ಸಿನೆಮಾ

Share This Article To your Friends

ಯಲಹಂಕ ಜನರ ಅಂಕಿ ಅಂಶ ಕೊನೆ ಕ್ಷಣದಲ್ಲಿ ಬದಲಾಗಿತ್ತು


 ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ಈಸಲಾನೂ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೈ ಹಿಡಿದಿದ್ದು ಕಳೆದ 10 ವರ್ಷದಲ್ಲಿ ಮಾಡಿದಂಥಾ ಜನಪರ ಕೆಲಸಗಳು. ಆದ್ರೆ ಕೊನೆ ಕ್ಷಣದಲ್ಲಿ ಜನರ ಮನಸ್ಸನ್ನು ಎಸ್.ಆರ್.ವಿಶ್ವನಾಥ್ ಕಡೆ ವಾಲುವಂತೆ ಮಾಡಿದ್ದು ಒಂದು ವಿಡಿಯೋ.. ಆ ವಿಡಿಯೋದಲ್ಲಿ ಯಲಹಂಕ 10 ವರ್ಷಗಳ ಹಿಂದೆ ಹೇಗಿತ್ತು. ಈಗ ಹೇಗಿದೆ ಅನ್ನುವಂಥಾ ಸ್ಪಷ್ಟ ಮಾಹಿತಿ ಇತ್ತು. ಜೊತೆಗೆ ವಿಶ್ವನಾಥ್ ಮಾಡಿದಂಥಾ ಜನಪರ ಕೆಲಸಗಳನ್ನು ಜನರ ಮುಂದೆ ತೆರೆದಿಟ್ಟಿತ್ತು,. 


ಯಲಹಂಕದಲ್ಲಿ ಈ ಬಾರಿ ಕಾಂಗ್ರೆಸ್ನ ಗೋಪಾಲ ಕೃಷ್ಣ, ಜೆಡಿಎಸ್ ನ ಹನುಮಂತೇಗೌಡ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಎಸ್.ಆರ್.ವಿಶ್ವನಾಥ್ ಅಖಾಡಕ್ಕೆ ಧುಮುಕಿದ್ದರು. ಹೇಗಾದ್ರೂ ಮಾಡಿ ವಿಶ್ವನಾಥ್ ಸೋಲಿಸಲೇಬೇಕು ಎಂದು ಹಠಕ್ಕೆ ಬಿದ್ದ ವಿರೋಧಿಗಳು ಬಿಜೆಪಿಯ ವೈಫಲ್ಯಗಳನ್ನು ಎತ್ತಿ ತೋರಿಸುವಂಥಾ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿಯ ಬಿಟ್ಟಿದ್ದರು. ಆ ವಿಡಿಯೋಗಳ ಮೂಲಕ ಎಸ್.ಆರ್.ವಿಶ್ವನಾಥ್ ಮೇಲಿನ ವಿಶ್ವಾಸ ಕುಗ್ಗುವಂತೆ ಮಾಡುವ ಪ್ರಯತ್ನ ಮಾಡಿದರು. ಅದೇ ಸಮಯಕ್ಕೆ ಎಸ್.ಆರ್.ವಿಶ್ವನಾಥ್ ಯಲಹಂಕ ಕ್ಷೇತ್ರವನ್ನು ಹೇಗೆ ಡೆವೆಲಪ್ ಮಾಡಿದ್ದಾರೆ ಅನ್ನುವಂಥಾ ವಿಡಿಯೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಟ್ಟಿತ್ತು.


ವಿಶ್ವನಾಥ್ ವಿರೋದಿಗಳು ಹರಿಯ ಬಿಟ್ಟ ವಿಡಿಯೋಗಳಿಂದ ಒಂದಷ್ಟು ಜನ ಬೇರೆ ಪಕ್ಷದ ವಾಲುವ ಪ್ರಯತ್ನ ಮಾಡಿದ್ದರು. ಆದರೆ 10 ವರ್ಷಗಳಲ್ಲಿ ಯಲಹಂಕದಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದೆ ಅಂತ ವಿಡಿಯೋ ಮೂಲಕ ಲೆಕ್ಕಾ ಒಪ್ಪಿಸಿದ್ದರು ವಿಶ್ವನಾಥ್.. ಈ ವಿಡಿಯೋ ನೋಡಿದ ನಂತರ, ಜನರ ಮನಸ್ಸು ಕೊನೆ ಕ್ಷಣದಲ್ಲಿ ಮತ್ತೆ ಬಿಜೆಪಿ ಕಡೆ ವಾಲಿತ್ತು. ಇದರ ಪರಿಣಾಮ ಎಸ್.ಆರ್.ವಿಶ್ವನಾಥ್ ಈಸಲೂ ಗೆಲುವು ಸಾಧಿಸಿ, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು