ಸಿನೆಮಾ

Share This Article To your Friends

ಮಕ್ಕಳೆದುರು ಬಯಲಾಯ್ತು ಮೋದಿ ತುಂಟಾಟ..!

 ಶಿಕ್ಷಕ ದಿನಾಚರಭಣೆಯ ನಿಮಿತ್ತ 05-09-2014 ರಂದು ದೆಹಲಿಯ ಮಾಣಿಕ್ ಷಾ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.. ಮಹಾತ್ಮರ ಜೀವನ ಚರಿತ್ರೆ ಓದುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ್ರು. ಇತಿಹಾಸ ಓದಿದ್ರೆ ಇತಿಹಾಸ ಸೃಷ್ಟಿಸಬಹುದು ಅಂತಾ ಕಿವಿಮಾತು ಹೇಳಿದ್ರು.  ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು..

ವಿದ್ಯಾರ್ಥಿಗಳ ಪ್ರಶ್ನೆಗೆ ಮೋದಿ ಉತ್ತರ - ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ
--------------------------------------
ತಿರುವನಂತಪುರಂನಿಂದ
ನೀವು ಒಬ್ಬ ಶಿಕ್ಷಕರಾಗಿ, ಇಂಟಲಿಜೆಂಟ್​​ ಮತ್ತು ಲೇಜಿ ಸ್ಟೂಡೆಂಟ್​ ಮತ್ತು ಹಾರ್ಡ್​ ವರ್ಕ್​ ಮಾಡೋ ದಡ್ಡ ವಿದ್ಯಾರ್ಥಿಗಳನ್ನು ಹೇಗೆ ನೋಡ್ತೀರಿ..?ಶಿಕ್ಷಕನಾಗಿ ನೋಡೋದಾದ್ರೆ, ಇಬ್ಬರನ್ನೂ ಯಾವುದೇ ಭೇದ ಭಾವ ಇಲ್ಲದೇ ನೋಡ್ಬೆಕು.. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಶಕ್ತಿ ಮತ್ತು ಪ್ರತಿಭೆ ಇರುತ್ತೆ.. ಶಿಕ್ಷಕರಾದವರು, ಅವರಲ್ಲಿರುವ ಉತ್ತಮ ಗುಣಗಳನ್ನು ಗುರ್ತಿಸಿ ಪ್ರಶಂಸಿಸಬೇಕು.. ಆ ಉತ್ತಮ ಗುಣಗಳಿಗೆ ಆಧಾರವಾಗಿ, ಅವರ ಭವಿಷ್ಯವನ್ನು ರೂಪಿಸಲು ಶ್ರಮಿಸಬೇಕು..
----------------------------------------------------
ನಮ್ಮಂಥ ಚಿಕ್ಕ ಪುಟ್ಟ ಮಕ್ಕಳೊಂದಿಗೆ ನೀವು ಮಾತನಾಡುವುದರಿಂದ ನಿಮಗೇನು ಲಾಭ..?
ಲಾಭ ಬರುವಂತಿದ್ದರೆ ನಾನು ಇಲ್ಲಿಗೆ ಬರ್ತಾ ಇರಲಿಲ್ಲ.. ಹೆಚ್ಚು ಜನರು ಲಾಭಕ್ಕಾಗಿ ಕೆಲಸ ಮಾಡ್ತಾರೆ.. ಆದ್ರೆ ಲಾಭಕ್ಕಾಗಿ ಮಾಡುವ ಕೆಲಸದಲ್ಲಿ ಆನಂದ ಸಿಗುವುದಿಲ್ಲ.. ನಿಮ್ಮೊಂದಿಗೆ ಮಾತನಾಡುತ್ತಿರುವುದರಿಂದ ನನಗೆ ಆನಂದ ಸಿಗುತ್ತದೆ.. ಖುಷಿ ಸಿಗುತ್ತೆ.. ಒಂಥರ ಬ್ಯಾಟರಿ ಚಾರ್ಜ್​ ಆದಂತೆ ನನಗೆ ಶಕ್ತಿ ಸಿಗುತ್ತೆ.. 
----------------------------------------------------
ನೀವು ಜಗದ್ವಿಖ್ಯಾತಿಗೊಳ್ತೀರ ಅಂತ ನೀವು ಅಂದುಕೊಂಡಿದ್ರಾ..? ಅಂಧ ವಿದ್ಯಾರ್ಥಿನಿಯಿಂದ ಪ್ರಶ್ನೆ
ಖಂಡಿತ ಇಲ್ಲ.. ಯಾಕಂದ್ರೆ ನಾನು ಶಾಲೆಯಲ್ಲಿ ಮಾನಿಟರ್​ ಎಲೆಕ್ಷನ್​ಗೂ ಕೂಡ ಸ್ಪರ್ದೆ ಮಾಡಿರಲಿಲ್ಲ.. ಆದ್ರೆ ಪ್ರಧಾನಿಯಾಗೋ ಕನಸು ಕಂಡಿದ್ದೆ.. ಕನಸು ಕಾಣುವುದರ ಜೊತೆಗೆ ಅದನ್ನು ಈಡೇರಿಸುವ ತುಡಿತ ಇರಬೇಕು.. ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾನು ಕಾರ್ಯ ಪ್ರವೃತ್ತನಾದೆ.. ಈಗ ನಾನು ಪ್ರಧಾನಿಯಾಗಿದ್ದೇನೆ. ಸಂವಿಧಾನ ನಿರ್ಮಾತೃಗಳು ಬಹು ದೊಡ್ಡ ಯೋಗದಾನ ಮಾಡಿದ್ದಾರೆ. ಜನರ ಪ್ರೀತಿ, ವಿಶ್ವಾಸ ನಂಬಿಕೆ ಗಳಿಸಿದ್ರೆ ಯಾರು ಬೇಕಾದ್ರೂ ಪ್ರಧಾನಿಯಾಗಬಹುದು.. ನೀವು ಕೂಡ ಪ್ರಧಾನಿಯಾಗಬಹುದು..
----------------------------------------------------
ನೀವು ಜೀವನದಲ್ಲಿ ಯಾವುದರಿಂದ ಹೆಚ್ಚು ಪಾಠ ಕಲಿತಿದ್ದೀರಿ..? ನಿಮ್ಮ ಶಿಕ್ಷಣದಿಂದ ಅಥವ ಅನುಭವದಿಂದ..?
ಅನುಭವವೇ ದೊಡ್ಡ ಶಿಕ್ಷಕ.. ಸೂಕ್ತ ಶಿಕ್ಷಣ ಸಿಗದಿದ್ದರೆ, ಅನುಭವ ಬರ್ಬಾದ್ ಕೂಡ ಮಾಡುತ್ತೆ.. ಮುನ್ನುಗ್ಗಲೂ ಸಹಾಯ ಮಾಡುತ್ತೆ.. ನೀವು ಪಡೆದ ಶಿಕ್ಷಣದ ಆಧಾರದ ಮೇಲೆ ಅನುಭವಗಳು ಉತ್ತಮವಾಗಿರಲಿವೆ. ಹೀಗಾಗಿ ಶಿಕ್ಷಣ ಮತ್ತು ಅನುಭವ ಎರಡೂ ಮುಖ್ಯ ಪಾತ್ರ ವಹಿಸಿವೆ.
-----------------------------------------------------
 ದೇಶದ ವಿಕಾಸ ಮತ್ತು ಉನ್ನತಿಗಾಗಿ ಏನು ಮಾಡ್ತೀರಿ..?
ನೀವು ಉತ್ತಮ ವಿದ್ಯಾರ್ಥಿಗಳಾದ್ರೆ, ಅದೂ ಕೂಡ ಉನ್ನತೀಕರಣ ಮತ್ತು ವಿಕಾಸಕ್ಕೆ ಪೂರಕ.. ನೀವು ಮನೆಗೆ ಹೋದ ತಕ್ಷಣ ಸ್ಕೂಲ್  ಬ್ಯಾಗ್​ ಹಾಗೇ ಬಿಸಾಕಿದ್ರೆ ಅದು ಉತ್ತಮ ಗುಣ ಅಲ್ಲ.. ಶಿಸ್ತಿನಿಂದ ಸ್ವಚ್ಛತೆಗೆ ಆದ್ಯತೆ ನೀಡೋದು ವಿಕಾಸದ ಆದ್ಯತೆ..

ದೇಶ ಸೇವೆ ಎಂದರೆ, ದೇಶಕ್ಕಾಗಿ ಸಾಯುವು ಅಂತ ತಿಳ್ಕೊಂಡ್ರೆ ಅದು ತಪ್ಪು.. ನಿಮ್ಮ ಮನೆಯ ವಿದ್ಯುತ್​ ಸುಖಾ ಸುಮ್ಮನೇ ವ್ಯಯವಾಗ್ತಿದ್ರೆ, ಅದನ್ನು ಸರಿಪಡಿಸಬೇಕು.. ನಿಮ್ಮ ಮನೆಯಲ್ಲಿ ವಿದ್ಯುತ್ ಉಳಿತಾಯ ಮಾಡಿದ್ರೆ, ಅದು ಮತ್ತೊಬ್ಬರ ಮನೆಯನ್ನು ಬೆಳಗುತ್ತದೆ. ಇದು ಕೂಡ ಒಂದು ದೇಶ ಸೇವೆ.. ದೇಶ ಸೇವೆ ಅಂದ್ರೆ ದೊಡ್ಡ ದೊಡ್ಡ ವಿಷಯ ಅಲ್ಲ.. ಚಿಕ್ಕ ಚಿಕ್ಕ ವಿಷಯಗಳ ಮೂಲಕ ದೇಶ ಸೇವೆ ಮಾಡಬೇಕು.. ಆ ನಿಟ್ಟಿನಲ್ಲಿ ನೀವೆಲ್ಲರೂ ಕೆಲಸ ಮಾಡ್ಬೇಕು
----------------------------------------------------
ವಿದ್ಯುತ್ ಉಳಿಸಿ ಅಂತ ನೀವು ಹೇಳಿದ್ರಿ.. ನಮ್ಮಿಂದ ನೀವು ಏನೇನು ಮಾಡ್ಬೆಕು ಅಂತ ಬಯಸ್ತೀರಿ..?
ಮನೆ ಅಥವ ಶಾಲೆಯಲ್ಲಿರುವ ಫ್ಯಾನ್ ಆಫ್ ಮಾಡಬಹುದು.. ಶಾಲೆಯಿಂದ ಮನೆಗೆ ಹೋಗುವಾಗ ಶಾಲೆಯಲ್ಲಿ ಉರೀತಿರೋ ವಿದ್ಯುತ್ ಆಫ್ ಮಾಡಿ.. ಮನೆಯಲ್ಲಿರೋ ಕಿಟಕಿಗಳನ್ನು ಓಪನ್ ಮಾಡಿ.. ಗಾಳಿಯ ಜೊತೆಗೆ ಬೆಳಕೂ ಬರುತ್ತೆ.. ಇದ್ರಿಂದ ಎಸಿ ಮತ್ತು ಬಲ್ಬ್​​ ಎರಡರ ವಿದ್ಯುತ್ ಕೂಡ ಉಳಿಯುತ್ತೆ.. ವಿದ್ಯುತ್ ಉಳಿತಾಯ ಮಾಡಬಲ್ಲ ಉಪಕರಣಗಳನ್ನು ಬಳಸಿ.. ನಿಮ್ಮ ಬಳಕೆಗೆ ತಕ್ಕಂತೆ ನೀರು ಬಳಸಿ.. ಬಳಕೆಯ ನಂತರ ನೀರು ಬಂದ್ ಮಾಡಿ.. ಯಾಕಂದ್ರೆ ಇದು ಪ್ರಧಾನಿಯೊಬ್ಬರಿಂದ ಸಾಧ್ಯವಿಲ್ಲ.. ನಿಮ್ಮೆಲ್ಲರಿಂದ ಸಾಧ್ಯ..
----------------------------------------------------
ಲೇಹ್​ನಿಂದ
ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ತುಂಟಾಟ ಮಾಡ್ತಿದ್ರಾ,..? ಆ ಘಟನೆಯನ್ನು ನಮ್ಮೊಂದಿಗೆ ಹಂಚಿಕೊಳ್ತೀರಾ..?
ಮೋದಿಯವರು ಲೇಹ್ ಬಂದ್ರೆ, ಗೋಬಿ ಮತ್ತು ಆಲೂ ತಗೊಂಡ್ ಬನ್ನಿ ಅಂತಿದ್ರು..  ನಾನು ತುಂಟಾಟ ಮಾಡ್ತಿದ್ದೆ. ವಿದ್ಯಾರ್ಥಿಗಳ ಜೀವನ ತುಂಟಾಟ ಮತ್ತು ಮಸ್ತಿಯಿಂದ ಕೂಡಿರಬೇಕು.. ಮದುವೆಯಲ್ಲಿ ಕೊಳಲು ಊದುವಾಗ ಅವರೊಂದಿಗೆ ಕೀಟಲೆ ಮಾಡ್ತಿದ್ದೆ.. ಅವರು ನನ್ನನ್ನು ಹೊಡೆಯೋದಕ್ಕೆ ಓಡಿ ಬರ್ತಾ ಇದ್ರು.,. ನಾನು ಅಲ್ಲಿಂದ ಓಡಿ ಹೋಗ್ತಾ ಇದ್ದೆ..
ನೀವು ಮಾಡೋದಿಲ್ಲ ಅಂದ್ರೆ ನಾನು ಇನ್ನೊಂದು ಘಟನೆ ಹೇಳ್ತೀನಿ.. ಯಾರದಾದ್ರೂ ಮದುವೆ ಇದ್ರೆ ನಾವು ಹೋಗ್ತಿದ್ದೆವು.. ಜನರು ನಿಂತಿರುವಾಗ, ಇಬ್ಬರ ಬಟ್ಟೆ ಹಿಡ್ಕೊಂಡು ಸ್ಟಾಪ್ಲರ್​ ಹೊಡೆದು ಪಿನ್ ಹೊಡೀತಅ ಇದ್ದೆವು.. ನಾನು ಆಗ ಮಾಡ್ತಿದ್ದೆ.. ನೀವು ಹಾಗೆ ಮಾಡ್ಬೇಡಿ..
----------------------------------------------------
ಗಾಂಧೀನಗರದಿಂದ ದೆಹಲಿಗೆ ಬಂದಾಗ ನಿಮ್ಮಲ್ಲಿ ಆದ ಬದಲಾವಣೆ ಏನು..?
ಕೆಲಸ ಹೆಚ್ಚಾಗಿದೆ.. ಜವಾಬ್ದಾರಿ ಹೆಚ್ಚಾಗಿದೆ. ಇಡೀ ದೇಶದ ಬಗ್ಗೆ ಜಾಗೃತಿ ವಹಿಸಬೇಕಿದೆ. ಮುಖ್ಯಮಂತ್ರಿಯಾಗಿದ್ದಾಗ ಒಂದು ರಾಜ್ಯದ ಜವಾಬ್ದಾರಿ ಇತ್ತು.. ಈಗ ಇಡೀ ದೇಶದ ಜವಾಬ್ದಾರಿ ಇದೆ. ಅಷ್ಟೋಂದು ವ್ಯತ್ಯಾಸ ಏನೂ ಇಲ್ಲ..
----------------------------------------------------
ಮಂತ್ರಿಗಳಿಗೆ ನೀವು ಹೆಡ್​ ಮಾಸ್ಟರ್​ ಥರ.. ನಮ್ಮೊಂದಿಗೆ ಮಾತನಾಡುವಾಗ ಫ್ರೆಂಡ್ಲಿ ಪರ್ಸನ್​.. ಆದ್ರೆ, ನಿಜ ಜೀವನದಲ್ಲಿ ನಿಮ್ಮ ವ್ಯಕ್ತಿತ್ವ ಎಂಥದ್ದು..?
ನನ್ನ ಬಗ್ಗೆ ನಾನು ಏನೂ ಹೇಳೋದಕ್ಕೆ ಆಗೋದಿಲ್ಲ.. ಅದು ಅವರವರಿಗೆ ಬಿಟ್ಟದ್ದು.. ನಾನು ಹೆಡ್ ಮಾಸ್ಟರ್​ ಥರ ಡಿಸಿಪ್ಲೈನ್​​ ಪಾಲನೇ ಮಾಡದೇ ಇದ್ದಿದ್ರೆ, ಅಭಿವೃದ್ಧಿ ಸಾಧ್ಯವಾಗೋದಿಲ್ಲ.. ನಿಮ್ಮ ಸ್ಕೂಲ್ ಹೆಡ್ ಮಾಸ್ಟರ್​ ರೂಪದಲ್ಲಿ ನನ್ನನ್ನು ನೋಡುವಿರಾದರೆ, ನಾನು ಧನ್ಯನಾಗಿದ್ದೇನೆ..
----------------------------------------------------
ಜಪಾನ್​ ಮತ್ತು ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಏನು ವ್ಯತ್ಯಾಸ ಕಂಡಿದ್ರಿ..?
ನಾನು ಪ್ರೈಮರಿ ಸ್ಕೂಲ್​ಗೆ ಭೇಟಿ ನೀಡಿದ್ದೆ..  ಟೀಚಿಂಗ್ ಇಲ್ಲ.. ಪ್ರಾಯೋಗಿಕ ಪಾಠ ಇರುತ್ತೆ.. ಆಡುತ್ತಾ ಕಲೀತಾರೆ ಅಲ್ಲಿನ ಮಕ್ಕಳು.. ಅಪ್ಪ ಅಮ್ಮ ಮಕ್ಕಳನ್ನು ಸ್ಕೂಲ್​ಗೆ ಬಿಡೋದಕ್ಕೆ ಬರೋದಿಲ್ಲ.. ಇದು ಅವರ ನಿಯಮ.. ವಿದ್ಯಾರ್ಥಿಗಳನ್ನು ನೋಡಿದ್ರೆ, ಅವರನ್ನು ಕರೆದುಕೊಂಡು ಹೋಗಿ ಶಾಲೆಗೆ ಬಿಡ್ತಾರೆ ಜಪಾನಿ ಪೋಷಕರು.. ಶಿಸರ್ತು ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಇದೆ ಜಪಾನ್​ನಲ್ಲಿ.. ಇದು ಉತ್ತಮ ಸಂಪ್ರದಾಯವಾಗಿದೆ.
----------------------------------------------------
ನವದೆಹಲಿ
ರಾಜಕೀಯದ ಒತ್ತಡವನ್ನು ಹೇಗೆ ನಿರ್ವಹಿಸ್ತೀರಿ..?
ರಾಜಕೀಯ ಪ್ರೊಫೆಷನ್ ಅಲ್ಲ.. ಒಂದು ರೀತಿಯ ಸೇವೆ.. ದೇಶದ ಜನತೆ ನನ್ನ ಪರಿವಾರ.. ಅವರ ದುಃಖ ನನ್ನ ದುಃಖ.. ಅವರ ಸುಖ ನನ್ನ ಸುಖ.. ಹೀಗಾಗಿ ಅವರ ಸುಖಕ್ಕಾಗಿ ದುಡಿಯುವುದು ಒತ್ತಡ ಅಂತ ಅನಿಸೋದಿಲ್ಲ.. ನನ್ನ ಸೇವೆ ಅನಿಸುತ್ತದೆ
----------------------------------------------------
ನಮ್ಮ ದೇಶದಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ, ಸ್ಕೂಲ್ ಡೆವೆಲಪ್​ಮೆಂಟ್​ ಬಗ್ಗೆ ಎಂದಾದರೂ ಯೋಚಿಸಿದ್ದೀರಾ..?
ದೇಶಾದ್ಯಂತ ಸ್ಕಿಲ್ ಡೆವೆಲಪ್​ಮೆಂಟ್​ಗೆ ಒತ್ತು ನೀಡಲಾಗ್ತಿದೆ. ಈ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ದೇಶವನ್ನು ಮುನ್ನಡೆಸುವ ಶಕ್ತಿ ಇದೆ.. ಪದವಿಯ ಜೊತೆಗೆ ಕೈನಲ್ಲಿ ಕೆಲಸ ಇರಬೇಕು.. ಹೀಗಾಗಿ ಅವರಿಗೆ ಸ್ಕಿಲ್ ಡೆವಲಪ್​ಮೆಂಟ್​ ಮಹತ್ವದ ಪಾತ್ರ ವಹಿಸಲಿದೆ. ಒಂದು ಕಡೆ ಜನರು ಇದ್ದಾರೆ.. ಮತ್ತೊಂದು ಕಡೆ ಕೆಲಸ ಕೂಡ ಇದೆ.. ಆದ್ರೆ ಇರುವ ಉದ್ಯೋಗ ಮಾಡಲು ಸಮರ್ಥರಿರುವ ಜನತೆ ಸಿಗ್ತಾ ಇಲ್ಲ.. ನಿರುದ್ಯೋಗಿಗಳನ್ನು ಯಾವ ರೀತಿ ತಯಾರು ಮಾಡಬೇಕಿದೆಯೋ..? ಅದು ಅಗ್ತಾ ಇಲ್ಲ.. ಈ ನಿಟ್ಟಿನಲ್ಲಿ ಯುವಜನತೆಯನ್ನು ತಯಾರು ಮಾಡಬೇಕಿದೆ.. ಆಗ ಬಹುತೇಕ ಜನರಿಗೆ ಉದ್ಯೋಗ ಸಿಗುತ್ತೆ..
----------------------------------------------------
ವಾತಾವರಣದಲ್ಲಿನ ಬದಲಾವಣೆ ಮತ್ತು ಪರಿಸರ ಬದಲಾವಣೆ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ತೀರ..?
ಚಿಕ್ಕ ಮಕ್ಕಳೂ ಕ್ಲೈಮೆಟ್ ಚೈಂಜ್ ಮತ್ತು ಎನ್ವಿರಅನ್​ಮೆಂಟ್ ಚೈಂಜ್ ಬಗ್ಗೆ ಮಾತಾಡ್ತಿದ್ದಾರೆ ಅಂದ್ರೆ, ಇದರ ಮಹತ್ವ ಎಂಥದ್ದು ಆಂತ ಗೊತ್ತಾಗುತ್ತೆ.. ಒಂದು ಲೆಕ್ಕದಲ್ಲಿ ಹೇಳೋದಾದ್ರೆ, ಕ್ಲೈಮೆಟ್ ಚೈಂಜ್ ಅಗಿಲ್ಲ.. ನಾವು ಚೈಂಜ್ ಆಗಿದ್ದೆವೆ.. ಕ್ಲೈಮೆಟ್​ ಅನ್ನ ನಾವು ಚೈಂಜ್ ಮಾಡಿದ್ದೇವೆ.. ಹೀಗಾಗಿ ನಾವು ಮೊದಲು ಚೈಂಜ್ ಅಗಬೇಕು.. ಆಗ ಪ್ರಕೃತಿ ತಾನಾಗಿಯೇ ಚೈಂಜ್ ಅಗುತ್ತೆ.. ಪ್ರಕೃತಿಯನ್ನು ಪ್ರೀತಿಸಬೇಕು,.. ಕಾಳಜಿಯಿಂದ ನೋಡ್ಕೊಬೇಕು.. ಆಗ ಪ್ರಕೃತಿ ಸುಂದರವಾಗಿಯೇ ಆಗುತ್ತೆ.. ಬದಲಾವಣೆ ನಮ್ಮಲ್ಲಿ ಆಗಬೇಕು.. ಆಗ ಪರಿಸರ ತಾನಾಗಿಯೇ ಬದಲಾಗುತ್ತೆ..
ನಿಮ್ಮಲ್ಲಿ ಎಷ್ಟು ಜನ ಸೂರ್ಯೋದಯ ನೋಡಿದ್ದೀರಿ..? ಎಷ್ಟು ಮಂದಿ ಸೂರ್ಯಾಸ್ತ ನೋಡಿದ್ದೀರಿ..? ಎಷ್ಟು ಮಂದಿ ಪೂರ್ಣ ಚಂದ್ರಮನನ್ನು ನೋಡಿದ್ದೀರಿ..? ನೋಡಿ.. ಪ್ರಕರತಿಯೊಂದಿಗೆ ಬೆರೆತು ನೋಡಿ.. ಚಂದ್ರನ ಬೆಳದಿಂಗಳನ್ನು ಆನಂದಿಸಿ,. ವಿದ್ಯುತ್​​ ಆರಿಸಿ ಚಂದ್ರನ ಬೆಳದಿಂಗಳನ್ನು ಆನಂದಿಸಿ.. ಆಗ ವಿದ್ಯುತ್ ಉಳಿತಾಯ ಕೂಡ ಆಗುತ್ತೆ.. ಜೊತೆಗೆ ಪ್ರಕೃತಿಯೊಂದಿಗೆ ಪ್ರೀತಿ ಕೂಡ ಬೆಳೆಯುತ್ತೆ.. ಪ್ರಕರತಿ ಮತ್ತು ಮಾನವನೊಂದಿಗೆ ಉತ್ತಮ ನಂಟು ಕೂಡ ಬೆಳೆಯುತ್ತದೆ.
----------------------------------------------------
ದಂತಿವಾಡದಿಂದ ಅಂಜಲಿ
ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತೀರಿ..?
ಬಾಲಕಿಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗ್ತಿದೆ. ಒಬ್ಬ ವ್ಯಕ್ತಿ ಓದಿದ್ರೆ, ಒಬ್ಬ ಮಾತ್ರ ಓದಿದಂತೆ.. ಒಂದು ಹೆಣ್ಣು ಕಲಿತರೆ ಎರಡು ಪರಿವಾರ ಕಲಿತಂತೆ.. ಮೆಡಲ್ ಪಡೆದುಕೊಳ್ತಾ ಇರೋರು ಬಾಲಕಿಯರು.. ಆಟೋಟದ ಜೊತೆಗೆ ಪಾಠದಲ್ಲಿ ಮಿಂಚಿನಂತೆ ಸಾಧನೆ ಮಾಡ್ತಾ ಇರೋರು ಬಾಲಕಿಯರು.. ಹೀಗಾಗಿ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಟಾಯ್ಲೆಟ್ ಸರಿ ಇಲ್ಲದಿದ್ದರೆ, ಅದು ಅವರ ಮೈಂಡ್​ನಲ್ಲಿ ಹೆಚ್ಚು ಕೊರೀತಾ ಇತ್ತು.. ಇದ್ರಿಂದ ಅನೇಕ ವಿದ್ಯಾರ್ಥಿನಿಯರು ಶಾಲೆ ಬಿಡ್ತಾ ಇದ್ರು.. ಇಂಥ ಚಿಕ್ಕ ವಿಷಯಕ್ಕೆ ವಿದ್ಯಾರ್ಥಿನಿಯರು ಶಾಲೆ ಬಿಡ್ತಾ ಇದ್ದಿದ್ದು ನನಗೆ ಅಚ್ಚರಿಯಾಯ್ತು.. ಅದಕ್ಕಾಗಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗ್ತಿದೆ. ಈ ಪ್ರಶ್ನೆಯಿಂದ ದೇಶವನ್ನು ಮುನ್ನಡೆಸುವ ಶಕ್ತಿ ಇದೆ.
----------------------------------------------------
ಮಾತೃಭಾಷೆಯಿಂದ ದೇಶದ ಅಭಿವೃದ್ಧಿ ಸಾಧ್ಯವಿದೆಯಾ...?
‘ಡಿಜಿಟಲ್ ಇಂಡಿಯಾ’ ಮೂಲಕ ಭಾರತವನ್ನು ಮುನ್ನಡೆಸುವ ಕನಸು ನನ್ನದು.. ಅದು ಭಾರತೀಯ ಭಾಷೆಗಳಲ್ಲಿ ಜನರಿಗೆ ತಲುಪುವಂತಾಗಬೇಕು.. ದೇಶದ ಎಷ್ಟು ಶಾಲೆಗಳಿಗೆ ನನ್ನ ಈ ಮೇಲೆ ತಲುಪುತ್ತದೆ.? ನಾನು ಎಷ್ಟು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಲು ಸಾಧ್ಯ..? ಹೀಗಾಗಿ ಡಿಜಿಟಲ್ ಇಂಡಿಯಾ ನನ್ನ ಆದ್ಯತೆ.. ಓದುವ ತುಡಿತ ಇರಬೇಕು.. ಜ್ಞಾನ ಎಂಬುದು ಮಹಾ ಸಾಗರ.. ನನಗೆ ಕೊಂಚ ಸಮಯ ಸಿಕ್ಕರೂ ನಾನು ಓದಲು ಶುರು ಮಾಡ್ತಿದ್ದೆ.. ಗುಜರಾತಿನಲ್ಲಿ ಲೈಬ್ರರಿಯಲ್ಲಿ ಪುಸ್ತಕಗಳೆ ಇರಲಿಲ್ಲ.. ಒಂದು ಅಭಿಯಾನದಿಂದ ಓದಿನ ಆಸಕ್ತಿ ಬೆಳೀತು.. ಓದುವ ಜನತೆ ಕೂಡ ಹೆಚ್ಚಾದರು.. ಹೀಗಾಗಿ ಡಿಜಿಟಲ್ ಇಂಡಿಯಾದ ಮೂಲಕ ಜನರು ಜಗತ್ತಿನ ವಿಷಯ ತಿಳಿಯುವಂತಾಗಬೆಕು..
----------------------------------------------------
ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ನೀವು ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ..?
5ನೇ ತರಗತಿ ನಂತರ ಬೇರೆ ಶಾಲೆಗೆ ಕಳಿಸಲು ಅಪ್ಪ ಅಮ್ಮ ಒಪ್ಪಲ್ಲ.. ಈ ನಿಟ್ಟಿನಲ್ಲಿ, ಬಾಲಕಿಯರಿಗೆ ಮನೆಗೆ ಹತ್ತಿರದಲ್ಲಿ, ಉತ್ತಮ ಶಿಕ್ಷಣ ಹೇಗೆ ನೀಡಬೆಕು ಎಂಬ ದಿಶೆಯಲ್ಲಿ ಕೆಲಸ ನಡೀತಿದೆ. ಇನ್ನೊಂದು ಕ್ವಾಲಿಟಿ ಆಫ್ ಎಜುಕೇಷನ್.. ಇದಕ್ಕಾಗಿ ತಂತ್ರಜ್ಞಾನದ ಬಳಕೆ ಅಗತ್ಯವಿದೆ. ಇದ್ರಿಂದ ದೂರ ಶಿಕ್ಷಣದ ಕ್ವಾಲಿಟಿ ಹೆಚ್ಚುತ್ತೆ..
----------------------------------------------------
 
ವರದಿ - ಶೇಖರ್​ ಪೂಜಾರಿ

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು