ಸಿನೆಮಾ

Share This Article To your Friends

ಕಾಪಾಡಿ ಎಂದು ಕೂಗ್ತಿದ್ದಾಳೆ ಗೊರವನಹಳ್ಳಿ ಲಕ್ಷ್ಮಿ!ಮಹಾಲಕ್ಷ್ಮಿ.. ಕೇಳಿದ್ದನ್ನು ಕರುಣಿಸೋ ಧನಲಕ್ಷ್ಮಿನೂ ಅವಳೇ.. ಸಂತಾನವನ್ನು ಕರುಣಿಸುವ ಸಂತಾನಲಕ್ಷ್ಮಿಯೂ ಅವಳೇ.. ಅಂಥಾ ಮಹಾಲಕ್ಷ್ಮಿಗೆ ಈಗ ಸಂಕಟ ಶುರುವಾಗಿದೆ. ಗೊರವನ ಹಳ್ಳಿಯಲ್ಲಿ ನೆಲೆಸಿರೋ ಲಕ್ಷ್ಮಿಗೆ ಕೆಲವರು ಕಾಟ ಕೊಡ್ತಿದ್ದಾರೆ. ಐಶ್ವರ್ಯ ಲಕ್ಷ್ಮಿಯ ಐಶ್ವರ್ಯವನ್ನೇ ಕೆಲವರು ಕೊಳ್ಳೇ ಹೊಡೀತಿದ್ದಾರೆ. ಹೀಗಾಗಿ ಎಲ್ಲರಿಗೂ ಒಳ್ಳೇದು ಮಾಡೋ ಲಕ್ಷ್ಮೀನೇ ಈಗ ಸಹಾಯಕ್ಕಾಗಿ ಅಂಗಲಾಚ್ತಿದ್ದಾಳೆ.


ಮಹಾಲಕ್ಷ್ಮಿ.. ಅನಾದಿ ಕಾಲದಿಂದಲೂ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾ ಬಂದಿರೋ, ಭಾಗ್ಯ ಲಕ್ಷ್ಮಿ.. ಗೊರವನ ಹಳ್ಳಿಯಲ್ಲಿ ನೆಲೆಸುವ ಮೂಲಕ, ಗೊರವನ ಹಳ್ಳಿಯನ್ನು ಪುಣ್ಯ ಭೂಮಿಯನ್ನಾಗಿ ಮಾಡಿದ ಮಹಾತಾಯಿ..


ಗೊರವನ ಹಳ್ಳಿ ಮಹಾಲಕ್ಷ್ಮಿ ಅಂದ್ರೆ ಸಾಕು.. ಭಕ್ತಿ ಭಾವ ಉಕ್ಕಿ ಹರಿಯುತ್ತೆ.. ಯಾಕಂದ್ರೆ, ಅಮ್ಮಾ ತಾಯಿ.. ನನ್ನ ಸಂಕಷ್ಟ ದೂರ ಮಾಡಮ್ಮ ಅಂತ ಬೇಡ್ಕೊಂಡ್ರೆ ಸಾಕು.. ಈ ಮಹಾತಾಯಿ ಅವರನ್ನು ಉದ್ಧರಿಸ್ತಾಳೆ.. ಎಲ್ಲರ ಸಂಕಷ್ಟಗಳನ್ನು ನಿವಾರಿಸ್ತಾಳೆ. ಕಲಿಯುಗದಲ್ಲೂ ಕಾಣಿಸಿಕೊಳ್ಳೋ ಈ ಕರುಣಾಮಯಿ, ಕಂಗಾಲದವರಿಗೆ ಕರುಣೆ ತೋರಿ ಕೃಪೆ ನೀಡ್ತಾಳೆ. ಇದೇ ಕಾರಣಕ್ಕೆ, ಲಕ್ಷಾಂತರ ಮಂದಿ ಈ ಗೊರವನಹಳ್ಳಿಗೆ ಬಂದು, ಮಹಾಲಕ್ಷ್ಮಿಯ ಪಾದಕ್ಕೆ ಬಿದ್ದು ಧನ್ಯರಾಗ್ತಾರೆ.


ಆದ್ರೆ ಎಲ್ಲರ ಸಂಕಷ್ಟಗಳನ್ನು ನಿವಾರಿಸೋ ಈ ಮಹಾತಾಯೀನೇ ಈಗ ಸಂಕಷ್ಟದಲ್ಲಿ ಸಿಲುಕಿದ್ದಾಳೆ.. ಕಲಿಯುಗದ ಕರುಣಾಮಯಿನೇ ಈಗ ಕಂಗಾಲಾಗಿದ್ದಾಳೆ..  ಮನುಷ್ಯರು ಮಾಡ್ತಿರೋ ಮೋಸಕ್ಕೆ, ಈ ಮಹಾಮಾತೆ ಮುನಿಸಿಕೊಂಡಿದ್ದಾಳೆ.


ಯಸ್​.. ಗೊರವನಹಳ್ಳಿಗೆ ಬರೋ ಲಕ್ಷಾಂತರ  ಮಂದಿ, ಮಹಾಮಾತೆಗೆ  ತಮ್ಮ ಕೈಲಾದಷ್ಟು ಕಾಣಿಕೆ ಸಮರ್ಪಿಸ್ತಾರೆ. ಹೀಗೆ ಸಮರ್ಪಿಸೋ ಕಾಣಿಕೆ, ವರ್ಷಕ್ಕೆ ಕೋಟಿಗಳ ಲೆಕ್ಕದಲ್ಲಿರುತ್ತೆ.. ಈ ಕೋಟಿ ಕೋಟಿ ಕಾಣಿಕೆಯ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಮಹಾಲಕ್ಷ್ಮಿಯ ಐಶ್ವರ್ಯವನ್ನು ಲೂಟಿ ಮಾಡೋದಕ್ಕೆ ಒಳಗೊಳಗೇ ಹುನ್ನಾರ ನಡೀತಿದೆ. ದೇವಿಯ ಮೈಮೇಲಿದ್ದ ಚಿನ್ನಾಭರಣಗಳಿಂದ ಹಿಡಿದು ಕಾಣಿಕೆಯಿಂದ ಬಂದ ಕೋಟಿ ಕೋಟಿ ಹಣಕ್ಕೆ ಕನ್ನ ಹಾಕೋಕೆ ಕೆಲವರು ಸಂಚು ನಡೆಸ್ತಿದ್ದಾರೆ.


ಈ ಗೊರವನಹಳ್ಳಿ ಮಹಾ ಲಕ್ಷ್ಮಿ, ಕಲಿಯುಗದಲ್ಲೂ ತುಂಬಾನೇ ಪವರ್​ಫುಲ್​.. ಅಷ್ಟಕ್ಕೂ ಮಹಾಲಕ್ಷ್ಮಿ ಈ ಗೊರವನಹಳ್ಳಿಯಲ್ಲಿ ಬಂದು ನೆಲೆಸಿದ್ದರ ಹಿಂದೆ ಒಂದು ರೋಚಕ ಕಥೆ ಇದೆ. ಕರುಣೆಯಿಂದ ಬೇಡಿದ್ರೆ ಕೇಳಿದ್ದನ್ನು ಕೊಡ್ತಾಳೆ.. ವಂಚಿಸೋ ಮಂದಿಗೆ ಶಾಪವನ್ನೂ ಕೊಟ್ಟಿರೋ ಇತಿಹಾಸ ಕೂಡ ಇದೆ..


ಅದು ನೂರಾರು ವರ್ಷಗಳ ಹಳೆಯ ಮಾತು.. ತುಮಕೂರಿನ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಅಬ್ಬಯ ಅನ್ನೋ ವ್ಯಕ್ತಿ ಇದ್ದ. ಒಂದು ದಿನ ಆತನಿಗೆ, ಹೆಣ್ಣಿನ ಅಶರೀರವಾಣಿಯೊಂದು ಕೇಳಿಸ್ತು.. ನಾನು ನಿಮ್ಮ ಮನೆಗೆ ಬರ್ರೀನಿ.. ಕರ್ಕೊಂಡು ಹೋಗು ಅಂತ, ಆ ಅಶರೀರವಾಣಿ  ಹೇಳಿತ್ತು..


ಆ ಆಸರೀರವಾಣಿ ಪದೇ ಪದೇ ಕೇಳಿಸ್ತಾ ಇತ್ತು.. ಇದ್ರಿಂದ ವಿಚಲಿತನಾದ ಅಬ್ಬಯ್ಯ, ತನಗಾದ ಅನುವವನ್ನ ತನ್ನ ತಾಯಿಗೆ ಹೇಳಿದ.. ಇನ್ನೊಮ್ಮೆ ಆ ಅಶರೀರವಾಣಿ ಕೇಳಿಸಿದ್ರೆ, ನೀನು ದೆವ್ವವಾದ್ರೆ, ಅಲ್ಲೇ ಇರು.. ದೇವರಾದ್ರೆ ಬಾ ಅಂತ ಹೇಳು ಅಂತ, ಅಬ್ಬಯ್ಯನ ತಾಯಿ ಹೇಳಿದ್ಳು..


ತಾಯಿಯ ಮಾತಿಗೆ ಒಪ್ಪಿಕೊಂಡ ಅಬ್ಬಯ್ಯ ತನ್ನ ಕೆಲಸವನ್ನು ಮುಂದುವರೆಸಿದ.. ಮತ್ತೆ ಅದೇ ಆಶರೀರವಾಣಿ ಕೇಳಿಸ್ತು ಅನ್ನಯ್ಯನಿಗೆ. ತಾಯಿ ಹೇಳಿದಂತೆ, ದೆವ್ವವಾದ್ರೆ ಬರಬೇಡ.. ದೇವರಾದ್ರೆ ಬಾ ಅಂತ ಹೇಳಿದ.. ಮಹಾಲಕ್ಷ್ಮಿ  ಕೊಳದಿಂದ ಎದ್ದು ಬಂದು, ಅಬ್ಬಯ್ಯನ ಮನೆ ಸೇರಿದ್ಳು.. ಅಂದಿನಿಂದ ಗೊರವನಹಳ್ಳಿ ಪವಿತ್ರ ಪುಣ್ಯ ಕ್ಷೇತ್ರವಾಗಿ ಪರಿವರ್ತನೆಯಾಯ್ತು..


ಅಬ್ಬಯ್ಯ ಮತ್ತವನ ತಾಯಿಯ ಮರಣಾ ನಂತರ ಮಹಾಲಕ್ಷ್ಮಿಯ ಉಸ್ತುವಾರಿ ತೋಟದಪ್ಪನಿಗೆ ಸೇರಿತ್ತು. ಆದ್ರೆ ಆತ ದೇವಿಯನ್ನು ನಿರ್ಲಕ್ಷಿಸೋಕೆ ಶುರು ಮಾಡಿದ. ಅಬ್ಬಯ್ಯನ ಮನೆಯಲ್ಲಿದ್ದ ದೇವಿಯನ್ನು ಈಗಿನ ದೇವಾಲಯವಿರೋ ಜಾಗದಲ್ಲಿ ತಂದು ಪ್ರತಿಷ್ಠಾಪಿಸಿದ. ಆದ್ರೆ ಪೂಜೆ ಪುನಸ್ಕಾರಗಳನ್ನು ಮಾತ್ರ ಮಾಡ್ಲೇ ಇಲ್ಲ.. ಇದ್ರಿಂದ ಮಹಾಮಾತೆ ಲಕ್ಷ್ಮಿ ಮುನಿಸಿಕೊಂಡುಬಿಟ್ಟಳು. ತೋಟದಪ್ಪ ಅನೇಕ ಕಷ್ಟನಷ್ಟಗಳಿಗೆ ತುತ್ತಾಗಬೇಕಾಯ್ತು.. ಅಷ್ಟೇ ಅಲ್ಲ, ಗೊರವನಹಳ್ಳಿಗೂ ಕೂಡ ಗರ ಬಡಿದುಬಿಡ್ತು..ಇದಾದ ನಂತರ ಗೊರವನಹಳ್ಳಿ ಮಹಾಲಕ್ಷ್ಮಿಗೆ ಪೂಜೆ ಪುನಷ್ಕಾರಗಳನ್ನು ಪ್ರಾರಂಭಿಸಿ, ದೇವಿಗೆ ದೇಗುಲ ಕಟ್ಟಿಸಿದ್ದು, ಇದೇ ಗೊರವನಹಳ್ಳಿಯ ಸೊಸೆ ಕಮಲಮ್ಮ.. 1925 ರ ನಂತರದಲ್ಲಿ ಮಹಾಲಕ್ಷ್ಮಿಯ ದೇಗುಲ ಜೀರ್ಣೋದ್ಧಾರವಾಯ್ತು.. ಗ್ರಾಮಸ್ಥರ ಮನವೊಲಿಸಿ ಕಮಲಮ್ಮನವರು ದೇಗುಲದ ನಿರ್ಮಾಣ ಮಾಡಿದ್ರು.. ಇದ್ರಿಂದಾಗಿ ಮಹಾಲಕ್ಷ್ಮಿ ಸಂತುಷ್ಠಳಾದಳು.. ಬೇಡಿ ಬಂದ ಲಕ್ಷಾಂತರ ಮಂದಿ ಭಕ್ತರನ್ನು ಅನುಗ್ರಹಿಸುವ ಮೂಲಕ, ಎಲ್ಲೆಡೆ ಮನೆ ಮಾತಾದಳು.. ಇದೇ ಕಾರಣಕ್ಕೆ, ಲಕ್ಷಾಂತರ ಮಂದಿ ಈ ಮಹಾಮಾತೆಯನ್ನು ನೋಡೋಕೆ, ಗೊರವನಹಳ್ಳಿಗೆ ಬರ್ತಾ ಇದ್ದಾರೆ.. ಬಂದ ಭಕ್ತರು ಮಹಾಲಕ್ಷ್ಮಿಗೆ ತಮ್ಮ ಕೈಲಾದ ಕಾಣಿಕೆಯನ್ನು ನೀಡಿ ಹೋಗ್ತಾರೆ.. ಚಿನ್ನಾಭರಣಗಳನ್ನು ದೇವಿಗೆ ಅರ್ಪಿಸಿ ಹೋಗ್ತಾರೆ.. ಆದರೆ ಈ ಕಾಣಿಕೆ ಮತ್ತು ಚಿನ್ನಾಭರಣಗಳ ಮೇಲೆ ಕೆಲವರು ಕಣ್ಣು ಹಾಕಿದ್ದಾರೆ. ಐಶ್ವರ್ಯ ಲಕ್ಷ್ಮಿಯ ಐಶ್ವರ್ಯವನ್ನೇ ದೋಚಿದ್ದಾರೆ.


ಸಂಕಷ್ಟ ದೂರ ಮಾಡೋ ಮಹಾಲಕ್ಷ್ಮಿನೇ ಈಗ ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಅಲ್ಲಿಒನ ಕೆಲವರು ಸಂಚುಕೋರರು ಬರೀ ಕಾಣಿಕೆಯನ್ನು ಮಾತ್ರ ಕೊಳ್ಳೆ ಹೊಡೆದಿಲ್ಲ.. ದೇವಿಯ ಮೈಮೇಲಿದ್ದ ಚಿನ್ನಾಭರಣವನ್ನೂ ಲೂಟಿ ಮಾಡಿದ್ದಾರಂತೆ. ಜನರ ಕಣ್ಣಿಗೆ ಮಣ್ಣೆರಚಬೇಕು ಅಂತ, ದೇವಿಯ ಮೈಮೇಲೆ ನಕಲಿ ಒಡವೆಗಳನ್ನ ಹಾಕಿದ್ದಾರಂತೆ.. ಹಾಗಿದ್ರೆ ದೇವಿಯ ಐಶ್ವರ್ಯವನ್ನು ದೋಚಿದ ಆ ಖದೀಮರು ಯಾರು?  ಮುಂದೆ ಓದಿ
----------------------------------------

ಗೊರವನಹಳ್ಳಿ ಲಕ್ಷ್ಮಿ ದೇಗುಲದಲ್ಲಿ ದೊಡ್ಡ ಗೋಲ್​ಮಾಲ್​ ನಡೀತಿದೆ. ದೇವಿಯ ಚಿನ್ನಾಭರಣಗಳಿಂದ ಹಿಡಿದು, ಭಕ್ತರು ಕೊಟ್ಟ ಕಾಣಿಕೆ ಹಣವನ್ನು ವಂಚಕರು ಗುಳುಂ ಮಾಡ್ತಿದ್ದಾರೆ. ಇದು ಅಲ್ಲಿನ ಗ್ರಾಮಸ್ಥರಿಗೆ ಗೊತ್ತಾಗಿದ್ದೇ ತಡ.. ಅವ್ರೆಲ್ಲಾ ಸಿಡಿದೆದ್ದಿದ್ರು.. ಅಷ್ಟಕ್ಕೂ ಗೊರವನಹಳ್ಳಿ ಲಕ್ಷ್ಮಿ ದೇಗುಲದಲ್ಲಿ ನಡೀತಿರೋ ಗೋಲ್​ಮಾಲ್​ ಆದ್ರೂ ಏನು..? ದೇವಿಯ ಚಿನ್ನಕ್ಕೆ ಕನ್ನ ಹಾಕಿರೋ ಆ ಖತರ್ನಾಕ್​​ ವ್ಯಕ್ತಿಗಳು ಯಾರು..? ಇಲ್ಲಿದೆ ನೋಡಿ ಅದ್ರ ಕಂಪ್ಲೀಟ್​ ಡೀಟೇಲ್​​


ಗೊರವನಹಳ್ಳಿಯ ಲಕ್ಷ್ಮಿ ದೇವಸ್ಥಾನದಲ್ಲಿ ಭಾರೀ ದೊಡ್ಡ ಗೋಲ್​ ಮಾಲ್​ ನಡೀತಿದೆ ಅನ್ನೋದು ನಿಜ ಕಣ್ರಿ.. ದೇವಸ್ಥಾನದ ಆಡಳಿತ ಮಂಡಳಿಯಿಂದ ಹಿಡ್ದು, ಅಲ್ಲಿನ ಕೆಲವು ಪ್ರಭಾವಿಗಳು ದೇಗುಲದ ಸಂಪತ್ತನ್ನ ಲೂಟಿ ಮಾಡೋದಕ್ಕೆ ಟ್ರೈ ಮಾಡ್ತಿದ್ದಾರೆ ಕಣ್ರಿ.. ಬೆಳಗೆದ್ದು ದೇವರಿಗೆ ಕೈಮುಗಿಯೋ ಕಮಿಟಿಯವ್ರೇ, ರಾತ್ರಿ ಆದ್ರೆ ದೇವಿಯ ಚಿನ್ನಾಭರಣಕ್ಕೆ ಕೈ ಹಾಕ್ತಿದ್ದಾರಂತೆ.. ದೇಗುಲಕ್ಕೆ ಬರೋ ಭಕ್ತರು ನೋಡೋ ಕೋಟ್ಯಾಂತರ ರೂಪಾಯಿ ಕಾಣಿಕೆಯನ್ನು ಕೂಡ, ಕಮಿಟಿಯವರು ಗುಳುಂ ಅನಿಸ್ತಿದ್ದಾರಂತೆ..


ನಯವಂಚರ ಕಾಟದಿಂದ ನರಳಾಡ್ತಿರೋ ಮಹಾಲಕ್ಷ್ಮಿ ಈಗ ಸಂಕಷ್ಟದಲ್ಲಿದ್ದಾಳೆ. ತನ್ನ ಆಸ್ತಿ ಮತ್ತು ಚಿನ್ನಾಭರಣಗಳನ್ನು ಲೂಟಿ ಮಾಡ್ತಿರೋದನ್ನು ಕಂಡು, ಕಾಪಾಡಿ ಕಾಪಾಡಿ ಅಂತ ಆ ದೇವಿನೇ ಅಂಗಲಾಚೋ ಪರಿಸ್ಥಿತಿ ಬಂದಿದೆ.


ಅಸಲಿಗೆ ಈ ಮಹಾಲಕ್ಷ್ಮಿಯ ದೇಗುಲ ಇರೋದು ಗೊರವನಹಳ್ಳಿಯಲ್ಲಿ.. ಆದ್ರೆ ದೇವಾಲಯದ ಉಸ್ತುವಾರಿ ವಹಿಸಿಕೊಂಡಿರೋ ಕಮಿಟಿಯಲ್ಲಿ ಸ್ಥಳೀಯರಿಗಿಂತ ಬೇರೆಯವರೇ ಜಾಸ್ತಿ ಕಣ್ರಿ.. 14 ಮಂದಿ ಇರೋ ಕಮಿಟಿಯಲ್ಲಿ 12 ಮಂದಿ ಬೆಂಗಳೂರಿನವರೇ ಇದ್ದಾರೆ ಅಂದ್ರೆ ನಿಜಕ್ಕೂ ನೀವು ನಂಬ್ಲೇಬೇಕು.. ದೇವಸ್ಥಾನದ ಇತಿಹಾಸ ಗೊತ್ತಿಲ್ಲ.. ಗೊರವನಹಳ್ಳಿಗೂ ಅವ್ರಿಗೂ ಸಂಬಂಧಾನೇ ಇಲ್ಲ.. ಅಂಥವ್ರು ಕಮಿಟಿಯಲ್ಲಿ ಸೇರ್ಕೊಂಡು ದೇವಸ್ಥಾನದ ಸಂಪತ್ತನ್ನು ಲೂಟಿ ಮಾಡ್ತಿದ್ದಾರೆ. ಕೇವಲ ಇಬ್ಬರು ಸ್ಥಳೀಯರನ್ನು ಕಮಿಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಅದೂ ನೆಪಕ್ಕೆ ಮಾತ್ರ..


ದೇವಸ್ಥಾನದ ಕಮಿಟಿಯಲ್ಲಿ ಪರ ಊರಿನವರು ಸೇರ್ಕೊಂಡು, ದೇವಿಯ ಆಸ್ತಿ ದೋಚ್ತಿದ್ದಾರಂತೆ. ಕಮಿಟಿಯಲ್ಲಿ ಸ್ಥಳೀಯರು ಇದ್ರೆ, ದೇಗುಲದಲ್ಲಿ ಗೋಲ್ ಮಾಲ್ ನಡೆಯೋದಕ್ಕೆ ಬಿಡೋದಿಲ್ಲ.. ಹೀಗಾಗಿ ಬೇರೆ ಊರಿನವರನ್ನು ಕಮಿಟಿಯಲ್ಲಿ ಸೇರಿಸಿಕೊಂಡ್ರೆ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಹಾಗೇ, ದೇಗುಲದ ಆಸ್ತಿಯನ್ನು ಸುಲಭವಾಗಿ ನುಂಗಿ ಹಾಕ್ಬಹುದು.. ಕಮಿಟಿಯಲ್ಲಿ ಕೆಟ್ಟ ಹುಳುಗಳು ಸೇರ್ಕೊಂಡು, ಗೊರವನಹಳ್ಳಿಯನ್ನು ಗೆದ್ದಲು ತಿಂತಿವೆ. ಭಾರೀ ದೊಡ್ಡ ಗೋಲ್​ಮಾಲ್​ ನಡೆಸ್ತಿದ್ದಾರೆ ಅನ್ನೋದು ಸ್ಥಳೀಯರ ಆರೋಪ.. ಹೀಗಾಗಿ ಆಡಳಿತ ಮಂಡಳಿಯ ವಿರುದ್ಧ ಗೊರವನ ಹಳ್ಳಿ ಜನರು ಸಿಡಿದೆದ್ದಿದ್ದಾರೆ.


ದೇವಿ ಮೈಮೇಲಿರೋ ಚಿನ್ನಾಭರಣಗಳು ನಕಲಿ..!
ಧರ್ಮದರ್ಶಿಯ ಮನೆ ಸೇರಿತಾ ಅಸಲಿ ಬಂಗಾರ..?
10 ಕೆಜಿ ಬಂಗಾರ 100 ಕೆಜಿ ಬೆಳ್ಳಿ ನುಂಗಿದ್ನಾ ರಂಗಶಾಮಯ್ಯ..?


ಯಸ್.. ಒಂದಲ್ಲ ಎರಡಲ್ಲ ಸ್ವಾಮಿ.. ಮಹಾಲಕ್ಷ್ಮಿಯ ಮೈಮೇಲಿದ್ದ ಬರೋಬ್ಬರಿ 10 ಕೆಜಿ ಚಿನ್ನವನ್ನು ಈ ಧರ್ಮದರ್ಶಿ ರಂಗಶಾಮಯ್ಯ ನುಂಗಿ ಹಾಕಿದ್ದಾರಂತೆ.. 100 ಕೆಜಿಯಷ್ಟು ಬೆಳ್Lಈಯನ್ನು ನುಂಗಿ ನೀರ್​​ ಕುಡಿದಿದ್ದಾರಂತೆ.. ದೇವಿಯ ಮೈಮೇಲೆ ನಕಲಿ ಚಿನ್ನ ಮತ್ತು ನಕಲಿ ಬೆಳ್ಳಿಯನ್ನು ಹಾಕಿ, ಅಸಲಿಯ ಚಿನ್ನ ಮತ್ತು ಬೆಳ್ಳಿಯನ್ನು ತನ್ನ ಮನೆಗೆ ತಗೊಂಡ್ ಹೋಗಿದ್ದಾರಂತೆ. ಸದ್ಯಕ್ಕೀಗ ಗೊರವನಹಳ್ಳಿಯ ಈ ಲಕ್ಷ್ಮಿ ಮೈಮೇಲೆ ಇರೋದು  ಹಂಡ್ರೆಡ್ ಪರ್ಸೆಂಟ್​​ ನಕಲಿ ಒಡವೆಗಳು ಅನ್ನೋದು ಊರಿನವರ ಆರೋಪ..


ಹೊಲ ಕಾಯೋದಕ್ಕೆ ಅಂತ ಬೇಲಿ ಹಾಕ್ತಾರೆ.. ಇಲ್ಲಿ ಬೇಲಿನೇ ಎದ್ದು ಹೊಲ ಮೇಯ್ತಿದೆ. ದೇಗುಲದ ರಕ್ಷಣಗೆ ಅಂತ ಇರೋ ಕಮಿಟಿಯವ್ರೇ ದೇವರನ್ನು ದೋಚಿ, ಚಿನ್ನಾಭರಣಗಳಿಗೆ ಕನ್ನ ಹಾಕಿದ್ದಾರೆ.
ಅದ್ರಲ್ಲೂ ಧರ್ಮದರ್ಶಿ ರಂಗಶಾಮಯ್ಯ ಭಾರೀ ಗೋಲ್​ಮಾಲ್ ಮಾಡಿದ್ದಾರಂತೆ. ಮಹಾಲಕ್ಷ್ಮಿಯ ಸನ್ನಿಧಾನಕ್ಕೆ ಬರೋ ಭಕ್ತರು ತಾಯಿಗೆ ಕೇಜಿಗಟ್ಟಲೇ ಚಿನ್ನಾಭರಣಗಳನ್ನು ನೀಡ್ತಾರೆ.. ಆದ್ರೆ ಹಗಲಲ್ಲಿ ದೇವಿಯ ಮೈಮೇಲೆ ಇಟ್ಟಂತೆ ಮಾಡಿ, ರಾತ್ರಿ ಹೊತ್ತು ಅದನ್ನು ಎಗರಿಸಿಕೊಂಡು ಹೋಗ್ತಾರಂತೆ. ಜನರಿಗೆ ಅನುಮಾನ ಬರದೇ ಇರಲಿ ಅಂತ ಅಸಲಿ ಚಿನ್ನಾಭರಣಗಳ ಬದಲಿಗೆ ದೇವಿಯ ಮೈಮೇಲೆ ನಕಲಿ ಒಡವೆಗಳನ್ನ ಹಾಕಲಾಗಿದ್ಯಂತೆ.  ಗೊರವನಹಳ್ಳಿಯನ್ನು ಉದ್ಧರಿಸೋ ಮಹಾಲಕ್ಷ್ಮಿಗೇ ಇಂಥಾ ಮೋಸ ಆಗ್ತಿದೆ ಅಂದ್ರೆ, ಸ್ಥಳಿಯರು ಸುಮ್ನೇ ಬಿಡ್ತಾರಾ..? ತಾಯಿಯ ಸಂಪತ್ತ ಉಳಿಸೋದಕ್ಕೆ ಅಂತ ಗ್ರಾಮಸ್ಥರು ಹೋರಾಟಕ್ಕೆ ಇಳಿದೇ ಬಿಟ್ರು..


ಇದೇ ಕಾರಣಕ್ಕೆ.. ಇದೇ ಕಾರಣಕ್ಕೆ ಕಣ್ರಿ.. ಪವಿತ್ರ ತಾಣವಾಗಿ ಶಾಂತಚಿತ್ತದಿಂದ ಇದ್ದ ಗೊರವನಹಳ್ಳಿ ಕ್ಷೇತ್ರ, ರೌದ್ರ ನರ್ತನಕ್ಕೆ ಸಾಕ್ಷಿಯಾಗಿದ್ದು.. ದೇಗುಲವನ್ನು ಕಾಪಾಡ್ಬೇಕಾದೋರು, ಒಂದಲ್ಲ ಎರಡಲ್ಲ, ಕೋಟ್ಯಾಂತರ ರೂಪಾಯಿಗಳ ಗೋಲ್​ಮಾಲ್​ಗೆ ಸಾಕ್ಷಿಯಾಗಿದ್ದಾರೆ ಅಂತ ತಿಳಿದಿದ್ದಕ್ಕೆ. ಆಡಳಿತ ಮಂಡಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದು..


ಈ ದೇಗುಲದಲ್ಲಿ ಬೇರೆ ಊರಿನವರದ್ದೇ ಕಾರ್​ಬಾರು ಕಣ್ರಿ.. ಅದಿಕ್ಕೆ ಇಷ್ಟೋಂದು ಪ್ರಮಾಣದ ಗೋಲ್​ಮಾಲ್​ ನಡೆದಿದೆ.. ಇದೇ ವಿಷ್ಯಕ್ಕೇನೇ ಇಲ್ಲಿನ ಸ್ಥಳೀತರು ಕಮಿಟಿ ಮೆಂಬರ್​ಗಳ ವಿರುದ್ಧ ತೊಡೆ ತಟ್ಟಿ ನಿಂತಿದ್ದು. ದೇವರ ಸಂಪತ್ತನ್ನು ಲೂಟಿ ಮಾಡೋಕೆ ನಿಂತಿರೋರ ವಿರುದ್ಧ ಕಿಡಿ ಕಾರಿದ್ದು.. ಚಿನ್ನಾಭರಣಗಳ ಗೋಲ್​ಮಾಲ್​ನಿಂದ ಹಿಡಿದು, ಏನೆಲ್ಲಾ ಅವ್ಯವಹಾರ ನಡೆದಿದೆ ಅನ್ನೋದನ್ನ ತನಿಖೆ ನಡೆಸಬೇಕು ಅಂತ ಪಟ್ಟು ಹಿಡಿದದ್ದು..


ಆದ್ರೆ ದೇವಾಲಯದಲ್ಲಿ ಅಂಥದ್ದೇನು ನಡೆದೇ ಇಲ್ಲ.. ಇದೆಲ್ಲಾ ಕೆಲವರು ಮಾಡೋ ಗಿಮಿಕ್ಕು.. ದೇವಸ್ಥಾನದ ಕಮಿಟಿಯಲ್ಲಿ ಯಾರು ಬೇಕಾದ್ರೂ ಸದಸ್ಯರಾಗಬಹುದು.. ಯಾರು ಬೇಕಾದ್ರೂ, ಅಧ್ಯಕ್ಷರಾಗಬಹುದು.. ಕಾನೂನಿನ ಪ್ರಕಾರವೇ ಎಲ್ಲಾ ಪ್ರಕ್ರಿಯೆ ನಡೆದಿದೆ ಅಂತಾರೆ ಕಮಿಟಿಯ ಅಧ್ಯಕ್ಷರು


ಇವ್ರು ಏನೇ ಹೇಳ್ಲಿ.. ಆದ್ರೆ ಬೆಂಕಿ ಇಲ್ದೇ ಹೇಗೆ ಹೊಗೆ ಆಡೋದಿಲ್ವೋ..? ಹಾಗೇನೇ ಇಲ್ಲೂ ಕೂಡ ಆಗ್ತಿದೆ. ಇಲ್ಲಿ ಸ್ಥಳೀಯರು ಈ ಪ್ರಮಾಣದಲ್ಲಿ ರೊಚ್ಚಿಗೆದ್ದಿದ್ದಾರೆ ಅಂದ್ರೆ, ಇಲ್ಲೊಂದು ಬಹುದೊಡ್ಡ ಗೋಲ್ ಮಾಲ್ ನಡೆದಿದೆ ಅನ್ನೋದು ಸ್ಪಷ್ಟವಾಗುತ್ತೆ. ಆದ್ರೆ, ಕಮಿಟಿಯವರೆಲ್ಲಾ ಸೇರಿ ಅದನ್ನು ಮುಚ್ಚಿ ಹಾಕೋದಕ್ಕೆ ಪ್ರಯತ್ನಿಸ್ತಿದ್ದಾರೆ ಕಣ್ರಿ.. ಇದು ಗೊರವನಹಳ್ಳಿಯ ಮಕ್ಕಳನ್ನು ಸಿಡಿದೇಳುವಂತೆ ಮಾಡಿದೆ.

ಈ ಪ್ರತಿಭಟನೆಯಿಂದಾಗಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸುವಂತಾಗಿ, ಗೊರವನಹಳ್ಳಿ ದೇವಸ್ಥಾನವನ್ನ ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಆ ಮೂಲಕ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಿದೆ ಗೊರವನಹಳ್ಳಿಯ ಶ್ರೀ ಲಕ್ಷ್ಮಿಯ ದೇವಸ್ಥಾನ
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು