ಸಿನೆಮಾ

Share This Article To your Friends

ಬಿಜೆಪಿ ಕಾರ್ಯಕರ್ತನನ್ನು ಕೊಂದು ಪತ್ರ ಬರೆದಿಟ್ಟ ಹಂತಕರು.ರಹಸ್ಯ ಪತ್ರದಲ್ಲಿದೆ ಭಯಂಕರ ವಿಷಯ!
ಬಿಜೆಪಿ ಕಾರ್ಯಕರ್ತನನ್ನು ಕೊಂದು ಪತ್ರ ಬರೆದಿಟ್ಟ ಹಂತಕರು

ಪೊಲೀಸರ ಕೈಗೆ ಸಿಕ್ಕ ರಹಸ್ಯ ಪತ್ರದಲ್ಲಿದೆ ಭಯಂಕರ ವಿಷಯ!ಬಿಜೆಪಿ ಕಾರ್ಯಕರ್ತರ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೋದಿ ಸರ್ಕಾರ ಅಧಿಕಾರದಲ್ಲಿದ್ದರೂ ಯಾವುದೇ ಕಠಿಣ ಕ್ರಮಗಳು ಕೈಗೊಳ್ಳದೇ ಇರೋದು ಅಪರಾಧ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ಲೆಕ್ಕವಿಲ್ಲದಷ್ಟು ಬಿಜೆಪಿ ಕಾರ್ಯಕರ್ತರನ್ನು ಕೊಂದ ನರರಾಕ್ಷಸರು ಇದೀಗ ಮತ್ತೊಬ್ಬನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಶವದ ಪಕ್ಕದಲ್ಲಿ ಒಂದು ಪತ್ರವನ್ನು ಬರೆದಿಟ್ಟಿದ್ದು, ಆ ಪತ್ರವನ್ನು ಓದಿದವರ ಗುಂಡಿಗೆಯೇ ನಡುಗುತ್ತಿದೆ.


`ಓಟ್ ಹಾಕಿದ ದಿನದಿಂದ ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೆವು. ಆದರೆ ನೀನು ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಆಗ ನಿನ್ನನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಆದರೆ ಈಗ ನಿನ್ನನ್ನು ಕೊಂದು ಮುಗಿಸಿದ್ದೇವೆ. ನಾವು ಅಂದುಕೊಂಡಿದ್ದನ್ನು ಮಾಡಿ ಮುಗಿಸಿದ್ದೇವೆ. ಇನ್ನು ಮುಂದೆ ಯಾರು ಬಿಜೆಪಿ ಅಂತ ಕೂಗಾಡ್ತಾರೋ ಅವರೆಲ್ಲರಿಗೂ ಇದೇ ಗತಿ’


ಹೀಗಂತ  ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ ನಂತರ, ಕಿರಾತಕರು ಪತ್ರ ಒಂದನ್ನು ಬರೆದಿಟ್ಟು ಬಿಜೆಪಿಗರಿಗೆ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರನ್ನು ಜೀವ ಭಯದಲ್ಲಿ ನಡುಗುವಂತೆ ಮಾಡುತ್ತಿದೆ.

ಅಂದ್ಹಾಗೆ, ಬಿಜೆಪಿ ಕಾರ್ಯಕರ್ತನ ಭಯಂಕರ ಹತ್ಯೆ ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ. ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಆಗಾಗ ತಿಕ್ಕಾಟಗಳು ನಡೀತಾನೇ ಇರುತ್ತವೆ. ಇತ್ತೀಚೆಗಷ್ಟೇ ಪಂಚಾಯ್ತಿ ಚುನಾವಣೆ ನಡೆದಿತ್ತು. ಆ ಸಮಯದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕೊಲ್ಲಲು ಸಂಚು ರೂಪಿಸಿದ್ದರು ದುಷ್ಕರ್ಮಿಗಳು. ಆದರೆ ಚುನಾವಣೆ ನಂತರ ಬಿಜೆಪಿ ಕಾರ್ಯಕರ್ತ ಸಿಕ್ಕೇ ಇರಲಿಲ್ಲ. ಅಂತಿಮವಾಗಿ ಬುಧವಾರ ಬಿಜೆಪಿ ಕಾರ್ಯಕರ್ತನನ್ನು ಹಿಡಿದು ಕೊಲ್ಲುವ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ ದುರಾತ್ಮರು.

ಮೃತಪಟ್ಟ ಬಿಜೆಪಿ ಕಾರ್ಯಕರ್ತನ ಹೆಸರು ತ್ರಿಲೋಚನ್ ಮಹಾತೋ ಎಂದು ತಿಳಿದು ಬಂದಿದ್ದು, ಪಶ್ಚಿಮ ಬಂಗಾಳದ ಬಲರಾಮ್ ಪುರದಲ್ಲಿನ ಸುಪುರ್ದಿ ಹಳ್ಳಿಯಲ್ಲಿ ಘಟನೆ ನಡೆದಿದೆ. ಈ ಸಂಬಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು