Share This Article To your Friends

ಸಿಎಂ ಆಗೋಕೆ ರೆಡಿಯಾಗಿ ಎಂದು ಬಿಎಸ್ವೈಗೆ ಫೋನ್ ಮಾಡಿ ಹೇಳಿದ ಕಾಂಗ್ರೆಸ್ ನಾಯಕ..!


ಸಿಎಂ ಆಗೋಕೆ ರೆಡಿಯಾಗಿ ಎಂದು ಬಿಎಸ್ವೈಗೆ

ಫೋನ್ ಮಾಡಿ ಹೇಳಿದ ಕಾಂಗ್ರೆಸ್ ನಾಯಕ..!


ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸ್ತಾ ಇದೆ. ಅತೃಪ್ತರನ್ನು ಸಮಾಧಾನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಎಷ್ಟೇ ಟ್ರೈ ಮಾಡಿದರೂ ಅದು ಸಾಧ್ಯವಾಗುತ್ತಿಲ್ಲ.  ಇದರ ನಡುವಲ್ಲೇ ಇಲ್ಲಿನ ಸಹವಾಸವೇ ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಗೆ ಹೋಗಿ ಕುಳಿತಿದ್ದರು. ಇತ್ತ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಕೂಡ  ಸೈಲೆಂಟಾಗಿಬಿಟ್ಟಿದ್ದರು. 


ಇಂಥಾ ಟೈಮಲ್ಲಿ ಅತೃಪ್ತರನ್ನು ಕಟ್ಟು ಹಾಕುವುದು ಕಷ್ಟ ಎಂಬುದು ಕಾಂಗ್ರೆಸ್ ಒಳಗಿನವರೇ ಮಾತನಾಡಿಕೊಳ್ಳೋದಕ್ಕೆ ಶುರು ಮಾಡಿದ್ದರು. ಇನ್ನು ಪಕ್ಷಗಳು ಬೇರೆಯಾದರೂ  ಒಳಗೊಳಗೆ ಎಲ್ಲರೂ ಗೆಳೆಯರ ಥರ ಇರುತ್ತಾರೆ ಎಂಬುದು ಜಗತ್ತಿಗೇ ಗೊತ್ತಿರುವಂಥಾ ಸತ್ಯ. ಮೇಲ್ನೋಟಕ್ಕೆ ದ್ವೇಷಿಗಳಂತೆ ಕಾಣಿಸಿದರು, ಒಳಗೊಳಗೇ ಉತ್ತಮ  ಸಂಬಂಧವನ್ನು ಹೊಂದಿರುತ್ತಾರೆ ಎಲ್ಲಾ ಪಕ್ಷಗಳ ನಾಯಕರು. ಇದೇ ಥರ ಬಿಜೆಪಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ ಒಬ್ಬ ಕಾಂಗ್ರೆಸ್ ನಾಯಕ ಬಿಜೆಪಿಯ ಮತ್ತೊಬ್ಬ  ನಾಯಕನಿಗೆ ಕರೆ ಮಾಡಿದ್ದು, ಭಿನ್ನಮತ ಶಮನವಾಗುತ್ತಿಲ್ಲ. ಕೇಂದ್ರದ ಮಾತಿಗೂ ಬಗ್ಗುತ್ತಿಲ್ಲ. ಸಿದ್ದರಾಮಯ್ಯ, ಡಿಕೆಶಿವಕುಮಾರ್ ಭಿನ್ನಮತ ಶಮನಕ್ಕೆ ಬರ್ತಾನೇ ಇಲ್ಲ. ಇದೆಲ್ಲಾ  ನೋಡಿದ್ರೆ, ಭಿನ್ನಮತೀಯರು ಸರ್ಕಾರ ಬೀಳಿಸುವ ಸಾಧ್ಯತೆ ಇದೆ ಎಂದು ಫೋನ್ ನಲ್ಲಿ ಮಾತನಾಡಿದ್ದರಂತೆ.


ಇನ್ನು ಇಷ್ಟೆಲ್ಲಾ ಮಾತನಾಡುತ್ತಿದ್ದಾಗಲೇ ಬಿಜೆಪಿ ನಾಯಕ ಹಾಗಿದ್ದರೆ ಬಿಜೆಪಿ ಕಡೆ ಬರುವವರು ಯಾರಾದರೂ ಇದ್ದಾರಾ ಎಂದು ಪ್ರಶ್ನೆ ಮಾಡಿದ್ದರಂತೆ. ಆಗ ಕಾಂಗ್ರೆಸ್ ನಾಯಕ,  ಭಿನ್ನಮತ ಶಮನವಾಗದೇ ಇದ್ದರೆ ಏನು ಬೇಕಾದ್ರೂ ಆಗಬಹುದು. ಸಿಟ್ಟಿನಲ್ಲಿ ಭಿನ್ನಮತೀಯರೆಲ್ಲರೂ ಎಲ್ಲಿ ಬೇಕಾದರೂ ಹೋಗಬಹುದು. ಹಂಗೇನಾದ್ರೂ ಆಗಿದ್ದೇ ಆದ್ರೆ,  ಬಿಎಸ್ವೈಗೆ ಯಾವುದಕ್ಕೂ ರೆಡಿಯಾಗಿರೋದಕ್ಕೆ ಹೇಳಿ. ಮತ್ತೊಮ್ಮೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸೋದಕ್ಕೆ ಸಿದ್ಧವಾಗಿದ್ರೆ ಒಳ್ಳೇದು ಎಂದರಂತೆ.


ಇಷ್ಟು ಮಾತುಕಥೆಗಳು ನಡೆಯುತ್ತಿದ್ದಂತೆ, ಇಬ್ಬರೂ ನಾಯಕರು ನಕ್ಕು ಸುಮ್ಮನಾದರೆಂತೆ. ಹೀಗಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಫೋನ್ ಸಂಭಾಷಣೆ  ನಡೆದಿತ್ತು ಎಂಬ ಸುದ್ದಿಗಳು ಅಲ್ಲಲ್ಲಿ ಓಡಾಡುತ್ತಿದೆ. ಆದರೆ ಹೀಗೆ ಮಾತನಾಡಿದ ಆ ನಾಯಕರು ಯಾರು ಎಂಬುದು ತಿಳಿದು ಬಂದಿಲ್ಲ..


Karnataka News - ಕರ್ನಾಟಕ ಸುದ್ದಿಗಳು
Facebook Group · 143K members
Join Group
ಕರ್ನಾಟಕ ಸುದ್ದಿ ಜಗತ್ತು
Share this article :

TV9 LIVE

Suvarna News Live

Public TV Live

News 18 Kannada

ಇತ್ತೀಚೆಗೆ ಹುಡುಕಿದ್ದು