ಸಿನೆಮಾ

Share This Article To your Friends

ಇದು ದಾವೂದ್ ಪತ್ನಿ ಬಾಯ್ಬಿಟ್ಟ ಸತ್ಯ

ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ. ಪಾಕಿಸ್ತಾನದ ಕರಾಚಿಯಲ್ಲಿ ಐಶಾರಾಮಿ ಮನೆ ಮಾಡ್ಕೊಂಡು ಹಾಯಾಗಿ ಜೀವನ ನಡೆಸ್ತಾ ಇದ್ದಾನೆ. ದಾವೂದ್ ಕುಟುಂಬಕ್ಕೆ ಕಾವಲಿದ್ದು, ಹಗಲಿರುಳು ಆತನನ್ನ ರಕ್ಷಣೆ ಮಾಡ್ತಿರೋದು ಬೇರೆ ಯಾರೂ ಅಲ್ಲ.. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್​ಐ

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ. ಆತನನ್ನು ತಂದು ನಮಗೆ ಒಪ್ಪಿಸಿ ಅಂತ ಸುಮಾರು 20 ವರ್ಷಗಳಿಂದಲೂ ಬೇಡಿಕೆ ಇಡ್ತಾನೇ ಬಂದಿದೆ ಭಾರತ. ಆದ್ರೆ, ಇವತ್ತಿಗೂ ಆತನನ್ನ ಒಪ್ಪಿಸದೇ ಮೊಂಡುತನ ತೋರ್ತಿದೆ ಪಾಕಿಸ್ತಾನ. ಅಷ್ಟೇ ಅಲ್ಲ, ಆತ ನಮ್ಮ ನೆಲದಲ್ಲಿ ಇಲ್ಲ ಅಂತಲೇ ವಾದಿಸುತ್ತಾ ಬಂದಿದೆ.. ಇದೇ ಟೈಮಲ್ಲಿ, ದಾವೂದ್ ಇಬ್ರಾಹಿಂ ತನ್ನ ಹೆಂಡತಿ ಸಮೇತ ಪಾಕಿಸ್ತಾನದ ಕರಾಚಿಯಲ್ಲೇ ಇದ್ದಾನೆ ಅನ್ನೋದು ಖಚಿತವಾಗಿದೆ. ಅದನ್ನ ಕನ್ಫರ್ಮ್​ ಮಾಡಿದ್ದು ಬೇರೆ ಯಾರೂ ಅಲ್ಲ, ಇದೇ ದಾವೂದ್​ ಪತ್ನಿ ಮೆಹಜಬಿನ್​.

ಪಾತಕಿ ದಾವೂದ್ ಇಬ್ರಾಹಿಂನ ಪಾಸ್ಪೋರ್ಟ್ ಮತ್ತು ಪತ್ನಿಯ ಫೋನ್ ಬಿಲ್​​ಗಳ ಮಾಹಿತಿ ಇತ್ತೀಚೆಗಷ್ಟೇ ಬಹಿರಂಗವಾಗಿದ್ವು. ಆ ಮಾಹಿತಿಯನ್ನ ಇಟ್ಕೊಂಡು ಕರಾಚಿ ವಿಳಾಸದ ಬಿಲ್​ನಲ್ಲಿದ್ದ ನಂಬರ್​ಗೆ ಕರೆ ಮಾಡಿದಾಗ, ದಾವೂದ್​ ಕರಾಚಿ ಮನೆಯಲ್ಲೇ ಇರೋದು ಕನ್ಫರ್ಮ್​ ಆಗಿದೆ. ಫೋನ್​ನಲ್ಲಿ ದಾವೂದ್​ ಪತ್ನಿನೇ ತನ್ನ ಗಂಢ ದಾವೂದ್ ಮನೇಲೇ ಇದ್ದಾನೆ ಅಂತ ಕನ್ಫರ್ಮ್​ ಮಾಡಿದ್ದಾಳೆ.

ಮೆಹಜಬೀನ್​ : ಹಲೋ ಸಲಾಂ ವಾಲೇಕುಂ
ರಿಪೋರ್ಟರ್: ವಾಲೇಖುಂ ಅಸ್ಲಾಂ! ನಾನು ಮೆಹಜಬೀನ್ ಶೇಕ್ ಜೊತೆ ಮಾತನಾಡಬಹುದಾ?
ಮೆಹಜಬೀನ್: ಹೌದು. ನಾನೇ ಮಾತಾಡ್ತಿರೋದು
ರಿಪೋರ್ಟರ್: ಮೇಡಂ ನೀವು ಕರಾಚಿಯಿಂದ ಮಾತನಾಡುತ್ತಿದ್ದೀರಾ?
ಮೆಹಜಬೀನ್: ಹೌದು.. ನೀವು ಯಾರು?
ರಿಪೋರ್ಟರ್: ಮೇಡಂ, ನೀವು ದಾವೂದ್ ಇಬ್ರಾಹಿಂ ಅವರ ಪತ್ನಿಯೇ?
ಮೆಹಜಬೀನ್: ಹೌದು. ಅವರು ನಿದ್ದೆ ಮಾಡುತ್ತಿದ್ದಾರೆ.
(ಫೋನ್​ ಕರೆ ಕಟ್)

ಮೊದಲನೇ ಫೋನ್​ ಕಾಲ್ ಸಂಭಾಷಣೆಯಲ್ಲಿ ದಾವೂದ್ ಇಬ್ರಾಹಿಂ ಮನೇಲಿ ಮಲಗಿದ್ದಾನೆ ಅನ್ನೋದನ್ನ ಮೆಹಜನಿನ್​ ಶೇಕ್​ ಕನ್ಫರ್ಮ್​ ಮಾಡಿದ್ದಾಳೆ. ಮತ್ತೊಮ್ಮೆ ರೀ ಕನ್ಫರ್ಮ್​ ಮಾಡಿಕೊಳ್ಳೋದಕ್ಕೆ ಅಂತ ಎರಡನೇ ಸಾರಿ ಲೇಡಿ ರಿಪೋರ್ಟರ್​ ಕಡೆಯಿಂದ ಫೋನ್ ಮಾಡಿಸಲಾಯ್ತು.

ರಿಪೋರ್ಟರ್: ನಾನು ದಾವುದ್​​ ಭಾಯ್ ಜೊತೆ ಮಾತನಾಡ್ಬೇಕಿತ್ತು. ಅವರು ಇದ್ದಾರಾ?
ಮೆಹಜಬೀನ್: ಗೊತ್ತಿಲ್ಲ ಮಗಳೆ. ನನಗೆ ಏನೂ ಗೊತ್ತಿಲ್ಲ.ನೀನು ಸ್ವಲ್ಪ ಹೊತ್ತಾದ್ಮೇಲೆ ಫೋನ್ ಮಾಡು
ರಿಪೋರ್ಟರ್: ಅವರು ಮನೆಯಲ್ಲಿ ಇದ್ದಾರಾ?
(ಫೋನ್​ ಕರೆ ಕಟ್)

ಫಸ್ಟ್​ ಟೈಂ ಯಾರೋ ಗೊತ್ತಿರೋರು ಕಾಲ್ ಮಾಡಿರಬೇಕು ಅನ್ಕೊಂಡು ಮಾತು ಶುರು ಮಾಡಿದ್ರು. ಆದ್ರೆ ಎರಡನೇಬಾರಿ ಯಾರೋ ಬೇರೆಯವ್ರು ಕಾಲ್ ಮಾಡ್ತಿದ್ದಾರೆ ಅನ್ನೋ ಡೌಟ್ ಮೆಹಜಬೀನ್​ಗೆ ಬಂದಿತ್ತು. ಇದೇ ಕಾರಣಕ್ಕೆ ಏನೂ ಹೇಳದೇ ಫೋನ್ ಕಾಲ್ ಕಟ್ ಮಾಡಿದ್ದಾರೆ ದಾವೂದ್​ ಪತ್ನಿ ಮೆಹಜಬೀನ್​.


ದಾವೂದ್​ ಹೆಂಡತಿ ಹೇಳಿರೋ ಪ್ರಾಕಾರ, ದಾವೂದ್​ ಫ್ಯಾಮಿಲಿ ಸಮೇತ ಪಾಕ್​ನಲ್ಲೇ ಇದ್ದಾನೆ ಅನ್ನೋದು ಕನ್ಫರ್ಮ್​ ಆಗುತ್ತೆ. ತನ್ನ ನೆಲದಲ್ಲಿ ಭಾರತಕ್ಕೆ ಬೇಕಾದ ಪಾತಕಿಯನ್ನ ಇಟ್ಟುಕೊಂಡು  ಸಲಹುತ್ತಿದೆ ಪಾಕಿಸ್ತಾನ. ಆದ್ರೆ ಭಾರತಕ್ಕೆ ಒಪ್ಪಿಸದೇ ಮೊಂಡುತನ ತೋರ್ತಿದೆ. ದಾವೂದ್​ ಪಾಕಿಸ್ತಾನದಲ್ಲಿಲ್ಲ ಅಂತ ಸುಳ್ಳು ಹೇಳ್ತಿದೆ. ಹೀಗಾಗಿ ಪಾಕ್​ ಜೊತೆಗಿನ ಮಾತುಕತೆಯನ್ನು ರದ್ದುಮಾಡಿ, ದಾವೂದ್​ ಬೇಟೆಗೆ ರೆಡಿಯಾಗಿದೆ ಭಾರತ ಸರ್ಕಾರ..

ದಾವೂದ್​ ಕರಾಚಿಯ ಮನೆಯಲ್ಲೇ ಇದ್ದಾನೆ ಅನ್ನೋದನ್ನ ಕನ್ಫರ್ಮ್​ ಆಗ್ತಿದ್ದಂತೆ, ದಾವೂದ್​ ಬೇಟೆಗೆ ಪ್ಲಾನ್​ ರೆಡಿಯಾಗಿದೆ. ದಾವೂದ್ ಬಲಿಗಾಗಿ ಭಾರತದ ವಿಶೇಷ ಸೇನಾ ಪಡೆ ಕೂಡ ರೆಡಿಯಾಗಿದೆ. ಈ ಸೇನೆಗೆ ಟ್ರೈನಿಂಗ್​ ಕೊಟ್ಟಿರೋದು ಯಾರು ಗೊತ್ತಾ? ಆವತ್ತು ಲಾಡನ್​ನನ್ನ ಹೊಡೆದುರುಳಿಸಿದ ಸೀಲ್ ಪಡೆಯ ಸೈನಿಕರು.

ಲಾಡನ್ ಬೇಟೆಯ ಕಾರ್ಯಾಚರಣೆ ನಡೆದದ್ದು ಚಾಪರ್​ಗಳ ಮೂಲಕ. ಅದೇ ರೀತಿ ಆಕಾಶ ಮಾರ್ಗದಲ್ಲಿ ಸಾಗಿ ದಾವೂದ್​ನನ್ನ ಹೊಡೆದುರುಳಿಸೋಕೆ ಸಿದ್ಧವಾಗಿದೆ ನಮ್ಮ ವಿಶೇಷ ಸೇನಾಪಡೆ.ತನ್ನ ಬೇಟೆಗೆ ಸ್ಕೆಚ್ ರೆಡಿಯಾಗಿದೆ ಅಂತ ಗೊತ್ತಾಗ್ತಿದ್ದಂತೆ ಜೀವ ಉಳಿಸಿಕೊಳ್ಳೋದಕ್ಕೆ ದಾವೂದ್​ ಈಗ ಹೊಸ ಜಾಗ ಹುಡುಕ್ತಾ ಇದ್ದಾನೆ. ಬಾಂಗ್ಲಾ ದೇಶ, ನೈರೋಬಿಯಂಥಾ ದೇಶಗಳಿಗೆ ಹೋಗಿ ಜೀವ ಉಳಿಸಿಕೊಳ್ಳೋ ಆಲೋಚನೆ ಕೂಡ ಮಾಡ್ತಾ ಇದ್ದಾನೆ.ಆದ್ರೆ ಈ ಸಲ ಮಾತ್ರ ದಾವೂದ್​ನನ್ನ ಬೇಟೆಯಾಡೇ ಆಡ್ತೀವಿ ಅಂತಿದೆ ಭಾರತದ ಸರ್ಕಾರ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು