ಸಿನೆಮಾ

Share This Article To your Friends

3 ಲಕ್ಷ ಕಿ.ಮೀ ಪ್ರಯಾಣಿಸಿ ದಾಖಲೆ ಬರೆದ ಮೋದಿ


ಭಾರತದ ರಾಜಕೀಯ ಇತಿಹಾಸದಲ್ಲಿ ದೊಡ್ಡ ಮೈಲುಗಲ್ಲನ್ನೇ ನಿರ್ಮಿಸಿದ ವ್ಯಕ್ತಿ.. ಇದುವರೆಗೂ ಒಟ್ಟು 3 ಲಕ್ಷ ಕಿಲೋಮೀಟರ್ಪ್ರಯಾಣ ಮಾಡಿ, ಚುನಾವಣಾ ಪ್ರಚಾರ ಮಾಡಿದ್ದಾರೆ.. ರೋಡ್ಶೋಗಳು, ಸಾರ್ವಜನಿಕ ಸಭೆಗಳು ಸೇರಿದಂತೆ ಎಲ್ಲದರಲ್ಲೂ ಮೋದಿ ದಾಖಲೆಯನ್ನ ಬರೆದಿದ್ದಾರೆ.


ಇದುವರೆಗೂ ಮೋದಿ ಮಾಡಿದಷ್ಟು ಱಲಿಗಳನ್ನ, ರೋಡ್ ಶೋಗಳನ್ನ, ಸಾರ್ವಜನಿಕ ಸಭೆಗಳನ್ನ ಯಾರೂ ಮಾಡಿಲ್ಲ. ಅಷ್ಟೇ ಅಲ್ಲ, ಱಲಿಗಳಲ್ಲಿ ಮೊಟ್ಟ ಮೊದಲ ಬಾರಿಗೆ ತ್ರಿಡಿ ಟೆಕ್ನಾಲಜಿಯನ್ನು ಉಪಯೋಗಿಸಿದ ಖ್ಯಾತಿ ಕೂಡ ನರೇಂದ್ರ ಮೋದಿಗೆ ಸಲ್ಲುತ್ತದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ ಬಿಡುವಿಲ್ಲದೇ ಸುತ್ತಿದ ಮೋದಿ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಶತಪ್ರಯತ್ನ ನಡೆಸಿದ್ರು..

ಮೋದಿಯ ನಾಗಾಲೋಟದ ಓಟ
3 ಲಕ್ಷ ಕಿ.ಮೀ ಪ್ರಯಾಣಿಸಿ ಪ್ರಚಾರ
437 ಸಾರ್ವಜನಿಕ ಸಭೆಗಳಲ್ಲಿ ಭಾಗಿ
5,827 ಱಲಿಗಳು ಮತ್ತು ರೋಡ್ಶೋ
1,350 3ಡಿ ಱಲಿಗಳಲ್ಲಿ ಮೋದಿ ಮೋಡಿ
4,000 ಚಾಯ್ಪೇ ಚರ್ಚಾ
10 ಕೋಟಿ ಜನಗಳನ್ನು ತಲುಪಿದ ಮೋದಿ

ಮೋದಿ ದೇಶಾದ್ಯಂತ ಸುಮಾರು ಮೂರು ಲಕ್ಷ ಕಿಲೋಮೀಟರ್​​ ಪ್ರಯಾಣಿಸಿ ಪ್ರಚಾರ ಮಾಡಿದ್ದಾರೆ. ಆ ಮೂಲಕ ಚುನಾವಣಾ ಇತಿಹಾಸದಲ್ಲೇ, ಅತಿ ಹೆಚ್ಚು ದೂರ ಕ್ರಮಿಸಿ ಪ್ರಚಾರ ಮಾಡಿದ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಇನ್ನು ಇದುವರೆಗೂ ಮೋದಿ ಸುಮಾರು 437 ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲ, ಸುಮಾರು 5,827 ಱಲಿಗಳು ಮತ್ತು ರೋಡ್ಶೋಗಳನ್ನು ಮಾಡಿದ್ದಾರೆ. ಇದ್ರ ಜೊತೆಗೆ ಮೊಟ್ಟ ಮೊದಲ ಬಾರಿಗೆ ತ್ರಿಡಿ ಟೆಕ್ನಾಲಜಿಯ ಮೂಲಕ ದೇಶದ ಜನರನ್ನು ತಲುಪುವ ಯತ್ನ ಮಾಡಿದ್ದಾರೆ. ಇದುವರೆಗೂ ಒಟ್ಟು 1,350 3ಡಿ ಱಲಿಗಳ ಮೂಲಕ ಮೋದಿ ಮೋಡಿ ಮಾಡಿದ್ದಾರೆ. ಇನ್ನು 25 ರಾಜ್ಯಗಳು ಹಾಗೂ 15 ದೇಶಗಳಲ್ಲಿ ಸುಮಾರು 4000 ಚಾಯ್ಪೇ ಚರ್ಚಾಗಳನ್ನು ಮಾಡಿದ್ದಾರೆ. ಈ ವಿನೂತನ ಚರ್ಚಾ ಕಾರ್ಯಕ್ರಮದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡು ಮೋದಿಯೊಂದಿಗೆ  ನೇರ ಚರ್ಚೆ ಮಾಡಿದ್ದಾರೆ. ಒಟ್ಟಾರೆ, ಱಲಿಗಳು, ಚರ್ಚೆಗಳ ಮೂಲಕ, ಸುಮಾರು 10 ಕೋಟಿ ಜನರನ್ನು ಮೋದಿ ನೇರವಾಗಿ ತಲುಪಿದ್ದಾರೆ. ಇದು ದೇಶದ ಚುನಾವಣಾ ಇತಿಹಾದಲ್ಲೇ ದಾಖಲೆ ಎಂದು ಹೇಳಲಾಗ್ತಿದೆ..)


ಒಂದು ದಿನದಲ್ಲಿ ಮೋದಿ ಮೋಡಿ

 ಉತ್ತರ ಪ್ರದೇಶದಲ್ಲಿ 8 ಱಲಿಗಳು
ಕರ್ನಾಟಕದಲ್ಲಿ 4 ಱಲಿಗಳು
ಬಿಹಾರದಲ್ಲಿ 3 ಱಲಿಗಳು
ತಮಿಳುನಾಡು, ಮಹಾರಾಷ್ಟ್ರ 2 ಱಲಿಗಳು
ಉಳಿದ ರಾಜ್ಯಗಳಲ್ಲಿ ತಲಾ ಒಂದೊಂದು ಱಲಿ
================================

(ಮೋದಿ ದಿನವೊಂದಕ್ಕೆ ಎಷ್ಟೆಷ್ಟು ಱಲಿಗಳನ್ನ ಮಾಡಿದ್ದಾರೆ ಅಂತ ನೋಡೋದಾದ್ರೆ, ಉತ್ತರ ಪ್ರದೇಶದಲ್ಲಿ ಒಂದೇ ದಿನ ಒಟ್ಟು 8 ಱಲಿಗಳನ್ನು ಮಾಡಿದ್ದಾರೆ. ಕರ್ನಾಟಕ ಒಂದು ದಿನ 4 ಱಲಿಗಳನ್ನ ಮಾಡಿದ್ದಾರೆ. ಇನ್ನುಳಿದಂತೆ ಬಿಹಾರದಲ್ಲಿ 3, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ ಮತ್ತು ಒಡಿಶಾಗಳಲ್ಲಿ ದಿನಕ್ಕೆ ತಲಾ ಎರಡು ಱಲಿಗಳ್ನನ ಮಾಡಿದ್ದಾರೆ. ಉಳಿದಂತೆ ಎಲ್ಲಾ ರಾಜ್ಯಗಳಲ್ಲೂ ಮೋದಿ ಒಂದೊಂದು ಱಲಿಗಳನ್ನ ಮಾಡಿದ್ದಾರೆ. ಅಂದಹಾಗೆ ಱಲಿ ಮತ್ತು ರೋಡ್ಶೋಗಳಿಗಾಗಿಯೇ ಮೋದಿ ಹೆಚ್ಚು ಸಮಯವನ್ನು ಮೀಸಲಿಡ್ತಿದ್ರು. ಇದಕ್ಕಾಗಿ ಕೇವಲ ಮೂರೇ ಗಂಟೆಗಳ ಕಾಲ ನಿದ್ರೆ ಮಾಡ್ತಿದ್ರು. ದೇಶದ ಯಾವುದೇ ಮೂಲೆಯಲ್ಲಿದ್ರೂ ರಾತ್ರಿ ಅಹಮದಾಬಾದ್​​ನ ತಮ್ಮ ನಿವಾಸಕ್ಕೆ ಬರ್ತಿದ್ರು. ಬೆಳಿಗ್ಗೆ 5 ಗಂಟೆಗೆ ಎದ್ದು ಮತ್ತೆ ಕ್ಯಾಂಪೇನ್​ಗೆ ಹೊರಡ್ತಿದ್ರು.

ಇಷ್ಟೆಲ್ಲಾ ಬ್ಯುಸಿಯಾಗ್ತೀರಲ್ಲಾ ಸುಸ್ತೇ ಆಗಲ್ವಾ ಅಂತ ಕೇಳಿದ್ರೆ, ನಗು ನಗುತ್ತಲೇ ಉತ್ತರಿಸ್ತಾರೆ. ನಾನು ಎದ್ದು ಓಡಾಡ್ತಾ ಇಲ್ಲ. ನನ್ನ ಮತ್ತು ಜನರ ನಡುವಿನ ಅನುಬಂಧ, ನನ್ನನ್ನು ಹೀಗೆ ಹೆಚ್ಚು ಪ್ರಯಾಣ ಮಾಡುವಂತೆ ಪ್ರೇರೇಪಿಸುತ್ತಿದೆ ಅಂದಿದ್ರು.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು