ಸಿನೆಮಾ

Share This Article To your Friends

ಶಾಕಿಂಗ್.. ಶಿವನು ಮೂರನೇ ಕಣ್ಣು ಬಿಟ್ಟು ಹವಾಯಿ ದ್ವೀಪ ನೋಡಿದನೇ?ಶಿವನಿಗೆ ಮೂರು ಕಣ್ಣಿದೆ. ಆದ್ದರಿಂದಲೇ ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತೆ. ಮುಕ್ಕಣ್ಣ ತನ್ನ ಮೂರನೇ ಕಣ್ಣನ್ನು ಬಿಟ್ಟರೆ ಎದುರಿಗಿದ್ದವರು ಸುಟ್ಟು ಭಸ್ಮವಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಶಿವನನ್ನು ಕೆಣಕಿದ ಕಾಮ ನೋಡ ನೋಡುತ್ತಿದ್ದಂತೆ ಸುಟ್ಟು ಭಸ್ಮವಾದದ್ದು ಪೌರಾಣಿಕ ಇತಿಹಾಸ. ಆದರೆ ಪುರಾಣದ ವಿಷ್ಯಾ ಈಗ್ಯಾಕೆ ಅಂದ್ರಾ? ಸಾಕ್ಷಾತ್ ಪರಶಿವ ತನ್ನ ಮೂರನೇ ಕಣ್ಣನ್ನು ಬಿಟ್ಟು ಹವಾಯಿ ದ್ವೀಪದ ಕಡೆ ನೋಡಿದ್ದಾನೆ ಅನ್ನೋದು.

ಇದು ಕೇಳೋದಕ್ಕೆ ವಿಚಿತ್ರ ಅನ್ನಿಸಿದ್ರೂ ಸತ್ಯ. ಹವಾಯಿ ದ್ವೀಪದ ಕಡೆ ಶಿವನು ಕಣ್ಣು ಬಿಟ್ಟು ನೋಡಿದ್ದಾನೆ ಅಂತ ಕೆಲವರು ಮಾತಾಡಿಕೊಳ್ತಿದ್ದಾರೆ. ಮುಕ್ಕಣ್ಣ ತನ್ನ ಮೂರನೇ ಕಣ್ಣಿನಿಂದ ಹವಾಯಿ ದ್ವೀಪದ ಕಡೆ ನೋಡಿದ್ರಿಂದಲೇ, ಜ್ವಾಲಾಮುಖಿ ಸ್ಫೋಟಗೊಂಡು ಇಡೀ ಪ್ರದೇಶವನ್ನೇ ಭಸ್ಮ ಮಾಡುತ್ತಿದೆ ಅಂತ ಕಥೆ ಕಟ್ಟಲಾಗುತ್ತಿದೆ.

ಹವಾಯಿ ದ್ವೀಪದಲ್ಲಿ ಜ್ವಾಲಾಮುಖಿಗಳು ಆಗಿಂದಾಗಿ ಸ್ಫೋಟಗೊಳ್ಳುತ್ತಲೇ ಇರುತ್ತವೆ. ಆದರೆ ಇದೇ ಮೊದಲ ಬಾರಿಗೆ ಇಷ್ಟೋಂದು ಭಯಾನಕವಾಗಿ ಜನರೇ ಬೆಚ್ಚಿ ಬೀಳುವಂತೆ ಜ್ವಾಲಾಮುಖಿ ಸ್ಫೋಟಗೊಂಡು, ಬೆಂಕಿಯ ಹೊಳೆಯೇ ಹರಿಯುತ್ತಿದೆ. ಇದನ್ನು ನೋಡಿದ ಕೆಲವರು, ಶಿವನು ಮೂರನೇ ಕಣ್ಣಿನಿಂದ ಹವಾಯಿ ದ್ವೀಪದ ಕಡೆ ನೋಡಿರಬೇಕು, ಅದಕ್ಕೆ, ಹವಾಯಿ ದ್ವೀಪ ಸುಟ್ಟು ಬೂದಿಯಾಗುತ್ತಿದೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. 


ಇನ್ನು ಹವಾಯಿ ದ್ವೀಪದಲ್ಲಿ ಸ್ಫೋಟಗೊಂಡಿರುವ ಜ್ವಾಲಾಮುಖಿ, 110 ಮನೆಗಳು ಮತ್ತು ಬೃಹತ್ ಕಟ್ಟಡಗಳನ್ನು ಈಗಾಗಲೇ ಸುಟ್ಟು ಬೂದಿ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಅಂತ ವಿಜ್ಞಾನಿಗಳು ಅಂದಾಜಿಸುತ್ತಿದ್ದಾರೆ. ಹೀಗಾಗಿ ಸುತ್ತಮುತ್ತ ಇರೋ 2 ಸಾವಿರಕ್ಕೂ ಹೆಚ್ಚು ಮನೆಗಳನ್ನು ಖಾಲಿ ಮಾಡಿಸಲಾಗಿದೆ. 20 ಸಾವಿರಕ್ಕೂ ಹೆಚ್ಚು ಜನರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು