ಸಿನೆಮಾ

Share This Article To your Friends

ಮೋದಿಗೆ ‘ಸ್ತ್ರೀ’ದೋಷ..?

ಮತದಾನ ಪ್ರಕ್ರಿಯೆ ಮುಗಿದಿದೆ. ಇನ್ನೇನಿದ್ರೂ ಫಲಿತಾಂಶದ ಲೆಕ್ಕಾಚಾರ ಮಾತ್ರ ಬಾಕಿ ಇದೆ. ಬಿಜೆಪಿಗೆ ಯಾರ್ ಯಾರು ಬೆಂಬಲ ನೀಡ್ತಾರೆ ಅನ್ನೋ ಲೆಕ್ಕಾಚಾರ ಈಗ ಬಿಸಿ ಬಿಸಿ ಚರ್ಚೆಯಾಗ್ತಿದೆ. ಕೆಲವೊಂದು ಲೆಕ್ಕಾಚಾರದ ಪ್ರಕಾರ, ಮೋದಿಗೆ ಮೂವರು ಮಹಿಳೆಯರು ಸಾಥ್​​ ನೀಡಿದ್ರೆ, ಮೋದಿ ಪ್ರಧಾನಿಯಾಗೋದು ಗ್ಯಾರಂಟಿಯಾಗಿದೆ.. 

 ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಯಾವತಿ ಮತ್ತು ತಮಿಳುನಾಡಿನ ಜಯಲಲಿತ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಗಳಿವೆ.


ಬಿಜೆಪಿ ಮೇಲೆ ಮಮತೆ

ತೃಣಮೂಲ ಕಾಂಗ್ರೆಸ್​​ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ 2001ರವೆರೆಗೆ, ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಗೆ ಸಪೋರ್ಟ್​ ನೀಡ್ತಿದ್ರು.. ಆದ್ರೆ ಕೆಲವರು ಅನಿವಾರ್ಯಕಾರಣಗಳಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್​​ಗೆ ಜೈ ಅಂದ್ರು,.. ಆದ್ರೆ ಮತ್ತೆ 2004 ರಲ್ಲಿ ಎನ್​ಡಿಗೆ ಬೆಂಬಲ ವ್ಯಕ್ತಪಡಿಸಿದ್ರು.. ಆದ್ರೆ ಮತ್ತೆ 2009 ರಲ್ಲಿ ಕಾಂಗ್ರೆಸ್​​ ನೇತೃತ್ವದ ಯುಪಿಎಗೆ ಬೆಂಬಲ ನೀಡಿದ್ರು.. ಹೀಗೆ ಪ್ರತಿ ಚುನಾವಣೆಗೂ ತಮ್ಮ ಮೈತ್ರಿಯನ್ನು ಬದಲಿಸ್ತಾ ಇರೋ ಮಮತಾ ಬ್ಯಾನರ್ಜಿ, ಈಸಲ ಬಿಜೆಪಿಯನ್ನ ಬೆಂಬಲಿಸೋ ಸಾಧ್ಯತೆ ಇದೆ.

 
 
ಬಿಜೆಪಿಯಲ್ಲಿ ಗಜ ಮಾಯೆ 

ಇನ್ನು ಬಿಎಸ್​ಪಿ ನಾಯಕಿ ಮಾಯಾವತಿ ಕೂಡ 1995 ಹಾಗೂ 2002 ರಲ್ಲಿ ಬಿಜೆಪಿ ಬೆಂಬಲಿದಿಂದಲೇ, ಉತ್ತರ ಪ್ರದೇಶದಲ್ಲಿ ಸಿಎಂ ಆಗಿದ್ರು.. ಹೀಗಾಗಿ ಮೋದಿಯನ್ನು ವಿರೋಧಿಸಿದ್ರೂ, ಆಂತರಿಕವಾಗಿ ಬಿಜೆಪಿ ಮೇಲೆ ಮಾಯಾವತಿಗೆ ಒಲವಿದೆ.  ಹೀಗಾಗಿ ಫಲಿತಾಂಶದ ನಂತರ ಎನ್​ಡಿಎ ಬೆಂಬಲಿಸುವ ಬಗ್ಗೆ ತೀರ್ಮಾನ ಮಾಡಲಿದ್ದಾರೆ.. 
 


ಕಮಲಕ್ಕೆ ಜಯ 

ತಮಿಳುನಾಡಿನ ಜಯಲಲಿತ ಕೂಡ 2004 ರವೆರೆಗೆ ಎನ್​ಡಿಎಗೆ ಬೆಂಬಲ ನೀಡಿದ್ತಿದ್ರು.. ಅದ್ರೆ ಅನಿವಾರ್ಯ ಕಾರಣಗಳಿಂದ ಎನ್​ಡಿಎಯಿಂದ ಹೊರ ಬಂದಿದ್ರು.. ಸುಮಾರು 10 ವರ್ಷಗಳ ಕಾಲ, ಜಯಲಲಿತಾ ಎನ್​ಡಿಎಯಿಂದ ದೂರ ಉಳಿದಿದ್ರು.. ಆದ್ರೆ ಇದೀಗ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿರೋದ್ರಿಂದ, ಮುಂದಿನ ದಿನಗಳಲ್ಲಿ, ಜಯಲಲಿತ ಕೂಡ ಎನ್​ಡಿಎಗೆ ಬೆಂಬಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

 ಆದ್ರೆ ಇದುವರೆಗೂ, ಮಾಯಾವತಿಯಾಗಲಿ, ಮಮತಾ ಬ್ಯಾನರ್ಜಿಯಾಗಲಿ, ಜಯಲಲಿತಾ ಆಗ್ಲಿ, ಎನ್​ಡಿಎಯನ್ನು ಬೆಂಬಲಿಸುವ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಆದ್ರೆ ಮೋದಿಗೆ ಈ ಮೂವರು ಮಹಿಳೆಯರ ಬೆಂಬಲ ಸಿಕ್ರೆ ಬಹುತೇಕ ಪ್ರಧಾನಿ ಪಟ್ಟ ಏರೋದು ಗ್ಯಾರಂಟಿ ಅಂತ ಹೇಳಲಾಗ್ತಿದೆ.. ಆದ್ರೆ ಬ್ಯಾನರ್ಜಿ, ಮಾಯಾವತಿ ಮತ್ತು ಜಯಲಲಿತಾ ಎಲ್ಲರೂ ಸೇರಿ ತೃತೀಯ ರಂಗದ ಬೆಂಬಲ ಪಡೆದುಕೊಂಡು, ತಾವೇ ಪ್ರಧಾನಿ ಪಟ್ಟಕ್ಕೇರುವ ಒಳ ಸಂಚು ಕೂಡ ನಡೆಸುತ್ತಿದ್ದಾರೆ.. ಹೀಗಾಗಿ ಮೋದಿಗೆ ಇವರ‍್ಯಾರೂ ಬೆಂಬಲಿಸುವುದಿಲ್ಲ ಎಂಬ ಅಂಶಗಳು ಗುಪ್ತ ಮೂಲಗಳಿಂದ ಕೇಳಿ ಬರ‍್ತಿವೆ.

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು