ಸಿನೆಮಾ

Share This Article To your Friends

ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸ್ತಾರಂತೆ ಈ ಶಾಸಕ ಯಾಕೆ ಗೊತ್ತಾ?

ಸಾಮಾನ್ಯವಾಗಿ ರಾಜಕಾರಣಿಗಳು ನಾಮಪತ್ರ ಸಲ್ಲಿಕೆಗೆ ಶುಭ ಘಳಿಗೆ, ಶುಭ ಮುಹೂರ್ತ ಹಾಗೂ ರಾಜಯೋಗ ನೋಡ್ತಾರೆ ಆದ್ರೆ ಬೇಕಂತಾನೇ ರಾಹುಕಾಲ ನೋಡಿ ನಾಮಪತ್ರ ಸಲ್ಲಿಕೆ ಮಾಡೋ ರಾಜಕಾರಣಿಗಳನ್ನ ನೀವು ನೋಡಿರಲಂತೂ ಸಾಧ್ಯವಿಲ್ಲ. ಅಷ್ಟಕ್ಕೂ ಆ ಶಾಸಕ ಯಾರು ಯಾಕೆ ಅವ್ರು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸೋಕೆ ಮುಂದಾಗಿದ್ದಾರೆ ಅಂತ ನೋಡಿ....


ಇಷ್ಟಕ್ಕೂ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುತ್ತೇನೆ ಎಂದು ಹೇಳುತ್ತಿರುವುದು ಬೇರಾರು ಅಲ್ಲ ರಾಜ್ಯರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಾಂಗ್ರೆಸ್ ನ ಪ್ರಭಾವಿ ನಾಯಕ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ. ಈಗಾಗಲೇ ಈ ಕ್ಷೇತ್ರದಿಂದ ಗೆದ್ದು ಎರಡು ಬಾರಿ ಶಾಸಕರಾದ ಇವರು ಹಾಟ್ರಿಕ್ ಗೆಲುವಿನ ಭರವಸೆಯಲ್ಲಿದ್ದಾರೆ.ರಾಹುಕಾಲ ಅಂದ್ರೆ ಯಾವ ಒಳ್ಳೇ ಕೆಲಸಗಳನ್ನೂ ಮಾಡದ ಜನರಿದ್ದಾರೆ ಆದ್ರೆ ಸತೀಶ್ ಜಾರಕಿಹೊಳಿಯವರು ನಾಮಪತ್ರ ಸಲ್ಲಿಕೆಗೆ ಈ ರಾಹುಕಾಲವನ್ನೇ ಯಾಕೆ ಆಯ್ಕೆ ಮಾಡಿಕೊಂಡ್ರು ಗೊತ್ತಾ? ಕಾರಣ ಇಷ್ಟೇ ಇತ್ತೀಚಿನ ದಿನಗಳಲ್ಲಂತೂ ಮೌಢ್ಯತೆ ಹೆಚ್ಚಾಗತೊಡಗಿದೆ ಜನ ಮೌಢ್ಯತೆಯ ಗುಲಾಮರಾಗಿ ತಮ್ಮ ಅಮೂಲ್ಯ ಸಮಯವನ್ನ ಹಾಳು ಮಾಡಿಕೊಳ್ಳುತಿದ್ದಾರೆ  ಈ ಮೌಢ್ಯತೆಯ ತೊಡಕನ್ನು ಜನರ ಮನಸಿನಿಂದ ಕಿತ್ತೊಗೆಯಬೇಕೆಂಬ ಉದ್ದೇಶದಿಂದ ಸತೀಶ್ ಜಾರಕಿಹೊಳಿಯವರು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಗೆಲ್ಲಬೇಕೆಂದು ನಿರ್ಧಾರ ಮಾಡಿದ್ದಾರೆ.  ನಿಜವಾಗಿಯೂ ಅವರ ಈ ನಿರ್ಧಾರ ಮೌಢ್ಯತೆಯ ನಿವಾರಣೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ.


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು