ಸಿನೆಮಾ

Share This Article To your Friends

ಚಿಕ್ಕಬಳ್ಳಾಪುರದ ಚುನಾವಣೆ ದಿಕ್ಕನ್ನೇ ಬದಲಿಸಿತು 3 ವಿಡಿಯೋ!

 
2018ರ ಕರ್ನಾಟಕದ ಚುನಾವಣೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೆತ್ರಗಳಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಿತ್ತು. ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೊಮ್ಮೆ ಗೆದ್ದ ಉದಾಹರಣೆಯೇ ಇರಲಿಲ್ಲ. ಆದರೆ ಆ ಇತಿಹಾಸವನ್ನು ಬ್ರೇಕ್ ಮಾಡಿದ್ದು ಡಾ.ಕೆ.ಸುಧಾಕರ್.


ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಗೆಲ್ಲಬಾರದು ಅಂತ ಅನೇಕರು ಸಂಚು ನಡೆಸಿದ್ದರು. ಕೊನೆ ಕ್ಷಣದಲ್ಲಿ ಸೋಶಿಯಲ್ ಮೀಡಿಯಾ ಬಳಸಿಕೊಂಡು ಡಾ.ಕೆ.ಸುಧಾಕರ್ ತೇಜೋವಧೆಗೆ ಮುಂದಾದರು. ಆದರೆ ವಿರೋಧಿಗಳ ಕುತಂತ್ರವನ್ನು ವಿಫಲಗೊಳಿಸಿದ್ದು ಒಂದು ವಿಡಿಯೋ.ಆ ವಿಡಿಯೋ ಡಾ.ಕೆ.ಸುಧಾಕರ್'ಗೆ ಮತ್ತೊಮ್ಮೆ ಗೆಲುವು ತಂದು ಕೊಟ್ಟಿತ್ತು.


ಡಾ.ಕೆ.ಸುಧಾಕರ್ 2013ರಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರದ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಮತ್ತೆ ಡಾ.ಕೆ.ಸುಧಾಕರ್ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಕ್ಷೇತ್ರದಲ್ಲಿ ಓಡಾಡ್ತಿತ್ತು. ಇದನ್ನು ಅರಿತ ವಿರೋಧಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಡಾ.ಕೆ.ಸುಧಾಕರ್ ತೇಜೋವಧೆ ಮಾಡುವಂಥಾ ವಿಡಿಯೋಗಳನ್ನು ಹರಿಯ ಬಿಟ್ಟಿತ್ತು. ಆ ವಿಡಿಯೋಗಳ ಹಿಂದೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನವೀನ್ ಕಿರಣ್ ಮತ್ತು ಆತನ ಬೆಂಬಲಿಗ ಪ್ರದೀಪ್ ಈಶ್ವರ್ ಇದ್ದರು ಎಂಬುದು ರಸಹ್ಯವಾಗೇನೂ ಉಳಿದಿಲ್ಲ. ಆದರೆ ಜನರ ಕಣ್ಣು ತೆರೆಸಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ವಿಡಿಯೋ


ಈ ವಿಡಿಯೋದಲ್ಲಿ, ಡಾ.ಕೆ.ಸುಧಾಕರ್ ಹೇಗೆಲ್ಲಾ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂಬ ಸತ್ಯಗಳಿದ್ದವು. ಇದನ್ನು ನೋಡಿದ ಕ್ಷೇತ್ರದ ಜನರ ಮನದಲ್ಲಿ ಸುಧಾಕರ್ ಬಗ್ಗೆ ಒಲವು ಹೆಚ್ಚಾಯಿತು. ಈ ವಿಡಿಯೋ ನೋಡಿದ ನಂತರ, ಡಾ.ಕೆ.ಸುಧಾಕರ್ ಬಗ್ಗೆ ವಿರೋಧಿಗಳು ಹೇಗೆಲ್ಲಾ ಅಪ ಪ್ರಚಾರ ಮಾಡುತ್ತಿದ್ದಾರೆ ಎಂಬುದು ಅರಿವಾಯ್ತು. ನವೀನ್ ಕಿರಣ್ ಕಡೆ ವಾಲಿದ್ದ ಜನರು, ಸೋಶಿಯಲ್ ಮೀಡಿಯಾಗಳಲ್ಲಿನ ಕೆಲವು ಹೃದಯ ಸ್ಪರ್ಷಿ ವಿಡಿಯೋಗಳನ್ನು ನೋಡಿ ಮತ್ತೆ ಡಾ.ಕೆ.ಸುಧಾಕರ್ ಬೆನ್ನಿಗೆ ನಿಂತರು. ಹೀಗಾಗಿ ಡಾ.ಕೆ.ಸುಧಾಕರ್ ಎರಡನೇ ಬಾರಿ ಶಾಸಕರಾಗಿ ಗೆದ್ದಿದ್ದು ಮಾತ್ರವಲ್ಲ.. ಎರಡನೇ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಶಾಸಕ ಅಂತ ಹೊಸ ದಾಖಲೆಯನ್ನೂ ಬರೆದಿದ್ದಾರೆ. 


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು