ಸಿನೆಮಾ

Share This Article To your Friends

ಮೋದಿ ವಾರಣಾಸಿ ಅಭಿವೃದ್ಧಿಗೆ 12 ಸಾವಿರ ಕೋಟಿ 
ವಾರಣಾಸಿಯ ಅಭಿವೃದ್ಧಿಗೆ ಪ್ರಧಾನಿ ಮೋದಿ ಪಣ ತೊಟ್ಟಿದ್ದಾರೆ. ಸುಮಾರು 12 ಸಾವಿರ ಕೋಟಿ ವೆಚ್ಚದಲ್ಲಿ, ವಾರಣಾಸಿಯನ್ನು ಅಭಿವೃದ್ಧಿ ಮಾಡೋಕೆ ಪ್ಲಾನ್ ಮಾಡಲಾಗಿದೆ. ಅದರ ಒಂದು ಬ್ಲೂ ಪ್ರಿಂಟ್​​ ಇಲ್ಲಿದೆ ನೋಡಿ.. 

ವಾರಣಾಸಿ ಅಭಿವೃದ್ಧಿಗೆ ಮೋದಿ ಪಣ 
12 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ

ವಾಯ್ಸ್: ವಾರಣಾಸಿಯನ್ನು ಜಪಾನ್​​​​​ ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿ ಮಾಡೋದಕ್ಕೆ ಮೋದಿ ಪಣ ತೊಟ್ಟಿದ್ದಾರೆ. ಇದಕ್ಕಾಗಿ 12 ಸಾವಿರ ಕೋಟಿ ರೂಪಾಯಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ

(ಗ್ರಾಫಿಕ್ ಇನ್)
--------------------------
2014-ಹೇಗಿದೆ ವಾರಣಾಸಿ 
---------------------------
ದೇವಾಲಯಗಳ ನಗರದಲ್ಲಿ ಕಸದ ರಾಶಿ ತುಂಬಿದೆ
ಯೋಜನೆ ಇಲ್ಲದೇ ಕಟ್ಟಡಗಳು ನಿರ್ಮಾಣಗೊಂಡಿವೆ
ಟ್ರಾಫಿಕ್ ಜಾಂ ಹೆಚ್ಚಾಗಿದ್ದು, ಪರ್ಯಾಯ ವ್ಯವಸ್ಥೆ ಇಲ್ಲ
ಪ್ರಮುಖ ರಸ್ತೆಗಳು ಹದಗೆಟ್ಟಿದ್ದು, ದುರಸ್ತಿ ಭಾಗ್ಯ ಕಂಡಿಲ್ಲ
ಐತಿಹಾಸಿಕ ಕಟ್ಟಡಗಳ ಶಿಥಿಲಾವಸ್ಥೆಯಲ್ಲಿವೆ
ನೀರು ಮತ್ತು ವಿದ್ಯುತ್ತಿನ ಅಸಮರ್ಪಕ ಪೂರೈಕೆ

(ಗ್ರಾಫಿಕ್ ವಾಯ್ಸ್: ದೇವಾಲಯಗಳ ನಗರವಾದ ವಾರಣಾಸಿಯಲ್ಲಿ ಈಗ ಕಸದ ರಾಶಿ ತುಂಬಿದೆ. ಯೋಜನೆಗಳೇ ಇಲ್ಲದೇ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇದ್ರಿಂದ ವಾರಣಾಸಿಯ ಸೌಂದರ್ಯ ಹದಗೆಟ್ಟಿದೆ. ಇನ್ನು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸೋದ್ರಿಂದ ಟ್ರಾಫಿಕ್ ಜಾಂ ಹೆಚ್ಚಾಗಿದೆ. ಇದಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಇನ್ನು ಪ್ರಮುಖ ರಸ್ತೆಗಳು ಹದಗೆಟ್ಟಿದ್ದು, ದುರಸ್ತಿ ಭಾಗ್ಯ ಕಂಡಿಲ್ಲ. ಐತಿಹಾಸಿಕ ಕಟ್ಟಡಗಳ ಶಿಥಿಲಾವಸ್ಥೆಯಲ್ಲಿವೆ. ನೀರು ಮತ್ತು ವಿದ್ಯುತ್ತಿನ ಅಸಮರ್ಪಕ ಪೂರೈಕೆಯಿಂದ ವಾರಣಾಸಿ ಕಳೆಗುಂದಿದೆ)
 
ಹೀಗಾಗಿ 12 ಸಾವಿರ ಕೋಟಿ ವೆಚ್ಚದಲ್ಲಿ ವಾರಣಾಸಿಗೆ ಮರು ಜೀವ ನೀಡಲು ಮೋದಿ ಮುಂದಾಗಿದ್ದಾರೆ.


(ಗ್ರಾಫಿಕ್ ಇನ್)
--------------------------
2019 - ಹೇಗಿರುತ್ತೆ ವಾರಣಾಸಿ..? (ಹೆಡ್)
------------------------
ಗಂಗಾ ಶುದ್ಧೀಕರಣ ಮತ್ತು ಮಾಲಿನ್ಯ ನಿಯಂತ್ರಣ
ಭೋಜ್​​ಪುರಿ ಫಿಲಂ ಸಿಟಿ ನಿರ್ಮಾಣ
ಪ್ರಥಮ ಸ್ಮಾರ್ಟ್ಸಿಟಿ ನಿರ್ಮಾಣ
ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಶೋಧನಾ ಕೇಂದ್ರ
ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಯೋಜನೆ
ರಸ್ತೆಗಳು, ಐತಿಹಾಸಿಕ ಕಟ್ಟಡಗಳಿಗೆ ಮರುಜೀವ
ಕಾಶಿ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರ
24 ಗಂಟೆ ನೀರು ಮತ್ತು ವಿದ್ಯುತ್ ಪೂರೈಕೆಗೆ ಯೋಜನೆ
ಎಲ್ಲೆಡೆ ಬ್ರಾಡ್ಬ್ಯಾಂಡ್ವ್ಯವಸ್ಥೆ ಕಲ್ಪಿಸಲು ಯೋಜನೆ
ಶಾಲೆಗಳಲ್ಲಿ ಇ-ಲರ್ನಿಂಗ್ವ್ಯವಸ್ಥೆ
ಹಿರಿಯ ನಾಗರೀಕರಿಗೆ ಮತ್ತು ವಿಧವೆಯರಿಗೆ ವಸತಿ
100 ಎಕರೆ ವಿಸ್ತೀರ್ಣದಲ್ಲಿ ಸಸ್ಯತೋಟ ನಿರ್ಮಾಣ
ವಿಶ್ವದರ್ಜೆಯ ಸ್ಟೇಡಿಯಂ ನಿರ್ಮಾಣ
ಮೆಟ್ರೋ ರೈಲುಗಳ ರೂಪುರೇಷೆ ತಯಾರಿಕೆ
ಸಾಹಿತ್ಯ ಮತ್ತು ಸಂಗೀತ ಸಂಶೋಧನಾ ಕೇಂದ್ರ
ಡಿಸೆಂಬರ್​​ 25 ರಂದು ಯೋಜನೆ ನೀಲಿನಕ್ಷೆಬಿಡುಗಡೆ
5 ರಿಂದ 7 ವರ್ಷಗಳ ಒಳಗೆ ಯೋಜನೆ ಪೂರ್ಣ
2019 ರೊಳಗೆ ಒಂದು ಹಂತದ ಯೋಜನೆ ಪೂರ್ಣ
2021ರೊಳಗೆ 2ನೇ ಹಂತದ ಯೋಜನೆಗಳು ಪೂರ್ಣ

(ಗ್ರಾಫಿಕ್ ವಾಯ್ಸ್: ಮೊದಲಿಗೆ ಗಂಗಾ ಶುದ್ಧೀಕರಣ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಬ್ರೇಕ್ ಹಾಕುಚವ ಮೂಲಕ, ವಾರಣಾಸಿ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತೆ. ನಂತರ ಭೋಜ್​​ಪುರಿ ಫಿಲಂ ಸಿಟಿ ನಿರ್ಮಾಣ ಮಾಡಲಾಗುತ್ತೆ. ಪ್ರಥಮ ಸ್ಮಾರ್ಟ್ಸಿಟಿ ನಿರ್ಮಾಣಕ್ಕೂ ವಾರಣಾಸಿ ಸಾಕ್ಷಿಯಾಗಲಿದೆ. ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ರಸ್ತೆಗಳು, ಐತಿಹಾಸಿಕ ಕಟ್ಟಡಗಳಿಗೆ ಮರುಜೀವ ನೀಡುವ ಮೂಲಕ, ಉನ್ನತ ದರ್ಜೆಗೆ ಏರಿಸಲಾಗುತ್ತೆ. ಇನ್ನು ಕಾಶಿ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರಕ್ಕೂ ಮೋದಿ ಮುಂದಾಗಿದ್ದಾರೆ. ವಾರಣಾಸಿಯಲ್ಲಿ ಸತತ 24 ಗಂಟೆ ನೀರು ಮತ್ತು ವಿದ್ಯುತ್ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಎಲ್ಲೆಡೆ ಬ್ರಾಡ್ಬ್ಯಾಂಡ್ವ್ಯವಸ್ಥೆ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಶಾಲೆಗಳಲ್ಲಿ ಇ-ಲರ್ನಿಂಗ್ವ್ಯವಸ್ಥೆ ಮತ್ತು ಹಿರಿಯ ನಾಗರೀಕರಿಗೆ ಹಾಗೂ ವಿಧವೆಯರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. 100 ಎಕರೆ ವಿಸ್ತೀರ್ಣದಲ್ಲಿ ಸಸ್ಯತೋಟ ನಿರ್ಮಾಣ ಮಾಡಲಾಗುತ್ತೆ. ಜೊತೆಗೆ ಸಂಪೂರ್ಣ ಸೌಲಭ್ಯಯುತವಾದ ವಿಶ್ವದರ್ಜೆಯ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತೆ. ಮೆಟ್ರೋ ರೈಲುಗಳ ವ್ಯವಸ್ಥೆ ಬಗ್ಗೆಯೂ ರೂಪುರೇಷೆ ತಯಾರಿಸಲಾಗಿದೆ. ಸಾಹಿತ್ಯ ಮತ್ತು ಸಂಗೀತ ಸಂಶೋಧನಾ ಕೇಂದ್ರವನ್ನೂ ಸ್ಥಾಪನೆ ಮಾಡಲಾಗುತ್ತೆ. ವಾಜಪೇಯಿ ಜನ್ಮದಿನವಾದ ಡಿಸೆಂಬರ್​ 15 ಕ್ಕೆ ಯೋಜನೆಯ ನೀಲಿನಕ್ಷೆಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇನ್ನು 5 ರಿಂದ 7 ವರ್ಷಗಳ ಒಳಗೆ ಈ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಪ್ಲಾನ್ ಮಾಡಲಾಗಿದೆ. 2019 ರೊಳಗೆ ಒಂದು ಹಂತದ ಯೋಜನೆ ಪೂರ್ಣಗೊಳ್ಳಲಿದ್ದು, 2021ಕ್ಕೆ 2ನೇ ಹಂತದ ಯೋಜನೆಗಳು ಪೂರ್ಣಗೊಳ್ಳಲಿವೆ)

ವಾಯ್ಸ್: ಇಷ್ಟೆಲ್ಲಾ ಯೋಜನೆಗಾಗಿ ಸುಮಾರು 12 ಸಾವಿರ ಕೋಟಿ ವೆಚ್ಚವಾಗಲಿದೆ ಅಂತ ಅಂದಾಜಿಸಲಾಗಿದೆ.

(ಗ್ರಾಫಿಕ್ ಇನ್)
--------------------------
ಆದಾಯ ಎಲ್ಲಿಂದ ಬರುತ್ತೆ..? (ಹೆಡ್)
------------------------
ಒಟ್ಟು 11,800 ಕೋಟಿ ರೂ. ವೆಚ್ಚದಲ್ಲಿ ಯೋಜನೆ
ಕೇಂದ್ರ ಸರ್ಕಾರದಿಂದ 2,082 ಕೋಟಿ ಅನುದಾನ
ಉತ್ತರ ಪ್ರದೇಶ ಸರ್ಕಾರದಿಂದ 1,488 ಕೋಟಿ ಅನುದಾನ
ಖಾಸಗೀ ಸಹಭಾಗಿತ್ವದಿಂದ 8,230 ಕೋಟಿ ಆದಾಯ

(ಗ್ರಾಫಿಕ್ ವಾಯ್ಸ್: ಜಪಾನ್ನ ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಮೋದಿ ತಯಾರಾಗಿದ್ದಾರೆ. ಇದಕ್ಕಾಗಿ ಒಟ್ಟು 11,800 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ ಅಂತ ಅಂದಾಜಿಸಲಾಗಿದೆ. ಇದ್ರಲ್ಲಿ ಕೇಂದ್ರ ಸರ್ಕಾರ 2,082 ಕೋಟಿ ಅನುದಾನ ನೀಡುತ್ತೆ. ಉತ್ತರ ಪ್ರದೇಶ ಸರ್ಕಾರ ಕೂಡ 1,488 ಕೋಟಿ ಅನುದಾನ ನೀಡುತ್ತೆ. ಇನ್ನುಳಿದ 8,230 ಕೋಟಿ ಹಣವನ್ನು ಖಾಸಗೀ ಸಹಭಾಗಿತ್ವ ಮತ್ತು ವಿದೇಶೀ ಪಾಲುದಾರಿಕೆಯಿಂದ ಕ್ರೋಢೀಕರಿಸಲಾಗುತ್ತೆ)

ಒಟ್ಟಿನಲ್ಲಿ ಮೋದಿ ಪ್ರತಿನಿಧಿಸಿದ್ಧ ವಾರಣಾಸಿಗೆ ಐತಿಹಾಸಿಕವಾಗಿ ಮರು ಜೀವ ನೀಡುವುದರ ಜೊತೆಗೆ, ಆಧುನಿಕತೆಯ ಸ್ಪರ್ಶ ನೀಡಲು ಸಕಲ ಸಿದ್ಧತೆ ನಡೀತಿದೆ. ಎಲ್ಲವೂ ಅಂದುಕೊಂಡತೆ ಕಾರ್ಯರೂಪಕ್ಕೆ ಬಂದ್ರೆ, 2012 ರೊಳಗೆ ಭಾರತದ ಚಿತ್ರಣವೇ ಬದಲಾಗಲಿದೆ.


-------------------------------------------------------------------
ಹೈಲೈಟ್ಸ್​:

ವಾರಣಾಸಿಗೆ ಮರುಜೀವ ನೀಡಲು ಮೋದಿ ಪ್ಲಾನ್
12,000 ಕೋಟಿ ವೆಚ್ಚದಲ್ಲಿ ವಾರಣಾಸಿ ಅಭಿವೃದ್ಧಿ
ಭೋಜ್​​ಪುರಿ ಫಿಲಂ ಸಿಟಿ, ಸ್ಮಾರ್ಟ್ಸಿಟಿ ನಿರ್ಮಾಣ
ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಯೋಜನೆ
ರಸ್ತೆಗಳು, ಐತಿಹಾಸಿಕ ಕಟ್ಟಡಗಳಿಗೆ ಮರುಜೀವ
ಕಾಶಿ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರ
24 ಗಂಟೆ ನೀರು ಮತ್ತು ವಿದ್ಯುತ್ ಪೂರೈಕೆಗೆ ಯೋಜನೆ
ಹಿರಿಯ ನಾಗರೀಕರಿಗೆ ಮತ್ತು ವಿಧವೆಯರಿಗೆ ವಸತಿ
100 ಎಕರೆ ವಿಸ್ತೀರ್ಣದಲ್ಲಿ ಸಸ್ಯತೋಟ ನಿರ್ಮಾಣ
ವಿಶ್ವದರ್ಜೆಯ ಸ್ಟೇಡಿಯಂ, ಮೆಟ್ರೋ ರೈಲು ವ್ಯವಸ್ಥೆ
ಡಿಸೆಂಬರ್​​ 25 ರಂದು ಯೋಜನೆ ನೀಲಿನಕ್ಷೆಬಿಡುಗಡೆ
5 ರಿಂದ 7 ವರ್ಷಗಳ ಒಳಗೆ ಯೋಜನೆ ಪೂರ್ಣ
2019 ರೊಳಗೆ ಒಂದು ಹಂತದ ಯೋಜನೆ ಪೂರ್ಣ
2021ರೊಳಗೆ 2ನೇ ಹಂತದ ಯೋಜನೆಗಳು ಪೂರ್ಣ
ಕೇಂದ್ರ ಸರ್ಕಾರದಿಂದ 2,082 ಕೋಟಿ ಅನುದಾನ
ಉತ್ತರ ಪ್ರದೇಶ ಸರ್ಕಾರದಿಂದ 1,488 ಕೋಟಿ ಅನುದಾನ
ಖಾಸಗೀ ಸಹಭಾಗಿತ್ವದಿಂದ 8,230 ಕೋಟಿ ಆದಾಯ
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು