ಸಿನೆಮಾ

Share This Article To your Friends

ಕಲಿಯುಗದಲ್ಲೂ ಪ್ರತ್ಯಕ್ಷನಾಗ್ತಿದ್ದಾನೆ ತಿಮ್ಮಪ್ಪ..!
ಕಲಿಯುಗದಲ್ಲೂ ಪ್ರತ್ಯಕ್ಷನಾಗ್ತಿದ್ದಾನೆ ತಿಮ್ಮಪ್ಪ..!
ಮಾತುಬಾರದ ಹುಡುಗ ಮಾತನಾಡಿದ್ದು ಹೇಗೆ..?
ರಾತ್ರಿ ಹೊತ್ತಲ್ಲಿ ತಿರುಮಲಕ್ಕೆ ಬರ್ತಾನಂತೆ ಬಾಲಾಜಿ..!
---------------------------------------------
------------------------------------
ತಿರುಪತಿ ತಿಮ್ಮಪ್ಪನ ಲೀಲೆ ಅಗಾಧ.. ಬೇಡಿದ ಭಕ್ತರ ಕಷ್ಟಗಳನ್ನು ಈಡೇರಿಸೋದಕ್ಕೆ, ಕಲಿಯುಗದಲ್ಲೂ ತಿಮ್ಮಪ್ಪ ಪ್ರತ್ಯಕ್ಷನಾಗ್ತಿದ್ದಾನಂತೆ.. ತಿರುಮಲಕ್ಕೆ ಬರೋ ಎಲ್ಲಾ ಭಕ್ತರನ್ನೂ ಹರಸ್ತಿದ್ದಾನೆಂತೆ.. ಇದಕ್ಕೆ ಪುಷ್ಠಿ ನೀಡುವಂತ ಹಲವು ವಿಸ್ಮಯಗಳು ತಿರುಪತಿಯಲ್ಲಿ ನಡೀತಿವೆ.

ಏಳು ಬೆಟ್ಟದ ಒಡೆಯ.. ತಿರುಪತಿ ಗಿರಿವಾಸ.. ಶ್ರೀ ವೆಂಕಟೇಶ.. ದೇವನೊಬ್ಬ ನಾಮ ಹಲವು ಅನ್ನೋ ಹಾಗೆ, ತಿರುಪತಿ ತಿಮ್ಮಪ್ಪನಿಗೆ ಇರೋ ಹೆಸರುಗಳೂ ಅಪಾರ.. ವೆಂಕಟೇಶ, ತಿಮ್ಮಪ್ಪ, ಬಾಲಾಜಿ, ಅಂತ ಹತ್ತಾರು ಹೆಸ್ರುಗಳಿದ್ರೂ, ಭಕ್ತರು ಕರೆಯೋದು ಮಾತ್ರ ಗೋವಿಂದ ಅಂತಲೇ..

ಗೋವಿಂದ ಗೋವಿಂದ ಅಂತ ಭಕ್ತರು ಕರೆದ್ರೆ ಸಾಕು.. ಈ ಕಲಿಯುಗದಲ್ಲೂ ತಿಮ್ಮಪ್ಪ ಪ್ರತ್ಯಕ್ಷನಾಗ್ತಾನಂತೆ.. ಬೇಡಿದ ಭಕ್ತರ ಕಷ್ಟಗಳನ್ನು ಆಲಿಸ್ತಾನಂತೆ.. ಆ ಕಷ್ಟಗಳಿಂದ ತನ್ನ ಭಕ್ತರನ್ನು ದೂರ ಮಾಡ್ತಾನಂತೆ.. ಅದಕ್ಕಾಗಿಯೇ ತಿರುಪತಿಗೆ ಬರೋ ಭಕ್ತರ ಸಂಖ್ಯೆ, ದಿನೇ ದಿನೇ ಹೆಚ್ಚಾಗ್ತಿದ್ಯಂತೆ..

ತಿರುಪತಿಯಲ್ಲಿ ತಿಮ್ಮಪ್ಪ ಈಗಲೂ ಇದ್ದಾನೆ ಅಂತ ಭಕ್ತರು ಮಾತನಾಡಿಕೊಳ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂಥ ಹತ್ತು ಹಲವು ವಿಸ್ಮಯಗಳು ಕೂಡ, ತಿರುಪತಿಯಲ್ಲಿ ನಡೀತಿವೆ. ತಿಮ್ಮಪ್ಪನ ಸನ್ನಿಧಾನದಲ್ಲಿ ನಡೆದ ವಿಸ್ಮಯಗಳನ್ನು ನೋಡಿದ್ರೆ, ನೀವು ಕೂಡ ಒಂದು ಕ್ಷಣ ಬೆಚ್ಚಿ ಬೀಳ್ತೀರಾ.. ಕಲಿಯುಗದಲ್ಲಿ ಇದೆಲ್ಲಾ ಸಾಧ್ಯಾನಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರ.. ತಿಮ್ಮಪ್ಪ ಈಗ್ಲೂ ತಿರುಪತಿಯಲ್ಲಿ ಇದ್ದಾನೆ.. ಬೇಡಿ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸ್ತಿದ್ದಾನೆ ಅಂತ, ನೀವು ಕೂಡ ನಂಬ್ತೀರ..

ಮಾತುಬಾರದ ಹುಡುಗ ಮಾತನಾಡಿಬಿಟ್ಟ..!
 2002 ರಲ್ಲಿ ವಿಸ್ಮಯ ಸೃಷ್ಟಿಸಿದ ತಿಮ್ಮಪ್ಪ..!

ಈತನ ಹೆಸ್ರು ದೀಪಕ್​ ಅಂತ.. ದೆಹಲಿ ಮೂಲದವನು.. ಈತ 4 ವರ್ಷದವನಾಗಿದ್ದಾಗ, ಇದ್ದಕ್ಕಿದ್ದಂತೆ ಮಾತು ಹೋಯ್ತು.. ಯಾವ ಡಾಕ್ಟರ್​ಗೆ ತೋರಿಸಿದ್ರೂ, ಯಾವ ಊರು ಸುತ್ತಿದ್ರೂ, ಈತನಿಗೆ ಮಾತು ಬರಲೇ ಇಲ್ಲ.. ಕಂಡ ಕಂಡ ದೇವ್ರಿಗೆ ಕೈ ಮುಗಿದ್ರೂ,  ಮಗನ ಸಮಸ್ಯೆ ಪರಿಹಾರವಾಗ್ಲಿಲ್ಲ.. ಕೊನೆಯದಾಗಿ ಇವ್ರು ಬಂದಿದ್ದು ತಿಮ್ಮಪ್ಪನ ಸನ್ನಿಧಾನಕ್ಕೆ,..
 
ಮಗನಿಗೆ ಮಾತು ಬರೋದಿಲ್ಲ ಅಂತ ಇವ್ರೆಲ್ಲಾ ನಿರ್ಧರಿಸಿಬಿಟ್ಟಿದ್ರು.. ಆದ್ರೆ ನಿಮ್ಮ ಮಗನನ್ನು ತಿರುಪತಿಗೆ ಕರ್ಕೊಂಡು ಹೋಗಿ ಒಳ್ಳೇದಾಗುತ್ತೆ ಅಂತ ಕೆಲವರು ಹೇಳಿದ್ರು.. ಅದರಂತೆ ಮನಸ್ಸಿಗೆ ಸಮಾಧಾನವಾದ್ರೂ ಸಿಗಲಿ ಅನ್ನೋ ಕಾರಣಕ್ಕೆ 2002 ರಲ್ಲಿ ದೀಪಕ್​ ಮತ್ತು ಕುಟುಂಬದವರು ತಿರುಪತಿಗೆ ಬಂದ್ರು..  ತಿಮ್ಮಪ್ಪನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಬಾಲಾಜಿಯ ದರ್ಶನ ಪಡೆದ್ರು.. ವಿಚಿತ್ರವೋ, ವಿಸ್ಮಯವೋ ಗೊತ್ತಿಲ್ಲ.. ತಿಮ್ಮಪ್ಪನ ಈತನಿಗೆ ಮಾತು ಕೊಟ್ಟುಬಿಟ್ಟಿದ್ದ.. 14 ವರ್ಷ ಮಾತನಾಡದ ದೀಪಕ್​​, ಗೋವಿಂದನಿಗೆ ನಮಿಸಿದ ಕ್ಷಣವೇ, ಪಟ ಪಟ ಅಂತ ಮಾತನಾಡೋಕೆ ಶುರು ಮಾಡಿದ.. ಈತ ಹೇಗೆ ಮಾತಾಡ್ತಾನೆ ಅನ್ನೋದನ್ನು ನೀವೇ ಒಂದ್ಸಲ ಕೇಳಿಸಿಕೊಳ್ಳಿ

ಮಗನಿಗೆ ಮಾತು ಬಂದಿದ್ದೇ ತಡ, ಹೆತ್ತವರಿಗೆ ಎಲ್ಲಿಲ್ಲದ ಸಂತೋಷ.. ತಿಮ್ಮಪ್ಪನ ಲೀಲೆ ಬಗ್ಗೆ ದೀಪಕ್​ರ ತಾಯಿ ಹೇಳೋದು ಹೀಗೆ..

ಉಮಾ -‘ನನ್ನ ಮಗ 14 ವರ್ಷಗಳಿಂದ ಮಾತನಾಡ್ತಾ ಇರಲಿಲ್ಲ. ದೇವರ ದರ್ಶನದಿಂದ ಮಾತನಾಡ್ತಿದ್ದಾನೆ)ದೀಪಕ್​​ನ 

ಈ ದೀಪಕ್​ಗೆ ಮಾತು ಬಂದಿದ್ದು ನಿಜಕ್ಕೂ ವಿಸ್ಮಯ.. ದೇಶ ವಿದೇಶಗಳನ್ನು ಸುತ್ತಿದ್ರೂ ಪರಿಹಾರವಾಗದ ಸಮಸ್ಯೆ, ತಿಮ್ಮಪ್ಪನ ಸನ್ನಿಧಾನದಲ್ಲಿ ಪರಿಹಾರವಾಗಿದೆ. ಮಾಗತುಬಾರದ ವ್ಯಕ್ತಿ ಪಟ ಪಟ ಅಂತ ಮಾತನಾಡೋದಕ್ಕೆ ಶುರು ಮಾಡಿದ್ದಾನೆ. ಕಲಿಯುಗದಲ್ಲಿ, ಇಂಥದ್ದೊಂದು ವಿಸ್ಮಯ ನಡೆದಿರೋದು, ನಿಜಕ್ಕೂ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಅಷ್ಟೇ ಅಲ್ಲ, ತಿಮ್ಮಪ್ಪನ ಸನ್ನಿಧಾನದಲ್ಲಿ ಇಂಥದ್ದೊಂದು ಅಚ್ಚರಿಯ ಘಟನೆ ನಡೆದಿರೋದು ಕಂಡು, ‘ತಿಮ್ಮಪ್ಪ ತಿರುಪತಿಯಲ್ಲಿ ನೆಲೆಸಿದ್ದಾನೆ. ಕಲಿಯುಗದಲ್ಲೂ ಭಕ್ತರ ಕಷ್ಟಗಳನ್ನು ನಿವಾರಿಸ್ತಿದ್ದಾನೆಅಂತ ಮಾತನಾಡಿಕೊಳ್ತಿದ್ದಾರೆ.

ಇಷ್ಟೇ ಅಲ್ಲ.. ರಾತ್ರಿ ಸಮಯದಲ್ಲಿ ತಿರುಮಲ ಪೂರ್ತಿ ಸುತ್ತಾಡ್ತಾನಂತೆ ತಿಮ್ಮಪ್ಪ.. ದರ್ಶನಕ್ಕೆ ಕಾಯ್ತಾ ಇರೋ ಭಕ್ತರನ್ನ ಭೇಟಿ ಮಾಡಿ, ಅವರ ಕಷ್ಟಗಳನ್ನ ಆಲಿಸ್ತಾನಂತೆ. 1979 ರಲ್ಲಿ ನಡೆದ ಘಟನೆ, ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತೆ. ಆವತ್ತು ಏನಾಯ್ತು..? 
--------------------------------------
ಅದು ನವೆಂಬರ್​​ 7, 1979.. ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಒಂದು ವಿಸ್ಮಯ ನಡೆದಿತ್ತು.. ಆ ವಿಸ್ಮಯವನ್ನು ಕಂಡವರು, ನಿಜಕ್ಕೂ ಮೂಕ ವಿಸ್ಮಿತರಾದ್ರು.. ಅಷ್ಟಕ್ಕೂ ಆವತ್ತು ತಿರುಪತಿಯಲ್ಲಿ ನಡೆದಿದ್ದೇನು ಅಂತೀರಾ..? ಇಲ್ಲಿದೆ ನೋಡಿ ಆ ಸ್ಟೋರಿ.

ತಿರುಪತಿ ಅಂದ್ರೆ ವಿಸ್ಮಯಗಳ ತಾಣ.. ಇಲ್ಲಿ ಆಗಾಗ ವಿಸ್ಮಯಗಳು ನಡೀತಾನೇ ಇರುತ್ತೆ.. ಅಗೆದಷ್ಟು ವಿಸ್ಮಯಗಳ ರಾಶಿಯೇ ಇದೆ ಈ ತಿಮ್ಮಪ್ಪನ ಸನ್ನಿಧಿಯಲ್ಲಿ.. 
 
ಪ್ರತಿ ದಿನ ಮಧ್ಯರಾತ್ರಿ 1.30ಕ್ಕೆ ಏಕಾಂತ ಸೇವೆಯನ್ನು ನೆರವೇರಿಸಲಾಗುತ್ತೆ.. ಇದಾದ ನಂತರ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಗುತ್ತೆ.. ಮತ್ತೆ ಗರ್ಭಗುಡಿಯ ಬಾಗಿಲು ತೆಗೆಯೋದು ಬೆಳಿಗ್ಗೆ 3 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ..

.​​7, 1979ರಲ್ಲಿ ನಡೆದಿತ್ತು ಮತ್ತೊಂದು ವಿಸ್ಮಯ
ತಿಮ್ಮಪ್ಪನ ಸನ್ನಿಧಾನದಲ್ಲಿ ತಂತಾನೇ ಘಂಟನಾದ..!

ಹೌದು.. ನವೆಂಬರ್​ ​​7, 1979ರಲ್ಲಿ ಒಂದು ವಿಚಿತ್ರ ನಡೆದಿತ್ತು.. ಏಕಾಂತ ಸೆವೆಯ ನಂತರ ತಿಮ್ಮಪ್ಪನ ಗರ್ಭಗುಡಿಯನ್ನು ಮುಚ್ಚಲಾಗಿತ್ತು. ಇದಾದ ನಂತರ ಸುಮಾರು 2 ಗಂಟೆ 30 ನಿಮಿಷಕ್ಕೆ ದೇವಾಲಯದ ಗಂಟೆಗಳೆಲ್ಲಾ ಇದ್ದಕ್ಕಿದ್ದಂತೆ ಹೊಡೆದುಕೊಳ್ಳೋಕೆ ಶುರುವಾದವು..

ಯಾವಾಗ ದೇವಾಲಯದಲ್ಲಿ ಗಂಟೆಗಳು ಇದ್ದಕ್ಕಿದ್ದಂತೆ ಹೊಡೆದುಕೊಳ್ಳೋಕೆ ಶುರುವಾಯ್ತೋ..? ಆಗ ತಿರುಮಲ ಬೆಟ್ಟದಲ್ಲಿ ಒಂದು ಮಿಂಚಿನ ಬೆಳಕು ಕಾಣಿಸಿಕೊಂಡಿತು.. ಇದನ್ನು ಕಂಡ ಅಲ್ಲಿನ ಭಕ್ತರಿಗೆ ಎಲ್ಲಿಲ್ಲದ ಅಚ್ಚರಿ..


ತಿಮ್ಮಪ್ಪನಿಂದ ಪ್ರತಿ ದಿನವೂ ಲೋಕಸಂಚಾರ
ಬಾಲಾಜಿಗೆ ಗಂಟೆಗಳಿಂದ ಬಹುಪರಾಕ್​..!

ಅಲ್ಲಿನ ಭಕ್ತರು ನಂಬಿರೋ ಪ್ರಕಾರ, ತಿರುಪತಿ ತಿಮ್ಮಪ್ಪ ಪ್ರತಿ ದಿನ ರಾತ್ರಿ ಲೋಕ ಸಂಚಾರ ನಡೆಸ್ತಾನಂತೆ. ಭಕ್ತರ ಮನೆಗಳಿಗೆ ತೆರಳಿ, ಅವರಿಗೆ ದರ್ಶನ ನೀಡ್ತಾನಂತೆ.. ಅದ್ರಲ್ಲೂ ತನ್ನ ದರ್ಶನಕ್ಕಾಗಿ ಕ್ಯೂನಲ್ಲಿ ಕಾದು ಕುಳಿತಿರೋ ಭಕ್ತರ ಬಳಿಗೆ  ಬಂದು, ಅವರಿಗೆ ಆಶೀರ್ವದಿಸ್ತಾನಂತೆ..

ಹೀಗೆ ಹೀಗೆ ಲೋಕ ಸಂಚಾರ ನಡೆಸಿದ ತಿರುಪತಿ ಗಿರಿವಾಸ ಬೆಳಿಗ್ಗೆ 3 ಗಂಟೆಯೊಳಗೆ ವಾಪಸ್ ತಿರುಮಲಕ್ಕೆ ಬಂದು, ಗರ್ಭಗುಡಿ ಸೇರಿಕೊಳ್ತಾನಂತೆ.. ಆವತ್ತು ತಿಮ್ಮಪ್ಪ ಗರ್ಭಗುಡಿಗೆ ವಾಪಸ್ ಬರುವಾಗ, ದೇವಾಸ್ಥಾನದ ಗಂಟೆ ಸದ್ದು, ತಿಮ್ಮಪ್ಪನನ್ನು ಬರಮಾಡಿಕೊಂಡವು ಅಂತ ಹೇಳಲಾಗ್ತಿದೆ.

ಈ ಎಲ್ಲಾ ಅನುಭವಗಳನ್ನು ತಿಮ್ಮಪ್ಪನ ಭಕ್ತರು ತಮ್ಮ ಬ್ಲಾಗ್​​ನಲ್ಲಿ ಬರೆದುಕೊಂಡಿದ್ದಾರೆ.

ಬೆಳ್ಳಂ ಬೆಳಿಗ್ಗೆ ಅರ್ಚಕನಿಗೆ ಕಾದಿತ್ತು ಅಚ್ಚರಿ..!
ಬ್ರಾಹ್ಮಿ ಮುಹೂರ್ತದಲ್ಲಿ ಭಕ್ತನಿಗೆ ದರ್ಶನ..!

ಸುಮಾರು ನಲವತ್ತು ವರ್ಷಗಳ ಹಿಂದೆ, ಸಾಯಿ ಬಾಬಾನ ವೇಷದಲ್ಲಿ ಬಂದ ಬಾಲಾಜಿ, ಪ್ರಧಾನ ಅರ್ಚಕನಿಗೆ ದರ್ಶನ ಕೊಟ್ಟಿದ್ನಂತೆ. ಆ ಅನುಭವಗಳನ್ನು ಕೂಡ ಕೆಲವರು ಅಂತರ್ಜಾಲದಲ್ಲಿ ಹೇಳಿಕೊಂಡಿದ್ದಾರೆ.

ಅರ್ಚಕ ಪಾದ ಮುಟ್ಟಿದಾಗ ಗೋಚರವಾಯ್ತು ಅಚ್ಚರಿ!
ಕಣ್ಣು ಬಿಟ್ಟು ಭಕ್ತನತ್ತ ನೋಡಿದ ಬಾಲಾಜಿ..!

ಪ್ರತಿ ದಿನದಂತೆ, ತಿಮ್ಮಪ್ಪನ ಪೂಜೆಗೆ ಅಂತ ಅರ್ಚಕರೊಬ್ಬರು ಬೆಳಿಗ್ಗೆ 3 ಗಂಟೆಗೆ ಗರ್ಭಗುಡಿ ಪ್ರವೇಶ ಮಾಡಿದ್ದಾರೆ. ಈ ವೇಳೆ ವಿಗ್ರಹದ ಪಾದವನ್ನು ಮುಟ್ಟಿದಾಕ್ಷಣ, ಅದು ಶಿಲೆಯ ಬದಲು ಮನುಷ್ಯನ ರೂಪ ತಾಳಿತ್ತು ಅಂತ ಹೇಳಲಾಗಿದೆ.

ಅಷ್ಟೇ ಅಲ್ಲ, ನವೆಂಬರ್​​4, 1978 ರಲ್ಲಿ ಭಕ್ತರೊಬ್ಬರು ತಿಮ್ಮಪ್ಪನ ಬಳಿಗೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ, ತಿರುಪತಿಯಲ್ಲಿ ನೆಲೆಸಿರುವ ತಿಮ್ಮಪ್ಪನೇ ಸ್ವತಃ ಕಣ್ಣು ಬಿಟ್ಟು, ಭಕ್ತನನ್ನು ಹರಸಿದ್ದಾನಂತೆ. ಹೀಗಂತ ಭಕ್ತರೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಹೀಗೆ ತಿರುಪತಿಯಲ್ಲಿ ನೆಲೆಸಿರೋ ವೆಂಕಟೇಶ್ವರ, ಕಲಿಯುಗದಲ್ಲೂ ಭಕ್ತರಿಗೆ ದರ್ಶನ ನೀಡ್ತಾ ಇದ್ದಾನೆ.. ಆಗಾಗ ಭಕ್ತರ ಕಣ್ಣಿಗೆ ಕಾಣಿಸಿಕೊಂಡು, ತನ್ನ ಇರುವಿಕೆಯ ಬಗ್ಗೆ ಸೂಚನೆ ನೀಡ್ತಿದ್ದಾನೆ..

ಇಷ್ಟೇ ಅಲ್ಲ.. ವೈಂಕುಂಠ ಏಕಾದಶಿ ದಿನ ಕಾಣಿಸಿಕೊಂಡ ಚಂದ್ರನಲ್ಲೂ ಒಂದು ವಿಚಿತ್ರ ಆಕಾರ ಗೋಚರವಾಗಿದೆ. ತಿರುಮಲದಲ್ಲಿರುವ ಏಳು ಬೆಟ್ಟದಲ್ಲೂ ತಿಮ್ಮಪ್ಪನ ಇರುವಿಕೆ ಕಾಣಿಸುತ್ತೆ.. 
----------------------------------------------------

ಅದು ಏಕಾದಶಿಯ ದಿನ.. ತಿರುಪತಿಗೆ ತೆರಳಿದ್ದ ಭಕ್ತರು, ಹಾಗೇನೇ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಣ ಮಾಡ್ತಿದ್ರು.. ಆಗ ಚಂದ್ರನಿಗೆ ಒಂಚೂರು ಜೂಮ್ಹಾಕಿದ್ರು.. ಆಗ ಚಂದ್ರನ ಮೇಲ್ಮೈಲೆ ಒಂದು ವಿಚಿತ್ರ ಗೋಚರವಾಯ್ತು.. 

ತಿರುಪತಿಯ ಬಾಲಾಜಿ ಕಲಿಯುಗದಲ್ಲೂ ಭಕ್ತರಿಗೆ ಕಾಣಿಸಿಕೊಳ್ತಿದ್ದಾನೆ. ಆಗಾಗ ಕೆಲವು ವಿಸ್ಮಯಗಳನ್ನು ಸೃಷ್ಟಿಸಿ, ತನ್ನ ಇರುವಿಕೆಯನ್ನು ನರಮಾನವರಿಗೆ ತಿಳಿಸ್ತಾ ಇದ್ದಾನೆ. ಇದಕ್ಕೆ ಪುಷ್ಠಿ ನೀಡುವಂತೆ ಹಲವು ಘಟನೆಗಳು ನಡೆದಿವೆ. ಇದರ ಸಾಲಿಗೆ ಮತ್ತೊಂದು ಘಟನೆ ಕೂಡ ಸೇರ್ಪಡೆಗೊಂಡಿದೆ. ಅದೇ ವೈಕುಂಠ ಏಕಾದಶಿಯಂದು ಕಾಣಿಸಿಕೊಂಡ ಚಂದ್ರನ ಆಕಾರ..

ತಿರುಪತಿಗೆ ಬರ್ತಾ ಇದ್ದ ಭಕ್ತರು, ತಮ್ಮ ಪ್ರಯಾಣವನ್ನು ಮೊಬೈಲ್​ನಲ್ಲಿ ಚಿತ್ರೀಕರಣ ಮಾಡ್ತಾ ಇದ್ರು.. ಈ ವೇಳೆ ಭೂಮಿಯ ಮೇಲೆ ಬೆಳದಿಂಗಳು ಚೆಲ್ತಾ ಇದ್ದ ಚಂದಿರನ ರೂಪ ಕಂಡಿದೆ. ಹಾಗೆ ನೋಡ್ತಾ ಇರಬೇಕಾದ್ರೆ, ಆ ಚಂದ್ರನಲ್ಲಿ ಒಂದು ವಿಚಿತ್ರ ಆಕಾರ ಕಾಣಿಸಿಕೊಂಡಿದೆ. ಚಂದ್ರನ ಮೇಲ್ಮೈ ಮೇಲೆ ಕಾಣಿಸಿಕೊಂಡ ಆ ಆಕಾರ ಏನು ಅಂತ ಜೂಮ್ ಹಾಕಿ ನೋಡಿದ್ರೆ, ಅಲ್ಲಿ ಒಂದು ಅಚ್ಚರಿ ಎದುರಾಗಿತ್ತು..

ತಿಮ್ಮಪ್ಪನಿಗೆ ಪ್ರಿಯವಾದ ಆ ದಿನದಂದು, ಚಂದ್ರನ ಮೇಲ್ಮೈ ಮೇಲೆ ಓಂ ಆಕಾರ ಕಾಣಿಸ್ತಿತ್ತು..

ನೋಡಿದ್ರಲ್ಲಾ.. ತಿರುಪತಿ ತಿಮ್ಮಪ್ಪನ ಅಂಗಳದಲ್ಲಿ, ಏನೆಲ್ಲಾ ವಿಸ್ಮಯಗಳು ಕಾಣಿಸಿಕೊಳ್ತಿವೆ ಅಂತ.. ಚಂದ್ರನಲ್ಲಿ ವಿಚಿತ್ರ ಆಕಾರ ಕಾಣಿಸಿಕೊಳ್ತಿರೋದು ಇದೇ ಮೊದಲೇನಲ್ಲ.. ಈ ಹಿಂದೆ ಚಂದ್ರನ ಮೇಲೆ ಮೂರು ಬಿಳಿ ಪಟ್ಟೆಗಳು ಕಾಣಿಸಿಕೊಂಡಿದ್ದವು.. ಅದು ದೇವರಿಗೆ ವಿಭೂತಿ ಹಚ್ಚಿದ ರೀತಿಯಲ್ಲಿತ್ತು.. ಅದು ಕೂಡ ತಿರುಮಲದಲ್ಲಿ ನಡೀತಿರೋ ವಿಸ್ಮಯಗಳಲ್ಲಿ ಒಂದು..

ತಿರುಮಲದ ಬೆಟ್ಟದಲ್ಲೂ ಅಡಗಿದೆ ವಿಸ್ಮಯ..!
ಏಳು ಬೆಟ್ಟದಲ್ಲೂ ಕಾಣಿಸುತ್ತೆ ತಿಮ್ಮಪ್ಪನ ಇರುವಿಕೆ

ಇನ್ನು ತಿರುಮಲದ ಏಳು ಬೆಟ್ಟಗಳಲ್ಲೂ ಕೂಡ, ತಿಮ್ಮಪ್ಪನ ಅಸ್ತಿತ್ವ ಕಾಣಿಸುತ್ತೆ. ಏಳು ಬೆಟ್ಟಗಳನ್ನು ಒಂದು ಆಂಗಲ್​ನಲ್ಲಿ ನೋಡಿದ್ರೆ, ಅದ್ರಲ್ಲಿ ತಿರುಪತಿ ತಿಮ್ಮಪ್ಪನ ಮುಖ ಕಾಣಿಸುತ್ತೆ..

ಈ ಚಿತ್ರ ನೋಡಿ. ಇದ್ರಲ್ಲಿ ತಿಮ್ಮಪ್ಪನ ಹಣೆ, ಆತನ ಹಣೆಯ ಮೇಲಿರುವ ನಾಮ, ಕಣ್ಣುಗಳಂತೆ ಕಾಣುವ ಆಕಾರ, ಮೂಗು ಮತ್ತು ತುಟಿ ಎಲ್ಲವೂ ಅಚ್ಚುಕಟ್ಟಾಗಿ ಕಾಣಿಸುತ್ತೆ.. ಇದನ್ನು ನೋಡಿದ್ರೆ, ತಿರುಮಲದ ಈ ಏಳು ಬೆಟ್ಟಗಳಲ್ಲೂ ತಿಮ್ಮಪ್ಪನ ಅಸ್ತಿತ್ವ ಇದೆ ಅನ್ನೋದು ಸ್ಪಷ್ಟವಾಗುತ್ತೆ..

ಭಕ್ತರ ಮನೆಯಲ್ಲಿ ವಿಸ್ಮಯ ಸೃಷ್ಟಿಸಿ ಬಾಲಾಜಿ
ಪೂಜೆಗಿಟ್ಟಿದ್ದ ನೈವೇದ್ಯ ಇದ್ದಕ್ಕಿದ್ದಂತೆ ಮಾಯ..!

ಇಷ್ಟೇ ಅಲ್ಲ, ದೇವರ ಮನೆಯಲ್ಲಿ ಈ ಬಾಲಾಜಿಯನ್ನು ಪೂಜಿಸಿ, ನೈವೇದ್ಯೆ ಮಾಡಿದ ನಂತರ, ಅದನ್ನು ತಿಂದಿರೋ ಕೆಲವು ವಿಚಿತ್ರ ಘಟನೆಗಳೂ ನಡೆದಿವೆಯಂತೆ.. 

ನೈವೇದ್ಯಕ್ಕೆ ಇಡಲಾಗಿದ್ದ ಬಾಳೆ ಹಣ್ಣು ಅರ್ಧ ಖಾಲಿಯಾಗಿದೆ. ಬೊಟ್ಟಲು ತುಂಬ ಇಡಲಾಗಿದ್ದ ಅನ್ನದಲ್ಲಿ ಒಂದು ಸ್ಪೂನ್​​ ಖಾಲಿಯಾಗಿದೆ. ಬ್ರೆಡ್ಮೇಲೆ ಓಂ ಆಕಾರ ಮತ್ತು ತ್ರಿಶೂಲದ ಆಕಾರಗಳು ಕಾಣಿಸಿಕೊಂಡಿದ್ದು, ವಿಚಿತ್ರವನ್ನು ಸೃಷ್ಟಿಸಿವೆ. ಇವೆಲ್ಲಾ ನೋಡಿದರೆ, ಇದು ಕನಸೋ ನನಸೋ ಅನ್ನೋದೇ ಗೊತ್ತಾಗೋದಿಲ್ಲ.. ನಂಬಬೇಕಾ ಬಿಡ್ಬೇಕಾ ಅನ್ನೋದು ಕೂಡ ತಿಳಿಯೋದಿಲ್ಲ.. ಆದ್ರೆ, ಪರಮ ಭಕ್ತನಿಗೆ ಕಾಣಿಸಿಕೊಳ್ಳೋ ತಿಮ್ಮಪ್ಪ, ಆಗಿಂದಾಗೆ ಇಂಥ ಅಚ್ಚರಿಗಳನ್ನು ಸೃಷ್ಟಿಸುವ ಮೂಲಕ, ನಿಬ್ಬೆರಗಾಗುವಂತೆ ಮಾಡ್ತಾ ಇದ್ದಾನೆ.

ಇಂಥಾ ಹತ್ತಾರು ವಿಸ್ಮಯಗಳನ್ನು, ವಿಚಿತ್ರಗಳನ್ನು ಸೃಷ್ಟಿಸೋ ಮೂಲಕ, ತನ್ನ ಇರುವಿಕೆಯನ್ನು ತೋರಿಸ್ತಿದ್ದಾನೆ ತಿರುಪತಿ ತಿಮ್ಮಪ್ಪ.. ಈ ಕಲಿಯುಗದಲ್ಲೂ ಭಕ್ತರಿಗೆ ದರ್ಶನ ನೀಡುವ ಮೂಲಕ, ಬೇಡಿ ಬಂದ ಭಕ್ತರ ಕಷ್ಟಗಳನ್ನು ಈಡೇರಿಸ್ತಿದ್ದಾನೆ. ಹೀಗಾಗಿನೇ, ದಿನ ನಿತ್ಯ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗ್ತಾ ಇದೆ.

ಕೇಳಿದ್ದನ್ನು ಕೊಡೋ ಕಲಿಯುಗ ಕಾಮಧೇನುವಿನ ದರ್ಶನ ಪಡೆಯೋಕೆ, ಪ್ರತಿ ನಿತ್ಯವೂ ಲಕ್ಷಾಂತರ ಮಂದಿ ಭಕ್ತರು ಬರ್ತಾ ಇದ್ದಾರೆ. ಮೂರು ನಾಲ್ಕು ದಿನಗಳ ಕಾಲ ಕ್ಯೂನಲ್ಲಿ ನಿಂತು ತಿಮ್ಮಪ್ಪನ ದರ್ಶನ ಪಡೀತಿದ್ದಾರೆ. ಆ ಮೂಲಕ, ತಮ್ಮ ಕಷ್ಟನಷ್ಟಗಳನ್ನು ಪರಿಹರಿಸಪ್ಪಾ ಅಂತ ತಿಮ್ಮಪ್ಪನಲ್ಲಿ ಬೇಡಿಕೊಳ್ತಿದ್ದಾರೆ. ಬೇಡದವರಿಗೆ ಆಶೀರ್ವಾದ ನೀಡೋ ತಿಮ್ಮಪ್ಪ, ಕೆಲವರಿಗೆ ಮಾತ್ರ ಪ್ರತ್ಯಕ್ಷವಾಗಿ ಕಾಣಿಸಿಕೊಂಡು ದರ್ಶನ ನೀಡ್ತಿದ್ದಾನಂತೆ. ಹೀಗಂತ ಇಲ್ಲಿನ ಭಕ್ತರು ಹತ್ತಾರು ಕಥೆಗಳನ್ನು ಹೇಳ್ತಿದ್ದಾರೆ. ಭಕ್ತರು ಹೇಳೋದನ್ನು ಕೇಳಿದ್ರೆ, ಇದೆಲ್ಲಾ ನಿಜಾನಾ..? ಅಥವ ಕೇಲವ ಭ್ರಮೇನಾ ಅನ್ನೋ ಹತ್ತಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತವೆ. ಆದ್ರೆ. ಕಂಡವರಿಗೆ ಮಾತ್ರವೇ ಗೊತ್ತು, ಭಗವಂತನ ಮಹಿಮೆ.. ಪರಮ ಬಕ್ತರಿಗೆ ಮಾತ್ರ ಇಂಥ ಅನುಭವಗಳಾಗುತ್ತವೆ. ಎಲ್ಲರಿಗೂ ಭಗವಂತನ ದರ್ಶನವಾಗಲೀ, ಆತನ ಇರುವಿಕೆಯ ಅನುಭವವಾಗಲೀ ಆಗೋದಿಲ್ಲ ಅನ್ನೋದು ಮತ್ತೆ ಕೆಲವರ ವಾದ..

ನೋಡಿದ್ರಲ್ಲಾ.. ಈ ಕಲಿಯುಗದಲ್ಲೂ ತಿಮ್ಮಪ್ಪ ಏನೆಲ್ಲಾ ಪವಾಡಗಳನ್ನು ಸೃಷ್ಟಿಸ್ತಿದ್ದಾನೆ ಅಂತ.. ಮಾತು ಬಾರದ ಹುಡುಗ ಮಾತನಾಡ್ತಾನೆ ಅಂದ್ರೆ, ಅದು ಸಾಮಾನ್ಯವಾದ ವಿಷಯ ಅಲ್ಲ.. ಚಂದ್ರನಲ್ಲಿ ಓಂಕಾರ ಕಾಣಿಸಿಕೊಳ್ಳೋದು, ರಾತ್ರಿ ಸಮಯದಲ್ಲಿ, ದೇವಾಲಯದ ಗಂಟೆಗಳು ಇದ್ದಕ್ಕಿದ್ದಂತೆ ಹೊಡೆದುಕೊಳ್ಳೋದು, ಎಲ್ಲವೂ ನಮ್ಮ ಊಹೆಗೂ ಮೀರಿದ್ದು.. ಇವೆಲ್ಲವೂ ತಿಮ್ಮಪ್ಪನ ಇರುವಿಕೆಯನ್ನು ಸಾರಿ ಹೇಳುತ್ತವೆ ಅನ್ನೋದು ಸಂಪ್ರದಾಯವಾದಿಗಳ ಅಂಬೋಣ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು