ಸಿನೆಮಾ

Share This Article To your Friends

ಸಚಿನ್‌ ಅವರಿಗೆ ಭಾರತ ರತ್ನ ಕೊಡಿಸಿದ್ದು ರಾಹುಲ್‌ ಗಾಂಧಿ.!

 ಲಿಟಲ್ ಮಾಸ್ಟರ್‌ ಸಚಿನ್ ತೆಂಡೂಲ್ಕರ್‌ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ಕೊಡಿಸಿದ್ದು ಕಾಂಗ್ರೆಸ್‌ ಯುವರಾಜ ರಾಹುಲ್ ಗಾಂಧಿ..! ಕ್ರೀಡಾ ವಿಭಾಗದಲ್ಲಿ ಭಾರತ ರತ್ನವನ್ನು ಕೊಡಲು ಸಾಧ್ಯವಿಲ್ಲವಾದರೂ, ಕಾಂಗ್ರೆಸ್‌ ಯುವರಾಜನ ಕಟ್ಟಾಜ್ಞೆಯ ಮೇರೆಗೆ ಸಚಿನ್‌ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಹುಲ್‌ ಗಾಂಧಿಗೆ ಸಚಿನ್ ಅಂದ್ರೆ ಪ್ರಾಣ. ಹೀಗಾಗಿ ಸಚಿನ್ ಅವರ ಆಟವನ್ನು ಯಾವತ್ತೂ ರಹುಲ್ ಮಿಸ್ ಮಾಡಿಕೊಂಡಿದ್ದೇ ಇಲ್ಲ. ಬಲ್ಲ ಮೂಲಗಳ ಪ್ರಕಾರ ಸಚಿನ್ ವಿದಾಯ ಹೇಳುವ ಒಂದು ದಿನ ಮೊದಲು ಅಂದ್ರೆ ಶುಕ್ರವಾರದಂದು ಸಚಿನ್‌ ಬ್ಯಾಟಿಂಗ್ ನೋಡಲು ರಾಹುಲ್ ಗಾಂಧಿ ಕೂಡ ವಾಂಖೆಡೆ ಸ್ಟೇಡಿಯಂಗೆ ಆಗಮಿಸಿದ್ರು. ಚುನಾವಣೆಯ ಪ್ರಚಾರಕ್ಕಾಗಿ ಹಲವಾರು ಸಮಾವೇಶ ಮತ್ತು ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕಿದ್ದ ರಾಹುಲ್ ಗಾಂಧಿಯವರು, ಸಚಿನ್‌ಗಾಗಿ ಎಲ್ಲವನ್ನು ಬಿಟ್ಟು ಕ್ರಿಕೆಟ್ ನೋಡಲು ಆಗಮಿಸಿದ್ರು.

ಸಂಜೆ ಅಲ್ಲಿಂದ ನೇರವಾಗಿ ನೇರವಾಗಿ ಮನಮೋಹನ್ ಸಿಂಗ್ ಮತ್ತು ಇತರೇ ಆಪ್ತ ಮೂಲಗಳೊಂದಿಗೆ ಚರ್ಚೆ ನಡೆಸಿ, ಸಚಿನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡುವಂತೆ ಶಿಫಾರಸ್ಸು ಮಾಡಿದ್ರು. ಇದಾದ ನಂತರ ಪ್ರಧಾನಿ ಸಿಂಗ್‌ ಅವರು ರಾಷ್ಟ್ರಪತಿಯವರಿಗೆ ಈ ಬಗ್ಗೆ ಪತ್ರವನ್ನು ಬರೆದರು.

ಅಚ್ಚರಿ ಎಂದರೆ, ಪ್ರಧಾನಿಯವರು ಕಳಿಸಿದ ಪತ್ರ ರಾಷ್ಟ್ರಪತಿಯವರಿಗೆ ತಲುಪಿದ್ದು ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ. ಇದಾದ ಕೇವಲ ಅರ್ಧ ಗಂಟೆಯ ಒಳಗಾಗಿ ರಾಷ್ಟ್ರಪತಿಯವರು ಸಚಿನ್‌ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವ ಶಿಫಾರಸ್ಸು ಪತ್ರಕ್ಕೆ ಸಹಿ ಹಾಕಿ ಹಿಂದಿರುಗಿಸಿದ್ರು.

ರಾಷ್ಟ್ರಪತಿಯವರ ಅಂಕಿತ ಬೀಳುತ್ತಿದ್ದಂತೆಯೇ ಈ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಅಧಿಕೃತ ಘೋಷಣೆ ಹೊರಬಿದ್ದಿತು. ಅದರಲ್ಲೂ ಸಚಿನ್‌ ಅವರ ಕೊನೆಯ ಪಂದ್ಯದ ದಿನವೇ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿರುವುದು ನಿಜಕ್ಕೂ ಅಚ್ಚರಿ ಕೂಡ ಹೌದು. ಹೀಗಾಗಿ ರಾಹುಲ್‌ ಗಾಂಧಿಯ ಕಠಿಣ ಕಟ್ಟಾಜ್ಞೆ ಮತ್ತು ಪಟ್ಟಿನಿಂದಾಗಿ ಸಚಿನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಆದ್ರೆ ಕ್ರಿಕೆಟ್‌ ದೇವರ ಭಾರತ ರತ್ನ ಪ್ರಶಸ್ತಿಯನ್ನು ಹೀಗೆ ರಾಜಕೀಯಗೊಳಿಸುತ್ತಿರುವುದು ಸರಿಯಲ್ಲ. ಕ್ರಿಕೆಟ್‌ ದೇವರಿಗೆ, ಅವರ ಸಾಧನೆಗೆ ಭಾರತ ರತ್ನ ಪ್ರಶಸ್ತಿ ದಕ್ಕಿದೆ. ಆದ್ರೆ ಇದರಲ್ಲಿ ರಾಹುಲ್ ಗಾಂಧಿಯವರ ಶ್ರಮ ಇದೆ ಎಂದು ಹೇಳುವುದರ ಮೂಲಕ ಕೆಲವರು ಇದನ್ನು ರಾಜಕೀಯಗೊಳಿಸುತ್ತಿರುವುದು ನಿಜಕ್ಕೂ ದುರಂತ..


ಸಚಿನ್‌ ಅವರಿಗೆ ಭಾರತರತ್ನ ನೀಡುವ ಭರದಲ್ಲಿ ಕಾನೂನು ಉಲ್ಲಂಘನೆ?

ಕಲೆ, ಸಾಹಿತ್ಯ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅತ್ಯುಚ್ಚ ಸೇವೆಯನ್ನು ಸಲ್ಲಿಸಿದವರಿಗೆ ಈ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆದ್ರೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇದುವರೆಗೂ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿಲ್ಲ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಭಾರತ ರತ್ನ ನೀಡಲು ಅವಕಾಶವಿಲ್ಲದಿದ್ದರೂ ಸಚಿನ್‌ ಅವರಿಗೆ ಭಾರತ ರತ್ನ ನೀಡಿರುವುದು ಸರಿಯಲ್ಲ ಎಂದು ಕೆಲವರು ವಾದಿಸುತ್ತಾರೆ.

ಅಷ್ಟೆ ಅಲ್ಲ, ಈ ಹಿಂದೆ ಸಚಿನ್‌ ತೆಂಡೂಲ್ಕರ್‌ ಮತ್ತು ನಟಿ ರೇಖಾ ಅವರು ಕಾಂಗ್ರೆಸ್‌ ಪಕ್ಷದ ವತಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹೀಗಾಗಿ ಕಾಂಗ್ರೆಸ್‌ಗೆ ಸಚಿನ್‌ ಮೇಲೆ ಹೆಚ್ಚಿನ ಒಲವು ಇದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾನೂನು, ನಿಯಮಗಳನ್ನು ಪಾಲಿಸದೇ, ಕೇವಲ ಒಂದೇ ಗಂಟೆಯಲ್ಲಿ ಸಚಿನ್‌ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿಬಿಟ್ಟಿದೆ. ಎಂಬ ಮಾತುಗಳು ಇದೀಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗುತ್ತಿದೆ.

ಸಚಿನ್‌ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಎಂದು ರಾಹುಲ್‌ ಗಾಂಧಿಯವರು ಪ್ರಧಾನಿಗೆ ಶಿಫಾರಸ್ಸು ಮಾಡಿದರು. ಇದದ ನಂತರ ಪ್ರಧಾನಿಯವರು ರಾಷ್ಟ್ರಪತಿಯವರಿಗೆ ಪತ್ರವನ್ನು ಬರೆದರು. ರಾಷ್ಟ್ರಪತಿಯವರಿಗೆ ಪತ್ರ ತಲುಪಿದ ಕೇವಲ ಅರ್ಧ ಗಂಟೆಯಲ್ಲಿಯೇ ಸಚಿನ್‌ ಅವರಿಗೆ ಭಾರತ ರತ್ನ ನೀಡಲಾಗಿದೆ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯದಿಂದ ಅಧಿಕೃತವಾಗಿ ಘೋಷಣೆಯಾಗಿದೆ.

ಕ್ರೀಡಾ ಕ್ಷೇತ್ರದ ಸಾಧಕರಿಗೆ ಅರ್ಜುನ್ ಪ್ರಶಸ್ತಿ, ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಬಹದು. ಅದ್ರೆ ಭಾರತ ರತ್ನ ಕೇವಲ ಕಲೆ ಮತ್ತು ವಿಜ್ಞಾನ, ಸಾಹಿತ್ಯ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಮಾತ್ರ ನೀಡಬೇಕು ಎಂಬ ನಿಯಮವಿದೆ. ಹೀಗಿದ್ದರೂ ಸಚಿನ್ ಅವರಿಗೆ ಭಾರತ ರತ್ನ ನೀಡಿರುವುದು ಹಲವರಿಗೆ ಅನುಮಾನ ಉಂಟುಮಾಡಿದೆ.

ಆದ್ರೆ ಗಮನಿಸಿ : 2010 ರ ವರೆಗೆ ಭಾರತ ರತ್ನ ಪ್ರಶಸ್ತಿಯನ್ನು ಕೇವಲ ಕಲೆ, ವಿಜ್ಞಾನ, ಸಾಹಿತ್ಯ ಮತ್ತು ಸಮಾಜ ಸೆವೆ ಮಾಡಿದವರಿಗೆ ಮಾತ್ರವೇ ಸೀಮಿತವಾಗಿತ್ತು. ಆದ್ರೆ 2011ರಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸೇವೆ ಮಾಡಿದವರಿಗೂ ಈ ಭಾರತ ರತ್ನ ಪ್ರಶ್ತಿಯನ್ನು ನೀಡಬಹುದು ಎಂದು ಭಾರತ ಸರ್ಕಾರ ತೀರ್ಮಾನಿಸಿತ್ತು. ಅದರಂತೆಯೇ ಸಚಿನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಇದರಲ್ಲಿ ಯಾವುದೇ ರೀತಿಯ ಕಾನೂನು ದುರುಪಯೋಗ ಆಗಿಲ್ಲ.

ಕ್ರಿಕೆಟ್‌ ದೇವರ ಸಾಧನೆಗೆ ಭಾರತ ರತ್ನ ಪ್ರಶಸ್ತಿ ದಕ್ಕಿದೆ. ಆದ್ರೆ ಇದರಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ. ಆದ್ರೆ ರಾಹುಲ್ ಗಾಂಧಿಯವರ ಶೀಫಾರಸ್ಸಿನಿಂದ ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ಸಿಕ್ಕಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಕ್ರಿಕೆಟ್‌ ದೇವರಿಗೆ ನೀಡಲಾದ ಭಾರತ ರತ್ನ ಪ್ರಶಸ್ತಿಯನ್ನು ರಾಜಕೀಯಗೊಳಿಸುತ್ತಿರುವುದು ನಿಜಕ್ಕೂ ದೊಡ್ಡ ದುರಂತ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು