ಸಿನೆಮಾ

Share This Article To your Friends

ಜೂಲಿಯೆಟ್‌ ಮೇಲೆ ರೋಮಿಯೋಗೆ ಪ್ರೀತಿ ಇರಲಿಲ್ಲವಂತೆ.!ರೋಮ್‌ : ರೋಮಿಯೋ ಜೂಲಿಯೆಟ್ಎಂದಾಕ್ಷಣ ಅಬ್ಬಬ್ಬಾ ಅದೆಂಥಾ ಮಹೋನ್ನತ ಪ್ರೇಮ ಎಂದೆನಿಸುತ್ತದೆ. ಆದ್ರೆ ರೋಮಿಯೋ ಜೂಲಿಯೆಟ್ಇಬ್ಬರೂ ಅತ್ಯುತ್ತಮ ಜೋಡಿಗಳಲ್ಲ ಎಂಬುದನ್ನು ಮನಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.

ರೋಮಿಯೋಗೆ ಜೂಲಿಯೆಟ್ಉತ್ತಮ ಜೋಡಿಯಲ್ಲ. ಮತ್ತು ಜೂಲಿಯೆಟ್ಗೆ ರೋಮಿಯೋ ಉತ್ತಮ ಸಂಗಾತಿಯಲ್ಲ ಎಂದು ಮಾಡ್ರನ್ ಡೇಟಿಂಗ್ವಿಶ್ಲೇಷಣೆಯಿಂದ ತಿಳಿದು ಬಂದಿದೆ. ಅವರಿಬ್ಬರ ಪ್ರೀತಿ ಸಾಯುವಷ್ಟರ ಮಟ್ಟಿಗೆ ಮೌಲ್ಯಯುತವಾಗಿರಲಿಲ್ಲ ಎಂಬುದನ್ನು ಮನಶಾಸ್ತ್ರಜ್ಞರು ತಿಳಿಸಿದ್ದಾರೆ.

ರೋಮಿಯೋ ಮತ್ತು ಜೂಲಿಯೆಟ್ಇಬ್ಬರ ವ್ಯಕ್ತಿತ್ವ ಮತ್ತು ಗುಣಾವಗುಣಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಯಿತು. ಇದರ ಅನ್ವಯ ಜೂಲಿಯೆಟ್ಗೆ ನಟ ಡರ್ಸಿ ಉತ್ತಮ ಜೋಡಿ ಎಂದು ಹೇಳಿದ್ದಾರೆ.  ಮತ್ತು ರೋಮಿಯೋಗೆ ನಟಿ ಬೆಲ್ಲಾ ಸ್ವಾನ್ಉತ್ತಮ ಜೋಡಿ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಇಲ್ಲಿ ಇಬ್ಬರು ಪ್ರೇಮಿಗಳ ಒಟ್ಟು 60 ಗುಣಗಳನ್ನು ತಜ್ಞರು ವಿಶ್ಲೇಷಣೆಗೆ ಒಳಪಡಿಸಿದರು. ಇದರ ಅನ್ವಯ "ರೋಮಿಯೋ ಮತ್ತು ಜೂಲಿಯೆಟ್‌" ಇಬ್ಬರಲ್ಲೂ ಒಮ್ಮತ ಇರಲಿಲ್ಲ.  ಅವರಿಬ್ಬರೂ ಹೆಚ್ಚು ಕಾಲ ಜೊತೆ ಇರುತ್ತಿರಲಿಲ್ಲ. ಅವರಿಬ್ಬರ ನಿರ್ಧಾರಗಳಲ್ಲಿ ಅಜಗಜಾಂತರ ಭಿನ್ನತೆಗಳಿದ್ದವು. ರೋಮಿಯೋ ಜೂಲಿಯೆಟ್ ಆಸೆ, ಆಕಾಂಕ್ಷೆಗಳಿಗೆ, ಮನದಾಳದ ಬಯಕೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಕಿಂಚಿತ್ತೂ ಆಕೆಯ ಮೇಲೆ ಸಹಾನುಭೂತಿ ಇರಲಿಲ್ಲ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು