ಸಿನೆಮಾ

Share This Article To your Friends

ಕ್ಲಿಂಟನ್‌ ಕಾಮಕ್ಕೆ ನಾನು ಬಲಿಯಾದೆ: ಹೊರ ಬಿತ್ತು ಅಮೆರಿಕಾದ ಮಾಜಿ ಅಧ್ಯಕ್ಷನ ಸೆಕ್ಸ್ ಹಗರಣಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್​ ಹಾಗೂ ನನ್ನ ನಡುವೆ ಸಂಬಂಧ ಇತ್ತು.. ನಾನು ವೈಟ್ಹೌಸ್​ನಲ್ಲಿ ಕೆಲಸ ಮಾಡುವಾಗ, ಅವರು ನನ್ನ ಅಡ್ವಾಂಟೇಜ್​ಅನ್ನ ಬಳಸಿಕೊಂಡ್ರು.. ಹೀಗಂತ ಕ್ಲಿಂಟನ್​​ರ ಮಾಜಿ ಪ್ರೇಯಸಿ ಮೋನಿಕಾ ಲೆವಿನ್​ಸ್ಕಿ ಹೇಳಿದ್ದಾರೆ.  ಈ ಮೂಲಕ ಹತ್ತು ವರ್ಷಗಳ ಹಳೆಯ ಸಂಬಂಧದ ರಹಸ್ಯವನ್ನು ಇಂದು ಬಟಾಬಯಲು ಮಾಡಿದ್ದಾರೆ.

 "ಇಷ್ಟು ದಿನಗಳ ಗೊಂದಲಕ್ಕೆ ಇಂದು ನಾನು ಅಂತ್ಯ ಹಾಡಲು ಬಯಸಿದ್ದೇನೆ. ನನ್ನ ಕತೆಗೆ ವಿಭಿನ್ನ ಕ್ಲೈಮ್ಯಾಕ್ಸ್ ನೀಡಬೇಕು ಅಂತ ನಾನು ತೀರ್ಮಾನಿಸಿದ್ದೇನೆ. ಹೌದು.. ನನ್ನ ಬಾಸ್ ಬಿಲ್ ಕ್ಲಿಂಟನ್ ಅವ್ರು,​​ ನನ್ನ ಅಡ್ವಾಂಟೇಜ್ತೆಗೆದುಕೊಂಡಿದ್ದು ಸತ್ಯ. ನಾನು ವೈಟ್ ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದಾಗ, ನಮ್ಮಿಬ್ಬರ ನಡುವೆ ಸಹಮತದ ಸಂಬಂಧ ಇತ್ತು. ಆದ್ರೆ ನಂತರದಲ್ಲಿ, ರಾಜಕೀಯ ಉದ್ದೇಶಗಳಿಗಾಗಿ ಕೆಲವರು ನನ್ನನ್ನು ಬಲಿಪಶು ಮಾಡಿದ್ರುನನ್ನನ್ನು ಬಲಿಪಶು ಮಾಡಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡರು" ಎಂದು ಬಿಲ್ ಕ್ಲಿಂಟನ್ರ ಮಾಜಿ ಪ್ರೇಯಸಿ, 40 ವರ್ಷದ ಮೋನಿಕಾ ಲೆವಿನ್​ಸ್ಕಿ, ಪತ್ರಿಕೆಯೊಂದರಲ್ಲಿ ಬರೆದುಕೊಂಡಿದ್ದಾರೆ.  

ಅಷ್ಟೇ ಅಲ್ಲ, ಸ್ತ್ರೀಯರನ್ನು ಕಂಡರೆ ಕ್ಲಿಂಟನ್​, ಆಕ್ರಮಣಕಾರಿ ವರ್ತನೆ ವ್ಯಕ್ತಪಡಿಸ್ತಾರೆ. ಅಂತ ಹೇಳಿದ್ದಾರೆ. ಆಮೂಲಕ ಕ್ಲಿಂಟನ್​ರಿಗೆ ಹೆಚ್ಚು ಸ್ತ್ರೀಯರೊಂದಿಗೆ ಸಂಬಂಧ ಇತ್ತು.. ಅವರೆಲ್ಲರ ದನಿಯಾಗಿ ಇಂದು ನಾನು ಈ ಅಂಶಗಳನ್ನು ಹೊರ ಹಾಕುತ್ತಿದ್ದೇನೆ ಎಂದು ಮೋನಿಕಾ ಹೇಳಿಕೊಂಡಿದ್ದಾರೆ.

 1995ರಲ್ಲಿ ಮೋನಿಕಾ ವೈಟ್ ಹೌಸ್​ನಲ್ಲಿ ಕೆಲಸ ಮಾಡ್ತಿದ್ರು. ಆಗ ಬಿಲ್ ಕ್ಲಿಂಟನ್ಅಧ್ಯಕ್ಷರಾಗಿದ್ರು. ಆಗ ಮೋನಿಕಾಗೆ 22 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಮೋನಿಕಾ ಮತ್ತು ಕ್ಲಿಂಟನ್ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಇವರಿಬ್ಬರ ನಡುವಿನ ಸಂಬಂಧ 1998ರಲ್ಲಿ ಹೊರ ಬಿದ್ದಾಗ, ಲೆವೆನ್​ಸ್ಕೈ ಹಗರಣ ಎಂತಲೇ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯ್ತು. ಆದ್ರೆ ಈ ಬಗ್ಗೆ ಕ್ಲಿಂಟನ್ ಆಗಲಿ, ಮೋನಿಕಾ ಆಗಲಿ ಬಾಯಿ ಬಿಟ್ಟಿರಲಿಲ್ಲ.. ಆದ್ರೆ ಇದೀಗ ಸ್ವತಃ ಮೋನಿಕಾನೇ ತಮ್ಮಿಬ್ಬರ ನಡುವೆ ಸಂಬಂಧ ಇದ್ದದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆಮೂಲಕ ಅಮೇರಿಕಾದ ಮಾಜಿ ಅಧ್ಯಕ್ಷನ ರಹಸ್ಯವನ್ನು ಹೊರ ಹಾಕಿದ್ದಾರೆ.


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು