ಸಿನೆಮಾ

Share This Article To your Friends

ನೆಹರು ಮತ್ತು ಜಿನ್ನಾರ ಕುತಂತ್ರಕ್ಕೆ ಗಾಂಧಿ ಬಲಿಯಾದರೆ?


“1857 ರಲ್ಲಿ ಮಂಗಲ್ ಪಾಂಡೆಯಂಥ ಕ್ರಾಂತಿಕಾರಿ ಯೋಧರ ದೊಡ್ಡ ಪಡೆಯೇ ಇತ್ತು. ಆದರೆ ಸೂಕ್ತ ನಾಯಕತ್ವದ ಕೊರತೆ ಮತ್ತು ಆಂತರಿಕ ಕಚ್ಚಾಟದಿಂದ 1857 ರ ಸಿಪಾಯಿ ದಂಗೆ ವಿಫಲವಾಯ್ತು. ಮಂಗಲ್ ಪಾಂಡೆಯ ಸ್ವಾತಂತ್ರ್ಯ ಹೋರಾಟದ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಯಿರು. ಅಷ್ಟೇ ಅಲ್ಲ, ದಿಟ್ಟ ಭಾರತೀಯ ಯೋಧರನ್ನು ಭಾರತೀಯರ ಕಣ್ಣೆದುರಲ್ಲೇ ಕೊಂದು ಹಾಕಿಬಿಟ್ಟಿದ್ದರು ಬ್ರಿಟೀಷರು.  ಅಕಸ್ಮಾತ್ ಆಗೇನಾದರೂ ಸೂಕ್ತ ನಾಯಕತ್ವ ಇದ್ದಿದ್ದರೆ ಅಂದೇ ಸ್ವಾತಂತ್ರ್ಯ ಸಿಗುತ್ತಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.
 
ನಂತರದ ದಿನಗಳಲ್ಲಿ ಅಂತಹ ದಿಟ್ಟ ನಾಯಕತ್ವವನ್ನು ಹೊತ್ತುಕೊಂಡು,  ದೇಶವನ್ನು ಒಗ್ಗೂಡಿಸಿದವರು ಮಹಾತ್ಮಾ ಗಾಂಧೀಜಿಯವರು.. ಇವರ ಶಾಂತಿಯುತವಾದ ನಾಯಕತ್ವವೇ ದೇಶದ ಸ್ವಾತಂತ್ರ್ಯ  ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿತು.. ಒಬ್ಬ ಮಹೋನ್ನತ ನಾಯಕರಾಗಿ, ದೇಶದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ, ಅಹಿಂಸಾ ಮಾರ್ಗದಿಂದಲೇ ಸ್ವಾತಂತ್ರವನ್ನು ಪಡೆಯಲು ಶ್ರಮಿಸಿದರು.. 

1947 ರಲ್ಲಿ ದೇಶ ವಿಭಜನೆಯ ಸಂದರ್ಭದಲ್ಲಿ ಗಾಂಧೀಜಿ ಒಪ್ಪಬಾರದಿತ್ತು. ಸಹಿ ಹಾಕಬಾರದಿತ್ತು. ಗಾಂಧೀಜಿಯವರೇ ದೇಶವನ್ನು ಒಡೆದು ಇಂಡೋ ಪಾಕ್ ಕದನಕ್ಕೆ ದಾರಿಮಾಡಿಕೊಟ್ಟರು ಎಂದು ಬಹಳಷ್ಟು ಜನರು ಮಾತನಾಡುತ್ತಾರೆ. ಆದರೆ ಅಂದಿನ ಪರಿಸ್ಥಿತಿಗಳು ಗಾಂಧೀಜಿಯವರನ್ನು ಆತಂಕಕ್ಕೆ ಈಡು ಮಾಡಿದ್ದಿರಬಹುದು. ಅದಕ್ಕಾಗಿ ಬಲವಂತದಿಂದ ಅವರು ದೇಶ ವಿಭಜನೆಯ ಮೊರೆಹೋಗಿದ್ದರು. ಅಂದು ಗಾಂಧೀಜಿ ಮಾಡಿದ್ದು ತಪ್ಪು ಎಂದಾದರೆ ಸದ್ಯ ಕೇಂದ್ರದಲ್ಲಿರುವ ಕಾಂಗ್ರೇಸ್ ಪಕ್ಷ ಮಾಡುತ್ತಿರುವುದಾದರೂ ಏನು? ಆಂಧ್ರಪ್ರದೇಶವನ್ನು ಬರ್ಬರವಾಗಿ ವಿಭಜಿಸಿ ಒಂದೇ ಭಾಷಿಗರ ನಡುವೆ ಕದನಕ್ಕೆ ಮುನ್ನುಡಿ ಹಾಡಿದ್ದು ಕೂಡ ತಪ್ಪಲ್ಲವೇ

ಮೂಲತಃವಾಗಿ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ನಡುವಿನ ಪ್ರಧಾನಿಪಟ್ಟದ ಕಿತ್ತಾಟವೇ ದೇಶ ವಿಭಜನೆಗೆ ಮುನ್ನುಡಿ ಹಾಡಿತ್ತು ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಹೀಗಾಗಿ ನೆಹರುರವರು ಭಾರತದ ವಿಭಜನೆಯನ್ನು ಒಳಗೊಳಗೇ ಅಪೇಕ್ಷಿಸಿದ್ದರು ಎಂಬುದು ಇಲ್ಲಿ ಗಮನಿಸಲೇಬೇಕಾದ ಅಂಶ. ಮೊಹಮ್ಮದ್ ಜಿನ್ನಾ ಕೂಡ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. 

ಹೀಗಾಗಿ ಇಬ್ಬರೂ ಪ್ರಧಾನಿಗಳಾಗಬೇಕೆಂಬ ಕೆಟ್ಟ ಹಟದಿಂದಾಗಿ ಅನಿವಾರ್ಯವಾಗಿ ಮತ್ತು ರಾಜಕೀಯ ಕುಚೇಷ್ಟೆಗಾಗಿ ಭಾರತವನ್ನು ಇಬ್ಬಾಗ ಮಾಡಲಾಯಿತು. ಅಖಂಡ ಭಾರತದ ಸ್ವಾತಂತ್ರ್ಯಗಕ್ಕಾಗಿ ಶ್ರಮಿಸಿದ ಕ್ರಾಂತಿಕಾರಿಗಳು ಮತ್ತು ಶಾಂತಿ ಧೂತನ ಶ್ರಮಕ್ಕೆ ಈ ದೇಶ ವಿಭಜನೆಯ ಸುದ್ದಿ ನುಂಗಲಾರದ ತುತ್ತಾಗಿ ಪರಿಣಮಿ


ಸಿತು. ಅಂದು ಗಾಂಧೀಜಿ ಮನಸ್ಸಿನಲ್ಲಿ ಆವರಿಸಿದ ದುಗುಡ ಹಿಂದೆಂದಿಗಿಂತಲೂ ಹೆಚ್ಚಾಗಿತ್ತು. ನೋವಿನೊಂದಿಗೆ ಭಾರತದ ವಿಭಜನೆಗೆ ಸಹಿ ಹಾಕಿಬಿಟ್ಟರು ಮಹಾತ್ಮ.

ಭಾರತದ ವಿಭಜನೆಯ ನಂತರ ಸ್ವತಂತ್ರ ಭಾರತದ ಪ್ರಧಾನಿಯಾಗಲು ಮಹಾತ್ಮಾ ಗಾಂಧಿಯವರಿಗೆ ಅದೆಷ್ಟೋ ಜನರು ಕೇಳಿಕೊಂಡರಂತೆ. ಆದರೆ ಗಾಂಧಿ ಕಂಡ ರಾಮರಾಜ್ಯದ ಕನಸು ದೇಶ ವಿಭಜನೆಯೊಂದಿಗೆ ಭಗ್ನವಾಗಿದ್ದು ಅವರಿಗೆ ಅಪಾರವಾಗಿ ನೋವುಂಟು ಮಾಡಿತ್ತು. ಹೀಗಾಗಿ ಶಾಂತಿಯ ಮೌನಕ್ಕೆ ಶರಣಾಗಿಬಿಟ್ಟರು ಮಹಾತ್ಮ..

ಸ್ವಾತಂತ್ರ್ಯ ಪಡೆಯುವ ತನಕ ಗಾಂಧೀಜಿಯವರ ಜೊತೆಯಲ್ಲಿದ್ದ ಜವಹರ‍್ ಲಾಲ್ ನೆಹರು ಸ್ವಾತಂತ್ರ್ಯಾ ನಂತರದಲ್ಲಿ ರಾಜಕೀಯವಾಗಿ ಭಾರತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಬಿಟ್ಟರು. ಅಲ್ಲಿಂದ ಮುಂದೆ ನಡೆದಿದ್ದೇ ಅರಾಜಕತೆಯ ಐಶಾರಾಮಿ ಜೀವನ. 


 ಲೇಖನ : ಶೇಖರ್‌ ಪೂಜಾರಿ
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು