ಸಿನೆಮಾ

Share This Article To your Friends

22 ವರ್ಷವಾದ್ರೂ ‘ಭನ್ವರಿ ದೇವಿ’ಗೆ ಇನ್ನೂ ನ್ಯಾಯ ಸಿಕ್ಕಿಲ್ಲ- ಅತ್ಯಾಚಾರದ ಕಂಪ್ಲೀಟ್ ಸ್ಟೋರಿ    ನಿಮಗೆ ಭನ್ವರಿ ದೇವಿಯ ಪ್ರಕರಣ ಗೊತ್ತಿರಬೇಕು.. 22 ವರ್ಷಗಳ ಹಿಂದೆ ಐವರು ಕಾಮುಕರು  ಭನ್ವರಿ ದೇವಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ರು. ಆದ್ರೆ ಇದುವರೆಗೂ ಆಕೆಗೆ ನ್ಯಾಯ ಸಿಕ್ಕಿಲ್ಲ. ಆ ಬಗ್ಗೆ ಕಂಪ್ಲೀಟ್ ಡೀಟೇಲ್ ಇಲ್ಲಿದೆ ನೋಡಿ..

ಸಾಮಾಜಿಕ ಹೋರಾಟಗಾರ್ತಿ ಮೇಲೆ ಅತ್ಯಾಚಾರ
ಅತ್ಯಾಚಾರವಾಗಿ 22 ವರ್ಷವಾದ್ರೂ ಸಿಗಲಿಲ್ಲ ನ್ಯಾಯ

    ಈಕೆಯ ಹೆಸ್ರು ಭನ್ವರಿ ದೇವಿ.. ರಾಜಸ್ಥಾನದ ಭತೇರಿ ಅನ್ನೋ ಹಳ್ಳಿಯಲ್ಲಿ ಹುಟ್ಟಿದ ಈಕೆ ಕುಮ್ಹಾರ್ ಎಂಬ ಕೆಳಜಾತಿಗೆ ಸೇರಿದ್ಳು. 1980 ರಲ್ಲಿ ಬಾಲ್ಯ ವಿವಾಹದ ವಿರುದ್ಧ ಹೋರಾಟ ನಡೆಸಿದ ದಿಟ್ಟ ಹೋರಾಟ ಗಾರ್ತಿ ಈಕೆ. 1992 ಮೇ 5 ರಂದು, ತನ್ನ ಊರಿನಲ್ಲೇ ಬಾಲ್ಯ ವಿವಾಹಕ್ಕೆ ತಯಾರಿ ನಡೀತಿತ್ತು. ಗೂರ್ಜರ್​​ ಎಂಬ ಮೇಲ್ಜಾತಿಗೆ ಸೇರಿದ ರಾಮ್ ಕರಣ್​ ಗೂರ್ಜರ್ ಎಂಬಾತ ತನ್ನ 9 ತಿಂಗಳ ಕಂದಮ್ಮನಿಗೆ ಮದುವೆ ಮಾಡಲು ಪ್ರಯತ್ನಿಸ್ತಿದ್ದ. ಇದನ್ನು ಅರಿತ ಭನ್ವರಿ ದೇವಿ ಮಹಿಳಾ ಸಂಘಟನೆಗಳು ಮತ್ತು ಪೋಲೀಸರ ಸಹಾಯದೊಂದಿಗೆ ಬಾಲ್ಯ ವಿವಾಹವನ್ನು ನಿಲ್ಲಿಸಿದ್ಳು..

    ಮಗಳ ಮದುವೆ ನಿಲ್ಲಿಸಿದ್ದಕ್ಕೆ ರಾಮ್ ಕರಣ್ ಗೂರ್ಜರ್ ಕೆರಳಿದ್ದಾನೆ. 1992 ಸೆಪ್ಟಂಬರ್​​ 22 ರಂದು ಸಂಜೆ 6 ಗಂಟೆಗೆ , ಭನ್ವರಿ ದೇವಿ ಮತ್ತು ಆಕೆಯ ಗಂಡ ಹೊಲದಲ್ಲಿ ಕೆಲಸ ಮಾಡ್ತಿದ್ಳು.. ಈ ವೇಳೆ ರಾಮ್ ಕರಣ್ ಗೂರ್ಜರ್​​ ಐವರು ಕಿರಾತಕರೊಂದಿಗೆ ಆಕೆಯನ್ನು ಹುಡುಕಿಕೊಂಡು ಬಂದಿದ್ದಾನೆ. ನೇರವಾಗಿ ಬಂದೋರೇ ಭನ್ವರಿ ದೇವಿಯ ಪತಿ ಮೋಹನ್ ಲಾಲ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸೋಕೆ ಬಂದ ಭನ್ವರಿ ದೇವಿಯನ್ನೂ ಥಳಿಸಿದ್ದಾರೆ. ನಂತರ ಐವರು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.


52 ಗಂಟೆಗಳಾದ್ರೂ ನಡೀಲಿಲ್ಲ ವೈದ್ಯಕೀಯ ಪರೀಕ್ಷೆ
ರೇಪ್​ನಲ್ಲೂ ನಡೀತು ರಾಜಕೀಯದ ಕಳ್ಳಾಟ..!
    ಇನ್ನು ಅತ್ಯಾಚಾರ ನಡೆದು 52 ಗಂಟೆಗಳಾದ್ರೂ ಕೂಡ ಭನ್ವರಿ ದೇವಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿಲ್ಲ. ಅಷ್ಟೋತ್ತಿಗಾಗಲೇ ದೈಹಿಕ ಸಾಕ್ಷಿಗಳು ನಾಶವಾಗಿ ಹೋಗಿದ್ವು.. ಆಕೆಯ ಬಟ್ಟೆ ಮತ್ತು ಕಾಲಿನ ಮೇಲಿನ ಗಾಯ ಮಾತ್ರ ಅತ್ಯಾಚಾರಕ್ಕೆ ಸಾಕ್ಷಿ ಅಂತ ಪರಿಗಣಿಸಲಾಯ್ತು.

    ಇನ್ನು ಅತ್ಯಾಚಾರದ ವೇಳೆ ಭನ್ವರಿ ದೇವಿಯ ಪತಿಗೆ ಪೆಟ್ಟು ಬಿದ್ದಿದ್ರಿಂದ ಪ್ರಜ್ಞೆ ಕಳೆದು ಕೊಂಡಿದ್ರು. ಹೀಗಾಗಿ ಸಾಮೂಹಿಕ ಅತ್ಯಾಚಾರ ನಡೆದಿರೋದನ್ನು ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ರಾಮ್ ಕರಣ್ ಗೂರ್ಜರ್​ ಬ್ರಾಹ್ಮಣ ವರ್ಗದವನು.. ಭನ್ವರಿ ದೇವಿ ಕೆಳ ಜಾತಿಯ ಮಹಿಳೆ. ಹೀಗಾಗಿ ಈಕೆಯ ಮೇಲೆ ರಾಮ್ ಕರಣ್ ಮತ್ತು ಆತನ ಸಂಗಡಿಗರು ಅತ್ಯಾಚಾರ ನಡೆಸಿರೋ ಸಾಧ್ಯತೆ ಇಲ್ಲ ಅಂತ ಕೂಡ ಕೆಲವರು ಊಹಿಸಿದ್ರು.


ಕಾಮುಕರ ದೌರ್ಜನ್ಯಕ್ಕೆ ನಲುಗಿದ ‘ದೇವಿ’
ಊರಿನಿಂದ ಭನ್ವರಿ ದೇವಿಗೆ ಬಹಿಷ್ಕಾರ

    ಕಾಮುಕರ ಅಟ್ಟಹಾಸಕ್ಕೆ ಸ್ಥಳೀಯ ಎಂಎಲ್​ಎ ಸಾಥ್ ನೀಡಿದ್ದ. ಪಂಚಾಯ್ತಿ ಕೂಡ ಕಾಮುಕರ ಪರವಾಗೇ ಇತ್ತು. ಹೀಗಾಗಿ ಭನ್ವರಿ ದೇವಿಯದ್ದೇ ತಪ್ಪು ಎಂದು, ಆಕೆಯನ್ನು ಊರಿನಿಂದ ಬಹಿಷ್ಕಾರ ಹಾಕಿದ್ರು.

ಅಣ್ಣ ತಮ್ಮಂದಿರೂ ದೂರ ತಳ್ಳಿದರು
ತಾಯಿಯ ಅಂತ್ಯ ಸಂಸ್ಕಾರಕ್ಕೂ ಕರೀಲಿಲ್ಲ

    ಭನ್ವರಿ ದೇವಿಯನ್ನು ಊರಿಂದ ಬಹಿಷ್ಕಾರ ಹಾಕಿದ್ರಿಂದ, ಸ್ವಂತ ಅಣ್ಣ ತಮ್ಮಂದಿರೂ ಕೂಡ ಈಕೆಯ ಹತ್ರ ಸುಳೀಲಿಲ್ಲ. ತಾಯಿ ಸತ್ತಾಗಲೂ ಕೂಡ ಈಕೆಯನ್ನು ತಾಯಿಯ ಶವದ ಹತ್ರ ಬರೋಕೆ ಬಿಡಲಿಲ್ಲ. ಪರಿಸ್ಥಿತಿ ಯಾವ ಮಟ್ಟಕ್ಕೆ ತಿರುಗಿತ್ತು ಅಂದ್ರೆ, ಭನ್ವರಿ ದೇವಿಯ ಸೋದರರು ಪಂಚಾಯ್ತಿಗೆ 25 ಸಾವಿರ ದಂಡ ಕೊಟ್ಟು, ನನ್ನ ಸೋದರಿಯನ್ನ ಮತ್ತೆ ನಮ್ಮ ಸಮುದಾಯಕ್ಕೆ ಸೇರಿಸಿಕೊಳ್ಳಲು ಅವಕಾಶ ನೀಡಿ ಅಂತ ಮನವಿ ಮಾಡಿಕೊಂಡ್ರು.


    ಎಂಥಾ ಪರಿಸ್ತಿತಿ ಬಂತು ನೋಡ್ರಿ ಈ ಹೋರಾಟಗಾರ್ತಿಗೆ.. ತನ್ನ ಮೇಲೆ ಅತ್ಯಾಚಾರ ಮಾಡಿದ ಕಿರಾತಕರಿಗೆ 25 ಸಾವಿರ ಕೊಡೋ ಪರಿಸ್ಥಿತಿ ಈಕೆಗೆ ಬಂದು ಬಿಟ್ತು ಅಂದ್ರೆ, ಅನ್ಯಾಯ ಎಷ್ಟರಮಟ್ಟಿಗೆ ತಾಂಡವವಾಡ್ತಾ ಇದೆ ಅನ್ನೋದು ಗೊತ್ತಾಗುತ್ತೆ.

ಭನ್ವರಿ ದೇವಿ ಪರವಾಗಿ ನಿಂತ ಮಾಧ್ಯಮಗಳು
ಸುಪ್ರೀಂಕೋರ್ಟ್​ ಅಂಗಳ ಮುಟ್ಟಿದ ಕೇಸ್​​..!
    ಇನ್ನು ಭನ್ವರಿ ದೇವಿಯ ಪರವಾಗಿ ರಾಜಸ್ಥಾನದ ಮಾಧ್ಯಮಗಳು ದನಿ ಎತ್ತಿದವು. 2007 ರಲ್ಲಿ ಮಹಿಳಾ ಸಂಘಟನೆಗಳು, ರಾಜಸ್ಥಾನ ಸರ್ಕಾರ ಸುಪ್ರೀಂಕೋರ್ಟ್​ನ ಮೊರೆ ಹೋದವು. ಇನ್ನೂ ಕೂಡ ಪ್ರಕರಣದ ವಿಚಾರಣೆ ನಡೀತಾನೇ ಇದೆ.

ಇಬ್ಬರು ಆರೋಪಿಗಳು ಸತ್ತೇ ಹೋದ್ರು
ವಿಚಾರಣೆ ಮಾತ್ರ ಇಂದಿಗೂ ಮುಗಿದಿಲ್ಲ
    ಇನ್ನು ಭನ್ವರಿ ದೇವಿಯನ್ನು ಅತ್ಯಾಚಾರ ಮಾಡಿದ ಐವರು ಕಾಮಾಂಧರ ಪೈಕಿ, ಇಬ್ಬರು ಈಗಾಗಲೇ ಸತ್ತು ಹೋಗಿದ್ದಾರೆ. ಆದ್ರೆ 22 ವರ್ಷಗಳಾದ್ರೂ,  ಪ್ರಕರಣದ ಕೇಸು ಮಾತ್ರ ಇನ್ನೂ ಕೂಡ ನಡೀತಾನೇ ಇದೆ. ಸಾಯೋವರೆಗೂ  ಹೋರಾಟ ಮಾತ್ರ ನಿಲ್ಲಿಸೋದಿಲ್ಲ ಅಂತ ಭನ್ವರಿ ದೇವಿ ಹೇಳಿದ್ದಾಳೆ. ಆದ್ರೆ ಇನ್ನುಳಿದ ಮೂವರು ಸತ್ತರೂ, ಪ್ರಕರಣದ ವಿಚಾರಣೆ ಮುಗಿಯುತ್ತೋ ಇಲ್ವೋ ಗೊತ್ತಿಲ್ಲ..! ಇನ್ನು ಈಕೆಗೆ ಒಬ್ಬ ಮಗನಿದ್ದು, ಅತ್ಯಾಚಾರಿಯ ಮಗ ಅಂತ ಈತನಿಗೆ ಹೆಣ್ಣು ಕೂಡ ಕೊಡ್ತಾ ಇಲ್ಲ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು