ಸಿನೆಮಾ

Share This Article To your Friends

ಸುಂದರವಾಗಿ ಇದ್ದುದ್ದೇ ತಪ್ಪಾಯ್ತು.. ಈ ಹೆಣ್ಣಿಗೆ ಮೇಯರ್‌ ಪಟ್ಟ ಮಿಸ್ ಆಯ್ತು.. ಆಮೇಲ್ ಏನಾಯ್ತು ಗೊತ್ತಾ?ಇರಾನ್ : ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಹುದು ಅನ್ನೋ ಮಾತಿದೆ. ಅದರಲ್ಲೀ ನೋಡೋಕೆ ಒಂದಿಷ್ಟು ಸುಂದರವಾಗಿದ್ದರೆ ಪ್ರಳಯವನ್ನೇ ಮಾಡಿಸಬಹುದು ಅಂತ ದೊಡ್ಡೋರು ಹೇಳ್ತಾರೆ.

ಆದರೆ ಊರಲ್ಲಿ ನಿನಾ ಸಿಯಾಕಲಿ ಎಂಬ ಹೆಣ್ಣುಮಗಳು ಸುಂದರವಾಗಿ ಇದ್ದುದ್ದೇ ತಪ್ಪಾಗಿತ್ತು. ಆಕೆ ಸುಂದರವಾಗಿದ್ದಿದ್ದಕ್ಕೆ ಮೇಯರ್ಪಟ್ಟವೇ ಕೊಡಲ್ಲ ಅಂದುಬಿಟ್ಟರು..!

ಇಂಥಾ ವಿಚಿತ್ರ ಘಟನೆ ನಡೆದಿದ್ದು. ಇರಾನ್ದೇಶದಲ್ಲಿ. ಇರಾನ್ ಕ್ವಾಜ್ವಿನ್ ನಗರದಲ್ಲಿ ಕೌನ್ಸಿಲರ್ಎಲೆಕ್ಷನ್ನಡೆದಿತ್ತು. ಗೆಲುವು ಸಾಧಿಸಿದ 163 ಅಭ್ಯರ್ಥಿಗಳಲ್ಲಿ ಸಿಯಾಕಲಿ ಕೂಡ ಒಬ್ಬರಾಗಿದ್ದರು. ಆಕೆ 10,000 ಮತಗಳನ್ನು ಪಡೆದು ಪ್ರಮುಖ ಸ್ಥಾನದಲ್ಲಿದ್ದು. ಆದರೆ ಅವಳು "ತುಂಬಾ ಸುಂದರಿ"ಯಾಗಿದ್ದು ಆಕರ್ಷಕಳಾಗಿದ್ದಳು. ಹೀಗಾಗಿ ಅವಳನ್ನು ಮೇಯರ್ಕುರ್ಚಿಯಲ್ಲಿ ಕೂರಿಸಲು ಯಾರೂ ಒಪ್ಪಲಿಲ್ಲ.

ಪ್ರದೇಶದ ಕಾನೂನಿನ ಪ್ರಕಾರ "ತುಂಬಾ ಸುಂದರವಾಗಿರುವವರು" ಮೇಯರ್ಹುದ್ದೆಯಲ್ಲಿ ಕೂರುವಂತಿಲ್ಲವಂತೆ.  ಯಾಕೆ ಹೀಗೆ ಅಂತ ಆಕೆ ತಜ್ಞರನ್ನು ಸಂಪರ್ಕಿಸಿದ ವಿಚಾರಿಸಿದರು. "ಇಸ್ಲಾಮಿಕ್ನಿಯಮದ ಪ್ರಕಾರ ಕ್ಯಾಟ್ವಾಕ್ಮಾಡುವ ಮಾಡೆಲ್ಗಳನ್ನು ಕೌನ್ಸಿಲ್ನಲ್ಲಿ ಕೂರಿಸುವಂತಿಲ್ಲ" ಎಂದು ಅವರೂ ಉದ್ದುದ್ದ ಭಾಷಣ ಬಿಗಿದರಂತೆ.

ನಂತರದಲ್ಲಿ ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋದಾಗ ಅವರು ಸಮಸ್ಯೆಯನ್ನು ಬಗೆಹರಿಸಿದರಂತೆ. "ಯಂಗ್ಐಡಿಯಾಸ್ಫಾರ್ ಯಂಗ್ಫ್ಯೂಚರ್‌‌" ಅಂತ ಹೇಳಿ ಸಮಸ್ಯೆಗೆ ಮುಕ್ತಾಯ ಹಾಡಿದ್ರಂತೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು