ಸಿನೆಮಾ

Share This Article To your Friends

ಕನ್ನಡತಿ ‘ಅರುಣಾ ಶಾನಭಾಗ್’ರ 37 ವರ್ಷದ ನರಕ - ಅತ್ಯಾಚಾರಿ ಸಂತ್ರಸ್ತೆಯ ಕಂಪ್ಲೀಟ್ ಸ್ಟೋರಿ


     ಅತ್ಯಾಚಾರದಿಂದಾಗಿ ಕನ್ನಡತಿಯೊಬ್ಬಳ ಬದುಕು ಕೂಡ ನರಕವಾಗಿದೆ.37 ವರ್ಷಗಳಿಂದ ಆಕೆ ಜೀವಂತ ಶವವಾಗಿದ್ದಾಳೆ. ಕಾಮುಕರ ಅಟ್ಟಹಾಸಕ್ಕೆ ನಲುಗಿದ ಆ ಸ್ಪುರದ್ರೂಪಿ ಚೆಲುವೆಯ ದುರಂತ ಕಥೆ ಇಲ್ಲಿದೆ ನೋಡಿ..

    ಅರುಣಾ ಶಾನಭಾಗ್​... ಅಪ್ಪಟ ಕನ್ನಡತಿ.. ಶಿವಮೊಗ್ಗಾ ಜಿಲ್ಲೆಯ ಹಲ್ದಿಪುರ್​​ ಪ್ರದೇಶದವರು.. ನರ್ಸಿಂಗ್ ಓದಿರೋ ಈಕೆಯ ಬದುಕು ಈಗ ಯಾವ ಪರಿಸ್ತಿತಿಯಲ್ಲಿದೆ ಗೊತ್ತಾ..? ನೀವೇ ನೋಡಿ..

    ಯಸ್​.. ಈಕೇನೇ ಅರುಣಾ ಶಾನಭಾಗ್.. ಈಕೆ 70 ರ ದಶಕದಲ್ಲಿ ಹೀಗೆ ಇರಲಿಲ್ಲ.. ರೂಪವತಿ, ಚತುರೆ ಮತ್ತು ವಿದ್ಯಾವಂತೆಯಾಗಿದ್ಳು.. ನರ್ಸಿಂಗ್ ಓದಿದ್ದ ಈಕೆ ಕೆಲಸ ಹುಡುಕಿಕೊಂಡು 1966 ರಲ್ಲಿ ಮುಂಬೈಗೆ ತೆರಳಿದ್ಳು.. ಅಲ್ಲಿನ ಕೆಇಎಂ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ಳು.. ಆದ್ರೆ ಅಲ್ಲಿನ ಕಾಮುಕರ ಕಣ್ಣು ಈಕೆಯ ಮೇಲೆ ನೆಟ್ಟಿತ್ತು.


ಅರುಣಾ ಮೇಲೆ ವಾರ್ಡ್​ಬಾಯ್​ನಿಂದ ಅತ್ಯಾಚಾರ
ಕ್ರೂರ ರೀತಿಯಲ್ಲಿ ಅತ್ಯಾಚಾರ ಎಸಗಿದ ಕಿರಾತಕ

    ಸ್ಪುರದ್ರೂಪಿಯಾಗಿದ್ದ ಅರುಣಾ ಶಾನ್​ಬಾಗ್​ ಮೇಲೆ ಸೋಹನ್​ಲಾಲ್ ವಾಲ್ಮೀಕಿ ಎಂಬ ವಾರ್ಡ್​ಬಾಯ್ ಕೆಟ್ಟ ಕಣ್ಣು ನೆಟ್ಟಿದ್ದ. ಸರಿಯಾದ ಸಮಯಕ್ಕಾಗಿ ಕಾಯ್ತಾ ಇದ್ದ ಕಿರಾತಕ, ನವೆಂಬರ್​ 27, 1973 ರಂದು ಆಕೆಯ ಮೇಲೆ ಅಟ್ಟಹಾಸಗೈದಿದ್ದಾನೆ.

    ನಾಯಿಯ ಕುತ್ತಿಗೆಗೆ ಕಟ್ಟೋ ಚೈನ್​​ನಿಂದ ಆಕೆಯ ಕುತ್ತಿಗೆಯನ್ನು ಬಿಗಿಯಾಗಿ ಕಟ್ಟಿದ್ದಾನೆ. ನಂತರ ಆಕೆಯ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿದ್ದಾನೆ.

    ನಾಯಿ ಚೈನ್​ನಿಂದ ಆಕೆಯ ಕುತ್ತಿಗೆಯನ್ನು ಕಟ್ಟಿದ್ರಿಂದ, ಮಿದುಳಿಗೆ ಆಮ್ಲಜನಕದ ಪೂರೈಕೆ ಸರಿಯಾಗಿ ಆಗ್ಲಿಲ್ಲ.. ಇದ್ರಿಂದಾಗಿ ಅರುಣಾಳ ಮಿದುಳಿನಲ್ಲಿ ಹೆಚ್ಚಿನ ಪ್ರಮಾಣದ ರಕ್ತಸ್ರಾವವಾಗಿದೆ. ಇನ್ನು ಇದೇ ವೇಳೆ ಅರುಣಾಳ ಮೇಲೆ ಕ್ರೂರ ಅತ್ಯಾಚಾರ ನಡೆದಿದ್ದು, ಆಕೆಯ ಮಿದುಳನ್ನು ಘಾಸಿಗೊಳಿಸಿದೆ. ಹೀಗಾಗಿ ಆಕೆ ಅರೆಹುಚ್ಚಿಯಾಗಿದ್ದಾಳೆ..

37 ವರ್ಷಗಳಿಂದ ಜೀವಂತ ಶವವಾದ ಶಾನಭಾಗ್​

    ಆವತ್ತು ಕಾಮುಕನ ಕ್ರೌರ್ಯಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನಲುಗಿದ ಅರುಣಾ ಶಾನ್​ ಭಾಗ್​ ಇಂದಿಗೂ ಕೂಡ ಜೀವಂತ ಶವವಾಗಿ ಮುಂಬೈನ ಆಸ್ಪತ್ರೆಯಲ್ಲಿ ಬದುಕ್ತಾ ಇದ್ದಾಳೆ.


‘ಕೊಲೆ ಯತ್ನ’ ಪ್ರಕರಣದಲ್ಲಿ ಸೋಹನ್​ ಲಾಲ್ ಬಂಧನ
ಅತ್ಯಾಚಾರಿಯ ವಿರುದ್ಧ ದಾಖಲಾಗಲಿಲ್ಲ ರೇಪ್ ಕೇಸ್..!

    ಅರುಣಾಳ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿದ ಕಿರಾತಕ ಸೋಹನ್​​ ಲಾಲ್​ ಮೇಲೆ ಕೊಲೆ ಯತ್ನ ಮತ್ತು ದರೋಡೆ ಪ್ರಯತ್ನದ ಕೇಸನ್ನು ದಾಖಲಿಸಲಾಗಿದೆ. ಆದ್ರೆ ಅತ್ಯಾಚಾರದ ಕೇಸನ್ನು ಆತನ ಮೇಲೆ ದಾಖಲಿಸಿಲ್ಲ. ಹೀಗಾಗಿ ಆತನಿಗೆ ಕೇವಲ 7 ವರ್ಷಗಳ ಕಾಲ ಶಿಕ್ಷೆ ನೀಡಿದೆ. ಆದ್ರೆ 37 ವರ್ಷದಿಂದ ಜೀವಂತ ಶವವಾಗಿ ಬದುಕ್ತಿರೋ ಅರುಣಾ ಶಾನಭಾಗ್​​ ಪರಿಸ್ಥಿತಿ ಇನ್ನೂ ಕೂಡ ಹಾಗೇನೇ ಇದೆ.

ಅರುಣಾ ಶಾನಭಾಗ್​ಗೆ ಸಿಗಲಿಲ್ಲ ನ್ಯಾಯ..!
ಮುಗಿಯಲಿಲ್ಲ 37 ವರ್ಷದ ನರಕದ ಬದುಕು
ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ರು ಗೆಳತಿ

    ಅತ್ಯಾಚಾರಿ ವಾರ್ಡ್​ಬಾಯ್ 7 ವರ್ಷ ಶಿಕ್ಷೆ ಅನುಭವಿಸಿ, ಹೊರಗೆ ಬಂದಿದ್ದ. ನಂತರ ಏಡ್ಸ್ ರೋಗಕ್ಕೆ ತುತ್ತಾಗಿ ಸತ್ತು ಹೋಗಿದ್ದಾನೆ. ಆದ್ರೆ ಅರುಣಾ ಶಾನಭಾಗ್​ ಮಾತ್ರ 37 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದಾಳೆ. ಅರುಣಾಳ ಸ್ಥಿತಿಯನ್ನು ನೋಡಿದ್ರೆ, ಎಲ್ಲರ ಕರುಳು ಕೂಡ ಚುರ್​ ಅನ್ನುತ್ತೆ ಕಣ್ರಿ.. ಆಕೆ ಅನುಭವಿಸ್ತಾ ಇರೋ ಮಾನಸಿಕ ನೋವನ್ನು ನೋಡೋಕೆ ಆಗದೇ, ಸ್ನೇಹಿತೆ ಪಿಂಕಿ ವಿನಾನಿ ಅರುಣಾ ಶಾನಭಾಗ್​ಗೆ ದಯಾಮರಣ ನೀಡಿ ಅಂತ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದ್ರೆ ನ್ಯಾಯಾಲಯ ದಯಾಮರಣಕ್ಕೆ ಅವಕಾಶ ನೀಡಿಲ್ಲ. ಅರುಣಾ ಶಾನಭಾಗ್​ಳ ಕ್ರೂರ ನರಕದ ಬದುಕಿಗೆ ಮುಕ್ತಿ ಯಾವಾಗ ಸಿಗುತ್ತೋ ಗೊತ್ತಿಲ್ಲ..!


ವರದಿ : ಶೇಖರ್​ ಪೂಜಾರಿ Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು