ಸಿನೆಮಾ

Share This Article To your Friends

ಮಂಡ್ಯದ ಡಿವೈಎಸ್​ಪಿ ಸವಿತಾ ಹೂಗಾರ್​ ಮತ್ತು ಕೊಲೆ ಯತ್ನಮಂಡ್ಯದಲ್ಲಿ ಒಂದು ಪವರ್​​ ಫುಲ್​​ ಸಿಂಹ ಇದೆ.. ಆ ಸಿಂಹದ ಹತ್ರ ಕಚಡಾ ಬುದ್ಧಿ ತೋರ್ಸಂಗಿಲ್ಲ.. ನೀಯತ್ತಿಲ್ದೇ ಇರೋರ ಎದೆ ಬಗೆಯೋದಕ್ಕೆ ಅಂತಾನೇ ಆ ಸಿಂಹ ಮಂಡ್ಯಕ್ಕೆ ಎಂಟ್ರಿ ಕೊಟ್ಟಿದೆ.. ಸಿಂಹದ ಘರ್ಜನೆ ಕೇಳಿದ ಮಂಡ್ಯದ ಕೆಲ ಕ್ರೂರ ಪ್ರಾಣಿಗಳು, ನಿಂತಲ್ಲೆ ಪತರ್​ಗುಟ್ತಾ ಇದಾವೆ..
 
ಕಿಚ್ಚ ಸುದೀಪ್ ಹೇಳಿರೋ ಈ ಡೈಲಾಗು ನಿಜಕ್ಕೂ ಖದರ್ ಆಗಿದೆ.. ನೀವು ಸಿಂಹಾನ ಫೋಟೋದಲ್ ನೋಡಿರ್ತೀರ.. ಸಿನೆಮಾದಲ್ ನೋಡಿರ್ತೀರ,.,. ಟೀವಿನಲ್ಲೂ ನೋಡಿರ್ತೀರ.. ಅಷ್ಟೇ ಯಾಕೆ.. ಟೀವಿನಲ್ ನೋಡಿರ್ತೀರ.. ಆದ್ರೆ ಘರ್ಜನೆ ಮಾಡ್ತಾ ಬೇಟೆಯಾಡೋದನ್ನು ನೀವು ಯಾರಾದ್ರೂ ನೋಡಿದ್ದೀರಾ..? ಬಹುಶಃ ಇಲ್ಲ ಅನ್ಸುತ್ತೆ.. ಆದ್ರೆ ನಮ್ಮ ಮಂಡ್ಯದ ಜನ ನೋಡಿದ್ದಾರೆ.. ಯಾಕಂದ್ರೆ ಕರ್ನಾಟಕದ ಸಿಂಹ ಮಂಡ್ಯದಲ್ಲಿದೆ..

 
ನಾವು ಇಷ್ಟೊತ್ತು ಹೇಳಿದ ಒಂಟಿ ಸಿಂಹ ಇವ್ರೇನೇ.. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಡಿವೈಎಸ್​ಪಿ ಸವಿತಾ ಹೂಗಾರ್....


ಈ ಸವಿತಾ ಹೂಗಾರ್ 2010ರಲ್ಲಿ ಡಿವೈಎಸ್ಪಿ ಆಗಿ ಆಯ್ಕೆಯಾದ್ರು.. ಉಡುಪಿಯಲ್ಲಿ ತಮ್ಮ ಪ್ರೊಬೆಷನರಿ ಪೀರೇಡನ್ನು ಮುಗಿಸಿದ್ರು.. ಇದಾದ ನಂತರ ಮೊದಲ  ಬಾರಿಗೆ ಉಪವಿಭಾಗವಾದ ನಾಗಮಂಗಲಕ್ಕೆ ಹೆಜ್ಜೆ ಇಟ್ಟಿದ್ದಾರೆ.. ಅದು ಪೂರ್ಣ ಪ್ರಮಾಣದ ಡಿವೈಎಸ್ಪಿ ಆಗಿ...

ಆಗಸ್ಟ್ 10 ರಂದು ಅಧಿಕಾರ ವಹಿಸಿಕೊಂಡ ಸವಿತಾ ಹೂಗಾರ್​ಗೆ, ಹಿರಿಯ ಅಧಿಕಾರಿಗಳು ಒಂದು ಮಾಹಿತಿ ನೀಡಿದ್ರು.. ಅದು ಸೇಮ್ ಟು ಸೇಮ್ ಕೆಂಪೇಗೌಡ ಸಿನೆಮಾದಲ್ಲಿ ಕಿಚ್ಚ ಸುದೀಪ್​ಗೆ ಕೊಟ್ಟ ಅಸೈನ್​ಮೆಂಟ್ ಥರಾನೇ ಇತ್ತು.. ಮಂಡ್ಯಾದಲ್ಲಿ ಅಕ್ರಮ ಮರಳು ಮಾಫಿಯಾ ನಡೀತಿದೆ. ಇದಕ್ಕೆ ಕಡಿವಾಣ ಹಾಕೋದು ನಿಮ್ಮ ಫಸ್ಟ್ ಪ್ರಿಫರೆನ್ಸ್ ಅಂತ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ರು..  ಹಿರಿಯ ಅಧಿಕಾರಿಗಳು ವಹಿಸಿದ ಜವಾಬ್ದಾರಿಯ ಬಗ್ಗೆ ತನಿಖೆ ಶುರು ಮಾಡಿದ ಸವಿತಾ ಹೂಗಾರ್​ಗೆ ನಿಜಕ್ಕೂ ಶಾಕ್​​ ಕಾದಿತ್ತು.. ಯಾಕಂದ್ರೆ, ಮಂಡ್ಯಾದಲ್ಲಿ ಅಕ್ರಮ ಮರಳು ದಂಧೆ ದೊಡ್ಡ ಮಾಫಿಯಾ ಆಗಿ ಮಾರ್ಪಟ್ಟಿದೆ ಅನ್ನೋದು.. ಕೆಲವು ಗುಂಪುಗಳು ಅಲ್ಲಿ ದೊಡ್ಡ ಕೋಟೆಯನ್ನು ಕಟ್ಟಿಕೊಂಡಿದ್ರು..

ನಾಗಮಂಗಲಗೆ ಬರೋದಕ್ಕಿಂತ ಮೊದ್ಲೇ ಈ ಅಕ್ರಮ ಮರಳು ಮಾಫಿಯಾ ಬಗ್ಗೆ ಪಿನ್ ಟು ಪಿನ್ ಡೀಟೇಲಾಗಿ ತಿಳ್ಕೊಂಡಿದ್ರು ಸವಿತಾ ಹೂಗಾರ್.. ಇದಕ್ಕೆಲ್ಲಾ ಕಡಿವಾಣ ಹಾಕೋದಕ್ಕೆ ರೆಡಿಯಾದ್ರು.. ನಾಗಮಂಗಲದ ಡಿವೈಎಸ್​ಪಿಯಾಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ರು..

ಅಧಿಕಾರ ವಹಿಸಿಕೊಂಡು 20 ದಿನದಲ್ಲೇ ನಾಲ್ಕು ಬಾರಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ಮಾಡಿದ್ರು. ಅಲ್ಲಲ್ಲಿ ದಾಳಿ ಮಾಡಿ ಲಾರಿ, ಜೆಸಿಬಿ, ಟ್ರಾಕ್ಟರ್ ಸೇರಿದಂತೆ ಹಲವು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲು ಮಾಡಿದ್ರು. ಆ ಮೂಲಕ ಮರಳು ಅಡ್ಡೆಯಲ್ಲಿ ತೊಡಗಿದವರ ಎದೆಯಲ್ಲಿ ನಡುಕ ಹುಟ್ಟಿಸಿದ್ರು..

ಆಲ್ರೆಡಿ ಈ ಲೇಡಿ ಸಿಂಹದ ಘರ್ಜನೆಗೆ ಇಡೀ ಮಂಡ್ಯಾ ಮರಳು ಮಾಫಿಯಾ ಗ್ಯಾಂಗಿನ ಸದ್ದು ಅಡಗಿ ಹೋಗಿತ್ತು.. ಇನ್ನೇನು ಮರಳು ಮಾಫಿಯಾಗೆ ಬ್ರೇಕ್ ಬೀಳಬಹುದು ಅಂತ ಎಲ್ಲರೂ ಅಂದುಕೊಂಡಿದ್ರು.. ಆದ್ರೆ ಅದು ಸಾಧ್ಯವಾಗಲಿಲ್ಲ.. ಯಾಕಂದ್ರೆ ಈ ಸವಿತಾ ಹೂಗಾರ್​​ ಮೇಲೆ ಮರಳು ಮಾಫಿಯಾ ಗ್ಯಾಂಗ್ ಒಳಗೊಳಗೇ ಕತ್ತಿ ಮಸೀತಿತ್ತು.. ಸೇಡು ತೀರಿಸಿಕೊಳ್ಳೋಕೆ ಅಂತ ಸರಿಯಾದ ಟೈಮಿಗಾಗಿ ಕಾಯ್ತಾ ಇದ್ರು..
ಫ್ಲೋ...

ವಾಯ್ಸ್: ಅದು ಆಗಸ್ಟ್ 29 ನೇ ತಾರೀಕು.. ಬೆಳಿಗ್ಗೆ 9 30 ಆಗಿರಬೇಕು.. ಅಷ್ಟರಲ್ಲಿ ಡಿವೈಎಸ್​ಪಿ ಸವಿತಾ ಹೂಗಾರ್​ಗೆ ಒಂದು ಫೋನ್ ಕಾಲ್ ಬರುತ್ತೆ.. ನಾಗಮಂಗಲ ತಾಲೂಕಿನ ಅರಕೆರೆ ಸಮೀಪದಲ್ಲಿರೋ ಶಿಂಷಾ ನದಿಯಲ್ಲಿ, ಅಕ್ರಮ ಮರಳು ಗಣಿಗಾರಿಕೆ ನಡೀತಾ ಇದೆ ಅನ್ನೋ ಮಾಹಿತಿಯನ್ನು , ಫೋನ್ ಮಾಡಿದ ವ್ಯಕ್ತಿ ಹೇಳಿದ್ದ.. ಫೋನಿನ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಕೆಲ ಸಿಬ್ಬಂಧಿಗಳ ಜೊತೆಗೆ ಡಿವೈಎಸ್​ಪಿ ಸವಿತಾ ಸ್ಪಾಟ್​ಗೆ ಹೋಗೋಕೆ ಜೀಪ್ ಹತ್ತುತಾರೆ..
ಫ್ಲೋ...

ವಾಯ್ಸ್:  ಆದ್ರೆ ಶಿಂಷಾ ನದಿ ದಡವನ್ನು ತಲುಪೋ ದಾರೀನಲ್ಲಿ. ಅಂದ್ರೆ ದೇವಲಾಪುರ ಸಮೀಪದ ಶೆಟ್ಟಹಳ್ಳಿ ಹತ್ರ ಅಕ್ರಮ ಮರಳು ಹೊತ್ತಿರೋ ಲಾರಿ ಬರರ್ತಾ ಇರುತ್ತೆ. ಇದನ್ನು ನೋಡಿದ  ಡಿವೈಸ್​ಪಿ ಆ ಲಾರಿಯನ್ನು ತಡೆಯೋದು ನಿಲ್ಲಿಸೋದಕ್ಕೆ ಪ್ರಯತ್ನಿಸ್ತಾರೆ..
ಫ್ಲೋ...

ವಾಯ್ಸ್: ಆದ್ರೆ ಕಿರಾತಕ ಲಾರಿ ಡ್ರೈವರ್ಲಾರಿಯನ್ನ ನಿಲ್ಲಿಸ್ಲೇ ಇಲ್ಲ.. ಸಿನೆಮಾದಲ್ಲಿ ತೋರಿಸೋ ಹಾಗೆ, ಲಾರಿಯನ್ನು ಪೊಲೀಸರ ವಾಹನಕ್ಕೆ ಗುದ್ದೋಕೆ ಟ್ರೈ ಮಾಡ್ತಾನೆ.. ಆ ಮೂಲಕ ತಮ್ಮ ಅಕ್ರಮಕ್ಕೆ ಅಡ್ಡಿಯಾಗಿದ್ದ ಈ ಡಿವೈಎಸ್​ಪಿ ಸವಿತಾ ಹೂಗಾರ್​ರನ್ನು ಮುಗಿಸಿ ಬಿಡೋದಕ್ಕೆ ಡ್ರೈವರ್ಸ್ಕೆಚ್ ಹಾಕಿದ್ದ..
ಫ್ಲೋ....

ವಾಯ್ಸ್: ಲಾರಿ ತಮ್ಮ ಮೇಲೆ ಹರಿದು ಬರ್ತಾ ಇರೋದನ್ನು ಮನಗಂಡ ಸವಿತಾ ಹೂಗಾರ್​, ಕೂಡಲೇ ಎಡಭಾಗಕ್ಕೆ ಜಿಗಿದು ಬಿಡ್ತಾರೆ.. ಇನ್ನುಳಿದ ಐವರು ಪೊಲೀಸ್ ಸಿಬ್ಬಂದಿ ಕೂಡ ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಳ್ತಾರೆ.. 

 ಲಾರಿ ಡ್ರೈವರ್​​ ಜೀಪಿಗೆ ಗುದ್ದಿದ ರಭಸಕ್ಕೆ, ಪೊಲೀಸ್ ವಾಹನದ ಎರಡು ಡೋರ್​ಗಳು ಜಖಂಗೊಂಡಿವೆ. ಇಷ್ಟೆಲ್ಲಾ ಆಗ್ತಿದ್ದಂತೆ, ಎಚ್ಚೆತ್ತುಕೊಂಡ ಲಾರಿ ಡ್ರೈವರ್​, ಲಾರಿನ ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ..

  ಬಳಿಕ ಲಾರಿಯನ್ನು ವಶಕ್ಕೆ ತೆಗೆದುಕೊಂಡಿರೋ ಪೊಲೀಸರು, ಪ್ರಕರಣವನ್ನು ದಾಖಲಿಸಿಕೊಂಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ಡಿವೈಎಸ್ಪಿ ಸವಿತಾ ಹೂಗಾರ್​, ಇದು ನನ್ನನ್ನು ಕೊಲ್ಲೋದಕ್ಕೇನೇ ನಡೆದಿರೋ ಪ್ರಯತ್ನ ಅಂತ  ಸ್ಪಷ್ಟವಾಗಿ ಹೇಳ್ತಾರೆ.

ಸವಿತಾ ಹೂಗಾರ್ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿದ್ರೆ, ಇಂಥಾ ದುರ್ಘಟನೆ ಆಗ್ತಾ ಇರಲಿಲ್ಲ.. ಆದ್ರೆ ಈ ವಿಷಯ ಇತರೇ ಪೊಲೀಸ್ ಸಿಬ್ಬಂದಿಗಳಿಗೆ ತಿಳಿಸಿದ್ರೆ, ಎಲ್ಲಿ ಮಾಹಿತಿ ಲೀಕ್ ಅಗುತ್ತೋ.. ಅಪರಾಧಿಗಳು ಎಲ್ಲಿ ತಪ್ಪಿಸಿಕೊಳ್ತಾರೋ ಅನ್ನೋ ಶಂಕೆ ಸವಿತಾ ಹೂಗಾರ್​​ರಿಗೆ ಇತ್ತು.. ಹೀಗಾಗಿ ಯಾರಿಗೂ ಹೇಳದೇ, ಕೇವಲ ಆಪ್ತರನ್ನು ಮಾತ್ರ ಕರೆದುಕೊಂಡು ಹೋಗಿ ದಾಳಿ ಮಾಡೋಕೆ ಟ್ರೈ ಮಾಡಿದ್ರು.. ಆದ್ರೆ ಇದೇ ಈ ದುರ್ಘಟನೆಗೆ ಪ್ರಮುಖ ಕಾರಣ ಅಂತ ಹೇಳಲಾಗ್ತಿದೆ.

ಡಿವೈಎಸ್​ಪಿಯನ್ನು ಕೊಲ್ಲೋ ಮಟ್ಟಕ್ಕೆ, ಮಂಡ್ಯಾದಲ್ಲಿ ಈ ಮರಳು ಮಾಫಿಯಾ ಬೆಳೆದಿದೆ ಅನ್ನೋ ಸುದ್ದಿ ಇಡೀ ರಾಜ್ಯಕ್ಕೆ ಮಿಂಚಿನಂತೆ ಹರಡಿತ್ತು.. ಡಿವೈಎಸ್​ಪಿ ಸವಿತಾ ಮೇಲಿನ ಕೊಲೆ ಯತ್ನವನ್ನು ತೀವ್ರವಾಗಿ ಖಂಡಿಸಿದ್ರು. ಅಷ್ಟೇ ಅಲ್ಲ, ಮರಳು ಮಾಫಿಯಾದವರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ರು..

ತಮ್ಮ ಮೇಲೆ ಕೊಲೆ ಯತ್ನ ನಡೆದ ಮಾತ್ರಕ್ಕೆ ಸವಿತಾರ ಸಿಂಹ ಘರ್ಜನೆ ಇಷ್ಟಕ್ಕೆ ನಿಲ್ಲಲಿಲ್ಲ.. ಬದಲಿಗೆ ಪೆಟ್ಟು ತಿಂದ ಸಿಂಹ ಮತ್ತಷ್ಟು ಜೋರಾಗಿ ಘರ್ಜಿಸೋದಕದ್ಕೆ ಶುರು ಮಾಡಿತು.. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಯ್ತು.. ಲಾರಿ ಚಾಲಕನಾಗಿದ್ದ ಹೆಮ್ಮನಹಳ್ಳಿಯ ಮಧು ಮತ್ತು ಕ್ಲೀನರ್ ಲೋಕೇಶನನ್ನ ಬಂಧಿಸಲಾಯ್ತು.. ಜೀಪ್ ಗೆ ಗುದ್ದಿದ ಲಾರಿಯನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ದೆ ಅಕ್ರಮ ಮರಳು ಮಾಫಿಯಾದಲ್ಲಿ ತೊಡಗಿದ್ದ ಮತ್ತೊಂದು ಲಾರಿ, ಒಂದು ಜೆಸಿಬಿಯನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಯ್ತು..

ಇನ್ನು ಲಾರಿ ಮಾಲೀಕನ ವಿರುದ್ಧ ಕೂಡ ಪ್ರಕರಣ ದಾಖಲು ಮಾಡಲಾಯ್ತು.. ಆದ್ರೆ ಲಾರಿ ಮಾಲೀಕ ಮದ್ದೂರಿನವನಾಗಿದ್ದ.. ವಿಷ್ಯ ತಿಳೀತಿದ್ದಂತೆ ಆತ ಎಸ್ಕೇಪ್ ಆಗಿದ್ದಾನೆ. ಆದ್ರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಡಿವೈಎಸ್​ಪಿ ಸವಿತಾ ಹೂಗಾರ್ ಮತ್ತು ಹಿರಿಯ ಅಧಿಕಾರಿಗಳು, ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ರು.. ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಯ್ತು.. ಪೊಲೀಸರ ಕಠಿಣ ಶ್ರಮದಿಂದ ಈಗ ಲಾರೀ ಮಾಲೀಕ ಯೋಗೀಶ್ಕೂಡ ಕೂಡ ತಗಲಾಕೊಂಡಿದ್ದಾನೆ.. ಆತನ ವಿರುದ್ಧ ರೌಡಿ ಶೀಟ್ ಕೂಡ ಓಪನ್ ಮಾಡಲಾಗಿದೆ.

ಅಕ್ರಮ ಮರಳು ಮಾಫಿಯಾದ ಬೆನ್ನು ಹತ್ತಿದ ಸಿಂಹಕ್ಕೆ, ಸದ್ಯ ಡ್ರೈವರ್​, ಕ್ಲೀನರ್ಮತ್ತು ಲಾರಿ ಮಾಲೀಕ ಸಿಕ್ಕಿದ್ದಾರೆ. ಆದ್ರೆ ಇವರಿಗಿಂತಲೂ ದೊಡ್ಡ ದೊಡ್ಡ ಕುಳಗಳು ಈ ಮರಳು ಮಾಫಿಯಾದಲ್ಲಿವೆ. ಅವರನ್ನು ಬಗ್ಗು ಬಡೀದೇ ಬಿಡೋದಿಲ್ಲ ಅಂತ ಸವಿತಾ ಹೂಗಾರ್ ಘರ್ಜಿಸ್ತಾ ಇದ್ದಾರೆ..

 ಏನೇ ಆದ್ರೂ ಮರಳು ಮಾಫಿಯಾದವರು ಬಾಲ ಬಿಚ್ಚೋದಕ್ಕೆ ಬಿಡೋದಿಲ್ಲ.. 3ಕ್ಕಿಂತ ಹೆಚ್ಚು ಬಾರಿ ಪ್ರಕರಣ ದಾಖಲಾಗಿದ್ರೆ, ಅವರ ವಿರುದ್ಧ ರೌಡಿ ಶೀಟ್ ಓಪನ್ ಮಾಡಲಾಗುತ್ತೆ. ಕ್ರಿಮಿನಲ್​ಗಳಿಗೆ ಜಾಮೀನು ನೀಡಿದ್ರೆ, ಅವರ ಗ್ರಹಚಾರ ಕೂಡ ಬಿಡಿಸಿ ಬಿಡ್ತೀನಿ. ಅಂತ ಸಿಂಹ ಎಚ್ಚರಿಕೆ ನೀಡಿದೆ.

ಆದ್ರೆ ಮಂಡ್ಯದ ನಾಗಮಂಗಲದಲ್ಲಿ ಮರಳು ಮಾಫಿಯಾ ಅನ್ನೋದು ಆಳವಾಗಿ ಬೇರೂರಿದೆ. ಇದ್ರಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಜೊತೆಗೆ ಲೋಕಲ್ ರಾಜಕೀಯ ಕೂಡ ಮಿಕ್ಸ್ ಆಗಿದೆ. ಹೀಗಾಗಿ ಇಷ್ಟು ದಿನ ಈ ಮರಳು ಮಾಫಿಯಾದ ಭದ್ರ ಕೋಟೆಯನ್ನು ಭೇದಿಸೋ ಧೈರ್ಯ ಯಾರೂ ಮಾಡಿರಲಿಲ್ಲ.. ಆದ್ರೆ ಈಗ ಈ ಸಿಂಹ ಮಂಡ್ಯಾಗೆ ಎಂಟ್ರಿ ಕೊಟ್ಟಿದೆ.. ಮರಳು ಮಾಫಿಯಾದವರು, ಬಾಲ ಮುದುರಿಕೊಂಡು ಕೂತ್ಕೊಂಡು, ನಿಯತ್ತಾಗಿ ಇದ್ರೆ ಸರಿ.. ಇಲ್ಲಾ ಅಂದ್ರೆ ಈ ಸಿಂಹದ ಬಾಯಿಗೆ ಆಹಾರ ಆಗ್ಬೇಕಾಗುತ್ತೆ..

ಲಂಚಕ್ಕೆ ಬಾಯಿ ತೆಗೆದು, ಅಕ್ರಮಕ್ಕೆ ಕುಮ್ಮಕ್ಕು ನೀಡೋ ಬಹಳಷ್ಟು ಭ್ರಷ್ಟರ ನಡುವೆಯೂ, ಇಂಥಾ ಖಡಕ್ ಆಫೀಸರ್ ಇದ್ದಾರೆ ಅನ್ನೋದು ಒಂದು ಖುಷಿಯ ವಿಚಾರ.. ಇಂಥಾ ಅಧಿಕಾರಿಗಳಂತೆ ಎಲ್ಲರೂ ಇದ್ದು ಬಿಟ್ರೆ, ಬಹುಶಃ ಅಕ್ರಮ ಅನ್ನೋದೇ ಇರೋದಿಲ್ಲ ಅನಿಸುತ್ತೆ..Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು