ಸಿನೆಮಾ

Share This Article To your Friends

ಬ್ರಹ್ಮನ ಬರಹವನ್ನು ಅಳಿಸಿ, ಹೊಸ ಭವಿಷ್ಯ ಬರೆದುಕೊಂಡ..! ತಪ್ಪು ಯಾರದು ಗೊತ್ತಾ..?


ಬಸ್ಸಪ್ಪ ಎಂಬ ಹುಡುಗ ಬಹಳ ಬುದ್ದಿವಂತ.. ಓದಿನಲ್ಲಿ ಸದಾ ಮುಂದು.. ಯಾರು ಎಂಥದ್ದೇ ಪ್ರೆಶ್ನೆಗಳನ್ನು ಕೇಳಿದ್ರೂ ತಕ್ಷಣವೇ ಥಟ್ ಅಂತ ಉತ್ತರಿಸುತ್ತಿದ್ದ.. ಖಾಸಗಿ ಶಾಲೆ ಸೇರಿಸಲು ಆ ಹುಡುಗನ ತಂದೆಗೆ ಸಾಧ್ಯವಾಗದ ಪರಿಸ್ಥಿತಿ. ಸರ್ಕಾರಿ ಶಾಲೆ ನೀಡಿದ ಉಚಿತ ಶಿಕ್ಷಣವೇ ಬಸ್ಸಪ್ಪನ ಬುದ್ದಿವಂತಿಕೆಯನ್ನು ಚುರುಕುಗೊಳಿಸಿತ್ತು..

ಹತ್ತನೇ ತರಗತಿಯವರೆಗೆ ಆತ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ಮುಗಿಸಿದ.. ನಂತರ ಬಸ್ಸಪ್ಪ ಸೈನ್ಸ್ ತೆಗೆದುಕೊಳ್ಳಲು ಮುಂದಾದ.. ಅಂತೂ ಇಂತು ಹರಸಾಹಸ ಪಟ್ಟು ಸೈನ್ಸ್ ಸೇರಿದ,. ಪಿಯುಸಿ ಕೂಡ ಮುಗಿಸಿದ. ನಂತರ ಆತನ ಗುರಿ ಇದ್ದದ್ದು, ದೊಡ್ಡ ಖಗೋಳ ವಿಜ್ಞಾನಿಯಾಗಬೇಕು ಅಂತ..


ಸಿಇಟಿನಲ್ಲಿ ಉತ್ತಮ ಅಂಕಗಳನ್ನೂ ಪಡೆದ. ಆದ್ರೆ ಆತನಿಗೆ ಸೀಟು ಸಿಗಲಿಲ್ಲ.. ಕಾರಣ ಬಸ್ಸಪ್ಪ ಮೇಲ್ಜಾತಿಗೆ ಸೇರಿದವನಾಗಿದ್ದ.. ಜಾತಿವಾರು ಮೀಸಲಾತಿಯಲ್ಲಿ, ಹಲವರಿಗೆ ಸೀಟುಗಳು ದಕ್ಕಿದವು.. ಆದ್ರೆ ಅವರೆಲ್ಲರಿಗಿಂತಲೂ ಹೆಚ್ಚಿನ ಅಂಕಗಳನ್ನು ಗಳಿಸಿದ್ದ ಬಸ್ಸಪ್ಪನಿಗೆ ಸೀಟು ಸಿಗಲಿಲ್ಲ..!

 

ಖಗೋಳ ವಿಜ್ಞಾನಿಯೇ ಆಗಬೇಕು ಅಂತ ಹಠ ಹಿಡಿದ ಬಸ್ಸಪ್ಪನ ಓದು, ಸಿಇಟಿಗೆ ಅಂತ್ಯವಾಗುವ ಕಾಲ ಬಂದೇ ಬಿಟ್ಟಿತು.. ಮೇಲ್ಜಾತಿಗೆ ಸೇರಿದವನೆಂಬ ಕಾರಣಕ್ಕಾಗಿ, ಆತನಿಗೆ ಅವಕಾಶಗಳು ಕೈತಪ್ಪಿ ಹೋದವು..! ಆದರೆ ಹೊಟ್ಟೆ ಕೇಳಬೇಕಲ್ಲಾ..? ಬದುಕಿಗಾಗಿ ಗ್ಯಾರೇಜ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡ.. ಬಸ್ಸಪ್ಪನ ಓದಿನ ಬದುಕು ಅಲ್ಲಿಗೆ, ದಿ ಎಂಡ್ ಆಗಿ ಬಿಟ್ಟಿತು..! ಇದಾದ ಇಪ್ಪತ್ತೈದು ವರ್ಷಗಳ ನಂತರ ಬಸ್ಸಪ್ಪನ ಮಗ ಸಿಇಟಿ ಬರೆದ.. ಅಂದು ತಂದೆ ಅಗಾಧ ಪ್ರಮಾಣದಲ್ಲಿ ಅಂಕಗಳನ್ನು ಗಳಿಸಿದರೂ, ಸರ್ಕಾರಿ ಸೀಟು ಸಿಗಲಿಲ್ಲ.. ಆದ್ರೆ ಇಂದು ಬಸ್ಸಪ್ಪನ ಮಗ ಜಸ್ಟ್ ಪಾಸ್ ಆಗಿದ್ದಾನೆ.. ಆದ್ರೆ, ಸಿಇಟಿನಲ್ಲಿ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ..! ಹೇಗೆ ಗೊತ್ತಾ..?

“ಅಂದು ಮೇಲ್ಜಾತಿಯವನಾಗಿದ್ದ ಬಸ್ಸಪ್ಪ ನಂತರದಲ್ಲಿ ಬೇರೊಂದು ಧರ್ಮಕ್ಕೆ ಮತಾಂತರಗೊಂಡಿದ್ದ..! ಆ ಮೂಲಕ ತನ್ನ ಮಗನಿಗೆ ಸರ್ಕಾರಿ ಸೀಟು ಕೊಡಿಸುವಲ್ಲಿ ಬಸ್ಸಪ್ಪ ಯಶಸ್ವಿಯಾದ..!

ಬಸ್ಸಪ್ಪ ಮಾಡಿದ್ದು ತಪ್ಪಾ..? ಉತ್ತರಿಸುವ ಅನಿವಾರ್ಯತೆ ಇದೆ..!

ಲೇಖಕರು
ಸವಿ ನೆನಪಿನ 
ಶೇಖ್‌(ಸ್ಪಿಯ)ರ್‌
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು