ಸಿನೆಮಾ

Share This Article To your Friends

ಒಬಾಮಾ ಕೂಡ ಹೆಂಡತಿಗೆ ಹೆದರುತ್ತಾರೆ.ವಾಷಿಂಗ್ಟನ್‌ ಡಿಸಿ : "ಸಾವಿರ ಕುದುರೆ ಸರದಾರ ಆದ್ರೂ ಮನೇಲಿ ಹೆಂಡ್ತಿ ಗುಲಾಮ" ಅನ್ನೋ ಮಾತು ದೊಡ್ಡಣ್ಣನಾಗಿರುವ ಅಮೇರಿಕಾ ಅಧ್ಯಕ್ಷ ಬರಕ್ ಒಬಾಮಾ ವಿಷಯದಲ್ಲೂ ನಿಜವಾಗಿದೆ. ಜಗತ್ತಿಗೇ ಸರದಾದರನಾಗಿರುವ ಬರಕ್ ಒಬಾಮಾ ತನ್ನ ಪತ್ನಿ ಮೈಖೆಲ್‌ ಅವರನ್ನು ಕಂಡರೆ ಗಡ ಗಡ ಅಂತ ಹೆದರುತ್ತಾರೆ.

ಅದರಲ್ಲೂ ಕುಡಿತ ಮತ್ತು ಸಿಗರೇಟು ಅಂತ ಏನಾದ್ರೂ ಒಬಾಮಾ ಸ್ವಲ್ಪ ಓವರ್‌ ಆಗಿ ತೆಗೆದುಕೊಂಡರಂತೂ ಮುಗಿದೇ ಹೋಯಿತು ಒಬಾಮಾ ಕಥೆ. ಮೈಖೇಲ್ ಅವರನ್ನು ತರಾಟೆಗೆ ತೆಗೆದುಕೊಳ್ತಾರಂತೆ. ಜಗತ್ತನ್ನೇ ನಡುಗಿಸಬಲ್ಲ ಒಬಾಮಾ ಹೆಂಡತಿಯ ಎದುರು ತಾವೇ ಗಡ ಗಡ ಎಂದು ಬಿಡ್ತಾರಂತೆ..!

ಸಮಾರಂಭವೊಂದರಲ್ಲಿ ಆಪ್ತರ ಜೊತೆಗೆ ಮಾತನಾಡುತ್ತಿರುವಾಗ ಸ್ವತಃ ಒಬಾಮಾ ಅವರೇ ಈ ಮಾತನ್ನು ಹೇಳಿದ್ದಾರೆ. ಅತಿಥಿಗಳೊಬ್ಬರು "ನೀವು ಸಿಗರೇಟು ಸೇದುವುದಿಲ್ಲವೇ? ಎಂದು ಬರಾಕ್ ಒಬಾಮಾ ಅವರನ್ನು ಕೇಳಿದಾಗ ಅವರು ನಗು ನಗುತ್ತಲೇ ಅತ್ತ ಇತ್ತ ನೋಡಿ "ಇಲ್ಲ ನಾನು ಸಿಗರೇಟು ಸೇದುವುದಿಲ್ಲ" ಎಂದು ಹೇಳಿದ್ರು.

ಇದರಿಂದ ಚಕಿತರಾದ ಅತಿಥಿಯೊಬ್ಬರು " ಯಾವಾಗಲಾದ್ರೂ ಒಮ್ಮೆಯಾದ್ರೂ ನೀವು ಸಿಗರೇಟು ಸೇದಿಲ್ಲವೇ ಅಂತ ಅಚ್ಚರಿಯಿಂದ ಕೇಳಿದ್ರು.

" ಆರು ವರ್ಷಗಳ ಹಿಂದೆ ಸೇದುತ್ತಿದ್ದೆ. ಆದರೆ ಈಗ ನಾನು ಸಿಗರೇಟನ್ನು ಬಿಟ್ಟುಬಿಟ್ಟಿದ್ದೇನೆ" ಎಂದು ಹೇಳಿದ್ರು.

ಸಿಗರೇಟು ಬಿಡುವುದಕ್ಕೆ ಕಾರಣ ಏನೆಂದು ಕೇಳಿದಾಗ ಒಬಾಮಾ ಹೇಳಿದ್ದು ಏನಂತ ಗೊತ್ತಾ? "ನಾನು ನನ್ನ ಹೆಂಡತಿಗೆ ತುಂಬಾ ಹೆದರುತ್ತೇನೆ. ಅದಕ್ಕೆ ಅವರು ಹೇಳಿದ ತಕ್ಷಣವೇ ನಾನು ಸಿಗರೇಟು ಸೇದುವುದನ್ನು ಬಿಟ್ಟುಬಿಟ್ಟಿದ್ದೀನಿ. ಆರು ವರ್ಷದಿಂದ ನಾನು ಸಿಗರೇಟು ಸೇವನೆ ಮಾಡಿಲ್ಲ" ಎಂದು ಒಬಾಮಾ ಅವರ ಕಿವಿಯಲ್ಲಿ ರಹಸ್ಯವಾಗಿ ಹೇಳಿದ್ರು.

ಪಾರ್ಟಿ ಸಮಾರಂಭ ಅಂತ ಹೋದಾಗ ಇತಿಮಿತಿಯೊಳಗೆ ಮಧ್ಯಪಾನ ಮಾಡಲು ಪತ್ನಿ ಮೈಖೆಲ್ ಒಬಾಮಾ ಅನುಮತಿ ನೀಡಿದ್ದಾರೆ. ಆದ್ರೆ ಓವರ್‌ ಆಗಿಬಿಟ್ರೆ ಮನೆಗೆ ಹೋದ ನಂತರ ವಾರ್‌ ಶುರುವಾಗುತ್ತೆ ಅಂತ ಪ್ರೀತಿಯಿಂದ ಹೇಳ್ತಾರೆ ಒಬಾಮಾ.

ಒಬಾಮಾ ಈ ಹಿಂದೆ ಪ್ರತಿ ನಿತ್ಯವೂ ಧೂಮಪಾನ ಮಾಡುತ್ತಿದ್ದರು. ಆದರೆ ಆರು ವರ್ಷಗಳ ಹಿಂದೆ ತಮ್ಮ ಹೆಂಡತಿಯ ಮಾತಿಗೆ ಬೆಲೆ ಕೊಟ್ಟು ಆ ಕ್ಷಣದಿಂದ ತಮ್ಮ ಹವ್ಯಾಸವನ್ನು ಕಡಿಮೆ ಮಾಡಿಕೊಂಡು ಬಂದಿದ್ದಾರೆ. ಮಕ್ಕಳ ಮೇಲೆ ತಮ್ಮ ಸಿಗರೇಟು ಸೇವನೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕಾಗಿ ಒಬಾಮಾ ಅದನ್ನು ಬಿಡಲು ನಿರ್ಧರಿಸಿಬಿಟ್ಟರಂತೆ. ಅದರ ಜೊತೆಗೆ ಹೆಂಡತಿ ಹೇಳಿದ ಮಾತು ಎಂದರೆ ಮೀರಲಾಗುತ್ತದೆಯೇ? ಅದೇ ಗಂಡಸರಿಗೆ ಲಕ್ಷ್ಮಣ ರೇಖೆ. ಹೀಗಾಗಿ ಒಬಾಮಾ ತಮ್ಮ ಧೂಮಪಾನಕ್ಕೆ ಇತಿಶ್ರೀ ಹಾಡಿಬಿಟ್ಟರು.


ಒಬಾಮಾ ಇಡೀ ದೇಶಕ್ಕೆ ದೊಡ್ಡಣ್ಣನಾದರೂ, ಮಕ್ಕಳಿಗೆ ಮಾತ್ರ ಪ್ರೀತಿಯ ಪಪ್ಪನಾಗಿ... ಹೆಂಡತಿಗೆ ಪ್ರೀತಿ.. ಇದಲ್ವಾ ಪ್ರೀತಿ ಅಂದ್ರೆ?
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು