ಸಿನೆಮಾ

Share This Article To your Friends

ಕೊಪ್ಪಳದಲ್ಲಿ ಹೂತಿದ್ದ ಹೆಣ ವರ್ಷವಾದ್ರೂ ಕೊಳೆಯಲಿಲ್ಲ..!ಕೊಪ್ಪಳ : ಯಾವುದೇ ಮೃತ ದೇಹಗಳನ್ನು ಭೂಮಿಯೊಳಗೆ ಹೂತು ಹಾಕಿದ ನಂತರ ಕೆಲವೇ ದಿನಗಳಲ್ಲಿ ಅದು ಕೊಳೆಯಲು ಆರಂಭಿಸುತ್ತದೆ. ಇದು ಜೈವಿಕ ಕ್ರಿಯೆ ಕೂಡ ಹೌದು. ಆದ್ರೆ ಇಲ್ಲಿನ ದೇವೀ ಆರಾಧಕನೊಬ್ಬ ಸತ್ತಾಗ ಇದೇ ದೇವಾಲಯದ ಆವರಣಲ್ಲಿ ಹೂತು ಹಾಕಲಾಯಿತು. ಒಂದು ವರ್ಷದ ಬಳಿಕ ಶವವನ್ನು ತೆಗೆದು ನೋಡಿದ್ರೆ ಇಟ್ಟ ಶವ ಇಟ್ಟಂತೆಯೇ ಇದೆ. ಕೊಳೆತಿಲ್ಲ, ವಾಸನೆಯೂ ಇಲ್ಲ..!

ಕೊಪ್ಪಳದ ಕುಷ್ಟಗಿ ಸಮೀಪದ ಕಟಾಪುರ ಗ್ರಾಮದ ದ್ಯಾಮಾಂಬಿಕೆ ದೇವಿಯ ದೇವಸ್ಥಾನದಲ್ಲಿ ರಾಜಪ್ಪ ಎಂಬುವವರು ಪ್ರಧಾನ ಅರ್ಚಕರಗಿ ಕೆಲಸ ಮಾಡ್ತಿದ್ರು. ಅವರು 11 ತಿಂಗಳ ಹಿಂದೆ ಸಾವಿಗೀಡಾಗಿದ್ದರು. ಸತ್ತ ರಜಪ್ಪನವರನ್ನು ದೇವಸ್ಥಾನದ ಆವರಣದಲ್ಲೇ ಹೂತು ಹಾಕಲಾಯಿತು. ಆದ್ರೆ 11 ತಿಂಗಳ ನಂತರ ಆ ಸ್ಥಳವನ್ನು ಅಗೆದು ನೋಡಿದ್ರೆ, ಶವ ಕೊಳೆಯದೇ ಇರುವುದು ಬೆಳಕಿಗೆ ಬಂದಿದೆ.

ರಾಜಪ್ಪನ ಮಗಳ ಕನಸಲ್ಲಿ ದ್ಯಾಮಾಂಬಿಕೆ ದೇವಿ ಬಂದು ಇದನ್ನು ಹೇಳಿದಳಂತೆ..!

ರಾಜಪ್ಪ ದ್ಯಾಮಾಂಬಿಕೆ ದೇವಿಯ ಅರ್ಚಕರಾಗಿದ್ದರಿಂದ ದೇವಿಯನ್ನು ನಿಷ್ಟೆಯಿಂದ ಪೂಜಿಸುತ್ತಿದ್ದರು. ಹೀಗಾಗಿ ಅವರು ಸತ್ತ ನಂತರ ದೇವಸ್ಥಾನದ ಆವರಣದಲ್ಲಿಯೇ ಅವರನ್ನು ಹೂತು ಹಾಕಲಾಯಿತು. ಆದ್ರೆ ವಿಧಿವತ್ತಾಗಿ, ಸಂಪ್ರದಾಯಬದ್ದವಾಗಿ ಶವ ಸಂಸ್ಕಾರವನ್ನು ಮಾಡಿರಲಿಲ್ಲ. ಹೀಗಾಗಿ ರಾಜಪ್ಪನ ಮಗಳ ಕನಸಲ್ಲಿ ಬಂದ ದ್ಯಾಮಾಂಬಿಕೆ ದೇವಿಯು " ನಿಮ್ಮ ತಂದೆಯ ಶವ ಸಂಸ್ಕಾರವನ್ನು ಸೂಕ್ತ ರೀತಿಯಲ್ಲಿ ಮಾಡಿಲ್ಲ. ಹೀಗಾಗಿ ಅವರಿಗೆ ಮುಕ್ತಿ ಸಿಕ್ಕಿಲ್ಲ. ನಿಮ್ಮ ತಂದೆಯ ಶವವನ್ನು ವಿಧಿವತ್ತಾಗಿ ಸಂಸ್ಕಾರ ಮಾಡಿ" ಎಂದು ಹೇಳಿದಳಂತೆ.

ಕನಸಲ್ಲಿ ಬಂದಿದ್ದೆಲ್ಲವೂ ನಿಜವಾಗುತ್ತದೆಯೇ? ಎಂಬ ಅನುಮಾನ ಎಲ್ಲರಿಗೂ ಮೂಡಿತ್ತು. ಆದ್ರೆ ರಾಜಪ್ಪ ದೈವಭಕ್ತನಾಗಿದ್ದರಿಂದ ದೇವಿಯ ಮಾತನ್ನು ನಾವು ಪಾಲಿಸದರಾಯ್ತು ಎಂದು ಎಲ್ಲರೂ ಸಮ್ಮತಿಸಿದ್ರು. ಅದರಂತೆ ರಾಜಪ್ಪನ ಶವವನ್ನು ಹೂತು ಹಾಕಿದ ಸ್ಥಳವನ್ನು ಅಗೆದು ನೋಡಿದರೆ ಅಲ್ಲಿದ್ದವರಿಗೆಲ್ಲ ಅಚ್ಚರಿ ಕಾದಿತ್ತು. ರಾಜಪ್ಪನ ಶವ ಕೊಳೆತಿರಲಿಲ್ಲ. ಅಷ್ಟೇ ಅಲ್ಲ, ಸತ್ತು 11 ತಿಂಗಳುಗಳೇ ಕಳೆದು ಹೋಗಿದ್ದರೂ ಶವ ಕಿಂಚಿತ್ತೂ ವಾಸನೆ ಬರುತ್ತಿರಲಿಲ್ಲ..!

ಇದರಿಂಧ ಅಚ್ಚರಿಗೊಂಡ ಜನರು ದ್ಯಾವಮ್ಮ ದೇವಿಯನ್ನು ಪೂಜಿಸಿ, ರಾಜಪ್ಪನ ಶವವನ್ನು ವಿಧಿವತ್ತಾಗಿ ಮರು ಸಂಸ್ಕಾರ ಮಾಡಲಾಯಿತು..!
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು