ಸಿನೆಮಾ

Share This Article To your Friends

ಮೂವರು ಮಾಜಿ ಮುಖ್ಯಮಂತ್ರಿಗಳ ಆಸ್ತಿ ಎಷ್ಟು?
5 ವರ್ಷಗಳ ಕಾಲ ಕರ್ನಾಟಕವನ್ನು ಆಳಿ ಇದೀಗ ಮತ್ತೊಮ್ಮೆ ಸಿಎಂ ಆಗಬೇಕು ಅಂತ ಹವಣಿಸುತ್ತಿರುವ ಕಾಂಗ್ರೆಸ್ ದಂಡನಾಯಕ ಸಿದ್ದರಾಮಯ್ಯನವರ ಆಸ್ತಿ ಎಷ್ಟು ಗೊತ್ತಾ? ಅದನ್ನು ಕೇಳಿದರೆ ನೀವೇ ಒಂದು ಕ್ಷಣ ಶಾಕ್ ಆಗ್ತೀರಿ
2018ರ ಚುನಾವಣೆಗೆ ಚಾಮುಂಡೇಶ್ವರಿಯಿಂದ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಮ್ಮ ಆಸ್ತಿ 20 ಕೋಟಿ ರೂಪಾಯಿ ಎಂದು ಅಫಿಡೆವಿಟ್ ನಲ್ಲಿ ಸಲ್ಲಿಸಿದ್ದಾರೆ. ಇನ್ನು ತಮ್ಮ ಪತ್ನಿ ಪಾರ್ವತಿಯವರ ಆಸ್ತಿ 7.60 ಕೋಟಿ ಎಂದು ಮಾಹಿತಿ ಸಲ್ಲಿಸಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಒಟ್ಟು ಆಸ್ತಿ ಮೌಲ್ಯ167 ಕೋಟಿ ಎಂದು ತಿಳಿದು ಬಂದಿದೆ.

ಇನ್ನು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಆಸ್ತಿ ಮೌಲ್ಯ 7 ಕೋಟಿ ಎಂದು ಅಫಿಡೆವಿಟ್ ನಲ್ಲಿ ಸಲ್ಲಿಸಿದ್ದಾರೆ

ಇನ್ನು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಆಸ್ತಿ 840 ಕೋಟಿ.

ಹೊಸಕೋಟೆ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರೂ ಆಗಿರುವ ಎಂ.ಟಿ.ಬಿ. ನಾಗರಾಜ್ ಅವರ ಆಸ್ತಿ 1,014 ಕೋಟಿ!

ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿರುವ ವಿಜಯನಗರ ಕ್ಷೇತ್ರದ ಅಭ್ಯರ್ಥಿ ಆನಂದ್ ಸಿಂಗ್ಆಸ್ತಿ 125 ಕೋಟಿ ಇದೆ.
ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು 103 ಕೋಟಿ ಆಸ್ತಿ ಹೊಂದಿದ್ದಾರೆ.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ10.61 ಕೋಟಿ ಆಸ್ತಿ ಇದೆ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮತ್ತೊಬ್ಬ ಬಿಜೆಪಿ ನಾಯಕ ಆರ್. ಅಶೋಕ್‌, ತಮ್ಮ ಕ್ಷದ ಹಿರೀಕರನ್ನು ಹಿಂದಿಕ್ಕಿದ್ದಾರೆ. 40 ಕೋಟಿ ಆಸ್ತಿ ಇದೆ ಎಂದು ತಿಳಿಸಿದ್ದಾರೆ.

ಮೂರನೇ ತರಗತಿವರೆಗೂ ಓದಿ ಬರೋಬ್ಬರಿ 333 ಕೋಟಿ ಆಸ್ತಿ ಘೋಷಿಸಿಕೊಂಡಿರುವ ಪಿ.ಅನಿಲ್ಕುಮಾರ್‌ (43 ವರ್ಷ) ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಸಿಂಗಸಂದ್ರದ ವೆಲ್ಲಿಂಗ್ಟೌನ್ನಲ್ಲಿ ವಾಸಿಸುತ್ತಿರುವ ಕೇರಳ ಮೂಲದ ಇವರು, ಬೆಂಗಳೂರಿಗೆ ಬಂದಾಗ ಇವರು ಟೀ ಮಾರುತ್ತಿದ್ದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಧುಮುಕಿದರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಇವರ ಆಸ್ತಿಯ ಮೌಲ್ಯ ಕಂಡು ಜನ ಬೆರಗಾಗಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರವಲ್ಲದೇ ಜೆಡಿಎಸ್ನಲ್ಲಿ ಕೂಡ ಶತಕೋಟಿ ಆಸ್ತಿಯ ಒಡೆಯರಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಪಕ್ಷದ ಅಭ್ಯರ್ಥಿ ಮಹಮದ್ ಇಕ್ಬಾಲ್ ಹೊತೂರು 149 ಕೋಟಿ ಇದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಗಣಿ ಉದ್ಯಮಿಯಾದ ಇವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು.Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು