ಸಿನೆಮಾ

Share This Article To your Friends

ನರೇಂದ್ರ ಮೋದಿ-ಅಮಿತ್ ಶಾ ಇಬ್ಬರನ್ನೂ ಬಂಧಿಸಲು ಮುಂದಾದ ಸಿಬಿಐನರೇಂದ್ರ ಮೋದಿ-ಅಮಿತ್ ಶಾ ಇಬ್ಬರನ್ನೂ ಬಂಧಿಸಲು ಮುಂದಾದ ಸಿಬಿಐ


ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ. ಅಮಿತ್ ಶಾ ಕೇಂದ್ರ ಮಂತ್ರಿ. ಜೊತೆಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಆದರೆ ಈ ಇಬ್ಬರು ನಾಯಕರನ್ನೂ ಬಂಧಿಸುವ ಸಲುವಾಗಿ ಸಿಬಿಐ ಅಧಿಕಾರಿಗಳು ನಿರ್ಧರಿಸಿದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಗುಜರಾತ್ ನಿವೃತ್ತ ಡಿಐಜಿ ಡಿಜಿ ವಂಜಾರಾ ಇಂಥದ್ದೊಂದು ಆಘಾತಕಾರಿ ಸುದ್ದಿಯನ್ನು ಹೊರ ಹಾಕಿದ್ದು, ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಸಿಬಿಐ ಅಧಿಕಾರಿಗಳು ಬಂಧಿಸಲು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ

ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಬಂಧಿಸಬೇಕಿದೆ. ದಯವಿಟ್ಟು ಇದಕ್ಕೆ ಅನುಮತಿಯನ್ನು ನೀಡಿ ಎಂದು ಸಿಬಿಐ ಅಧಿಕಾರಿಗಳು ಸಿಬಿಐನ ವಿಶೇಷ ಕೋರ್ಟ್ ಮುಂದೆ ಮನವಿಯನ್ನ ಸಲ್ಲಿಸಿದ್ದರು. ಈ ಸಂಬಂಧ ಸಿಬಿಐ ಕೋರ್ಟ್ ಪರಿಶೀಲನೆ ನಡೆಸಿ ಅನುಮತಿ ನೀಡುವ ಬಗ್ಗೆ ಸಮಾಲೋಚನೆ ಮಾಡಿತ್ತು ಎಂದು ಗುಜರಾತ್ ನಿವೃತ್ತ ಡಿಐಜಿ ವಂಜಾರಾ ತಿಳಿಸಿದ್ದಾರೆ.


2004ರಲ್ಲಿ ನಡೆದ ಇಶ್ರತ್ ಜಹಾನ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಆರೋಪಿಗಳೆಂದು ಪರಿಗಣಿಸಲಾಗಿತ್ತು. ನಡೆದಿದ್ದು ನಕಲಿ ಎನ್ ಕೌಂಟರ್ ಎಂದು ಕೆಲವರು ಕೋರ್ಟಿನ ಮೆಟ್ಟಿಲೇರಿದ್ದರು. ಈ ಸಂಬಂಧ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ನರೇಂದ್ರ ಮೋದಿಯನ್ನು ರಹಸ್ಯವಾಗಿ ವಿಚಾರಣೆಯನ್ನೂ ನಡೆಸಿದ್ದರು ಎಂದು ತಿಳಿದು ಬಂದಿದೆ

ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣ ದಿನದಿಂದ  ದಿನಕ್ಕೆ ಬಿಗಡಾಯಿಸ್ತಾ ಹೋದಂತೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಅಂತ ಸಿಬಿಐ ಅಧಿಕಾರಿಗಳು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಎಷ್ಟು ಪ್ರಯತ್ನಿಸಿದರೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಬಂಧಿಸಲು ಸಾಧ್ಯವಾಗಲಿಲ್ಲ. 2014ರಲ್ಲಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಅಮಿತ್ ಶಾಗೆ ಸಿಬಿಐ ಕೋರ್ಟ್ ಕ್ಲೀನ್ ಚಿಟ್ ನೀಡಿತು ಎಂದು ಗುಜರಾತ್ ನಿವೃತ್ತ ಡಿಜಿಪಿ ವಂಜಾರಾ ತಿಳಿಸಿದ್ದಾರೆ.


ಇನ್ನು ಇಶ್ರತ್ ಜಹಾನ್ ಉಗ್ರಳಲ್ಲ. ಆಕೆ ಅಮಾಯಕಳು. 2004ರಲ್ಲಿ ನಡೆದ ಎನ್ ಕೌಂಟರ್ ನಕಲಿ ಎಂದು ಆರೋಪಿಸಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಹಲವರ ಮೇಲೆ ಆರೋಪಗಳನ್ನು ಹೊರಿಸಲಾಗಿತ್ತು. ಸಿಬಿಐ ಅಧಿಕಾರಿಗಳು ಮೋದಿ ಮತ್ತು ಅಮಿತ್ ಶಾ ಇಬ್ಬರ ಮೇಲೂ ಅನುಮಾನ ಪಟ್ಟಿದ್ದರು. ಆದರೆ ಅಮೆರಿಕ ಜೈಲಿನಲ್ಲಿರೋ ಉಗ್ರ ಡೇವಿಟ್ ಹೆಡ್ಲಿ 2016ರಲ್ಲಿ ಭಾರತದ ಕೋರ್ಟ್ ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡಿದ ಹೇಳಿಕೆಯಲ್ಲಿ, ಇಶ್ರತ್ ಜಹಾನ್ ಲಕ್ಷರ್ ಎ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಮಾನವ ಬಾಂಬರ್ ಆಗಿದ್ದಳು. ಮತ್ತು ಮೋದಿಯ ಹತ್ಯೆಗೆ ಎಂದು ಇಶ್ರತ್ ಜಹಾನ್ ಮತ್ತು ಆಕೆಯ ತಂಡ ಸಿದ್ದವಾಗಿ ಓಡಾಡುತ್ತಿತ್ತು ಎಂದು ಹೇಳಿಕೆ ಕೊಟ್ಟಿದ್ದ. ಈ ಹೇಳಿಕೆಯ ನಂತರ ಮೋದಿ ವಿರುದ್ಧ ಎದ್ದಿದ್ದ ಆರೋಪಗಳು ತಣ್ಣಗಾಗಿದ್ದವು.Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು