Recent Movies

ಸಿನೆಮಾ

Share This Article To your Friends

Showing posts with label ಆಟ-ಕುತೂಹಲಕಾರಿ ವಿಷಯಗಳು. Show all posts
Showing posts with label ಆಟ-ಕುತೂಹಲಕಾರಿ ವಿಷಯಗಳು. Show all posts

ನಾಸಿರ್ ಹುಸೇನ್ ಹುಟ್ಟಿದ್ದು ಭಾರತದಲ್ಲಿನಾಸಿರ್ ಹಸ್ಸೇನ್..

ಇಂಗ್ಲೆಂಡ್ ಕ್ರಿಕೇಟ್ ಟೀಮ್ ನ ಮಾಜಿ ನಾಯಕ.. ಇವರು ಹುಟ್ಟಿದ್ದು 28 March 1968. ಇಂಗ್ಲೆಂಡ್ ನಲ್ಲಿ ಬೆಳೆದ ನಾಸಿರ್ 1989-90 ರಲ್ಲಿ ನಡೆದ West Indies ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಮೊಟ್ಟ ಮೊದಲ ಬಾರಿಗೆ ಕ್ರಿಕೇಟ್ ಜಗತ್ತಿಗೆ ಕಾಲಿಟ್ಟರು. 96 tests, ಗಳಲ್ಲಿ 5,764 runs ಗಳನ್ನು ಮಾಡಿದ ನಾಸಿರ್ ಹುಸೇನ್  ಹುಟ್ಟಿದ್ದು ಮಾತ್ರ ಶಿಲ್ಪ ಕಲೆಗಳ ನಾಡಾದ ಭಾರತದಲ್ಲಿ.. ಅದರಲ್ಲೂ ಚೋಳರು ಪಲ್ಲವರು ಆಳಿದಂಥ ತಮಿಳುನಾಡಿನ ಮಣ್ಣಲ್ಲಿ.. ಅಂದ್ರೆ ಮದ್ರಾಸ್ ನಲ್ಲಿ.. ಭಾರತದಲ್ಲಿ ಜನಿಸಿ ವಿದೇಶೀ ತಂಡದಲ್ಲಿ ನಾಯಕನಾಗಿ ಮೆರೆದ ಕೀರ್ತಿ ನಾಸಿರ್ ಹಸ್ಸೇನ್ ಗೆ ಸಲ್ಲುತ್ತೆ..

ಸಚಿನ್ ತೆಂಡೂಲ್ಕರ್ಏಪ್ರಿಲ್ 24, 1973 ರಲ್ಲಿ ಮುಂಬೈನಲ್ಲಿ ಜನಿಸಿದ ಸಚಿನ್ ತೆಂಡೂಲ್ಕರ್ 1989 ರಲ್ಲಿಯೇ  ಅಂದರೆ ತಮ್ಮ ಹದಿನಾರನೆಯ ವಯಸ್ಸಿನಲ್ಲಿಯೇ ಅಂತರ್ ರಾಷ್ಟ್ರೀಯ ಮಟ್ಟದ ಕ್ರಿಕೇಟ್ ನಲ್ಲಿ ಧುಮುಕಿದ್ರು..
 ಕಾಕತಾಳಿಯವೋ ಏನೋ ಸಚಿನ್ ಮೊಟ್ಟ ಮೊದಲ ಬಾರಿಗೆ 1989 ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ್ರು. ಕ್ರಿಕೇಟ್ ಲೋಕದ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಓದಿದ್ದು ಮಾತ್ರ ಅತ್ಯಲ್ಪ.. ಆದ್ರೆ ಸಾಧನೆ ಮಾತ್ರ ಅಗಾಧ.. ಹೆಜ್ಜೆ ಹೆಜ್ಜೆಗೂ ಸಾಧನೆಯನ್ನು ಮಾಡುತ್ತ ದಾಖಲೆಯ ಪುಟಗಳಲ್ಲಿ ರಾರಾಜಿಸುತ್ತಿರುವ ವಿಶ್ವದ ಏಕೈಕ ಸರಳ ವ್ಯಕ್ತಿ.. ಸಚಿನ್ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಅತಿ ಹೆಚ್ಚು ಏಕ ದಿನ ಪಂದ್ಯಗಳನ್ನು ಆಡಿದ್ದಾರೆ.. ಏಕದಿನ ಪಂದ್ಯದಲ್ಲಿ ವಿಶ್ವದಲ್ಲೇ ಮೊಟ್ಟ ಮೊದಲಿಗೆ 200 ರನ್ ಗಳನ್ನು ಗಳಿಸಿದ ಏಕೈಕ ಆಟಗಾರ. ಅತಿ ಹೆಚ್ಚು ರನ್ ಗಳನ್ನು ಗಳಿಸಿದ ಮಹಾನ್ ಆಟಗಾರರೂ ಹೌದು.. ಮತ್ತು ಇತ್ತೀಚೆಗಷ್ಟೇ ನೂರು ಶತಕಗಳನ್ನು ಪೂರೈಸಿ, ದಾಖಲೆ ಮಾಡಿದ್ರು,, ಇಂಥಾ ದಾಖಲೆಯ ವೀರ ಈಗ ರಾಜ್ಯಸಭೆಗೆ ಆಯ್ಕೆಯಾಗಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ದೇಶವು ಆಸ್ಟ್ರೇಲಿಯಾದ ಶ್ರೇಷ್ಟ ನಾಗರೀಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಅನಿಲ್ ಕುಂಬ್ಳೆ- ಕಾರ್ಗಿಲ್ ಕದನದ ಕಿಚ್ಚು ಆರಿಸಿಕೊಂಡ ಬಗೆ ಜಂಬೋ ಎಂದು ಹೆಸರಾದ ಖ್ಯಾತ ಸ್ಪಿನ್ನರ್ ಅನಿಲ್ ಕುಂಬ್ಳೆ ಅಪ್ಪಟ ಕನ್ನಡಿಗರು.. ಅಕ್ಟೋಬರ್ 17, 1970 ರಲ್ಲಿ ಗಂಧದ ನಾಡಾದ ಕರ್ನಾಟಕದಲ್ಲಿ ಅದರಲ್ಲೂ ಉದ್ಯಾನ ನಗರಿ ಬೆಂಗಳೂರಿನಲ್ಲಿ ಜನಸಿದ ಅನಿಲ್ ಕುಂಬ್ಳೆ, 1990, April 25 ರಂದು ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಕ್ರಿಕೇಟ್ ಲೋಕಕ್ಕೆ ಕಾಲಿಟ್ರು.  1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಕದನದ ಕರಿ ಛಾಯೆ ಇತ್ತು.. ಇಂಥಾ ಸಂದರ್ಭದಲ್ಲಿ ಸಿಟ್ಟಿಗೆದ್ದ ಕನ್ನಡದ ಕುವರ  ಆ ವರ್ಷ ಅಂದ್ರೆ 1999, February ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಹತ್ತು ವಿಕೇಟ್ ಗಳನ್ನು ಕಿತ್ತೊಗೆದು ತಮ್ಮ ಕಿಚ್ಚನ್ನು ಆರಿಸಿಕೊಂಡರು.. ತಮ್ಮ ಆಟದ ಮೂಲಕವೇ ಶತೃಗಳಿಗೆ ತಕ್ಕ ಪಾಠ ಕಲಿಸಿದ ಅನಿಲ್ ಕುಂಬ್ಳೆ ಒಂದೇ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ವಿಕೇಟ್ ಪಡೆದ ಏಕೈಕ ಆಟಗಾರರಾಗಿ ವಿಶ್ವ ದಾಖಲೆ ಮಾಡಿದ್ರು. ಅಷ್ಟೇ ಅಲ್ಲ.. ವಿಶ್ವದಲ್ಲಿಯೇ ಅತಿ ಹೆಚ್ಚು ವಿಕೇಟ್ ಗಳನ್ನು ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನವನ್ನು ಗಳಿಸಿದ್ದಾರೆ.. ಸುಮಾರು 600 ಕ್ಕೂ ಅಧಿಕ  ವಿಕೇಟ್ ಗಳನ್ನು  ಹೊಡೆದುರುಳಿಸಿ ವಿರೋಧಿ ತಂಡಗಳಿಗೆ ಸಿಂಹ ಸ್ವಪ್ನವಾಗಿ ಕಾಣಿಸಿಕೊಂಡವರು ಕನ್ನಡದ ಧೀಮಂತ ಆಟಗಾರ ಅನಿಲ್ ಕುಂಬ್ಳೆ..

ಭಾರತದ "ದೋಣಿ" ಸಾಗುತಿದೆ


ತನ್ನ ಉದ್ದವಾದ ಕೂದಲಿಂದಲೇ ಹೊಸ ಟ್ರೆಂಡ್ ಹುಟ್ಟುಹಾಕಿದ್ದ ಖ್ಯಾತ ಆಟಗಾರ ಮಹೇಂದ್ರಸಿಂಗ್ ಧೋನಿ. 

1981, ಜುಲೈ 7 ರಂದು ಬಿಹಾರದ ರಾಂಚಿಯಲ್ಲಿ ಜನಿಸಿದ ಧೋನಿ ಮೇಕಾನ್ ಕಂಪೆನಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.. ಕ್ರಿಕೇಟ್ ಲೋಕಕ್ಕೆ ಕಾಲಿಡುವ ಮೊದಲು ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಅಂದ್ರೆ ಫುಟ್ ಬಾಲ್ ಟೀಮ್ ನಲ್ಲಿ ಅತ್ಯುತ್ತಮ ಗೋಲ್ ಕೀಪರ್ ಆಗಿ ಗುರ್ತಿಸಿಕೊಂಡಿದ್ದ ಧೋನಿ ಅತ್ಯುತ್ತಮ ಫುಟ್ ಬಾಲ್ ಆಟಗಾರರೂ ಆಗಿದ್ದಾರೆ.. ಜೊತೆಗೆ ಬ್ಯಾಡ್ ಮಿಟನ್ ಕೂಡ ಅಚ್ಚುಕಟ್ಟಾಗಿ ಆಡ್ತಾರೆ. ಧೋನಿ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋಹಾಗೆ ಧೋನಿ ನಾಯಕತ್ವ ವಹಿಸಿಕೊಂಡ ತಕ್ಷಣ 2007ICC ಟಿ 20 ಕ್ರಿಕೇಟ್ ನಲ್ಲಿ ಟೀಮ್ ಇಂಡಿಯಾ ಜಯಭೇರಿ ಭಾರಿಸಿತು.. ಏಕ ದಿನ ಪಂದ್ಯದಲ್ಲಿ ಅತಿ ಹೆಚ್ಚು ಅಂದ್ರೆ 10 ಸಿಕ್ಸ್ ಗಳನ್ನು ಹೊಡೆದ ಮೊಟ್ಟ ಮೊದಲ ಭಾರತೀಯ ಆಟಗಾರ ಎಂಬ ಖಾತಿಗೆ ಒಳಗಾದ್ರು. ಇತ್ತೀಚಿನ ಫೋರ್ಬ್ಸ್ ಪತ್ರಿಕೆಯ ಸಮೀಕ್ಷೆಯಂತೆ ವಿಶ್ವದ ಅತಿ ಹೆಚ್ಚು ಆದಾಯ ಪಡೆಯುವ ಕ್ರಿಕೇಟಿಗರಲ್ಲಿ ಧೋನಿ ಕೂಡ ಒಬ್ಬರಾಗಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ವಿಕೇಟ್ ಕೀಪರ್ ಹೊಣೆ ಹೊತ್ತ ಧೋನಿಗೆ, ಸಿನೆಮಾ ಆಫರ್ ಗಳೂ ಕೂಡ ಹುಡುಕಿಕೊಂಡು ಬರುತ್ತಿವೆ.. ಇನ್ನು ಕೆಲವೇ ದಿನಗಳಲ್ಲಿ ಬಾಲೀವುಡ್ ಗೆ ಇಳಿಯುವ ಸಾಧ್ಯತೆಗಳೂ ಹೆಚ್ಚಾಗಿವೆ ಎನ್ನುತ್ತವೆ ಕೆಲವು ಮೂಲಗಳು.

ಇತಿಹಾಸ ಬರೆದ ವಿಶ್ವನಾಥ್ ಆನಂದ್ಕಪ್ಪು ಬಿಳುಪಿನ ಮನೆಯಲ್ಲಿ ಶತೃಗಳನ್ನು ಹೊಡೆದುರುಳಿಸುವ ಕಿಂಗ್ ಮೇಕರ್ ವಿಶ್ವನಾಥ್ ಆನಂದ್.. ಸತತವಾಗಿ ಐದನೆಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿರುವ ವಿಶ್ವನಾಥ್ ಆನಂದ್, ಭಾರತ ಕಂಡಂಥ ಹೆಮ್ಮೆಯ ಪುತ್ರ. 42 ವರ್ಷದ ವಿಶ್ವನಾಥ್ ಆನಂದ್ 1969 ಡಿಸೆಂಬರ್-11 ರಂದು ತಮಿಳುನಾಡಿನಲ್ಲಿ ಜನಿಸಿದ್ರು. 2004 ರ ವೇಳೆಗೆ ವಿಶ್ವದ ಅತ್ಯದ್ಭುತ ಚೆಸ್ ಆಟಗಾರರಾಗಿದ್ದ ಗ್ಯಾರಿ ಕ್ಯಾಸ್ಪರೋವ್ ರೊಂದಿಗೆ ಪೈಪೋಟಿ ನೀಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ವಿಶ್ವನಾಥ್ ಆನಂದ್ ಈಗ ಚೆಸ್ ಆಟದಲ್ಲಿ ವಿಶ್ವದಲ್ಲಿಯೇ ಮೊದಲ ರ‍್ಯಾಂಕಿಂಗ್ ನಲ್ಲಿ ಇದ್ದಾರೆ.

ವೀರೇಂದ್ರ ಸೆಹ್ವಾಗ್ ಏನ್ ಮಾಡಿದ್ರು?

ಟೆಸ್ಟ್ ಕ್ರಿಕೇಟ್ ನಲ್ಲಿ 319 ರನ್ ಗಳನ್ನು ಗಳಿಸುವದರ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೇಟಗರು ಎಂದು ಇತಿಹಾಸ ಸೃಷ್ಟಿಸಿದವರು ಖ್ಯಾತ ಆಟಗಾರ ವೀರೇಂದ್ರ ಸೆಹ್ವಾಗ್.  

ಸೆಹ್ವಾಗ್ ಹುಟ್ಟಿದ್ದು 1978 ಅಕ್ಟೋಬರ್ 20 ನೇ ತಾರೀಕು.. ಹರ್ಯಾಣದಲ್ಲಿ..  2004 ರಲ್ಲಿ ಆರತಿ ಅಹ್ಲಾವತ್  ರವರನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದ್ದಾರೆ.. ಸೆಹ್ವಾಗ್  ಸುಮಾರು ಐದು ಅಡಿ ಏಳು ಇಂಚು ಉದ್ದವಿದ್ದಾರೆ.. ಇವರ ಕ್ರಿಕೇಟ್ ಸಾಧನೆಯನ್ನು  ಗಮನದಲ್ಲಿ ಇಟ್ಟುಕೊಂಡ ಭಾರತ ಸರ್ಕಾರ ಭಾರತದ ಅತ್ಯುತ್ತಮ ಪ್ರಶಸ್ತಿಯಾದ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಸೈನಾ ನೆಹ್ವಾಲ್-ವಿಶ್ವದ ಎರಡನೆಯ ಸ್ಥಾನದ ಆಟಗಾರ್ತಿಒಲಂಪಿಕ್ಸ್ ಪಂದ್ಯಗಳ ಬ್ಯಾಡ್ಮಿಟನ್ ಸ್ಪರ್ಧೆಯಲ್ಲಿ ಕ್ವಾಟರ್ ಫೈನಲ್ ವರೆಗೆ ತಲುಪಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಸೈನಾ ನೆಹ್ವಾಲ್.

ಸೈನಾ ಈ ಸಾಧನೆಯನ್ನು ಮಾಡಿದ್ದು ಕಳೆದ 2008 ರಲ್ಲಿ ಬೀಜಿಂಗ್ ನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ.. ಈ ಮೂಲಕ ಭಾರತೀಯ ದಿಟ್ಟ ಆಟಗಾರ್ತಿ ಎಂಬ ಭರವಸೆ ಮೂಡಿಸಿದ್ರು.  ಸೈನಾ ಹುಟ್ಟಿದ್ದು ಹರ್ಯಾಣದ ಹಿಸ್ಸಾರ್ ನಗರದಲ್ಲಿ.. 2008 ರ ಒಲಂಪಿಕ್ಸ್ ಸಾಧನೆಯನ್ನು ಕಂಡ ಭಾರತ ಸರ್ಕಾರವು 2009 ನೇ ಸಾಲಿನ ಭಾರತದ  ಶ್ರೇಷ್ಟ ಕ್ರೀಡಾಪಟು ಪ್ರಶಸ್ತಿ”ಯನ್ನು ನೀಡಿ ಗೌರವಿಸಿದೆ.. ಸುಮಾರು ಇಪ್ಪತ್ತೊಂದು-ಇಪ್ಪತ್ತೆರಡರ ಹರೆಯದ  ಸೈನಾ ನೆಹ್ವಾಲ್ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ  ಗುರ್ತಿಸಿಕೊಂಡ ಖ್ಯಾತ ಬ್ಯಾಡ್ಮಿಟನ್ ತಾರೆ.. 
   ಸಿಂಗಾಪೂರ್ ಓಪನ್ ಪ್ರಶಸ್ತಿ, ಹಾಂಗ್ ಕಾಂಗ್ ಓಪನ್ ಸೀರೀಸ್ ಪ್ರಶಸ್ತಿ, ಸೇರಿದಂತೆ ಪ್ರಶಸ್ತಿಗಳ ಸುರಿಮಳೆಗಳೇ ಬಂದಿವೆ. ವಿಶ್ವದ ಎರಡನೆಯ ಸ್ಥಾನದ ಆಟಗಾರ್ತಿಯಾದ ಸೈನಾ ನೆಹ್ವಾಲ್  2010ರ ಕಾಮನ್ ವೆಲ್ತ್  ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆದ್ದು ಕೀರ್ತಿ ತಂದಿದ್ದಾರೆ.. ಹೀಗಾಗಿ ಅವರಿಗೆ ರಾಜೀವ್ ಗಾಂಧೀ ಖೇಲ್ ರತ್ನ ಮತ್ತು ಪದ್ಮ ಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಯುವರಾಜನ ಆಳ್ವಿಕೆಮಾರಣಾಂತಿಕ ಖಾಯಿಲೆಯಾದ ಕ್ಯಾನ್ಸರ್ ನಿಂದ ಗೆದ್ದು ಬಂದ ರಾಜ.. ಕ್ರಿಕೇಟ್ ಲೋಕದ ಯುವ ರಾಜ... ಈ ಅಪ್ರತಿಮ ಬ್ಯಾಟ್ಸ್ ಮ್ಯಾನ್ ಹುಟ್ಟಿದ್ದು ಚಂದೀಘಡ್ ನಲ್ಲಿ.. 1981 ಡಿಸೆಂಬರ್ 12 ರಂದು..  ಪಂಜಾಬ್ ಕ್ರಿಕೇಟ್ ತಂಡದಲ್ಲಿ ಗುರ್ತಿಸಿಕೊಂಡಿದ್ದ ಯುವ ರಾಜ ಬಿಹಾರ ತಂಡದ ವಿರುದ್ಧ 358 ರನ್ ಗಳನ್ನು ಗಳಿಸಿದ್ರು.   ಇದು ಅಂತರ್ ರಾಷ್ಟ್ರೀಯ ಕ್ರಿಕೇಟ್ ನಲ್ಲಿ ಆಯ್ಕೆಯಾಗಲು ಭದ್ರ ಬುನಾಧಿಯಾಯ್ತು.  
 ಅಮಿಷಾ ಪಟೇಲ್ ಮತ್ತು  ಕರೀನಾ ಕಪೂರ್ ಜೊತೆ ಕುಚ್ ಕುಚ್ ಅಂತ ಓಡಾಡ್ತಾ ಇದ್ದ ಯುವ ರಾಜನ ಸ್ಟೈಲ್ ಗೆ ಅದೆಷ್ಟು ಹೀರೋಯಿನ್ ಗಳು ಫಿದಾ ಆಗಿದ್ರೋ ಗೊತ್ತಿಲ್ಲ.. ಬಾಲೀವುಡ್ ಸುಂದರಿ ದೀಪಿಕಾ ಪಡುಕೋಣೆ ಕೂಡ ಸ್ವಲ್ಪ ದಿನ ಯುವರಾಜನ ರಾಣಿಯಂತೆ ಬಿಂಬಿತಳಾಗಿದ್ದಳು. ಆದ್ರೆ ಅದ್ಯಾಕೋ ಈಗ ದೂರ ದೂರ ಎರಡು ತೀರ ಅನ್ನೋ ಹಾಗೆ ಮುಖ ತಿರುಗಿಸಿಕೊಂಡಿದ್ದಾರೆ. ಅತ್ಯುತ್ತಮ ಕ್ರಿಕೇಟ್ ಆಟಗಾರನಾದ ಯುವಿ ಹೆಚ್ಚು ಆದಾಯವನ್ನು ಗಳಿಸುವ ಕ್ರಿಕೇಟ್ ಆಟಗಾರರೂ ಹೌದು..

ರಾಹುಲ್ ದ್ರಾವಿಡ್ - ಭಾರತದ ಗೋಡೆ       ಟೆಸ್ಟ್ ಕ್ರಿಕೇಟ್ ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಭಾರತದ ಹೆಮ್ಮೆಯ ಕ್ರಿಕೇಟ್ ಆಟಗಾರ ರಾಹುಲ್ ದ್ರಾವಿಡ್.. ಯಾರು ಎದುರು ಬಂದರೂ ದೃತಿ ಗೆಡದೇ ದಿಟ್ಟವಾಗಿ ನಿಂತು ಭಾರತೀಯ ಕ್ರಿಕೇಟ್ ತಂಡದ ಗೋಡೆ ಎಂದು ಹೆಸರು ಪಡೆದರು.. 
ಜನವರಿ 11, 1973 ರಲ್ಲಿ ಮಧ್ಯ ಪ್ರದೇಶದಲ್ಲಿ ಹುಟ್ಟಿದ ರಾಹುಲ್ ದ್ರಾವಿಡ್  ಪ್ರಸ್ತುತ ಬೆಂಗಳೂರಿನಲ್ಲಿ ಇದ್ದಾರೆ. 2005 ರಲ್ಲಿ ಭಾರತ ತಂಡದ ನಾಯಕತ್ವವನ್ನು ಸ್ವೀಕರಿಸಿದ ನಂತರ ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ  ಟೀಮ್ ಇಂಡಿಯಾ ಭರ್ಜರಿ ವಿಜಯವನ್ನು ಸಾಧಿಸಿತು.


ಆಗಸ್ಟ್  2011 ರಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ 10.000 ರನ್ ಗಳಿಸಿರುವ ರಾಹುಲ್ ದ್ರಾವಿಡ್ ಸಾಧನೆಯನ್ನು  ನೆನಪಿಸುವ  ಗೋಡೆಯೊಂದನ್ನು  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದಾರೆ. ಗೋಡೆಯ ಮೇಲೆ ದ್ರಾವಿಡ್ ಆಟದ ಮೂರು ಗುಣಗಳಾದ ಬದ್ಧತೆ, ದೃಢತೆ ಹಾಗೂ ಉತ್ಕೃಷ್ಟತೆಯನ್ನು ಬಿಂಬಿಸಲಾಗಿದೆ. ಕೆ.ಎಸ್.ಸಿ.ಎ ಹಾಗೂ ಸ್ಕೈಲೈನ್ ಬಿಲ್ಡರ್ಸ್ ಈ ಗೋಡೆಗೆ 'ದಿ ವಾಲ್' ಎಂದು ಹೆಸರನ್ನು ಇಟ್ಟಿದೆ. ಕ್ರಿಕೇಟ್ ಲೋಕದ ದೇವರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ “'ದಿ ವಾಲ್'” ಅನ್ನು ಅನಾವರಣಗೊಳಿಸಿದ್ದರು. ಈ ಗೋಡೆಯು 15 ಅಡಿ ಎತ್ತರ ಹಾಗೂ 27 ಅಡಿ ಅಗಲವಿದೆ. ರಾಹುಲ್ ದ್ರಾವಿಡ್ ಹತ್ತು ಸಾವಿರ ರನ್ ಗಳಿಸಿದ್ದಕ್ಕಾಗಿ ಈ ಗೋಡೆಯನ್ನು ಕಟ್ಟಲಾಗಿದ್ದರಿಂದ ಇದರ ನಿರ್ಮಾಣಕ್ಕಾಗಿ 10.000 ಇಟ್ಟಿಗೆಗಳನ್ನು ಬಳಸಲಾಗಿದೆ.

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು