ಸಿನೆಮಾ

Share This Article To your Friends

ಒಬಾಮಾ ವೇಷದಲ್ಲಿ ಬಂದು ಬ್ಯಾಂಕ್ ದರೋಡೆ.!


ಮೆರ‍್ರಿಮಕ್‌ : ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಅಮೆರಿಕಾದ ಬ್ಯಾಂಕ್ ಒಂದನ್ನು ದರೋಡೆ ಮಾಡಿದ್ದಾನೆ. ಅಮೇರಿಕನ್ ಬ್ಯಾಂಕ್‌ಗೆ ನುಗ್ಗಿದ ನಕಲಿ ಒಬಾಮಾ ಅಲ್ಲಿದ್ದ 75 ಸಾವಿರ ಡಾಲರ್‌ ಹಣವನ್ನು ಕಳ್ಳತನ ಮಾಡಿದ್ದಾನೆ. ದರೋಡೆಕೋರರು ತಮ್ಮ ದರೋಡೆಗೆ ಬರಾಕ್ ಒಬಾಮಾ ವೇಷವನ್ನು ಬಳಸಿಕೊಂಡಿದ್ದನ್ನು ಕಂಡು ಇಡೀ ವಿಶ್ವವೇ ದಂಗಾಗಿ ಹೋಗಿದೆ..!


ಅಷ್ಟಕ್ಕೂ ಈ ದರೋಡೆ ಮಾಡಿದವನು ಅಂತಿಂಥ ವ್ಯಕ್ತಿಯಲ್ಲ..  52 ವರ್ಷದ ಮುದುಕ ಜಾನ್‌ ಗ್ರಿಫಿನ್‌. ದರೋಡೆ ಮಾಡಿದವರು ಯಾರು ಎಂದು ಗೊತ್ತಾಗಬಾರದು ಅಂತ ಯೋಚಿಸಿದ ಜಾನ್ ಗ್ರಿಫಿನ್ ತನ್ನ ಮುಖಕ್ಕೆ ಅಮೇರಿಕ ಅಧ್ಯಕ್ಷ ಬರಾಕ್‌ ಒಬಾಮಾನ ಮಾಸ್ಕ್‌ ಹಾಕಿಕೊಂಡಿದ್ದಾನೆ. ವೇಷ ಮರೆಸಿಕೊಂಡ ಖದೀಮ ನೆನ್ನೆ ಬೆಳಿಗ್ಗೆ ಒಬಾಮಾ ವೇಷದಲ್ಲಿ 10:30 ಕ್ಕೆ ಸರಿಯಾಗಿ ಹಾಂಪ್‌ಶೇರ್‌ ಬ್ಯಾಂಕ್‌ಗೆ ನುಗ್ಗಿದ್ದಾನೆ.


ಬಿಳಿಯ ಶರ್ಟ್‌, ಕಪ್ಪು ಗ್ಲೌಸ್‌ ಮತ್ತು ಒಬಾಮಾ ಮಾಸ್ಕ್‌ ಹಾಕಿಕೊಂಡಿದ್ದ ಈ ದರೋಡೆಕೋರನ ಬಳಿ ಸಂಪೂರ್ಣವಾಗಿ ಲೋಡ್‌ ಆಗಿದ್ದ ಹ್ಯಾಂಡ್‌ ಗನ್‌ ಇತ್ತು.. ಆದ್ರೆ ಇಷ್ಟೆಲ್ಲಾ ಇದ್ರೂ ಅವನ ನಸೀಬು ಮಾತ್ರ ಖರಾಬಾಗಿತ್ತು. ನೇರವಾಗಿ ಪೋಲೀಸರ ಕೈಗೆ ಸಿಕ್ಕಿಬಿದ್ದ ಖದೀಮ. ಇನ್ನೊಂದು ವಿಷಯ ಅಂದ್ರೆ ಕೈಯಲ್ಲಿ ಗನ್ ಇದ್ರೂ ದರೋಡೆ ಮಾಡುವಾಗ ಅಥವ ಪೋಲೀಸರು ಅವನನ್ನು ಹಿಡಿಯಲು ಮುಂದಾದಾಗ ಅದನ್ನು ಬಳಸಲೇ ಇಲ್ಲ.

ಗ್ರಿಫಿನ್‌ ಬ್ಯಾಂಕ್ ದರೋಡೆ ಮಾಡಿಕೊಂಡು ಒಟ್ಟು 75,000 ಡಾಲರ್‌ ಹಣವನ್ನು ಕದ್ದೊಯ್ಯುತ್ತಿದ್ದ. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋಹಾಗೆ ಪೋಲೀರು ತಕ್ಷಣವೇ ಅವನನ್ನು ಬಂಧಿಸಿಬಿಟ್ಟರು..

ಒಬಾಮಾ ವೇಷ ಧರಿಸಿ ದರೋಡೆ ಮಾಡಿದ್ರೆ ಜನರಿಗೆ ಗುರುತು ಸಿಗುವುದಿಲ್ಲ ಎಂಬ ಆಲೋಚನೆಯಲ್ಲಿದ್ದ ಖದೀಮ ಇದೀಗ ಕಂಬಿ ಹಿಂದೆ ಮಲಗಿದ್ದಾನೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು