ಸಿನೆಮಾ

Share This Article To your Friends

ಇಂಥವರಿಗೆ ಓಟ್ ಹಾಕಬೇಡಿ!


ಇಂಥವರಿಗೆ ಓಟ್ ಹಾಕಬೇಡಿ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಹಗಲು ರಾತ್ರಿ ಎನ್ನದೇ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಆದ್ರೆ ಪ್ರಜೆಗಳಲ್ಲಿ ಮಾತ್ರ ತಾವು ಯಾರಿಗೆ ಓಟ್ ಹಾಕ್ಬೇಕು ಅನ್ನೋ  ಗೊಂದಲ ಹೆಚ್ಚಾಗ್ತಾ ಇದೆ.


ನಿಜ.  ಉತ್ತಮ ಭವಿಷ್ಯಕ್ಕಾಗಿ, ಉತ್ತಮ ಸಮಾಜಕ್ಕಾಗಿ, ನಾವು ಯಾರಿಗೆ ಓಟ್ ಮಾಡ್ಬೇಕು. ಉತ್ತಮ ಅಭ್ಯರ್ಥಿಗೆ ಓಟ್ ಹಾಕ್ಬೇಕು ಅನ್ನೋದು ಎಲ್ಲರ ಮಾತು. ಹಾಗಾದ್ರೆ ಉತ್ತಮ ಅಭ್ಯರ್ಥಿ ಯಾರು ಉತ್ತಮ ಅಭ್ಯರ್ಥಿಗಳು ಹೇಗಿರ್ತಾರೆ. ಓಟ್ ಹಾಕುವಾಗ ನಾವು ಯಾವೆಲ್ಲ ಅಂಶಗಳನ್ನ ಗಮನದಲ್ಲಿ ಇಟ್ಕೊಬೇಕು.


1) ಪ್ರಜೆಗಳಿಗೆ ಕಷ್ಟ ಬಂದಾಗ ಸಹಾಯ ಮಾಡಿದರೆ ಅದು ಸಹಾಯ. ಆದರೆ ತನಗೆ ಕಷ್ಟ ಬಂದಾಗ ಪ್ರಜೆಗಳಿಗೆ ಸಹಾಯ ಮಾಡಿದರೆ ಅದು ಸಹಾಯ ಅಲ್ಲ ಅದನ್ನ ಸ್ವಾರ್ಥ ಅನ್ನಬಹುದು. ಹಾಗಾಗಿ ಚುನಾವಣೆ ಹತ್ತಿರ ಬಂದಾಗ ಮಾತ್ರ ತನ್ನ ಕ್ಷೇತ್ರದ ಅಭ್ಯರ್ಥಿಗಳಿಗೆ ಸಹಾಯ ಮಾಡುವವನು ಉತ್ತಮ ಅಭ್ಯರ್ಥಿ ಅಲ್ಲ.


2) ತನ್ನ ಅಧಿಕಾರಾವಧಿಯಲ್ಲಿ ಒಮ್ಮೆಯೂ ತನ್ನೆಲ್ಲ  ಕ್ಷೇತ್ರಗಳ ಸ್ಥಿತಿಗತಿಗಳನ್ನ ವಿಚಾರಿಸದವ ಚುನಾವಣೆ ಬಂದಾಗ ಮಾತ್ರ ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ಆಶ್ವಾಸನೆ ಕೊಡುವವನು ಉತ್ತಮ ಅಭ್ಯರ್ಥಿ ಅಲ್ಲ.


3) ಕೈಲಾಗದವರು ಸೋಲೊಪ್ಪಿಕೊಳ್ಳದೇ ದುರ್ಮಾರ್ಗ ಹಿಡಿಯುವವರು ಸ್ವಾರ್ಥ ಅಭ್ಯರ್ಥಿಗಳು. ತನ್ನಿಂದ ಅಭಿವೃಧ್ದಿ ಕೆಲಸ ಮಾಡಲು ಆಗಿಲ್ಲ, ತಾನು ಅಭಿವೃಧ್ದಿ ಕೆಲಸ ಮಾಡುವಲ್ಲಿ ವಿಫಲನಾಗಿದ್ದೇನೆ ಆದರೂ ನನಗೆ ಓಟ್ ಮಾಡಿ ಎಂದು ಹಣ ಹೆಂಡವನ್ನ ಹಂಚುವವ ಅಸಮರ್ಥ ಅಭ್ಯರ್ಥಿ  .


ಪ್ರಜೆಗಳಾದ ನಮಗೆ  ಪಕ್ಷಕ್ಕಿಂತ ಅಭ್ಯರ್ಥಿ ಮುಖ್ಯ  ನಮಗೆ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರಿಗೆ ನಮ್ಮ ಅಮೂಲ್ಯವಾದ ಮತವನ್ನು ಹಾಕೋಣ. ಮೇಲೆ ತಿಳಿಸಿದಂತ ದುಷ್ಟ, ಕನಿಷ್ಟ, ಅಭ್ಯರ್ಥಿಗಳಿಗಾಗಿ ನಮ್ಮ ವಜ್ರಕ್ಕಿಂತ ಹೆಚ್ಚಿಗೆ ಬೆಲೆಬಾಳುವ ಮತವನ್ನು ಹಾಳು ಮಾಡಿಕೊಳ್ಳುವುದು ಬೇಡ.


ಕೊನೆಗೊಂದು ಮಾತು ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ, ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ, ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತಾರೆ. ಪ್ರಪಂಚದಲ್ಲಿ ಎಲ್ಲರೂ ತನ್ನ ಲಾಭವನ್ನೇ ನೋಡುತ್ತಾರೆ.  ಹಾಗಾಗಿ ನಮಗೆ ಲಾಭವಾಗುವಂತೆ ಮಾಡುವ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಉತ್ತಮ ಸಮಾಜ ನಿರ್ಮಾಣ ಮಾಡೋಣ.


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು