ಸಿನೆಮಾ

Share This Article To your Friends

ಕರ್ನಾಟಕದಲ್ಲಿದ್ದಾನೆ ISIS ನಾಯಕ?

ಇದು ಇಡೀ ಭಾರತವನ್ನೇ ಬೆಚ್ಚಿ ಬೀಳಿಸುವ ಸ್ಟೋರಿ.. ಇಷ್ಟು ದಿನ ಪಾಶ್ಚಾತ್ಯ ದೇಶಗಳಲ್ಲಿ ಅಟ್ಟಹಾಸ ಮೆರೀತಿದ್ದ ಐಸಿಸ್ ಉಗ್ರರು ಈಗ ಭಾರತವನ್ನ ಟಾರ್ಗೆಟ್ ಮಾಡಿದ್ದಾರೆ. ಈಗಾಗ್ಲೇ 40 ಭಾರತೀಯರನ್ನ ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಐಸಿಸ್ ಉಗ್ರರು ಭಾರತವನ್ನು ಟಾರ್ಗೆಟ್ ಮಾಡಿದ್ದು ಯಾಕೆ? ಪ್ರಧಾನಿ ಮೋದಿ ಮೇಲೆ ಐಸಿಸ್ ಉಗ್ರರು ಕಣ್ಣಿಟ್ಟಿದ್ದು ಯಾಕೆ.? ಇಲ್ಲಿದೆ ನೋಡಿ ಆ ಡೀಟೇಲ್ಸ್​

    ಐಸಿಸ್​ ಉಗ್ರರು.. ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಭಯಾನಕ ನರ ರಾಕ್ಷಸರು.. ಮನುಷ್ಯರ ರುಂಡಗಳನ್ನು ಚೆಂಡಾಡಿ, ಅಮಾಯಕರ ನೆತ್ತರು ಹರಿಸಿದ ಅಸುರರು..! ಭಯ ಆಗುತ್ತೆ ಕಣ್ರಿ.. ಇವ್ರ ಹೆಸ್ರು ಕೇಳಿದ್ರೇನೇ ಭಯ ಆಗುತ್ತೆ. ಯಾಕಂದ್ರೆ ಇಡೀ ಜಗತ್ತಿನಲ್ಲಿ ಇವ್ರಂಥ ಕಲ್ಲು ಹೃದಯದ ರಕ್ಕಸರು ಮತ್ಯಾರೂ ಇಲ್ಲ.. ಸಿಕ್ಕ ಸಿಕ್ಕವರ ಕತ್ತು ಕತ್ತರಿಸಿ, ಅದನ್ನು ಜಗತ್ತಿನ ಜನರಿಗೆ ತೋರಿಸಿ ವಿಕೃತ ಆನಂದ ಪಡೋ ನರ ರಾಕ್ಷಸರಿವರು..!

    ಇಷ್ಟುದಿನ ಇರಾಕ್ ಮತ್ತು ಸಿರಿಯಾದಲ್ಲಿ ಅಟ್ಟಹಾಸ ಮೆರೀತಾ ಇದ್ದ ಐಸಿಸ್​ ಉಗ್ರರು ಈಗ ಟಾರ್ಗೆಟ್ ಮಾಡಿರೋ ದೇಶ ಯಾವುದು ಗೊತ್ತಾ..? ಅದು ಬೇರೆ ಯಾವ್ದು ಅಲ್ಲ.. ಇಡೀ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಭಾರತವನ್ನ..

    ನಿಜ.. ಇದು ಇಡೀ ಭಾರತವನ್ನೇ ಬೆಚ್ಚಿ ಬೀಳಿಸುವ ವಿಷ್ಯ ಕಣ್ರಿ.. ಭಾರತೀಯರ ಎದೆ ನಡುಗಿಸುವ ಭಯಾನಕ ಸುದ್ದಿ ಇದು.. ಮನುಷ್ಯ ರೂಪದ ಈ ನರ ರಾಕ್ಷಸರ ಕಣ್ಣು ಈಗ ಭಾರತದ ಮೇಲೆ ಬಿದ್ದಿದೆ.. ಈಗಾಗ್ಲೇ ದೊಡ್ಡ ಸ್ಕೆಚ್ ರೆಡಿ ಮಾಡಿದ್ದಾರೆ ಕಣ್ರಿ.. ಭಾರತದ ನೆಲದಲ್ಲೂ ರಕ್ತಪಾತ ಹರಿಸಬೇಕು ಅಂತ ಇವ್ರು ರೆಡಿಯಾಗಿದ್ದಾರೆ.

    ಇದಕ್ಕಿಂತ ಬೆಚ್ಚಿ ಬೀಳಿಸುವ ವಿಷ್ಯಾ ಹೇಳ್ತೀವಿ ಕೇಳಿ.. ಭಾರತವನ್ನು ಟಾರ್ಗೆಟ್ ಮಾಡಿರೋ ಐಸಿಸ್ ಉಗ್ರರು, ಅಲ್ರೆಡಿ 40 ಮಂದಿ ಭಾರತೀಯರನ್ನು ಕಿಡ್ನ್ಯಾಪ್ ಮಾಡಿದ್ದಾರೆ..! ನಿಜ.. ಈಗ 40 ಮಂದಿ ಭಾರತೀಯರ ಪ್ರಾಣ ಐಸಿಸ್ ಉಗ್ರರ ಕೈನಲ್ಲಿದೆ. ಭಾರತ ಸರ್ಕಾರ ಸ್ವಲ್ಪ ಯಾಮಾರಿದ್ರೂ, ಅಲ್ಲಿ ಭಾರತೀಯರ ರುಂಡಗಳು ನೆಲಕ್ಕುರುಳುತ್ವೆ..!

    ಭಾರತದ ನೆಲದಲ್ಲಿ ರಕ್ತ ಹರಿಸ್ಬೇಕು ಅಂತ ಸಜ್ಜಾಗಿರೋ ಐಸಿಸ್ ಉಗ್ತರರು, ಈಗಾಗ್ಲೇ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿ ದಾಟಿ ಬಂದಿದ್ದಾರೆ. ಭಾರತದ ಮೇಲೆ ಕೆಂಡ ಕಾರ್ತಿರೋ ಪಾಕಿಸ್ತಾನ ಕೂಡ, ಐಸಿಸ್​ ಉಗ್ರರ ಜೊತೆ ಕೈ ಜೋಡಿಸಿದೆ.

    ಇದಕ್ಕಿಂತಲೂ ಭಯಾನಕವಾದ ಮತ್ತೊಂದು ಸ್ಫೋಟಕ ಸುದ್ದಿಯನ್ನು ಹೇಳ್ತೀವಿ ಕೇಳಿ. ಈ ಐಸಿಸ್ ಉಗ್ರರ ಮೊದಲ ಟಾರ್ಗೆಟ್ ಯಾರು ಗೊತ್ತೇನ್ರಿ..? ಅದು ಬೇರೆ ಯಾರೂ ಅಲ್ಲ.. ಜಗತ್ತಿನಾದ್ಯಂತ ಭಾರತದ ಹೆಸರು ರಾರಾಜಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ..

    ಇನ್ನು ಮೋದಿಯನ್ನ ಟಾರ್ಗೆಟ್ ಮಾಡಿರೋ ಐಸಿಸ್ ಉಗ್ರರರು, ಅದಕ್ಕೆ ಯಾರ ಸಹಾಯ ಕೇಳಿದ್ದಾರೆ ಗೊತ್ತೇನ್ರಿ..? ನಿಜಕ್ಕೂ ಆ ವಿಷಯ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ.. ಯಾಕಂದ್ರೆ ಅದು ಬೇರೆ ಯಾರನ್ನೂ ಅಲ್ಲ... ವಿದೇಶದ ಯಾವುದೋ ಮೂಲೇಲಿ ಕೂತ್ಕೊಂಡು, ಭಾರತದ ಅಂಡವರ್ಡ್​ ಅನ್ನ ಅಳ್ತಾ ಇರೋ ಮೋಸ್ಟ್ ವಾಂಟೆಡ್​ ಭೂಗತ ಪಾತಕಿ ದಾವೂದ್​ ಇಬ್ರಾಹಿಂ..!

    ನಿಜ.. ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನ ಎಸಗೋದಕ್ಕೆ ಐಸಿಸ್​ ದೊಡ್ಡ ಪ್ಲಾನನ್ನೇ ಮಾಡಿದೆ.. ಎಲ್ಲಾ ಕಡೆಗಳಿಂದ್ಲೂ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸ್ತಾ ಇದೆ. ಆಲ್ರೆಡಿ 40 ಭಾರತೀಯರನ್ನು ಕಿಡ್ನ್ಯಾಪ್ ಮಾಡಿದ್ದು, ಭೂಗತ ಲೋಕದ ಸಹಾಯ ಬೇಡಿದೆ. ಇನ್ನು ಭಾರತದಲ್ಲಿರೋ ಕೆಲ ಉಗ್ರ ಸಂಘಟನೆಗಳು ಕೂಡ ಐಸಿಸ್​ಗೆ ಸಾಥ್​ ನೀಡಿವೆ. ಐಸಿಸ್​ ಬೇರು ಈಗಾಗಲೇ ಭಾರತದ ನೆಲದಲ್ಲಿ ಬೆಳೀತಾ ಇದ್ದು, ಮುಂದೆ ಭಾರತದಲ್ಲಿ ನೆತ್ತರು ಹರಿಸೋದಕ್ಕೆ ರೆಡಿಯಾಗಿದೆ..!

    ಇರಾಕ್ ಮತ್ತು ಸಿರಿಯಾ ಬಾರ್ಡರ್​​​​ನಲ್ಲಿ ಅಟ್ಟಹಾಸ ಮೆರೀತಾ ಇದ್ದ ಐಸಿಸ್​ ಉಗ್ರರ ಕಣ್ಣು, ಭಾರತದ ಮೇಲೆ ಬಿದ್ದಿದ್ದು ಹೇಗೆ? ಭೂಗತ ಪಾತಕಿ ಐಸಿಸ್​​ ಉಗ್ರರಿಗೆ ಸಾಥ್​ ನೀಡೋಕೆ ಮುಂದಾಗಿರೋದು ಯಾಕೆ? ಆ ಭಯಾನಕ ಸ್ಟೋರಿ ಮುಂದಿದೆ ಓದಿ
-------------------------
    ಇರಾಕ್​ ಮತ್ತು ಸಿರಿಯಾ ನೆಲದಲ್ಲಿ ಐಸಿಸ್​ ಉಗ್ರರು ಬಲಿಷ್ಠರಾಗಿದ್ದಾರೆ. ಅಲ್ಲಿನ ಸರ್ಕಾರವನ್ನ ನೆಲಕ್ಕುರುಳಿಸಿ, ತಮ್ಮದೇ ಅಂಧಾ ದರ್ಬಾರ್​ ಶುರು ಮಾಡಿದ್ದಾರೆ. ಈಗ ಭಾರತವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡ್ಕೊಬೇಕು ಸ್ಕೆಚ್ ಹಾಕಿದ್ದಾರೆ.

    ನಿಜ.. ಐಸಿಸ್​ ಉಗ್ರರು ಇಷ್ಟು ದಿನ ಇರಾಕ್ ಮತ್ತು ಸಿರಿಯಾದಲ್ಲಿ ತಮ್ಮ ಅಟ್ಟಹಾಸ ಮೆರೀತಾ ಇದ್ರು.. ಅಲ್ಲಿನ ಸರ್ಕಾರವನ್ನ ನೆಲಕ್ಕುರುಳಿಸಿ, ಅಂಧಾ ದರ್ಬಾರ್​ ಶುರು ಮಾಡಿದ್ರು.. ಅಷ್ಟೇ ಅಲ್ಲ, ಇಸ್ಲಾಂ ರಾಷ್ಟ್ರ ನಿರ್ಮಾಣದ ಹೆಸರಲ್ಲಿ, ರಕ್ತಪಾತಕ್ಕೆ ಅಣಿಯಾದ್ರು. ಅಡ್ಡ ಬಂದವರನ್ನು ಕತ್ತು ಸೀಳಿ, ಕೊಂದು ಹಾಕೋಕೆ ಶುರು ಮಾಡಿದ್ರು..

    ಈ ಉಗ್ರರ ಕ್ರೌರ್ಯವನ್ನು ಕಂಡು, ಇವ್ರನ್ನ ಮಟ್ಟ ಹಾಕ್ಬೇಕು ಅಂತ, ಸಿರಿಯಾ ಸೈನಿಕರು ಸೆಟೆದು ನಿಂತ್ರು.. ಆದ್ರೆ, ತಮ್ಮ ವಿರುದ್ಧ ನಿಂತ ಸಿರಿಯಾದ ನೂರಾರು ಸೈನಿಕರನ್ನ, ಬರ್ಬರವಾಗಿ ಕೊಂದು ಮುಗಿಸಿದ್ರು ಈ ಉಗ್ರರು..

    ವಿಷ ಬೀಜದಂತಿರೋ ಈ ಐಸಿಸ್​ ಉಗ್ರರನ್ನ ಮಟ್ಟ ಹಾಕ್ಬೇಕು ಅಂತ ಇವ್ರ ವಿರುದ್ಧ ತೊಡೆ ತಟ್ಟಿ ನಿಂತದ್ದು, ಜಗತ್ತಿನ ದೊಡ್ಡಣ್ಣ ಅಮೆರಿಕ.. ಐಸಿಸ್​ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಸೇನೆ ವೈಮಾನಿಕ ದಾಳಿಗೆ ಮುಂದಾಯ್ತು..

    ಆದ್ರೆ ಹೆದರಲಿಲ್ಲ ಕಣ್ರಿ.. ಐಸಿಸ್​ ಉಗ್ರರು ಅಮೆರಿಕದ ದಾಳಿಗೂ ಹೆದರಲಿಲ್ಲ.. ಬದಲಿಗೆ ಜಗತ್ತಿನ ದೊಡ್ಡಣ್ಣನನ್ನೇ ಹೆದರಿಸೋದಕ್ಕೆ ಮುಂದಾಯ್ತು.. ಯುದ್ಧ ಭೂಮಿಯಲ್ಲಿ ಸಿಕ್ಕ, ಅಮೆರಿಕದ ಸೈನಿಕರು ಮತ್ತು ಪತ್ರಕರ್ತರನ್ನು ಕಿಡ್ನ್ಯಾಪ್ ಮಾಡಿ, ಅವ್ರ ಕತ್ತು ಸೀಳಿ ಕೊಂದು ಹಾಕಿದ್ರು.. ಆ ರಕ್ತಪಾತದ ವಿಡಿಯೋಗಳನ್ನ ಅಂತರ್ಜಾಲದಲ್ಲಿ ಅಪ್​ಲೋಡ್​ ಮಾಡಿ, ಬರಾಕ್​ ಒಬಾಮಾ ಎಚ್ಚರಿಕೆ ನೀಡಿದ್ರು.. ನಮ್ಮ ತಂಟೆಗೆ ಬಂದ್ರೆ ಅಮೆರಿಕನ್ನರ ರುಂಡ ಚೆಂಡಾಡ್ತೀವಿ ಅಂತ ವಾರ್ನಿಂಗ್ ನೀಡಿದ್ರು..

    ಐಸಿಸ್​ ಉಗ್ರರ ಅಟ್ಟಹಾಸ ಯಾವಾಗ ಜಾಸ್ತಿ ಆಯ್ತೋ, ಬ್ರಿಟನ್ ಕೂಡ ಅಮೆರಿಕ ಸೇನೆಯ ಜೊತೆಗೂಡಿ, ಐಸಿಸ್​ ವಿರುದ್ಧದ ಹೋರಾಟಕ್ಕರೆ ಧುಮಿಕಿತು.. ಆಗ್ಲೂ ಈ ಉಗ್ರರು ಮಾಡಿದ್ದು ಅದನ್ನೇ.. ಬ್ರಿಟನ್​ ಪ್ರಜೆಗಳನ್ನು ಕಿಡ್ನ್ಯಾಪ್ ಮಾಡಿ, ಅವ್ರನ್ನ ಬರ್ಬರವಾಗಿ ಹತ್ಯೆ ಮಾಡಿದ್ರು.. ಆ ರಕ್ತಸಿಕ್ತ ದೃಶ್ಯಗಳನ್ನು ರೆಕಾರ್ಡ್ ಮಾಡಿ, ನಮ್ಮ ವಿರುದ್ಧದ ಹೋರಾಟ ನಿಲ್ಲಿಸದೇ ಇದ್ರೆ, ಬ್ರಿಟನ್​ ಪ್ರಜೆಗಳನ್ನು ಹೀಗೆ ಬರ್ಬರವಾಗಿ ಕೊಂದು ಹಾಕ್ತೀವಿ ಅಂತ ಬ್ಲಾಕ್ ಮೇಲ್ ಮಾಡಿದ್ರು..

    ಇಷ್ಟೆ ಅಲ್ಲ, ಈಜಿಪ್ಟ್​, ಲಿಬಿಯಾ ಸೇರಿದಂತೆ ತಮ್ಮನ್ನ ಮಟ್ಟ ಹಾಕೋಕೆ ಯಾವ ದೇಶ ಮುಂದಾಗುತ್ತೋ, ಆ ದೇಶದ ಪ್ರಜೆಗಳನ್ನ ಕಿಡ್ನ್ಯಾಪ್​ ಮಾಡಿ, ಅವ್ರನ್ನ ಬರ್ಬರವಾಗಿ ಹತ್ಯೆ ಮಾಡಲಾಗುತ್ತೆ.  ಆ ಭೀಕರ ದೃಶ್ಯಗಳನ್ನು ಜಗತ್ತಿನ ಮುಂದಿಟ್ಟು ಬ್ಲಾಕ್ ಮೇಲ್ ಮಾಡ್ತಾರೆ. ಇಂಥಾ ನರ ಹಂತಕರ ಕಣ್ಣು ಬಿದ್ದಿರೋದು ಈಗ ಭಾರತದ ಮೇಲೆ..

    ಐಸಿಸ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಅಂತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಂಡ್ರು.. ಮೋದಿ ಕೂಡ ಭಯೋತ್ಪಾದಕರನ್ನು ಮಟ್ಟ ಹಾಕೋದಕ್ಕೆ ಜಗತ್ತಿನ ರಾಷ್ಟ್ರಗಳು ಒಂದಾಗ್ಬೇಕು ಅಂತ ಗುಡುಗಿದ್ರು.. ಇದೇ ನೋಡಿ.. ಐಸಿಸ್​ ಉಗ್ರರ ಕಣ್ಣು ಕೆಂಪಾಗಿಸಿದ್ದು..

    ಇಷ್ಟೆ ಅಲ್ಲ.. ಮೋದಿ ಭಾರತದ ಪವರ್​ಫುಲ್​​ ಪ್ರಧಾನಿ.. ಇದು ಐಸಿಸ್​ ಉಗ್ರರ ನಿದ್ದೆಗೆಡಿಸಿದೆ. ಅಮೆರಿಕದ ಜೊತೆ ಸೇರ್ಕೊಂಡು, ತಮ್ಮ ವಿರುದ್ಧ ಭಾರತ ಸಮರ ಸಾರುತ್ತೇನೋ ಅನ್ನೋ ಭಯ ಐಸಿಸ್​ ಉಗ್ರರಲ್ಲಿ ಶುರುವಾಗಿದೆ. ಇದೇ ಕಾರಣಕ್ಕೆ ಕಣ್ರಿ.. ಇದೇ ಕಾರಣಕ್ಕೆ ಈಗ ಭಾರತ ಐಸಿಸ್​​ ಉಗ್ರರ ಟಾರ್ಗೆಟ್ ಆಗಿರೋದು.. ಭಾರತ ಏನಾದ್ರೂ ತಮ್ಮ ವಿರುದ್ಧ ದಾಳಿಗೆ ಮುಂದಾದ್ರೆ, ತಮ್ಮ ವಶದಲ್ಲಿರೋ 40 ಭಾರತೀಯರನ್ನ ಹತ್ಯೆ ಮಾಡಿ, ಭಾರತವನ್ನು ಬೆದರಿಸೋ ಪ್ಲಾನ್ ಈ ಉಗ್ರರದ್ದು..

    ಇಷ್ಟೇ ಅಲ್ಲ.. ಇಡೀ ಭಾರತದಲ್ಲಿ ನೆತ್ತರು ಹರಿಸೋಕೆ ಐಸಿಸ್​ ಮುಂದಾಗಿದೆ. ಇದಕ್ಕೆ ಉಗ್ರರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಾಥ್​ ನೀಡ್ತಿದ್ದಾನೆ. ಯಾಕೆ ಗೊತ್ತಾ..? ತನ್ನನ್ನ ಅರೆಸ್ಟ್ ಮಾಡ್ಬೇಕು ಅಂತ ಸ್ಕೆಚ್ ಹಾಕಿರೋ ಮೋದಿ ಮೇಲಿನ ಸೇಡಿಗಾಗಿ ಕಣ್ರಿ..

    ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಐಸಿಸ್​ ಉಗ್ರರು ಆಲ್ರೆಡಿ ಭಾರತದೊಳಗೆ ಕಾಲಿಟ್ಟಿದ್ದಾರೆ. ಒಂದು ಸಂಘಟನೆಯನ್ನ ಮಾಡ್ಕೊಂಡು, ಭಯಾನಕ ದಾಳಿ ನಡೆಸೋದಕ್ಕೆ ಸ್ಕೆಚ್ ಹಾಕಿದ್ದಾರೆ. ಅದ್ರಲ್ಲಿ ಕರ್ನಾಟಕದ ಒಬ್ಬ ವ್ಯಕ್ತಿ ಕೂಡ ಶಾಮೀಲಾಗಿದ್ದಾನೆ. ಯಾರವನು? ಮುಂದಿದೆ ಓದಿ ಅವನ ಜಾತಕ
-----------------------------------------
ಭಾರತದಲ್ಲಿ ಐಸಿಸ್​ ಉಗ್ರರು ತಮ್ಮ ಸಾಮ್ರಾಜ್ಯ ವಿಸ್ತರಣೆ ಮಾಡ್ತಿದ್ದಾರೆ. ಅದಕ್ಕೆ ನಾಯಕ ಯಾರ್ ಗೊತ್ತಾ..? ಕರ್ನಾಟಕದ ವ್ಯಕ್ತೀನೇ.. ಭಾರತದಲ್ಲಿ ಐಸಿಸ್​​ ಉಗ್ರರ ಭೀಕರ ದಾಳಿಗೆ ಬೇಕಾದ ಎಲ್ಲಾ ಸಪೋರ್ಟ್​ ನೀಡ್ತಾ ಇರೋದು ಆತಾನೇ.. ಯಾರು ಆ ವ್ಯಕ್ತಿ..? ಇಲ್ಲಿದೆ ನೋಡಿ ಆ ಡೀಟೇಲ್ಸ್..

    ನಿಜ.. ಇದು ಕರ್ನಾಟಕವನ್ನೇ ಬೆಚ್ಚಿ ಬೀಳಿಸೋ ವಿಷ್ಯ ಕಣ್ರಿ.. ಭಾರತದಲ್ಲಿ ಆಲ್ರೆಡಿ ಐಸಿಸ್​ ಉಗ್ರರು ತಮ್ಮ ಜಾಲ ವಿಸ್ತರಣೆ ಮಾಡಿದ್ದಾರೆ. ಯಾರಿಗೂ ಗೊತ್ತಿಲ್ಲದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಐಸಿಸ್​ ಉಗ್ರರ ನೇಮಕ ನಡೀತಿದೆ. ಈ ನೇಮಕಾತಿಯನ್ನ ಮಾಡ್ತಾ ಇರೋದು ಬೇರೆ ಯಾರೂ ಅಲ್ಲ.. ಇಂಡಿಯನ್ ಮುಜಾಹಿದ್ದೀನ್ ಅನ್ನೋ ಉಗ್ರ ಸಂಘಟನೆ..
   
    ಹೌದು.. ಐಸಿಸ್​ ಉಗ್ರರ ಜೊತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸಾಥ್​​ ನೀಡಿದೆ. ಇದ್ರ ಮುಖ್ಯಸ್ಥನಾಗಿ ಭಾರತದಲ್ಲಿ ಐಸಿಸ್​ ಉಗ್ರರನ್ನ ನೇಮಕ ಮಾಡ್ತಿರೋದು ಬೇರೆ ಯಾರೂ ಅಲ್ಲ.. ಕರ್ನಾಟಕ ಮೂಲದ ಮೊಹಮದ್ ಶಫಿ..

ಯಸ್.. ಇಲ್ಲಿ ಫೋಟೋದಲ್ಲಿ ಕಾಣ್ತಾ ಇದ್ದಾನಲ್ಲಾ.. ಇವ್ನ ಹೆಸ್ರು ಮೊಹಮದ್ ಸುಲ್ತಾನ್​ ಆರ್ಮರ್​​.. ಐಸಿಸ್​ ಉಗ್ರ ಸಂಘಟನೆ ಸೇರ್ಬೇಕು ಅಂತ ಸಿರಿಯಾಗಿ ಹೋಗಿ, ಅಲ್ಲೇ ಜೀವ ಬಿಟ್ಟಿದ್ದಾನೆ..  ಇವ್ನ ಸಹೋದರಾನೇ ಕಣ್ರಿ ಮೊಹಮದ್ ಶಫಿ.. ಇಡೀ ಭಾರತದಲ್ಲಿ ಐಸಿಸ್​ ಉಗ್ರರನ್ನ ನೇಮಕ ಮಾಡಿಕೊಳ್ತಾ, ಭಾರತದಲ್ಲಿ ದಾಳಿ ನಡೆಸೋಕೆ ರೆಡಿಯಾಗ್ತಿರೋದು ಇವ್ರ ಸೋದರಾನೇ..

    ಮಧ್ಯಪ್ರದೇಶದಲ್ಲಿ ಮಿಂಚಿನ ದಾಳಿ ನಡೆಸಿದ ಪೊಲೀಸರು, ಐವರು ಐಸಿಸ್​ ಉಗ್ರರನ್ನ ಬಂಧಿಸಿದ್ದಾರೆ. ಅದ್ರಲ್ಲಿ ಈ ಆರ್ಮರ್​​ನ ಸೋದರ ಮೊಹಮದ್ ಶಫಿ ಕೂಡ ಸಿಕ್ಕಾಕೊಂಡಿದ್ದಾನೆ. ಅತನನ್ನ ವಿಚಾರಣೆಗೆ ಒಳಪಡಿಸಿದಾಗ, ಉಗ್ರ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ಭಾರತದಲ್ಲಿ ಐಸಿಸ್ ಸಂಘಟನೆ ಹುಟ್ಕೊಂಡಿದೆ. ನಾನೇ ಅದನ್ನ ಹುಟ್ಟು ಹಾಕಿದ್ದು.. ಈಗಾಗ್ಲೇ ಹಲವರನ್ನ ಆ ಸಂಘಟನೆಗೆ ಸೇರಿಸಿಕೊಳ್ಳಲಾಗಿದೆ ಅಂತ ಹೇಳಿದ್ದಾನಂತೆ.

    ಇನ್ನೊಂದು ಆಘಾತಕಾರಿ ಸತ್ಯ ಅಂದ್ರೆ, ಭಾರತದಲ್ಲಿ ಬಂಧನಕ್ಕೀಡಾದ ಉಗ್ರರು, ಸಿರಿಯಾದಲ್ಲಿರೋ ಐಸಿಸ್​ ಉಗ್ರರ ಜೊತೆ ಇಂಟರ್​ನೆಟ್​ ಮೂಲಕ ನೇರವಾಗಿ ಮಾತನಾಡಿದ್ದಾರಂತೆ. ಭಾರತದಲ್ಲಿ ಏನೆಲ್ಲಾ ವಿಧ್ವಂಸಕ ಕೃತ್ಯಗಳನ್ನ ಎಸಗಬೇಕು ಅಂತೆಲ್ಲಾ, ಸಿರಿಯಾ ಉಗ್ರರ ಜೊತೆ ಚರ್ಚೆ ಮಾಡಿದ್ದಾರಂತೆ. ಇನ್ನೇನು ಆ ಪ್ಲಾನ್ ಸಕ್ಸಸ್ ಆಗ್ಬೇಕು.. ಅಷ್ಟ್ರಲ್ಲೇ ಪೊಲೀಸ್ರು ಇವ್ರ ಬಾಲಾನ ಕಟ್ ಮಾಡಿದ್ದಾರೆ.

    ಆದ್ರೆ ಇಷ್ಟಕ್ಕೆ ಐಸಿಸ್​ ಉಗ್ರರ ಕಥೆ ಮುಗೀತು ಅಂತ ಅನ್ಕೋಬೇಡಿ.. ಈಗ 40 ಮಂದಿ ಭಾರತೀಯರನ್ನ ಐಸಿಸ್​ ಉಗ್ರರು ಕಿಡ್ನ್ಯಾಪ್ ಮಾಡಿದ್ದಾರೆ. ಭಾರತ ಏನಾದ್ರೂ ಐಸಿಸ್​ ಉಗ್ರರನ್ನ ಮಟ್ಟ ಹಾಕೋದಕ್ಕೆ ಕಠಿಣ ನಿರ್ಧಾರ ತಗೊಳ್ತು ಅಂದ್ರೆ, ತಮ್ಮ ಕೈನಲ್ಲಿರೋ 40 ಭಾರತೀಯರನ್ನ ಬರ್ಬರವಾಗಿ ಕೊಂದು ಮುಗಿಸ್ತಾರೆ ಈ ಐಸಿಸ್​ ಉಗ್ರರು..

    ಭಾರತದ ಪರಿಸ್ಥಿತಿ ಈಗ ಕತ್ತಿ ಮೇಲೆ ನಡೆದಂತೆ.. ಆತುರದಲ್ಲಿ ಯಾವ ನಿರ್ಧಾರಾನೂ ತರಗೊಳ್ಳೋ ಹಾಗಿಲ್ಲ.. ಆದ್ರೆ ಐಸಿಸ್​ ಉಗ್ರರನ್ನ ಮಟ್ಟ ಹಾಕ್ದೇ ಇರೋಕೂ ಆಗಲ್ಲ.. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಯಾವ ನಿರ್ಧಾರ ತಗೊಳ್ತಾರೋ ಕಾದು ನೋಡ್ಬೇಕು..
-------------------------------
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು