ಸಿನೆಮಾ

Share This Article To your Friends

ಕರ್ನಾಟಕದಲ್ಲಿ ಅಮಿತ್ ಶಾ ಪ್ರಯೋಗಿಸ್ತಿರೋದು 2400 ವರ್ಷದ ಹಿಂದಿನ ರಣತಂತ್ರ!ವಾಹ್..! ಇದಪ್ಪಾ ಚಾಣಕ್ಯನ ರಣತಂತ್ರ ಅಂದ್ರೆ... ರಾಜಕೀಯ ಲೋಕದ ಚಾಣಕ್ಯ ಅಂತಲೇ ಕರೆಯಲಾಗುವ ಅಮಿತ್ ಶಾ ಕರ್ನಾಟಕವನ್ನು ಗೆಲ್ಲೋದಕ್ಕೆ ಸಖತ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಚಂದ್ರಗುಪ್ತ ಮೌರ್ಯನನ್ನು ಮುಂದಿಟ್ಟುಕೊಂಡು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು 2400 ವರ್ಷಗಳ ಹಿಂದೆ ಆ ಚಾಣಕ್ಯ ಎಂಥಾ ತಂತ್ರಗಳನ್ನು ಹೆಣೆದಿದ್ದರೋ, ಅಂಥದ್ದೇ ತಂತ್ರಗಳನ್ನು ಆಧುನಿಕ ಚಾಣಕ್ಯ ಹೆಣೆದಿದ್ದಾರೆ.

ರಾಜನಾದನವನು ಮೊದಲು ಪ್ರಜೆಗಳ ಬೇಕು ಬೇಡಗಳನ್ನು ತಿಳಿದುಕೊಳ್ಳಬೇಕು. ತಳ ಮಟ್ಟದಲ್ಲಿ ಎಂಥಾ ಪರಿಸ್ಥಿತಿ ಇದೆ ಎಂಬುದನ್ನು ಅರಿತು, ಅವರನ್ನು ಸಂಘಟಿಸಬೇಕು ಅನ್ನೋದು ಮೌರ್ಯ ಸಾಮ್ರಾಜ್ಯ ಕಟ್ಟಿದ ಚಾಣಕ್ಯನ ತಂತ್ರಗಾರಿಕೆಯಾಗಿತ್ತು. ಅದೇ ತಂತ್ರವನ್ನು ಅಮಿತ್ ಶಾ ಮೋದಿ ಸಾಮ್ರಾಜ್ಯ ಕಟ್ಟಲು ಬಳಸುತ್ತಿದ್ದಾರೆ. ಮೋದಿಯನ್ನು ಮುಂದಿಟ್ಟುಕೊಂಡು ಸಾಮ್ರಾಜ್ಯ ಗೆಲ್ಲಲು ರೆಡಿಯಾಗಿರೋ ಬಿಜೆಪಿ ಚಾಣಕ್ಯ ಮೊದಲು ಮಾಡಿದ್ದು ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸುವ ಕೆಲಸ.

ಚುನಾವಣೆಗೂ ಮೊದಲೇ ಅಂದ್ರೆ ಒಂದು ವರ್ಷದ ಹಿಂದೆಯೇ ಕರ್ನಾಟಕಕ್ಕಾಗಿ  ರಣತಂತ್ರಗಳನ್ನು ಹೆಣೆದಿದ್ದ ಅಮಿತ್ ಶಾ, ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಂತೆ ರಾಜ್ಯ ನಾಯಕರಿಗೆ ಕರೆ ಕೊಟ್ಟಿದ್ದರು, ಅಷ್ಟು ಸಾಲದು ಅಂತ, ತಮ್ಮ ಸೇನೆಯನ್ನು ಕರ್ನಾಟಕಕ್ಕೆ ಕಳಿಸಿ ಕೊಟ್ಟಿದ್ದರು.

8 ತಿಂಗಳ ಹಿಂದೆ ಕರ್ನಾಟಕಕ್ಕೆ ಕಾಲಿಟ್ಟರು ಅಮಿತ್ ಶಾ ಆರ್ಮಿಯ 100 ಸೈನಿಕರು. ನಂತರದಲ್ಲಿ ಕರ್ನಾಟಕಕ್ಕೆ ಬಂದರು 400 ಜನರ ಅಮಿತ್ ಶಾ ಟೀಂ. ಆಮೇಲೆ 28 ಜನರ ಮತ್ತೊಂದು ಪ್ರಚಾರ ಪ್ರಮುಖರನ್ನೂ ಅಮಿತ್ ಶಾ ಕರೆ ತಂದರು, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದರು.

ತಳಮಟ್ಟದಲ್ಲಿ ಪಕ್ಷ ಸಂಘಟಿಸಿದ ನಂತರ, ಕೊನೆಯಲ್ಲಿ ಮತ್ತೊಂದು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ರು ಚಾಣಕ್ಯ ಏನದು ಗೊತ್ತಾ? ಕೊನೆ ಕ್ಷಣದಲ್ಲಿ ಮೋದಿ ಅಲೆಯನ್ನು ಸೃಷ್ಟಿಸುವುದು. ಹಾಗೆ ಮಾಡಿದರೆ ಸೋಲುವ ಸಾಧ್ಯತೆ ಇರೋ ಜಾಗಗಳಲ್ಲೂ ಮೋದಿ ಅಲೆಯಲ್ಲಿ ಗೆಲುವು ದಕ್ಕಬಹುದು ಅನ್ನೋ ತಂತ್ರಗಾರಿಕೆ ಇತ್ತು. ಎಲ್ಲವೂ ಅದರಂತೆಯೇ ನಡೀತಿದೆ. ಮೋದಿ ಅಲೆ ಕರ್ನಾಟಕದಲ್ಲಿ ಜೋರಾಗ್ತಿದೆ. ಇದರ ನಡುವಲ್ಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾತ್ ಅವ್ರನ್ನು ಕರ್ನಾಟಕಕ್ಕೆ ಕರೆತಂದು, ಪ್ರಚಾರ ಮಾಡಿಸಲಾಗುತ್ತಿದೆ. ಇವೆಲ್ಲವೂ ಬಿಜೆಪಿ ಪರವಾದ ಅಲೆಯನ್ನು ಹೆಚ್ಚಿಸುತ್ತಿದ್ದು, ಕರ್ನಾಟಕದಲ್ಲಿ ಕಮಲ ಅರಳೋದು ಬಹುತೇಕ ನಿಶ್ಚಿತ ಅಂತ ಹೇಳಲಾಗುತ್ತಿದೆ. 

ಆದ್ರೆ ಅಮಿತ್ ಶಾ ತಂತ್ರಗಾರಿಕೆ ಅರಿತ ಸಿದ್ದರಾಮಯ್ಯ  ಒಂಟಿಯಾಗಿ ಅಖಾಡಕ್ಕೆ ಧುಮುಕಿದ್ದು, ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ರಚಿಸಲು ಹೆಣಗಾಡುತ್ತಿದ್ದಾರೆ. ಇತ್ತ ಕುಮಾರ ಸ್ವಾಮಿ ಕೂಡ ಈ ಸಲ ಕಪ್ ನಮ್ದೇ ಅಂತ ಗುನುಗುತ್ತಿದ್ದಾರೆ. ಆದರೆ ಮತದಾರನ ಚಿತ್ತ ಯಾರತ್ತ ಅನ್ನೋದು ಕಾದು ನೋಡಬೇಕಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು