ಸಿನೆಮಾ

Share This Article To your Friends

ಭಾರತೀಯ ಇತಿಹಾಸದಲ್ಲಿ ದುಡ್ಡನ್ನೇ ಮಾಡದ ಏಕೈಕ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ
ನೆಹರೂರವರು ದೇಶದ ಪ್ರಧಾನಿಯಾಗಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿಯವರು ಗೃಹಮಂತ್ರಿಯಾಗಿದ್ದರು.. ಅದೊಂದು ದಿನ ವಿಶ್ವದ ಗೃಹಮಂತ್ರಿಗಳೆಲ್ಲರೂ ಸೇರಿ ಒಂದು ವೇದಿಕ್ಕೆಯಲ್ಲಿ ಪ್ರತಿನಿಧಿಸಬೇಕಿತ್ತು..  ಆಗ ಲಾಲ್ ಬಹದ್ದೂರ್ ಶಾಸ್ತ್ರಿಯವರು ಮಾಸಿದ ಮತ್ತು ಸ್ವಲ್ಪ ಹರಿದ ಕೋಟನ್ನು ಹಾಕಿಕೊಂಡು ಹೊರಡಲು ಸಜ್ಜಾದರು.

ಆಗ ಪ್ರಧಾನಿ ಜವಹಾರ್ ಲಾಲ್ ನೆಹರು ರವರು ಶಾಸ್ತ್ರಿಯವರನ್ನು ನೋಡಿ ಈ ಹರಿದ ಕೋಟನ್ನು ಯಾಕೆ ಹಾಕಿಕೊಂಡು ಹೋಗುತ್ತಿದ್ದೀರಿ., ನೀವು ನಮ್ಮ ದೇಶವನ್ನು ಪ್ರತಿನಿಧಿಸಬೇಕಾದ ವ್ಯಕ್ತಿ.. ಹೀಗಾಗಿ ಬೇರೆ ಹೊಸ ಕೋಟನ್ನು ಹಾಕಿಕೊಳ್ಳಿ ಎಂದು ಹೇಳಿದರಂತೆ.

ಆಗ ಲಾಲ್ ಬಹದ್ದೂರ್ ಶಾಸ್ತ್ರಿಯವರು ನನ್ನ ಹತ್ತಿರ ಬೇರೆ ಯಾವ ಕೋಟೂ ಇಲ್ಲಅಂತ ಹೇಳಿದ್ರು.. ಒಬ್ಬ ಗೃಹ ಮಂತ್ರಿಯ ಬಳಿ ಹಾಕೊಳ್ಳಲು ಕೋಟೂ ಕೂಡ ಇಲ್ಲ ಎಂದರೆ ಜನಸೇವೆಯ ಮಾದರಿ ಹೇಗಿತ್ತು ಎಂಬುದನ್ನು ನಾವು ಸ್ಮರಿಸಬಹುದಾಗಿದೆ.. ಜವಹರ್ ಲಾಲ್ ನೆಹರುರವರು ಮುಂದುವರಿದು, “ನಾನು ನನ್ನ ಕೋಟನ್ನು ಕೊಡುತ್ತೇನೆ.. ಅದನ್ನು ಹಾಕಿಕೊಂಡು ಹೋಗಿಎಂದು ಹೇಳಿದರಂತೆ..
ಆಗ ಲಾಲ್ ಬಹದ್ದೂರ್ ಶಾಸ್ತ್ರಿಯವರು ಅದನ್ನು ನಿರಾಕರಿಸಿದರು ನಾನು ಈ ಹರಿದ ಬಟ್ಟೆಯಲ್ಲಿ ಹೋದರೆ ಭಾರತ ಬಡ ದೇಶ.. ಭಾರತೀಯ ನಾಯಕನೂ ಬಡವ.. ಎಂದು ಭಾವಿಸುತ್ತಾರೆ.. ಆದರೆ ನಿಮ್ಮ ಕೋಟು ನನಗೆ ಉದ್ದವಾಗುತ್ತದೆ.. ಅದನ್ನು ನಾನು ಹಾಕಿಕೊಂಡು ಹೋದರೆ, ಭಾರತೀಯರು ಬೇರೆಯವರು ನೀಡಿದ ಬಟ್ಟೆಯನ್ನು ಹಾಕಿಕೊಳ್ಳುವ ಭಿಕ್ಷುಕರು ಎಂದು ತೋರಿಸಿದಂತಾಗುತ್ತದೆ. ಭಾರತೀಯರು ಬಡವರು ಎಂದೆನಿಸಿಕೊಂಡರೂ ಪರವಾಗಿಲ್ಲ. ಆದರೆ ಭಿಕ್ಷುಕರು ಅಂತ ಕರೆಯುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದರಂತೆ.. ಇದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನಪರ ಕಾಳಜಿ ಮತ್ತು ದೇಶಾಭಿಮಾನವನ್ನು ತೋರಿಸುತ್ತದೆ,,

ಲಾಲ್ ಬಹದ್ದೂರ್ ಶಾಸ್ತ್ರಿಯವರ ಮತ್ತೊಂದು ಸನ್ನಿವೇಶವನ್ನು ಈ ಸಂದರ್ಭದಲ್ಲಿ ನಿಮಗೆ ಹೇಳಲೇ ಬೇಕು... ಅದು ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದ ಸಮಯ.. ಒಂದು ದಿನ ಶಾಸ್ತ್ರಿಯವರ ಮಗ ತಂದೆಯ ಬಳಿಗೆ ಬಂದು ಅಪ್ಪ ನನಗೆ ಒಂದು ಬೈಕ್ ಕೊಡಿಸಿಅಂತ ಕೇಳಿದ್ರಂತೆ.. ಆಗ ಶಾಸ್ತ್ರಿಯವರು ಹೇಳಿದ್ದು ಏನು ಗೊತ್ತಾ..?? “ಮಗನೇ ಜನರು ಕೊಡುವ ಹಣದಿಂದ ನಾವು ಹೊಟ್ಟೆ ತುಂಬಿಸಿಕೊಳ್ತಾ ಇದ್ದೀವಿ.,. ಹೀಗಿರುವಾಗ ನಿನಗೆ ಬೈಕ್ ಕೊಡಿಸುವಷ್ಟು ಹಣ ನನ್ನ ಹತ್ತಿರ ಇಲ್ಲಎಂದು ಹೇಳಿದ್ರಂತೆ. 


ಆಗ ಬೇಜಾರ್ ಮಾಡಿಕೊಂಡು ಮಗ ತನ್ನ ತಾಯಿಗೆ ಆ ವಿಷಯವನ್ನು ತಿಳಿಸಿದನಂತೆ. ಆಗ ತಾಯಿ ತನ್ನ ಹಣದಿಂದ ಒಂದು ಬೈಕ್ ಕೊಡಿಸಿದಳು.  ಈ ವಿಚಾರವನ್ನು ಕಂಡು ಶಾಸ್ತ್ರಿಯವರಿಗೆ ಅಚ್ಚರಿಯಾಗಿ ತಮ್ಮ ಪತ್ನಿಗೆ ಕೇಳಿದರು ನನ್ನ ಹತ್ತಿರ ಹಣವೇ ಇರಲಿಲ್ಲ. ಆದರೆ ಒಂದು ಬೈಕ್ ಕೊಡಿಸುವಷ್ಟು ಹಣ ನಿನ್ನಲ್ಲಿ ಹೇಗೆ ಬಂತುಎಂದು ಕೇಳಿದ್ರಂತೆ.. 

ಆಗ ಶಾಸ್ತ್ರಿಯವರ ಪತ್ನಿ ನೀವು ಮನೆಯ ಖರ್ಚಿಗಾಗಿ ಕೊಡುತ್ತಿದ್ದ ಹಣದಲ್ಲಿ ಸ್ವಲ್ಪ ಸ್ವಲ್ಪ ಉಳಿಸುತ್ತಿದ್ದೆ.. ಆ ಹಣದಿಂದಲೇ ಮಗನಿಗೆ ಬೈಕ್ ಕೊಡಿಸಿದೆ. ಎಂದು ಹೇಳಿದರು. ಮರು ದಿನವೇ ಶಾಸ್ತ್ರಿಯವರು ಸರ್ಕಾರಕ್ಕೆ ಒಂದು ಪತ್ರವನ್ನು ಬರೆದರು.. ಸರ್ಕಾರ ನನಗೆ ನೀಡುತ್ತಿರುವ ಸಂಬಳ ನನ್ನ ಕುಟುಂಬದ ಖರ್ಚಿಗೆ ವಿನಿಯೋಗವಾಗಿ ಇನ್ನೂ ಹೆಚ್ಚಿಗೆ ಉಳಿಯುತ್ತಿದೆ. ದಯವಿಟ್ಟು ಆ ಹೆಚ್ಚಿನ ಹಣವನ್ನು ನನ್ನ ಸಂಬಳದಿಂದ ಕಡಿಮೆ ಮಾಡಿ. ಎಂದು ಆ ಪತ್ರದಲ್ಲಿ ತಿಳಿಸಿದ್ದರು..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು