ಸಿನೆಮಾ

Share This Article To your Friends

ಚುನಾವಣೆಯಲ್ಲಿ ‘ಕ್ರಿಮಿ’ನಲ್‌ಗಳು, ಕೋಟ್ಯಾಧಿಪತಿಗಳು-2014


ಮೇ 12, 2014 ರಂದು ಒಂಭತ್ತನೇ ಹಂತದ ಮತದಾನ ನಡೆಯಲಿದೆ. ಒಟ್ಟು 606 ಅಭ್ಯರ್ಥಿಗಳಿದ್ದು, ಇವರಲ್ಲಿ 119 ಅಭ್ಯರ್ಥಿಗಳು ಕ್ರಿಮಿನಲ್​​ ಪ್ರಕರಣವನ್ನು ಎದುರಿಸ್ತಾ ಇದ್ದಾರೆ. ಇವರಲ್ಲಿ 92 ಅಭ್ಯರ್ಥಿಗಳು ಗಂಭೀರ ಪ್ರಕರಣದ ಆರೋಪವನ್ನು ಎದುರಿಸ್ತಾ ಇದ್ದಾರೆ. ಒಟ್ಟಾರೆ, ಸದ್ಯಕ್ಕೆ ಅಖಾಡದಲ್ಲಿರೋ ಒಟ್ಟು ಜನರ ಪೈಕಿ ಶೇ 20 ರಷ್ಟು ಜನರು ಕ್ರಿಮಿನಲ್ ಅಭ್ಯರ್ಥಿಗಳಾಗಿದ್ದಾರೆ.


 ಈ ಎಲ್ಲಾ ಅಂಶವನ್ನು ಸ್ವತಃ ಅಭ್ಯರ್ಥಿಗಳೇ ತಮ್ಮ ಅಫಿಡೆವಿಟ್​ನಲ್ಲಿ ಹೇಳಿಕೊಂಡಿದ್ದಾರೆ. ಶೇಕಡಾವಾರು ಪ್ರಮಾಣ ನೋಡೋದಾದ್ರೆ, ಬಿಜೆಪಿಯ ಹೆಚ್ಚಿನ  ಅಭ್ಯರ್ಥಿಗಳ ವಿರುದ್ಧವೇ ಕ್ರಿಮಿನಲ್ಪ್ರಕರಣಗಳಿರೋದು ತಿಳಿದು ಬಂದಿದೆ. ಬರೀ ಕ್ರಿಮಿನಲ್​ಗಳೇ ಅಲ್ಲ, 171 ಕೋಟ್ಯಾಧಿಪತಿ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದಾರೆ.


ಒಟ್ಟಾರೆ ಶೇಕಡಾವಾರು ನೋಡೋದಾದ್ರೆ, ಬಿಜೆಪಿ ಅಭ್ಯರ್ಥಿಗಳೇ ಹೆಚ್ಚು ಕೋಟ್ಯಾಧಿಪತಿಗಳಾಗಿರೋದು ಕಂಡು ಬರುತ್ತೆ.

 
ಇನ್ನು ವಯಕ್ತಿಕವಾಗಿ ನೋಡೋದಾದ್ರೆ, ಕಲ್ಕತ್ತಾದ ಜಾಧವ್​ಪುರ ಕ್ಷೇತ್ರದಿಂದ ಸ್ಪರ್ದಿಸಿರೋ, ಶಮಲಿ ದಾಸ್ಮುಂಚೂಣಿಯಲ್ಲಿದ್ದು, 2000 ಕೋಟಿಯ ಒಡೆಯರಾಗಿದ್ದಾರೆ. ಪಶ್ಚಿಮ ಚಂಪಾರಣ್​​ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರೋ, ಚಿತ್ರನಿರ್ಮಾಪಕ ಪ್ರಕಾಶ್ ಝಾ ತಮ್ಮ ಆಸ್ತಿ 92 ಕೋಟಿ ಅಂತ ಘೋಷಿಸಿಕೊಂಡಿದ್ದಾರೆ. ಬಿಎಸ್​ಪಿಯ ಷಾ ಅಲಾಂ ಕೂಡ 70 ಕೋಟಿಯ ಒಡೆಯರಾಗಿದ್ದಾರೆ. ಇವರೆಲ್ಲರ ನಡುವೆ, ಡೈಮಂಡ್ಹಾರ್ಬರ್​​​​ ಕ್ಷೆತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ, ಸೊಗಟ್ ಘೋಷ್​​, ತಮ್ಮ ಆಸ್ತಿಯನ್ನು ಸೊನ್ನೆ ಎಂದು ಘೋಷಿಸಿಕೊಂಡಿದ್ದಾರೆ..

ಒಟ್ಟಾರೆ, ಕ್ರಿಮಿನಲ್​ಗಳು ಮತ್ತು ಕೋಟ್ಯಾಧಿಪತಿಗಳು ಕೊನೆಯ ಹಂತದ ಅಖಾಡದಲ್ಲಿದ್ದಾರೆ. ಭಾರತದ ಭವ್ಯ ಪ್ರಜೆಗಳು ಯಾರ ಕಡೆ ವಾಲ್ತಾರೆ ಅನ್ನೋದು ಕಾದು ನೋಡಬೇಕಿದೆ.


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು