ಸಿನೆಮಾ

Share This Article To your Friends

ಮಗನ್ನೇ ಕತ್ತರಿಸಿ ತಾಯಿಗೆ ತಿನ್ನಿಸಿದರು

ಐಸಿಸ್​ ಉಗ್ರರು.. ಭೂಮಿಯ ಮೇಲೆ ಹುಟ್ಟಿರೋ ಯಮನ ಏಜೆಂಟರು.. ಅವ್ರ ಮನಸ್ಥಿತಿ ಎಂಥ ವಿಕೃತವಾಗಿದೆ ಅನ್ನೋದು ನಿಮ್ಗೇ ಗೊತ್ತಿಲ್ಲ.. ಇವತ್ತು ಆ ಭೀಕರ ಮತ್ತು ವಿಕೃತ ಮನಸ್ಥಿತಿಯನ್ನು ಬಿಚ್ಚಿಡ್ತೀವಿ.. ಅದನ್ನು ನೋಡಿದ್ರೆ, ನಿಜಕ್ಕೂ ನೀವು ಬೆಚ್ಚಿ ಬೀಳ್ತೀರ.. ಮಗನನ್ನೇ ತುಂಡು ತುಂಡಾಗಿ ಕತ್ತರಿಸಿ, ತಾಯಿಗೆ ತಿನ್ನಿಸಿದ್ದಾರೆ.
---------------------------------------------------
ಜಗತ್ತನ್ನೇ ಬೆಚ್ಚಿ ಬೀಳಿಸಿದೆ ಐಸಿಸ್ ಉಗ್ರರ ಅಟ್ಟಹಾಸ..!
ಮಗನನ್ನ ಕಡಿದು ಬೇಯಿಸಿ ತಾಯಿಗೆ ತಿನ್ನಿಸಿದ ಉಗ್ರರು..!
ಇದು ಪ್ರತಿಯೊಬ್ಬ ತಾಯಿಯೂ ನೋಡಲೇಬೇಕಾದ ಸ್ಟೋರಿ..!
---------------------------------------------------

ಯಸ್​... ಈ ಸ್ಟೋರಿ ನಿಜಕ್ಕೂ ತುಂಬಾ ಭೀಕರವಾಗಿದೆ.. ಯಾಕಂದ್ರೆ ಮನುಷ್ಯ ಕುಲವನ್ನೇ ಬೆಚ್ಚಿ ಬೀಳಿಸಿದ ಐಸಿಸ್ ಉಗ್ರರ ಅಟ್ಟಹಾಸದ ಸ್ಟೋರಿ ಇದು.. ಅದ್ರಲ್ಲೂ ಹೆತ್ತ ಕರುಳನ್ನೇ ಕಿವುಚುವಂಥ ಭಯಾನಕ ಕಥೆ..

ಐಸಿಸ್ ಉಗ್ರರು ಅಂದ್ರೇನೇ ಇಡೀ ಜಗತ್ತು ಬಿಚ್ಚಿ ಬೀಳುತ್ತೆ.. ಇರಾಕ್​ ಮತ್ತು ಸಿರಿಯಾದ ಮೂಲೆಯಲ್ಲಿ ಅಟ್ಟಹಾಸಗೈತಾ ಇರೋ ಈ ಉಗ್ರರು, ಇಡೀ ಜಗತ್ತಿನಾದ್ಯಂತ ರಕ್ತಪಾತ ಮಾಡೋಕೆ ಪಣ ತೊಟ್ಟಿದ್ದಾರೆ. ಸಿಕ್ಕ ಸಿಕ್ಕವರ ರುಂಡ ಕತ್ತರಿಸಿ, ರಕ್ತದೋಕುಳಿಯಾಡ್ತಿದ್ದಾರೆ...

ಕರುಣೆ ಅನ್ನೋದು ಇವ್ರಿಗೆ ಲೆಕ್ಕಕ್ಕಿಲ್ಲ.. ಇವ್ರ ಡಿಕ್ಷನರಿಯಲ್ಲಿರೋ ಒನ್ ಅಂಡ್ ಓನ್ಲಿ ಪದ ಅಂದ್ರೆ, ಅದು ಕ್ರೌರ್ಯ ಕಣ್ರಿ.. 2000 ರಲ್ಲಿ ಶುರುವಾದ ಈ ಸಂಘಟನೆ, ಜಸ್ಟ್ 2 ವರ್ಷದ ಹಿಂದಷ್ಟೇ ಐಸಿಸ್ ಅಂತ ಹೆಸರು ಬದಲಾಯಿಸಿಕೊಂಡು, ಜಗತ್ತಿನಾದ್ಯಂತ ವಿಕೃತ ರಕ್ತಪಾತಕ್ಕೆ ಮುಂದಾಗಿದೆ. ಜಗತ್ತನ್ನೇ ಮುಸ್ಲಿಂಮಯ ಮಾಡ್ಬೇಕು ಅಂತ ಹೊರಟಿರೋ ಈ ಉಗ್ರರು, ಇದಕ್ಕೆ ಧರ್ಮ ಯುದ್ಧ ಅಂತ ಹೆಸರಿಟ್ಟು ಇಡೀ ಭೂಮಂಡಲವನ್ನೇ ಸ್ಮಶಾನ ಮಾಡೋಕೆ ಹೊರಟಿದ್ದಾರೆ.. ಮೊದಲಿಗೆ ಈ ಕಿರಾತಕರ ಕೈಗೆ ಸಿಕ್ರೆ, ಇವ್ರು ಕೊಡೋ ಟಾರ್ಚರ್​ ಅಂತಿಂಥದ್ದಲ್ಲ.. ಬೇಕಾಬಿಟ್ಟಿ ಅವ್ರ ಮೇಲೆ ಹಲ್ಲೆ ಮಾಡಿ, ಆಮೇಲೆ ಅವ್ರ ಸಾವಿಗೆ ಮುಹೂರ್ತ ಫಿಕ್ಸ್ ಮಾಡ್ತಾರೆ. ಆಮೇಲೆ ಕೇಸರಿ ಬಣ್ಣದ ಬಟ್ಟೆ ತೊಡಿಸಿ ಅವ್ರನ್ನ ಕತ್ತು ಕೂಯ್ದು ಹತ್ಯೆ ಮಾಡೋದೇ ಇವ್ರ ಸ್ಟೈಲ್​..

ಅಮೆರಿಕದ ಪತ್ರಕರ್ತರು, ಮಿಲಿಟರಿ ಸೈನಿಕರು ಇವ್ರ ಕೈಗೆ ಸಿಕ್ರೇ, ಸ್ವಲ್ಪಾನೂ ಕರುಣೇನೇ ಇಲ್ದೇ ಅವರ ಕತ್ತನ್ನ ಕತ್ತರಿಸಿ ಹಾಕ್ತಾರೆ.. ಆ ಮೂಲಕ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾಗೆ ಎಚ್ಚರಿಕೆ ಸಂದೇಶ ನೀಡ್ತಿದ್ದಾರೆ.

ಜಪಾನ್, ರಷ್ಯಾ, ಬ್ರಿಟನ್​ನ ಪ್ರಜೆಗಳು ಈ ಐಸಿಸ್ ಉಗ್ರರ ಕೈಗೆ ಸಿಕ್ಕು, ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ ಕಣ್ರಿ.. ಯಾವ ದೇಶದವರು ಇವ್ರ ಕೈಗೆ ಸಿಕ್ಕರೂ, ಅವ್ರ ಕತ್ತನ್ನು ಬರ್ಬರವಾಗಿ ಸೀಳು ಹಾಕ್ತಾರೆ ಈ ಐಸಿಸ್ ಉಗ್ರರು.. ಇದೆಲ್ಲದಕ್ಕಿಂತ ಬಹಳ ಘೋರವಾದ ವಿಕೃತ ಸಾವು ಅಂದ್ರೆ, ಅದು ಜೋರ್ಡಾನಿಯನ್ ಪ್ರದೇಶದ ಈ ಪೈಲಟ್​ದು ಕಣ್ರಿ.. ಐಸಿಸ್ ಉಗ್ರರ ವಿರುದ್ಧ ಅಮೆರಿಕದ ಸೇನೆ ಜೊತೆಗೆ ಕಾರ್ಯಾಚರಣೆಗೆ ಇಳಿದಿದ್ದ ಈ ಪೈಲಟ್​ನನ್ನ, ಐಸಿಸ್ ಉಗ್ರರು ಜೀವಂತವಾಗಿ ಸುಟ್ಟು ಹಾಕಿದ್ರು..

ಇನ್ನು ಇದಕ್ಕಿಂತ ಭಯಾನಕವಾಗಿ ಹತ್ಯೆಯಾಗಿದ್ದು, ಈಜಿಪ್ಟ್​​ನ ಈ 21 ಮಂದಿ ಕ್ರಿಶ್ಚಿಯನ್ನರು.. ಇದೇ ಫೆಬ್ರವರಿ 15 ನೇ ತಾರೀಕು ಕಣ್ರಿ.. ಇವರನ್ನು ಲಿಬಿಯಾದ ಕರಾವಳಿ ತೀರಕ್ಕೆ ಕರ್ಕೊಂಡ್ ಹೋಗಿ, ಸಾಮೂಹಿಕವಾಗಿ ಕತ್ತು ಕೂಯ್ದು 21 ಮಂದಿಯ ಹತ್ಯೆ ಮಾಡಿದ್ದಾರೆ. ಇನ್ನು ಇವ್ರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ ಸಿರಿಯಾದ 250 ಕ್ಕೂ ಹೆಚ್ಚು ಸೈನಿಕರನ್ನು ಕೂಡ ಐಸಿಸ್ ಉಗ್ರರು ಸುಮ್ನೇ ಬಿಟ್ಟಿಲ್ಲ.. ಅವ್ರೆಲ್ಲರನ್ನೂ ಬಂಧಿಸಿ, ಅವ್ರ ಬಟ್ಟೆ ಬಿಚ್ಚಿ ಪೆರೇಡ್ ಮಾಡಿಸಿದೆ. ಆಮೇಲೆ ಅವ್ರನ್ನು ಸಾಮೂಹಿಕವಾಗಿ ಅರೆಬೆತ್ತಲೆಯಾಗಿ ಒಂದ್ಕಡೆ ಮಲಗಿಸಿ, ಗುಂಡು ಹಾರಿಸಿದ್ದಾರೆ. ಉಗ್ರರ ಗುಂಡಿಗೆ ಬಲಿಯಾದ 250 ಮಂದಿ ಸೈನಿಕರನ್ನು, ಅಲ್ಲೇ ಹಳ್ಳ ತೋಡಿ ಮಣ್ಣಲ್ಲಿ ಮುಚ್ಚಿ ಬಿಟ್ಟಿದ್ದಾರೆ.

ಇಷ್ಟಕ್ಕೆ ಮುಗಿಯೋದಿಲ್ಲ ಕಣ್ರಿ ಈ ಐಸಿಸ್ ಉಗ್ರರ ಪಾಪದ ಕೆಲಸಗಳು.. ಇದಾದ ಜಸ್ಟ್ ಎರಡೇ ದಿನಕ್ಕೆ, ಮತ್ತೆ 45 ಮಂದಿಯನ್ನ ಜೀವಂತವಾಗಿ ಸುಟ್ಟು ಹಾಕಿದೆ. ಇರಾಕ್​ ಮಿಲಿಟರಿ ಸೈನಿಕರನ್ನು ಬಂಧಿಸಿದ ಐಸಿಸ್ ಉಗ್ರರು, ಅವರನ್ನು ಬೋನ್​ನಲ್ಲಿ ಕೂಡಿ ಹಾಕಿ, ಅವರ ಬದುಕಿಗೇ ಬೆಂಕಿ ಇಟ್ಟಿದ್ದಾರೆ.  ಕೇವಲ ಇರಾಕ್​ನಲ್ಲಿ ಬೇರು ಬಿಟ್ಟಿದ್ದ ಈ ಐಸಿಸ್ ಉಗ್ರರು, ಈಗ ಸಿರಿಯಾವನ್ನೂ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಕಣ್ರಿ.. ಹೀಗೇ ದಿನದಿಂದ ದಿನಕ್ಕೆ, ತಮ್ಮ ಉಗ್ರ ಸಾಮ್ರಾಜ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸೋದಕ್ಕೆ ಸಜ್ಜಾಗಿದ್ದಾರೆ.

ತಮ್ಮ ಎದುರಾಳಿಯನ್ನು ಕತ್ತು ಕೂಯ್ದು ಹತ್ಯೆ ಮಾಡೋದು.. ಬೋನ್​ನಲ್ಲಿ ಕೂಡಿ ಹಾಕಿ ಜೀವಂತವಾಗಿ ಬೆಂಕಿ ಇಟ್ಟು ಸಾಯಿಸೋದು... ಎಲ್ಲರನ್ನೂ ಸಾಮೂಹಿಕವಾಗಿ ಮಲಗಿಸಿ, ಗುಂಡು ಹಾರಿಸೋದು.. ಮತ್ತು ಆ ಭೀಕರ ಮತ್ತು ಭಯಾನಕ ಘಟನೆಯನ್ನು ವಿಡಿಯೋ ಮಾಡಿ, ಜಗತ್ತನ್ನು ಬೆಚ್ಚಿ ಬೀಳಿಸೋದು ಐಸಿಸ್ ಉಗ್ರರ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿ ಕಣ್ರಿ.. ಇಂಥ ವಿಕೃತ ಮನಸ್ಥಿತಿಯವ್ರು ಈ ಐಸಿಸ್ ಉಗ್ರರು..

ಇದಕ್ಕಿಂತ ಭೀಕರ ಮತ್ತು ವಿಕೃತ ಮನಸ್ಥಿತಿ ಈ ಐಸಿಸ್ ಉಗ್ರರದ್ದು ಅನ್ನೋದಕ್ಕೆ, ಮತ್ತೊಂದು ಘಟನೆ ಸಾಕ್ಷಿಯಾಗಿ ನಿಂತಿದೆ. ಸ್ವಂತ ಮಗನನ್ನೇ ತುಂಡು ತುಂಡಾಗಿ ಕತ್ತರಿಸಿ, ಹೆತ್ತ ತಾಯಿಗೆ ಊಟಕ್ಕೆ ಕೊಟ್ಟ ಘನ ಘೋರ ಘಟನೆ ಕೂಡ ನಡೆದಿದೆ. ಐಸಿಸ್ ಉಗ್ರರ ಅಟ್ಟಹಾಸ ಮತ್ತು ವಿಕೃತ ಮನಸ್ತಿತಿ ಯಾವ ಮಟ್ಟಕ್ಕೆ ಇದೆ ಅದ್ರೆ, ಸ್ವಂತ ಮಗನನನ್ನು ತುಂಡು ತುಂಡಾಗಿ ಕತ್ತರಿಸಿ, ಅದನ್ನು ಆತನ ತಾಯಿಗೆ ಊಟಕ್ಕೆ ಬಡಿಸಿದ್ದಾರೆ. ಅಸಲಿಗೆ ಆ ಘಟನೆ ನಡೆದಿದ್ದು ಹೇಗೆ? ಮುಂದೆ ಓದಿ
--------------------------------------------

ಒಂದ್ ಪಕ್ಷ ದೇಹಿ ಅಂಥ ಬೇಡ್ಕೊಂಡ್ರೆ, ಸಾಕ್ಷಾತ್ ಆ ಯಮ ಕೂಡ ಕರಗಿ ಬಿಡ್ಬೋದೇನೋ.. ಆದ್ರೆ ಈ ಐಸಿಸ್ ಉಗ್ರರು ಮಾತ್ರ, ಯಮನಿಗಿಂತಲೂ ಡೇಂಜರಸ್​.. ತನ್ನ ಕರುಳ ಕುಡಿಯನ್ನೇ ತುಂಡು ತುಂಡಾಗಿ ಕತ್ತರಿಸಿ, ತಾನು ಹೆತ್ತ ತಾಯಿಗೇ ಊಟಕ್ಕೆ ಕೊಟ್ಟು ವಿಕೃತಿ ಮೆರೆದ ರಕ್ತಪಿಪಾಸುಗಳು.. ಆ ಮನ ಕಲುಕುವ ಘೋರ ಘಟನೆ ಇಲ್ಲಿದೆ ನೋಡಿ..

ಹೌದು... ಈ ಐಸಿಸ್ ಉಗ್ರರು ಯಮನಿಗಿಂತಲೂ ವಿಕೃತ ಮನಸ್ಥಿತಿಯವ್ರು.. ಒಂದ್ ಪಕ್ಷ ಯಮನಿಂದ ಬಚಾವ್ ಆಗ್ಬಹುದೇನೋ.. ಆದ್ರೆ ಈ ಐಸಿಸ್ ಉಗ್ರರ ಕೈಗೆ ಸಿಕ್ರೇ.. ಖಂಡಿತ ನರಕಕ್ಕಿಂತಲೂ ಘೋರ ಜಗತ್ತನ್ನು ತೋರಿಸಿ ಬಿಡ್ತಾರೆ.. ಇಂಚಿಂಚಾಗಿ.. ಭೀಕರವಾಗಿ ಕೊಂದು, ವಿಕೃತ ಮನಸ್ಥಿತಿಯನ್ನ ಮೆರೀತಾರೆ.. ಇವ್ರ ವಿಕೃತಮ ಮನಸ್ಥಿತಿಯನ್ನು ಇಡೀ ಜಗತ್ತಿಗೆ ಬಿಚ್ಚಿಟ್ಟ ವ್ಯಕ್ತಿ ಅಂದ್ರೆ, ಅದು ಇವ್ನೇ.. ಯಾಸಿರ್​​ ಅಬ್ದಲ್ಲಾ..
ಈತನ ಹೆಸ್ರು ಯಾಸಿರ್ ಅಬ್ದುಲ್ಲಾ.. ಬ್ರಿಟನ್​ ಪ್ರಜೆಯಾದ ಈತ ಕುದಿರ್ಶ್​​ ಹೋರಾಟಗಾರ.. ಐಸಿಸ್ ಉಗ್ರರ ಚಲನವಲನಗಳನ್ನ ಸೂಕ್ಷ್ಮವಾಗಿ ಗಮನಿಸ್ತಿದ್ದ ಈತನಿಗೆ, ಒಂದು ತಾಯಿಯ ಕರುಣಾಜನಕ ಕಥೆ ಐಸಿಸ್ ಉಗ್ರರ ವಿಕೃತ ಮನಸ್ಥಿತಿಯನ್ನು ಬಿಚ್ಚಿಟ್ಟಿದೆ.

ಯಸ್.. ಇತ್ತೀಚೆಗಷ್ಟೇ ಇರಾಕ್‍ನ ಹಳ್ಳಿಯೊಂದರ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ರು ಕಣ್ರಿ.. ಈ ವೇಳೆ ಅಲ್ಲಿದ್ದ ಕುರ್ದಿಶ್ ಜನಾಂಗದ ಹಲವರನ್ನು ಹೊತ್ತೊಯ್ದಿದ್ದರು. ಹೀಗೆ ಜನರನ್ನು ಹೊತ್ತೊಯ್ದ ಐಸಿಸ್ ಉಗ್ರರು, ಅವ್ರನ್ನೆಲ್ಲಾ ಜೈಲಿನಲ್ಲಿಟ್ಟು ಬಂಧಿಸಿಟ್ಟಿದ್ರು.. ಆದ್ರೆ ತಾಯಿ ಕರುಳು ಕೇಳ್ಲಿಲ್ಲ ಕಣ್ರಿ.. ಹೇಗಾದ್ರೂ ಮಾಡಿ ತನ್ನ ಕರುಳ ಕುಡಿಯನ್ನು ಬಿಡಿಸ್ಬೇಕು ಅಂತ ಗಟ್ಟಿ ನಿರ್ಧಾರ ಮಾಡಿದ್ರು.. ಐಸಿಸ್ ಉಗ್ರರು ಭಯಾನಕ ಭೀಬಿತ್ಸ ಮನಸ್ಸಿನವರು ಅಂತ ಗೊತ್ತಿದ್ರೂ, ತನ್ನ ಮಗನಿಗಾಗಿ, ಸೀದಾ ಐಸಿಸ್ ಉಗ್ರರ ಕಾರ್ಯಸ್ಥಾನವಾದ ಮಸೂಲ್‍ಗೆ ಬಂದು ಬಿಟ್ಟಿದ್ಳು..

ಇರಾಕ್ ಮತ್ತು ಸಿರಿಯಾದಲ್ಲಿ ರಕ್ತ ಹರಿಸ್ತಿರೋ ರಕ್ತ ಪಿಪಾಸುಗಳ ಹತ್ರ ಬಂದು, ಸ್ವಾಮಿ ನನ್ನ ಕರುಳ ಕುಡೀನ ನನಗೆ ಕೊಟ್ಬಿಡಿ ಅಂತ ಅಂಗಲಾಚಿ ಬೇಡ್ಕೊಂಡಿದ್ದಾಳೆ ಕಣ್ರಿ.. ಎಷ್ಟೇ ಅದ್ರೂ ಹೆತ್ತ ಕರುಳು.. ಇಂದಲ್ಲಾ ನಾಳೆ ಬಾಡಿ ಹೋಗೋ ತನ್ನ ಜೀವಕ್ಕಿಂತ, ಬಾಳಿ ಬದುಕಬೇಕಾದ ತನ್ನ ಮಗನ ಜೀವ ಮುಖ್ಯ ಅಂತ, ಈ ಕ್ರೂರಿಗಳ ಹತ್ರ ಬಂದು, ಕಾಲಿಗೆ ಬಿದ್ದು ಬೇಡ್ಕೊಂಡಿದ್ದಾಳೆ.. ಈ ತಾಯಿಯ ಕಣ್ಣೀರಿಗೆ ಕರಗಿದಂತೆ ನಟಿಸಿದ ಐಸಿಸ್ ಉಗ್ರರು, ಆಕೆಯನ್ನು ಸಮಾಧಾನ ಮಾಡೋ ನಾಟ್ಕ ಆಡಿದ್ದಾರೆ..

ಅಮ್ಮಾ.. ನೀವು ದೂರದಿಂದ ಬಂದಿದ್ದೀರಿ.. ಸ್ವಲ್ಪ ಇಲ್ಲೇ ಕೂತ್ಕೊಂಡು ರೆಸ್ಟ್ ಮಾಡಿ.. ಹೊಟ್ಟೆ ತುಂಬಾ ಊಟ ಮಾಡಿ.. ಆಮೇಲೆ ನಾವು ನಿಮ್ಮ ಮಗನನ್ನ ನಿಮಗೆ ಒಪ್ಪಿಸ್ತೀವಿ ಅಂತ ಹೇಳಿದ್ದಾರೆ.. ಪಾಪ ಕಿರಾತಕರು ಹೇಳಿದ ಮಾತನ್ನ ನಂಬಿದ ಆ ತಾಯಿ ಕರುಳು, ಅಲ್ಲೇ ಕೂತ್ಕೊಂಡು ರೆಸ್ಟ್ ತಗೊಳ್ತಾ ಇದ್ಳು ಕಣ್ರಿ.. ಅಷ್ಟ್ರಲ್ಲೇ ಐಸಿಸ್ ಉಗ್ರರು ಈ ತಾಯಿಗೆ ಕಾಫಿ ಟೀ ತಂದು ಕೊಡ್ತಾರೆ.. ಅದಾದ ನಂತರ ಊಟಕ್ಕೆ ಮಾಂಸದ ಅಡುಗೇನ ತಂದಿಡ್ತಾರೆ..


ಅಪ್ಪಾ ಇದೆಲ್ಲಾ ನಂಗೆ ಬೇಕಿಲ್ಲ.. ನಂಗೆ ನನ್ ಮಗ ಬೇಕು.. ದಯವಿಟ್ಟು ನನ್ ಮಗನನ್ನ ನಂಗೆ ಕೊಟ್ಬಿಡಿ ಅಂತ ಕೇಳಿದಾಗ, ಐಸಿಸ್ ಉಗ್ರರು ಏನ್ ಹೇಳ್ತಾರೆ ಗೊತ್ತೇನ್ರಿ..? ನೀವು ದೂರದಿಂದ ಬಂದು ಸುಸ್ತಾಗಿದ್ದೀರ.. ಊಟ ತಿಂಡಿ ಮಾಡಿ.. ಆಮೇಲೆ ನಿಮ್ಮ ಮಗನನ್ನ ಕರ್ಕೊಂಡು ಬಂದು ಬಿಡ್ತೀವಿ ಅಂತ ಹೇಳಿದ್ದಾರೆ.. ಉಗ್ರರು ಇಷ್ಟೋಂದು ಉಪಚಾರ ಮಾಡ್ತಿರೋದನ್ನು ನೋಡಿ, ಇವ್ರಲ್ಲೂ ಒಳ್ಳೇವ್ರಿದ್ದಾರೆ ಅಂತ ಅಂದುಕೊಂಡಿತ್ತು ಕಣ್ರಿ ಆ ತಾಯಿ ಕರುಳು.. ದೂಸ್ರಾ ಮಾತಾಡದೇ, ಅವ್ರು ತಂದಿಟ್ಟಿದ್ದ ಮಾಂಸದ ಅಡುಗೆಯನ್ನು ಹೊಟ್ಟೆ ತುಂಬಾ ತಿಂದಿದ್ದಾಳೆ..

ಊಟ ಮುಗಿದ ನಂತರ,  ತನ್ನ ಮಗನನ್ನು ತೋರಿಸಿ ಅಂತ ಕೇಳಿದ್ದಾಳೆ ಈ ತಾಯಿ.. ಆಗ ಈ ವಿಕೃತ ಮನಸ್ಥಿತಿಯ ಉಗ್ರರು ಏನ್ ಹೇಳಿದ್ರು ಗೊತ್ತೇನ್ರಿ..? ಅಯ್ಯೋ ಮುದುಕಿ.. ನಿನ್ನ ಮಗನನ್ನ ಈಗ ನೀನೇ ತಿಂದ್ಯಲ್ಲ.. ನಿನ್ನ ಮಗನನ್ನ ನೀನೇ ತಿಂದು, ಈಗ ನನ್ ಮಗನನ್ನ ತೋರಿಸಿ ಅಂತ ಹೇಳಿದ್ರೆ, ನಾವೆಲ್ಲಿಂದ ತೋರಿಸ್ಲಿ ಅಂತ ಹೇಳಿ, ಗಹಗಹಿಸಿ ನಕ್ಕು ಬಿಟ್ರಂತೆ..
ಸ್ವಂತ ಕರುಳ ಕುಡಿಯನ್ನೇ ತುಂಡು ತುಂಡಾಗಿ ಕತ್ತರಿಸಿ, ಮಾಂಸದ ಅಡುಗೆ ಮಾಡಿ, ಅದನ್ನ ಆತನ ಹೆತ್ತ ತಾಯಿಗೇ ತಿನ್ನಿಸಿ, ವಿಕೃತ ಮೆರೆದಿದ್ರು ಈ ಐಸಿಸ್ ಉಗ್ರರು..ತಾನು ಹೆತ್ತ ಮಗನನ್ನ ತಾನೇ ತಿಂದು ಬಿಟ್ಟಿದ್ದೀನಿ ಅಂತ ಗೊತ್ತಾಗ್ತಿದ್ದಂತೆ, ಆ ತಾಯಿ ಉಸಿರೇ ನಿಂತು ಹೋಗಿತ್ತು ಕಣ್ರಿ ಒಂದ್ ಕ್ಷಣ.. ಐಸಿಸ್ ಉಗ್ರರು ಎಂಥಾ ವಿಕೃತ ಮನಸ್ತಿತಿಯವ್ರು ಅನ್ನೋದಕ್ಕೆ ಈ ಒಂದು ಘಟನೆನೇ ಸಾಕ್ಷಿ ಕಣ್ರಿ.. ಇಡೀ ಜಗತ್ತಿನಲ್ಲಿ ಸ್ವಂತ ಕಂದಮ್ಮನನ್ನು ಬೇಯಿಸಿ ತಿಂದ ಮೊಟ್ಟ ಮೊದಲ ಘಟನೆ ಇದು.. 

ಆ ತಾಯಿ ಈ ಘಟನೆಯನ್ನು ಯಾಸಿರ್​ ಅಬ್ದುಲ್ಲಾಗೆ ಹೇಳಿ ಕಣ್ಣೀರಿಟ್ಟಿದ್ಳು.. ಈ ಘನ ಘೋರವಾದ ಕಥೆ ಕೇಳಿದ ಅಬ್ದುಲ್ಲಾಗೇ ನಿಜಕ್ಕೂ ಕರುಳೇ ಕಿತ್ತು ಬಂದಿತ್ತು.. ವಿಕೃತ ಮನಸ್ಥಿತಿಯ ರಕ್ತ ಪಿಪಾಸುಗಳನ್ನ ಸದೆ ಬಡೀಬೇಕು ಅಂತ ಆಗ್ಲೇ ನಿರ್ಧಾರ ಮಾಡಿದ್ರು ಕಣ್ರಿ,..  ಆ ಕ್ಷಣದಿಂದ್ಲೇ ಸೇನೆಯ ಜೊತೆ ಸೇರಿ, ಐಸಿಸ್ ವಿರುದ್ಧದ ಹೋರಾಟಕ್ಕೆ ಇಳಿದು ಬಿಟ್ಟಿದ್ರು..


ಇದೊಂದೇ ಅಲ್ಲ.. 2011 ರಲ್ಲಿ ಒಂದು ಘಟನೆ ನಡೆದಿತ್ತು.. ಐಸಿಸ್ ಉಗ್ರರ ಕೈಗೆ ಸಿಕ್ಕ ವ್ಯಕ್ತಿಯನ್ನ, ತುಂಬಾನೇ ವಿಕೃತವಾಗಿ ಹಿಂಸಿಸಿದ್ರು.. ನೀವೇನಾದ್ರೂ ಆ ದೃಶ್ಯ ನೋಡಿದ್ರೆ, ನಿಜಕ್ಕೂ ಬೆಚ್ಚಿ ಬೀಳ್ತೀರ.. ಮುಂದೆ ಓದಿ
------------------------------
ಮಗನನ್ನು ಕಡಿದು ಹೆತ್ತ ತಾಯಿಗೆ ತಿನ್ನಿಸಿದ ವಿಕೃತ ಮನಸ್ಥಿತಿಯವ್ರು ಐಸಿಸ್ ಉಗ್ರರು.. ಆದ್ರೆ ಅವ್ರ ವಿಕೃತಿ ಇಷ್ಟಕ್ಕೆ ನಿಲ್ಲೋದಿಲ್ಲ.. ಇದಕ್ಕಿಂತಲೂ ಭಯಾನಕವಾದ ವಿಕೃತ ಮನಸ್ಥಿತಿಯನ್ನು ಬಿಚ್ಚಿಡೋ ಸ್ಟೋರಿ ಮುಂದಿದೆ ಓದಿ

ಭೂಲೋಕದಲ್ಲಿ ಯಮನ ಏಜೆಂಟರಂತೆ ಗುರ್ತಿಸಿಕೊಂಡಿರೋ ಐಸಿಸ್ ಉಗ್ರರು ತುಂಬಾನೇ ಡೇಂಜರಸ್ ಕಣ್ರಿ.. ಇವ್ರ ಅಟ್ಟಹಾಸಕ್ಕೆ ನಲುಗಿದ ಜೀವಗಳ ಬಗ್ಗೆ ಲೆಕ್ಕಾನೇ ಇಲ್ಲ.. ಗಂಡಸ್ರು.. ಹೆಂಗಸ್ರೂ ಯಾರ್ ಸಿಕ್ಕಿದ್ರೂ ಇವ್ರು ಬಿಡೋದಿಲ್ಲ ಕಣ್ರಿ.. ಚಿತ್ರ ವಿಚಿತ್ರವಾಗಿ ಅವ್ರ ಜೀವ ಹಿಂಡ್ತಾರೆ.. ಮಗನನ್ನು ಕೊಂದು ತಾಯಿಗೆ ತಿನ್ನಿಸಿದ ಘೋರ ಮನಸ್ಥಿತಿಯ ಉಗ್ರರು 2011 ರಲ್ಲಿ ಇದಕ್ಕಿಂತಲೂ ವಿಕೃತ ಕೆಲಸ ಮಾಡಿದ್ರು..

ಬ್ರೆಂಡನ್​​ ಹಿಗ್ಗಿಂ ಬಾಥಮ್ ಎಂಬಾತ ಗ್ರಹಚಾರ ಕೆಟ್ಟು 2011 ರಲ್ಲಿ ಉಗ್ರರ ಕೈಗೆ ಸಿಕ್ಕಾಕೋತಾನೆ.. ಆಗ ಆತನ ಮುಖವನ್ನು ಕೂಯ್ದು ಬಿಡ್ತಾರೆ.. ಇಷ್ಟಕ್ಕೆ ಮುಗಿಯೋದಿಲ್ಲ.. ಈತನ ಕಿವಿಯನ್ನ ಕತ್ತರಿಸಿ, ಈತನಿಗೆ ತಿನ್ನಿಸಿ ವಿಕೃತಿ ಮೆರೆದಿದ್ದಾರೆ..

ಇನ್ನು ಐಸಿಸ್ ಉಗ್ರರ ಕೈಗೆ ಸಿಕ್ಕ ಈಕೆ ಕೈನಿಂದಲೇ, ತನ್ನ ಮಕ್ಕಳ ಚರ್ಮ ಸುಲಿಸಿದ್ದಾರೆ ಕಿರಾತಕರು.. ಮತ್ತೊಮ್ಮೆ, ವ್ಯಕ್ತಿಯೋರ್ವನ ಕೈ ಬೆರಳುಗಳನ್ನು ತುಂಡು ತುಂಡಾಗಿ ಕತ್ತರಿಸಿ, ಬರ್ಗರ್​ನಲ್ಲಿ ಇಟ್ಟು ಆತನಿಗೆ ತಿನ್ನೋದಕ್ಕೆ ಕೊಟ್ಟಿರೋ ಉದಾಹರಣೆ ಕೂಡ ಇದೆ.

ಇಂಥಾ ವಿಕೃತ ಮನಸ್ಥಿತಿಯ ಐಸಿಸ್ ಉಗ್ರರ ನಡುವೇನೇ ಈಗ ಒಳಜಗಳ ಶುರುವಾಗಿದೆ. ತಮ್ಮ ತನುವಿನ ದಾಹಕ್ಕಾಗಿ ಹೆಣ್ಣುಮಕ್ಕಳನ್ನ ಸಪ್ಲೈ ಮಾಡಿ ಅಂತ, ಐಸಿಸ್ ನಾಯಕನ ವಿರುದ್ಧ ಕಿಡಿ ಕಾರ್ತಿದ್ದಾರೆ..

ಹೌದು.. ಇದು ನಿಜ.. ಐಸಿಸ್ ಉಗ್ರರ ಕಾಮಾಂಧತೆ ಮಿತಿ ಮೀರಿದೆ. ತಮ್ಮನ್ನು ತಾವು ಕಂಟ್ರೋಲ್ ಮಾಡ್ಕೊಳ್ಳೋಕೆ ಅಗದ ಮಟ್ಟಿಗೆ ಅವರ ಮನಸ್ಥಿತಿ ವಿಕೃತವಾಗಿದೆ. ಅದಿಕ್ಕಾಗಿ ತಮ್ಮ ಕಾಮದಾಹವನ್ನು ನೀಗಿಸೋಕೆ ಹುಡುಗಿಯರನ್ನು ಸಪ್ಲೈ ಮಾಡಿ ಅಂತ ಪಟ್ಟು ಹಿಡಿದಿದ್ದಾರೆ..

ಉಗ್ರರ ಕಾಮದಾಹವನ್ನು ನೀಗಿಸೋದಕ್ಕೆ ಮುಂದಾಗಿರೋ ಐಸಿಸ್​​ ನಾಯಕರು ಮಹಿಳೆಯರನ್ನು ಹೊತ್ತೊಯ್ತಿದೆ. ಸಿಕ್ಕ ಸಿಕ್ಕವರನ್ನು ಹೊತ್ತೊಯ್ದು, ಐಸಿಸ್​ ಉಗ್ರತಾಣದಲ್ಲಿರೋ ವೇಶ್ಯಾಗೃಹದಲ್ಲಿ ಬಂಧಿಸಿಡಲಾಗ್ತಿದೆ. ಹೀಗೆ ಐಸಿಸ್ ಉಗ್ರರ ಕಾಮತೃಷೆಗಾಗಿ ಜಗತ್ತಿನಾದ್ಯಂತ ಇರೋ ಸುಂದರ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗ್ತಿದೆ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ ಕಣ್ರಿ.. ಇದುವರೆಗೂ ಸುಮಾರು 15 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಐಸಿಸ್ ಉಗ್ರರು ಹೊತ್ತೊಯ್ದು, ತಮ್ಮ ಕಾಮತೃಶೆಗಾಗಿ ಬಳಸಿಕೊಳ್ತಿದ್ದಾರೆ..

ಅಷ್ಟೇ ಅಲ್ಲ.. ಸಾಮಾಜಿಕ ಜಾಲ ತಾಣದ ಮೂಲಕಾನೂ ಹೆಣ್ಣುಮಕ್ಕಳನ್ನ ಬಲಿ ಹಾಕ್ತಿದ್ದಾರೆ ಕಣ್ರೀ ಈ ಕಿರಾತಕರು.. ಧರ್ಮದ ಹೆಸರ್ ಹೇಳ್ಕೊಂಡು, ಹೆಣ್ಣುಮಕ್ಕಳ ಬದುಕನ್ನೇ ಬರ್ಬಾದ್ ಮಾಡ್ತಿದ್ದಾರೆ.. ನೀವು ನಿಮ್ಮ ದೇಹಾನ ಧರ್ಮದ ರಕ್ಷಣೆಗಾಗಿ ಹೋರಾಡ್ತಿರೋ ಐಸಿಸ್​ ಉಗ್ರರ ಜೊತೆ ಹಂಚಿಕೊಂಡ್ರೆ, ನೀವು ಡೈರೆಕ್ಟಾಗಿ ಸ್ವರ್ಗಕ್ಕೆ ಹೋಗ್ತೀರ.. ನಿಮಗೆ ಮುಕ್ತಿ ಸಿಗುತ್ತೆ ಅಂತೆಲ್ಲಾ ಪುಂಗಿ ಬಿಟ್ಟು, ಮುಗ್ಧ ಮನಸ್ಸುಗಳನ್ನು, ಅಮಾಯಕ ಹೆಣ್ಣುಮಕ್ಕಳನ್ನು, ತಮ್ಮ ಕಡೆ ಸೆಳೀತಾ ಇದೆ..

ಇದನ್ನು ನಂಬ್ಕೊಂಡು ಅದೆಷ್ಟೋ ಮುಗ್ಧ ಹೆಣ್ಣುಮಕ್ಕಳು ಐಸಿಸ್ ಉಗ್ರ ಸಂಘಟನೆಗೆ ಸೇರ್ಕೊಂಡಿದ್ದಾರೆ ಕಣ್ರಿ.. ತಂದೆ ತಾಯಿಯನ್ನು ಬಿಟ್ಟು, ಭವಿಷ್ಯದ ಕನಸುಗಳನ್ನು ಸುಟ್ಟು, ಅಲ್ಲಾನ ಹೆಸರಲ್ಲಿ ಈ ಉಗ್ರರು ತೋಡಿದ ಬಾವಿಗೆ ಬಿದ್ದಿದ್ದಾರೆ.

ಇಲ್ಲಿಗೆ ಬಂದ್ಮೇಲೆ ಗೊತ್ತಾಗಿದೆ ಕಣ್ರಿ.. ತಾವು ಎಂಥಾ ದೊಡ್ಡ ಕಿರಾತಕರ ಕೈಗೆ ಸಿಕ್ಕಾಕೊಂಡಿದ್ದೀವಿ ಅಂತ.. ಆದ್ರೆ ಎನ್ ಮಾಡೋದು..? ಇವ್ರಿಂದ ಬಿಡಿಸಿಕೊಂಡು ಹೋಗೋದು ಅಷ್ಟು ಸುಲಭದ ಕೆಲಸವಲ್ಲ.. ಹೀಗಾಗಿ, ತಮ್ಮ ಬದುಕಿನ ಘೋರ ಘಟನೆಯನ್ನು ನೆನೆಸಿಕೊಂಡು, ಉಗ್ರರ ವಿಕೃತ ಕಾಮದ ಮನಸ್ಥಿತಿಗೆ ನಲುಗಿ, ಇಂದಿಗೂ ಕಣ್ಣೀರು ಹಾಕ್ತಿದ್ದಾರೆ.

ಹೆಣ್ಣುಮಕ್ಕಳನ್ನ ಕಿಡ್ನ್ಯಾಪ್ ಮಾಡಿ ತಮ್ಮ ಕಾಮ ತೃಷೆಗೆ ಬಳಸಿಕೊಳ್ಳೋ ಈ ಕಿರಾತಕರು, ಗಂಡಸರನ್ನೂ ಕಿಡ್ನ್ಯಾಪ್ ಮಾಡ್ತಾರೆ. ಅದು ಯಾಕೆ ಗೊತ್ತಾ..? ಆ ಕಥೆ ನಿಜಕ್ಕೂ ಇದೆಲ್ಲದಕ್ಕಿಂತ ಭೀಕರ.. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ... ಗಂಡಸರನ್ನು ಕಿಡ್ನ್ಯಾಪ್ ಮಾಡಿ, ಅವ್ರನ್ನೂ ಕೂಡ ತಮ್ಮ ಲಾಭಕ್ಕೆ ಬಳಸಿಕೊಳ್ತಾರೆ ಕಣ್ರೀ ಇವ್ರು.. ಗಂಡಸರನ್ನು ತುಂಡು ತುಂಡಾಗಿ ಕತ್ತರಿಸಿ, ಅವರ ದೇಹದ ಕಣಕಣವನ್ನೂ ಮಾರ್ಕೊಂಡು ದುಡ್ಡು ಮಾಡ್ತಿದ್ದಾರೆ..

ಯಸ್.. ಹೀಗೆ ಕುತ್ತಿಗೆ ಕತ್ತರಿಸಿ, ಗುಂಡು ಹಾರಿಸಿ ಅಮಾಯಕರನ್ನು ಕೊಲೆ ಮಾಡಿದ ನಂತರ, ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗುತ್ತೆ.. ಆ ಮೇಲೆ ಅವ್ರ ದೇಹದ ಅಂಗಾಂಗಳನ್ನು ಸಪರೇಟ್ ಮಾಡಲಾಗುತ್ತೆ.. ಕಣ್ಣು.. ಕಿಡ್ನಿ.. ಹೃದಯ ಹೀಗೆ ದೇಹದ ಅಂಗಾಂಗಳನ್ನು ಕತ್ತರಿಸಿ ಹೊರ ದೇಶಗಳಿಗೆ ಕಳಿಸಲಾಗುತ್ತೆ.

ಹೀಗೆ ದೇಹದ ಅಂಗಾಂಗಗಳನ್ನು ಮಾರಿ ಐಸಿಸ್ ಉಗ್ರರು ತಮ್ಮ ಖಜಾನೆ ತುಂಬಿಸಿಕೊಳ್ತಿದ್ದಾರೆ ಕಣ್ರಿ..  ಇದಕ್ಕಿಂತ ನೀಚ ಮತ್ತು ಹೇಯ ಕೌರ್ಯ ಬೇರಿನ್ಯಾವುದಾದರೂ ಇದಿಯೇನ್ರೀ ಈ ಭೂಮಿ ಮೇಲೆ..!

ಇಂಥಾ ಉಗ್ರರನ್ನ ಮಟ್ಟ ಹಾಕೋದು ಅಷ್ಟು ಸುಲಭದ ಕೆಲಸವಲ್ಲ.. ಇರಾಕ್ ಮತ್ತು ಸಿರಿಯಾ ಸರ್ಕಾರಾನೇ ಇವ್ರಿಗೆ ಹೆದರ್​ಕೊಂಡು ಮೂಲೆಲಿ ಕೂತಿದೆ. ಆದ್ರೆ ಇಂಥ ಕ್ರಿಮಿಗಳನ್ನ ಮಟ್ಟ ಹಾಕೋದಕ್ಕೆ, ಅಮೆರಿಕ ಸಜ್ಜಾಗಿದೆ. ಈಗಾಗಲೇ ಪಾಪಿಗಳ ನಾಡಿಗೆ ಲಗ್ಗೆ ಇಟ್ಟ ಅಮೆರಿಕ ಸೇನಾಪಡೆ, ಉಗ್ರರ ಅಡಗುತಾಣಗಳನ್ನು ಹುಡುಕಿ ಹುಡುಕಿ ನಾಶ ಮಾಡ್ತಿದೆ.

ಇವೆಲ್ಲವನ್ನೂ ನೋಡಿದ್ಮೇಲೆ, ಐಸಿಸ್ ಉಗ್ರರಿಗಿಂತ ಭಯಾಕ ಉಗ್ರರು, ಈ ಜಗತ್ತಿನಲ್ಲಿ ಇರಲಿಕ್ಕಿಲ್ಲಾ ಅನ್ಸುತ್ತೆ.. ಇಂಥಾ ಉಗ್ರರನ್ನು ನಾಶ ಮಾಡೋದಕ್ಕೆ ಅಮೆರಿಕ ಸೇನೆ ದಿಟ್ಟ ಹೆಜ್ಜೆ ಇಟ್ಟಿದೆ. ಆದಷ್ಟು ಬೇಗ ಆ ಹೆತ್ತ ತಾಯಿಯ ಕರುಳಿನ ಕೂಗಿಗೆ ಶಾಂತಿ ಸಿಗಲಿ.. ಅದೆಷ್ಟೋ ಅಮಾಯಕರ ನೆತ್ತರು ಹರಿಸಿದ ಉಗ್ರರಿಗೆ ತಕ್ಕ ಶಾಸ್ತಿಯಾಗ್ಲಿ..


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು