ಸಿನೆಮಾ

Share This Article To your Friends

ಅಪಾಯದಲ್ಲಿದ್ದಾರೆ ಪ್ರಿಯಾಂಕಾ ಛೋಪ್ರಾ..!


ನಿಮಗೆ ಗೊತ್ತಾ? ಬಾಲೀವುಡ್ ನಟಿ ಪ್ರಿಯಾಂಕ ಛೋಪ್ರಾ ಇದರಲ್ವಾ? ಅವರು ಸೈಬರ್ಲೋಕದಲ್ಲಿ ವರ್ಷದ ಅತ್ಯಂತ ಅಪಾಯಕಾರಿ ಸೆಲೆಬ್ರೆಟಿಯಾಗಿದ್ದಾರೆ.  ಹೀಗಂತ ಒಂದು ಸಮೀಕ್ಷೆ ಹೇಳಿದೆ .ಭಾರತದ ಸೈಬರ್ಲೋಕದೊಳಗೆ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ ಅಪಾಯಕಾರಿ ಸೆಲೆಬ್ರೆಟಿಯ ಮೊದಲ ಸ್ಥಾನದಲ್ಲಿ ಪ್ರಿಯಾಂಕ ಛೋಪ್ರಾ ನಿಂತಿದ್ರೆ, ಎರಡನೆಯ ಸ್ಥಾನದಲ್ಲಿ ಇರೋದು ಸೂಪರ್ಸ್ಟಾರ್ಶಾರುಖ್ಖಾನ್ಮತ್ತು ಮೂರನೇ ಸ್ಥಾನದಲ್ಲಿ ಇರೋದು ಬಾಲಿವುಡ್ಬ್ಯಾಚುಲರ್ಸಲ್ಮಾನ್ಖಾನ್‌.

ಕಳೆದ ವರ್ಷ ಬಾಲೀವುಡ್ಬಿಚ್ಚಮ್ಮಳಾದ ಸನ್ನಿಲಿಯೋನ್ ಅತ್ಯಂತ ಅಪಾಯಕಾರಿ ಸೆಲೆಬ್ರೆಟಿಯಾಗಿ ಹೊರ ಹೊಮ್ಮಿದ್ರು. ಆದ್ರೆ ವರ್ಷ ಸನ್ನಿಲಿಯೋನ್ನನ್ನು ಹಿಂದಿಕ್ಕಿ ಪ್ರಿಯಾಂಕ ಛೋಪ್ರಾ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ನಿಮಗೆ ಇನ್ನೊಂದು ವಿಷಯ ಗೊತ್ತಾ? ಕಳೆದ ವರ್ಷ ಟಾಪ್ ಒನ್ ಸ್ಥಾನದಲ್ಲಿದ್ದ ಸನ್ನಿಲಿಯೋನ್ ವರ್ಷ 9 ನೇ ಸ್ಥಾನದಲ್ಲಿದ್ದಾರೆ.

ಇನ್ನು ಕರೀನಾ ಕಪೂರ್ಮತ್ತು ಅಕ್ಷಯ್ಕುಮಾರ್ಐದನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಸೈಬರ್ಲೋಕದ ಕ್ರಿಮಿನಲ್ಗಳು ಸೆಲೆಬ್ರೆಟಿಗಳ ಹೆಸರಿನಲ್ಲಿ ಅಭಿಮಾನಿಗಳನ್ನು ಹೇಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯನ್ನು ನಡೆಸಲಾಗಿತ್ತು.
 
ಅಂತರ್ಜಾಲದಲ್ಲಿ ಹೆಚ್ಚಾಗಿ ಸೆಲೆಬ್ರೆಟಿ ಹೆಸರುಗಳನ್ನು ಹುಡುಕುತ್ತಾರೆ. ಜೊತೆಗೆ ಅವರ ವಾಲ್ ಪೇಪರ್ಗಳು, ಬೆತ್ತಲೆ ಚಿತ್ರಗಳು, ವಿಡಿಯೋಗಳನ್ನು ಹೆಚ್ಚಾಗಿ ಹುಡುಕುತ್ತಾರಂತೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ಕೆಲವು ವೆಬ್ಸೈಟ್ಗಳು ಸೆಲೆಬ್ರೆಟಿಗಳ ಹೆಸರನ್ನು ಬಳಸಿಕೊಂಡು ಜನರನ್ನು ತಮ್ಮ ವೆಬ್ಸೈಟಿನೆಡೆಗೆ ಸೆಳೆಯುತ್ತಾರಂತೆ.

ಇದರಲ್ಲಿ ಹೆಚ್ಚಾಗಿ ಪ್ರಿಯಾಂಕ ಛೋಪ್ರಾಗೆ ಸಂಬಂಧಿಸಿದಂತೆ ಹುಡುಕಾಟ ನಡೆದಿದೆ. ಹೀಗಾಗಿ ಪ್ರಿಯಾಂಕ ಛೋಪ್ರಾ ಅಂತರ್ಜಾಲದಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿ ಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಟಾಪ್ ಆರನೇ ಸ್ಥಾನದಲ್ಲಿ ಸೈಫ್ಅಲಿಖಾನ್‌, ಏಳನೇ ಸ್ಥಾನದಲ್ಲಿ ಬಿಗ್ ಬಿ ಅಮಿತಾಬ್ಬಚ್ಚನ್‌, ಎಂಟನೇ ಸ್ಥಾನದಲ್ಲಿ ಫರಾನ್ಅಖ್ತರ್‌, ಒಂಭತ್ತನೇ ಸ್ಥಾನದಲ್ಲಿ ಸನ್ನಿ ಲಿಯೋನ್ಮತ್ತು ಕೊನೆಯ ಹತ್ತನೇ ಸ್ಥಾನದಲ್ಲಿ ಹೃತ್ತಿಕ್ ರೋಷನ್ಅತ್ಯಂತ ಅಪಾಯಕಾರಿ ಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆ ಎಚ್ಚರಿಸಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು