ಸಿನೆಮಾ

Share This Article To your Friends

ಬದುಕಾಯ್ತು ಭಸ್ಮ - ದೀಪಾವಳಿಯ ದುರಂತಗಳು
ಅದು ಕತ್ತಲು ಕವಿದ ಸಮಯ. ಸೂರ್ಯ ಆಗ್ತಾನೇ ಮುಳುಗಿದ್ದ.. ಅಷ್ಟರಲ್ಲಿ ಯಾರೋ ಪಟಾಕಿ ಹೊಡೆದ ಶಬ್ಧ ಕೇಳಿಸಿತು.. ಅಲ್ಲಿನ ಪಟಾಕಿಯ ಅಬ್ಬರ ಎಷ್ಟಿತ್ತು ಅಂದ್ರೆ, ಕತ್ತಲಾಗಿದ್ದ ಇಡೀ ಊರೇ, ಬೆಳಕಾಗಿಬಿಡ್ತು.. ಆದ್ರೆ ಆ ಮೇಲೆ ಗೊತ್ತಾಯ್ತು.. ಆ ಬೆಳಕು ಜನರ ಕತ್ತಲೆಯನ್ನು ದೂರ ಮಾಡ್ಲಿಲ್ಲ.. ಬದುಕನ್ನೇ ಕಿತ್ತುಕೊಳ್ತು ಅಂತ..

ವಾಯ್ಸ್: ನೋಡಿ... ಚೆನ್ನಾಗಿ ನೋಡಿ.. ಇದನ್ನು ನೋಡಿ, ಯಾರೋ ಪಟಾಕಿ ಜೋರಾಗಿ ಹೊಡೀತಿದ್ದಾರೆ ಅಂತ ಅನ್ಕೋಬೇಡಿ.. ಇದು ಮನುಷ್ಯ ಹೊಡೆದ ಪಟಾಕಿಯಲ್ಲ.. ಆ ವಿಧಿ ಮನುಷ್ಯನ ಬದುಕನ್ನು ಬರ್ಬರವಾಗಿ ಮಾಡೋದಕ್ಕೆ ಹಚ್ಚಿದ ಬೆಂಕಿ..!

ವಾಯ್ಸ್: ಇದು ದೀಪಾವಳಿ ಸಮಯ.. ಇದೇ ಟೈಮಲ್ಲಿನೇ ಜನರು ಮುಗಿಬಿದ್ದು ಪಟಾಕಿ ಕೊಂಡುಕೊಳ್ತಾರೆ. ಪಟಾಕಿ ಮಾರಾಟ ಮಾಡೋದಕ್ಕೆ ಅಂತ ಹರಿಯಾಣದ ಫರೀದಾಬಾದ್​​ನಲ್ಲಿರೋ ದುಸೆಹ್ರಾ ಮೈದಾನದಲ್ಲಿ ಅಂಗಡಿಗಳನ್ನು ನಿರ್ಮಿಸಲಾಗಿತ್ತು.. ಸುಮಾರು 200ಕ್ಕೂ ಹೆಚ್ಚು ಪಟಾಕಿ ಅಂಗಡಿಗಳು ಈ ಮೈದಾನದಲ್ಲಿ ತಲೆ ಎತ್ತಿದ್ದವು.. ಆದ್ರೆ ನಿನ್ನೆ ಸಂಜೆ 6 ಗಂಟೆ ಸಮಯದಲ್ಲಿ, ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮವಾಗಿ ಇನ್ನೂರು ಅಂಗಡಿಗಳು ಸುಟ್ಟು ಭಸ್ಮವಾಗಿವೆ..!

ಪಟಾಕಿಯಿಂದ ಹೊತ್ತಿದ ಬೆಂಕಿಯ ನರ್ತನ ಎಷ್ಟಿತ್ತು ಅಂದ್ರೆ, ಅದರ ಸ್ಫೋಟ ದೂರದ ಜನರನ್ನೂ ಬೆಚ್ಚಿ ಬೀಳಿಸಿತ್ತು. ಜನರು ಮನೆಯಿಂದ ಹೊರಗೆ ಬಂದು ನೋಡಿದ್ರೆ, ಕತ್ತಲಾಗಿದ್ದ ಇಡೀ ಊರು ಬೆಳಕಿನಲ್ಲಿ ಕಂಗೊಳಿಸ್ತಾ ಇತ್ತು..


45 ನಿಮಿಷಗಳವರೆಗೆ ಹೊತ್ತಿ ಉರಿದ ಅಂಗಡಿಗಳು 
 200 ಅಂಗಡಿಗಳಲ್ಲಿದ್ದ ಪಟಾಕಿಗಳು ಸುಟ್ಟು ಭಸ್ಮ..! 

ವಾಯ್ಸ್: ಪ್ರತ್ಯಕ್ಷದರ್ಶಿಗಳ ಪ್ರಕಾರ, ಫರೀದಾಬಾದ್​ನಲ್ಲಿ ಪಟಾಕಿಯಿಂದ ಹೊತ್ತಿದ ಬೆಂಕಿ, ಸುಮಾರು 45 ನಿಮಿಷಗಳ ಕಾಲ ಹೊತ್ತಿ ಉರೀತಿತ್ತಂತೆ.. ಈ ವೇಳೆ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ರೂ ಕೂಡ, ತಕ್ಷಣ ಸ್ಥಳಕ್ಕೆ ಬರಲಿಲ್ಲ. ಹೀಗಾಗಿ ಒಂದು ಅಂಗಡಿಯಲ್ಲಿ ಹೊತ್ತಿಕೊಂಡ ಬೆಂಕಿ ಇಡೀ 200 ಅಂಗಡಿಗಳಿಗೆ ವ್ಯಾಪಿಸಿ, ಎಲ್ಲಾ ಪಟಾಕಿಗಳೂ ಸುಟ್ಟು ಭಸ್ಮವಾಗಿವೆ. ಸುಮಾರು 6 ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ಕೇವಲ 45 ನಿಮಿಷಗಳಲ್ಲಿ ಸುಟ್ಟು ಭಸ್ಮವಾಗಿವೆ.
ಫ್ಲೋ...
ವಾಯ್ಸ್: ಅದೃಷ್ಟವೆಂದ್ರೆ ಈ ದುರಂತದಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದ್ರೆ, 13 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.

ಆಂಧ್ರದಲ್ಲೂ ಪಟಾಕಿ ಅವಘಡ
17 ಮಂದಿ ಸಜೀವ ದಹನ..!

ಇನ್ನು ಕಳೆದ ಎರಡು ದಿನಗಳ ಹಿಂದೆ ಆಂಧ್ರಪ್ರದೇಶದ ಕಾಕಿನಾಡ ಪ್ರದೇಶದಲ್ಲೂ ಪಟಾಕಿ ಅವಘಡ ಸಂಭವಿಸಿತ್ತು. ವಿಶಾಖಪಟ್ಟಣಂನಿಂದ ಸುಮಾರು 160 ಕಿಮಿ ದೂರದಲ್ಲಿರುವ ಪಟಾಕಿ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 2 ಗಂಟೆಗಳ ಕಾಲ ಹೊತ್ತಿ ಉರಿದ ಬೆಂಕಿಯಲ್ಲಿ 14 ಮಂದಿ ಮಹಿಳೆಯರೂ ಸೇರಿದಂತೆ, 17 ಮಂದಿ ಸಜೀವವಾಗಿ ದಹನಗೊಂಡಿದ್ದಾರೆ.

 ತಮಿಳುನಾಡು - ಸೆಪ್ಟಂಬರ್​​ 2012

ಸೆಪ್ಟಂಬರ್​​ 2012 ರಲ್ಲಿ ತಮಿಳುನಾಡಿನ ಶಿವಕಾಶಿಯಲ್ಲಿ ಭೀಕರ ಪಟಾಕಿ ಅವಘಡ ಸಂಭವಿಸಿತ್ತು.. ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ರಿಂದ, 54 ಕ್ಕೂ ಹೆಚ್ಚು ಮಂದಿ ಬೆಂಕಿಯಲ್ಲಿ ಬೇಂದು ಹೋಗಿದ್ರು.. 78 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ರು..

ಬಿಹಾರ - ಸೆಪ್ಟಂಬರ್​​15, 2005: 

ಸೆಪ್ಟಂಬರ್​​15, 2005:  ಬಿಹಾರದ ಮೂರು ಸ್ಪೋಟಕದ ಗೋಡೌನ್ ಗಳಲ್ಲಿ ಕಾಣಿಸಿಕೊಂಡಿದ್ದ ಭಯಾನಕ ಬೆಂಕಿಗೆ 35 ಜನರು ಸಾವಿಗೀಡಾಗಿದ್ದರು.. ಜೊತೆಗೆ 50 ಜನರು ಬೆಂಕಿಯ ನರ್ತನಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದರು

ಇನ್ನು ದೀಪಾವಳಿ ಬಂತು ಅಂದ್ರೆ ಸಾಕು, ಹೆಚ್ಚಾಗಿ ಪಟಾಕಿ ಅವಘಡ ಸಂಭವಿಸುವುದು ತಮಿಳುನಾಡಿನಲ್ಲಿ.. ಕಳೆದ 5 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಕಾಣಿಸಿಕೊಂಡ ಪಟಾಕಿ ದುರಂತದಿಂದಾಗಿ ಸಮಾರು 208 ಮಂದಿ ಜೀವ ಕಳೆದುಕೊಂಡಿದ್ದಾರೆ. ವಿರುದ್ಧ್​ನಗರ ಒಂದೇ ಜಿಲ್ಲೆಯಲ್ಲಿ 130 ಕ್ಕೂ ಹೆಚ್ಚು ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯುಂಟಾಗಿದೆ. ಈ ಎಲ್ಲಾ ಅವಘಡಕ್ಕೆ ಪ್ರಮುಖ ಕಾರಣ ಸೂಕ್ತ ಸುರಕ್ಷತಾ ಕ್ರವನ್ನು ಕೈಗೊಳ್ಳದೇ ಇರೋದು..!ಫರೀದಾಬಾದ್​ ಅವಘಡದಲ್ಲಿ ಸುರಕ್ಷತೆಯ ನಿರ್ಲಕ್ಷ..!
ಪಟಾಕಿ ಅಂಗಡಿಯವರ ನಿರ್ಲಕ್ಷವೇ ಅನಾಹುತಕ್ಕೆ ಕಾರಣ..!
ಇನ್ನು ಪಟಾಕಿ ಅಂಗಡಿಯನ್ನು ಇಡ್ಬೇಕು ಅಂದ್ರೆ, ಅದಕ್ಕೆ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.  ಆದ್ರೆ ಈ ಸುರಕ್ಷತಾ ಕ್ರಮವನ್ನು ಕೈಗೊಳ್ಳದೇ ಇರೋದ್ರಿಂದಲೇ ಈ ಪಟಾಕಿ ಅವಘಡಗಳು ಸಂಭವಿಸ್ತಾ ಇವೆ. ನಿನ್ನೆ ಫರೀದಾಬಾದ್​ನಲ್ಲಿ 200 ಪಟಾಕಿ ಅಂಗಡಿಗಳು ಅಗ್ನಿಗೆ ಆಹುತಿಯಾಗಿದ್ದು, ಸುರಕ್ಷತೆಯ ಕೊರತೆಯಿಂದ ಮತ್ತು ಅಂಗಡಿ ಮಾಲೀಕರ ನಿರ್ಲಕ್ಷದಿಂದ..!


ಸುರಕ್ಷತೆಗೆ ಏನ್ ಮಾಡ್ಬೇಕು..?
-----------------------------------------
ಪಟಾಕಿ ಅಂಗಡಿಗಳನ್ನು ಇಡಲು ಅನುಮತಿ ಬೇಕು
ಸುರಕ್ಷತಾ ಕ್ರಮ ಕೈಗೊಂಡಿದ್ರೆ ಮಾತ್ರ ಅನುಮತಿ ಸಿಗುತ್ತೆ
ಅಂಗಡಿಯಲ್ಲಿ ಫೈರ್ಸೇಫ್ಟಿ ಸಿಲಿಂಡರ್​​ ಕಡ್ಡಾಯವಾಗಿ ಇರಬೇಕು
ಅಂಗಡಿಯ ಸುತ್ತಮುತ್ತ ಮಾಲೀಕರು ಕಟ್ಟೆಚ್ಚರ ವಹಿಸಬೇಕು
ಶಾರ್ಟ್ಸರ್ಕ್ಯೂಟ್​​ ಆಗುವಂಥ ಸನ್ನಿವೇಷಗಳ ಬಗ್ಗೆ ಎಚ್ಚರಿಕೆ
ಪಟಾಕಿ ವಸ್ತುಗಳ ಸಮೀಪ ಧೂಮಪಾನ ಮಾಡುವುದನ್ನು ನಿಶೇಧಿಸಿದೆ
ಸುರಕ್ಷತಾ ಕ್ರಮಗಳ ಬಗ್ಗೆ ತನಿಕಾಧಿಕಾರಿಗಳಿಂದ ಆಗಾಗ ಪರಿಶೀಲನೆ
ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದರೇ, ಅಂಥವರ ವಿರುದ್ಧ ಕಠಿಣ ಕ್ರಮ
ಪಟಾಕಿ ಉತ್ಪನ್ನಗಳು ವಿದ್ಯುತ್ಸರ್ಕ್ಯೂಟ್​​ನಿಂದ ದೂರವಿರಬೇಕು
ಪಟಾಕಿ ಕಾರ್ಮಿಕರು ಸೂಕ್ತ ಸುರಕ್ಷತಾ ಕ್ರಮವನ್ನು ಪಾಲಿಸಬೇಕು
ಪಟಾಕಿಗಳನ್ನು ಸಾಧ್ಯವಾದಷ್ಟು ನಿರ್ವಾತ ಪ್ರದೇಶದಲ್ಲಿ ಶೇಖರಿಸಿರಬೇಕು
ಹೀಟರ್​​ ಅಥವ ಬೆಚ್ಚನೆಯ ಸ್ಥಳದಿಂದ ಪಟಾಕಿಗಳನ್ನು ದೂರ ಇಡಬೇಕು
ಪಟಾಕಿ ಫ್ಯಾಕ್ಟರಿಗಳಲ್ಲಿ ಸೇಫ್ಟಿ ಆಫೀಸರ್​ಗಳು ಕಡ್ಡಾಯವಾಗಿ ಇರಬೇಕು
ಅಗ್ನಿ ಅವಘಡ ಸಂಭವಿಸಿದಾಗ, ಬೆಂಕಿ ನಂದಿಸಲು ತರಬೇತಿ ಪಡೆದಿರಬೇಕು
ಫ್ಲೋ....
ವಾಯ್ಸ್: ಈ ಎಲ್ಲಾ ನಿಯಮಗಳನ್ನು ಪಟಾಕಿ ಕಾರ್ಖಾನೆಗಳು ಪಾಲಿಸಿದ್ದೇ ಆದಲ್ಲಿ, ಇಂಥಾ ಅಗ್ನಿ ದುರಂತಗಳು ಸಂಭವಿಸೋದಿಲ್ಲ.. ಇಲ್ಲವಾದಲ್ಲಿ ಪ್ರತಿ ದೀಪಾಳಿ ಬಂದಾಗ್ಲೂ, ಇನ್ನಷ್ಟು ಅಮಾಯಕ ಕೂಲಿ ಕಾರ್ಮಿಕರು ಪಟಾಕಿಗೆ ಆಹುತಿಯಾಗಬೇಕಾಗುತ್ತೆ..!
ಫ್ಲೋ...

ಇನ್ನು ಪಟಾಕಿ ಹೊಡೆಯುವಾಗ್ಲೂ ಅನೇಕ ದುರಂತಗಳು ಸಂಭವಿಸಿ, ಬಹಳಷ್ಟು ಜನರ ಬದುಕೇ ಕತ್ತಲಾಗಿವೆ. ಕೆಲವರು ದೃಷ್ಟಿ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರ ಬದುಕು ದುರಂತದ ತುದಿ ತಲುಪಿದೆ. ಹೀಗಾಗಿ ಪಟಾಕಿಯನ್ನು ಹೊಡೀಬೇಕಾದ್ರೂ, ಕೆಲವೊಂದು ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡ್ಬೇಕಾಗಿದೆ.

ಪಟಾಕಿ ಹುಷಾರಾಗಿ ಹೊಡೀರಿ (ಹೆಡ್)
--------------------------------------------------
ಪರಿಸರದ ಮೇಲೆ ಕಾಳಜಿ ಇದ್ರೆ ಪಟಾಕಿ ಹೊಡಿಬೇಡಿ
ಪಟಾಕಿ ಹೊಡೀಲೇಬೇಕು ಅಂದ್ರೆ, ಸಣ್ಣ ಪಟಾಕಿ ಹೊಡೀರಿ
ಪಟಾಕಿ ಹೊಡೆಯುವಾಗ ನಿಮ್ಮ ಬಟ್ಟೆಗಳ ಮೇಲೆ ಗಮನ ಇರಲಿ
ಪಟಾಕಿ ಹೊಡೆಯುವಾಗ ಬಟ್ಟೆಗೆ ಕಿಡಿ ತಗುಲುವ ಸಾಧ್ಯತೆ ಇರುತ್ತದೆ
ಹತ್ತಿ ಬಟ್ಟೆ ಧರಿಸಿಕೊಂಡು ಪಟಾಕಿ ಹೊಡೆಯುವುದು ಉತ್ತಮ
ನಿರ್ವಾತ ಪ್ರದೇಶದಲ್ಲಿ ಪಟಾಕಿ ಹೊಡೆಯುವುದು ಉತ್ತಮ
ಮನೆಯ ಸಮೀಪ ಪಟಾಕಿ ಹೊಡೆಯುವುದು ಹೆಚ್ಚು ಅಪಾಯ
ದೊಡ್ಡ ಪಟಾಕಿಗಳನ್ನು ಹೊಡೆಯಲು ಭಯವಿದ್ರೆ ಮುಟ್ಟಬೇಡಿ
ಭಯದಲ್ಲಿ ಪಟಾಕಿ ಹೊಡೆಯುವಾಗ ಗಾಬರಿಯಾಗಬಹುದು
ಗಾಬರಿಯಿಂದ ಪಟಾಕಿ ಹೊಡೆಯುವುದರಿಂದ ಅಪಾಯ ಹೆಚ್ಚು
ಗಾಜಿನ ವಸ್ತುಗಳನ್ನು ಪಟಾಕಿ ಮೇಲೆ ಇಟ್ಟು ಪಟಾಕಿ ಹೊಡೀಬೇಡಿ
ಗಾಜು ಸಿಡಿದು ಜನರಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚು
ಕೈನಲ್ಲಿ ಪಟಾಕಿ ಹಿಡಿದು ಬೆಂಕಿ ಹಚ್ಚುವ ಸಾಹಸ ಮಾಡಬೇಡಿ
ಪಟಾಕಿ ಹೊಡೆಯುವಾಗ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳಿ
ಪಟಾಕಿ ಹೊಡೆಯುವಾಗ ತಮಾಷೆ ಮಾಡುವುದು ಒಳ್ಳೆಯದಲ್ಲ

ವಾಯ್ಸ್: ಈ ಎಲ್ಲಾ ಸೂಕ್ತ ಕ್ರಮಗಳನ್ನು ನೆನಪಿನಲ್ಲಿ ಇಟ್ಟುಕೊಂಡು, ಈಸಲದ ದೀಪಾಳಿಯನ್ನು ಆಚರಿಸಿ.. ಆದ್ರೆ ಸಾಧ್ಯವಾದಷ್ಟು ಪಟಾಕಿ ಹೊಡೆಯುವುದಕ್ಕೆ ವಿದಅಯ ಹೇಳಿ.. ಯಾಕಂದ್ರೆ ಈಗಾಗಲೇ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಪರಿಸ ಉಳಿಸುವ ನಿಟ್ಟಿನಲ್ಲಿ ನೀವು ಕೈ ಜೋಡಿಸಿ.. ದೀಪ ಬೆಳಗಿಸಿ.. ಎಲ್ಲರಿಗೂ ಬೆಳಕು ಹಂಚಿ..! ಆ ಮೂಲಕ ದೀಪಾವಳಿ ಆಚರಿಸಿ


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು