ರಿಕ್ಸ್​​ಗಳನ್ನು ಮಾಡಿದ್ದಾರೆ. ಸಾವಿರಾರು ಕಮಾಂಡೋಗಳಿಗೆ ಅದನ್ನ ಹೇಳಿಕೊಟ್ಟಿದ್ದಾರೆ. ಆದ್ರೆ ಈ ವೇಳೆ, ಸೀಮಾರಾವ್ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದೆ ಕಣ್ರಿ.. ಅದು ಈಗ ಅವ್ರನ್ನ ಕಾಡ್ತಾ ಇದೆ.. ಅಷ್ಟೇ ಅಲ್ಲ, ದೇಹದ ಕೆಲವು ಮೂಳೆಗಳು ಮುರಿದು ಹೋಗಿವೆ. ಇದ್ರ ಜೊತೆಗೆ ಅಮ್ನೇಷಿಯಾ ಅನ್ನೋ ಖಾಯಿಲೆ ಇವರನ್ನ ಕಿತ್ತು ತಿಂತಾ ಇದೆ.

ಇನ್ನು ಇವ್ರ ಪತಿ ದೀಪಕ್​ ರಾವ್​​ ಆದ್ರೂ ಇವ್ರನ್ನ ನೋಡ್ಕೋತಾರೆ ಅಂತ ಅಂದ್ರೆ, ಅವ್ರಿಗೂ ಆ ದೇವ್ರು ಖಾಯಿಲೆಗಳ ಸರಮಾಲೆ ನೀಡಿದ್ದಾನೆ. ದೀಪಕ್​ ರಾವ್​ ಅವ್ರ ಒಂದು ಕಣ್ಣು ಈಗ ಕಾಣ್ತಾ ಇಲ್ಲ ಕಣ್ರಿ.. ಮೊಣಕಾಲಿನ ಸಮಸ್ಯೆ ಕೂಡ ಅವ್ರನ್ನ ಬಾಧಿಸ್ತಾ ಇದೆ..

ದೇಶಕ್ಕಾಗಿ ಬದುಕನ್ನೇ ಮುಡಿಪಿಟ್ಟ ಈ ದಂಪತಿಗಳ ಪರಿಸ್ಥಿತಿ ಈಗ ನಿಜಕ್ಕೂ ಅಯ್ಯೋ ಅನ್ನೋ ಥರ ಇದೆ ಕಣ್ರಿ,..  ತಮ್ಮ ಸೇವೆಗೆ ಸರ್ಕಾರದಿಂದ ಒಂದು ರೂಪಾಯಿ ಹಣವನ್ನೂ ಪಡೆಯದೇ, ದೃಶ ಪ್ರೇಮ ಮೆರೆದ ಈ ದಂಪತಿಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ..

ನೋಡಿದ್ರಲ್ಲಾ.. ಭಾರತದ ದಿಟ್ಟ ಮಹಿಳೆಯ ಸಾಹಸದ ಕಥೆಯನ್ನ.. ಅವಕಾಶ ಕೊಟ್ರೆ, ಜಗತ್ತೇ ಮೆಚ್ಚುವಂತೆ ಬೆಳೀತೀನಿ ಅನ್ನೋದಕ್ಕೆ, ಸೀಮಾ ರಾವ್​ ಬದುಕೇ ಸಾಕ್ಷಿ.. 18 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಈ ದಂಪತಿಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಅನ್ನೋದೇ ನಮ್ಮ ಆಶಯ..

ಅರಬ್ಬಿ ಸಮುದ್ರದಲ್ಲಿ ಜಗತ್ತಿನ ಅತಿ ಎತ್ತರದ ಪ್ರತಿಮೆ

ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿದ ಸ್ವಾಭಿಮಾನಿ ಶಿವಾಜಿ ಮಹಾರಾಜ್​.. ಬ್ರಿಟೀಷರ ಗುಂಡಿಗೆ ನಡುಗಿಸಿದ ಸಾಮ್ರಾಟನೀಗ, ಜಗತ್ತಿನ ಅತಿ ಎತ್ತರದ ಪ್ರತಿಮೆ ಮೂಲಕ ಎದ್ದು ನಿಲ್ಲೋದಕ್ಕೆ ರೆಡಿಯಾಗಿದ್ದಾನೆ. ಆ ಮೂಲಕ, ಜಗತ್ತಿನ ಇತಿಹಾಸದ ಪುಟಗಳಲ್ಲಿ, ಶಿವಾಜಿ ಹೆಸರು ರಾರಾಜಿಸುವಂತೆ ಮಾಡೋದಕ್ಕೆ, ಪ್ಲಾನ್ ಸಿದ್ಧವಾಗಿದೆ.

    ಶಿವಾಜಿ ಮಹಾರಾಜ್​.. ಕಣಕಣದಲ್ಲೂ ಸ್ವಾಭಿಮಾನ ತುಂಬಿಕೊಂಡ ದೇಶಭಕ್ತ.. ಇತಿಹಾಸದ ಪುಟಗಳಲ್ಲಿ ರಾರಾಜಿಸಿದ ಈ ಸಾಮ್ರಾಟ, ಈಗ ಪ್ರತಿಮೆಯ ಮೂಲಕ ಎದ್ದು ನಿಲ್ಲಲ್ಲೋದಕ್ಕೆ ರೆಡಿಯಾಗಿದ್ದಾನೆ. ಅದೂ ಸಣ್ಣ ಪುಟ್ಟ ಪ್ರತಿಮೆಯಲ್ಲ.. ಜಗತ್ತೇ ನಿಬ್ಬೆರಗಾಗುವಂತೆ ಮಾಡುವ, ವಿಶ್ವದ ಅತಿ ಎತ್ತರದ ಪ್ರತಿಮೆಯ ಮೂಲಕ, ಖಡ್ಗ ಹಿಡಿದು ನಿಲ್ಲಲಿದ್ದಾನೆ ಶಿವಾಜಿ..

ಇದುವರೆಗೂ ಜಗತ್ತಿನ ಅತಿ ಎತ್ತರದ ಪ್ರತಿಮೆ ಯಾವುದು ಅಂದ್ರೆ, ಅಮೆರಿಕದಲ್ಲಿ 1886 ರಲ್ಲಿ ನಿರ್ಮಾಣವಾದ ಸ್ಟಯಾಚು ಆಫ್ ಲಿಬರ್ಟಿ ಅಂತ ಎಲ್ರೂ ಹೇಳ್ತಿದ್ರು.. ಯಾಕಂದ್ರೆ ಸ್ಟ್ಯಾಚು ಆಫ್ ಲಿಬರ್ಟಿಯ ಎತ್ತರ ಬರೋಬ್ಬರಿ 305 ಅಡಿ ಎತ್ತರ..

ಆದ್ರೆ ಈ ಸ್ಟ್ಯಾಚು ಆಫ್​ ಲಿಬರ್ಟಿಗೆ ಸಡ್ಡು ಹೊಡೆದು, ಸರ್ದಾರ್​ ವಲ್ಲಭಾಯ್ ಪಟೇಲರ ಪ್ರತಿಮೆಯನ್ನು ಭಾರತದ ಮಣ್ಣಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡೋಕೆ ಸಿದ್ಧವಾಗಿದ್ದು, ನರೇಂದ್ರ ಮೋದಿ..

ಉಕ್ಕಿನ ಮನುಷ್ಯನ ಪ್ರತಿಮೆಯನ್ನು ಉಕ್ಕಿನಿಂದಲೇ ನಿರ್ಮಾಣ ಮಾಡ್ಬೇಕು ಅಂತ, ದೇಶದ ಮೂಲೆ ಮೂಲೆಗಳಿಂದ ಕಬ್ಬಿಣ ಸಂಗ್ರಹಿಸಿದ್ರು ಮೋದಿ.. ಒಂದಲ್ಲ ಎರಡಲ್ಲ, ಸ್ಟ್ಯಾಚು ಆಫ್​ ಲಿಬರ್ಟಿಗಿಂತ ಎರಡುಪಟ್ಟು ಎತ್ತರ ಅಂದ್ರೆ, 598 ಅಡಿ ಎತ್ತರದಲ್ಲಿ ಉಕ್ಕಿನ ಮನುಷ್ಯನನ್ನು ನಿಲ್ಲಿಸೋದಕ್ಕೆ ಎಲ್ಲಾ ತಯಾರಿ ಕೂಡ ನಡೀತಿದೆ. ಏಕತೆಯ ಪ್ರತೀಕವಾದ ಪಟೇಲರ ಈ ಪ್ರತಿಮೇನೇ ಜಗತ್ತಿನ ಅತಿ ಎತ್ತರದ ಪ್ರತಿಮೆ ಅಂತ, ಇಡೀ ಜಗತ್ತು ಭಾರತದತ್ತ ತಿರುಗಿ ನೋಡಿತ್ತು.

ಆದ್ರೆ ಈಗ ಮತ್ತೆ ಭಾರತದತ್ತ ಜಗತ್ತು ತಿರುಗಿ ನೋಡೋ ಟೈಂ ಬಂದಿದೆ. ಯಾಕಂದ್ರೆ, ಸರ್ದಾರ್ ಪಟೇಲರ ಏಕತಾ ಪ್ರತಿಮೆಗಿಂತ ಎತ್ತರದಲ್ಲಿ, ಛತ್ರಪತಿ ಶಿವಾಜಿಯನ್ನು ನಿಲ್ಲಿಸೋದಕ್ಕೆ ಪ್ಲಾನ್ ರೆಡಿಯಾಗಿದೆ. ಅದೂ ಅರಬ್ಬಿ ಸಮುದ್ರದ ಮಧ್ಯದಲ್ಲಿ..

ಈ ಸ್ಟ್ಯಾಚು ಬಗ್ಗೆ ಹೇಳೋದಕ್ಕಿಂತ ಮೊದಲು, ಈ ದೇಶದ ಮಣ್ಣಿಗಾಗಿ ಹೋರಾಡಿದ, ಸ್ವಾಭಿಮಾನಿ ಸಾಮ್ರಾಟನ ಬಗ್ಗೆ ನಿಮ್ಗೇ ಹೇಳ್ಲೇಬೇಕು ಕಣ್ರಿ,. ಯಾಕಂದ್ರೆ, ಶಿವಾಜಿ ಅಂದ್ರೆ ಕೇವಲ ಒಬ್ಬ ರಾಜ ಮಾತ್ರ ಅಲ್ಲ.. ನಿದ್ರೆಯಲ್ಲೂ ಬ್ರಿಟೀಷರ ಗುಂಡಿಗೆ ನಡುಗಿಸಿದ ಸಾಮ್ರಾಟ..

ಫೆಬ್ರುವರಿ 19 1630 ರಲ್ಲಿ ಮಹಾರಾಷ್ಟ್ರದ ನಜುನಾಘರ್​ನಲ್ಲಿ ಜನಿಸಿದ ಶಿವಾಜಿಗೆ ತಾಯಿ ಜೀಜಾಬಾಯಿನೇ ಜೀವ.. ತಾಯಿ ಹೇಳಿದ ವೀರ ಕಥೆಗಳನ್ನು ಕೇಳಿ ಬೆಳೆದ ಶಿವಾಜಿಗೆ, ದೇಶಭಕ್ತಿ ಮತ್ತು ನಾಯಕತ್ವದ ಗುಣಗಳು ರಕ್ತದ ಕಣ ಕಣದಲ್ಲಿ ಬೆರೆತು ಹೋಗಿತ್ತು. ತನ್ನ ತಾಯ್ನಾಡಿನ ಸುದ್ದಿಗೆ ಬಂದೋರ, ಎದೆ ಬಗೆದು ಬಿಡ್ತಿದ್ದ ವೀರ ಸಾಮ್ರಾಟ ಶಿವಾಜಿ..

ಗುಡ್ಡಗಾಡು ಜನರನ್ನು ಒಂದು ಗೂಡಿಸಿ, ಗೆರಿಲ್ಲ ಯುದ್ಧದ ತಂತ್ರ ಉಪಯೋಗಿಸಿ, ಶತೃಗಳನ್ನು ಸದೆಬಡೀತಾ ಇದ್ದ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ ಕಣ್ರಿ.. ಶಿವಾಜಿ ಸಾಮ್ರಾಜ್ಯದಲ್ಲಿ ಸೈನಿಕರು ಕಡಿನಮೆ ಇದ್ರೂ, ಯುದ್ಧಕ್ಕೆ ನಿಂತ್ರೆ ಸೋಲ್ತಾ ಇದ್ದದ್ದು ಎದುರಾಳಿಯ ಸೇನೆನೇ..

1659 ರಲ್ಲಿ ಶಿವಾಜಿ ಮೇಲೆ ದಂಡೆತ್ತಿ ಬಂದ ಅಫ್ಜಲ್​ಖಾನ್​​ನಿಂದ ಹಿಡಿದು, ಬಿಜಾಪುರದ ಆದಿಲ್​ಶಾಹಿ, ಮೊಘಲ್​ ಅರಸ ಔರಂಗಜೇಬ್​​ ಸೇನೆಯವರೆಗೆ, ಎಲ್ಲರನ್ನೂ ತನ್ನ ಚಾಣಾಕ್ಷ ಯುದ್ಧನೀತಿಯಿಂದ ಬಗ್ಗು ಬಡಿದು, ತನ್ನ ನೆಲಕ್ಕಾಗಿ ಕೊನೆಯ ಉಸಿರಿರುವವರೆಗೂ ಹೋರಾಡಿದ ಸಾಮ್ರಾಟ..

ಇದೇ ಕಾರಣಕ್ಕಾಗಿ ಶಿವಾಜಿಯ ಇತಿಹಾಸವಿರುವ ನೆಲ್ಲದಲ್ಲಿ ಶಿವಾಜಿಯ ಅತಿ ಎತ್ತರದ ಪ್ರತಿಮೆ ನಿರ್ಮಾಣ ಮಾಡೋ ಮೂಲಕ, ಮಹಾರಾಷ್ಟ್ರ ಮಣ್ಣಲ್ಲಿ ಶಿವಾಜಿಯನ್ನು ಶಾಶ್ವತವಾಗಿ ಎದ್ದುನಿಲ್ಲುವಂತೆ ಮಾಡಲಾಗ್ತಿದೆ. ಇದಕ್ಕೆ ಈಗಾಗ್ಲೇ ರೂಪು ರೇಷೆಗಳು ಸಿದ್ಧವಾಗಿದೆ. ಅರಬ್ಬಿ ಸಮುದ್ರದಲ್ಲಿ ಶಿವಾಜಿಯ ಸಾಮ್ರಾಜ್ಯದ ಅನಾವರಣ ಹೇಗಾಗುತ್ತೆ ಅನ್ನೋದರ ಸಣ್ಣ ಝಲಕ್ ಇಲ್ಲಿದೆ ನೋಡಿ..

ಸ್ಟ್ಯಾಚು ಆಫ್​ ಲಿಬರ್ಟಿಗಿಂತಲೂ ಪಟೇಲರ ಏಕತಾ ಪ್ರತಿಮೆ ದೊಡ್ಡದು.. ಆದ್ರೆ ಶಿವಾಜಿಯ ಪ್ರತಿಮೆ ಅದಕ್ಕಿಂತಲೂ ದೊಡ್ಡದು.. ಜಗತ್ತಿನ ಅತಿ ಎತ್ತರದ ಪ್ರತಿಮೆ ನಿರ್ಮಾಣ ಮಾಡೋದಕ್ಕೆ ಎಷ್ಟು ಸಾವಿರ ಕೋಟಿ ಖರ್ಚಾಗ್ತಿದೆ ಗೊತ್ತಾ..? ಸಮುದ್ರದ ಮಧ್ಯದಲ್ಲಿ ನಿರ್ಮಾಣವಾಗ್ತಿರೋ ಆ ಸ್ಟ್ಯಾಚುವಿನ ವಿಶೇಷತೆ ಏನು..? ಮುಂದೆ ಓದಿ
-------------------------------------------------------
ಅರಬ್ಬೀ ಸಮುದ್ರದ ಶಾಂತ ವಾತಾವರಣದಲ್ಲಿ, ಪಟೇಲರಿಗಿಂತ ಎತ್ತರದಲ್ಲಿ, ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿ ಶಿವಾಜಿ ಮಹಾರಾಜ್ ಎದ್ದುನಿಲ್ಲಿದ್ದಾರೆ. ಒಂದಲ್ಲ ಎರಡಲ್ಲ.. ಬರೋಬ್ಬರಿ 624 ಅಡಿ ಎತ್ತರದಲ್ಲಿ ಶಿವಾಜಿಯ ಸಾಮ್ರಾಜ್ಯದ ಅನಾವರಣವಾಗಲಿದೆ. ಸಮುದ್ರದಲ್ಲಿ ಶಿವಾಜಿ ಪ್ರತಿಮೇನ ಹೇಗೆ ನಿಲ್ಲಿಸ್ತಾರೆ..? ಆ ಸ್ಟ್ಟ್ಯಾಚುನ ವಿಶೇಷತೆ ಏನು..? ಅಲ್ಲಿ ಏನೆಲ್ಲಾ ಇರುತ್ತೆ..? ಅದ್ರ ಕಂಪ್ಲೀಟ್ ಡೀಟೇಲ್​ ಇಲ್ಲಿದೆ ನೋಡಿ.
ಮಹಾರಾಷ್ಟ್ರದ ಮುಂಬೈನಲ್ಲಿ ಶಿವಾಜಿ ಪ್ರತಿಮೆಗೆ ಎಲ್ಲಾ ತಯಾರಿ ನಡೆದಿದೆ. ನಾರಿಮನ್ ಪಾಯಿಂಟ್​ನಿಂದ ನಾಲ್ಕು ಕಿಲೋ ಮೀಟರ್​ ದೂರದ, ಅರಬ್ಬೀ ಸಮುದ್ರದದಲ್ಲಿ, ಶಿವಾಜಿ ಪ್ರತಿಮೆಯನ್ನು ನಿರ್ಮಾಣ ಮಾಡೋದಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಸಮುದ್ರದ ಮಧ್ಯಭಾಗದಲ್ಲಿ ದ್ವೀಪದ ಮಾದರಿ ಪ್ರದೇಶದಲ್ಲಿ ಶಿವಾಜಿಯ ಅತಿ ಎತ್ತರದ 623 ಅಡಿಯ ಸ್ಟ್ಯಾಚು ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಿದೆ.

ನಾರಿಮನ್​ ಪಾಯಿಂಟ್​ನಿಂದ ನಾಲ್ಕು ಕಿಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಒಂದು ಬೃಹತ್​ ಕಲ್ಲಿದೆ. ಈ ಕಲ್ಲನ್ನು ಆಧಾರವಾಗಿಟ್ಟುಕೊಂಡು, 16 ಹೆಕ್ಟೇರ್​ ಪ್ರದೇಶದಲ್ಲಿ ಶಿವಾಜಿಯ ಪ್ರತಿಮೆ ನಿರ್ಮಾಣ ಮಾಡಲಾಗುತ್ತೆ...

ಇನ್ನು ಇಲ್ಲಿಗೆ ಬರ್ಬೇಕು ಅಂದ್ರೆ ಬೋಟ್​​ನಲ್ಲೇ ಬರಬೇಕಾಗುತ್ತೆ..  ಇಲ್ಲಾ ಅಂದ್ರೆ, ಹೆಲಿಕಾಪ್ಟರ್​ ಮೂಲಕಾನೂ ಬರಬಹುದು..

ಹಚ್ಚ ಹಸುರಿನ ವಿಶಾಲವಾದ ಉದ್ಯಾನವನದ ಜೊತೆಗೆ ನೃತ್ಯವಾಡುವ ನೀರಿನ ಚಿಲುಮೆಯ ಹಿಂಭಾಗದಲ್ಲಿ, ಕುದುರೆ ಏರಿ ಆಕಾಶದೆತ್ತರದಲ್ಲಿ ನಿಂತಿರ್ತಾನೇ ಶಿವಾಜಿ ಮಹಾರಾಜ್..

ಇದ್ರ ಮೇಲೆ ಹೋಗೋದಕ್ಕೂ ದಾರಿ ಇದೆ. ಮೆಟ್ಟಿಲುಗಳನ್ನು ಹತ್ತುವ ಮೂಲಕ, ಮೊದಲ ಮಹಡಿಯನ್ನು ತಲುಪಬಹುದು.. ಅಲ್ಲಿಂದ ಅರಬ್ಬೀ ಸಮುದ್ರದತ್ತ ಕಣ್ಣು ಹಾಯಿಸಿದ್ರೆ, ಮುಂಬೈನ ವಿಹಂಗಮ ನೋಟ ಕಣ್ಣಿಗೆ ಕಾಣುತ್ತೆ.

ಇನ್ನು ಇಲ್ಲಿ 300 ರಿಂದ 400 ಮಂದಿ ಕೂತ್ಕೊಳ್ಳೋಕೆ ಅನುಕೂಲವಾಗುವಂಥ ಬಯಲು ರಂಗ ಮಂದಿರ ಕೂಡ ಇರುತ್ತೆ..

ಇದ್ರ ಒಳಗೆ ಹೋದ್ರೆ, ಶಿವಾಜಿ ಮಹಾರಾಜನ ಸಾಮ್ರಾಜ್ಯದ ಅನಾವರಣವಾಗುತ್ತೆ.. ಪ್ರತಿಯೊಂದು ಗೋಡೆಯೂ ಕೂಡ, ಶಿವಾಜಿ ಬದುಕಿನ ಚಿತ್ರಣವನ್ನು ಇಂಚಿಂಚಾಗಿ ಬಿಚ್ಚಿಡ್ತವೆ ಕಣ್ರಿ...

ಇಷ್ಟೇ ಅಲ್ಲ, ಶಿವಾಜಿ ಸಾಧನೆ ಮತ್ತು ಸಾಮ್ರಾಜ್ಯವನ್ನು ಉಣಬಡಿಸೋದಕ್ಕೆ ಅಲ್ಲಿ ಲೈಬ್ರರಿ ಕೂಡ ಇರುತ್ತೆ.. ಬರೀ ಪುಸ್ತಕದ ಲೈಬ್ರರಿ ಅಲ್ಲ.. ಕಂಪ್ಯೂಟರ್ ಮತ್ತು ಇಂಟರ್​ನೆಟ್ ಸೌಲಭ್ಯವನ್ನು ನೀಡೋ ಮೂಲಕ, ಆ ಲೈಬ್ರರಿಗೆ ಡಿಜಿಟಲ್​ ಟಚ್ ಕೊಡಲಾಗುತ್ತೆ.

ಇನ್ನು ಮೇಲೆ ಹತ್ತೋದಕ್ಕೆ ಮತ್ತು ಇಳಿಯೋದಕ್ಕೆ ಇಲ್ಲಿ ಲಿಫ್ಟ್​ ವ್ಯವಸ್ಥೆ ಕೂಡ ಇರುತ್ತೆ..  ಒಂದ್ಸಲಕ್ಕೆ 10 ರಿಂದ 20 ಜನ ಈ ಲಿಫ್ಟ್​​ನಲ್ಲಿ ಹೋಗ್ಬಬಹುದು..

ಇನ್ನು ಶಿವಾಜಿ ಸಾಮ್ರಾಜ್ಯವನ್ನು ಸಿನಿಮಾ ಮೂಲಕ ಕಣ್ಣಿಗೆ ಕಾಣುವಂತೆ ಬಿಚ್ಚಿಡೋದಕ್ಕೆ, ಅಲ್ಲೊಂದು ಬೃಹತ್​​ ಥಿಯೇಟರ್​ ಕೂಡ ಇರುತ್ತೆ.

ಶಿವಾಜಿ ಕಾಲದ, ಕಲೆ ಮತ್ತು ಸಂಸ್ಕೃತಿಯ ಅನಾವರಣಕ್ಕಾಗಿ, ಮತ್ತೊಂದು ಬಯಲು ರಂಗಮಂದಿರವಿರುತ್ತೆ. ಸಾವಿರಾರು ಮಂದಿ ಕೂತ್ಕೊಳ್ಳೋಕೆ ಅಲ್ಲಿ, ಸ್ಥಳಾವಕಾಶ ಕಲ್ಪಿಸಲಾಗುತ್ತೆ.

ಇವೆಲ್ಲದರ ನಡುವೇನೇ, ಗ್ರಾನೈಟ್​ ಕಲ್ಲುಗಳು ಮತ್ತು ಕಾಂಕ್ರಿಟ್​ನಿಂದ, ಸಮುದ್ರರಾಜನಂತೆ ಶಿವಾಜಿ ಮಹಾರಾಜ್​ ವಿರಾಜಮಾನವಾಗಿ ರಾರಾಜಿಸ್ತಿರ್ತಾನೆ..

ಇನ್ನು ಇಷ್ಟೆಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಿಸಲಾಗ್ತಿರೋ ಈ ಪ್ರದೇಶಕ್ಕೆ ಕರೆಂಟ್​ ವ್ಯವಸ್ಥೆ ಬೇಕಲ್ಲಾ.. ಅದಿಕ್ಕೆ ಇಲ್ಲಿ ಈ ಬೃಹತ್​ ಫ್ಯಾನ್​ಗಳನ್ನ ಅಳವಡಿಸಲಾಗಿದೆ.. ಇವುಗಳ ಮೂಲಕ, ವಿಂಡ್​ ಪವರ್​ ಉತ್ಪಾದಿಸಿ, ಇಲ್ಲಿಗೆ ಬೇಕಾದ ಕರೆಂಟನ್ನು ಇಲ್ಲೇ ಉತ್ಪಾದಿಸಸಲಾಗುತ್ತೆ..

ಇನ್ನು ಇಷ್ಟೆಲ್ಲಾ ಸೌಕರ್ಯಗಳಿರೋ ಶಿವಾಜಿ ಪಾರ್ಕ್​ ಅನ್ನು ಸಮುದ್ರ ಮಧ್ಯದಲ್ಲಿ ನಿರ್ಮಿಸೋದು ಅಂದ್ರೆ, ಇದೊಂದು ಸವಾಲಿನ ಕೆಲಸಾನೇ ಕಣ್ರಿ.. ಇದಕ್ಕಾಗಿ ಬರೋಬ್ಬರಿ 2 ಸಾವಿರ ಕೋಟಿ ಖರ್ಚಾಗುತ್ತೆ ಅಂತ ಅಂದಾಜಿಸಲಾಗಿದೆ.

ಜಗತ್ತಿನ ಅತಿ ಎತ್ತರದ ಪ್ರತಿಮೆ ಅರಬ್ಬೀ ಸಮುದ್ರದ ಮಡಿಲಲ್ಲಿ ತಲೆ ಎತ್ತಲಿದೆ. ಈ ಶಿವಾಜಿ ಪ್ರತಿಮೆ ನಿರ್ಮಾಣ ಮಾಡೋದೇ ಒಂದು ಸವಾಲಿನ ಕೆಲಸ.. ಆದ್ರೆ ಅದಕ್ಕಿಂತ ದೊಡ್ಡ ಸವಾಲಿನ ಕೆಲಸ ಯಾವುದು ಗೊತ್ತಾ..? ಅದನ್ನು ಉಗ್ರರಿಂದ ರಕ್ಷಣೆ ಮಾಡೋದು.. ಅದಕ್ಕೆ ಅಂತಾನೇ, ದೇಶದಲ್ಲಿ ಯಾರಿಗೂ ಇಲ್ಲದ ವಿಶೇಷ ಭದ್ರತೆ ಕಲ್ಪಿಸಲಾಗಿದೆ.
---------------------------------------------
ಸ್ವಾಭಿಮಾನದ ಪ್ರತೀಕವಾದ ಶಿವಾಜಿ ಮಹಾರಾಜನ ಪ್ರತಿಮೆ ನಿರ್ಮಾಣಕ್ಕೆ, ನೂರೆಂಟು ವಿಘ್ನಗಳು ಎದುರಾಗಿವೆ. ಉಗ್ರರ ಕಾಟದ ಜೊತೆಗೆ ಪರಿಸರವಾದಿಗಳ ವಿರೋಧವನ್ನು  ಕೂಡ ಇದೆ. ಇದ್ರ ಜೊತೆಗೆ ಪ್ರತಿಮೆ  ನಿರ್ಮಾಣಕ್ಕೆ ಬೇಕಾಗೋ 2 ಸಾವಿರ ಕೋಟಿ ಸಂಗ್ರಹಿಸೋದು ಸವಾಲಿನ ವಿಷಯ.. ಅದಕ್ಕಾಗಿ ಸರ್ಕಾರ ಒಂದು ಪ್ಲಾನ್ ಕೂಡ ಮಾಡಿದೆ. ಅದೇನು ಅಂತ ನೋಡಿ ಈ ವರದಿಯಲ್ಲಿ..

16 ಹೆಕ್ಟೇರ್​ ಪ್ರದೇಶದಲ್ಲಿ ಅರಬ್ಬೀ ಸಮುದ್ರದಲ್ಲಿ, ವಿಶೇಷ ಗ್ರಾನೈಟ್​ ಮತ್ತು ಸಿಮೆಂಟ್ ಮೂಲಕ, ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತೆ. ಆದರೆ ಇದ್ರಿಂದ ಸಮುದ್ರಜೀವಿಗಳಿಗೆ ತೊಂದರೆಯಾಗುತ್ತೆ ಅಂತ ಪರಿಸರವಾದಿಗಳು ಈ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಪ್ರತಿಮೆ ನಿರ್ಮಾಣಕ್ಕೆ ಮಹಾರಾಷ್ಟ್ರ ಸರ್ಕಾರ ಸ್ವಲ್ಪ ಹಣವನ್ನು ಮೀಸಲಿರಿಸಿದೆ. ಆದ್ರೆ ಅಷ್ಟ್ರಲ್ಲೇ ಪ್ರತಿಮೆ ನಿರ್ಮಾಣ ಮಾಡೋಕೆ ಶಾಧ್ಯವಿಲ್ಲ.. ಯಾಕಂದ್ರೆ, ಅದಕ್ಕೆ 2000 ಕೋಟಿ ಬೇಕು.. ಅದಕ್ಕೆ ಮಹಾರಾಷ್ಟ್ರ ಸರ್ಕಾರ ಒಂದು ಪ್ಲಾನ್ ಮಾಡಿದೆ. ಪಟೇಲರ ಏಕತಾ ಪ್ರತಿಮೆ ನಿರ್ಮಾಣಕ್ಕೆ ದೇಶದ ಜನರಿಂದ ಮೋದಿ ಕಬ್ಬಿಣ ಸಂಗ್ರಹಿಸಿದಂತೆ, ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಜನರ ಸಹಾಯ ಬೇಡಿದೆ. ಜನರ ಸ್ವಾಭಿಮಾನದ ದುಡ್ಡಲ್ಲಿ, ಸ್ವಾಭಿಮಾನಿಯ ಪ್ರತಿಮೆ ನಿರ್ಮಾಣ ಮಾಡ್ಬೇಕು ಅಂತ ಸರ್ಕಾರ ಲೆಕ್ಕಾಚಾರ ಹಾಕಿದೆ.

ಆದ್ರೆ ಪ್ರತಿಮೆ ನಿರ್ಮಾಣದ ಹೆಸರಲ್ಲಿ 2 ಸಾವಿರ ಕೋಟಿ ಖರ್ಚು ಮಾಡ್ತಿರೋದಕ್ಕೆ ಕೆಲವರು ವಿರೋಧಿಸ್ತಿದ್ದಾರೆ. ಅದೇ ದುಡ್ಡಲ್ಲಿ  ಒಂದು ಲಕ್ಷಕ್ಕೂ ಹೆಚ್ಚಿನ ಬಡವರಿಗೆ ಮನೆ ಕಟ್ಟಿಸಿಕೊಡಬಹುದು.. ಇಲ್ಲಾ ಅಂದ್ರೆ, ಅದನ್ನ ಮಹಾರಾಷ್ಟ್ರದ ಅಭಿವೃದ್ಧಿಗೆ ವಿನಿಯೋಗಿಸಿದ್ರೆ, ಮಹಾರಾಷ್ಟ್ರದ ಚಿತ್ರಣಾನೇ ಬದಲಾಗಿಬಿಡುತ್ತೆ.. ಹೀಗಿರುವಾಗ, ಅಷ್ಟೋಂದು ಹಣವನ್ನು ಕೇವಲ ಪ್ರತಿಮೆ ನಿರ್ಮಾಣಕ್ಕೆ ವಿನಿಯೋಗಿಸ್ತಾ ಇರೋದು ಸರಿಯಲ್ಲ ಅಂತಾರೆ ಕೆಲವರು..

ಆದ್ರೆ ಶಿವಾಜಿ ಪ್ರತಿಮೆ ನಿರ್ಮಾಣದ ಹಿಂದೆ ದೊಡ್ಡ ಲೆಕ್ಕಾಚಾರ ಇಟ್ಕೊಂಡಿದೆ ಸರ್ಕಾರ.. 2 ಸಾವಿರ ಕೋಟಿ ಖರ್ಚು ಮಾಡಿ ಪ್ರತಿಮೆ ನಿರ್ಮಾಣ ಮಾಡೋ ಮೂಲಕ, ಮುಂಬೈ ಅನ್ನ ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿ ಮಾಡೋದಕ್ಕೆ ಹೊರಟಿದೆ ಮಹಾರಾಷ್ಟ್ರ ಸರ್ಕಾರ.

ಇನ್ನು ದಿನಕ್ಕೆ 10 ಸಾವಿರ ಮಂದಿ ಇಲ್ಲಿಗೆ ಭೇಟಿ ಕೊಡ್ತಾರೆ ಅಂತ ಅಂದಾಜಿಸಲಾಗಿದೆ.  ದಿನಕಳೆದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತೆ. ಇದ್ರಿಂದ, ಮಹಾರಾಷ್ಟ್ರ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತೆ. ಸ್ಥಳೀಯರಿಗೆ ಉದ್ಯೋಗ ನೀಡೋದರ ಜೊತೆಗೆ ಮತ್ತೊಂದಷ್ಟು ಅಭಿವೃದ್ಧಿ ಯೋಜನೆಗಳಿಗೆ ಈ ಆದಾಯವನ್ನು ವಿನಿಯೋಗಿಸೋ ಲೆಕ್ಕಾಚಾರ ಹೊಂದಿದೆ ಮಹಾರಾಷ್ಟ್ರ ಸರ್ಕಾರ.

ಇನ್ನು ಈ ಶಿವಾಜಿ ಪ್ರತಿಮೆಯನ್ನು 2019 ರೊಳಗೆ ನಿರ್ಮಿಸೋ ಪ್ಲಾನ್ ಇದೆ. ಇದನ್ನು ನಿರ್ಮಿಸೋದು ಎಷ್ಟು ಕಷ್ಟಾನೋ, ಅದಕ್ಕಿಂತ ಕಷ್ಟವಾದ ಕೆಲಸ ಅದನ್ನು ಉಗ್ರರಿಂದ ಕಾಪಾಡೋದು..

ಯಸ್​... ಮುಂಬೈ ಮೇಲೆ ದಾಳಿ ನಡೆಸಿದಂತೆ, ಶಿವಾಜಿ ಪ್ರತಿಮೆ ಮೇಲೂ ಉಗ್ರರು ದಾಳಿ ನಡೆಸಬಹುದು.. ಅದನ್ನ ರಕ್ಷಣೆ ಮಾಡೋದಕ್ಕೆ ಅಂತಾನೇ ದೇಶದಲ್ಲೇ ಯಾರಿಗೂ ಇಲ್ಲದ ಝಡ್​ ಪ್ಲಸ್​ ಪ್ಲಸ್​​ ಸೆಕ್ಯೂರಿಟಿ ನೀಡಲಾಗುತ್ತೆ ಈ ಶಿವಾಜಿ ಪ್ರತಿಮೆಗೆ..

ನೂರಾರು ಕಿಮೀ ದೂರದಲ್ಲಿರುವ ಉಗ್ರರ ಸುಳಿವು ಪತ್ತೆ ಹಚ್ಚಬಲ್ಲ ಆಂಟಿ ರಡಾರ್​ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಭದ್ರತಾ ದಳ, ಮುಂಬೈ ಪೊಲೀಸ್​ ಪಡೆ ಕೂಡ ಶಿವಾಜಿಯನ್ನು ಕಾಯ್ತಾರೆ. ಇವೆಲ್ಲದರ ಜೊತೆಗೆ ಹೆಜ್ಜೆ ಹೆಜ್ಜೆಗೂ ಸಿಸಿಟಿವಿಗಳನ್ನು ಕೂಡ ಅಳವಡಿಸಲಾಗುತ್ತೆ. ಪರ್ಮನೆಂಟ್​ ಬಂಕರ್​ಗಳನ್ನು ನಿರ್ಮಿಸಲಿದ್ದು, ಸಮುದ್ರ ರಾಜನ ರಕ್ಷಣೆಗೆ, ಅತ್ಯಾಧುನಿಕ ಭದ್ರತೆಯನ್ನು ಕಲ್ಪಿಸಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆದ್ರೆ, 2019 ರೊಳಗೆ, ಜಗತ್ತಿನ ಅತಿ ಎತ್ತರದ ಪ್ರತಿಮೆ ಮುಂಬೈನ ಅರಬ್ಬಿ ಸಮುದ್ರದಲ್ಲಿ ತಲೆ ಎತ್ತಲಿದೆ. ಸ್ವಾಭಿಮಾನದ ಸಂಕೇತವಾಗಿ ಆಕಾಶದೆತ್ತರದಲ್ಲಿ ಶಿವಾಜಿ ಎದ್ದು ನಿಲ್ಲಲಿದ್ದಾರೆ.

ಅತ್ಯಾಚಾರಿಗಳನ್ನು ವಿದೇಶಗಳಲ್ಲಿ ಏನ್ ಮಾಡ್ತಾರೆ ಗೊತ್ತಾ?
ಬೆಂಗಳೂರಿನ ಶಾಲೆಗಳಲ್ಲಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಾ ಇವೆ.. ಇಷ್ಟಾದ್ರೂ, ನಮ್ಮ ಸರ್ಕಾರ ಮಾತ್ರ ಕಣ್ ಮುಚ್ಕೊಂಡ್ ಕೂತಿದೆ. ಇದೇ ಪ್ರಕರಣ ಬೇರೆ ದೇಶಗಳಲ್ಲಿ ನಡೆದಿದ್ರೆ, ಏನೇನ್ ಆಗ್ತಿತ್ತು ಗೊತ್ತಾ.?

ಅತ್ಯಾಚಾರಿಗಳಿಗೆ ಬೇರೆ ದೇಶಗಳಲ್ಲಿ ನೀಡೋ ಶಿಕ್ಷೆ ಅಂತಿಂಥದ್ದಲ್ಲ.. ತುಂಬಾನೇ ಕ್ರೂರವಾಗಿ ಕಾಮುಕರ ನರ ಕಟ್ ಮಾಡಲಾಗುತ್ತೆ..ಇದು ಅಫ್ಘಾನಿಸ್ತಾನದ ಒಂದು ದೃಶ್ಯ.. ಅತ್ಯಾರ ಮಾಡಿದ ಕಾಮುಕನ್ನ, ಊರಿನ ನಡುವೆ ತಂದು ನಿಲ್ಲಿಸ್ತಾರೆ.. ನಂತರ ಎಲ್ಲರೂ ನೋಡ್ ನೋಡ್ತಿದ್ದಂತೆ, ಮದನ ಕಾಮರಾಜನ ಮರ್ಮಾಂಗವನ್ನ ಕಚಕ್ ಅಂತ ಕಟ್ ಮಾಡಿ ಬಿಡ್ತಾರೆ.

ಇನ್ನು ಸೌದಿ ಅರೇಬಿಯಾದ ಒಂದು ದೃಶ್ಯ ತೋರಿಸ್ತೀವಿ ನೋಡಿ.. ಈ ದೇಶಗಳಲ್ಲಿ, ಕಾಮುಕನನ್ನ ಸೀದಾ ನಡು ರಸ್ತೇನಲ್ಲಿ ನೇಣು ಹಾಕ್ತಾರೆ..! ಅತ್ಯಾಚಾರಿಗೆ ಎಂಥಾ ಬರ್ಬರ ಶಿಕ್ಷೆಯಾಗುತ್ತೆ ಅನ್ನೋದನ್ನು ಎಲ್ಲರೂ ನೋಡ್ತಾರೆ. ಇದನ್ನು ನೋಡಿದ್ಮೇಲೆ ಅತ್ಯಾಚಾರಿಗಳ ಎದೆಯಲ್ಲಿ ಭಯ ಶುರುವಾಗುತ್ತೆ..


ಇಲ್ ನೋಡಿ... ಅತ್ಯಾಚಾರಿಯ ರುಂಡವನ್ನ ಹೇಗೆ ಕತ್ತರಿಸ್ತಾರೆ ನೋಡಿ..! ಇದು ಕೂಡ ಸೌದಿ ದೇಶದ ಒಂದು ರೀತಿಯ ಶಿಕ್ಷೆ.. ಅತ್ಯಅಚಾರ ಮಾಡಿದವನನ್ನು ಎಳ್ಕೊಂಡು ಬಂದು, ನಿರ್ಜನ ಪ್ರದೇಶದಲ್ಲಿ ಆತನ ರುಂಡವನ್ನು ಕತ್ತರಿಸಿ ಬಿಡ್ತಾರೆ.

 ಇರಾನ್​​ ಮತ್ತು ಟರ್ಕಿಯಂಥ ದೇಶಗಳಲ್ಲಿ, ಜನರೇ ಅತ್ಯಾಚಾರಿಯನ್ನು ಕಲ್ಲಿನಿಂದ ಹೊಡೆದು ಕೊಂದು ಹಾಕ್ತಾರೆ.ಇನ್ನು ಸಿಂಗಾಪುರ ದೇಶದಲ್ಲಿ ನಡೆದ ಒಂದು ಘಟನೆ ತೋರಿಸ್ತೀವಿ ನೋಡಿ.. 13 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಕ್ಕೆ, ಇಬ್ಬರು ವ್ಯಕ್ತಿಗಳಿಗೆ ಜನರು ಯಾವ ಥರ ಶಿಕ್ಷೆ ಕೊಟ್ಟಿದ್ದಾರೆ ಅಂತ ನೀವೇ ನೋಡಿ..ಇನ್ನು ಆಫ್ರಿಕಾದಲ್ಲಿ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದವನಿಗೆ, ಅಲ್ಲಿನ ಜನ ಎಂಥಾ ಶಿಕ್ಷೆ ಕೊಟ್ರು ಗೊತ್ತಾ..?
ಅತ್ಯಾಚಾರಿಗಳು ಸಿಕ್ಕ ನಂತರ, ಊರಿನವರೆಲ್ಲಾ ಅವರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ನಂತರ ಅವರ ಮೇಲೆ ಹುಲ್ಲು ಮತ್ತು ಒಣಗಿದ ಎಲೆಯನ್ನು ಹಾಕಿ, ಅತ್ಯಾಚಾರಿಗಳಿಗೆ ಬೆಂಕಿ ಹಚ್ತಾರೆ..!


ಬೇರೆ ದೇಶಗಳಲ್ಲಿ ಅತ್ಯಾಚಾರಿಗಳನ್ನು ಹೀಗೆ ಮುಲಾಜೇ ಇಲ್ದೇ ಶಿಕ್ಷಿಸಲಾಗುತ್ತೆ.. ಆದ್ರೆ ನಮ್ಮ ದೇಶದಲ್ಲಿ ಯಾವ ಸ್ಥಿತಿ ಇದೆ ಗೊತ್ತಾ..? ಅದಕ್ಕೆ ಒಂದು ಎಗ್ಸಾಂಪಲ್ ತೋರಿಸ್ತೀವಿ ನೋಡಿ..

ಆಂಧ್ರಾದ ಕೊಪ್ಪವರಂನಲ್ಲಿ ಅತ್ಯಾಚಾರಕ್ಕೆ ಯತ್ನ ಮಾಡಿ ಸಿಕ್ಕಾಕೊಂಡವನಿಗೆ ಜನರು ಏನ್ ಮಾಡಿದ್ರು ಗೊತ್ತಾ..? ಆತನ ಬಟ್ಟೆ ಬಿಚ್ಚಿ, ಕಂಬಕ್ಕೆ ಕಟ್ಟಿ ಹಾಕಿದ್ರು.

ಇನ್ನೊಂದು ವಿಚಿತ್ರ ಏನಂದ್ರೆ, ಮಾನ ಕಳೆಯೋಕೆ ಬಂದವನ, ಮಾನ ಮುಚ್ಚೋ ಹಾಗೆ, ಲಂಗೋಟಿಯಿಂದ ಆತನ ದೇಹ ಮುಚ್ಚಲಾಗಿತ್ತು..!

ದೆಹಲಿಯಲ್ಲಿ ನಿರ್ಭಯ ಪ್ರಕರಣ, ಮುಂಬೈನಲ್ಲಿ ಫೋಟೋ ಜರ್ನಲಿಸ್ಟ್ ಪ್ರಕರಣದಿಂದಲೂ ಸರ್ಕಾರ ಸೀರಿಯಸ್ಸಾದ ಕ್ರಮ ಕೈಗೊಳ್ಳಲಿಲ್ಲ.. ಹೀಗಾಗಿನೇ ಇತ್ತೀಚೆಗೆ ಮಕ್ಕಳ ಮೇಲೂ ಕಾಮುಕರು ಅಟ್ಟಹಾಸಗೈತಿದ್ದಾರೆ..!

ಕರ್ನಾಟಕದಲ್ಲೇ ಸರಣಿ ಅತ್ಯಾಚಾರ ಪ್ರಕರಣಗಳು
ಕಾಮುಕರಿಗೆ ಟಾರ್ಗೆಟ್​ ಆಗ್ತಿದ್ದಾರೆ ಪುಟ್ಟ ಮಕ್ಕಳು..!

ಮಕ್ಕಳನ್ನು ದೇವರು ಅಂತಾರೆ.. ಒಳ್ಳೇದು ಕೆಟ್ಟದ್ದೂ ಏನೂ ಗೊತ್ತಾಗಲ್ಲ ಕಣ್ರಿ ಅವ್ರಿಗೆ.. ‘ಏನೂ ಗೊತ್ತಾಗಲ್ಲ.. ಈ ವಿಷ್ಯವನ್ನು ಹೊರಗೆ ಎಲ್ಲೂ ಹೇಳಲ್ಲ ಅನ್ನೋ ಧೈರ್ಯದಿಂದಲೇ, ಕಾಮುಕರು ಮಕ್ಕಳ ಮೇಲೆ ಅತ್ಯಾಚಾರ ನಡೆಸ್ತಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದ ನಂತರ, ಮಕ್ಕಳಿಗೆ ಭಯ ಹುಟ್ಟಿಸಿದ್ರೆ, ಆ ಮಕ್ಕಳು ಆ ವಿಷಯವನ್ನು ಎಲ್ಲೂ ಹೇಳೋದಿಲ್ಲ.. ಇದು ಕಾಮುಕರಿಗೆ ಪ್ಲಸ್ ಪಾಯಿಂಟ್ ಆಗೋಗಿದೆ. ಹೀಗಾಗಿ ಕನ್ನಡ ನಾಡಿನ ಎದೆ ಬಡಿತವಾಗಿರೋ ಬೆಂಗಳೂರಿನಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೀತಿದೆ. ಸ್ಕೂಲ್​ನಲ್ಲಿ ಪಾಠ ಮಾಡ್ಬೇಕಾದೋರೇ, ಇಂಥಾ ಕೆಲಸದಲ್ಲಿ ತೊಡಗ್ತಿದ್ದಾರೆ ಅನ್ನೋದು, ಮತ್ತೊಂದು ನಾಚಿಕೆಗೇಡಿನ ಸಂಗತಿ..

ಒಂದಲ್ಲ.. ಎರಡಲ್ಲ... ಪುಟ್ಟ ಮಕ್ಕಳ ಮೇಲೆ ತಿಂಗಳಿಗೊಂದು ಲೈಂಗಿಕ ದೌರ್ಜನ್ಯ ನಡೀತಿದೆ. ಇಷ್ಟಾದ್ರೂ ಕೂಡ ಸರ್ಕಾರ ಮಾತ್ರ ಸೈಲೆಂಟಾಗಿ ಕೂತ್ಕೊಂಡಿದೆ. ವಿಬ್​ಗಯಾರ್ ಪ್ರಕರಣದಿಂದಲೂ ಎಚ್ಚೆತ್ತುಕೊಂಡಿಲ್ಲ.. ಆರ್ಕಿಡ್ಸ್​​ ಶಾಲೆ ಪ್ರಕರಣದಿಂದಲೂ ಎಚ್ಚೆತ್ತುಕೊಂಡಿಲ್ಲ.. ಇದರ ಪರಿಣಾಮವಾಗಿನೇ ಇದೀಗ ಕೇಂಬ್ರಿಡ್ಜ್​ ಶಾಲೆಯಲ್ಲಿ ಮತ್ತೆ ಇಂಥದ್ದೇ ಪ್ರಕರಣ ಮರುಕಳಿಸಿದೆ..

ಪ್ರಕರಣಗಳು ಮರುಕಳಿಸದಂತೆ, ನಮ್ಮ ಘನ ಸರ್ಕಾರ ಖಡಕ್ ನಿರ್ಧಾರ ತಗೊಂಡಿದ್ದಿದ್ರೆ, ಇಂಥಾ ಘಟನೆ ಮರುಕಳಿಸ್ತಾ ಇರಲಿಲ್ಲ.. ಮಾತೆತ್ತಿದ್ರೆ, ನಮ್ಮ ಸಿಎಂ ಸಾಹೇಬ್ರು ಹೇಳೋದು ಒಂದೇ ಡೈಲಾಗು.. ತನಿಖೆ ನಡೀತಿದೆ.. ಕ್ರಮ ಕೈಗೊಳ್ತೀವಿ ಅಂತ,
ಬೈಟ್: ಸಿದ್ದರಾಮಯ್ಯ, ಸಿಎಂ

ಇನ್ನು ನಮ್ಮ ಗೃಹ ಮಂತ್ರಿಗಳು ಆಡೋ ಮಾತು ಕೇಳಿಷದ್ರೆ, ಇಂಥವರನ್ನು ನಾವು ಆಯ್ಕೆ ಮಾಡಿ ಕಳಿಸಿದ್ವೇನಪ್ಪಾ ಅಂತ ಅನಿಸಿಬಿಡುತ್ತೆ..

ಹಾಳಾಗ್ ಹೋಗ್ಲಿ ಬಿಡಿ.. ನಮಗೆ ನಿಮ್ಮ ಡೈಲಾಗ್ ಬೇಕಿಲ್ಲ.. ನೀವು ಕ್ರಮ ಕೈಗೊಳ್ಳೋದ್ ಯಾವಾಗ..? ಅದನ್ ಹೇಳಿ.. ಇನ್ನೂ ಎಷ್ಟು ಮುಗ್ಧ ಮಕ್ಕಳು ಬಲಿಯಾಗೋವರೆಗೂ ಕಾಯಬೇಕು ಅದನ್ನಾದ್ರೂ ಹೇಳಿ..?


ಜನರು ಇದುವರೆಗೂ ಎಲ್ಲವನ್ನೂ ತಾಳ್ಮೆಯಿಂದ ನೋಡ್ತಾ ಬಂದಿದ್ದಾರೆ. ಅಕಸ್ಮಾತ್​​ ಜನರು ರೊಚ್ಚಿಗೆದ್ರೆ, ಅದರಿಂದಾಗೋ ಪರಿಣಾಮ ಊಹೆ ಮಾಡ್ಕೊಳ್ಳೋದಕ್ಕೂ ಆಗಲ್ಲ.. ಯಾಕಂದ್ರೆ, ಜನರು ಮನಸ್ಸು ಮಾಡಿದ್ರೆ, ಏನೆಲ್ಲಾ ಬದಲಾಯಿಸಬಹುದು ಅನ್ನೋದಕ್ಕೆ, ಇತಿಹಾಸದ ಘಟನೆಗಳು, ಕ್ರಾಂತಿಗಳೇ ಸಾಕ್ಷಿ.. ಇನ್ನಾದ್ರೂ ಗೃಹ ಸಚಿವರು ಮತ್ತು ಸಿಎಂ ಸಿದ್ಧರಾಮಯ್ಯನವರು ಈ ಬಗ್ಗೆ ಸೀರಿಯಸ್ಸಾಗಿ ಕ್ರಮ ಕೈಗೊಳ್ಳಲಿ.. ಅಗತ್ಯವಿದ್ದರೆ, ಕಾನೂನು ತಿದ್ದುಪಡಿ ಮಾಡಿ.. ಒಟ್ನಲ್ಲಿ ಅರಳಬೇಕಿರುವ ಮುಗ್ಧ ಜೀವಗಳಿಗೆ ಸೂಕ್ತ ರಕ್ಷಣೆ ನೀಡಿ..

ನಿಮಗೆ ಗೊತ್ತಿಲ್ಲದ ಹೋರಾಟಗಾರರ ಬದುಕುINDIPENDANCE DAY-15-08-1947

ಜೀವ ಕೊಟ್ಟಿದ್ದು ನಿಮಗಾಗಿ (ಹೆಡ್​)
=============================-
ಸುಭಾಷ್ಚಂದ್ರಬೋಸ್
============================-
ಒಂದ್ಸೊಲ ವಿಶ್ವದ ಅಧ್ಯಕ್ಷರೆಲ್ಲರೂ ಸಾಲಾಗಿನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.. ಆಗ ಸುಭಾಷ್ ಚಂದ್ರ ಬೋಸರು ಅವರ ಜೊತೆ ನಿಲ್ಲಲಿಲ್ಲ.. ದೂರ ನಿಂತ ಸುಭಾಷ್​​ಚಂದ್ರಬೋಸರನ್ನು ನೋಡಿ, ಅಧ್ಯಕ್ಷರೊಬ್ಬರು ಅವರನ್ನು ಕರೆದು
ಗ್ರಾಫಿಕ್ - ‘ಬನ್ನಿ.. ನೀವು ನಮ್ಮೊಂದಿಗೆ ನಿಂತುಕೊಂಡು ಫೋಟೋ ತೆಗೆಸಿಕೊಳ್ಳಿ.. ಮುಜುಗರ ಪಡಬೇಡಿ
ವಾಯ್ಸ್:  ಅಂತ ಹೇಳಿದ್ರಂತೆ.. ಆಗ ಸುಭಾಷ್ ಚಂದ್ರಬೋಸ್ ಏನ್ ಹೇಳಿದ್ರು ಗೊತ್ತಾ..?
ಗ್ರಾಫಿಕ್ - ‘ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳೋದಕ್ಕೆ ನನ್ನ ಅಭ್ಯಂತರವಿಲ್ಲ.. ಆದರೆ ನನ್ನೊಂದಿಗೆ ಸರಿಸಮನಾಗಿ ನಿಲ್ಲುವ ಅರ್ಹತೆ ನಿಮ್ಮಲ್ಲಿ ಯಾರಿಗೂ ಇಲ್ಲ.. ಅದಿಕ್ಕೆ ನಾನು ದೂರ ನಿಂತಿದ್ದೀನಿ
ವಾಯ್ಸ್:  ಅಂತ ಗರ್ವದಿಂದ ಹೇಳಿದ್ರಂತೆ.. ಇದು ಸುಭಾಷ್​ಚಂದ್ರಬೋಸರ ದಿಟ್ಟ ಸ್ವಾಭಿಮಾನವನ್ನು ತೋರಿಸುತ್ತೆ


=======================-
ಸುಭಾಷ್ಚಂದ್ರಬೋಸ್
===========================-
ಭಾರತ ಮತ್ತು ಪಾಕಿಸ್ತಾನ ವಿಭಜಿತವಾದಾಗ ಪಾಕಿಸ್ತಾನದ ಮೊಹಮದ್ ಅಲಿ ಜಿನ್ನ ಹೇಳಿದ ಮಾತಿದು.
ಗ್ರಾಫಿಕ್ - ‘ನಾನು ಮಹಾತ್ಮಾ ಗಾಂಧೀಜಿಯವರ ಜೊತೆ ಮಾತುಕತೆ ನಡೆಸಿದ್ದಕ್ಕೆ, ನನಗೆ ಪಾಕಿಸ್ತಾನ ಸಿಕ್ಕಿತು.. ಗಾಂಧೀಜಿಯವರ ಬದಲು ನಾನೇನಾದ್ರೂ ಸುಭಾಷ್ ಚಂದ್ರಬೋಸರೊಂದಿಗೆ ಮಾತುಕತೆಯನ್ನು ನಡೆಸಿದ್ದಿದ್ರೆ ನಮಗೆ ಪಾಕಿಸ್ತಾನ ದಕ್ಕುತ್ತಿರಲಿಲ್ಲ’ - ಮೊಹಮದ್ ಅಲಿ ಜಿನ್ನಾ
=================================================-
ಸುಭಾಷ್ ಚಂದ್ರಬೋಸ್
ಸುಭಾಷ್​ಚಂದ್ರಬೋಸರು 1945ರಲ್ಲಿ ವಿಮಾನ ಅಪಘಾತದಲ್ಲಿ ಹುತಾತ್ಮರಾದರು ಅನ್ನೋ ಸುದ್ದಿ, ಬ್ರಿಟೀಷರ ಕಿವಿಗೆ ಬಿದ್ದಿತು.. ಇದನ್ನು ಕೇಳಿದ ಬ್ರಿಟೀಷ್ ಅಧಿಕಾರಿಯೊಬ್ಬರು,
ಗ್ರಾಫಿಕ್ - ‘ಸುಭಾಷ್ ಚಂದ್ರಬೋಸರು, ಅಷ್ಟು ಸುಲಭವಾಗಿ ಹುತಾತ್ಮರಾಗುವಂಥ ವ್ಯಕ್ತಿಯಲ್ಲ.. ಯಾವ ಸಮಯದಲ್ಲಿ ಎಲ್ಲಿಂದ ಎದ್ದು ಬರ್ತಾರೋ ಗೊತ್ತಾಗೋದಿಲ್ಲ’ - ಬ್ರಿಟೀಷ್ ಅಧಿಕಾರಿ
ವಾಯ್ಸ್: ಅಂತ ಬ್ರಿಟೀಷ್ ಅಧಿಕಾರಿಯೊಬ್ಬರು ಹೇಳಿದ್ರಂತೆ.
===========================================-
ಸುಭಾಷ್​ ಚಂದ್ರಬೋಸ್​
==============================-
ಆಗಸ್ಟ್​​ 18, 1945 ರಲ್ಲಿ ಸುಭಾಷ್ ಚಂದ್ರಬೋಸರು ವಿಮಾನ ಅಪಘಾತದಲ್ಲಿ ಹುತಾತ್ಮರಾಗಿದ್ದರೂ ಕೂಡ,
ಗ್ರಾಫಿಕ್ - ‘ಸುಭಾಷ್ ಚಂದ್ರಬೋಸರು ತಮ್ಮ ಮೇಲೆ ಧಾಳಿ ಮಾಡಬಹುದು ಎಂಬ ಆತಂಕದಲ್ಲೇ ಬ್ರಿಟೀಷ್ಅಧಿಕಾರಿಗಳು ಬಹಳಷ್ಟು ದಿನ ಕಾಲ ಕಳೆದಿದ್ದರು
ವಾಯ್ಸ್: ಇದು ಸುಭಾಷ್ ​ಚಂದ್ರಬೋಸರ ಬಗ್ಗೆ ಬ್ರಿಟೀಷರಿಗಿದ್ದ ಭಯವನ್ನು ತೋರಿಸುತ್ತೆ.
=========================================================-
ಭಗತ್​ಸಿಂಗ್​​

ಗ್ರಾಫಿಕ್ ಇನ್
==================-
ದಿನಾಂಕ : 1919 ಏಪ್ರಿಲ್ 13
ಸಮಯ : ಸಂಜೆ 6 ಗಂಟೆ
ಸ್ಥಳ : ಪಂಜಾಬ್​​ನ ಜಲಿಯನ್ ವಾಲಾಬಾಗ್
ವಿಶ್ಯುಯಲ್ ಫ್ಲೋ...
ಬ್ರಿಟೀಷರ ವಿರುದ್ಧ 20.000 ರೈತರು ಹೋರಾಟ ನಡೆಸುತ್ತಿದ್ದರು.. ಆದ್ರೆ, ಹೋರಾಟ ನಿರತ ರೈತರ ಮೇಲೆ ಬ್ರಿಟೀಷರು  ಯಾವುದೇ ಮುನ್ಸೂಚನೆ ಇಲ್ಲದೇ ನಿರ್ದಯವಾಗಿ ಗುಂಡು ಹಾರಿಸಿದ್ರು.. ಕೇವಲ 6 ನಿಮಿಷಗಳಲ್ಲಿ ಸುಮಾರು 3000 ಕ್ಕೂ ಹೆಚ್ಚಿನ ಜನರು ಕ್ಷಣಮಾತ್ರದಲ್ಲಿ ಪ್ರಾಣ ಕಳೆದುಕೊಂಡರು.. ಪುಟ್ಟ ಹುಡುಗನಾಗಿದ್ದ ಭಗತ್ ಸಿಂಗ್ ಆ ಘನ ಘೋರ ಹತ್ಯಾಕಾಂಡಕ್ಕೆ ಮೂಕ ಸಾಕ್ಷಿಯಾಗಿದ್ರು..!

ಮಾರನೆಯ ದಿನ ಶಾಲೆಗೆ ಹೋಗು ಅಂತ ಊಟದ ಬುತ್ತಿಯನ್ನು ನೀಡಿ ಕಳಿಸಿದ್ರೆ ಭಗತ್ ಸಿಂಗ್ ನೇರವಾಗಿ ಹತ್ಯಾಕಾಂಡದ ಕರಾಳ ಪ್ರದೇಶಕ್ಕೆ ಬಂದು, ಆ ನೆಲದಲ್ಲಿ ಬಿದ್ದ ರಕ್ತಸಿಕ್ತ ಮಣ್ಣನ್ನು ನೋಡಿ ಕೆಂಡಾಮಂಡಲವಾದ್ರು. ತನ್ನ ಊಟವನ್ನು ನೆಲದಲ್ಲಿ ಚೆಲ್ಲಿದರು.. ಆ ರಕ್ತಸಿಕ್ತ ಮಣ್ಣನ್ನು ಆ ಊಟದ ಡಬ್ಬದಲ್ಲಿ ಹಾಕಿಕೊಂಡು ಮನೆಗೆ ಬಂದು ದೇವರ ಮುಂದಿಟ್ಟು

ಗ್ರಾಫಿಕ್ - ‘ನನ್ನ ದೇಶದ ಜನರ ರಕ್ತವನ್ನು ಹರಿಸಿದವರನ್ನು ನಾನು ಸುಮ್ಮನೇ ಬಿಡೋದಿಲ್ಲ. ಅವರ  ಜೀವ ತೆಗೆಯುವವರೆಗೂ  ನನಗೆ ಸಮಾಧಾನವಿಲ್ಲ

ವಾಯ್ಸ್: ಅಂತ ಪ್ರತಿಜ್ಞೆ ಮಾಡಿದ್ರು.. ಆ ಕ್ಷಣದಿಂದಲೇ ಬ್ರಿಟೀಷರ ಮೇಲೆ ಯುದ್ಧ ಸಾರಿದರು
===============================================-
ಭಗತ್​ ಸಿಂಗ್​​

ದಿನಾಂಕ : ಮಾರ್ಚ್​ 23, 1931
ಸ್ಥಳ : ಲಾಹೋರ್ ಜೈಲ್​

ವಾಯ್ಸ್: ಭಗತ್​ಸಿಂಗ್​ರನ್ನು ಆವತ್ತು ನೇಣುಗಂಬಕ್ಕೆ ಏರಿಸುವ ಎಲ್ಲಾ ತಯಾರಿ ನಡೀತಿತ್ತು. ಭಗತ್ ಸಿಂಗ್‌ರನ್ನು ನೋಡಿದ ಬ್ರಿಟೀಷ್ ಅಧಿಕಾರಿಯೊಬ್ಬ
ಗ್ರಾಫಿಕ್ - ‘ನೀನು ಈ ಜನರಿಗಾಗಿ ಕಷ್ಟ ಪಟ್ಟೆ.. ಆದರೆ ಇಂದು ನಿನ್ನನ್ನು ನೇಣುಹಾಕುತ್ತಿದ್ದರೂ, ಇವರೆಲ್ಲಾ ಸುಮ್ಮನೇ ನೋಡುತ್ತಿದ್ದಾರೆ. ಯಾರೂ ನಿನ್ನನ್ನು ರಕ್ಷಿಸುತ್ತಿಲ್ಲ.. ಇಂಥವರಿಗಾಗಿ ನೀನು ಹೋರಾಟ ಮಾಡ್ತಿದ್ದೀಯಲ್ಲ.. ನೀನು ಸತ್ತರೆ ಮತ್ಯಾರು ಹೋರಾಟ ಮಾಡ್ತಾರೆ

ವಾಯ್ಸ್: ಅಂತ ಕೇಳಿದ್ರಂತೆ.. ಆಗ ಭಗತ್ ಸಿಂಗ್ ಏನ್ ಹೇಳಿದ್ರು ಗೊತ್ತಾ..?
ಗ್ರಾಫಿಕ್- ‘ನಾನು ಸತ್ತರೆ ನನ್ನಂಥ ನೂರಾರು ಭಗತ್ ಸಿಂಗ್​​ರು ನನ್ನ ತಾಯಿ ನೆಲದಲ್ಲಿ ಹುಟ್ಟುತ್ತಾರೆ.. ಅಂಥ ಶಕ್ತಿ ನನ್ನ ತಾಯಿ ಭಾರತ ಮಾತೆಗೆ ಇದೆ
ವಾಯ್ಸ್ : ಅಂತ  ಹೇಳುತ್ತಾ ನಗು ನಗುತ್ತಲೇ ನೇಣುಗಂಬಕ್ಕೆ ತಲೆ ನೀಡಿದರು.. ಅಂದು ಭಾರತದ ಆಶಾಕಿರಣ ಕಣ್ಮರೆಯಾಗಿಹೋಯ್ತು.
=======================================-
ಮಹಾತ್ಮಾ ಗಾಂಧೀಜಿ
=======================-
ಗ್ರಾಫಿಕ್ - ಸ್ವತಂತ್ರ್ಯ ಹೋರಾಟ ಎಂದರೆ, ಯುದ್ಧ, ರಕ್ತಪಾತ, ಶಸ್ತ್ರಾಸ್ತ್ರ ಸಜ್ಜಿತ ದಾಳಿ ಅಂತ ಇಡೀ ಜಗತ್ತೇ ಅಂದುಕೊಂಡಿತ್ತು.. ಆದ್ರೆ ಹಿಂಸೆ, ರಕ್ತಪಾತ ಇಲ್ಲದೇ, ಅಹಿಂಸಾತ್ಮಕವಾಗಿ ಸ್ವತಂತ್ರ್ಯ ಹೋರಾಟ ಮಾಡಬಹುದು ಎಂದು ಇಡೀ ಜಗತ್ತಿಗೆ ಅಹಿಂಸೆಯ ಪಾಠ ಹೇಳಿಕೊಟ್ಟಿದ್ದು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ.
ಗ್ರಾಫಿಕ್ - ಮಹಾತ್ಮಾ ಗಾಂಧಿಜೀಯವರ ಹಾದಿ ತುಳಿದು, ಅಹಿಂಸೆಯಿಂದ ದಕ್ಷಿಣ ಆಫ್ರಿಕಾಗೆ ಸ್ವತಂತ್ರ ತಂದುಕೊಟ್ಟವರು, ಆಫ್ರಿಕನ್ ಗಾಂಧಿ ನೆಲ್ಸನ್ ಮಂಡೇಲ
==============================================-
ಮಹಾತ್ಮಾ ಗಾಂಧೀಜಿ
===========================-
ಗಾಂಧೀಜಿಯವರು ಅಹಿಂಸೆಯನ್ನು ಅಳವಡಿಸಿಕೊಂಡಿದ್ದರು.. ಹೀಗಾಗಿ ಅನೇಕ ಕ್ರಿಶ್ಚಿಯನ್ ಮಿತ್ರರು
ಗ್ರಾಫಿಕ್ - ‘ನಿಮ್ಮಲ್ಲಿ ಕ್ರಿಶ್ಚಿಯನ್​​ ಧರ್ಮದ ಅನೇಕ ಉತ್ತಮ ಆದರ್ಶ ಗುಣಗಳಿವೆ. ನೀವು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿ
ವಾಯ್ಸ್:  ಎಂದು ಗಾಂಧೀಜೀ ಯವರನ್ನು ಒತ್ತಾಯಿಸಿದರಂತೆ. ಆಗ ಗಾಂಧೀಜೀಯವರು
ಗ್ರಾಫಿಕ್ - ‘ಈಗಿರುವ ಹಿಂದೂಧರ್ಮದಲ್ಲಿ ಏನಾದರೂ ಕೊರತೆ ಇದೆಯೇ..? ಕೊರತೆ ಇದ್ದರೆ, ಹೇಳಿ, ಆಗ ನಾನು ಧರ್ಮ ಬದಲಿಸುತ್ತೇನೆ
ವಾಯ್ಸ್: ಎಂದು ಹೇಳಿದರಂತೆ.
ಗ್ರಾಫಿಕ್ - ‘ಎಲ್ಲಾ ಧರ್ಮಗಳಲ್ಲಿನ ಉತ್ತಮ ತತ್ವಗಳನ್ನು ಮತ್ತು ನೀತಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಅದಕ್ಕಾಗಿ ಧರ್ಮವನ್ನೇ ಬದಲಾಯಿಸಬೇಕೆಂಬ ಭಾವನೆ ಸರಿಯಲ್ಲ
ವಾಯ್ಸ್: ಎಂಬುದು ಗಾಂಧೀಜಿಯವರ ನಿಲುವು
=====================================--
ಮಹಾತ್ಮಾ ಗಾಂಧೀಜಿ
===========================-
ವಿಶ್ಯುಯಲ್ ಫ್ಲೋ...
ಒಮ್ಮೆ ಗಾಂಧೀಜಿಯವರ ಬಳಿಗೆ ಮಹಿಳೆ ಬಂದು, ಬಾಪುಜಿ ನನ್ನ ಮಗಳು ಬೆಲ್ಲವನ್ನು ಹೆಚ್ಚಾಗಿ ತಿಂತ್ತಾಳೆ. ನೀವು ಬುದ್ದಿ ಹೇಳಿ, ಬೆಲ್ಲ ತಿನ್ನುವುದನ್ನು ನಿಲ್ಲಿಸುಸಿ ಅಂತ ಕೇಳಿಕೊಂಡರಂತೆ. ಆಗ ಸ್ವಲ್ಪ ಯೋಚನೆ ಮಾಡಿದ ಮಹಾತ್ಮಾ ಗಾಂಧೀಜಿ "ನೀವು ಒಂದು ವಾರದ ನಂತರ ನಿಮ್ಮ ಮಗುವನ್ನು ಕರೆದುಕೊಂಡು ಬನ್ನಿ ನೋಡೋಣ" ಎಂದು ಹೇಳಿ ಕಳಿಸಿದರು

ಒಂದು ವಾರದ ನಂತರ ಆ ಮಹಿಳೆ ಮತ್ತೆ ಮಹಾತ್ಮಾ ಗಾಂಧಿಯವರ ಬಳಿಗೆ ಬಂದು, ‘ಬಾಪುಜಿ. ನೀವು ಹೇಳಿದಂತೆ ಒಂದು ವಾರದ ನಂತರ ಬಂದಿದ್ದೇನೆ. ಏನಾದರೂ ಪರಿಹಾರ ಹೇಳಿ ಎಂದು ಕೇಳಿದರಂತೆ.

ಗ್ರಾಫಿಕ್ - ‘ನಿಮ್ಮ ಮಗುವಿಗೆ ಬುದ್ಧಿ ಹೇಳಲು ನನಗೆ ಸಾಧ್ಯವಿಲ್ಲ. ನೀವು ಬಂದು ಹೋದ ದಿನದಿಂದ ನಾನು ಬೆಲ್ಲ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡೆ. ಒಮ್ಮೆ ಅಭ್ಯಾಸವಾದ ಮೇಲೆ ಅದನ್ನು ಹೇಗೆ ಬಿಡುವುದು ಎಂದು ಆಲೋಚಿಸಿ ಪ್ರಯತ್ನ ಕೂಡ ಮಾಡಿದೆ. ಆದ್ರೆ ಬೆಲ್ಲ ತಿನ್ನುವುದನ್ನು ಬಿಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನೇ ಬೆಲ್ಲ ತಿನ್ನುವುದನ್ನು ಬಿಡಲು ಸಾಧ್ಯವಾಗದೇ ಇರುವಾಗ, ನಾನು ಆ ಮಗುವಿಗೆ ಹೇಗೆ ಬುದ್ದಿ ಹೇಳಲಿ?’
ವಾಯ್ಸ್:  ಎಂದರಂತೆ ಗಾಂಧೀಜಿ
============================================-
ಮಹಾತ್ಮ ಗಾಂಧೀಜಿ
=====================-
ಗ್ರಾಫಿಕ್ - ‘ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಗಾಂಧೀಜಿ ತಮ್ಮ ತಾಯಿಗೆ ಪ್ರಮಾಣ ಮಾಡಿದರು. ಆದರೆ ಕಾನೂನು ಓದುವುದಕ್ಕಾಗಿ ಗಾಂಧೀಜಿಯವರು ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಹೋದರು. ಆದ್ರೆ ವಿದೇಶದಲ್ಲಿ ಮಾಂಸಾಹಾರವೇ ಹೆಚ್ಚು ಪ್ರಸ್ತುತ. ಲಂಡನ್‌ನಲ್ಲಿ ಸಸ್ಯಾಹಾರ ಸಿಗದೇ ಇರುವಾಗ, ಅನೇಕ ದಿನಗಳ ಕಾಲ ಗಾಂಧೀಜಿಯವರು ಹಸಿದ ಹೊಟ್ಟೆಯಲ್ಲೇ ಬದುಕು ದೂಡಿದ್ದರು. ಇನ್ನೊಂದು ವಿಚಿತ್ರ ಅಂದ್ರೆ, ಹಲವು ಹೊಟೇಲುಗಳಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಪ್ರವೇಶ ಕೂಡ ನಿರಾಕರಣೆ ಮಾಡಲಾಗಿತ್ತು.
==================================-
ಮಹಾತ್ಮಾ ಗಾಂಧೀಜಿ ಬಗ್ಗೆ ಒಂದು ಮಾತು (ಹೆಡ್)
==================================-
ಗ್ರಾಫಿಕ್ - ‘ಗಾಂಧೀಜಿಯವರು ತಮ್ಮ ಅಪೆಂಡಿಸೈಟಿಸ್ ಆಪರೇಶನ್ ಸಮಯದಲ್ಲಿ ಅರವಳಿಕೆ ಅಂದ್ರೆ ಅನಿಸ್ತೀಶಿಯವನ್ನು ತೆಗೆದುಕೊಳ್ಳದೆ, ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದರು. ಇಂತಹ ಏಕಾಗ್ರಚಿತ್ತ ಮನಸ್ತಿತಿಯ ವ್ಯಕ್ತಿ, ಇತಿಹಾಸದಲ್ಲಿ ಹಿಂದೆಂದೂ ಸಿಕ್ಕಿಲ್ಲ. ಮುಂದೆಯೂ ಇಂತಹ ವ್ಯಕ್ತಿ ಜನಿಸುತ್ತಾನೆಂದು ಊಹಿಸಲೂ ಸಾಧ್ಯವಿಲ್ಲ  - ಪರಮಹಂಸ ಯೋಗಾನಂದರು

ಗ್ರಾಫಿಕ್ - ‘ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ಮುಂದಿನ ಪೀಳಿಗೆಯ ಜನರು ನಂಬುವುದೇ ಕಷ್ಟವಾಗಬಹುದು’ -ಅಲ್ಬರ್ಟ್ ಐನ್‌ಸ್ಟಿನ್, ವಿಜ್ಞಾನಿ

ಗ್ರಾಫಿಕ್ - ಮಹಾತ್ಮಾಗಾಂಧಿಯವರ ಶಾಂತಿ ಮತ್ತು ಅಹಿಂಸೆಯನ್ನು ವಿಶ್ವಸಂಸ್ಥೆ ಕೂಡ ಅಳವಡಿಸಿಕೊಂಡಿದ್ದು, ಅಕ್ಟೋಬರ್​​ 2 ರಂದು, ಗಾಂಧೀಜಿಯವರ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ. ಆ ಮೂಲಕ ವಿಶ್ವಸಂಸ್ಥೆ ಕೂಡ ಮಹಾತ್ಮಾ ಗಾಂಧೀಜೀಯವರಿಗೆ ಗೌರವ ನೀಡಿದೆ
=========================================-==================-
ಗ್ರಾಫಿಕ್ - ‘ಜನವರಿ 30, 1948 ರಂದು, ಮಹಾತ್ಮಾ ಗಾಂಧೀಜಿಯವರನ್ನು ನಾಥೋರಾಮ್‌ ಗೋಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ್ದ. ಈ ಸುದ್ದಿಯನ್ನು ಕೇಳಿದ ವ್ಯಾಟಿಕನ್ ಸಿಟಿಯ ಪೋಪರು, ತಾವು ಒಬ್ಬ ಕ್ರೈಸ್ತ ಸಂತನನ್ನು ಕಳೆದುಕೋಡಷ್ಟೇ ದುಃಖವಾಗಿದೆ ಎಂದು ಕಣ್ಣೀರಿಟ್ಟರು
===============================================================-
ಪ್ರತಿಭಾನ್ವಿತರಾಗಿದ್ದ ಸುಭಾಷ್ ಚಂದ್ರಬೋಸ್​​ರು ಬ್ರಿಟೀಷರ ಅವಧಿಯಲ್ಲೇ IAS ಪದವಿ ಪಾಸು ಮಾಡಿದ್ದರು. ಬ್ರಿಟೀಷರ ಕೆಳಗೆ ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿ, ಆ ಕೆಲಸವನ್ನೇ ತ್ಯಜಿಸಿ ಬಂದ ಕಿಚ್ಚಿನ ಸ್ವಾಭಿಮಾನಿ ಸುಭಾಷ್ ಚಂದ್ರಬೋಸ್
======================================-
ಲಾಲ್ ಬಹದ್ದೂರ್​ ಶಾಸ್ತ್ರಿ, ಮಾಜಿ ಪ್ರಧಾನಿ
=======================================-
ಅದು ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದ ಸಮಯ.. ಒಂದು ದಿನ ಶಾಸ್ತ್ರಿಯವರ ಮಗ ತಂದೆಯ ಬಳಿಗೆ ಬಂದು ಅಪ್ಪ ನನಗೆ ಒಂದು ಬೈಕ್ ಕೊಡಿಸಿ ಅಂತ ಕೇಳಿದ್ರಂತೆ.. ಆಗ ಶಾಸ್ತ್ರಿಯವರು
ಗ್ರಾಫಿಕ್ - ‘ಮಗನೇ ಜನರು ಕೊಡುವ ಹಣದಿಂದ ನಾವು ಹೊಟ್ಟೆ ತುಂಬಿಸಿಕೊಳ್ತಾ ಇದ್ದೀವಿ.,. ಹೀಗಿರುವಾಗ ನಿನಗೆ ಬೈಕ್ ಕೊಡಿಸುವಷ್ಟು ಹಣ ನನ್ನ ಬಳಿ ಇಲ್ಲ

ವಾಯ್ಸ್:  ಎಂದು ಹೇಳಿದ್ರಂತೆ. ಆದ್ರೆ ಮಗ ಬೇಸರದಲ್ಲಿರೋದನ್ನು ಕಂಡು, ಶಾಸ್ತ್ರಿಯವರ ಪತ್ನಿ ಮಗನಿಗೆ ಬೈಕ್ ಕೊಡಿಸಿದರಂತೆ. ಇದಾದ ನಂತರ ತಮ್ಮ ಪತ್ನಿಯನ್ನು ಕರೆದು,

ಗ್ರಾಫಿಕ್ - ‘ನನ್ನ ಹತ್ತಿರ ಹಣವೇ ಇರಲಿಲ್ಲ. ಆದರೆ ಒಂದು ಬೈಕ್ ಕೊಡಿಸುವಷ್ಟು ಹಣ ನಿನ್ನಲ್ಲಿ ಹೇಗೆ ಬಂತು
ವಾಯ್ಸ್:  ಎಂದು ಕೇಳಿದ್ರಂತೆ.. ಆಗ ಶಾಸ್ತ್ರಿಯವರ ಪತ್ನಿ
ಗ್ರಾಫಿಕ್ - ‘ನೀವು ಮನೆಯ ಖರ್ಚಿಗಾಗಿ ಕೊಡುತ್ತಿದ್ದ ಹಣದಲ್ಲಿ ಸ್ವಲ್ಪ ಸ್ವಲ್ಪ ಉಳಿಸುತ್ತಿದ್ದೆ.. ಆ ಹಣದಿಂದಲೇ ಮಗನಿಗೆ ಬೈಕ್ ಕೊಡಿಸಿದೆ

ವಾಯ್ಸ್: ಎಂದು ಹೇಳಿದರು. ಮರು ದಿನವೇ ಶಾಸ್ತ್ರಿಯವರು ಸರ್ಕಾರಕ್ಕೆ ಒಂದು ಪತ್ರವನ್ನು ಬರೆದರು..
ಗ್ರಾಫಿಕ್ - ಸರ್ಕಾರ ನನಗೆ ನೀಡುತ್ತಿರುವ ಸಂಬಳ ನನ್ನ ಕುಟುಂಬದ ಖರ್ಚಿಗೆ ವಿನಿಯೋಗವಾಗಿ ಇನ್ನೂ ಹೆಚ್ಚಿಗೆ ಉಳಿಯುತ್ತಿದೆ. ದಯವಿಟ್ಟು ಆ ಹೆಚ್ಚಿನ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಿ
ವಾಯ್ಸ್: ಎಂದು ಆ ಪತ್ರದಲ್ಲಿ ತಿಳಿಸಿದ್ದರು..
====================================================-

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು