ಸಿನೆಮಾ

Share This Article To your Friends

ಹತ್ತೇ ದಿನದಲ್ಲಿ ಭಾರತದ ಶಸ್ತ್ರಾಸ್ತ್ರಗಳು ಖತಂ?

ಆಧುನಿಕ ಭಾರತ ಅಭಿವೃದ್ಧಿಯ ಕಡೆ ಹೆಜ್ಜೆ ಹಾಕ್ತಾ ಇದೆ. ಈ ಖುಷಿಯ ನಡುವೇ ಈಗ ಒಂದು ಆತಂಕ ಕೂಡ ಎದುರಾಗಿದೆ. ಭಾರತದ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಇದೆ ಅನ್ನೋ ಅಂಶ ಈಗ ಬಯಲಾಗಿದೆ. ಇದು ನಿಜಾನಾ..? ಇದ್ರಿಂದ ಮುಂದೆ ಭಾರತಕ್ಕೆ ಎದುರಾಗಬಹುದಾದ ಅಪಾಯಗಳೇನು? ಇಲ್ಲಿದೆ ನೋಡಿ ಆ ಡೀಟೇಲ್ಸ್​.
ಭಾರತ ಸೇನೆಯಲ್ಲಿದೆಯಾ ಶಸ್ತ್ರಾಸ್ತ್ರಗಳ ಕೊರತೆ?
ಯುದ್ಧಕ್ಕೆ ನಿಂತ್ರೆ ಎಷ್ಟುದಿನ ಬರುತ್ತೆ ಭಾರತದ ಆಯುಧಗಳು?
ಇದು ಭಾರತೀಯರನ್ನೇ ಬೆಚ್ಚಿ ಬೀಳಿಸುವ ಸ್ಟೋರಿ!

ನಿಜ.. ಇದು ಭಾರತವನ್ನೇ ಬೆಚ್ಚಿ ಬೀಳಿಸೋ ಸ್ಟೋರಿ.. ಆಧುನಿಕ ಜಗತ್ತಿನಲ್ಲಿ ಭಾರತ ಒಂದು ಶಕ್ತಿಯ ಸಂಕೇತವಾಗಿ ನಿಂತಿದೆ. ಅಂತಾರಾಷ್ಷ್ಟ್ರೀಯ ಮಟ್ಟದಲ್ಲಿ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ ನಮ್ಮ ಭಾರತ ದೇಶ..

    ಕಮ್ಮಿ ಇಲ್ಲ.. ಯಾವುದಕ್ಕೂ ಕಮ್ಮಿ ಇಲ್ಲ.. ಕೃಷಿಯಿಂದ ಹಿಡಿದು ಮಾಹಿತಿ ತಂತ್ರಜ್ಞಾನದ ವೆರೆಗೆ.. ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿ, ವಿಶ್ವಮಟ್ಟದಲ್ಲಿ ಗ್ರೇಟ್ ಅನ್ನಿಸಿಕೊಂಡಿದೆ ಇಂಡಿಯಾ. ಎಡಕ್ಕೆ ಪಾಕಿಸ್ತಾನ.. ಬಲಕ್ಕೆ ಚೀನಾದ ಹಗೆತನ ಇದ್ರೂ, ತನ್ನ ಸೇನಾ ಶಕ್ತಿಯಿಂದ ಶತೃಗಳನ್ನು ಹಿಮ್ಮೆಟ್ಟಿಸಿದ ಪವರ್​​ ಫುಲ್ ಕಂಟ್ರಿ ಅಂದ್ರೆ, ನಮ್ಮ ಭಾರತ..

    ಇಂಥಾ ಚರಿತ್ರೆ ಇರೋ ಭಾರತದಲ್ಲಿ ಈಗ ಒಂದು ಆತಂಕ ಸೃಷ್ಟಿಯಾಗಿದೆ. ಆ ಆತಂಕವಾದ್ರೂ ಏನು ಗೊತ್ತೇನ್ರಿ..? ಶತೃಗಳನ್ನು ಸದೆಬಡಿದು, ಚರಿತ್ರೆಯಲ್ಲಿ ಹೆಸರು ಮಾಡಿದ ಭಾರತದ ಸೇನೆಯಲ್ಲಿ, ಶಸ್ತ್ರಾಸ್ತ್ರಗಳ ಕೊರತೆ ಇದೆ ಅನ್ನೋದು..

    ನಿಜ... ಇದು ನಂಬೋಕೆ ಆಗದೇ ಇದ್ರೂ ಸತ್ಯ ಕಣ್ರಿ.. ಭಾರತದ ಸೈನಿಕರ ಹತ್ರ ಶತರಗಳನ್ನ ಹಿಮ್ಮೆಟ್ಟಿಸೋ ಎಂಟೆದೆ ಇದೆ. ಆದ್ರೆ ಅವ್ರ ಸಾಮರ್ಥ್ಯಕ್ಕೆ ತಕ್ಕಂಥ ಶಸ್ತಾಸ್ತ್ರಗಳು ಮಾತ್ರ ಅವರ ಬಳಿ ಇಲ್ಲ..  ಇಂಥಾ ಆಘಾತಕಾರಿ ಸುದ್ದಿಯನ್ನ ಹೊರ ಹಾಕಿದ್ದು ಭಾರತದ ಮಹಾಲೆಕ್ಕಪರಿಶೋಧಕರು.. ಶುಕ್ರವಾರ ಸಂಸತ್ತಿನಲ್ಲಿ ವರದಿ ಬಹಿರಂಗ ಪಡಿಸಿದ ಮಹಾಲೆಕ್ಕಪರಿಶೋಧಕರು, ಭಾರತದ ಸೇನಾ ಶಕ್ತಿಯ ಎಷ್ಟಿದೆ ಅನ್ನೋದರ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿದ್ದಾರೆ.

ಸನ್ನದ್ಧರಾಗ್ತಿದ್ದಾರೆ 11 ಕೋಟಿ ಸೇನಾ ಸಿಬ್ಬಂದಿ
ಸೇನೆಗೆ ಕಾಡುತ್ತಿದೆ ಮದ್ದುಗುಂಡುಗಳ ಕೊರತೆ!

    ದುರಂತ ಅಂದ್ರೆ ಇದು.. ಭಾರತದ ಸೇನೆಯಲ್ಲಿ ಬಾಹುಬಲದ ಶಕ್ತಿ ಅಗಾಧವಾಗಿದೆ. 11 ಕೋಟಿ ಸೈನಿಕರು ಈಗ ಕಾರ್ಯಾಚರಣೆಗೆ ಸನ್ನದ್ಧರಾಗ್ತಿದ್ದಾರೆ. ದೇಶ ರಕ್ಷಿಸುವ ಕಾರ್ಯಕ್ಕೆ ಅಣಿಯಾಗ್ತಿದ್ದಾರೆ. ಆದ್ರೆ ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು ಮಾತ್ರ ಭಾರತದಲ್ಲಿ ಇಲ್ಲ. ಯಾಕಂದ್ರೆ ಭಾರತದ ಸೇನೆಯಲ್ಲಿ ಮದ್ದು ಗುಂಡುಗಳದ್ದೇ ಭಾರೀ ಕೊರತೆ ಇದೆ..

ಇರೋದು 125 ವಿಧದ ಮದ್ದುಗುಂಡುಗಳು
ಬೇಕಿದೆ 170 ರೀತಿಯ ಮದ್ದುಗುಂಡುಗಳು

    ಶತೃಗಳೊಂದಿಗೆ ಹೋರಾಡ್ಬೇಕು ಅಂದ್ರೆ, ಭಾರತದ ಸೈನಿಕರಿಗೆ 170 ರೀತಿಯ ವಿವಿಧ ಬಗೆಯ ಮದ್ದು ಗುಂಡುಗಳು ಬೇಕು.. ಆದ್ರೆ, ಭಾರತದ ಬಳಿ ಇರೋದು ಬರೀ 125 ರೀತಿಯ ಮದ್ದು ಗುಂಡುಗಳು.. ಅಂದ್ರೆ ಇನ್ನೂ 35 ರೀತಿಯ ವಿವಿಧ ಬಗೆಯ ಮದ್ದುಗುಂಡುಗಳ ಕೊರತೆ ಇದೆ. ಆದ್ರೆ ಅವುಗಳನ್ನ ತರಿಸೋ ಕೆಲಸಕ್ಕೆ ಮಾತ್ರ ಕೇಂದ್ರ ಸರ್ಕಾರ ಕೈ ಹಾಕಿಲ್ಲ. ಅಷ್ಟೇ ಅಲ್ಲ, ಬಂದೂಕುಗಳು, ಮಿಷನ್​ಗನ್​ಗಳು ಸೇರಿದಂತೆ, ಹಲವು ರೀತಿಯ ಯುದ್ಧ ಸಾಮಗ್ರಿಗಳ ಭಾರೀ ಕೊರತೆ ಇದೆ.

ಯುದ್ಧಕ್ಕೆ ನಿಂತ್ರೆ ಭಾರತದ ಪರಿಸ್ತಿತಿ ಏನು?
ಹತ್ತೇ ದಿನಕ್ಕೆ ಖಾಲಿಯಾಗುತ್ತೆ ಖಜಾನೆ!    ಇದು ನಿಜಕ್ಕೂ ಆತಂಕಕಾರಿಯಾದ ವಿಷಯ. ಒಂದ್ಕಡೆ ಪಾಕಿಸ್ತಾನ, ಮತ್ತೊಂದ್ಕಡೆ ಚೀನಾ ಸದಾ ಭಾರತದ ಮೇಲೆ ಕತ್ತಿ ಮಸೀತಾನೇ ಇವೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಳ್ತಿದೆ. ಕಿದು ಚೀನಾ ಮತ್ತು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳೋಕೆ ಆಗ್ತಾ ಇಲ್ಲ.. ಹೀಗಿರುವಾಗ್ಲೇ ಭಾರತದ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಉಂಟಾಗಿರೋದು ನಿಜಕ್ಕೂ ಭಾರತೀಯರನ್ನ ಬೆಚ್ಚಿ ಬೀಳಿಸಿದೆ. ಅಕಸ್ಮಾತ್​ ಭಾರತದ ಮೇಲೆ ಪಾಕಿಸ್ತಾನ ಅಥವ ಭಾರತ ಯುದ್ಧ ಸಾರಿದ್ರೆ, ಭಾರತದ ಪರಿಸ್ತಿತಿ ಏನಾಗ್ಬಹುದು ಅಂತ ಊಹಿಸೋದಕ್ಕೂ ಅಸಾಧ್ಯವಾಗುತ್ತೆ. ಯಾಕಂದ್ರೆ, ಸದ್ಯಕ್ಕೆ ಭಾರತದ ಸೇನೆ ಬಳಿ ಇರೋದು ಕೇವಲ 10 ದಿನಕ್ಕೆ ಆಗೋಷ್ಟು ಶಸ್ತ್ರಾಸ್ತ್ರಗಳು ಮಾತ್ರ..!

    10 ದಿನಗಳ ಕಾಲ ನಿರಂತರವಾಗಿ ಕೆಚ್ಚೆದೆಯಿಂದ ಯುದ್ಧ ಮಾಡ್ಬಹುದು.. ಆದ್ರೆ, ಆಮೇಲೆ ಯುದ್ಧ ಮಾಡೋದಕ್ಕೆ ಭಾರತದ ಹತ್ರ ಯಾವುದೇ ಅಸ್ತ್ರಗಳು ಇರೋದಿಲ್ಲ.. ಮದ್ದು ಗುಂಡುಗಳು ಇರೋದಿಲ್ಲ.. ಎಲ್ಲವೂ ಖತಂ ಆಗಿರುತ್ತೆ..!

    ಬರೀ ಇಷ್ಟೇ ಅಲ್ಲ.. ವಾಯುಸೇನೆಯ ಬಲ ಅಂತ ಕರೆಸಿಕೊಳ್ಳೋ ಯುದ್ಧ ವಿಮಾನಗಳೂ ಕೂಡ ರಿಪೇರಿಗೆ ಬಂದಿವೆ. ಅದನ್ನು ರಿಪೇರಿ ಮಾಡ್ಸೋ ಗೋಜಿಗೂ ಹೋಗಿಲ್ಲ ಕೇಂದ್ರ ಸರ್ಕಾರ.
---------------------------------
    ಪ್ರತೀ ವರ್ಷ ಗಣರಾಜ್ಯೋತ್ಸವದ ದಿನದಂದು, ಭಾರತದ ಸೇನಾ ಶಕ್ತಿಯ ಪ್ರದರ್ಶನವಾಗುತ್ತೆ. ಅದೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಆದ್ರೆ ವಾಸ್ತವಿಕ ಪರಿಸ್ಥಿತಿನೇ ಬೇರೆ ಇದೆ. ಆ ಡೀಟೇಲ್ಸ್ ಇಲ್ಲಿದೆ ನೋಡಿ..

ಕೆಟ್ಟು ನಿಂತಿವೆ ಯುದ್ಧ ವಿಮಾನಗಳು!
ರಿಪೇರಿ ಮಾಡಿಸ್ತಿಲ್ಲ ಕೇಂದ್ರ ಸರ್ಕಾರ!

ಇದು ನಿಜಕ್ಕೂ ಮತ್ತೊಂದು ಆತಂಕಕಾರಿ ವಿಷ್ಯ ಕಣ್ರಿ.. ನೆಲದಲ್ಲಿ ನಿಂತು ಶಸ್ತ್ರಾಸ್ತ್ರಗಳನ್ನು ಬೆನ್ನಿಗೇರಿಸಿಕೊಂಡು ಯುದ್ಧಕ್ಕೆ ನಿಲ್ಲೋ ಈ ಭೂಸೆನೆಯ ಸೈನಿಕರ ಪರಿಸ್ತಿತಿ ಹಿಂಗಾದ್ರೆ, ವಾಯುಸೇನೆಯ ಪರಿಸ್ಥಿತಿ ಮತ್ತೂ ಘೋರವಾಗಿದೆ. ಶತೃಗಳ ಮೇಲೆ ಮಿಂಚಿನ ದಾಳಿ ನಡೆಸಬಲ್ಲ ಯುದ್ಧ ವಿಮಾನಗಳ ಕೊರತೆ ಇದೆ.

    ಇನ್ನು ವಾಯು ಸೇನೆಯಲ್ಲಿರೋ ಅಷ್ಟೋ ಇಷ್ಟೋ ಯುದ್ಧ ವಿಮಾನಗಳ ಪರಿಸ್ಥಿತಿ ಕೂಡ ದುಸ್ತರವಾಗಿದೆ. ಬಹುತೇಕ ಯುದ್ಧ ವಿಮಾನಗಳು ಕೆಟ್ಟು ನಿಂತಿವೆ. ಇನ್ನೂ ಕೆಲವಂತೂ ರಿಪೇರಿನೇ ಆಗದಷ್ಟು ಹದಗೆಟ್ಟು ಹೋಗಿವೆ..

ಲಘು ಯುದ್ಧ ವಿಮಾನಕ್ಕಿಲ್ಲ ಪವರ್​
53 ಸಮಸ್ಯೆಗಳಿಂದ ಬಳಲುತ್ತಿದೆ ತೇಜಸ್​​


    ನಿಜ.. ತೇಜಸ್ ಯುದ್ಧ ವಿಮಾನ ಅಂದ್ರೆ ಭಾರತದ ಶಕ್ತಿ ಅಂತ ಎಲ್ರೂ ಹೇಳ್ತಾರೆ. ಆದ್ರೆ ಅದೇ ತೇಜಸ್ ಯುದ್ಧ ವಿಮಾನಾನೇ ಈಗ ಶಕ್ತಿ ಕಳೆದುಕೊಂಡಿದೆ. ಒಂದಲ್ಲ ಎರಡಲ್ಲ.. ಒಟ್ಟು 53 ತಾಂತ್ರಿಕ ದೋಷಗಳಿಂದ ತತ್ತರಿಸಿ ಹೋಗಿದೆ ಕಣ್ರಿ ತೇಜಸ್ ಯುದ್ಧ ವಿಮಾನ..
   
    ಈ ತೇಜಸ್ ಯುದ್ಧ ವಿಮಾನವನ್ನ ತಯಾರಿಸಿದ್ದೇ ಭಾರತ ಕಣ್ರಿ.. ಆದ್ರೆ ಅದರ ಬಿಡಿ ಭಾಗಗಳು ಭಾರತದಲ್ಲಿ ಸಿಗೋದಿಲ್ಲ.. ಆದ್ರೆ ಭಾರತ ಸರ್ಕಾರ ಕೂಡ ವಿದೇಶಗಳಿಂದ ಆ ಬಿಡಿ ಭಾಗಗಳನ್ನು ತಂದು ಕೊಡ್ತಿಲ್ಲ..

    ಇನ್ನೊಂದು ಆಘಾತಕಾರಿ ವಿಷ್ಯ ಹೇಳ್ತೀವಿ ಕೇಳಿ.. ನಮ್ಮದೇಶದಲ್ಲೇ ನಿರ್ಮಿತವಾದ ಈ ಸ್ವದೇಶಿ ಯುದ್ಧ ವಿಮಾನವನ್ನು ಓಡಿಸೋದು ಅಷ್ಟು ಸುಲಭವಲ್ಲ.. ಈ ಬಗ್ಗೆ ಪರಿ ಪಕ್ವತೆಯ ಹೊಂದಿದ ಪೈಲಟ್​ ಕೂಡ ಇಲ್ಲ ಅನ್ನೋದು, ನಿಜಕ್ಕೂ ಶಾಕಿಂಗ್ ವಿಷ್ಯ..

ಮೊದಲನೇ ಹಂತದಲ್ಲೇ ಮಾರ್ಕ್-1 ವಿಫಲ
ಕನಸಾಗಿಯೇ ಉಳಿದ ಮಾರ್ಕ್​-2 ವಿಮಾನ

    ಇನ್ನು ಭಾರತದ ವಾಯು ಸೇನೆಗೆ ಬಲ ನೀಡೋ ಉದ್ದೇಶದಿಂದ ಮಾರ್ಕ್​-1 ಯುದ್ಧ ವಿಮಾನವನ್ನ ತಯಾರಿಸಲಾಯ್ತು. ಆದ್ರೆ ಅದು ಪ್ರಾಯೋಗಿಕ ಹಂತದಲ್ಲೇ ವಿಫಲವಾಗಿದೆ. ಇನ್ನು ಮಾರ್ಕ್​-2 ಯುದ್ಧ ವಿಮಾನ ತಯಾರಿಸಬೇಕು ಅನ್ನೋ ಕನಸು, ಇನ್ನೂ ಕನಸಾಗಿಯೇ ಉಳಿದಿದೆ. ಇನ್ನು ಹಗುರವಾದ ಯುದ್ಧ ವಿಮಾನ ನಿರ್ಮಿಸಬೇಕು ಅನ್ನೋ ಯೋಜನೆ 30 ವರ್ಷ ಆದ್ರೂ ಕಾರ್ಯ ರೂಪಕ್ಕೆ ಬಂದಿಲ್ಲ..

    ಯುದ್ಧ ಸಾಮಗ್ರಿಗಳ ಸಂಗ್ರಹ ನೀತಿ ಏನ್ ಹೇಳುತ್ತೆ ಗೊತ್ತೇನ್ರಿ..? ಕನಿಷ್ಠ ಅಂದ್ರೂ 40 ದಿನಗಳಿಗೆ ಆಗುವಷ್ಟು ಯುದ್ಧ ಸಾಮಗ್ರಿಗಳನ್ನು ಇಟ್ಟುಕೋಬೇಕು ಅಂತ.. ಆದ್ರೆ ಭಾರತದಲ್ಲಿರೋ ಯುದ್ಧ ಸಾಮಗ್ರಿಗಳು ಬರೀ ಹತ್ತೇ ದಿನಕ್ಕೆ ಬರಿದಾಗಿಬಿಡುತ್ವೆ. ಅದ್ರಲ್ಲೂ ಕೆಟ್ಟು ನಿಂತಿರೋ ಯುದ್ಧ ವಿಮಾನಗಳು ಸೇನಾ ಬಲಕ್ಕೆ ಋಣಾತ್ಮಕವಾಗಿ ಪರಿಣಮಿಸಿದೆ.

    ಸೇನಾ ಬಲದಲ್ಲಿ ಇಷ್ಟೋಂದು ಪ್ರಮಾಣದ ಕೊರತೆ ಇದ್ರೆ, ಶತೃಗಳಿಗೆ ಅದು ವರದಾನವಾಗೋ ಸಾಧ್ಯತೆ ಇದೆ. ಇದೇ ಟೈಮಲ್ಲಿ ಹೊಂಚು ಹಾಕಿ ಸಂಚು ರೂಪಿಸಿ ಯುದ್ಧಕ್ಕೆ ನಾಂದಿ ಹಾಡಿದ್ರೆ, ಅದು ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

    ಇದೇ ಪರಿಸ್ಥಿತಿ 1962 ರಲ್ಲೂ ಕೂಡ ಎದುರಾಗಿತ್ತು. ಆಗ ಎಂಥಾ ದುರಂತ ನಡೆದಿತ್ತು ಗೊತ್ತಾ..? ಇಡೀ ಭಾರತವೇ ಮರೆಯದ ಘನ ಘೋರ ರಕ್ತಪಾತಕ್ಕೆ ನಾಂದಿ ಹಾಡಿತು..
----------------------------
    ಭಾರತದ ಇಂಚಿಂಚು ಚಲನವಲನಗಳನ್ನ ವೈರಿ ರಾಷ್ಟ್ರಗಳು ಗಮನಿಸ್ತಾನೇ ಇರುತ್ವೆ. ಇಂಥಾ ಒಂದು ಅವಕಾಶ ಸಿಕ್ರೂ ಸಾಕು.. ಯುದ್ಧಕ್ಕೆ ಮುನ್ನುಡಿ ಹಾಕುತ್ವೆ.. 1962 ರಲ್ಲಿ ಆಗಿದ್ದು ಅದೇನೇ..

    ನಿಜ.. ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಸಂಚು ಹಾಕಿ ಕಾಯ್ತಾ ಇದ್ದ ಚೀನಾಗೇ ಅದೊಂದು ದಿನ ಬಂದೇ ಬಿಟ್ತು.. 1962 ರಲ್ಲಿ ಇಂಥದ್ದೇ ಟೈಮ್ ನೋಡ್ಕೊಂಡೇ ಭಾರತದ ಮೇಲೆ ಯುದ್ಧ ಸಾರಿತ್ತು ಚೀನಾ..

    ಒಂದಲ್ಲ ಎರಡಲ್ಲ ಕಣ್ರಿ. ಬರೋಬ್ಬರಿ 30 ದಿನಗಳ ಕಾಲ ಈ ಯುದ್ಧ ನಡೀತು. ಯುದ್ಧ ಭೂಮಿಯಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಉಂಟಾಯ್ತು. ಹರಿದ ಬೂಟುಗಳನ್ನ ಹಾಕಿಕೊಂಡು, ಮದ್ದು ಗುಂಡುಗಳಿಲ್ಲದೇ, ಕತ್ತಿಗಳನ್ನು ಹಿಡ್ಕೊಂಡು ಯುದ್ಧ ಮಾಡ್ತಿದ್ರು ನಮ್ಮ ಸೈನಿಕರು.. ಇದನ್ನ ಬಳಸಿಕೊಂಡ ಚೀನಾ ಸೈನಿಕರು ಭಾರತದ ಸೇನೆಯನ್ನು ಮೀರಿ ಮುನ್ನುಗ್ಗಿ ಬಂತು..

    ಇನ್ನೇನು ಭಾರತಕ್ಕೆ ಹಿನ್ನಡೆಯಾಗುತ್ತೇನೋ ಅನ್ನೋಷ್ಟ್ರಲ್ಲಿ, ಚೀನಾನೇ ಯುದ್ಧದಿಂದ ಹಿಂದೆ ಸರೀತು.. ಈ ಯುದ್ಧದಲ್ಲಿ 1,383 ಭಾರತೀಯ ಸೈನಿಕರು ರಣರಂಗದಲ್ಲೇ ವೀರ ಮರಣವನ್ನಪ್ಪಿದ್ರು.. ಸಾವಿರಕ್ಕೂ ಹೆಚ್ಚು ಸೈನಿಕರು ಗಾಯಗೊಂಡ್ರು.. 1,700  ಕ್ಕೂ ಹೆಚ್ಚಿನ ಸೈನಿಕರು ಇವತ್ತಿಗೂ ಕಣ್ಮರೆಯಾಗಿದ್ದಾರೆ.

    ಭಾರತದ ಸೇನಾ ಶಕ್ತಿಯಲ್ಲಿ ಕೊರತೆ ಉಂಟಾದ್ರೆ ಎಂಥಾ ದುರಂತ ಸಂಭವಿಸುತ್ತೆ ಅನ್ನೋದಕ್ಕೆ ಚೀನಾ ಯುದ್ಧಾನೇ ಸಾಕ್ಷಿ. ಹಾಗಂತ ನಮ್ಮ ಭಾರತೀಯ ಸೈನಿಕರ ಶಕ್ತಿ ಏನೂ ಕಡಿಮೆ ಇಲ್ಲ.. ಶಸ್ತ್ರಾಸ್ತ್ರಗಳ ಕೊರತೆ ಇದ್ರೂ, ಚೀನಾವನ್ನ ಹಿಂದಿಕ್ಕಿದ್ದಾರೆ. 1999 ರ ಕಾರ್ಗಿಲ್​ ಯುದ್ಧದಲ್ಲಿ ಪಾಕ್​ ಸೇನೆಯನ್ನು ಧೂಳಿಪಟ ಮಾಡಿದೆ. ಆ ಮೂಲಕ ದೇಶವನ್ನ ಶತೃಗಳಿಂದ ರಕ್ಷಣೆ ಮಾಡಿದ್ದಾರೆ.

    ಇಷ್ಟೆಲ್ಲಾ ಗೊತ್ತಿದ್ರೂ ಕೇಂದ್ರ ಸರ್ಕಾರ ಸೇನಾಬಲವನ್ನು ಹೆಚ್ಚಿಸೋ ಗೋಜಿಗೇ ಹೋಗ್ತಿಲ್ಲ.. ಕಳೆದ ಹತ್ತಾರು ವರ್ಷಗಳಿಂದ ಯುದ್ಧೋಪಕರಣಗಳ ಕೊರತೆ ಇದೆ. ಹೀಗಿರುವಾಗ್ಲೇ, ಸೇನೆಗೆ ನೀಡಲಾಗ್ತಿದ್ದ ಅನುದಾನವನ್ನ ಮತ್ತಷ್ಟು ಕಡಿಮೆ ಮಾಡಿದೆ ಕೇಂದ್ರ ಸರ್ಕಾರ..

    ಈ ಎಲ್ಲಾ ಕಾರಣಗಳಿಂದ ಯುದ್ಧೋಪಕರಣಗಳನ್ನು ಖರೀದಿಸೋದಕ್ಕೆ ಆಗ್ತಾ ಇಲ್ಲ.. ಇದರಿಂದ ಸೈನಿಕರಿಗೆ ಬೇಕಾದ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸೋದಕ್ಕೆ ಸಾಧ್ಯವಾಗ್ತಿಲ್ಲ. ಈ ಎಲ್ಲಾ ಅಂಶಗಳನ್ನ ಸಿಎಜಿ ವರದಿಯಲ್ಲಿ ಉಲ್ಲೇಖಿಸಿ ಶುಕ್ರವಾರ ಸಂಸತ್ತಿನ ಮುಂದೆ ಮಂಡಿಸಲಾಗಿದೆ. ಜೊತೆಗೆ ಶಸ್ತ್ರಾಸ್ತ್ರಗಳ ಕೊರತೆಗೆ ಕಾರಣವಾದ ಕೇಂದ್ರ ರಕ್ಷಣಾ ಸಚಿವಾಲಯವನ್ನೂ ತರಾಟೆಗೆ ತೆಗೆದುಕೊಳ್ಳಲಾಗಿದೆ. ಇನ್ನಾದ್ರೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮವನ್ನ ತೆಗೆದುಕೊಳ್ಳಬೇಕಿದೆ. ಸೇನೆಗೆ ಬೇಕಾದ ಎಲ್ಲಾ ಶಸ್ತ್ರಾಸ್ತ್ರಗಳನ್ನ ಪೂರೈಕೆ ಮಾಡಬೇಕಿದೆ. ಇಲ್ಲವಾದಲ್ಲಿ 1962 ರಲ್ಲಿ ಉಂಟಾದ ದುರ್ಘಟನೆ ಮತ್ತೆ ಮರುಕಳಿಸೋ ಸಾಧ್ಯತೆಗಳಿವೆ
   
    ಸಿಎಜಿ ವರದಿಯನ್ನ ಆಧರಿಸಿ, ಕೇಂದ್ರ ಸರ್ಕಾರ ಆದಷ್ಟು ಬೇಗ ಹರಿಸಬೇಕಿದೆ. ಆ ಮೂಲಕ ಸೈನಿಕರಿಗೆ ಮತ್ತಷ್ಟು ಶಕ್ತಿ ನೀಡೋ ಕೆಲಸ ಮಾಡ್ಬೇಕಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು