ಸಿನೆಮಾ

Share This Article To your Friends

ಡಾ.ಕೆ.ಸುಧಾಕರ್ ಸಚಿವ ಸ್ಥಾನ ನುಂಗಿದ್ಯಾರು ಗೊತ್ತಾ? ಹೇಗೆ ನಡೀತು ಗೊತ್ತಾ ಸಚಿವ ಸಂಪುಟದ ಗೇಮ್ ಪ್ಲಾನ್?


<iframe src="https://www.facebook.com/plugins/like.php?href=https%3A%2F%2Fwww.facebook.com%2FEagleTelegraph%2F&width=124&layout=button_count&action=like&size=small&show_faces=false&share=true&height=46&appId=799972166874116" width="124" height="46" style="border:none;overflow:hidden" scrolling="no" frameborder="0" allowtransparency="true" allow="encrypted-media"></iframe>

ಡಾ.ಕೆ.ಸುಧಾಕರ್ ಸಚಿವ ಸ್ಥಾನ ನುಂಗಿದ್ಯಾರು ಗೊತ್ತಾ?-

ಹೇಗೆ ನಡೀತು ಗೊತ್ತಾ ಸಚಿವ ಸಂಪುಟದ ಗೇಮ್ ಪ್ಲಾನ್?


 ಬುಧವಾರ ಮಧ್ಯಾಹ್ನ 2.12ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ವತಿಯಿಂದ 15 ಮತ್ತು ಜೆಡಿಎಸ್ ವತಿಯಿಂದ 9 ಒಟ್ಟು 25 ಮಂದಿ ಸಚಿವ ಸಂಪುಟವನ್ನು ಸೇರಿದ್ದಾರೆ. ಈ ವೇಳೆ ಹಲವು ನಾಯಕರನ್ನು ಕೈ ಬಿಡಲಾಗಿದ್ದು ರೇಸ್ ನಲ್ಲಿದ್ದ ಚಿಕ್ಕಬಳ್ಳಾಪುರ ಎಂಎಲ್ಎ ಡಾ.ಕೆ.ಸಧಾಕರ್ ಗೂ ಹಿನ್ನಡೆಯಾಗಿದೆ.
Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ಮೂಲಗಳ ಪ್ರಕಾರ ಡಾ.ಕೆ.ಸುಧಾಕರ್ ಗೆ ಈಸಲ ಸಚಿವ ಸ್ಥಾನ ಸಿಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಡಾ.ಕೆ.ಸುಧಾಕರ್ ಸೇರಿದಂತೆ ಹಲವು ಸಿದ್ದು ಬೆಂಬಲಿಗರಿಗೆ  ಸಚಿವ ಸ್ಥಾನ ಕೈ ತಪ್ಪಿದೆ.

ಎಂಬಿ ಪಾಟೀಲ, ಎಸ್.ಆರ್.ಪಾಟೀಲ, ಯಶವಂತ ರಾಯಗೌಡ ಪಾಟೀಲ, ಹೀಗೆ ಹಲವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಗುರ್ತಿಸಿಕೊಂಡಿದ್ರಿಂದ ಹಲವರಿಗೆ ಹಿನ್ನಡೆಯಾಗಿದೆ.

ಡಾ.ಕೆ.ಸುಧಾಕರ್ ಕೈ ತಪ್ಪಿದ್ದು ಯಾಕೆ? 

ಇನ್ನು ಕಾಂಗ್ರೆಸ್ ಯಂಗ್ ಲೀಡರ್ ಗಳ ಪೈಕಿ ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಪಟ್ಟಿಯಲ್ಲಿ ಡಾ.ಕೆ.ಸುಧಾಕರ್ ಹೆಸರು ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಯಾಕಂದ್ರೆ ಡಾ.ಕೆ.ಸುಧಾಕರ್ ಸಿದ್ದರಾಮಯ್ಯಗೆ ಆಪ್ತರಾಗಿದ್ದು, ರಾಹುಲ್ ಗಾಂದಿ ಮತ್ತು ಸೋನಿಯಾಗಾಂಧಿ ಜೊತೆಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಇದೆಲ್ಲದರ ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಒಮ್ಮೆ ಗೆದ್ದ ವ್ಯಕ್ತಿ ಮತ್ತೊಮ್ಮೆ ಗೆದ್ದ ಇತಿಹಾಸವೇ ಇರಲಿಲ್ಲ. ಆದರೆ ಡಾ.ಕೆ.ಸುಧಾಕರ್ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ. ಸ್ವ ಪಕ್ಷವದವರೇ ಭಿನ್ನ ಮತದ ಬಾವುಟ ಹಾರಿಸಿದ್ದರೂ, ಎದುರಾಳಿಗಳು ಆರೋಪಗಳ ಬ್ರಹ್ಮಾಸ್ತ್ರಗಳನ್ನು ಬೀಸಿದ್ರೂ, ಅವೆಲ್ಲವನ್ನೂ ಎದುರಿಸಿ 30 ಸಾವಿರಕ್ಕೂ ಹೆಚ್ಚು ಅಂತರಗಳಲ್ಲಿ ಡಾ.ಕೆ.ಸುಧಾಕರ್ ಗೆಲುವು ಸಾಧಿಸಿದ್ರು.
Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು


ಜನಪ್ರಿಯತೆ ಮತ್ತು ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಗೆ ಆಪ್ತರಾಗಿದ್ದ ಕಾರಣ ಡಾ.ಕೆ.ಸುಧಾಕರ್ ಮಂತ್ರಿಯಾಗೋದು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲಾ ನಿರೀಕ್ಷೆಗಳೂ ಉಲ್ಟಾ ಆಗಿದ್ದವು.

ಡಾ.ಕೆ.ಸುಧಾಕರ್ ಮೇಲೆ ದೇವೇಗೌಡರಿಗೆ ಸಿಟ್ಟು?

ಇನ್ನು ಕೆಲವು ಮೂಲಗಳ ಪ್ರಕಾರ ಚಿಕ್ಕಬಳ್ಳಾಪುರ ಮಾಜಿ ಜೆಡಿಎಸ್ ಶಾಸಕ ಕೆಪಿ ಬಚ್ಚೇಗೌಡ ಕುಮಾರ ಸ್ವಾಮಿ ಮತ್ತು ದೇವೇಗೌಡರನ್ನು ಭೇಟಿಯಾಗಿ ಚಿಕ್ಕಬಳ್ಳಾಪುರದ ಸನ್ನಿವೇಷವನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಎಷ್ಟೇ ಆರೋಪಗಳು ಮಾಡಿದರೂ ಸುಧಾಕರ್ ಸೋಲಿಸಲು ಸಾಧ್ಯವಾಗಲಿಲ್ಲ. ಮಂತ್ರಿಸ್ಥಾನ ಸಿಕ್ಕರೆ ಚಿಕ್ಕಬಳ್ಳಾಪುರದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ಕೆಪಿ ಬಚ್ಚೇಗೌಡ ತಮ್ಮ ವರಿಷ್ಠರ ಬಳಿ ಅವಲತ್ತುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಿಂದಲೇ ಅಖಾಡಕ್ಕೆ ಇಳಿದಿದ್ರು. ಆಗ ಕುಮಾರ ಸ್ವಾಮಿಗೆ ಸೋಲಾಗಿತ್ತು. ಕಾಂಗ್ರೆಸ್ ವತಿಯಿಂದ ವೀರಪ್ಪ ಮೋಯ್ಲಿ ಆಯ್ಕೆಯಾಗಿದ್ದರು. ಇಷ್ಟೇ ಅಲ್ಲ. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಸುಧಾಕರ್ ಛಿದ್ರ ಮಾಡಿದ್ದರು. ಕೆವಿ ನಾಗರಾಜ್ ಸೇರಿದಂತೆ ಹಲವು ಜೆಡಿಎಸ್ ನಾಯಕರನ್ನು ಸೆಳೆದುಕೊಂಡಿದ್ದರು ಸುಧಾಕರ್. ಪ್ರಚಾರದ ವೇಳೆ ಚಿಕ್ಕಬಳ್ಳಾಪುರಕ್ಕೆ ದೇವೇಗೌಡರು ಆಗಮಿಸಿದಾಗ, ಕೆವಿ ನಾಗರಾಜ್ ಪಕ್ಷ ಬಿಟ್ಟಿದ್ದನ್ನು ನೆನೆದು ಕಣ್ಣೀರು ಹಾಕಿದ್ದರು.

ದೊಡ್ಡ ಗೌಡರನ್ನು ಕಣ್ಣೀರು ಹಾಕಿಸಿದ, ನಿಮ್ಮನ್ನು ಲೋಕಸಭೆಯಲ್ಲಿ ಸೋಲಿಸಿದ ಮತ್ತು ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಪಕ್ಷವನ್ನು ಛಿದ್ರ ಛಿದ್ರ ಮಾಡಿದ ಸುಧಾಕರ್ ಗೆ ಮಂತ್ರಿಸ್ಥಾನ ಸಿಗದಂತೆ ನೋಡಿಕೊಳ್ಳಿ ಎಂದು ಕೆಪಿ ಬಚ್ಚೇಗೌಡ ಕುಮಾರ ಸ್ವಾಮಿಯವರಿಗೆ ಹೇಳಿದ್ದರು ಎಂಬ ಸುದ್ದಿ ಇದೆ. ಹೀಗಾಗಿ ದೇವೇಗೌಡರ ಕಡೆಯಿಂದ ಲಾಬಿ ನಡೆಸಿ ಡಾ.ಕೆ.ಸುಧಾಕರ್ ಮಂತ್ರಿಸ್ಥಾನ ತಪ್ಪಿಸಲಾಯಿತು ಅಂತ ಹೇಳಲಾಗ್ತಿದೆ.

ಒಳಗೇ ಇದ್ದಾರೆ ಹಲವು ಶತ್ರುಗಳು

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಸಚಿವಾಕಾಂಕ್ಷಿಗಳು ಹೆಚ್ಚಾಗಿದ್ದು, ಒಳಗಿದ್ದವರೇ ಲಾಬಿ ನಡೆಸಿ ಮಂತ್ರಿಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಸೋನಿಯಾಗಾಂಧಿವರೆಗೆ ಉತ್ತಮ ಬಾಂಧವ್ಯ ಹೊಂದಿದ ಸುಧಾಕರ್ ಗೆ ಮಂತ್ರಿಸ್ಥಾನ ಕೊಡಿಸಿದರೆ ಮುಂದೊಂದು ದಿನ ಎಲ್ಲರನ್ನೂ ಮೀರಿ ಬೆಳೆಯಬಹುದು ಎಂದು ಒಳಗಿನವರೇ ಪ್ಲಾನ್ ಮಾಡಿ ಡಾ.ಕೆ.ಸುಧಾಕರ್ ಗೆ ಮಂತ್ರಿಸ್ಥಾನವನ್ನು ತಪ್ಪಿಸಿರಬಹುದು ಎಂಬ ಅನುಮಾನಗಳೂ ಇವೆ.
Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

ಎರಡನೇ ಪಟ್ಟಿಯಲ್ಲಿ ಸಿಗುತ್ತಾ ಸ್ಥಾನ?

22 ಸ್ಥಾನಗಳ ಪೈಕಿ ಕಾಂಗ್ರೆಸ್  15 ಮಂದಿಯನ್ನ ಸಂಪುಟಕ್ಕೆ ಸೇರಿಸಿದೆ. ಇನ್ನೂ 7 ಸ್ಥಾನಗಳನ್ನು ಹಾಗೆಯೇ ಬಿಡಲಾಗಿದೆ. ಸದ್ಯದ ಪರಿಸ್ತಿತಿ ನೋಡ್ಕೊಂಡು, ಭಿನ್ನಮತೀಯರನ್ನು ಸಮಾಧಾನ ಮಾಡಿದ ನಂತರ, ಎರಡನೆಯ ಪಟ್ಟಿಯನ್ನು ಸಿದ್ಧಮಾಡಬಹುದು ಎಂಬ ಮಾಹಿತಿ ಇದೆ. ಅದರಲ್ಲಿ ಅವಕಾಶ ವಂಚಿತರಿಗೆ ಪಟ್ಟ ಕಟ್ಟಬಹುದು ಎಂಬ ಮಾತಿದೆ. ಅದರಲ್ಲಿ ಎಂಬಿ ಪಾಟೀಲ, ತನ್ವೀರ್ ಸೇಠ್, ಎನ್.ಎ.ಹ್ಯಾರೀಸ್, ಹೆಚ್.ಕೆ.ಪಾಟೀಲ, ಡಾ.ಕೆ.ಸುಧಾಕರ್, ಆನಂದ್ ಸಿಂಗ್, ಮೊದಲಾದವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ.


Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

 ನೂತನ ಸಚಿವರ ಪಟ್ಟಿ (ಕಾಂಗ್ರೆಸ್)

ಆರ್ .ವಿ.ದೇಶಪಾಂಡೆ - ಗ್ರಾಮೀಣಾಭಿವೃದ್ಧಿ

ಡಿ.ಕೆ.ಶಿವಕುಮಾರ್  - ಇಂಧನ
ಕೆ.ಜೆ. ಜಾರ್ಜ್  - ಬೃಹತ್ ಕೈಗಾರಿಕೆ
ಕೃಷ್ಣಬೈರೇಗೌಡ  - ಸಂಸದೀಯ ವ್ಯವಹಾರ
ಶಿವಶಂಕರ ರೆಡ್ಡಿ - ಕೃಷಿ
ರಮೇಶ್ ಜಾರಕಿಹೊಳಿ - ಸಮಾಜ ಕಲ್ಯಾಣ
ಪ್ರಿಯಾಂಕ್ ಖರ್ಗೆ - ಐಟಿಬಿಟಿ
ಯು.ಟಿ.ಖಾದರ್ - ನಗರಾಭಿವೃದ್ಧಿ
ಜಮೀರ್ ಅಹ್ಮದ್ - ವಸತಿ, ಅಲ್ಪಸಂಖ್ಯಾತ 
ಶಿವಾನಂದ ಪಾಟೀಲ್ - ಆರೋಗ್ಯ
ವೆಂಕಟರಮಣಪ್ಪ - ಮೀನುಗಾರಿಕೆ
ರಾಜಶೇಖರ್ ಪಾಟೀಲ್- ಅರಣ್ಯ
ಪುಟ್ಟರಂಗಶೆಟ್ಟಿ - ಕಾರ್ಮಿಕ
ಶಂಕರ್ - ಯುವಜನ ಮತ್ತು ಕ್ರೀಡೆ
ಜಯಮಾಲ - ಮಹಿಳಾ ಮತ್ತು ಕಲ್ಯಾಣ


Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು

 ನೂತನ ಸಚಿವರ ಪಟ್ಟಿ (ಜೆಡಿಎಸ್)

ಎಚ್.ಡಿ.ರೇವಣ್ಣ - ಲೋಕೋಪಯೋಗಿ
ಬಂಡೆಪ್ಪ ಕಾಶೆಂಪುರ - ಅಬಕಾರಿ
ಜಿ.ಟಿ.ದೇವೇಗೌಡ - ಕಂದಾಯ
ಮನಗೂಳಿ - ಸಣ್ಣ ಕೈಗಾರಿಕೆ
ಗುಬ್ಬಿ ಶ್ರೀನಿವಾಸ್- ತೋಟಗಾರಿಕೆ
ವೆಂಕಟರಾವ್ ನಾಡಗೌಡ - ಸಣ್ಣ ನೀರಾವರಿ
ಸಿ.ಎಸ್.ಪುಟ್ಟರಾಜು - ಸಾರಿಗೆ
ಸಾ.ರಾ.ಮಹೇಶ್- ಸಹಕಾರ 
ಎನ್.ಮಹೇಶ್ - ಪ್ರವಾಸೋದ್ಯ,
ಡಿ.ಸಿ.ತಮ್ಮಣ್ಣ - ಉನ್ನತ ಶಿಕ್ಷಣ

Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು